ವಿಷಯಕ್ಕೆ ಹೋಗು

ಪಕ್ಷ (ಕಾನೂನು)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕಕ್ಷಿ (ವಾದಿ ಯಾ ಪ್ರತಿವಾದಿ) ಇಂದ ಪುನರ್ನಿರ್ದೇಶಿತ)

ಕಾನೂನಿನಲ್ಲಿ, ಪಕ್ಷ ಎಂದರೆ ನ್ಯಾಯದ ಉದ್ದೇಶಗಳಿಗಾಗಿ ಒಬ್ಬನೆಂದು ಗುರುತಿಸಬಹುದಾದ ಒಂದು ಘಟಕವನ್ನು ರಚಿಸುವ ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು. ಪಕ್ಷಗಳಲ್ಲಿ ವಾದಿ (ವ್ಯಾಜ್ಯವನ್ನು ದಾಖಲಿಸುವ ವ್ಯಕ್ತಿ), ಪ್ರತಿವಾದಿ (ಯಾರ ಮೇಲೆ ದಾವೆ ಹೂಡಲ್ಪಟ್ಟಿರುತ್ತದೋ ಅಥವಾ ಅಪರಾಧವನ್ನು ಹೊರಿಸಲಾಗಿರುತ್ತದೆಯೊ ಆ ವ್ಯಕ್ತಿ), ಮನವಿಗಾರ (ನ್ಯಾಯಾಲಯದ ತೀರ್ಪನ್ನು ಕೇಳಿ ಅರ್ಜಿಯನ್ನು ದಾಖಲಿಸುವವನು), ಸ್ವಪಕ್ಷ ಸಮರ್ಥಕ (ಸಾಮಾನ್ಯವಾಗಿ ಅರ್ಜಿ ಅಥವಾ ಅಪೀಲಿಗೆ ವಿರೋಧದಲ್ಲಿರುವವನು), ಅಡ್ಡ ಫಿರ್ಯಾದಿ (ಅದೇ ಮೊಕದ್ದಮೆಯಲ್ಲಿ ಬೇರೆ ಯಾರ ಮೇಲೋ ದಾವೆ ಹೂಡುವ ಪ್ರತಿವಾದಿ), ಅಥವಾ ಅಡ್ಡ ಪ್ರತಿವಾದಿ (ಅಡ್ಡ ಫಿರ್ಯಾದಿಯಿಂದ ದಾವೆ ಹೂಡಲ್ಪಟ್ಟ ವ್ಯಕ್ತಿ) ಸೇರಿರುತ್ತಾರೆ.[] ಒಂದು ವ್ಯಾಜ್ಯದಲ್ಲಿ ಕೇವಲ ಸಾಕ್ಷಿಯಾಗಿ ಕಾಣಿಸಿಕೊಳ್ಳುವ ವ್ಯಕ್ತಿಯನ್ನು ಪಕ್ಷ ಎಂದು ಪರಿಗಣಿಸಲಾಗುವುದಿಲ್ಲ.

ಸಿವಿಲ್ ಮೊಕದ್ದಮೆಯಲ್ಲಿ ಒಬ್ಬ ನಿರ್ದಿಷ್ಟ ಪಕ್ಷದ ಪಾತ್ರವನ್ನು ಗುರುತಿಸಲು ನ್ಯಾಯಾಲಯಗಳು ವಿವಿಧ ಪದಗಳನ್ನು ಬಳಸುತ್ತವೆ. ಸಾಮಾನ್ಯವಾಗಿ ವ್ಯಾಜ್ಯವನ್ನು ತರುವ ಪಕ್ಷವನ್ನು ವಾದಿ ಎಂದು, ಅಥವಾ, ಹಳೆಯ ಅಮೇರಿಕನ್ ವ್ಯಾಜ್ಯಗಳಲ್ಲಿ ಮೊದಲ ಭಾಗದ ಪಕ್ಷ; ಮತ್ತು ಯಾವ ಪಕ್ಷದ ವಿರುದ್ಧ ವ್ಯಾಜ್ಯವನ್ನು ತರಲಾಗುತ್ತದೋ ಅದನ್ನು ಪ್ರತಿವಾದಿ ಎಂದು, ಅಥವಾ, ಹಳೆಯ ಅಮೇರಿಕನ್ ವ್ಯಾಜ್ಯಗಳಲ್ಲಿ, ಎರಡನೇ ಭಾಗದ ಪಕ್ಷವೆಂದು ಗುರುತಿಸಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "Party - legal definition".