ಅಕ್ಷರಧಾಮ, ನವ ದೆಹಲಿ
ಅಕ್ಷರಧಾಮ್ | |
---|---|
ಹೆಸರು: | ಅಕ್ಷರಧಾಮ್ |
ನಿರ್ಮಾತೃ: | BAPS, ಶ್ರೀ. ಪ್ರಮುಖ ಸ್ವಾಮಿ ಮಹಾರಾಜ್ |
ಕಟ್ಟಿದ ದಿನ/ವರ್ಷ: | ೬ ನವೆಂಬರ್ ೨೦೦೫ (ಉದ್ಘಾಟನಾ ಮಹೋತ್ಸವ) |
ಪ್ರಮುಖ ದೇವತೆ: | ಶ್ರೀ.ಸ್ವಾಮಿನಾರಾಯಣ |
ವಾಸ್ತುಶಿಲ್ಪ: | ವಾಸ್ತು ಶಾಸ್ತ್ರ ಮತ್ತು ಪಂಚರಾತ್ರ ಶಾಸ್ತ್ರ |
ಸ್ಥಳ: | ನೊಯ್ಡ ಮೊರ್, ನವ ದೆಹಲಿ |
ನವದೆಹಲಿ ರಾಷ್ಟ್ರ ರಾಜಧಾನಿಯ ಯಮುನಾ ನದಿ ದಡದಲ್ಲಿರುವ ವಿಶ್ವಪ್ರಸಿದ್ಧ ಅಕ್ಷರಧಾಮ ದೇಗುಲ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯ ಎಂಬ ಕಾರಣಕ್ಕೆ ಇದು ಗಿನ್ನೆಸ್ ದಾಖಲೆ ಪುಸ್ತಕ ಸೇರಿದೆ.
ಹೊಸ ದೆಹಲಿಯ ಅಕ್ಷರಧಾಮ ದೇವಸ್ಥಾನ
[ಬದಲಾಯಿಸಿ]ಭಾರತದ ರಾಜಧಾನಿ ಹೊಸದೆಹಲಿಯಲ್ಲಿ ಸುಮಾರು ೧೦೦ ಎಕರೆ ಅದ್ವಿತೀಯ ಪರಿಸರದಲ್ಲಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಈ ಸ್ವಾಮಿನಾರಾಯಣ ಅಕ್ಷರಧಾಮ ಪುಣ್ಯ ಧಾಮವು ಸಂಸ್ಕೃತಿಯ ಜ್ಯೋತಿರ್ಧಾರಿ ಭಗವಾನ್ ಸ್ವಾಮಿ ಸನ್ (೧೭೮೧-೧೮೩೦) ಪಾದಕಮಲಗಳಿಗೆ ಸಮರ್ಪಿತವಾಗಿದೆ. ಸಂತ ವಿಭೂತಿ ಪ್ರಮುಖ ಸ್ವಾಮಿಗಳ ಮೇಲ್ವಿಚಾರಣೆಯಲ್ಲಿಪರಿಸರ ಕೇವಲ ೫ ವರ್ಷಗಳ ಸಮಯದಲ್ಲಿ ಸಂಪನ್ನವಾಗಿತು. ಸುಮಾರು ೩೦ ಎಕರೆ ಪ್ರದೇಶದಲ್ಲಿ ವಿಸ್ತರಿಸಿರುವ ಈ ಭವ್ಯ ಸ್ಮಾರಕವು ಶಾಂತಿ, ಮತ್ತು ಸಹಬಾಳ್ವೆಗಳನ್ನು ವಿಶ್ವಕ್ಕೆ ಸಾರುವ ಅನೇಕಾನೇಕ ಧಾಮಗಳಲ್ಲಿ ಪ್ರಮುಖವಾಗಿದೆ. 'ಅಕ್ಷರಧಾಮ ದೇವಾಲಯ' ಮಹಾರಾಜ ಸ್ವಾಮಿ ನೇತೃತ್ವದ ಬೋಚಸನ್ವಾಸಿ ಶ್ರೀ ಅಕ್ಷರಪುರುಷೋತ್ತಮ ಸ್ವಾಮಿ ಸಂಸ್ಥಾನ್ (BAPS) ವಿಶ್ವದ ವಿವಿಧೆಡೆ ಬೃಹತ್ ದೇವಸ್ಥಾನಗಳನ್ನು ನಿರ್ಮಿಸುತ್ತಿದೆ. ದೆಹಲಿಯಲ್ಲಿರುವ ಅಕ್ಷರಧಾಮ ದೇವಸ್ಥಾನ. ಸನ್, ೨೦೦೫ ರಲ್ಲಿ ಉದ್ಘಾಟನೆಗೊಂಡ ದೇವಸ್ಥಾನವನ್ನು ಗುಲಾಬಿ ಬಣ್ಣದ ಮರಳುಗಲ್ಗಳು, ಹಾಗೂ 'ಬಿಳಿ ಅಮೃತಶಿಲೆ' ಬಳಸಿ ನಿರ್ಮಿಸಲಾಗಿದೆ. ದೇವಸ್ಥಾನದ ಎತ್ತರ ೪೩ ಮೀಟರ್. ೯೬ ಮೀಟರ್‌ನಷ್ಟು ಅಗಲವಿದ್ದು, ವಿಶಾಲವಾಗಿದೆ. ಯಮುನಾ ನದಿಯ ದಂಡೆಯ ಮೇಲಿರುವುದರಿಂದ ಹಸಿರಿನ ಪರಿಸರದ ನಡುವೆ ಕಣ್ಣುಕೋರೈಸುವಂತಿದೆ. ರಾತ್ರಿಯ ವೇಳೆ 'ಅಕ್ಷರಧಾಮ'ಕ್ಕೆ ಬೆಳಕಿನ ಮೆರುಗನ್ನು ಕೊಟ್ಟಾಗ ಅದರ ಸೌಂದರ್ಯ ನೂರ್ಮಡಿಯಾಗಿ ಹೊರಹೊಮ್ಮುತ್ತದೆ. ೨೩೪ ಸ್ಥಂಭಗಳು ಗೋಪುರಗಳಿಂದ ಶೋಭಿಸುವ ೯ ಮಂಟಪಗಳು, ೨೦ ಚತುಷ್ಕೋಣಾಕಾರದ ಶಿಖರಗಳು, ಮತ್ತು ೨೦ ಸಾವಿರಕ್ಕೂ ಮೇಲ್ಪಟ್ಟಶಿಲ್ಪ ಕಲಾಕೃತಿಗಳು, ಲೋಹಗಳ ಬಳಕೆಯಾಗದೆ ನಿರ್ಮಿಸಲ್ಪಟ್ಟಿರುವ ಈ ಭವ್ಯ ಭವನವು ಪ್ರಾಚೀನ ಭಾರತದ ಶಿಲ್ಪಕಲೆಯ ಪುನರ್ಜೀವನವೆಂದು ಭಾವಿಸಲಾಗಿದೆ.
