ಅಂತರ್ಜಾಲ ಸೇವಾ ಸಂಸ್ಥೆಗಳು

ವಿಕಿಪೀಡಿಯ ಇಂದ
Jump to navigation Jump to search

ಜನಸಾಮಾನ್ಯರಿಗೆ ಮತ್ತು ಉದ್ಯಮ/ವ್ಯವಹಾರ ಬಳಕೆಗೆ ಸೂಕ್ತವಾದ ವಿವಿಧ ಅಂರ್ತಜಾಲ ಸೇವೆಗಳನ್ನು ನೀಡುವುದು, ಅಂತರ್ಜಾಲ ಸೇವಾ ಸಂಸ್ಥೆಗಳ ಪ್ರಮುಖ ಉದ್ದೇಶವಾಗಿದೆ. ಭಾರತ ಸರ್ಕಾರವು ೧೯೯೬-೯೮ರಲ್ಲಿ ಭಾರತದಲ್ಲಿ ಖಾಸಗಿ ಸಂಸ್ಥೆಗಳು ಇ-ಅಂಚೆ ಸೇವೆಯನ್ನು ನೀಡಲು ಅನುಮತಿ ನೀಡಿತು. ಹೀಗೆ ಅನುಮತಿ ಪಡೆದ ಮೊದಲ ಸಂಸ್ಥೆಗಳಲ್ಲಿ ಬೆಂಗಳೂರಿನ ಮಣಿಪಾಲ್ ಕಂಟ್ರೋಲ್ ಡಾಟಾ ಸಂಸ್ಥೆಯಿರುವುದು ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗಿದೆ. ನಂತರದ ದಿನಗಳಲ್ಲಿ ಆಸಕ್ತ ಖಾಸಗಿ ಸಂಸ್ಥೆಗಳು ಅಂತರ್ಜಾಲ ಸೇವೆಗಳನ್ನು ನೀಡುವ ಅನುಮತಿ ನೀಡಲಾಯಿತು. ದೇಶಾದಂತ್ಯ ಅಂತರ್ಜಾಲ ಸೇವೆಗಳನ್ನು ನೀಡುವ ಅನುಮತಿ ಪಡೆದಿರುವ ಖಾಸಗಿ ಸಂಸ್ಥೆಗಳನ್ನು "A" ದರ್ಜೆಯ ಅಂರ್ತಜಾಲ ಸೇವಾ ಸಂಸ್ಥೆಯಂದು ಕರೆಯಲಾಗುತ್ತದೆ. ರಾಜ್ಯ ಅಥವಾ ವಲಯ ಮಟ್ಟದಲ್ಲಿ ಅಂರ್ತಜಾಲ ಸೇವೆ ನೀಡುವ ಖಾಸಗಿ ಸಂಸ್ಥೆಗಳನ್ನು "B" ದರ್ಜೆಯ ಅಂರ್ತಜಾಲ ಸೇವಾ ಸಂಸ್ಥಯಂದು ಕರೆಯಲಾಗುತ್ತದೆ. ಕೆಲವು ನಗರಗಳಿಗೆ ಸೀಮಿತವಾದ ಅಂರ್ತಜಾಲ ಸೇವೆ ನೀಡುವ ಸಂಸ್ಥಗಳನ್ನು "C" ದರ್ಜೆಯ ಅಂರ್ತಜಾಲ ಸೇವಾ ಸಂಸ್ಥಯಂದು ಕರೆಯಲಾಗುತ್ತದೆ.