ಕುರುಂಜಿ ವೆಂಕಟ್ರಮಣ ಗೌಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕುರುಂಜಿ ವೆಂಕಟರಮಣ ಗೌಡ ಇಂದ ಪುನರ್ನಿರ್ದೇಶಿತ)

ಕುರುಂಜಿ ವೆಂಕಟ್ರಮಣ ಗೌಡ ರವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರು. ಆಧುನಿಕ ಸುಳ್ಯದ ಭವ್ಯ ಶಿಲ್ಪಿ ಎಂದೇ ಪ್ರಸಿದ್ದರಾಗಿರುವ ಇವರು ಸುಳ್ಯ ಎಂಬ ಪುಟ್ಟ ತಾಲೂಕನ್ನು ಇಡೀ ದೇಶಕ್ಕೆ ಪರಿಚಯಿಸಿದವರು. ಅಂಗನವಾಡಿ ಕೇಂದ್ರದಿಂದ ಪ್ರಾರಂಭವಾಗಿ ಮೆಡಿಕಲ್ ಕಾಲೇಜಿನವರೆಗೆ ಎಲ್ಲ ರೀತಿಯ ವಿದ್ಯಾ ಸಂಸ್ಥೆಗಳನ್ನು ಈ ಪುಟ್ಟ ಊರಲ್ಲಿ ಸ್ಥಾಪಿಸಿ ಶಿಕ್ಷಣ ಬ್ರಹ್ಮ ಎಂದು ಖ್ಯಾತರದವರು.

ಕುರುಂಜಿಯವರ ಚಿಂತನೆಗಳು[೧][ಬದಲಾಯಿಸಿ]

 • ಕಠಿಣ ದುಡಿಮೆ, ಸಮಗ್ರತೆ, ಪ್ರಾಮಾಣಿಕತೆ, ಸಮಯಕ್ಕೆ ಮಹತ್ವ ಮತ್ತು ತ್ಯಾಗ - ಇವು ಯಶಸ್ಸಿನ ಪಂಚಸೂತ್ರಗಳು.
 • ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಮತ್ತು ಆಲಸ್ಯ ಮಾನವನ ಸಪ್ತ ಶತ್ರುಗಳು.
 • ನಾನು ಬರುವಾಗ ಏನನ್ನೂ ತರಲಿಲ್ಲ. ಹೋಗುವಾಗ ಏನನ್ನೂ ಕೊಂಡೊಯ್ಯಲಾಗುವುದಿಲ್ಲ. ಇಲ್ಲಿ ಗಳಿಸಿದ್ದನ್ನು ಇಲ್ಲಿಯೇ ವ್ಯಯಿಸಿದ್ದೇನೆ.
 • ದಲಿತರು, ಸ್ತ್ರೀಯರು ಮತ್ತು ಶೂದ್ರರು ವಿದ್ಯಾವಂತರಾಗುವವರೆಗೆ ಈ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಗುವುದಿಲ್ಲ.
 • ಹತ್ತು ಜನ ನಾಲ್ಕು ದಿನ ನೆನಪಿಟ್ಟುಕೊಳ್ಳುವಂತಹ ಕಾರ್ಯ ಮಾಡದವರ ಜೀವನ ವ್ಯರ್ಥ.
 • ರಕ್ತ ಸಂಬಂಧಕ್ಕಿಂತ ಭಾವನಾತ್ಮಕ ಸಂಬಂಧ ಶ್ರೇಷ್ಠವಾದದ್ದು.
 • ದಲಿತೋದ್ಧಾರ ಎನ್ನುವುದು ಕೃತಿಯಲ್ಲಿ ಬರಬೇಕು; ಮಾತಿನಲ್ಲಿ ಅಲ್ಲ.
 • ಸತಿಪತಿಯರು ೬೩ರಂತಿರಬೇಕು, ೩೬ರಂಥಲ್ಲ.
 • ಹಾಡಲಾಗದ ಕವಿತೆ ಬರೆದರೇನು ಸುಖ?
 • ಯಕ್ಷಗಾನಕ್ಕೆ ಕನ್ನಡ ಬಿಟ್ಟರೆ ಬೇರಾವ ಭಾಷೆಯೂ ಒಗ್ಗುವುದಿಲ್ಲ.
 • ಕಾಣದ ಬೆಳಕನ್ನು ತೋರುವವನೆ ನಿಜವಾದ ಗುರು.

ಉಲ್ಲೇಖಗಳು[ಬದಲಾಯಿಸಿ]

 1. "ಇರುಳ ಕಳೆದ ಬೆಳಕು" - ಡಾ. ಬಿ. ಪ್ರಭಾಕರ ಶಿಶಿಲ