ಪ್ರದಕ್ಷಿಣೆಯ ಪ್ರಾಕಾರ
[ಬದಲಾಯಿಸಿ]ಕೆಂಪು ಕಲ್ಲುಗಳಿಂದ ನಿರ್ಮಿತವಾದ ೧೫೫ ಚತುಷ್ಕೋಣ ಶಿಖರಗಳು ೧,೧೫೨ ಸ್ಥಂಭಗಳು, ಮತ್ತು ೧೪೫ ಸುಂದರ ಕಿಟಕಿಗಳನ್ನು ಹೊಂದಿದ ಎರಡು ಅಂತಸ್ತಿನ ಪ್ರಾಕಾರ, ಅಕ್ಷರಧಾಮದ ನಾಲ್ಕೂ ದಿಕ್ಕಿನಲ್ಲಿ ಹೂವಿನ ಮಾಲೆಯಂತೆ ಸುತ್ತುವರಿಯಲ್ಪಟ್ಟಿದೆ.
ಕಮಲ ಪುಷ್ಕರಣಿ
[ಬದಲಾಯಿಸಿ]ಇಲ್ಲಿ ನಿರ್ಮಿಸಿದ ಪುಷ್ಕರಣಿ ದೇಶದಲ್ಲಿಯೇ ಅತಿ ದೊಡ್ಡದು. ಸುಮಾರು ೨೬೭೦ ಮೆಟ್ಟಿಲುಗಳ ಮದ್ಯೆ ೩೦೦ ಅಡಿ ಅಗಲ ಉದ್ದದ ಕಮಲ ಆಕಾರದಲ್ಲಿ ಯಜ್ಞ ಕುಂಡವಿದೆ. ರಾತ್ರಿ ವೇಳೆಯಲ್ಲಿ ಇದು 'ಮ್ಯೂಸಿಕಲ್ ಕಾರಂಜಿ ತರಹ' ಬದಲಾಗುತ್ತದೆ. ಇಲ್ಲಿಯ ಮಾನಸ ಸರೋವರಕ್ಕೆ ೧೫೧ ಪುಣ್ಯ ನದಿಗಳ ಜಾಲವನ್ನು ತಂದು ಸೇರಿಸಿದ್ದಾರೆ. ೧೦೮ ಗೋಮುಖ ಶಿಲ್ಪಗಳ ಬಾಯಿಯಿಂದ ಪವಿತ್ರ ಜಲ ಬೀಳುವಂತೆ ಮಾಡಿದ್ದೂ ನೋಡುವುದೇ ಒಂದು ಸೊಗಸು. ಈ ಅದ್ಭುತ ಆಳಯವನ್ನು ಪ್ರತಿ ದಿನ ೪೦ ಲಕ್ಷ ಮಂದಿ ಸಂದರ್ಶಿಸುತ್ತಾರೆ. ಇಪ್ಪತ್ತು ಸಾವಿರಕ್ಕೂ ಹೆಚ್ಚು ವಿವಿಧ ಧಾರ್ಮಿಕ ಮೂರ್ತಿಗಳನ್ನು ದೇವಸ್ಥಾನದಲ್ಲಿ ಕೆತ್ತಲಾಗಿದೆ. ಅದ್ಭುತ ಶಿಲ್ಪಕಲಾ ಸೌಂದರ್ಯದಿಂದ ಕೂಡಿದ, ಕರಕುಶಲ ಕೆತ್ತನೆಗೆ ಹೆಸರಾಗಿರುವ ಎಂಟು ಮಂಟಪಗಳಿದ್ದು, ಪ್ರತಿಯೊಂದೂ ಕಲೆಯನ್ನು ಮುಕ್ಕಳಿಸುತ್ತಿದೆ. ಬೃಹತ್ ಆನೆಗಳು, ಹಕ್ಕಿಗಳು ಹಾಗೂ ಕೆಲವು ಪ್ರಾಣಿಗಳ ವಿವಿಧ ಭಂಗಿಗಳ ಕೆತ್ತನೆ ಕಣ್ಮನಗಳನ್ನು ಸೆಳೆಯುತ್ತದೆ.
