ಆರ್ಲಿಂಯನ್ಸ್ ಡ್ಯೂಕರು
ಹದಿನಾಲ್ಕನೆಯ ಶತಮಾನದಲ್ಲಿ ಫ್ರಾನ್ಸಿನ ದೊರೆ ತನ್ನ ಹತ್ತಿರ ಸಂಬಂಧಿಗಳಿಗೆ ಆರ್ಲಿಯನ್ಸನ್ನು ಬಳುವಳಿಯಾಗಿ ಕೊಟ್ಟು ಡ್ಯೂಕ್ ಪದವಿಯನ್ನು ಕೊಟ್ಟ ಮೇಲೆ ಈ ಡ್ಯೂಕರಿಗೆ ದೊರೆಯ ಆಸ್ಥಾನದಲ್ಲಿ ಹೆಚ್ಚಿನ ಮರ್ಯಾದೆಯಿತ್ತು.
ಚಾಲ್ರ್ಸ್, ಡ್ಯೂಕ್ ಆರ್ಲಿಯನ್ಸ್ :(೧೩೯೨-೧೪೬೫)
[ಬದಲಾಯಿಸಿ]ಇಂಗ್ಲಿಷರಿಗೂ ಫ್ರೆಂಚರಿಗೂ ೧೪೧೫ ರಲ್ಲಿ ನಡೆದ ಅಜಿನ್ ಕೋರ್ಟ್ ಕದನದಲ್ಲಿ ಭಾಗವಹಿಸಿ ಬ್ರಿಟಿಷರ ಕೈಸೆರೆ ಸಿಕ್ಕಿ ಮುಂದೆ ಇಪ್ಪತ್ತೈದು ವರ್ಷ ಇಂಗ್ಲೆಂಡಿನಲ್ಲೇ ಇದ್ದ. ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ಉತ್ತಮ ಮಟ್ಟದ ಲಾವಣಿಗಳನ್ನೂ ರಾಂಡೆಲ್ಸ್ ಎಂಬ ಭಾವಗೀತೆಗಳನ್ನೂ ಬರೆದ. ೧೪೪೦ರಲ್ಲಿ ಹಣ ಕೊಟ್ಟು ಬಿಡುಗಡೆ ಹೊಂದಿ ತನ್ನ ದೇಶಕ್ಕೆ ಹಿಂತಿರುಗಿದ. ಉಳಿದ ಕಾಲವನ್ನು, ತನ್ನ ಆಸ್ಥಾನದಲ್ಲಿ ಕವಿಗಳಿಗೆ ವಿದ್ವಾಂಸರಿಗೆ ಆಶ್ರಯ ಕೊಟ್ಟು ಅವರ ನಡುವೆ ಕಳೆದ.
ಯೀನ್ ಬ್ಯಾಪಿಸ್ಟ್ ಗ್ಯಾಸ್ಟನ್ : (೧೬೦೮-೬೦)
[ಬದಲಾಯಿಸಿ]ಫ್ರಾನ್ಸಿನ ದೊರೆ ನಾಲ್ಕನೆಯ ಹೆನ್ರಿಯ ಮಗ. ಪ್ರಬಲಮಂತ್ರಿ ರಿಚಲುವಿಗೆ ವಿರೋಧವಾಗಿ ಒಳಸಂಚು ನಡೆಸಿ ಸ್ವಲ್ಪಕಾಲ ರಾಜಕೀಯ ಅಲ್ಲೋಲಕಲ್ಲೋಲವನ್ನೆಬ್ಬಿಸಿದ. ಹದಿನಾಲ್ಕನೆಯ ಲೂಯಿ ರಾಜ್ಯಾಧಿಕಾರ ವಹಿಸುವುದಕ್ಕೆ ಮುಂಚೆ ಸೈನ್ಯಾಧಿಕಾರಿಯಾಗಿದ್ದ. ಮಸಾರೀನ್ ಮಂತ್ರಿಯಾದ ಮೇಲೆ ಅವನೊಂದಿಗೆ ಸೌಹಾರ್ದ ಬೆಳೆಸಿಕೊಂಡ.
ಫಿಲಿಪ್ : (೧೬೭೪-೧೭೨೩)
[ಬದಲಾಯಿಸಿ]ಹದಿಮೂರನೆಯ ಲೂಯಿಯ ಮೊಮ್ಮಗ. ತುಂಬ ಪ್ರತಿಭಾವಂತ, ಸಮರ್ಥ. ಆದರೆ ಸ್ವೇಚ್ಛಾಚಾರಿ, ವಿಷಯಲಂಪಟ. ಕೆಲವು ಕಾಲ ರಾಜಾಸ್ಥಾನದಲ್ಲೂ ಅವನಿಗೆ ಮಾನ್ಯತೆ ಇರಲಿಲ್ಲ. ಆದರೆ ಲೂಯಿ ಸಾಯುವುದಕ್ಕೆ ಮುಂಚೆ ಇವನನ್ನೇ ರಾಜಪ್ರತಿನಿಧಿಯನ್ನಾಗಿ (ರೀಜಂಟ್) ನೇಮಿಸಿದ (೧೭೧೫). ರೀಜಂಟ್ ಆದಮೇಲೆ ಅಧಿಕಾರವನ್ನೆಲ್ಲ ತನ್ನ ಹತೋಟಿಯಲ್ಲಿಟ್ಟುಕೊಂಡು ದಕ್ಷತೆಯಿಂದ ಅಂತಾರಾಷ್ಟ್ರೀಯ ವ್ಯವಹಾರದಲ್ಲಿ ಫ್ರಾನ್ಸಿನ ಪ್ರಾಮುಖ್ಯವನ್ನು ಕಾಪಾಡಿದ.
