ವಿಷಯಕ್ಕೆ ಹೋಗು

ಅನಂತ್ ಪೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅನಂತ್ ಪೈ ( ೧೭ ಸೆಪ್ಟೆಂಬರ್ ೧೯೨೯ - ೨೪ ಫೆಬ್ರುವರಿ ೨೦೧೧) ಅಂಕಲ್ ಪೈ ಎಂದು ಜನಪ್ರಿಯರಾಗಿದ್ದ ಇವರು ಭಾರತದ ಶಿಕ್ಷಣತಜ್ಞ ಮತ್ತು ಭಾರತೀಯ ಕಾಮಿಕ್ಸ್ನ ಜನಕ. ೧೯೬೭ರಲ್ಲಿ ಇಂಡಿಯಾ ಬುಕ್ ಹೌಸ್ ಜತೆ ಸೇರಿ "ಅಮರ ಚಿತ್ರ ಕಥೆ" ಸರಣಿಯನ್ನು ಆರಂಭಿಸಿ ಭಾರತದ ಸಾಂಪ್ರದಾಯಿಕ ಜಾನಪದ ಕತೆಗಳು, ಪುರಾಣಕತೆಗಳು , ಐತಿಹಾಸಿಕ ವ್ಯಕ್ತಿಗಳ ಚರಿತ್ರೆಗಳನ್ನು ಮತ್ತೆ ಹೇಳಲಾರಂಭಿಸಿದರು. ಮಕ್ಕಳಿಗಾಗಿ ೧೯೮೦ ರಲ್ಲಿ "ಟಿಂಕಲ್" ಎಂಬಪತ್ರಿಕೆಯನ್ನು ಆರಂಭಿಸಿದರು. ಅದು ಭಾರತದ ಮೊದಲ ಕಾರ್ಟೂನ್ ಮತ್ತು ಕಾಮಿಕ್ಸ್ ಪತ್ರಿಕೆಯಾಗಿತ್ತು. ಅನಂತ್ ಪೈಯವರು ಹೃದಯಾಘಾತದಿಂದಾಗಿ ೨೪ ಫೆಬ್ರುವರಿ ೨೦೧೧ ರಂದು ನಮ್ಮನ್ನು ಅಗಲಿದರು. ಈಗ , ಅಮರ ಚಿತ್ರ ಕಥೆ, ಇಂಗ್ಲೀಷ್ ಮತ್ತು ೨೦ ಭಾರತೀಯ ಭಾಷೆಗಳಲ್ಲಿ ವರುಷಕ್ಕೆ ಸುಮಾರು ಮೂವತ್ತು ಲಕ್ಷ ಪ್ರತಿಗಳಷ್ಟು ಮಾರಾಟವಾಗುತ್ತದೆ. ಒಟ್ಟು ಈ ವರೆಗೆ ಮಾರಾಟವಾಗಿರುವ ಪ್ರತಿಗಳ ಸಂಖ್ಯೆ ಹತ್ತು ಕೋಟಿ.

ಆರಂಭದ ಬದುಕು ಮತ್ತು ಕಲಿಯುವಿಕೆ

[ಬದಲಾಯಿಸಿ]

ಕರ್ನಾಟಕದ ಕಾರ್ಕಳದಲ್ಲಿ ವೆಂಕಟರಾಯ ಮತ್ತು ಸುಶೀಲಾ ಪೈ ದಂಪತಿಗಳಿಗೆ ಮಗನಾಗಿ ಹುಟ್ಟಿದ ಇವರು ಎರಡು ವರುಷದವರಿದ್ದಾಗಲೇ ತಾಯ್ತಂದೆಯನ್ನು ಕಳೆದುಕೊಂಡರು. ಹನ್ನೆರಡು ವರುಷದವರಾಗಿದ್ದಾಗ ಮುಂಬೈಗೆ ಬಂದ ಇವರು ಮಾಹಿಂನ ಓರಿಯೆಂಟ್ ಶಾಲೆಯಲ್ಲಿ ಕಲಿತರು. ಮುಂದೆ ಬಾಂಬೆ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ರಾಸಾಯನಿಕ ತಂತ್ರಜ್ಞಾನಗಳನ್ನು ಕಲಿತರು.

ವೃತ್ತಿಯ ಆರಂಭದಲ್ಲಿ

[ಬದಲಾಯಿಸಿ]

ಮುದ್ರಣ ಮತ್ತು ಕಾಮಿಕ್ಸ ನಲ್ಲಿ ತುಂಬ ಆಸಕ್ತಿ ಹೂಂದಿದ್ದ ಇವರು ೧೯೫೪ ರಲ್ಲಿ "ಮಾನವ" ಎಂಬ ಮಕ್ಕಳ ಪತ್ರಿಕೆಯನ್ನು ತರಲು ಪ್ರಯತ್ನಿಸಿದರು. ಅದು ಸಫಲವಾಗಲಿಲ್ಲ. ಟೈಮ್ಸ್ ಆಫ್ ಇಂಡಿಯಾದ ಪುಸ್ತಕವಿಭಾಗದಲ್ಲಿ ಜ್ಯೂನಿಯರ್ ಇಂಜಿನೀಯರ್ ಆಗಿ ಕೆಲಸ ಮಾಡಿದರು. ಆಗ ಟೈಮ್ಸ್ ಬಳಗವು ಇಂದ್ರಜಾಲ ಕಾಮಿಕ್ಸ್ ಅನ್ನು ಆರಂಭಿಸಿತು.

