ಎಚ್. ಬಿ.ಎಲ್.ರಾವ್
ಹೆಜಮಾಡಿ ಬಾಗಿಲ್ತಾಯ ಲಕ್ಷ್ಮೀನಾರಾಯಣ ರಾವ್ (೨೦,ಸೆಪ್ಟೆಂಬರ್ ೧೯೩೩-೨೨,ಏಪ್ರಿಲ್,೨೦೨೦) | |
---|---|
Born | ಲಕ್ಷ್ಮೀನಾರಾಯಣ ದಕ್ಷಿಣ ಕನ್ನಡ ಜಿಲ್ಲೆಯ ಹೆಜಮಾಡಿ |
Died | ಮಹಾರಾಷ್ಟ್ರದ,ವಾಶಿ-ನೇರುಲ್ ನಲ್ಲಿರುವ ಎಮ್.ಜಿ.ಎಮ್, ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲ್ಪಟ್ಟರು. ಆದರೆ ತೀವ್ರ ಹೃದಯಾಘಾತದಿಂದ ನಿಧನರಾದರು. |
Nationality | ಭಾರತೀಯ |
Education | ಬಿ.ಎ; ಎಲ್.ಎಲ್.ಬಿ. |
Occupation(s) | ಯಕ್ಷಗಾನ ಕಲೆಯ ಪ್ರವರ್ತಕ, ಅತ್ಯುತ್ತಮ ಸಂಘಟಕ, ಬರಹಗಾರ |
Known for | ಯಕ್ಷಗಾನ ಕಲೆಯನ್ನು ಪ್ರಸಿದ್ಧಪಡಿಸುವ ದಿಶೆಯಲ್ಲಿ ಬಹಳ ಮಹತ್ವದ ಕೆಲಸಗಳನ್ನು ಮಾಡಿದ್ದಾರೆ. |
Spouse | ಸುಧಾ ರಾವ್, |
Children | ಮಗಳು ಪದ್ವಾವತಿ, ಅಳಿಯ :ಉದಯ ಭಟ್, ಮೊಮ್ಮಗಳು, ಶುಭಶ್ರೀ |
ಹೆಜಮಾಡಿ ಬಾಗಿಲ್ತಾಯ ಲಕ್ಷ್ಮೀನಾರಾಯಣ ರಾವ್,(೨೦,ಸೆಪ್ಟೆಂಬರ್ ೧೯೩೩-೨೨,ಏಪ್ರಿಲ್, ೨೦೨೦) ತಮ್ಮ ಸ್ನೇಹಿತರ ವಲಯದಲ್ಲಿ ಎಚ್.ಬಿ.ಎಲ್.ರಾವ್ ಎಂದು ಚಿರಪರಿಚಿತರಾಗಿದ್ದಾರೆ. ಸುಮಾರು ೬ ವರ್ಷಗಳಿಂದ 'ಮಹಾರಾಷ್ಟ್ರ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ'ರಾಗಿರುವ, ರಾವ್, ಮುಂಬಯಿನ ಕನ್ನಡಿಗರ ಪ್ರಮುಖ ಕನ್ನಡ ಕಲಾವಿದರು. 'ಯಕ್ಷಗಾನ'ವನ್ನು ದೇಶದಾದ್ಯಂತ ಪ್ರಸಿದ್ಧಿಪಡಿಸುವ ನಿಟ್ಟಿನಲ್ಲಿ ಅವರು ಮಾಡುತ್ತಿರುವ ಕಾರ್ಯಗಳು ಅನುಕರಣೀಯ. 