ವಿಷಯಕ್ಕೆ ಹೋಗು

ಭಾರತೀಯ ಪ್ರಾಚೀನ ಲಿಪಿಶಾಸ್ತ್ರದಲ್ಲಿ ಕನ್ನಡ ಮತ್ತು ತೆಲುಗು ಲಿಪಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೯೧ ನೇ ಸಾಲು: ೯೧ ನೇ ಸಾಲು:


==ಹೊರಗಿನ ಕೊಂಡಿಗಳು==
==ಹೊರಗಿನ ಕೊಂಡಿಗಳು==
<ref>https://en.wikipedia.org/wiki/Telugu-Kannada_alphabet
[[https://en.wikipedia.org/wiki/Telugu-Kannada_alphabet]]
[[https://en.wikipedia.org/wiki/Kannada_alphabet]]
[[https://en.wikipedia.org/wiki/Kannada_alphabet]]
<ref>https://en.wikipedia.org/wiki/Kadamba_alphabet
[[https://en.wikipedia.org/wiki/Kadamba_alphabet]]
<ref>http://www.differencebetween.com/difference-between-kannada-and-vs-telugu/
[[http://www.differencebetween.com/difference-between-kannada-and-vs-telugu/]]
http://www.classicalkannada.org/DataBase/KannwordHTMLS/CLASSICAL%20KANNADA%20LANGUAGE%20HTML/KANNADA%20AND%20TELUGU.htm
[[http://www.classicalkannada.org/DataBase/KannwordHTMLS/CLASSICAL%20KANNADA%20LANGUAGE%20HTML/KANNADA%20AND%20TELUGU.htm]]

೧೬:೫೨, ೫ ಫೆಬ್ರವರಿ ೨೦೧೪ ನಂತೆ ಪರಿಷ್ಕರಣೆ

You must add a |reason= parameter to this Cleanup template - replace it with {{Cleanup|reason=<Fill reason here>}}, or remove the Cleanup template.

ಬರವಣಿಗೆಯ ಮೂಲ ಮತ್ತು ಪ್ರಾಚೀನತೆ: ಪ್ರಪಂಚದ ಪಾಚೀನ ಸಂಸ್ಕ್ರುತಿಗಳಲ್ಲಿ ಲಿಪಿಯು ಪವಿತ್ರವಾದುದು.ಥಾತ್,ಐಸಿಸ್,ಮೋಸೆಸ್ ಹರ್ಮಿಸ್ ಇತ್ಯಾದಿ ದೇವತೆಗಳಿಂದ ನಿರ್ಮಿತವಾಯಿತು ಎಂದು ಈಜಿಪ್ಟಿಯನ್,ಬ್ಯಾಬಿಲೋನಿಯನ್ ,ಹೀಬ್ರು, ಗ್ರೀಕ್ ಜನರು ಭಾವಿಸುತ್ತ್ತ್ತ್ತಿದ್ದ್ದ್ದ್ದರು.ಈಜಿಪ್ಟ್,ಮೆಸೊಪೊತಟೇಮಿಯ,ಚೀನ ದೇಶಗಳ"ಅನಕ್ಷರಮಾಲಾ"ರೂಪವಾದ ಬರವಣಿಗೆಗಳು ಪ್ರಪಂಚದ ವಿವಿಧ ಭಾಗಗಳಲ್ಲಿ ಸ್ವತಂತ್ರವಾಗಿ ಆದರೆ ಮಾನವನ ಒಂದೇ ರೀತಿಯ ಫಲವಾಗಿ ಉದ್ಭವಿಸಿದವು. ಬರವಣಿಗೆಯಲ್ಲಿ ಮೂರು ವಿಧ:

  • ಬೀಜರೂಪವಾದ ಬರವಣಿಗೆ (ಚಿಹ್ನೆಗಳು,ಸಂಕೇತಗಳು,ಗುರುತುