ವಿಷಯಕ್ಕೆ ಹೋಗು

ಸೂಜಿ ಚಿಕಿತ್ಸೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಕ್ಯುಪಂಕ್ಚರ್ ಇಂದ ಪುನರ್ನಿರ್ದೇಶಿತ)
'ಸೂಜಿ ಚಿಕಿತ್ಸೆಯ ಸೂಜಿ

ಸೂಜಿ ಚಿಕಿತ್ಸೆ (acupuncture) ಎಂದರೆ ಚೀನದಲ್ಲಿ ಪ್ರಚಲಿತವಿರುವ ಒಂದು ರೀತಿಯ ಚಿಕಿತ್ಸೆ. ಇದರಲ್ಲಿ ದೇಹದ ವಿವಿಧ ಕಡೆಗಳಲ್ಲಿ ಸೂಜಿ ಚುಚ್ಚಿ ರೋಗವನ್ನು ಗುಣಪಡಿಸಲಾಗುತ್ತದೆ.ಚೀನೀ ತತ್ವಜ್ಞಾನದ ಪ್ರಕಾರ ನಮ್ಮ ದೇಹದಲ್ಲಿ ನೋವು ಹಾಗೂ ಖಾಯಿಲೆಗಳು "ಯಿನ್" ಮತ್ತು "ಯಂಗ್" ಎಂಬ ಪ್ರಧಾನ ಬಲಗಳ ಅಸಮತೋಲನದಿಂದ ಬರುತ್ತದೆ. ಸೂಜಿ ಚಿಕಿತ್ಸೆ ಇದನ್ನು ಸಮತೋಲನಗೊಳಿಸುತ್ತದೆ.ಹಲವು ಜೀನೀಯರ ಪ್ರಕಾರ ನಮ್ಮ ದೇಹದಲ್ಲಿ ೧೨ ಜತೆಯಾದ ಹಾಗೂ ೨ ಸ್ವತಂತ್ರ ರೇಖೆಗಳಲ್ಲಿ ಜೀವ ಸೆಲೆ ಹರಿಯುತ್ತಿದ್ದು ಈ ರೇಖೆಗಳ ನಿರ್ಧಿಷ್ಟ ಬಿಂದುಗಳಲ್ಲಿ ಸೂಜಿ ಚುಚ್ಚುವುದರಿಂದ ರೋಗ ನಿವಾರಣೆ ಸಾದ್ಯ.[]

ಸೂಜಿ ಚಿಕಿತ್ಸೆ

ಸೂಜಿ ಚಿಕಿತ್ಸೆಯ ಉಪಯೋಗಗಳು

[ಬದಲಾಯಿಸಿ]

ಸೂಜಿ ಚಿಕಿತ್ಸೆಯನ್ನು ಗಂಟುನೋವು, ಅಸ್ತಮಾ, ಮೈಗ್ರೇನ್, ಕೆಲವು ಕಣ್ಣಿನ ತೊಂದರೆ, ಮನೋವ್ಯಾಧಿ ಮುಂತಾದವುಗಳ ಉಪಶಮನಕ್ಕೆ ಬಳಸುತ್ತಾರೆ. ಇತ್ತೀಚೆಗೆ ಚೀನೀ ವೈದ್ಯರುಗಳು ಇದನ್ನು ಪ್ರಮುಖ ಶಸ್ತ್ರಚಿಕಿತ್ಸೆಗಳ ಸಂದರ್ಭದಲ್ಲೂ ಬಳಸುತ್ತಾರೆ.

ವೈಜ್ಞಾನಿಕ ವಿವರಣೆ

[ಬದಲಾಯಿಸಿ]

ವೈಜ್ಞಾನಿಕ ವಿಶ್ಲೇಷಣೆಗಳ ಪ್ರಕಾರ ಹಲವು ಸಂದರ್ಭಗಳಲ್ಲಿ ಸೂಜಿ ಚಿಕಿತ್ಸೆಯು ಪರಿಣಾಮಕಾರಿ ಎಂದು ಕಂಡುಬಂದಿದೆ. ಇದರ ಪರಿಣಾಮಕಾರಿತ್ವ ಬಗ್ಗೆ ವಿಜ್ಞಾನಿಗಳು ಕೆಲವು ಸಿದ್ಧಾಂತಗಳನ್ನು ಮುಂದಿಡುತ್ತಾರೆ.ಒಂದು ಸಿದ್ದಾಂತದ ಪ್ರಕಾರ ಜೀವಸೆಲೆ ಹಾಗೂ ರೇಖೆಗಳು ನಿಜವಾಗಿಯೂ ಇದ್ದು,ಸೂಜಿ ಚಿಕಿತ್ಸೆಯು ಈ ರೇಖೆಗಳಲ್ಲಿ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ.ಇನ್ನೊಂದು ಸಿದ್ಧಾಂತವು ಸೂಜಿಚಿಕಿತ್ಸೆಯು ಮೆದುಳಿನಲ್ಲಿ 'ಎಂಡಾರ್ಫಿನ್' ಎಂಬ ನೋವು ನಿವಾರಕದ ಉತ್ಪತ್ತಿಯನ್ನು ಹೆಚ್ಚಿಸುತ್ತದೆ.ಕೊನೆಯದಾಗಿ ಇನ್ನೂ ಕೆಲವು ವಿಜ್ಞಾನಿಗಳು ಸೂಜಿಚಿಕಿತ್ಸೆಯು ನರವ್ಯೂಹದ ಮೂಲಕ ಸಾಗುವ ನೋವಿನ ಅನುಭವದ ಸಂಕೇತಗಳನ್ನು ತಡೆಯುವುದರ ಮೂಲಕ ಕೆಲಸ ಮಾಡುತ್ತದೆ ಎಂದು ವಾದಿಸುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. "ಸೂಜಿ ಚಿಕಿತ್ಸೆ ಎಷ್ಟು ಪರಿಣಾಮಕಾರಿ?". kannada.boldsky.coml. Retrieved 15 May 2017.