'ಮುಂಬಯಿ'ನಗರದ 'ಸಯಾನ್' ಉಪನಗರದಲ್ಲಿರುವ 'ಗೋಕುಲ್' ನಲ್ಲಿ ಅವರು ಪದಾಧಿಕಾರಿಯಾಗಿ ಸೇವೆಸಲ್ಲಿಸುತ್ತಿದ್ದಾರೆ. ೨೦೧೪ ರಲ್ಲಿ ಎಚ್.ಬಿ.ಎಲ್.ರಾಯರ ಕಾಣಿಕೆಗಳನ್ನು ಗುರುತಿಸಿ ಹೊರತರಲಾದ 'ಹರಸಾಹಸಿ' ಎಂಬ ಅಭಿನಂದನಾಗ್ರಂಥ ಮತ್ತು ಕಲಾತಪಸ್ವಿ,(೨೦೧೨) ಕೃತಿಗಳು ರಾವ್ ರವರ ವ್ಯಕ್ತಿತ್ವವನ್ನು ದರ್ಶಾಯಿಸುತ್ತವೆ. ಹಲವಾರು ಪುಸ್ತಕ,ಪತ್ರಿಕೆಗಳ ಪ್ರಧಾನ ಸಂಪಾದಕ, ಪ್ರಕಾಶಕ, ಕನ್ನಡ ಸಂಘಗಳ ಸಂಘಟಕರಾದ ರಾವ್ ಹಲವಾರು ಯಕ್ಷಗಾನಸಾಹಿತ್ಯ ಸಮ್ಮೇಳನ್ನು ಆಯೋಜಿಸಿ, ನೂರಾರು ಯಕ್ಷಗಾನ ಪ್ರಸಂಗಗಳು ಜನಪ್ರಿಯತೆಯನ್ನು ಗಳಿಸಲು ನೆರವಾಗಿದ್ದಾರೆ. ಕಾಸಾಪ (ಮಹಾರಾಷ್ಟ್ರ ಘಟಕ) ವಿಂಶತಿ ವರ್ಷದ ಸಂದರ್ಭದಲ್ಲಿ ಪ್ರಕಟಿಸಿದ'ವಿಂಶತಿ ವಾಹಿನಿ,'ಎನ್ನುವ ೧೦೮ ಪ್ರಾತಿನಿಧಿಕ ಕವನ ಸಂಕಲನ ಬಹಳ ಮಹತ್ವದ್ದೆಂದು ಪರಿಗಣಿಸಲ್ಪಟ್ಟಿದೆ.
ಬಾಲ್ಯ ಹಾಗೂ ವಿದ್ಯಾಭ್ಯಾಸ
[ಬದಲಾಯಿಸಿ]ಲಕ್ಷ್ಮೀನಾರಾಯಣರು, ೨೦,ಸೆಪ್ಟೆಂಬರ್ ೧೯೩೩ ರಲ್ಲಿ, ದಕ್ಷಿಣ ಕನ್ನಡದ ಉಡುಪಿ ಜಿಲ್ಲೆಯ ಹೆಜಮಾಡಿಗ್ರಾಮದಲ್ಲಿ ಜನಿಸಿದರು. ತಂದೆ ರಾಮರಾವ್, ಆಯುರ್ವೇದ ಪಂಡಿತರು ಹಾಗೂ ಯಕ್ಷಗಾನಾಸಕ್ತರು. ಅರ್ಥದಾರಿ ಹಾಗೂ ಮೃದಂಗವಾದಕರೆಂದು ಹೆಸರುಮಾಡಿದ್ದರು. ೧೯೫೨-೫೩ ರಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಮುಂದೆ ವಿದ್ಯಾಭ್ಯಾಸ ಮುಂದುವರೆಸಲು ಆರ್ಥಿಕ ಅಡಚಣೆಗಳು ಬಂದವು. ಸಂಬಂಧಿಯೊಬ್ಬರ ಜೊತೆ ಮದ್ರಾಸ್ ನಗರಕ್ಕೆ ಹೋಗಿ ಹೋಟೆಲ್ ಒಂದರಲ್ಲಿ ಮಾಣಿಯಕೆಲಸ ಮಾಡಿದರು.ತಮಿಳು ಭಾಷೆಕಲಿತು ಹೆಜಮಾಡಿಗೆ ಹಿಂದಿರುಗಿದರು. ಮತ್ತೊಬ್ಬ ಸಂಬಂಧಿ ಕೇರಳದ ಕಲ್ಲಿಕೋಟೆಗೆ ಕರೆದುಕೊಂಡುಹೋದರು. ಅಲ್ಲಿ ಮನೆಯ ಉಸ್ತುವಾರಿಯ ಜೊತೆಗೆ ತೋಟಕ್ಕೆ ನೀರು ಹಾಕುವ ಕೆಲಸ ಸಿಕ್ಕಿತು. ಅಲ್ಲಿಂದ ಮಂತ್ರಾಲಯದ ರಾಯರ ದರ್ಶನಕ್ಕೆ ಮನಸ್ಸು ಹಾತೊರೆಯುತ್ತಿತ್ತು. ಬೆಂಗಳೂರಿನ ಮುಖಾಂತಾರ ಹೋಗಬೇಕಿತ್ತು. ಹಣ ಕಡಿಮೆಯಾಗಿದ್ದರಿಂದ ಅಲ್ಲಿನ 'ದಾಸಪ್ರಕಾಶ್ ಹೋಟೆಲ್ಲಿ'ನಲ್ಲಿ ಕೆಲಸಕ್ಕೆ ನಿಂತರು.ಪುನಃ ಊರಿಗೆ ವಾಪಸ್ ಹೋದರು. ಪರಿಚಯದವರ ನೆರವಿನಿಂದ ಮುಬಯಿಮಹಾನಗರಕ್ಕೆ ತಲುಪಿ ಅಲ್ಲಿನ ಕೋಟೆವಲಯದಲ್ಲಿ 'ಕೋಮಲವಿಲಾಸ್' ಎಂಬ ಹೋಟೆಲ್ಲಿನಲ್ಲಿ ಕೆಲಸ ಗಳಿಸಿ ೬ ತಿಂಗಳ ನಂತರ, 'ಓವರ್ ಸೀರ್ ಕಮ್ಯುನಿಕೇಶನ್ ಸರ್ವೀಸ್' ನಲ್ಲಿ ನೌಕರಿದೊರೆಯಿತು. ಪಠಾಣ್ ನಿಂದ ಸಾಲಪಡೆದು 'ಭವಾನ್ಸ್ ಕಾಲೇಜ್' ನಲ್ಲಿ ಬಿ.ಎ.ನಂತರ ಎಲ್.ಎಲ್.ಬಿ. ಪದವಿಗಳಿಸಿದರು.
ಅಧ್ಯಾಪಕ ವೃತ್ತಿ
[ಬದಲಾಯಿಸಿ]ಬಿಲ್ಲವರ ಅಸೋಸಿಯೇಷನ್ ಅಯೋಜಿತ ರಾತ್ರಿಶಾಲೆಯಲ್ಲಿಮೊದವೀರ ಸಂಘದವರ ಫ್ರೀ ನೈಟ್ ಸ್ಕೂಲಿನಲ್ಲಿ, ಬಂಟರ ಸಂಘದ ರಾತ್ರಿಶಾಲೆಯಲ್ಲಿ ೯ ರಿಂದ ೧೧ ನೆಯ ತರಗತಿಯ ಛಾತ್ರರಿಗೆ ಶಿಕ್ಷಕರಾಗಿ ೧೫ ವರ್ಷ ಕೆಲಸಮಾಡಿದರು.
ಪರಿವಾರ
[ಬದಲಾಯಿಸಿ]ರಾವ್ ತಮ್ಮ ೪೧ ವರ್ಷದ ಪ್ರಾಯದಲ್ಲಿ 'ಸುಧಾ' ಎನ್ನುವ ಹುಡುಗಿಯ ಜೊತೆ ವಿವಾಹವಾದರು. ಈ ದಂಪತಿಗಳಿಗೆ ಪದ್ಮಾವತಿ ಎನ್ನುವ ಮಗಳಿದ್ದಾಳೆ. ಅಳಿಯ ಉದಯ ಭಟ್. ಮೊಮ್ಮಗಳು ಶುಭಶ್ರೀ.
ನಿವೃತ್ತಿ
[ಬದಲಾಯಿಸಿ]ಎಚ್.ಬಿ.ಎಲ್.ರಾಯರು ೩೪ ವರ್ಷಗಳ ಕಾರ್ಯಾಚರಣೆಯ ನಂತರ ೧೯೯೧ ರಲ್ಲಿ ನಿವೃತ್ತರಾದರು.