ಅಕ್ಷರ ಧಾಮ ಸ್ಮಾರಕದೊಳಗೆ
[ಬದಲಾಯಿಸಿ]ಪಾಂಚರಾತ್ರ ಆಗಮ ಶಾಸ್ತ್ರಪ್ರಕಾರ ಪರಮಾತ್ಮನ ೨೪ ಕೇಶವಾದಿ ಸ್ವರೂಪಗಳ ದುರ್ಲಭ ಚತುರ್ಭುಜ ಸ್ವರೂಪ. ಅಮೃತ ಶಿಲೆಯ ಶಿಲ್ಪಗಳಿಂದ ಕೂಡಿದ ಸ್ಥಂಭಗಳ ಮೇಲೆ ಸಂತರ ದರ್ಶನೀಯವಾದ ಕಲಾಕೃತಿಗಳು. ೫೦೦ ಪರಮಹಂಸರ ಸೇವಾಮುದ್ರಾ ಭಂಗಿಯಲ್ಲಿರುವ ಮೂರ್ತಿಗಳು. ಅಮೃತ ಶಿಲೆಯ ೬೫ ಅಡಿ ಎತ್ತರದ ಲೀಲಾಮಂಟಪ, ಭಕ್ತಮಂಟಪ,ಸ್ಮೃತಿಮಂಟಪ, ಹಾಗೂ ಪರಮಹಂಸಮಂಟಪಗಳಿವೆ. ಭಗವಾನ್ ಸ್ವಾಮಿನಾರಾಯಣರ ಲೀಲೆಗಳಿಂದ ಅಲಂಕೃತವಾದ ಘನಶ್ಯಾಮ ಮಂಟಪ, ನೀಲಕಂಠ ಮಂಟಪ, ಸಹಜಾನಂದ ಮಂಟಪ, ಹಾಗೂ ಸ್ವಾಮಿನಾರಾಯಣ ಮಂಟಪದಲ್ಲಿ ಐತಿಹಾಸಿಕ ಕುಂಕುಮ ಚರಣ ಮುದ್ರೆ, ಮಾಲೆ, ಪಾದುಕೆ, ವಸ್ತ್ರಗಳಿಂದಲೂ ಗೃಹೋಪಕರಣಗಳಿಂದ ಶೋಭಿಸುವ ಸ್ಮೃತಿಮಂಟಪ, ೯ ಗುಮ್ಮಟ ಮಂಟಪ, ೨೦ ಚತುಷ್ಕೋಣ ಶಿಖರಗಳ ಅಭೂತಪೂರ್ವ ಸಂಯೋಜನೆಯ ಭಾರತೀಯ ಶಿಲ್ಪಕಲೆಯ ಅಧ್ಬುತ ಪ್ರಾಕಾರಗಳನ್ನು ವೀಕ್ಷಿಸಬಹುದು.
ಅಕ್ಷರ ಧಾಮ ಸ್ಮಾರಕದ ಹೊರಗೆ
[ಬದಲಾಯಿಸಿ]ಅಕ್ಷರಧಾಮದ ಹೊರಗಡೆಯ ಗೋಡೆಗಳ ಮೇಲೆ, ನಾಲ್ಕೂ ದಿಕ್ಕಿನಲ್ಲಿಯೂ ಸ್ಥಾಪಿಸಿರುವ ಭಾರತೀಯ ಸಂಸ್ಕ್ರುತಿಯ ಜ್ಯೋತಿಯನ್ನು ಹಿಡಿದು ನಿಂತ ಸಂತರ ಪುಠಳಿಗಳು, ಭಕ್ತರು, ವಿಭೂತಿಗಳು ೨೪೮ ಮೂರ್ತಿಗಳನ್ನು ಪ್ರವೇಶ ಮಂಟಪದ ಸ್ಥಂಭಗಳ ಮೇಲೆ ಕೆತ್ತಲಾಗಿದೆ. ಬಿಸಿಲು ಮಚ್ಚಿನಲ್ಲಿ ಸರಸ್ವತಿ, ಲಕ್ಷಿ, ಪಾರ್ವತಿ, ಮೊದಲಾದ ದೇವಿಯರ ಮತ್ತು ಗೋಪಿಕೃಷ್ಣರ ರಾಸಲೀಲೆಯ ವಿಲಾಸಗಳನ್ನು ಸುಂದರವಾಗಿ ಕೆತ್ತಲಾಗಿದೆ. ನಾರಾಯಣ ಪೀಠದಲ್ಲಿ ಭಗವಾನ್ ಸ್ವಾಮಿನಾರಾಯಣರ ದಿವ್ಯ ಚರಿತ್ರೆಯ ಒಟ್ಟು ೧೮೦ ಅಡಿಗಳ ಕಲಾತ್ಮಕ ಧಾತುಶಿಲ್ಪಗಳಿವೆ.
ನೌಕಾವಿಹಾರ ಹಾಗೂ ವಸ್ತುಪ್ರದರ್ಶನ
[ಬದಲಾಯಿಸಿ]೧೦ ಸಾವಿರ ವರ್ಷಗಳ ಪ್ರಾಚೀನ ಭಾರತದ ಭಿನ್ನ ಬಿನ್ನ ಸಂಸ್ಕೃತಿಗಳ ಒಂದು ಅದ್ಭುತ ನೋಟವನ್ನು ೧೪ ನಿಮಿಷಗಳಲ್ಲಿ ಸವಿಯಬಭುದಾಗಿದೆ. 'ಸ್ವಾಮಿನಾರಾಯಣನ ಜೀವನ'ವನ್ನು ಚಿತ್ರಿಸುವ 'ರೋಬೋಟಿಕ್ ಪ್ರದರ್ಶನ' ಇಲ್ಲಿನ ಪ್ರಮುಖ ಆಕರ್ಷಣೆ. 'ನವಿಲಿನಾಕಾರದ ದೋಣಿ'ಯ ಮೇಲೆ ನಡೆಯುವ ಈ ಪ್ರದರ್ಶನದ ರೋಚಕ ಕ್ಷಣಗಳನ್ನು ಸಹಸ್ರಾರು ಜನರು ಆಸ್ವಾದಿಸುತ್ತಾರೆ. ೮೦೦ ಶಿಲ್ಪ, ಮತ್ತು ಸಂಶೋಧನೆಗಳಿಂದಸಿದ್ಧವಾದ ಸರಸ್ವತಿ ನದಿಯ ದಡದಭಾರತೀಯ ಸಂಸ್ಕೃತಿಯ ಪ್ರಾಚೀನ ಕಾಲದ ಸಹಜೀವನ ವಿಶ್ವ ಸರ್ವಪ್ರಥಮ ವಿವಿ ತಕ್ಷಶಿಲ, ಸುಶೃತದ ಪ್ರಾಚೀನ ಚಿಕಿತ್ಸಾಲಯ,ನಾಗಾರ್ಜುನ ಪ್ರಯೋಗಶಾಲೆ,ಮೊದಲಾದ ವಿಹಾರಗಳು ಭಾರತದ ದಿವ್ಯ ಇತಿಹಾಸವನ್ನು ಅನವರಣಗೊಳಿಸುತ್ತವೆ. ಯಜ್ಞಪುರುಷ ಕುಂಡದಲ್ಲಿ ರಾತ್ರಿ ಹೊತ್ತು ಎತ್ತರ ಚಿಮ್ಮುವ ಕಾರಂಜಿ, 151 ನದಿಗಳ ನೀರನ್ನು ಅಡಗಿಸಿಕೊಂಡ ನಾರಾಯಣ ಸರೋವರದ ಅಲೆಗಳು ಭಕ್ತಿರಸದ ಜೊತೆಗೆ ಸೌಂದರ್ಯ ಸೂಕ್ಷ್ಮವನ್ನೂ ಇಟ್ಟುಕೊಂಡಿವೆ. ಅಕ್ಷರಧಾಮದ ಸಮೀಪದಲ್ಲೇ 'ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಗ್ರಾಮ'ವನ್ನು ನಿರ್ಮಿಸಲಾಗಿದೆ.