ಲೂಯಿ ಫಿಲಿಪ್ ಜೋಸೆಫ್ : (೧೭೪೭-೯೩)
[ಬದಲಾಯಿಸಿ]ತಂದೆಯ ಮರಣಾನಂತರ ೧೭೮೫ರಲ್ಲಿ ಡ್ಯೂಕ್ ಪದವಿಗೇರಿದ. ಅವನ ಅನೈತಿಕ ನಡತೆಯಿಂದ ದೊರೆ ಹದಿನಾರನೆಯ ಲೂಯಿಯ ಆಸ್ಥಾನದಲ್ಲಿ ಅವನಿಗೆ ಮಾನ್ಯತೆ ದೊರಕಲಿಲ್ಲ. ಆಗಾಗ್ಗೆ ಇಂಗ್ಲೆಂಡಿಗೆ ಹೋಗಿ ಅಲ್ಲಿನ ಪ್ರಿನ್್ಸ ಆಫ್ ವೇಲ್್ಸನ ಸ್ನೇಹಿತನಾಗಿ ಕುದುರೆ ಜೂಜನ್ನು ಫ್ರೆಂಚರಿಗೂ ಪರಿಚಯ ಮಾಡಿಕೊಟ್ಟ. ಹಣಕಾಸಿನ ವಿಷಯದಲ್ಲಿ ಅತ್ಯಂತ ಧಾರಾಳಿ. ರಾಜಕೀಯದಲ್ಲಿ ಅವನ ಅಭಿಪ್ರಾಯಗಳು ತೀವ್ರ ಸುಧಾರಣಾ ನೀತಿಯವು. ಇದರಿಂದ ಆತ ರಾಜಪಕ್ಷಕ್ಕೆ ವಿರುದ್ಧವಾಗಿ ನಿಂತು ಕ್ರಾಂತಿಪಕ್ಷಕ್ಕೆ ಬೆಂಬಲ ನೀಡಿದ. ದೊರೆಗೆ ಮರಣದಂಡನೆಯಾಗಬೇಕೆಂಬ ತೀರ್ಪಿಗೆ ಒಪ್ಪಿಗೆಯಿತ್ತ. ಡ್ಯೂಕ್ ಪದವಿ, ಬಿರುದುಗಳು, ಎಲ್ಲವನ್ನೂ ತ್ಯಜಿಸಿ ಫಿಲಿಪ್ ಏಗಲೀಟೇ ಎಂಬ ಹೆಸರು ಧರಿಸಿದ. ಇಷ್ಟೆಲ್ಲ ಆಡಂಬರದ ಹಿನ್ನೆಲೆಯಲ್ಲಿ, ತಾನು ವ್ಯವಸ್ಥಾಬದ್ಧ ದೊರೆಯಾಗಿ ಅಥವಾ ರಾಜಪ್ರತಿನಿಧಿಯಾಗಿ, ಆಳಬೇಕೆಂಬ ಆಸೆಯಿದ್ದಂತೆ ತೋರುತ್ತದೆ ಕುಟಂಬ. ಕ್ರಾಂತಿಪಕ್ಷ ಅವನ ನಿಷ್ಠೆಯ ವಿಷಯದಲ್ಲಿ ಸಂದೇಹಪಟ್ಟು ಅವನಿಗೆ ೧೭೯೩ರಲ್ಲಿ ಮರಣದಂಡನೆ ವಿಧಿಸಿತು.
ಲೂಯಿ ಫಿಲಿಪ್, ರಾಬರ್ಟ್ : (೧೮೬೯-೧೯೨೬)
[ಬದಲಾಯಿಸಿ]ಹುಟ್ಟಿ ಬೆಳೆದದ್ದು ಇಂಗ್ಲೆಂಡಿನಲ್ಲಿ. ವಿದ್ಯಾವಂತ. ೧೮೮೯ರಲ್ಲಿ ಭಾರತದಲ್ಲಿ ಬ್ರಿಟಿಷ್ ಸೈನ್ಯಾಧಿಕಾರಿಯಾಗಿ ಕೆಲಸ ಮಾಡಿದ. ತನ್ನ ಭೂಪರಿಶೋಧನಾನುಭವಗಳನ್ನೂ ದೇಶಾಟನದ ವಿವರಗಳನ್ನೂ ಸ್ವಾರಸ್ಯಕರವಾಗಿ ಬರೆದಿಟ್ಟಿದ್ದಾನೆ.
ಸ್ಹಾನ್, ಗ್ರೀಸಿನ ಡ್ಯೂಕ್ : (೧೮೭೪-೧೯೪೦)
[ಬದಲಾಯಿಸಿ]ಡ್ಯೂಕ್ ಆಫ್ ಛಾರ್ಟರ್್ಸನ ಮಗ. ಮೇಲೆ ಹೇಳಿದ ಲೂಯಿ ಫಿಲಿಪ್ನ ಮರಣಾನಂತರ ಫ್ರಾನ್ಸಿನ ಸಿಂಹಾಸನಕ್ಕೆ ಜಗಳಹೂಡಿ ದೇಶಭ್ರಷ್ಟನಾಗಿಯೇ ಕಾಲಕಳೆದ.