ಊದುಗೊಳವೆ
ಊದುಗೊಳವೆ ಪದವು ಹಲವಾರು ಕಾರ್ಯಮಾಧ್ಯಮಗಳಲ್ಲಿ ಯಾವುದಾದರ ಒಳಗೆ ಅನಿಲಗಳ ಪ್ರವಾಹವನ್ನು ಗುರಿಯಿಡಲು ಬಳಸಲಾದ ಹಲವಾರು ಪರಿಕರಗಳನ್ನು ಸೂಚಿಸುತ್ತದೆ.ಅವುಗಳನ್ನು ಬೆಂಕಿಯನ್ನು ಆರಂಭಿಸಲು ಮತ್ತು ಉರಿಹೆಚ್ಚಿಸಲು ಬಳಸಲಾಗುತ್ತದೆ.ಊದುಗೊಳವೆಗಳು ಮುಖ್ಯವಾಗಿ ಕಟ್ಟಿಗೆ ಉರಿಯನ್ನು ಹೆಚ್ಚಿಸಲು ಆಮ್ಲಜನಕವನ್ನು ಗುರಿಯಿಡಲು ಬಳಸಲಾಗುವ ನೆಟ್ಟನೆಯ, ಕೊಳವೆಯಂತಹ ಪರಿಕರಗಳು. ಊದುಗೊಳವೆಗಳು ನೂರಾರು ವರ್ಷಗಳಿಂದ ಬಳಕೆಯಲ್ಲಿವೆ.ಗಾಳಿಯ ಪ್ರವಾಹ ಅಥವಾ ಬುಗ್ಗೆಯನ್ನು ಜ್ವಾಲೆಯಲ್ಲಿ ಗುರಿಯಿಟ್ಟಾಗ, ಇಂಧನ ಗಾಳಿ ಮಿಶ್ರಣ ವರ್ಧಿಸುತ್ತದೆ ಮತ್ತು ಜ್ವಾಲೆಯ ಹೊರಬರುವ ಬುಗ್ಗೆ ತೀವ್ರವಾಗಿ ಬಿಸಿಯಿರುತ್ತದೆ. ಆಭರಣಕಾರರು ಮತ್ತು ದೀಪಗೆಲಸದಲ್ಲಿ ತೊಡಗಿರುವ ಗಾಜೂದುಗರು ಪ್ರಾಚೀನ ಕಾಲದಿಂದಲೂ ಉದುಗೊಳವೆಯನ್ನು ಬಳಸಿದ್ದಾರೆ, ಮತ್ತು ಇದರಲ್ಲಿ ಬಿರುಸಾದ ಗಾಳಿ ಬಳಕೆದಾರನ ಶ್ವಾಸಕೋಶಗಳಿಂದ ಚಾಲಿತವಾಗಿರುತ್ತದೆ. ಸಣ್ಣಕೆಲಸಕ್ಕಾಗಿ, ಮೋಂಬತ್ತಿ ಜ್ವಾಲೆಗಳು ಅಥವಾ ಮದ್ಯಸಾರ ದೀಪಗಳೊಂದಿಗೆ ಬಾಯಿಯಿಂದ ಊದಲಾದ ಊದುಗೊಳವೆಗಳನ್ನು ಬಳಸಬಹುದು.[೧] ರಸಾಯನಶಾಸ್ತ್ರ ಮತ್ತು ಖನಿಜಶಾಸ್ತ್ರದಲ್ಲಿ ಸುಮಾರು ೧೭೩೮ರಿಂದ ಊದುಗೊಳವೆಗಳನ್ನು ಸಣ್ಣ ನಮೂನೆಗಳ ವಿಶ್ಲೇಷಣೆಗೆ ವೈಜ್ಞಾನಿಕ ಪರಿಕರಗಳನ್ನಾಗಿ ಬಳಸಲಾಗಿದೆ.[೨][೩]
ಉಲ್ಲೇಖಗಳು
[ಬದಲಾಯಿಸಿ]