ಅಮರ ಚಿತ್ರ ಕಥೆಗಳು

[ಬದಲಾಯಿಸಿ]

ಭಾರತದ ಸಂಸ್ಕೃತಿ ಮತ್ತು ಇತಿಹಾಸಕ್ಕೆ ಮೀಸಲಾದ ಕಾಮಿಕ್ ಪುಸ್ತಕಗಳನ್ನು ಹೊರತರುವ ವಿಚಾರವು ಪೈ ಅವರಿಗೆ ಬಂದದ್ದು ೧೯೬೭ ರಲ್ಲಿ ದೂರದರ್ಶನದಲ್ಲಿ ರಸಪ್ರಶ್ನೆ ಕಾರ್ಯಕ್ರಮವನ್ನು ನೋಡುವಾಗ. ಅದರಲ್ಲಿ ಪಾಲ್ಗೊಂಡವರು ಗ್ರೀಕ್ ಪುರಾಣಗಳಲ್ಲಿನ ವಿಷಯಗಳ ಬಗೆಗಿನ ಪ್ರಶ್ನೆಗಳನ್ನು ಸಲೀಸಾಗಿ ಉತ್ತರಿಸುತ್ತಿದ್ದರು , ಆದರೆ "ರಾಮಾಯಣದಲ್ಲಿ ರಾಮನ ತಾಯಿ ಯಾರು?" ಎಂಬ ಪ್ರಶ್ನೆಗೆ ಉತ್ತರ ಹೇಳುವಲ್ಲಿ ಅಸಮರ್ಥರಾಗಿದ್ದರು. ಅದೇ ವರ್ಷ ಅವರು ತಮ್ಮ ಕೆಲಸವನ್ನು ಬಿಟ್ಟು ಇಂಡಿಯಾ ಬುಕ್ ಹೌಸ್ ನ ಸಹಾಯದಿಂದ ಅಮರ ಚಿತ್ರಕಥೆಯನ್ನು ಆರಂಭಿಸಿದರು. ರ ಬರಹಗಾರ, ಸಂಪಾದಕ, ಪ್ರಕಾಶಕ ಎಲ್ಲವೂ ಅವರೇ ಆದರು. ಈ ಸರಣಿಯು ಭಾರತದ ಕಾಮಿಕ್ ಪುಸ್ತಕರಂಗದಲ್ಲಿ ಒಂದು ಮೈಲಿಗಲ್ಲೇ ಆಯಿತು. ಸುಮಾರು ೪೪೦ ಶೀರ್ಷಿಕೆಗಳಲ್ಲಿ ೮೬ ಮಿಲಿಯನ್ ಪ್ರತಿಗಳು ಮಾರಾಟ ಆಗಿವೆ . ನಂತರ ೧೯೬೯ರಲ್ಲಿ "ಟಿಂಕಲ್" ಮಕ್ಕಳ ಪತ್ರಿಕೆಯನ್ನು ಅರಂಭಿಸಿದರು. ಓದುಗರು ಅವರನ್ನು "ಅಂಕಲ್ ಪೈ" ಎಂದು ಪ್ರೀತಿಯಿಂದ ಕರೆಯುತ್ತಿದ್ದರು.

ಇನ್ನಿತರ ಕೃತಿಗಳು

[ಬದಲಾಯಿಸಿ]

ಪೈ ಅವರು ಅನೇಕ ಕಾಮಿಕ್ ಚಿತ್ರಪಟ್ಟಿಗಳನ್ನೂ ಸೃಷ್ಟಿಸಿದ್ದು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ. ಅವರು "ಏಕಂ ಸತ್" ಮತ್ತು "ಸೀಕ್ರೆಟ್ ಆಫ್ ಸಕ್ಸೆಸ್" ಎಂಬ ಎರಡು ವೀಡಿಯೋ ಚಿತ್ರಗಳನ್ನು ಹಿಂದಿ ಮತ್ತು ಇಂಗ್ಲೀಷಿನಲ್ಲಿ ತಯಾರಿಸಿದ್ದಾರೆ. ಅವರು ಎಳೆಯರಿಗಾಗಿ ಮತ್ತು ಹದಿಹರೆಯದವರಿಗಾಗಿ ವ್ಯಕ್ತಿತ್ವ ವಿಕಸನದ ಕುರಿತಾಗಿ ಕೆಲವು ಪುಸ್ತಕಗಳನ್ನೂ ಅಮರಚಿತ್ರ ಕಥೆಯ ಧ್ವನಿಪುಸ್ತಕಗಳನ್ನೂ ಹೊರತಂದಿದ್ದಾರೆ.

ಪ್ರಶಸ್ತಿಗಳು

[ಬದಲಾಯಿಸಿ]
  • Lifetime Achievement Award - at the First Indian Comic Convention, New Delhi (19 Feb 2011 - just 6 days before his death) was given to him by Pran, Creator of Chacha Chaudhury
  • Karpoorchand Puraskar of Uttar Pradesh Bal Kalyan Sansthan (1994)
  • Yudhvir Memorial Award in Hyderabad (1996)
  • Maharashtra Rajya Hindi Sahitya Academy Award (1996)
  • Dr. T. M. A. Pai Memorial Award in Manipal (1997)
  • University of Bombay Department of Chemical Technology's Distinguished Alumnus Award (1999)
  • Millennium Konkani Sammelan Award, Illinois, U.S.A (2000)
  • Raja Rammohan Roy Library Foundation's Award (2001)
  • Priyadarshni Academy Award (2002)
  • Vishwa Saraswat Sammaan (2003)

ವೈಯಕ್ತಿಕ ಜೀವನ

[ಬದಲಾಯಿಸಿ]

ಅವರು ಮುಂಬೈಪ್ರಭಾದೇವಿ ಭಾಗದ ನಿವಾಸಿಯಾಗಿದ್ದರು.

ಹೊರಗಿನ ಕೊಂಡಿಗಳು

[ಬದಲಾಯಿಸಿ]