ಪದವೀಧರ ಯಕ್ಷಗಾನ ಸಮಿತಿ
[ಬದಲಾಯಿಸಿ]೧೯೭೩ ರಲ್ಲಿ ಸ್ಥಾಪಿಸಲ್ಪಟ್ಟಿತು. ಕಾಲೇಜಿನ ತರುಣ ಕಲಾವಿದರನ್ನು ಸಂಘಟಿಸಿ ೧೯೬೨ ರಲ್ಲಿ 'ತರುಣ ಯಕ್ಷಗಾನ ಮಂಡಲಿ'ಯೆಂದು ಹೆಸರು ಪಡೆಯಿತು. ೧೯೭೭ ರಲ್ಲಿ ನೊಂದಾಯಿಸಲಾಯಿತು.
ರಾವ್ ರವರ ಸಾಧನೆಗಳು
[ಬದಲಾಯಿಸಿ]೪ ದಶಕಗಳ ಸಾಧನೆ. ೧೪೬ ಅಪ್ರಕಟಿತ ಯಕ್ಷಗಾನ ಪ್ರಸಂಗಗಳನ್ನು ಪ್ರಕಟಿಸಿದೆ
[ಬದಲಾಯಿಸಿ]- ೧೯೯೨ ರಲ್ಲಿ ಸಾಹಿತ್ಯ ಬಳಗದ ಸ್ಥಾಪನೆ.
- ೨೦೦೧ ರಲ್ಲಿ ಶಿವಳ್ಳಿ ಪ್ರತಿಶ್ಠಾನ ಪ್ರವಚನ ಸಮಿತಿ,
- ೨೦೦೪ ರಲ್ಲಿ ಕನ್ನಡಸಾಹಿತ್ಯ ಪರಿಷತ್ತು,(ಮಹಾರಾಷ್ಟ್ರ ಘಟಕ),
- ಯಕ್ಷಗಾನ ಸಾಹಿತ್ಯ ಸಮ್ಮೇಳನಗಳು, ಮೊದಲಾದವುಗಳು ರಾವ್ ರವರ ಸಾಧನೆಗಳ ಕೆಲವು ಉದಾಹರಣೆಗಳು.
- ೨೨ನೆಯ ತುಳುಪರ್ಬದ ಉದ್ಘಾಟನೆ. [೧]
ಒಟ್ಟಾರೆ ಸಾಧನೆಗಳು
[ಬದಲಾಯಿಸಿ]- ಕ.ಸಾ.ಪ.ಮಹಾರಾಷ್ಟ್ರ(ಘಟಕ) ಇದುವರೆಗೆ ಒಟ್ಟು ೨೧ ಪುಸ್ತಕಗಳನ್ನು ಪ್ರಕಟಣೆಮಾಡಿದೆ.
- ೧೦೦ ಪಾಡ್ದನಗಳ ಧ್ವನಿಸುರುಳಿ
- ಅಣಿ ಅರದಾಳ -ಸಿರಿ ಸಿಂಗಾರ ವಿನೂತನ ಕಾರ್ಯಾಗಾರದ ಸುಮಾರು೩೦೦ ಕ್ಕೂ ಹೆಚ್ಚು ಬಹುವರ್ಣ ಪುಟಗಳನ್ನು ಒಳಗೊಂಡಂತೆ ಬೃಹತ್ ಗ್ರಂಥದ ರಚನೆ.
- ಬೈಬಲ್ ಆಧಾರಿತ ’ಸತ್ಯ ವಿಜಯ’ಯಕ್ಷಗಾನ ಪ್ರದರ್ಶನ. ಮೊತ್ತಮೊದಲ ಪ್ರಯತ್ನ.
