ಆಲಿಂಗನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಪ್ಪು ಇಂದ ಪುನರ್ನಿರ್ದೇಶಿತ)
Elisabeth Louise Vigée-Lebrun, Madame Vigée-Lebrun et sa fille, by Louise Élisabeth Vigée Le Brun, 1789
ಸ್ನೇಹ ಪ್ರದರ್ಶನದಲ್ಲಿ ಆಲಿಂಗನ

ಆಲಿಂಗನ ಎಂದರೆ ತಬ್ಬುವಿಕೆ. ಪ್ರೀತಿ, ವಿಶ್ವಾಸ, ಸ್ನೇಹಸೂಚಕವಾಗಿ ವ್ಯಕ್ತಿಯನ್ನು ವ್ಯಕ್ತಿ ಎರಡೂ ಕೈಗಳಿಂದ ತಬ್ಬಿ ಎದೆಗೆ ಎದೆ ಕೂಡಿಸುವುದು.

ಮುಸ್ಲಿಂ ಧರ್ಮದಲ್ಲಿ[ಬದಲಾಯಿಸಿ]

ಮುಸ್ಲಿಮರಲ್ಲಿ ಸರ್ವಸಾಧಾರಣವಾದ ಆಚಾರ.

ಹಿಂದೂ ಧರ್ಮದಲ್ಲಿ[ಬದಲಾಯಿಸಿ]

ಹಿಂದೂಗಳಲ್ಲೂ ಮದುವೆ ಸಂದರ್ಭದಲ್ಲಿ ಬೀಗರು ಬೀಗರನ್ನು ಆಲಿಂಗಿಸುವ ಪದ್ಧತಿ ಇದೆ.ಸಾಯುಜ್ಯಮೋಕ್ಷವನ್ನು ಪಡೆದ ಭಕ್ತರಿಗೆ ಪರಮಾತ್ಮನ ಆಲಿಂಗನಸುಖ ಲಭಿಸುತ್ತದೆಂದು ವಿಶಿಷ್ಟಾದ್ವೈತದಲ್ಲಿ ಹೇಳಿದೆ.

ಪ್ರೀತಿಯಲ್ಲಿ[ಬದಲಾಯಿಸಿ]

ಸತಿಪತಿಯರಲ್ಲಿ ಚುಂಬನ, ಆಲಿಂಗನಗಳು ರತಿಭಾವಕ್ಕೆ ಆಲಂಬನಗಳಾಗಿವೆ. ಮುಖ್ಯವಾಗಿ ಆಲಿಂಗನ ಎರಡು ಮನಸ್ಸುಗಳ ಮಧುರಮಿಲನದ ಬಾಹ್ಯಪ್ರಕಟನೆಯಾಗಿದೆ.

ಇತರ[ಬದಲಾಯಿಸಿ]

ಆಲಿಂಗನದ ನೆಪದಲ್ಲಿ ಶಿವಾಜಿ ಅಫ್ಜಲ್ ಖಾನನನ್ನು ವ್ಯಾಘ್ರನಖದಿಂದ ಬಗಿದು ಕೊಂದುದೂ ಧೃತರಾಷ್ಟ್ರಾಲಿಂಗನಕ್ಕೆ ಸಿಕ್ಕ ಭೀಮನ ಲೋಹ ಪ್ರತಿಮೆ ನುಚ್ಚುನುರಿಯಾಗಿ ಹೋದುದೂ ಆಲಿಂಗನದ ಇನ್ನೊಂದು ಮುಖಕ್ಕೆ ಉದಾಹರಣೆಗಳಾಗಿವೆ.

"https://kn.wikipedia.org/w/index.php?title=ಆಲಿಂಗನ&oldid=1018888" ಇಂದ ಪಡೆಯಲ್ಪಟ್ಟಿದೆ