ವಿಷಯಕ್ಕೆ ಹೋಗು

ಜೊಹಾನಸ್ ಅಲ್ತೂಸಿಯಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಲ್ತೂಸಿಯಸ್ ಜೊಹಾನಸ್ ಇಂದ ಪುನರ್ನಿರ್ದೇಶಿತ)

ಜೊಹಾನಸ್ ಅಲ್ತೂಸಿಯಸ್ (1557-1638). ಜರ್ಮನ್ ಕಾಯಿದೆ ಪಂಡಿತ. ರಾಜನೀತಿಶಾಸ್ತ್ರಜ್ಞ.

ಕೆಲ್ವಿನ್ನನ ಅನುಯಾಯಿ. ಲೌಕಿಕ ಮತ್ತು ಧಾರ್ಮಿಕ ನಿದರ್ಶನಗಳೊಂದಿಗೆ ಈತ ಸುಸಂಘಟಿತ ರಾಜನೀತಿಶಾಸ್ತ್ರವೊಂದನ್ನು ಬರೆದಿದ್ದಾನೆ (1610). ರಾಜನೀತಿಯ ಪಾಂಕ್ತವಾದ ಚರಿತ್ರೆ, ಆಧುನಿಕ ರಾಜನೀತಿಯ ವಿವರಗಳಿಂದ ಈ ಗ್ರಂಥ ಮುಖ್ಯವಾಗಿದೆ. ಸಮಾಜ ಅನೇಕ ಘಟಕಗಳಿಂದ, ಅನೇಕ ಸ್ತರಗಳಿಂದ ಕೂಡಿದ್ದು ಎಲ್ಲ ಗುಂಪುಗಳಿಗೂ ಸಾಮೂಹಿಕ ಸಮ್ಮತಿಯೇ ಆಧಾರವಾಗಿದೆ. ಹಾಗೆಯೇ ರಾಷ್ಟ್ರದ ಉಗಮ ವಿಕಾಸಗಳಿಗೆ ಸಾಮೂಹಿಕ ಸಮ್ಮತಿಯೇ ಅಡಿಗಲ್ಲು. ಸಾರ್ವಭೌಮ ಅಧಿಕಾರ ವ್ಯಕ್ತಿಯಲ್ಲಿಲ್ಲ, ಜನತೆಯಲ್ಲಿದೆ-ಇವು ಆತ ಮಂಡಿಸಿರುವ ಮುಖ್ಯ ವಿಚಾರಗಳು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: