ಆಡು ಸೋಗೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಆಡು ಸೋಗೆ
Justicia adhatoda 1.jpg
ವೈಜ್ಞಾನಿಕ ವರ್ಗೀಕರಣ
Kingdom: Plantae
(unranked): Angiosperms
(unranked): Eudicots
(unranked): Asterids
Order: Lamiales
Family: Acanthaceae
Genus: Justicia
Species: J. adhatoda
ದ್ವಿಪದ ಹೆಸರು
Justicia adhatoda
L.
Synonyms

Adhatoda vasica Nees

'ಆಡು ಸೋಗೆ'

'ಆಡು ಸೋಗೆ' ಔಷಧೀಯ ಗುಣಗಳನ್ನು ಮೈತುಂಬಿಕೊಂಡಿರುವ ಸಸ್ಯ. ಉಷ್ಣಗುಣವನ್ನು ಹೊಂದಿದ ಈ ಸಸ್ಯ, ನೆಗಡಿ,ಕೆಮ್ಮು ಮುಂತಾದ ಸಾಮಾನ್ಯ ಕಾಯಿಲೆಗಳಿಗೆ ರಾಮಬಾಣದಂತಿದೆ. ಆಡುಸೋಗೆ ಸೊಪ್ಪನ್ನು ಉಪಯೋಗಿಸಿ ಕಷಾಯವನ್ನು ಮಾಡುತ್ತಾರೆ. ಸ್ವಲ್ಪ ಕಹಿಯಾಗಿ ಕಾಣಿಸುವ ಸೊಪ್ಪಿನ ರಸ, ಅಪಾರವಾದ ಔಷಧೀಯ ಖಜಾನೆಯನ್ನೇ ಹೊಂದಿದೆ. ಈ ಸೊಪ್ಪಿನ ವೈಜ್ಞಾನಿಕ ಹೆಸರು, ಅಡತೋಡ ಝೀಲಾನಿಕಾ (Adhatoda zeylanica) ಈ ಸಸ್ಯದ ಸಾಮಾನ್ಯ ಹೆಸರು, ಮಲಬಾರ್ ನಟ್, ವಾಸಕ. ಸಂಸ್ಕೃತದಲ್ಲಿ ಶ್ವೇತಾವಾಸ, ವಾಸಕ, ಹಿಂದಿ ಭಾಷೆಯಲ್ಲಿ ಅರುಸ, ಮಲಯಾಳಂ ಭಾಷೆಯಲ್ಲಿ 'ಅಡಾಲೋದಕಂ'. ಇದು ’ಅಕಾಂತಕಿ' ಎಂಬ ಸಸ್ಯ ಕುಟುಂಬಕ್ಕೆ ಸೇರಿದೆ.

'ಆಡು ಸೋಗೆ ಗಿಡ' ದ ಮೇಲ್ಮೈಭಾಗ[ಬದಲಾಯಿಸಿ]

ಕವಲುಗಳಿಂದ ತುಂಬಿರುತ್ತದೆ. ಸದಾ ಹಸುರಾಗಿರುವ ದಟ್ಟವಾದ ಪೊದೆಯಂತಿರುವ ಸಸ್ಯರಾಶಿ. ಗಿಡದ ಎಲೆಗಳು ಅಗಲವಾಗಿದ್ದು ತುದಿಯಲ್ಲಿ ಚೂಪಾಗಿರುವುದು ಇದರ ವಿಶೇಷ. ಎರಡು ದಳಗಳ ಬಿಳಿಹೂಗಳು ಒತ್ತೊತ್ತಾಗಿ ಕವಲುಗಳ ತುದಿಯಲ್ಲಿ ಕಾಣಿಸುತ್ತವೆ. ನಮ್ಮದೇಶದ ಉಷ್ಣವಲಯ ಹಾಗೂ ಸಮಶೀತೋಷ್ಣವಲಯದಲ್ಲಿ ವರ್ಶವಿಡೀ ಸ್ವಾಭಾವಿಕವಾಗಿ ಬೆಳೆಯುತ್ತವೆ. ಪೊದೆಯಂತೆ ದಟ್ಟವಾಗಿ ಬೆಳೆಯುವ ಗುಣವುಳ್ಳ ಈ ಸಸ್ಯವನ್ನು ಹೊಲದ ಬೇಲಿಯಲ್ಲೂ, ಮನೆಯ ಕಾಂಪೌಂಡ್ ಬಳಿಯಲ್ಲೂ ಬೆಳೆಸಬಹುದಾದ ಸಸ್ಯ. ಸಾಮಾನ್ಯವಾಗಿ ೨ ಮೀ ಎತ್ತರ. ಒಂಟಿ ಸಸ್ಯವಾಗಿ ಬೆಳಸಿದರೆ, ೧.೫ ಚ.ಮೀ ಸ್ಥಳಾವಕಾಶ ಇರಬೇಕು. ಕುಂಡದಲ್ಲಿ ಬೆಳೆಸುವಹಾಗಿದ್ದರೆ, ೨೫-೩೦ ಸೆಂ. ಮೀ.ಸುತ್ತಳತೆಯ ವಾಗಿದ್ದರೆ ಉತ್ತಮ. ಎಲ್ಲಾ ಸಸ್ಯಗಳು ಬಯಸುವ ಸೂರ್ಯಬೆಳಕು ಇದಕ್ಕೂ ಅಗತ್ಯ. ಆದರೂ ನೆರಳಿನಲ್ಲೂ ಬೆಳೆಸಲು ಅಡ್ಡಿಯಿಲ್ಲ. ಮನೆಯ 'ವರಾಂಡ'ದಲ್ಲಿ ಅಥಾ ದೊಡ್ಡ ಮರಗಳ ನೆರಳಿನಲ್ಲೂ ಬೆಳೆಸಬಹುದು.

