ಆವರ್ತಕ (ಆಲ್ಟರ್ನೇಟರ್)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಆವರ್ತಕ(ಆಲ್ಟರ್ನೇಟರ್) ಇಂದ ಪುನರ್ನಿರ್ದೇಶಿತ)
ಆರಂಭಿಕ 20ನೇ-ಶತಮಾನದಲ್ಲಿ ಹಂಗರಿಯ ಬುದಪೆಸ್ಟ್‌ನ ಹೈಡ್ರೊ-ಇಲೆಕ್ಟ್ರಿಕ್ ಕೇಂದ್ರದ ವಿದ್ಯುತ್ ಉತ್ಪಾದನಾ ಹಾಲ್‌ನಲ್ಲಿ ತಯಾರಿಸಲಾದ ಆವರ್ತಕ (ಪ್ರಾಕುಡಿನ್-ಗಾರ್ಸ್ಕಿ‌ ತೆಗೆದ ಫೋಟೋ, 1905–1915).

ಆವರ್ತಕ ವು ಯಾಂತ್ರಿಕ ಶಕ್ತಿಯನ್ನು ವಿದ್ಯುತ್ತಿನ ಶಕ್ತಿಯಾಗಿ ಪರ್ಯಾಯ ವಿದ್ಯುತ್ ರೂಪದಲ್ಲಿ ಪರಿವರ್ತಿಸುವ ಒಂದು ವಿದ್ಯುತ್ಕಾಂತೀಯ ಸಾಧನವಾಗಿದೆ. ಹೆಚ್ಚಿನ ಆವರ್ತಕಗಳು ಚಕ್ರಾಕಾರದ ಕಾಂತ ಕ್ಷೇತ್ರವನ್ನು ಬಳಸಿಕೊಳ್ಳುತ್ತವೆ. ಆದರೆ ರೇಖೀಯ ಆವರ್ತಕ(ಎಲೆಯಾಕಾರದ ವಿನ್ಯಾಸ)ಗಳನ್ನು ಆಗೊಮ್ಮೆ ಈಗೊಮ್ಮೆ ಬಳಸಲಾಗುತ್ತದೆ. ಮ‌ೂಲತಃ, ಯಾವುದೇ AC ವಿದ್ಯುತ್ ಜನರೇಟರನ್ನು ಆವರ್ತಕವೆಂದು ಕರೆಯಬಹುದು. ಆದರೆ ಸಾಮಾನ್ಯವಾಗಿ ಈ ಪದವು ಮೋಟಾರುಗಳಿಂದ ಮತ್ತು ಇತರ ಅಂತರ್ದಹನ ಯಂತ್ರಗಳಿಂದ ಚಲಾಯಿಸಲ್ಪಡುವ ತಿರುಗುವ ಸಣ್ಣ ಯಂತ್ರಗಳನ್ನು ಸೂಚಿಸುತ್ತದೆ. ವಿದ್ಯುತ್ ಕೇಂದ್ರಗಳಲ್ಲಿ ಆವಿ (ಹಬೆ)ಟರ್ಬೈನುಗಳಿಂದ ನಡೆಸಲ್ಪಡುವ ಆವರ್ತಕಗಳನ್ನು ಟರ್ಬೊ-ಆವರ್ತಕಗಳೆಂದು ಕರೆಯುತ್ತಾರೆ.

ಇತಿಹಾಸ[ಬದಲಾಯಿಸಿ]

ಪರ್ಯಾಯ ವಿದ್ಯುತ್ತನ್ನು ಉತ್ಪಾದಿಸುವ ವ್ಯವಸ್ಥೆಗಳು [[ವಿದ್ಯುತ್ ಪ್ರವಾಹದ ಕಾಂತೀಯ ಚೋದನೆ(ಕಾಂತಕ್ಷೇತ್ರವನ್ನು ಬದಲಾಯಿಸಿ ವಾಹಕದಲ್ಲಿ ವಿದ್ಯುತ್ತನ್ನು ಉತ್ಪಾದಿಸುವುದು)]]ಯ ಅನ್ವೇಷಣೆಯಿಂದ ಸರಳ ರೂಪಗಳಲ್ಲಿ ಕಂಡುಬರುತ್ತಿದ್ದವು. ಆರಂಭಿಕ ಯಂತ್ರಗಳನ್ನು ಮೈಕೆಲ್ ಫ್ಯಾರಡೆ ಮತ್ತು ಹಿಪ್ಪೊಲಿಟ್ ಪಿಕ್ಸಿಯಂತಹ ಪ್ರವರ್ತಕರು ಅಭಿವೃದ್ಧಿಪಡಿಸಿದರು. ಫ್ಯಾರಡೆಯು ಭಿನ್ನಧ್ರುವೀಯ ದಲ್ಲಿ ಕಾರ್ಯನಿರ್ವಹಿಸುತ್ತಿದ್ದ "ಚಕ್ರಾಕಾರದ ಆಯತ"ವನ್ನು ಅಭಿವೃದ್ಧಿಪಡಿಸಿದನು. ಅದರಲ್ಲಿ ಪ್ರತಿಯೊಂದು ಸಕ್ರಿಯ ವಾಹಕವು ಕಾಂತ ಕ್ಷೇತ್ರವು ವಿರುದ್ಧ ದಿಕ್ಕಿನಲ್ಲಿದ್ದ ಕ್ಷೇತ್ರದ ಮ‌ೂಲಕ ವಿದ್ಯುತ್ತನ್ನು ಸಾಗಿಸಿದವು.[೧] ಹೆಚ್ಚು ದೃಢವಾದ "ಆವರ್ತಕ ಸಾಧನ"ವನ್ನು 1886ರಲ್ಲಿ ಮೊದಲು ಸಾರ್ವಜನಿಕವಾಗಿ ಪ್ರದರ್ಶಿಸಲಾಯಿತು.[೨] ದೊಡ್ಡ ಎರಡು-ಹಂತದ ಪರ್ಯಾಯ ವಿದ್ಯುತ್‌ ಜನರೇಟರುಗಳನ್ನು ಬ್ರಿಟಿಷ್ (ಎಲೆಕ್ಟ್ರಿಶಿಯನ್ )ವಿದ್ಯುತ್ಕಾರ್ಮಿಕ J.E.H. ಗೋರ್ಡನ್ 1882ರಲ್ಲಿ ರಚಿಸಿದನು. ಲಾರ್ಡ್ ಕೆಲ್ವಿನ್ ಮತ್ತು ಸೆಬಸ್ಟಿಯನ್ ಫೆರಾಂಟಿ 100ರಿಂದ 300 Hz ಕಂಪನ ದರಗಳನ್ನು ಉತ್ಪತ್ತಿ ಮಾಡುವ ಆರಂಭಿಕ ಆವರ್ತಕಗಳನ್ನು ಅಭಿವೃದ್ಧಿಪಡಿಸಿದರು. 1891ರಲ್ಲಿ ನಿಕೋಲ ಟೆಲ್ಸಾ "ಹೆಚ್ಚು-ಕಂಪನ ದರದ" ಆವರ್ತಕವೊಂದನ್ನು (ಸುಮಾರು 15 kHzದಲ್ಲಿ ಕೆಲಸ ಮಾಡುವ) ರಚಿಸಿದನು.[೩] ಸುಮಾರು 1891ರ ನಂತರ, ಅನೇಕ ಭಿನ್ನ ಹಂತಗಳಲ್ಲಿ ವಿದ್ಯುತ್ತನ್ನು ಪೂರೈಸಲು ಬಹುಹಂತದ ಆವರ್ತಕಗಳನ್ನು ಬಳಕೆಗೆ ತರಲಾಯಿತು.[೪] ನಂತರ ಆವರ್ತಕಗಳನ್ನು ಹದಿನಾರು ಮತ್ತು ಸುಮಾರು ನೂರು ಹರ್ಟ್ಜ್‌ನಲ್ಲಿ ಬದಲಾಗುವ ಪರ್ಯಾಯ-ವಿದ್ಯುತ್ ಕಂಪನ ದರಗಳಿಗಾಗಿ, ವಿದ್ಯುಚ್ಚಾಪ ದೀಪದೊಂದಿಗೆ ಬಳಸಲು, ಪ್ರಜ್ವಲಿಸುವ ದೀಪಗಳಿಗಾಗಿ ಮತ್ತು ವಿದ್ಯುತ್ ಮೋಟಾರುಗಳಿಗಾಗಿ ವಿನ್ಯಾಸಗೊಳಿಸಲಾಯಿತು.[೫]

ಕಾರ್ಯನಿರ್ವಹಣೆಯ ನಿಯಮ(ತತ್ವ)[ಬದಲಾಯಿಸಿ]

ಆವರ್ತಕದ ಚಿತ್ರ
ತಿರುಗುವ ಕಾಂತೀಯ ಕೋರ್ (ರೋಟರ್) ಮತ್ತು ಸ್ಥಿರ ತಂತಿಯನ್ನು (ಸ್ಟೇಟರ್) ಹೊಂದಿರುವ ಸರಳ ಆವರ್ತಕದ ಚಿತ್ರ, ರೋಟರ್‌ನ ತಿರುಗುವ ಕಾಂತ ಕ್ಷೇತ್ರದಿಂದ ಸ್ಟೇಟರ್‌ನಲ್ಲಿ ಉತ್ಪತ್ತಿಯಾದ ವಿದ್ಯುತ್ತನ್ನೂ ತೋರಿಸುತ್ತಿದೆ.

ವಾಹಕದ ಸುತ್ತಲಿನ ಕಾಂತ ಕ್ಷೇತ್ರವು ಬದಲಾದಂತೆ ವಾಹಕದಲ್ಲಿ ವಿದ್ಯುತ್ ಉತ್ಪತ್ತಿಯಾಗುತ್ತದೆ; ಎಂಬ DC ಜನರೇಟರುಗಳು ಬಳಸುವ ತತ್ವದ ಮೇಲೆಯೇ ಆವರ್ತಕಗಳು ವಿದ್ಯುತ್ತನ್ನು ಉತ್ಪಾದಿಸುತ್ತವೆ. ರೋಟರ್ ಎನ್ನುವ ಚಕ್ರಾಕಾರದ ಕಾಂತವು, ಸ್ಟೇಟರ್(ಸ್ಥಿರಭಾಗ) ಎನ್ನುವ ಕಬ್ಬಿಣದ ತುಂಡೊಂದಕ್ಕೆ ಸುರುಳಿಗಳನ್ನು ಸುತ್ತಿದ ವಾಹಕಗಳ ಸ್ಥಿರ ಸಾಧನದೊಳಗೆ ಸುತ್ತುತ್ತದೆ. ಯಾಂತ್ರಿಕ ಸಂಜ್ಞೆಯು ರೋಟರ್ಅನ್ನು ತಿರುಗುವಂತೆ ಮಾಡಿದಂತೆ, ಕಾಂತ ಕ್ಷೇತ್ರವು ವಾಹಕಗಳನ್ನು ಛೇದಿಸಿ, EMFಅನ್ನು ಉತ್ಪತ್ತಿ ಮಾಡುತ್ತದೆ. ಚಕ್ರಾಕಾರದ ಕಾಂತ ಕ್ಷೇತ್ರವು ಸ್ಟೇಟರ್ (ಯಂತ್ರದ ಸ್ಥಿರತೆಯ)ಸುರುಳಿಗಳಲ್ಲಿ AC ವೋಲ್ಟೇಜ್ಅನ್ನು ಉತ್ಪತ್ತಿ ಮಾಡುತ್ತದೆ. ಹೆಚ್ಚಾಗಿ ಮ‌ೂರು ಜೊತೆ ಸ್ಟೇಟರ್ ಸುರುಳಿಗಳಿರುತ್ತವೆ, ಅವು ಚಕ್ರಾಕಾರದ ಕಾಂತ ಕ್ಷೇತ್ರವು ಮ‌ೂರು ಹಂತದ ವಿದ್ಯುತ್ತನ್ನು ಉತ್ಪತ್ತಿ ಮಾಡುವುದರಿಂದ ಸರಿದೂಗುತ್ತವೆ. ರೋಟರ್ ಕಾಂತ ಕ್ಷೇತ್ರವನ್ನು ಚೋದನೆಯಿಂದ ("ಬ್ರಷ್‌ರಹಿತ" ಆವರ್ತಕಗಳಲ್ಲಿ), ಶಾಶ್ವತ ಕಾಂತಗಳಿಂದ (ಅತಿ ಸಣ್ಣ ಯಂತ್ರಗಳಲ್ಲಿ) ಅಥವಾ ಸ್ಲಿಪ್ ರಿಂಗ್ ಮತ್ತು ಬ್ರಷ್‌ಗಳ ಮೂಲಕ ಏಕಮುಖ ವಿದ್ಯುತ್‌ನೊಂದಿಗೆ ಕಾರ್ಯೋದ್ಯುಕ್ತಗೊಳಿಸಿದ ರೋಟರ್ ಸುರುಳಿಗಳಿಂದ ಉತ್ಪಾದಿಸಲಾಗುತ್ತದೆ. ರೋಟರ್ ಕಾಂತ ಕ್ಷೇತ್ರವನ್ನು, ಕಾಂತ ಧ್ರುವಗಳನ್ನು ರೋಟರ್‌ನಲ್ಲಿ ಚಲಿಸುವುದರೊಂದಿಗೆ ಸ್ಥಿರ ಕ್ಷೇತ್ರ ಸುರುಳಿಯಿಂದ ಒದಗಿಸಬಹುದು. ಮೋಟಾರಿನ ಆವರ್ತಕಗಳು ಏಕರೂಪವಾಗಿ ರೋಟರ್ ಸುರುಳಿಯನ್ನು ಬಳಸಿಕೊಳ್ಳುತ್ತವೆ. ಅದು ರೋಟರ್ ಕ್ಷೇತ್ರ ಸುರುಳಿಯಲ್ಲಿ ವಿದ್ಯುತ್ತನ್ನು ಬದಲಾಯಿಸುವ ಮ‌ೂಲಕ ಆವರ್ತಕದಲ್ಲಿ ಉತ್ಪತ್ತಿಯಾಗುವ ವೋಲ್ಟೇಜ್‌ಅನ್ನು ನಿಯಂತ್ರಿಸುತ್ತದೆ. ಶಾಶ್ವತ ಕಾಂತೀಯ ಯಂತ್ರಗಳು ರೋಟರ್‌ನಲ್ಲಿ ಕಾಂತೀಕರಿಸುವ-ವಿದ್ಯುತ್ತಿನಿಂದಾಗುವ ನಷ್ಟವನ್ನು ತಪ್ಪಿಸುತ್ತವೆ. ಆದರೆ ಅವು ಗಾತ್ರದಲ್ಲಿ ಸೀಮಿತವಾಗಿದ್ದು, ಕಾಂತೀಯ ವಸ್ತುವಿನ ನಷ್ಟಕ್ಕೆ ಕಾರಣವಾಗುತ್ತದೆ. ಶಾಶ್ವತ ಕಾಂತ ಕ್ಷೇತ್ರವು ಸ್ಥಿರವಾಗಿರುವ ಕಾರಣ ಅಂತಿಮ ವೋಲ್ಟೇಜ್, ಜನರೇಟರಿನ ವೇಗದೊಂದಿಗೆ ನೇರವಾಗಿ ಬದಲಾಗುತ್ತದೆ. ಬ್ರಷ್-ರಹಿತ AC ಜನರೇಟರುಗಳು ಸಾಮಾನ್ಯವಾಗಿ ಮೋಟಾರಿನ (ಅಳವಡಿಕೆ)ಅನ್ವಯಗಳಲ್ಲಿ ಬಳಸುವವುಗಳಿಗಿಂತ ದೊಡ್ಡದಾದ ಯಂತ್ರಗಳಾಗಿವೆ.

ಸಮಾನುಪಾತದ ವೇಗ[ಬದಲಾಯಿಸಿ]

ಆವರ್ತಕದ ಔಟ್‌ಪುಟ್-ಕಂಪನ ದರವು ಕಾಂತ ಧ್ರುವಗಳ ಸಂಖ್ಯೆ ಮತ್ತು ಆವರ್ತನದ ವೇಗವನ್ನು ಅವಲಂಬಿಸಿರುತ್ತದೆ. ನಿರ್ದಿಷ್ಟ ಕಂಪನ ದರಕ್ಕೆ ಅನುಗುಣವಾದ ವೇಗವನ್ನು ಆ ಕಂಪನದರದ ಸಮಾನುಪಾತದ ವೇಗ ಎಂದು ಕರೆಯುತ್ತಾರೆ. ಈ ಕೋಷ್ಟಕವು [೬] ಕೆಲವು ಉದಾಹರಣೆಗಳನ್ನು ನೀಡುತ್ತದೆ:

ದ್ರುವಗಳು (ಪೋಲ್ಸ್ ) 50 Hz ನಲ್ಲಿನ RPM 60 Hz ನಲ್ಲಿನ RPM
2 3,000 3,600
4 1,500 1,800
6 1,000 1,200
8 750 900
10 600 720
12 500 600
14 428.6 514.3
16 375 450
18 333.3 400
20 300 360

ಪ್ರತಿ ಬಾರಿ ಒಂದು ಜೊತೆ ಕಾಂತಕ್ಷೇತ್ರ ಧ್ರುವವು ಸ್ಥಿರ ಸುರಳಿಯಲ್ಲಿನ ಒಂದು ಬಿಂದುವನ್ನು ಹಾಯ್ದು ಸಾಗಿದಾಗ, ಒಂದು ಚಕ್ರ ಪರ್ಯಾಯ ವಿದ್ಯುತ್ ಉತ್ಪತ್ತಿಯಾಗುತ್ತದೆ. ವೇಗ ಮತ್ತು ಕಂಪನ ದರದ ನಡುವಿನ ಸಂಬಂಧವೆಂದರೆ , ಇದರಲ್ಲಿ ಎಂಬುದು Hz ಮಾಪನಾಂಕದಲ್ಲಿರುವ ಕಂಪನ ದರವಾಗಿದೆ. (ಪ್ರತಿ ಸೆಕೆಂಡಿನಲ್ಲಾಗುವ ಚಕ್ರಗಳು). ಕಾಂತ ಧ್ರುವಗಳ ಸಂಖ್ಯೆ (2,4,6...) ಮತ್ತು ಪ್ರತಿ ನಿಮಿಷದಲ್ಲಿ ಉಂಟಾಗುವ ಪರಿಭ್ರಮಣದ (RPM) ಆವರ್ತನ-ವೇಗವಾಗಿದೆ. ಪರ್ಯಾಯ ವಿದ್ಯುತ್‌ ವ್ಯವಸ್ಥೆಯ ಹಳೆಯ ವಿವರಣೆಗಳು ಕಂಪನ ದರವನ್ನು, ಪ್ರತಿ ಅರ್ಧ-ಆವರ್ತವನ್ನು ಒಂದು ಪರ್ಯಾಯ ವಾಗಿ ಲೆಕ್ಕ ಮಾಡುವ ಮ‌ೂಲಕ ಪ್ರತಿ ನಿಮಿಷದಲ್ಲಾಗುವ ಪರ್ಯಾಯಗಳ ರೂಪದಲ್ಲಿ ತಿಳಿಸುತ್ತವೆ; ಪ್ರತಿ ನಿಮಿಷದಲ್ಲಾಗುವ 12,000 ಪರ್ಯಾಯಗಳು 100 Hzಗೆ ಪೂರಕವಾಗಿರುತ್ತವೆ.

ಮೋಟಾರಿನ ಆವರ್ತಕಗಳು[ಬದಲಾಯಿಸಿ]

ಸುರುಳಿಯಾಗಿ ಸುತ್ತಿಕೊಳ್ಳುವ ಬೆಲ್ಟ್ ರಾಟೆಯೊಂದಿಗೆ ಮೋಟಾರು ಗಾಡಿಯ ಎಂಜಿನ್‌ನ ಕೆಳ ಬಲದ ಮುಂಭಾಗದಲ್ಲಿ ಅಳವಡಿಸಿರುವ ಆವರ್ತಕ.
ಇಕ್ಕುಳ ಕೊಂಡಿ-ಧ್ರುವ ರಚನೆಯನ್ನು ತೋರಿಸುತ್ತಿರುವ ಆವರ್ತಕ; ಅನುಕ್ರಮವಾಗಿ N ಮತ್ತು S, ಎರಡು ಬೆಣೆಯಾಕಾರದ ಕ್ಷೇತ್ರ-ಧ್ರುವಗಳು ಕೇಂದ್ರದಲ್ಲಿ ಮತ್ತು ಸ್ಥಿರ ಆರ್ಮೇಚರ್ ಸುರುಳಿಯು ತೂತಿನ ಮೇಲೆ ಮತ್ತು ಕೆಳಗೆ ಕಾಣಿಸುತ್ತಿದೆ.ಬಲಭಾಗದಲ್ಲಿ ಆವರ್ತಕವನ್ನು ಚಲಾಯಿಸುತ್ತಿರುವ ಬೆಲ್ಟ್ ಮತ್ತು ರಾಟೆ.

