ಅಡಿಪಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಒಂದು ಮನೆಯ ಆಳವಿಲ್ಲದ ಅಡಿಪಾಯ ಮತ್ತು ಒಂದು ಗಗನಚುಂಬಿ ಕಟ್ಟಡದ ಆಳ ಅಡಿಪಾಯಗಳು.

ಅಡಿಪಾಯ ಒಂದು ವಾಸ್ತುಶಿಲ್ಪ ರಚನೆಯನ್ನು ನೆಲಕ್ಕೆ ಜೋಡಿಸುವ, ಮತ್ತು ಭಾರಗಳನ್ನು ರಚನೆಯಿಂದ ನೆಲಕ್ಕೆ ವರ್ಗಾಯಿಸುವ ಘಟಕ. ಅಡಿಪಾಯಗಳನ್ನು ಸಾಮಾನ್ಯವಾಗಿ ಆಳವಲ್ಲದ ಅಥವಾ ಆಳದ ಅಡಿಪಾಯವೆಂದು ಪರಿಗಣಿಸಲಾಗುತ್ತದೆ.[೧] ಅಡಿಪಾಯ ಶಿಲ್ಪಶಾಸ್ತ್ರವು ರಚನೆಗಳ ಅಡಿಪಾಯ ಅಂಶಗಳ ವಿನ್ಯಾಸದಲ್ಲಿ ಭೂಯಂತ್ರಶಾಸ್ತ್ರ ಮತ್ತು ಶಿಲಾ ಯಂತ್ರಶಾಸ್ತ್ರದ (ಭೂತಾಂತ್ರಿಕ ಶಿಲ್ಪಶಾಸ್ತ್ರ) ಅನ್ವಯಿಕೆ.

ನೆಲದ ಸಂಪರ್ಕದಲ್ಲಿರುವ ಕಟ್ಟಿಗೆಯಿಂದ ಕಟ್ಟಡಗಳು ಮತ್ತು ರಚನೆಗಳನ್ನು ಕಟ್ಟುವ ದೀರ್ಘ ಇತಿಹಾಸವಿದೆ. ನೆಲದಲ್ಲಿ ಕಂಬ ನಿರ್ಮಾಣವು ತಾಂತ್ರಿಕವಾಗಿ ಯಾವುದೇ ಅಡಿಪಾಯವನ್ನು ಹೊಂದದಿರಬಹುದು. ಕಲ್ಲಿನ ಗೋಡೆಗಳ ಕೆಳಗೂ ಮೃದು ಅಥವಾ ಒದ್ದೆ ನೆಲದ ಮೇಲೆ ನಾಟದ ಅಡಕಿಲುಗಳನ್ನು ಬಳಸಲಾಗುತ್ತಿತ್ತು.

ಅಡಿಪಾಯವನ್ನು ಆಧರಿಸುವ ಕೆಳಮಣ್ಣಿನ ಬಗೆಯನ್ನು ಅವಲಂಬಿಸಿ ಸಾಕಷ್ಟು ಹೊರುವ ಸಾಮರ್ಥ್ಯ ಹೊಂದಿರುವಂತೆ ಅಡಿಪಾಯಗಳನ್ನು ಭೂತಾಂತ್ರಿಕ ಅಭಿಯಂತರನು ವಿನ್ಯಾಸಗೊಳಿಸುತ್ತಾನೆ, ಮತ್ತು ಕೆಳ ಆಧಾರವನ್ನು ರಾಚನಿಕ ಅಭಿಯಂತರನು ವಿನ್ಯಾಸಗೊಳಿಸಬಹುದು. ಬಲವರ್ಧನೆ ಮತ್ತು ತಾಳಿಕೊಳ್ಳುವ ಸಾಮರ್ಥ್ಯ, ಇವೆರಡೂ ಪ್ರಾಥಮಿಕ ವಿನ್ಯಾಸ ಆಸ್ಥೆಗಳಾಗಿವೆ. ಕುಸಿತವನ್ನು ಪರಿಗಣಿಸುವಾಗ, ಒಟ್ಟಾರೆ ಕುಸಿತ ಮತ್ತು ಭೇದಾತ್ಮಕ ಕುಸಿತವನ್ನು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಭೇದಾತ್ಮಕ ಕುಸಿತವೆಂದರೆ ಅಡಿಪಾಯದ ಒಂದು ಭಾಗ ಇನ್ನೊಂದು ಭಾಗಕ್ಕಿಂತ ಹೆಚ್ಚು ಕುಸಿಯುವುದು. ಇದು ಅಡಿಪಾಯದಿಂದ ಆಧಾರಿತವಾಗಿರುವ ರಚನೆಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ವಿಸ್ತಾರವಾದ ಜೇಡಿ ಮಣ್ಣು ಕೂಡ ಸಮಸ್ಯೆಗಳನ್ನು ಉಂಟುಮಾಡಬಹುದು.

ಉಲ್ಲೇಖಗಳು[ಬದಲಾಯಿಸಿ]

  1. Terzaghi, Karl; Peck, Ralph Brazelton; Mesri, Gholamreza (1996), Soil mechanics in engineering practice (3rd ed.), New York: John Wiley & Sons, p. 386, ISBN 0-471-08658-4
"https://kn.wikipedia.org/w/index.php?title=ಅಡಿಪಾಯ&oldid=932293" ಇಂದ ಪಡೆಯಲ್ಪಟ್ಟಿದೆ