'ಆಡು ಸೋಗೆ ಗಿಡ'ದ ಆರೈಕೆ[ಬದಲಾಯಿಸಿ]

ಈ ಸಸ್ಯಕ್ಕೆ ಸಹಜವಾದ ಗಡಸುಗುಣವಿದೆ. ಆಗಾಗ್ಯೆ ನೀರು ಚುಮುಕಿಸಿದರೆ ಸಾಕು. ಒಂದುವೇಳೆ ಕುಂಡದಲ್ಲಿ ಹೆಳೆಸಿದರೆ, ವಾರಕ್ಕೆರಡು ಬಾರಿಯಾದರೂ ನೀರು ಉಣಿಸುವುದು ಒಳ್ಳೆಯದು. ಸಸ್ಯವನ್ನು ಸೊಂಪಾಗಿ ಬೆಳೆಸಲು ಮತ್ತು ಅದರ ಆಕಾರವನ್ನು ನಿಯಂತ್ರಿಸಲು ಕೊಂಬೆಗಳನ್ನು ಆಗಾಗ ಕಡಿಯುವುದು ಒಳ್ಳೆಯದು. ಬಲಿತ ಎಲೆಗಳನ್ನು ನಮಗೆ ಬೇಕಾದಾಗ ಕಿತ್ತು ಬಳಸಬಹುದು. ಸರಿಯಾಗಿ ಪೋಷಿಸಿದರೆ ಗಿಡ ಹೆಚ್ಚು ಕಾಲ ಎಲೆಗಳನ್ನು ಬಿಡುತ್ತಾ ಹೋಗುತ್ತದೆ. ಸೋಗೆ ಗಿಡದ ಎಲೆಗಳನ್ನು ಅಗತ್ಯವಿದ್ದಾಗ ಕಿತ್ತುನೆರಳಿನಲ್ಲಿ ಚೆನ್ನಾಗಿ ಒಣಗಿಸಿ ಪುಡಿಮಾಡಿ ಡಬ್ಬಿಗಳಲ್ಲಿ ತುಂಬಿಟ್ಟುಕೊಳ್ಳಬಹುದು.

ಈ ವನಸ್ಪತಿಯ ಉಪಯೋಗ[ಬದಲಾಯಿಸಿ]

'ಸೋಗೆ ಗಿಡ'ದ ಎಲೆಗಳಲ್ಲದೆ, ತೊಗಟೆ, ಬೇರು, ಹೂವುಗಳೆಲ್ಲವೂ ಉಪಯೋಗಕ್ಕೆ ಬರುವುದರಿಂದ ಪುಡಿ ತಯಾರಿಸಿ ಶೇಖರಿಸಿಡಬಹುದು. ಎಲೆ ಪುಡಿಯ ಕಷಾಯ ಗಾಯವನ್ನು ಗುಣಪಡಿಸುತ್ತದೆ. ಅಸ್ತಮಾ, ನೆಗಡಿ, ಕೆಮ್ಮು, ಮುಂತಾದ ರೋಗಗಳಿಗೆ ದಿವ್ಯೌಷಧಿಯೆಂದು ನಂಬುತ್ತಾರೆ. ಹೆಚ್ಚಾಗಿ ದಮ್ಮು ಕೆಮ್ಮು ಇದ್ದಾಗ, ಎಲೆಗಳನ್ನು ಬಾಡಿಸಿ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಕುಡಿದರೆ ಬೇಗನೆ ವಾಸಿಯಾಗುತ್ತದೆಯೆಂದು ಆಯುರ್ವೇದ ವೈದ್ಯರು ಹೇಳುತ್ತಾರೆ. ಇದು ಭೇದಿಗೆ ಅತ್ಯುತ್ತಮ ಮದ್ದು ಸಹಿತ. ಮನೆಯಲ್ಲಿ ಬೇರೆಗಿಡಗಳ ಜೊತೆಗೆ ಈ ಗಿಡವನ್ನೂ ನೆಡುವುದು ಒಳ್ಳೆಯದು. ಈ ವನಸ್ಪತಿಯನ್ನು 'ಆಡುಮುಟ್ಟದ ಸೊಪ್ಪು' ಎಂದು ಕರೆಯುತ್ತಾರೆ ಸಹಿತ.

ಹೊರಸಂಪರ್ಕ[ಬದಲಾಯಿಸಿ]

ಧನ್ಯವಾದಗಳು

"https://kn.wikipedia.org/w/index.php?title=ಆಡು_ಸೋಗೆ&oldid=684662" ಇಂದ ಪಡೆಯಲ್ಪಟ್ಟಿದೆ