ಆವರ್ತಕಗಳನ್ನು ಬ್ಯಾಟರಿಯನ್ನು ಚಾರ್ಜ್ ಮಾಡುವುದಕ್ಕಾಗಿ ಮತ್ತು ಕಾರಿನ ಎಂಜಿನ್ ಕಾರ್ಯನಿರ್ವಹಿಸುತ್ತಿರುವಾಗ ಅದರ ವಿದ್ಯುತ್ ವ್ಯವಸ್ಥೆಗೆ ಶಕ್ತಿ ಒದಗಿಸುವುದಕ್ಕಾಗಿ, ಆಧುನಿಕ ಮೋಟಾರು ಗಾಡಿಗಳಲ್ಲಿ ಬಳಸಲಾಗುತ್ತದೆ. ಆವರ್ತಕಗಳು ದಿಕ್ಪರಿವರ್ತಕವನ್ನು ಬಳಸಿಕೊಳ್ಳದ ಏಕಮುಖ ವಿದ್ಯುತ್ ಜನರೇಟರುಗಳಲ್ಲಿ ಉತ್ತಮ ಪ್ರಯೋಜನವನ್ನು ಹೊಂದಿರುತ್ತವೆ. ಅದು ಅವನ್ನು ಸರಳ, ಹಗುರು, ಕಡಿಮೆ ಖರ್ಚು ಮತ್ತು DC ಜನರೇಟರಿಗಿಂತ ಹೆಚ್ಚು ದೃಢವಾಗಿ ಮಾಡುತ್ತವೆ; ಅಲ್ಲದೇ ಸ್ಲಿಪ್ ರಿಂಗ್‌ಗಳು ಬ್ರಷ್‌ಗಳ ಕಾಲಾವಧಿಯನ್ನು ಹೆಚ್ಚಿಸುತ್ತವೆ. ಮೋಟಾರಿನ ಆವರ್ತಕಗಳ ಪ್ರಬಲ ರಚನೆಯು ಎಂಜಿನ್‌ಗಿಂತ ವೇಗವಾಗಿ ತಿರುಗುವ ಸಣ್ಣ ರಾಟೆಯನ್ನು ಬಳಸುತ್ತದೆ. ಇದು ಎಂಜಿನ್ ನಿಷ್ಕ್ರಿಯವಾಗಿರುವಾಗ ಉತ್ಪಾದನೆಯನ್ನು ಸುಧಾರಿಸುತ್ತದೆ. ಕಡಿಮೆ-ಬೆಲೆಯ ಘನ-ಸ್ಥಿತಿಯ ಡಯೋಡ್‌ಗಳು 1960ರಿಂದ ಲಭ್ಯವಾದುದರಿಂದ, ಕಾರು ತಯಾರಕರು DC ಜನರೇಟರುಗಳ ಬದಲಿಗೆ ಆವರ್ತಕಗಳನ್ನು ಬಳಸಲು ಆರಂಭಿಸಿದರು. ಮೋಟಾರಿನ ಆವರ್ತಕಗಳು ACಅನ್ನು DC ಆಗಿ ಪರಿವರ್ತಿಸಲು ಅನೇಕ ರೆಕ್ಟಿಫೈಯರ್(ದಿಷ್ಟಿಕಾರಕ)ಗಳ (ಡಯೋಡ್‌ ಬ್ರಿಡ್ಜ್) ವ್ಯವಸ್ಥೆಯೊನ್ನು ಬಳಸಿಕೊಳ್ಳುತ್ತವೆ. ಕಡಿಮೆ ಏರಿಳಿತದೊಂದಿಗೆ ಒಮ್ಮುಖ ವಿದ್ಯುತ್ತನ್ನು ಒದಗಿಸಲು ಮೋಟಾರಿನ ಆವರ್ತಕಗಳು ಮ‌ೂರು-ಹಂತದ ಸುರಳಿಯನ್ನು ಹೊಂದಿರುತ್ತವೆ. ಡಯೋಡ್‌ಗಳಿಂದ ರೆಕ್ಟಿಫೈ-ಮಾಡಿದಾಗ(ದಿಷ್ಟೀಕರಿಸಿದಾಗ) ಮ‌ೂರು-ಹಂತದ ವೋಲ್ಟೇಜ್‌ಗಳ ದಿಷ್ಟೀಕರಣಕ್ಕಿಂತ ಕಡಿಮೆ ಏರಿಳಿತವನ್ನು ಉತ್ಪತ್ತಿ ಮಾಡುವ ಚೌಕ-ತರಂಗಕ್ಕೆ ಹೆಚ್ಚು ಹತ್ತಿರವಾಗಿರುವ ತರಂಗರೂಪವನ್ನು ಉತ್ಪತ್ತಿ ಮಾಡುವಂತೆ ರೋಟರ್‌ನ ಧ್ರುವ-ಅಂಶಗಳಿಗೆ ರೂಪುಕೊಡಲಾಗುತ್ತದೆ. (ಇಕ್ಕುಳ ಕೊಂಡಿ-ಧ್ರುವ). ಪ್ರಯಾಣಿಕರ ವಾಹನ ಮತ್ತು ಹಗುರ ಟ್ರಕ್ಕುಗಳ ಆವರ್ತಕಗಳು ಲುಂಡೆಲ್ ಅಥವಾ ಇಕ್ಕುಳ ಕೊಂಡಿ-ಧ್ರುವ ಕ್ಷೇತ್ರ ರಚನೆಗಳನ್ನು ಬಳಸಿಕೊಳ್ಳುತ್ತವೆ. ಅದರಲ್ಲಿ ಎರಡು ಕೈಗಳ ಬೆರಳುಗಳು ಪರಸ್ಪರ ಸೇರಿಸಿದಂತೆ ಕಾಣುವ ರೀತಿಯಲ್ಲಿ ಉತ್ತರ ಮತ್ತು ದಕ್ಷಿಣ ಧ್ರುವಗಳು ಒಂದು ಸುರುಳಿಯಿಂದ ಶಕ್ತಿ ಪಡೆಯುತ್ತವೆ. ದೊಡ್ಡ ವಾಹನಗಳು ದೊಡ್ಡ ಯಂತ್ರಗಳಂತೆ ಪ್ರಧಾನ-ಧ್ರುವ ಆವರ್ತಕಗಳನ್ನು ಹೊಂದಿರುತ್ತವೆ. ಮೋಟಾರಿನ ಆವರ್ತಕಗಳು ಎಂಜಿನ್‌ನ ಕ್ರ್ಯಾಂಕ್‌ಶ್ಯಾಫ್ಪ್ ವೇಗಕ್ಕಿಂತ 2-3 ಪಟ್ಟು ಹೆಚ್ಚು ವೇಗದಲ್ಲಿ (ಬೆಲ್ಟ್ ಮೂಲಕ)ಪಟ್ಟಿಯಿಂದ ಚಲಾಯಿಸಲ್ಪಡುವವು. ಮೋಟಾರಿನ ಆವರ್ತಕಗಳು ಕೆಲವು RPMಗೆ ಸೀಮಿತವಾಗಿರುವುದಿಲ್ಲ ಏಕೆಂದರೆ ಪರ್ಯಾಯ ವಿದ್ಯುತ್‌ ಏಕಮುಖ ವಿದ್ಯುತ್ ಆಗಿ ದಿಷ್ಟೀಕರಿಸಲ್ಪಡುತ್ತದೆ ಮತ್ತು ಯಾವುದೇ ಸ್ಥಿರ ಕಂಪನ ದರದ ಅವಶ್ಯಕತೆ ಇರುವುದಿಲ್ಲ. ಆಧುನಿಕ ಮೋಟಾರಿನ ಆವರ್ತಕಗಳು ಒಂದು ವೋಲ್ಟೇಜ್‌ ನಿಯಂತ್ರಕವನ್ನು ಹೊಂದಿರುತ್ತವೆ. ವೋಲ್ಟೇಜ್‌ ನಿಯಂತ್ರಕವು (ಸ್ಟೇಟರ್ )ವಿದ್ಯುತ್ ಸ್ಥಾಯಿ ಔಟ್‌ಪುಟ್‌ನಲ್ಲಿ ಸ್ಥಿರ ವೋಲ್ಟೇಜ್‌ಅನ್ನು ಉತ್ಪತ್ತಿ ಮಾಡುವುದಕ್ಕಾಗಿ ಸಣ್ಣ ಕ್ಷೇತ್ರ-ವಿದ್ಯುತ್ಅನ್ನು ಅಳವಡಿಸಿಕೊಳ್ಳುವ ಮ‌ೂಲಕ ಕಾರ್ಯನಿರ್ವಹಿಸುತ್ತವೆ. ಕ್ಷೇತ್ರೀಯ-ವಿದ್ಯುತ್ ಆವರ್ತಕದ ಔಟ್‌ಪುಟ್ ವಿದ್ಯುತ್ತಿಗಿಂತ ಅತಿ ಸಣ್ಣ ಪ್ರಮಾಣದಲ್ಲಿರುತ್ತದೆ; ಉದಾಹರಣೆಗಾಗಿ, 70-ಆಂಪಿಯರ್ ಆವರ್ತಕಕ್ಕೆ ಕೇವಲ 2 ಆಂಪಿಯರ್‌ಗಳಷ್ಟು ಕ್ಷೇತ್ರ-ವಿದ್ಯುತ್ ಬೇಕಾಗುತ್ತದೆ. ರೋಟರ್ ಸುರುಳಿಗಳಿಗೆ ಕ್ಷೇತ್ರೀಯ-ವಿದ್ಯುತ್ತನ್ನು ಸ್ಲಿಪ್ ರಿಂಗ್ ಮತ್ತು ಬ್ರಷ್‌ಗಳಿಂದ ಪೂರೈಸಲಾಗುತ್ತದೆ. ಕಡಿಮೆ ವಿದ್ಯುತ್ ಪ್ರವಾಹ ಮತ್ತು ನಯವಾದ ಸ್ಲಿಪ್ ರಿಂಗ್‌ಗಳು, DC ಜನರೇಟರಿನಿಂದ ಅದರ ದಿಕ್ಪರಿವರ್ತಕದೊಂದಿಗೆ ಮತ್ತು ಅದರ ಬ್ರಷ್‌ಗಳ ಮ‌ೂಲಕ ಹೆಚ್ಚಿನ ವಿದ್ಯುತ್ ಹರಿವು ಪಡೆದವುಗಳಿಗಿಂತ ಅಧಿಕ ವಿಶ್ವಾಸಾರ್ಹತೆ ಮತ್ತು ಹೆಚ್ಚು ಬಾಳಿಕೆಯನ್ನು ಕೊಡುತ್ತವೆ. ಜನರೇಟರಿನ ಬ್ರಷ್‌ಗಳನ್ನು ರಿಪೇರಿ ಮಾಡಬಹುದು ಮತ್ತು ಬದಲಿಸಬಹುದು, ಆದರೆ ಆವರ್ತಕಗಳ ಬ್ರಷ್‌ಗಳನ್ನು ಹಾಗೆ ಮಾಡಲಾಗುವುದಿಲ್ಲ. ಆವರ್ತಕದ ಬ್ರಷ್‌ಗಳನ್ನು ಬದಲಿಸಬೇಕಾದರೆ ಅದನ್ನು ಬಿಚ್ಚಿಹಾಕಬೇಕಾಗುತ್ತದೆ. ನಯವಾದ ಸ್ಲಿಪ್ ರಿಂಗ್‌ಗಳು, ಆವರ್ತಕದ ಬಾಳಿಕೆಯನ್ನು ಕ್ಷೀಣಿಸುವಂತೆ ಮಾಡುವ ಬ್ರಷ್‌ಗಳ ಸವೆತವನ್ನು ಕಡಿಮೆ ಮಾಡುತ್ತವೆ. ಮೋಟಾರಿನ ಆವರ್ತಕಗಳ ಕಾರ್ಯಕಾರಿತ್ವವು ಫ್ಯಾನ್ ತಂಪಾಗುವಿಕೆಯ ನಷ್ಟ, ತಡೆದುಕೊಳ್ಳುವಿಕೆಯ ನಷ್ಟ, ಕಬ್ಬಿಣದ ಕಳೆದುಕೊಳ್ಳುವಿಕೆ, ತಾಮ್ರದ ನಷ್ಟ ಮತ್ತು ಡಯೋಡ್‌ ಬ್ರಿಡ್ಜ್‌ಗಳಲ್ಲಿನ ವೋಲ್ಟೇಜ್‌ ಕುಸಿತದಿಂದ ಮಿತಿಗೊಳಿಸಲ್ಪಡುತ್ತದೆ; ಭಾಗಶಃ ಹೊರೆಯಲ್ಲಿ 50-62%ನಷ್ಟು ಕಾರ್ಯಕಾರಿತ್ವವು ಆವರ್ತಕದ ಗಾತ್ರವನ್ನು ಅವಲಂಬಿಸಿರುತ್ತದೆ. ಅದಲ್ಲದೇ ಅದರ ವೇಗದೊಂದಿಗೆ ಬದಲಾಗುತ್ತದೆ.[೭] ಸೈಕಲ್ ದೀಪ ವ್ಯವಸ್ಥೆಗಳಲ್ಲಿ ಬಳಸುವ ಅತಿ ಕಡಿಮೆ ಪ್ರಮಾಣದಲ್ಲಿನ ಅಧಿಕ-ನಿರ್ವಹಣೆಯ ಶಾಶ್ವತ ಕಾಂತ ಆವರ್ತಕಗಳು ಸುಮಾರು 60%ನಷ್ಟು ಕಾರ್ಯಕಾರಿತ್ವವನ್ನು ಸಾಧಿಸುತ್ತವೆ. ದೊಡ್ಡ ಶಾಶ್ವತ ಕಾಂತ ಆವರ್ತಕಗಳು ಮತ್ತಷ್ಟು ಹೆಚ್ಚು ಕಾರ್ಯಕಾರಿತ್ವವನ್ನು ನೀಡಬಹುದು.[ಸೂಕ್ತ ಉಲ್ಲೇಖನ ಬೇಕು] ವಿರುದ್ಧವಾಗಿ, ವಿದ್ಯುತ್ ಕೇಂದ್ರಗಳಲ್ಲಿ ಬಳಸುವ ದೊಡ್ಡ AC ಜನರೇಟರುಗಳು ನಿಯಂತ್ರಿತ ವೇಗದಲ್ಲಿ ಕೆಲಸ ಮಾಡುತ್ತವೆ. ಅಲ್ಲದೇ ಗಾತ್ರ ಅಥವಾ ಭಾರದ ವಿಷಯದಲ್ಲಿ ಯಾವುದೇ ನಿರ್ಬಂಧಗಳನ್ನು ಹೊಂದಿರುವುದಿಲ್ಲ. ಆದ್ದರಿಂದ ಅವು ಪಟ್ಟಿಯಿಂದ AC ಔಟ್‌ಪುಟ್ ಶಕ್ತಿವರೆಗೆ 98%ನಷ್ಟು ಅತಿ ಹೆಚ್ಚು ಕಾರ್ಯಕಾರಿತ್ವವನ್ನು ಹೊಂದಿರುತ್ತವೆ. ಕ್ಷೇತ್ರ ಸುರುಳಿಗಳಿಗೆ ಇಗ್ನಿಷನ್ ಸ್ವಿಚ್ ಮತ್ತು ಚಾರ್ಜ್ ಎಚ್ಚರಿಸುವ ದೀಪಗಳ ಮ‌ೂಲಕ ಪೂರೈಸಲಾಗುತ್ತದೆ. ಆದ್ದರಿಂದ ಇಗ್ನಿಷನ್ ಆನ್ ಆಗಿದ್ದಾಗ ದೀಪವು ಬೆಳಗುತ್ತದೆ; ಆದರೆ ಎಂಜಿನ್ ಕಾರ್ಯ ನಿರ್ವಹಿಸುವುದಿಲ್ಲ. ಎಂಜಿನ್ ಕೆಲಸ ಮಾಡಲು ಮತ್ತು ಆವರ್ತಕವು ಉತ್ಪಾದಿಸಲು ಆರಂಭಿಸಿದಾಗ, ಡಯೋಡ್‌ ಆವರ್ತಕ-ಪ್ರಮುಖ-ಔಟ್‌ಪುಟ್‌ನಿಂದ ಕಾಂತಕ್ಷೇತ್ರ ವಿದ್ಯುತ್ತನ್ನು ಒದಗಿಸುತ್ತದೆ. ಆ ಮ‌ೂಲಕ ನಂದಿ ಹೋಗುವ ಎಚ್ಚರಿಕೆಯ ದೀಪಬೆಳಗುವವರೆಗೆ ವೋಲ್ಟೇಜ್‌ಅನ್ನು ಸರಿಸಮನಾಗಿಸುತ್ತದೆ. ಕ್ಷೇತ್ರ-ವಿದ್ಯುತ್ತನ್ನು ಪೂರೈಸುವ ತಂತಿಯನ್ನು ಹೆಚ್ಚಾಗಿ "ಪ್ರಚೋದಕ" ತಂತಿ ಎನ್ನಲಾಗುತ್ತದೆ. ಈ ನಿರ್ವಹಣೆಯ ನ್ಯೂನತೆಯೆಂದರೆ ಎಚ್ಚರಿಕೆಯ ದೀಪವು ವಿಫಲವಾದರೆ ಅಥವಾ "ಪ್ರಚೋದಕ" ತಂತಿಯು ಕಡಿದುಹೋದರೆ, ರೋಟರ್‌ನಲ್ಲಿನ ಕಡಿಮೆ ಉಳಿದ-ಕಾಂತತ್ವವು ವಿದ್ಯುತ್ತನ್ನು ಉತ್ಪಾದಿಸದಿರುವುದರಿಂದ ಯಾವುದೇ ಪ್ರಚೋದಕ-ವಿದ್ಯುತ್ ಆವರ್ತಕ-ಕ್ಷೇತ್ರ-ಸುರುಳಿಗಳನ್ನು ಮತ್ತು ಹಾಗಾಗಿ ಆವರ್ತಕವನ್ನು ತಲುಪುವುದಿಲ್ಲ. ಎಂಜಿನ್ ಸ್ವಲ್ಪಮಟ್ಟಿನ ವೇಗದಲ್ಲಿ ಶೀಘ್ರವಾಗಿ ಚಲಿಸಿದಾಗ ಕೆಲವು ಆವರ್ತಕಗಳು ಸ್ವಂತವಾಗಿ-ಪ್ರಚೋದಿಸುತ್ತವೆ. ಕೆಲವು ಎಚ್ಚರಿಕೆ-ದೀಪದ ವಿದ್ಯುನ್ಮಂಡಲಗಳನ್ನು ಎಚ್ಚರಿಕೆ-ದೀಪದೊಂದಿಗೆ ರೋಧಕ(ರೆಸಿಸ್ಟರ್)ವನ್ನು ಸಮಾನಾಂತರವಾಗಿಡುವುದರೊಂದಿಗೆ ಸಜ್ಜುಗೊಳಿಸಲಾಗುತ್ತದೆ. ಇದು ಎಚ್ಚರಿಕೆ-ದೀಪಗಳು ವಿಫಲವಾದರೂ ಪ್ರಚೋದಿತ ವಿದ್ಯುತ್ ಹರಿಯುವಂತೆ ಮಾಡುತ್ತದೆ. ಎಂಜಿನ್ಅನ್ನು ನಿಲ್ಲಿಸಿದಾಗ ಎಚ್ಚರಿಕೆ-ದೀಪವು ಬೆಳಗುತ್ತಿದೆಯೇ ಎಂಬುದನ್ನು ಚಾಲಕನು ಪರೀಕ್ಷಿಸಬೇಕು. ಬೆಳಗದಿದ್ದರೆ ಅದು, ನೀರು ತಂಪಾಗಿಸುವ ಪಂಪ್ಅನ್ನೂ ಚಲಾಯಿಸುವ ಆವರ್ತಕ ಚಾಲಕದ ಬೆಲ್ಟ ವಿಫಲತೆಯ ಸೂಚನೆಯಾಗಿರಬಹುದು. ಬಸ್, ಭಾರಿ ಸಾಮಾನು-ಸರಂಜಾಮಿನ ಅಥವಾ ತುರ್ತು ವಾಹನಗಳಲ್ಲಿ ಬಳಸುವ ಅತಿ ದೊಡ್ಡ ಮೋಟಾರಿನ ಆವರ್ತಕಗಳು 300 ಆಂಪಿಯರ್ ವಿದ್ಯುತ್ತನ್ನು ಉತ್ಪತ್ತಿ ಮಾಡುತ್ತವೆ. ಕಡಿಮೆ (ಪ್ರಜ್ವಲತೆ)ದೀಪ ಮತ್ತು ಇಲೆಕ್ಟ್ರಾನಿಕ್ ಸಾಧನಗಳನ್ನು ಒಳಗೊಂಡಿರುವ ತುಂಬಾ ಹಳೆಯ ವಾಹನಗಳು ಕೇವಲ 30 ಆಂಪಿಯರ್ ಆವರ್ತಕವನ್ನು ಹೊಂದಿರುತ್ತವೆ. ಪ್ರಯಾಣಿಕರ ಕಾರಿನ ಮತ್ತು ಹಗುರ ಟ್ರಕ್ಕಿನ ಆವರ್ತಕಗಳು ಸುಮಾರು 50-70 ಆಂಪಿಯರ್‌ಗಳ (ಪ್ರಮಾಣಿಕೃತ)ಶ್ರೇಣಿಯಲ್ಲಿರುತ್ತವೆ. ವಿಶೇಷವಾಗಿ ವಿದ್ಯುತ್ ಶಕ್ತಿಯ ಚಾಲಕ ವ್ಯವಸ್ಥೆಗಳು ಬಳಕೆಗೆ ಬರುವುದರೊಂದಿಗೆ ವಾಹನದ ವಿದ್ಯುತ್ ವ್ಯವಸ್ಥೆಯಲ್ಲಿ ಹೆಚ್ಚು ಹೊರೆ ಇರುವುದರಿಂದ ಅಧಿಕ ಆಂಪಿಯರ್‌ಗಳ ಶ್ರೇಣಿಯು ಹೆಚ್ಚು ಸಾಮಾನ್ಯವಾಗುತ್ತಿದೆ. ಅತಿ ದೊಡ್ಡ ಮೋಟಾರಿನ ಆವರ್ತಕಗಳು ನೀರಿನಿಂದ-ತಂಪಾಗುವವು ಅಥವಾ ಎಣ್ಣೆಯಿಂದ-ತಂಪಾಗುವವು. ಹೆಚ್ಚಿನ ಆವರ್ತಕ ವೋಲ್ಟೇಜ್‌ ನಿಯಂತ್ರಕಗಳು ಇಂದು ವಾಹನದಲ್ಲಿನ ಕಂಪ್ಯೂಟರ್ ವ್ಯವಸ್ಥೆಯೊಂದಿಗೆ ಸಂಪರ್ಕವನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಗಾಳಿಯ ತಾಪಮಾನ ಮತ್ತು ಎಂಜಿನ್ ಭಾರವನ್ನೂ ಒಳಗೊಂಡಂತೆ ಇತರ ಅಂಶಗಳನ್ನು, ಆವರ್ತಕದಿಂದ ಪೂರೈಸಲಾಗುವ ಬ್ಯಾಟರಿ ಚಾರ್ಜ್ ಮಾಡುವ ವೋಲ್ಟೇಜ್‌ಅನ್ನು ಸರಿಹೊಂದಿಸುವಾಗ ಗಮನದಲ್ಲಿಟ್ಟುಕೊಳ್ಳಲಾಗುತ್ತದೆ.

