ಕೆಂಪೇಗೌಡ ಬಸ್ ನಿಲ್ದಾಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕೆಂಪೇಗೌಡ ಬಸ್ ನಿಲ್ಡಾಣ ಇಂದ ಪುನರ್ನಿರ್ದೇಶಿತ)
Jump to navigation Jump to searchಕೆಂಪೇಗೌಡ ಬಸ್ ನಿಲ್ದಾಣದ ಒಂದು ನೋಟ

ಕೆಂಪೇಗೌಡ ಬಸ್ ನಿಲ್ದಾಣವು ಕರ್ನಾಟಕದ ರಾಜಧಾನಿ ಬೆಂಗಳೂರಿನ ಸ್ಥಳೀಯ ಬಸ್‍ಗಳ ಸಂಚಾರಕ್ಕಾಗಿ ನಿರ್ಮಿಸಲಾಗಿರುವ ಬಸ್ ನಿಲ್ದಾಣ. ಬೆಂಗಳೂರಿನ ಸುಭಾಷ ನಗರದಲ್ಲಿರುವ ಈ ನಿಲ್ದಾಣವನ್ನು ಮೆಜೆಸ್ಟಿಕ್ ಬಸ್ ನಿಲ್ದಾಣ ಎಂದೂ ಕರೆಯಲಾಗುತ್ತದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಪ್ರಮುಖ ನಿಲ್ದಾಣ ಇದು. ಇದು ಬೆಂಗಳೂರು ನಗರ ರೈಲ್ವಯ್ ನಿಲ್ದಾಣದ ಎದುರಿಗಿದೆ. ಉತ್ತರಕ್ಕೆ ಶೇಷಾದ್ರಿ ರಸ್ತೆ, ಪೂರ್ವಕ್ಕೆ ಧನವಂತ್ರಿ ರಸ್ತೆ, ದಕ್ಷಿಣಕ್ಕೆ ಟಾನ್ಕ್ ಬನ್ದ್ ರಸ್ತೆ ಹಾಗು ಪಶ್ಛಿಮಕ್ಕೆ ಗುಬ್ಬಿ ತೋಟದಪ್ಪ ರಸ್ತೆ ಇದನ್ನು ಸುತ್ತುವರೆದಿದೆ. ಈ ನಿಲ್ದಾಣದಿಂದ ನಗರದ ಬಹುತೇಕ ಜಾಗಗಳಿಗೆ ಬಸ್ಸಿನ ಸೌಲಭ್ಯವಿದೆ.

ಬಸ್ ನಿಲ್ದಾಣದ ಒಂದು ಭಾಗವು ನಗರದ ಸಾರಿಗೆಗೆ ಪೂರಕವಾದರೆ, ಇನೊಂದು ಭಾಗವು ರಾಜ್ಯದ ವಿವಿಧ ಜಿಲ್ಲೆಗಳಿಗೆ ಹಾಗು ಅಂತರ-ರಾಜ್ಯ ಸಾರಿಗೆಗೆ ಸಹಾಯ ಮಾಡುತ್ತವೆ.

ಇತಿಹಾಸ[ಬದಲಾಯಿಸಿ]

ಕೆಂಪೇಗೌಡ ಬಸ್ ನಿಲ್ದಾಣವನ್ನು ಕಟ್ಟಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಆರ್. ಗುಂಡೂ ರಾವ್ರವರಿಗೆ ಸಲ್ಲುತ್ತದೆ. ಮೆಜೆಸ್ಟಿಕ್ ಚಿತ್ರಮಂದಿರಕ್ಕೆ ಹತ್ತಿರವಿದ್ದುದರಿಂದ ಈ ನಿಲ್ದಾಣವನ್ನು ಮೆಜೆಸ್ಟಿಕ್ ಎಂದೂ ಕರೆಯಲಾಗುತ್ತದೆ.