ಭಗವಾನ್ ಸ್ವಾಮಿನಾರಾಯಣರ ಲೀಲೆಗಳನ್ನು ವೀಕ್ಷಿಸಬಹುದು
[ಬದಲಾಯಿಸಿ]ಅ ಸ್ಮಾರಕದೊಳಗೆ ಪಾಂಚರಾತ್ರ ಆಗಮ ಶಾಸ್ತೋತ್ರ ಭಗವಂತನ ೨೪ ಕೇಶವಾದಿ ಸ್ವರೂಪಗಳ ಚತುರ್ಭುಜ ಸ್ವರೂಪವನ್ನು ಕಾಣಬಹುದು. ಅಮ್ತಶಿಲೆಯ ಕಂಭಗಳ ಮೇಲೆ೫೦೦ ಪರಮಹಂಸ ಸಂತರ ಕಲಾಕೃತಿಗಳು ೭೫ ಅಡಿ ಎತ್ತರದ ಲೀಲಾಮಂಟಪ, ಭಕ್ತಮಂಟಪ, ಸ್ಮೃತಿಮಂಟಪ,ಹಾಗೂ ಪರಮಹಂಸ ಮಂಟಪಗಳ ಅದ್ಭುತಕೆತ್ತನೆಯ ಕೆಲಸಗಳು ಕಣ್ಮನಸೆಳೆಯುತ್ತವೆ. ಭಗವಾನ್ ಸ್ವಾಮಿನಾರಾಯಣರ ಲೀಲೆಯನ್ನು ಬಿಂಬಿಸುವ ಶಿಲ್ಪಗಳಲ್ಲಿ ವಿಶೇಶವಾದವುಗಳು, ಘನಶ್ಯಾಮ ಮಂಟಪ, ನೀಲಕಂಠ ಮಂಟಪ, ಸಹಜಾನಂದ ಮತ್ತು ಸ್ವಾಮಿನಾರಾಯಣ ಮ. ಭಗವಾನ್ ಸ್ವಾಮಿನಾರಾಯಣರ ಐತಿಹಾಸಿಕ ಕುಂಕುಮ ಚರಣಮುದ್ರೆ, ಮಾಲೆ, ಪಾದುಕೆ,ವಸ್ತ್ರಗಳು, ಗೃಹೋಪಕರಣಗಳು ಸ್ಮೃತಿಮಂಟಪಕ್ಕೆ ಶೋಭೆಯನ್ನು ತರುತ್ತವೆ.೯ ಗುಮ್ಮಟ ಮಂಟಪ, ಮತ್ತು ೨೦ ಚತುಷ್ಕೋಣ ಶಿಖರಗಳನ್ನೊಳಗೊಂಡ ಅಭೂತಪೂರ್ವ ಶಿಲ್ಪಕಲೆಯ ಒಂದು ವಿನೂತನ ನಮೂನೆಯನ್ನು ನಾವು ಕಾಣಬಹುದಾಗಿದೆ.
ದಶ ದ್ವಾರಗಳು
[ಬದಲಾಯಿಸಿ]ಈ ಹತ್ತು ದ್ವಾರಗಳೂ ಹತ್ತು ದಿಕ್ಕುಗಳ ಪ್ರತೀಕವಾಗಿದ್ದು ವೈದಿಕ ಶುಭಕಾಮನೆಗಳನ್ನು ಪ್ರತಿಬಿಂಬಿಸುತ್ತದೆ. ಸಮಗ್ರ ಬ್ರಹ್ಮಾಂಡದಲ್ಲಿ ಯಾವುದು ಮಂಗಳಕರವೋ, ದಿವ್ಯವೋ ಭಾವಾತ್ಮಕವಾದುವುಗಳೆಲ್ಲವೂ ನಮ್ಮ ಕಡೆಗೆ ಪ್ರವಹಿಸಲಿ ಮತ್ತು ನಮ್ಮ ಹೃದಯದಿಂದ ಶುಭ ತತ್ವಗಳು ವಿಶ್ವದೆಲ್ಲೆಡೆ ಪಸರಿಸಲಿ.
ಭಕ್ತಿ ದ್ವಾರ
[ಬದಲಾಯಿಸಿ]ಪಾರಂಪರಾಗತವಾಗಿ ನದೆದುಬಂದ ಭಾರತೀಯ ಶೈಲಿಯನ್ನು ಹೋಲುವ ಈ ಪ್ರವೇಶ ದ್ವಾರವು ಭಕ್ತಿಭಾವದಿಂದ ಕೂಡಿರುವ ಬೇರೊಂದು ಲೋಕಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ಭಗವಂತನ ಬಗೆಗಿನ ಭಕ್ತಿಯೇ ಶುದ್ಧಪ್ರೇಮವೂ ಆಗಿದೆ.ಸನಾತನ ಧರ್ಮದಲ್ಲಿ ಉಲ್ಲೇಖಗೊಂಡಿರುವಂತೆ ಸಾಧಕ ಮತ್ತು ದೈವದ ಬಗೆಗಿನ ಶಾಶ್ವತ ನೋಧೆ ದೊರೆಯುತ್ತದೆ. ಭಕ್ತಿ ಮತ್ತು ದೈವೋಪಾಸನೆಗಳ ೨೦೮ ಜೋಡಿ ಸ್ವರೂಪಗಳನ್ನು ಭಕ್ತಿದ್ವಾರದಲ್ಲಿ ದರ್ಶಾಯಿಸಲಾಗಿದೆ.