ಕಡಲಿನ(ಮೆರೈನ್) ಆವರ್ತಕಗಳು[ಬದಲಾಯಿಸಿ]

ಓಡುದೋಣಿಗಳಲ್ಲಿ ಬಳಸುವ ಕಡಲಿನ ಆವರ್ತಕಗಳು ಮೋಟಾರಿನ ಆವರ್ತಕಗಳಂತೆ ಇದ್ದು, ಉಪ್ಪು-ನೀರಿನ ಪರಿಸರಕ್ಕೆ ಹೊಂದುವ ಹೊಂದಾವಣೆಗಳನ್ನು ಅಳವಡಿಸಲಾಗಿರುತ್ತದೆ. ಕಡಲಿನ ಆವರ್ತಕಗಳನ್ನು ಸ್ಫೋಟನ-ಪ್ರತಿರೋಧಕಗಳನ್ನಾಗಿ ವಿನ್ಯಾಸಗೊಳಿಸಲಾಗಿರುತ್ತದೆ. ಅದರಿಂದಾಗಿ ಎಂಜಿನ್ ಕೋಣೆಯ ಪರಿಸರದಲ್ಲಿ ಬ್ರಷ್ ನ ಕಿಡಿ ಉತ್ಪತ್ತಿಯು ಸ್ಫೋಟಕ ಅನಿಲ ಮಿಶ್ರಣಗಳನ್ನು ಬೆಂಕಿಗೀಡುಮಾಡುವುದಿಲ್ಲ. ಅವು ಅಳವಡಿಸಿಕೊಂಡ ವಿಧಾನದ ಆಧಾರದಲ್ಲಿ 12 ಅಥವಾ 24 ವೋಲ್ಟ್ ಇರುತ್ತವೆ. ಆಧುನಿಕ ಓಡುದೋಣಿಯ ಭಾರಿ ವಿದ್ಯುತ್ ಬೇಡಿಕೆಯನ್ನು ನಿರ್ವಹಿಸಲು ದೊಡ್ಡ ಕಡಲಿನ-ಎಂಜಿನ್‌ಗಳು ಎರಡು ಅಥವಾ ಅದಕ್ಕಿಂತ ಹೆಚ್ಚು ಆವರ್ತಕಗಳನ್ನು ಹೊಂದಿರುತ್ತವೆ. ಏಕ ಆವರ್ತಕ-ವಿದ್ಯುನ್ಮಂಡಲಗಳಲ್ಲಿ ವಿದ್ಯುತ್, ಚಾರ್ಜ್-ವಿಭಾಗಿಸುವ ಡಯೋಡ್‌ ಮತ್ತು ಯಾಂತ್ರಿಕ ಸ್ವಿಚ್ಅನ್ನು ಬಳಸಿಕೊಂಡು ಎಂಜಿನ್-ಪ್ರಾರಂಭಿಸುವ ಬ್ಯಾಟರಿ ಮತ್ತು ಮನೆಯ ಬ್ಯಾಟರಿಯ (ಅಥವಾ ಬ್ಯಾಟರಿಗಳ) ಮಧ್ಯೆ ವಿಭಾಗಿಸಲ್ಪಡುತ್ತದೆ. ಆವರ್ತಕವು ಕಾರ್ಯನಿರ್ವಹಿಸುತ್ತಿರುವಾಗ ಮಾತ್ರ ವಿದ್ಯುತ್ತನ್ನು ಉತ್ಪಾದಿಸುವುದರಿಂದ, ಎಂಜಿನ್ ನಿಯಂತ್ರಣ ಫಲಕಗಳು ವಿದ್ಯುತ್ತನ್ನು ಸಹಾಯಕ ಸಾಧನದ ಮ‌ೂಲಕ ಆವರ್ತಕದಿಂದ ನೇರವಾಗಿ ಪಡೆಯುತ್ತವೆ. ಇತರ ವಿಶಿಷ್ಟ ಕನೆಕ್ಷನ್‌ಗಳು ನಿಯಂತ್ರಣ ವಿದ್ಯುನ್ಮಂಡಲಗಳನ್ನು ಚಾರ್ಜ್ ಮಾಡಲು ಇರುತ್ತವೆ.