- ನಾಗಮಂಡಲ ನೃತ್ಯ ವೈಭವ ಪ್ರಾತ್ಯಕ್ಷಿಕೆ,
- ೪೦ ಕಲಾವಿದ ,ಗಣ್ಯರಿಗೆ ಚಿನ್ನದ ಪದಕವಿತ್ತು ಸನ್ಮಾನ,
- ೧೪ ಕೃತಿಗಳ ಪ್ರಬಂಧಮಂಡನೆ ಉಪನ್ಯಾಸಗಳ ಪ್ರಕಟಣೆ,
- ೧೨ ಅಭಿನಂದನಾ ಗ್ರಂಥಗಳ ಪ್ರಕಟಣೆ,
- ೨೬ ಸಂಪುಟಗಳಲ್ಲಿ ೧೪೬ ಪ್ರಸಂಗಗಳ ಪ್ರಕಟಣೆ,
- ೧೫ ಯಕ್ಷಗಾನ ಸಮ್ಮೇಳನಗಳ ಯಶಸ್ವಿ ಆಯೋಜನೆ,
ಪ್ರಶಸ್ತಿ,ಪುರಸ್ಕಾರಗಳು
[ಬದಲಾಯಿಸಿ]- ಭಾಗವತ ಸಾಹಿತ್ಯ ಪ್ರಶಸ್ತಿ
- ಕುಬೆವೂರು ಪುಟ್ಟಣ್ಣಶೆಟ್ಟಿ ಪ್ರಶಸ್ತಿ
- ವಿಶ್ವೇಶ್ವರಯ್ಯ ಪ್ರಶಸ್ತಿ,
- ಕರ್ನಾಟಕ ಶ್ರೀ,
- ಜ್ಞಾನವಿಜ್ಞಾನ,ಪೂಲ್ಯ ದೇಜಪ್ಪಶೆಟ್ಟಿಯಕ್ಷಗಾನ ಸಾಹಿತ್ಯ ಪ್ರಶಸ್ತಿ,
- ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ,
- ಸಮಾಜರತ್ನ ಪ್ರಶಸ್ತಿ,
- ಯಕ್ಷಗಾನ ಕಲಾ ಪ್ರಶಸ್ತಿ,
- ತುಳುಶ್ರೀಪ್ರಶಸ್ತಿ,ಸಾಧನ ಶಿಖರ ಪ್ರಶಸ್ತಿ,
- ಮುಂಬಯಿ ವಿಶ್ವವಿದ್ಯಾಲಯದ ಗೌರವ ಪುರಸ್ಕಾರ
ಕೃತಿರಚನೆ
[ಬದಲಾಯಿಸಿ]- 'ಅಚ್ಚಿಬೆಲ್ಲ'[೨] ಎಂಬ ಕೃತಿ ರಚಿಸಿದ್ದಾರೆ.
ಮಾಹಿತಿ ಸಂಗ್ರಹ
[ಬದಲಾಯಿಸಿ]- ಹೊರನಾಡ ಕನ್ನಡ ಸೇನಾನಿ, ಹೆಚ್.ಬಿ.ಎಲ್.ರಾವ್-ಶ್ರೀನಿವಾಸ ಜೋಕಟ್ಟೆ,ಕುಸುಮ ೧೫೦. ಕನ್ನಡ ಸಂಘಕಾಂತಾವರ,ಕಾರ್ಕಳ ಉಡುಪಿ ಜಿಲ್ಲೆ.
ನಿಧನ
[ಬದಲಾಯಿಸಿ]೮೭ ವರ್ಷ ವಯಸ್ಸಿನ ಸಾಹಿತಿ, ಯಕ್ಷಗಾನ ಪ್ರವರ್ತಕ, ಹಿರಿಯ ತುಳು-ಕನ್ನಡ ಸಂಘಟಕ, ಎಚ್.ಬಿ.ಎಲ್.ರಾವ್ ಅವರು ಏಪ್ರಿಲ್ ೨೨, ೨೦೨೦ ರಂದು ವಿಧಿವಶರಾದರು. [೩],[೪]
ಉಲ್ಲೇಖಗಳು
[ಬದಲಾಯಿಸಿ]- ↑ Canara news, Rons bantwal, 28-03-2016, 'Inauguration of 22nd Tulu parba', at The Karnataka sangha, Mumbai
- ↑ ಕರ್ನಾಟಕಮಲ್ಲ,೨೭,ಮೇ,೨೦೧೬, ಪುಟ.೭, ಎಚ್. ಬಿ.ಎಲ್.ರಾಯರ ಅಚ್ಚಿಬೆಲ್ಲ ಒಂದು ಪರಿಚಯ-ರತ್ನಾಕರ ಶೆಟ್ಟಿ
- ↑ ಇಲ್ಲವಾದರು ರಾಯರು, ಅವಧಿ.ಕಾಂ, ಶ್ರೀನಿವಾಸ್ ಜೋಕಟ್ಟೆ
- ↑ Mumbai :Veteran Litterateur Karnataka HBL Rao Passesaway. 23, April, 2020, Daijiworld.com