ಮಯೂರ ದ್ವಾರ
[ಬದಲಾಯಿಸಿ]ನವಿಲು ನಮ್ಮ ಭಾರತದ ರಾಷ್ಟ್ರಪಕ್ಷಿಯಾಗಿದೆ. ಅದರ ಸೌಂದರ್ಯ, ಸಂಯಮ ಮತ್ತು ಶುಚಿತ್ವದ ಪ್ರತೀಕವಾಗಿ ಭಾರತೀಯರ ಸರ್ವಕಾಲೀನ ಪ್ರಿಯ ಪಕ್ಷಿಯಾಗಿದೆ. ಅಕ್ಷರಧಾಮದ ಪ್ರಮುಖ ಸ್ವಾಗತ ದ್ವಾರದಲ್ಲೇ ಕೆತ್ತಲ್ಪಟ್ಟಿರುವ ಭವ್ಯ ಸುಂದರ ಮಯೂರ ತೋರಣವೂ ಕಲಾಮಂಡಿತ ಸ್ಥಂಭದ ೮೬೯ ನವಿಲುಗಳ ನೃತ್ಯ ನಮಗೆ ನಯನ ಮನೋಹರವಾಗಿದೆ. ಭಾರತೀಯ ಶಿಲ್ಪ ಕಲೆಯ ಅತ್ಯಂತ ಸುಂದರ ಶೈಲಿಯ ದ್ವಾರವೆನ್ನಬಹುದು.
ಶ್ರೀಹರಿ ಚರಣಾರವಿಂದಗಳು
[ಬದಲಾಯಿಸಿ]ಎರಡು ಮಯೂರ ದ್ವಾರಗಳ ನಡುವೆ ೧೬ ಮಂಗಳಕರವಾದಚಿಹೆಗಳಿಂದ ಅಂಕಿತವಾದ ಶ್ರೀಹರಿ ಚರಣಾರವಿಂದಯುಗಳವು ಈ ಭುವಿಯ ಭಗವಾನ್ ಶ್ರೀ ಸ್ವಾಮಿನಾರಾಯಣರ ಶುಭ ಅವತಾರದ ಮಧುರ ನೆನೆಪಿನಲ್ಲಿ ಸ್ಥಾಪಿಸಲಾಗಿದೆ. ಹಾಲುಬಿಳುಪಿನ ಅಮೃತಶಿಲೆಯಲ್ಲಿ ಸುಂದರವಾಗಿ ಕಡೆಯಲ್ಪಟ್ಟ ಶ್ರೀಹರಿಯ ಚರಣಕಮಲಗಳಿಗೆ ೪ ಶಂಖಗಳ ಮೂಲಕ ಜಲಾಭಿಷೇಕವು ಜರುಗುತ್ತದೆ. ಸ್ವಾಮಿನಾರಾಯರ ಐತಿಹಾಸಿಕ ಜೀವನ ಹಾಗೂ ಕಾರ್ಯಗಳಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಿದೆ.
ಯಜ್ಞ ಪುರುಷಕುಂಡ ಮತ್ತು ಸಂಗೀತ ಮಯ ಕಾರಂಜಿ
[ಬದಲಾಯಿಸಿ]ಕೆಂಪು ಕಲ್ಲುಗಳಿಂದ ನಿರ್ಮಿತವಾದ ಈ ಪುಷ್ಕರಣಿಯು ಪ್ರಾಚೀನ ಭರತದ ಕುಂಡ ಪರಂಪರೆಯ ಒಂದು ಉದಾಹರಣೆಯಗಿದೆ. ೩೦೦೩೦೦ ಅಡಿ ಚದುರದ ಭಾರತದಲ್ಲೇ ಅತಿ ಹಿರಿದಾದದ್ದು.ಮಧ್ಯಭಾಗದಲ್ಲಿ ಕಮಲದಾಕಾರದಜಲಕುಂಡವಿದೆ. ಅತ್ಯಾಧುನಿಕ ಸಂಗೀತ ಮಯ ಕಾರಂಜಿಯ ಮೂಲಕ ಸೃಷ್ಟಿಯ ರಚನೆ, ಪೋಷಣೆ ಮತ್ತು ವಿನಾಶಪ್ರಕ್ರಿಯೆಗಳನ್ನು ಹೃದಯಂಗಮವಾಗಿಜಲಜ್ಯೋತಿ ಜೀವನ ಚಕ್ರ,ಅದ್ಭುತ ಸಂಯೋಜನೆ,೨೭ ಅಡಿ ಎತ್ತರದ ಬಾಲಯೋಗಿ ನೀಲಕಂಠ ಬ್ರಹ್ಮಚಾರಿಯವರ ಧಾತು ಶಿಲ್ಪದ ಪುಠಳಿ ಎದುರಿಗೆ ಸ್ಥಾಪಿತವಾಗಿದೆ.
'ನಾರಾಯಣ ಸರೋವರ
[ಬದಲಾಯಿಸಿ]ವೈದಿಕ ಕಾಲದಿಂದಲೂ ಭಾರತದಲ್ಲಿ ಪ್ರಚಲಿತ ಜಲತೀರ್ಥಗಳ ಪರಂಪರೆಯ ಪ್ರಕಾರ ಅಕ್ಷರ ಮೂರು ದಿಕ್ಕುಗಳಲ್ಲೂ ನಾರಾಯಣ ಸರೋವರ ನಿರ್ಮಾಣವಾಗಿದೆ. ಇದರಿಂದ ಪ್ರಾರಂಭಗೊಂಡು ೧೫೧ ತೀರ್ಥಗಳು ಮತ್ತು ನದಿಗಳಿಂದ ಬರಮಾಡಿಕೊಂಡ ಜಲದ ಸಿಂಚನದಿಂದ ಪರಮಪಾವನವಾಗಿದೆ. ೪ ಮೂಲೆಗಳಲ್ಲೂ ೧೦೮ ಗೋಮುಖಗಳು ಇದ್ದು ಅವುಗಳ ಬಾಯಿನಲ್ಲಿ ಹರಿದುಬರುವ ಜಲಪ್ರವಾಹವನ್ನು ಪರಮತ್ಮನ ೧೦೮ ಪವಿತ್ರ ನಾಮಾವಳಿಗಳ ಪ್ರತೀಕವೆಂದು ಶ್ರದ್ಧಾಳುಗಳು ನಂಬುತ್ತಾರೆ.
ಅಭಿಷೇಕ ಮಂಟಪ
[ಬದಲಾಯಿಸಿ]ಕೆಂಪು ಶಿಲೆಗಳಿಂದ ರಚಿತವಾದ ೧೫೫ ಚತುಷ್ಕೋಣ ಶಿಖರಗಳು, ೧,೧೫೨ ಸ್ಥಂಭಗಳು, ಮತ್ತು ೧೪೫ ಸುಂದರ ಕಿಟಕಿಗಳ ೨ ಅಂತಸ್ತಿನ ಪ್ರಾಕಾರವು ಅಕ್ಷರಧಾಮದ ನಾಲ್ಕೂದಿಕ್ಕಿನಲ್ಲೂ ಪುಷ್ಪಮಾಲೆಯಂತೆ ಕಂಗೊಳಿಸುತ್ತಿದೆ.
ಯೋಗೀ ಹೃದಯ ಕಮಲ
[ಬದಲಾಯಿಸಿ]ಹಚ್ಚಹಸುರಿನ ಹುಲ್ಲುಹಾಸಿಗೆಯ ಮೇಲೆ ಒಂದು ವಿಶಾಲ ಭವ್ಯ ಭಾವನೆಗಳ ಅಷ್ಟದಳ ಕಮಲವಿದೆ.ವಿಶ್ವದ ಮಹಾಪುರುಷರು ಹಾಗೂ ಧರ್ಮಶಾಸ್ತ್ರಗಳು ದೇವರು ಮತ್ತು ಮಾನವರಲ್ಲಿ ತೋರಿಸಿರುವ ಅಸೀಮ ವಿಶ್ವಾಸವನ್ನು ಇಲ್ಲಿನ ಶಿಲಾ ಲೇಖನಗಳು ಪ್ರಸ್ತುತಪಡಿಸಿವೆ.
ಪ್ರೇಮವತೀ ಭೋಜನ ಶಾಲೆ
[ಬದಲಾಯಿಸಿ]ಅಜಂತಾದ ಸುಂದರ ಕಲಾವಿನ್ಯಾಸದ ಸುಂದರ ಪರಿಸರದಲ್ಲಿ ವಿಶಾಲವಾದ ಪ್ರೇಮಾವತಿ ಭೋಜನಶಾಲೆ ಶುದ್ಧ ಮತ್ತು ಸಾತ್ವಿಕ ಆಹಾರವನ್ನು ಮಧುರ ಜಲಪಾನದ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ.
ಭಾರತ ಉಪವನ, ಸಾಂಸ್ಕೃತಿಕ ಉದ್ಯಾನ
[ಬದಲಾಯಿಸಿ]ಮಂದಿರದ ಮುಂದಿರುವ ೨೨ ಎಕರೆ ಜಮೀನಿನಲ್ಲಿ ಸುಂದರವಾದ ಉಪವನವನ್ನು ರಚಿಸಲಗಿದೆ.ಮರಗಳು, ಹಚ್ಚ ಹಸುರಿನ ಹುಲ್ಲು, ಹೂಗಿಡಗಳು ಕಲಾತ್ಮಕ ವಾಗಿ ಆಯೋಜಿಸಲಾಗಿದೆ. ಭಾರತದ ಕೆಲವು ಮಹಾಪುರುಷರ ೮ ಅಡಿ ಎತ್ತರದ ಕಾಂಸಶಿಲ್ಪ ಸಂರಚಿಸಿದ ಒಂದು ಇಲ್ಲಿಂದ ಅಕ್ಶರ ಅತಿ ಸುಂದರವಾಗಿ ಗೋಚರಿಸುತ್ತದೆ.
ಮೂರ್ತಿಗಳು
[ಬದಲಾಯಿಸಿ]ಮಧ್ಯಭಾಗದಲ್ಲಿ ಭಗವಾನ್ ಸ್ವಾಮಿನಾ ೧೧ ಅಡಿ ಎತ್ತರದ ಪಂಚಲೋಹದ ಪ್ರತಿಮೆ ಇದೆ.ಶ್ರೀ ಲಕ್ಷ್ಮೀನಾರಆಯಣ ಸ್ವಾಮಿ ಸಿಂಹಾಸನದ ಮೇಲೆ ವಿರಾಜಮಾನವಾಗಿರುವ, ಶ್ರೀ ಸೀತಾರಾಮಚಂದ್ರ,ರಾಧಾಕೃಷ್ಣ, ಶಿವ-ಪಾರ್ವತಿಯರ ಮೂರ್ತಿಗಳಿವೆ.
ಪ್ರಾಕಾರ ಗೋಡೆ
[ಬದಲಾಯಿಸಿ]ಹೊರಭಾಗದ ಗೋಡೆ.೬೧೧ ಅಡಿ ಉದ್ದ೨೫ ಅಡಿ ಎತ್ತರ೪೨೮೭ ಶಿಲೆಗಳಿಂದ ನಿರ್ಮಿತವಾಗಿದೆ.ಪ್ರಾಚೀನ ಭಾರತೀಯ ನಾಗರ ಶೈಲಿಯಲ್ಲಿದೆ. ಇದರಲ್ಲಿ ಹಲವಾರು ಮಹಾಪುರುಷರ, ಋಷಿಗಳ ಆಚಾರ್ಯರ ದೇವಿದೇವತೆಗಳಮೂರ್ತಿಗಳಲ್ಲದೆ, ಐತಿಹಾಸಿಕ ದೃಷ್ಟಿಯಿಂದ ಸುಮಾರು ೨೪೮ ಮಹತ್ವದ ಕಲಾತ್ಮಕ ಶಿಲ್ಪಗಳು ಸ್ಥಾಪಿಸಲ್ಪಟ್ಟಿವೆ.