ಬ್ರಷ್-ರಹಿತ ಆವರ್ತಕಗಳು[ಬದಲಾಯಿಸಿ]

ರಚನೆ[ಬದಲಾಯಿಸಿ]

ಬ್ರಷ್-ರಹಿತ ಆವರ್ತಕವು ಒಂದು ಪಟ್ಟಿಯ ಮೇಲೆ ಒಂದರ ಕೊನೆಗೊಂದನ್ನು ರಚಿಸಲಾಗಿರುವ ಎರಡು ಆವರ್ತಕಗಳನ್ನು ಹೊಂದಿರುತ್ತದೆ. ಸಣ್ಣ ಬ್ರಷ್-ರಹಿತ ಆವರ್ತಕಗಳು ಏಕ ಘಟಕದಂತೆ ಕಾಣಿಸುತ್ತವೆ. ಆದರೆ ದೊಡ್ಡ ಆವೃತ್ತಿಗಳಲ್ಲಿ ಎರಡು ಭಾಗಗಳನ್ನು ಸುಲಭವಾಗಿ ಗುರುತಿಸಬಹುದು. ಎರಡು ಭಾಗಗಳಲ್ಲಿ ದೊಡ್ಡದಾದುದು ಮುಖ್ಯ ಆವರ್ತಕ ಮತ್ತು ಸಣ್ಣದು ಪ್ರಚೋದಕವಾಗಿದೆ. ಪ್ರಚೋದಕವು ಸ್ಥಿರ ಕ್ಷೇತ್ರ ಸುರುಳಿಗಳನ್ನು ಮತ್ತು ಒಂದು ತಿರುಗುವ ಆರ್ಮೇಚರನ್ನು (ವಿದ್ಯುತ್ ಸುರುಳಿಗಳು) ಹೊಂದಿರುತ್ತದೆ. ಮುಖ್ಯ ಆವರ್ತಕವು ತಿರುಗುವ ಕ್ಷೇತ್ರ ಮತ್ತು ಸ್ಥಿರ ಆರ್ಮೇಚರ್ ಒಂದಿಗೆ ವಿರುದ್ಧವಾದ ರಚನೆಯನ್ನು ಬಳಸುತ್ತದೆ. ತಿರುಗುವ ದಿಷ್ಟಿಕಾರಿ ಜೋಡಣೆ ಎನ್ನುವ ಬ್ರಿಡ್ಜ್-ರೆಕ್ಟಿಫೈಯರ್ಅನ್ನು ರೋಟರ್‌ಗೆ ಅಂಟಿಕೊಂಡಿರುವ ಫಲಕದ ಮೇಲೆ ಜೋಡಿಸಲಾಗಿರುತ್ತದೆ. ಯಾವುದೇ ಬ್ರಷ್‌ ಅಥವಾ ಸ್ಲಿಪ್ ರಿಂಗ್‌ಗಳನ್ನು ಬಳಸಲಾಗಿರುವುದಿಲ್ಲ. ಇದು ಭಾಗಗಳ ಸವೆತದ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ.

ಮುಖ್ಯ ಆವರ್ತಕ[ಬದಲಾಯಿಸಿ]

ಮುಖ್ಯ ಆವರ್ತಕವು ಮೇಲೆ ವಿವರಿಸಿದಂತೆ ಒಂದು ತಿರುಗುವ ಕ್ಷೇತ್ರ ಮತ್ತು ಸ್ಥಿರ ಆರ್ಮೇಚರ್ಅನ್ನು (ವಿದ್ಯುತ್ ಉತ್ಪಾದಿಸುವ ಸುರುಳಿಗಳು) ಹೊಂದಿರುತ್ತದೆ.

ನಿಯಂತ್ರಣ ವ್ಯವಸ್ಥೆ(ವಿಧಾನ)[ಬದಲಾಯಿಸಿ]

ಸ್ಥಿರ ಪ್ರಚೋದಕ ಕ್ಷೇತ್ರ-ಸುರುಳಿಗಳಲ್ಲಿನ ವಿದ್ಯುತ್ ಪ್ರಮಾಣವನ್ನು ಬದಲಾಯಿಸುವುದರಿಂದ, ಪ್ರಚೋದಕದಿಂದ ಪಡೆಯುವ 3-ಹಂತದ ಔಟ್‌ಪುಟ್ ಬದಲಾಗುತ್ತದೆ. ಈ ಔಟ್‌ಪುಟ್ಅನ್ನು ರೋಟರ್‌ನಲ್ಲಿ ಅಂಟಿಸಲಾಗಿರುವ ತಿರುಗುವ ದಿಷ್ಟಿಕಾರಿ ಜೋಡಣೆಯಿಂದ ದೋಷರಹಿತವಾಗಿ ಮಾಡಲ್ಪಡುತ್ತದೆ. ಅಲ್ಲದೇ ಪರಿಣಾಮಕ DCಯು ಮುಖ್ಯ ಆವರ್ತಕದ ತಿರುಗುವ ಕಾಂತಕ್ಷೇತ್ರವನ್ನು ಪೂರೈಸುತ್ತದೆ, ಆದ್ದರಿಂದ ಆವರ್ತಕ ಔಟ್‌ಪುಟ್ ಉತ್ಪತ್ತಿಯಾಗುತ್ತದೆ. ಇವೆಲ್ಲದರ ಪರಿಣಾಮವಾಗಿ ಸಣ್ಣ DC ಪ್ರಚೋದ-ವಿದ್ಯುತ್, ಮುಖ್ಯ ಆವರ್ತಕದ ಔಟ್‌ಪುಟ್ಅನ್ನು ಅಪ್ರತ್ಯಕ್ಷವಾಗಿ ನಿಯಂತ್ರಿಸುತ್ತದೆ.

ಸ್ವಯಂಚಾಲಿತ ವೋಲ್ಟೇಜ್‌ ನಿಯಂತ್ರಕ (AVR)[ಬದಲಾಯಿಸಿ]

ಸ್ವಯಂಚಾಲಿತ ವೋಲ್ಟೇಜ್‌ ನಿಯಂತ್ರಣ ಸಾಧನವು ಔಟ್‌ಪುಟ್ ವೋಲ್ಟೇಜ್‌ಅನ್ನು ಸ್ಥಿರವಾಗಿರಿಸಲು ಕಾಂತಕ್ಷೇತ್ರ-ವಿದ್ಯುತ್ತನ್ನು ನಿಯಂತ್ರಿಸುತ್ತದೆ.

ಮಿಶ್ರ(ಸುಧಾರಿತ) ಮೋಟಾರು ಗಾಡಿಗಳು[ಬದಲಾಯಿಸಿ]

ಸುಧಾರಿತ ಶ್ರೇಣಿಯ ಮೋಟಾರು ಗಾಡಿಗಳು ಪ್ರತ್ಯೇಕ ಆವರ್ತಕ ಮತ್ತು ಚಾಲಿತಗೊಳಿಸುವ-ಮೋಟಾರ್‌‌ನ ಬದಲಿಗೆ ಸಂಯುಕ್ತ ಮೋಟಾರ್/ಜನರೇಟರನ್ನು ಹೊಂದಿರುತ್ತದೆ. ಇದು ವೇಗ ಹೆಚ್ಚುಗೊಳಿಸಲು ಹೆಚ್ಚುವರಿ ಯಾಂತ್ರಿಕ ಶಕ್ತಿಯನ್ನು ಒದಗಿಸುವ ಮ‌ೂಲಕ ಅಂತರ್ದಹನ ಎಂಜಿನ್ಅನ್ನು ಕ್ರ್ಯಾಂಕ್ ತಿರುಗಿಸಿ ಕಾರ್ಯೋನ್ಮುಖಮಾಡುವ ಮತ್ತು ವಾಹನವು ಸ್ಥಿರ ವೇಗದಲ್ಲಿ ಚಲಿಸುತ್ತಿರುವಾಗ ದೊಡ್ಡ ಸಂಗ್ರಹ ಬ್ಯಾಟರಿಯನ್ನು ಚಾರ್ಜ್ ಮಾಡುವ ಎರಡು ಕಾರ್ಯಗಳನ್ನು ನಡೆಸುತ್ತದೆ. ಈ ತಿರುಗುವ ಯಂತ್ರಗಳು ಅವುಗಳ ನಿಯಂತ್ರಣಕ್ಕಾಗಿ ಮೇಲೆ ವಿವರಿಸಿದ ಮೋಟಾರಿನ ಆವರ್ತಕಗಳಿಗಿಂತ ಗಣನೀಯವಾಗಿ ಹೆಚ್ಚು ಪ್ರಬಲ ಇಲೆಕ್ಟ್ರಾನಿಕ್ ಸಾಧನಗಳನ್ನು ಹೊಂದಿರುತ್ತವೆ.

ರೇಡಿಯೊ ಆವರ್ತಕಗಳು[ಬದಲಾಯಿಸಿ]

ವೇರಿಯೇಬಲ್-ರಿಲಕ್ಟನ್ಸ್ (ವ್ಯತ್ಯಾಸದ-ಏರುಪೇರು)ಪ್ರಕಾರದ ಹೆಚ್ಚು ಕಂಪನ ದರದ ಆವರ್ತಕಗಳನ್ನು ವಾಣಿಜ್ಯವಾಗಿ ಕಡಿಮೆ-ಕಂಪನದರದ ರೇಡಿಯೊ ಬ್ಯಾಂಡ್‌ಗಳಲ್ಲಿ ರೇಡಿಯೊ ಪ್ರಸಾರಕ್ಕೆ ಅನ್ವಯಿಸಲಾಗಿದೆ. ಇವನ್ನು ಮಾರ್ಸ್ ಸಂಕೇತದ ರವಾನೆಗಾಗಿ ಮತ್ತು ಪ್ರಾಯೋಗಿಕವಾಗಿ ಧ್ವನಿ ಮತ್ತು ಸಂಗೀತದ ಪ್ರಸಾರಕ್ಕಾಗಿ ಬಳಸಲಾಗಿದೆ.

ಇದನ್ನೂ ಗಮನಿಸಿ[ಬದಲಾಯಿಸಿ]

ಟಿಪ್ಪಣಿಗಳು[ಬದಲಾಯಿಸಿ]

  1. ಥಾಂಪ್ಸನ್, ಸಿಲ್ವೇನಸ್ P., ಡೈನಮೊ-ಇಲೆಕ್ಟ್ರಿಕ್ ಮೆಷಿನರಿ . ಪುಟ 7
  2. ಬ್ಲಲಾಕ್, ಥೋಮಸ್ J., "ಆಲ್ಟರ್ನೇಟಿಂಗ್ ಕರೆಂಟ್ ಎಲೆಕ್ಟ್ರಿಫಿಕೇಶನ್, 1886 Archived 2006-05-07 ವೇಬ್ಯಾಕ್ ಮೆಷಿನ್ ನಲ್ಲಿ. ". IEEE ಹಿಸ್ಟರಿ ಸೆಂಟರ್, IEEE ಮೈಲ್‌ಸ್ಟೋನ್. (ಆವೃತ್ತಿ dc ಜನರೇಟರು - ac ಪರಿವರ್ತಕ ವ್ಯವಸ್ಥೆಯ ಮೊದಲ ಪ್ರಾಯೋಗಿಕ ಪ್ರದರ್ಶನ.)
  3. US 447921 , ತೆಲ್ಸಾ, ನಿಕೋಲ, "ಆಲ್ಟರ್ನೇಟಿಂಗ್ ಇಲೆಕ್ಟ್ರಿಕ್ ಕರೆಂಟ್ ಜನರೇಟರ್".
  4. ಥಾಂಪ್ಸನ್, ಸಿಲ್ವೇನಸ್ P., ಡೈನಮೊ-ಇಲೆಕ್ಟ್ರಿಕ್ ಮೆಷಿನರಿ . ಪುಟ 17
  5. ಥಾಂಪ್ಸನ್, ಸಿಲ್ವೇನಸ್ P., ಡೈನಮೊ-ಇಲೆಕ್ಟ್ರಿಕ್ ಮೆಷಿನರಿ . ಪುಟ 16
  6. ದ ಇಲೆಕ್ಟ್ರಿಕಲ್ ಇಯರ್ ಬುಕ್ 1937, ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನ ಎಮ್ಮೋಟ್ ಆಂಡ್ ಕೊ ಲಿಮಿಟೆಡ್ ಪ್ರಕಟಿಸಿದ್ದು, ಪುಟ 72
  7. ಹಾರ್ಸ್ಟ್ ಬೇಯರ್ (ಸಂಪಾದಕ). ಆಟೊಮೋಟಿವ್ ಹ್ಯಾಂಡ್‌ಬುಕ್ 4ತ್ ಎಡಿಷನ್ , ರೋಬರ್ಟ್ ಬೋಸ್ಕ್ GmbH, ಸ್ಟಟ್‌ಗರ್ಟ್, 1996, ISBN 0-8376-0333-1, ಪುಟ 813

ಉಲ್ಲೇಖಗಳು[ಬದಲಾಯಿಸಿ]

  • ಥಾಂಪ್ಸನ್, ಸಿಲ್ವೇನಸ್ P., ಡಿನಮೊ-ಇಲೆಕ್ಟ್ರಿಕ್ ಮೆಷಿನರಿ, ಎ ಮ್ಯಾನ್ವಲ್ ಫಾರ್ ಸ್ಟೂಡೆಂಟ್ಸ್ ಆಫ್ ಇಲೆಕ್ಟ್ರೊಟೆಕ್ನಿಕ್ಸ್ , ವಿಭಾಗ 1, ಕೊಲ್ಲೀಯರ್ ಆಂಡ್ ಸನ್ಸ್, ನ್ಯೂಯಾರ್ಕ್, 1902
  • ವೈಟ್, ಥೋಮಸ್ H.,"ಆಲ್ಟರ್ನೇಟರ್-ಟ್ರಾನ್ಸ್‌ಮಿಟರ್ ಡೆವಲಪ್ಮೆಂಟ್ (1891-1920) ". EarlyRadioHistory.us.

ಬಾಹ್ಯ ಕೊಂಡಿಗಳು[ಬದಲಾಯಿಸಿ]