ಗಜೇಂದ್ರ ಪೀಠ
[ಬದಲಾಯಿಸಿ]ಭವ್ಯ ದೇವಾಲಯದ ಮತ್ತೊಂದು ವಿಶೇಷವೆಂದರೆ, ಅದು ೧,೦೭೦ ಅಡಿ ಉದ್ದದ ಗಜೇಂದ್ರ ದ ಮೇಲೆ ನಿಂತಿದ್ದು, ೩ ಸಾವಿರ ಟಾನ್ ತೂಕದ ಕಲ್ಲುಗಳಿಂದ ನಿರ್ಮಿಸಲ್ಪಟ್ತಿದೆ.ವಿಶ್ವದ ಮೌಲಿಕ ಹಾಗೂ ಅದ್ವಿತೀತ್ಯ ಶಿಲ್ಪಗಳ ಶ್ರೇಣಿಯಲ್ಲಿ ಅಗ್ರಪಂಕ್ತಿಯಲ್ಲಿ ಶೋಭಿಸುತ್ತದೆ.೧೪೮ ಆನೆಗಳ ಸುಂದರ ಕಲಾತ್ಮ ಶಿಲ್ಪ ಪ್ರಾಣಿವರ್ಗದ ಭಾರತೀಯ ತತ್ವಗಳನ್ನು ಬೋಧಿಸುವ ಜಾನಪದ ಕಥೆಗಳು, ಪೌರಾಣಿಕ ಗಳ ೮೦ ದೃಷ್ಯಗಳು ಇಲ್ಲಿ ಕೆತ್ತಲ್ಪಟ್ತಿವೆ.
ಸಹಜಾನಂದ ದರ್ಶನ
[ಬದಲಾಯಿಸಿ]ರೋಬೊಟೆಕ್ಶ್, ಎನಿಮೆಟ್ರೋನಿಕ್ಸ್ಧ್ವಧ್ವನಿ ಡಾಯೊರಾಮಾ, ಧ್ವನಿ ಪ್ರಕಾಶ ಇವೇ ಮೊದಲಾದ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿದ ಶ್ರದ್ಧೆ, ಸತ್ಯ, ಅಹಿಂಸೆ,ಕರುಣೆ, ಶಾಂತಿ ಸಂದೇಶಗಳನ್ನು ಹೊತ್ತ ಸನಾತನ ಮೌಲ್ಯಗಳ ಅಧ್ನುತ ಪ್ರಸ್ತುತಿಯನ್ನು ಕಾಣಬಹುದು. ಭಗವಾನ್ ಸ್ವಾಮಿನಾರಾಯಣರ ಜೀವನ ಪ್ರಸಂಗಗಳ ಮೂಲಕ ಪ್ರತಿಪ್ರಸಂಗವೂ ಹೊಸತನ, ಹೊಸಾನುಭೂತಿಯನ್ನು, ಪ್ರೇರಣಾ ಸಂದೇಶವನ್ನು ಪದೆಯುತ್ತದೆ. ನೀಲಕಂಠ ದರ್ಶನ:
ಮಹಾಕಾಯ ಚಲನಚಿತ್ರ
[ಬದಲಾಯಿಸಿ]ಚಲನಚಿತ್ರ ಅತ್ಯಂತಸುಂದರ ದೃಶ್ಯಗಳನ್ನು ಒಳ್ಗೊಂಡಿದ್ದುಬಾಲ್ಯೋಗಿ ನೀಲಕಂಠ ಸ್ವಾಮಿಯವರ ಕಥೆಯನ್ನು ಬಿತ್ತರಿಸುತ್ತದೆ.ತಮ್ಮ ಬಾಲ್ಯದಲ್ಲಿ ಕೇವಲ ೭ ವರ್ಶದಲ್ಲೇ,ಬರಿಗಾಲಿನಲ್ಲಿ ೧೨ ಸಾವಿರ ಕಿ.ಮೀ ದೂರ ಭಾರತದುದ್ದಕ್ಕೂ ಪ್ರಯಾಣಿಸಿ ೮೫೬೫ ಅಡಿ ಚಲನಚಿತ್ರ,೧೯ ನೆಯ ಶತಮಾನದಭಾರತದದೃಷ್ಯ,೧೦೮ ಸ್ಥಾನಗಳಲ್ಲಿ ಚಿತ್ರೀಕರಣಗೊಂಡಿದೆ.೪೫ ಸಾವಿರ ಪಾತ್ರಗಳು ಸೇರಿವೆ.ಘಟನೆಗಳೆಲ್ಲಾ ನೈಜವಾದವುಗಳು.ತೀರ್ಥ ಸ್ಥಾನಗಳು, ಉತ್ಸವಗಳು, ಸಂಸ್ಕೃತಿ ಪರಂಪರೆಗಳು, ಪ್ರಸ್ತುತಿ.
ಬಿ.ಎ.ಪಿ.ಎಸ್.ಸಂಸ್ಥೆ, ಹಾಗೂ ಪ್ರಮುಖ ಸ್ವಾಮಿಮಹಾರಾಜರು
[ಬದಲಾಯಿಸಿ]ಭಗವಾನ್ ಸ್ವಾಮಿನಾರಾಯಣರ ಪರಂಪರೆಯಲ್ಲಿ ೫ ನೆಯ ಗುರುಗಳಾಗಿ 'ಪ್ರಮುಖ ಸ್ವಾಮಿ ಮಹರಾಜ್' ಒಬ್ಬ ಮೇಧಾವಿ ಮತ್ತುಯುಗಪುರುಷರು. ಅತ್ಯಂತ ಸರಳ ವ್ಯಕ್ತಿಯಾದ ಆದಿವಾಸಿಗಳಿಂದ ಹಿಡಿದು ಸಮಸ್ತ ಮಾನವಜಾತಿಯ ಅಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ನೈತಿಕ ಏಳಿಗೆಗಾಗಿ ತಮ್ಮ ತೊಡಗಿಸಿಕೊಂಡು ಸೇವೆಮಾಡುತ್ತಿದ್ದಾರೆ. ಸಂಸ್ಥೆಯ ಸೂತ್ರಧಾರಿಯಗಿಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಅಮೂಲ್ಯ ಯೋಗದಾನಮಾಡುತ್ತಿದ್ದಾರೆ. ಅತ್ಯಂತ ವಿನಮ್ರತೆ,ಸಹಜತೆ, ಭಗವತ್ಸಾಕ್ಷಾರಗಳಿಂದ ಅವರ ವ್ಯಕ್ತಿತ್ವ ಮೇರುಮಟ್ಟದಲ್ಲಿದೆ. ಸ್ವಾಮಿನಾರಾಯಣ ಸಂಸ್ಥೆ,ಸ್ವಾಮಿನಾರಾಯಣ ಅಕ್ಷರಧಾಮದ ನಿರ್ಮಾಣ ಮತ್ತು ಆಡಳಿತದ ಉತ್ತರದಾಯಿತ್ವವನ್ನು ನಿರ್ವಹಿಸಿಕೊಂಡು ಸಾಗುತ್ತಿದೆ. ಸಂಯುಕ್ತ ರಾಷ್ಟ್ರಸಂಘದ ದ್ವಾರ ಮಾನ್ಯತೆಯನ್ನು ಪಡೆದಿದೆ.ಅಂತಾರಾಷ್ಟ್ರೀಯ ಶಿಕ್ಷಾಸ್ವಾಸ್ಥ್ಯ, ಪರ್ಯಾವರಣ ಅಧ್ಯಾತ್ಮಿಕ, ನೈತಿಕ, ಸಾಂಸ್ಕೃತಿಕ,ಮತ್ತು ಅಧ್ಯಾತ್ಮಿಕ, ಮೊದಲಾದ ವಲಯಗಳಲ್ಲಿ ೧೬೦ ಕ್ಕೂ ಮಿಗಿಲಾದ ಮಾನವ ಸೇವೆಗಳಲ್ಲಿ ನಿರತವಾಗಿದೆ.
ಮಾರಾಟ ಕೇಂದ್ರ
[ಬದಲಾಯಿಸಿ]ಧಾರ್ಮಿಕ ಸಾಹಿತ್ಯ ಭಾರತದ ಎಲ್ಲಾ ಭಾಷೆಗಳಲ್ಲೂ ಲಭ್ಯವಿದೆ.ದ್ವನಿಮುದ್ರಿಕೆಗಳು, ವೀಡಿಯೊ ಪ್ರಕಾಶನ, ನೋಟದ ಕಾರ್ಡ್ ಗಳು, ಸ್ಮರಣಿಕೆಗಳು, ಸ್ಮೃತಿ ಚಿನ್ಹೆಗಳು, ಅಮೃತ ಹರ್ಬಲ್ ಕೇರ್ ಔಷಧಿಗಳು, ಮತ್ತು ಪೂಜಾಸಾಮಗ್ರಿಗಳು ಇತ್ಯಾದಿ ಖರೀದಿಗೆ ಲಭ್ಯವಿದೆ.
ಅಕ್ಷರ ಧಾಮ ತಲುಪಲು
[ಬದಲಾಯಿಸಿ]ಅಕ್ಷರ ಧಾಮವನ್ನು ಮುಟ್ಟಲು, ದೆಹಲಿಯ ಮೆಟ್ರೊ ಸೇವೆಯನ್ನು ಉಪಯೋಗಿಸಬಹುದು. ಕೀರ್ತಿನಗರ್ ಕಡೆಯಿಂದ ಮೆಟ್ರೋದಲ್ಲಿ ಪ್ರಯಾಣಿಸಿದರೆ-ಶಾದಿಪುರ್- ಪಟೇಲ್ ನಗರ್ -ರಾಜೇಂದ್ರ ಪ್ಲೇಸ್ -ಕರೋಲ್ ಬಾಗ್ -ಝಂಡೆವಾಲನ್ -ರಾಮಕೃಷ್ಣ ಆಶ್ರಮ್ -ರಾಜೀವ್ ಚೌಕ್ -ಬಾರಾಖಂಬ ರೋಡ್ -ಮಂಡಿ ಹೌಸ್ -ಪ್ರಗತಿ ಮೈದಾನ್ -ಯಮುನಾ ಬ್ಯಾಂಕ್ -ಅಕ್ಷರ್ ಧಾಮ್ ತಲುಪಬಹುದು. ('ರಾಜೀವ್ ಚೌಕ್' ನಿಂದ ಉತ್ತರಕ್ಕೆ ಪ್ರಯಾಣಿಸಿದರೆ, 'ನವಿ ದೆಹಲಿ' ಕೇವಲ ೨ ನೆಯ ಸ್ಟೇಷನ್) ಅಕ್ಷರಧಾಮವನ್ನು ಸಂದರ್ಶಿಸಲು ಸಮಯ :
- ಸೋಮವಾರದಿಂದ ರವಿವಾರದವರೆಗೆ, ಪ್ರಥಮ ಸಂದರ್ಶನದ ವೇಳೆ : ೯-೩೦ ಕ್ಕೆ, ಮತ್ತು ಕೊನೆಯ ಸಂದರ್ಶನದ ವೇಳೆ : ೬-೩೦ ಕ್ಕೆ. ಸೋಮವಾರ ವಿರಾಮ.
ಅಕ್ಷರ ಧಾಮವನ್ನು ಸ್ಪಷ್ಟವಾಗಿ ಗುರುತಿಸಲು,ಸಂಪರ್ಕಿಸಿ
[ಬದಲಾಯಿಸಿ]- [[೧]]
- 'ಅಕ್ಷರಧಾಮ'ದ ಮೇಲಿನ ಸುಂದರ ಚಿತ್ರಗಳನ್ನು 'ಇಂಗ್ಲೀಷ್ ವಿಕಿಪೀಡಿಯ'ದ ಸೌಜನ್ಯದಿಂದ ಪಡೆಯಲಾಗಿದೆ.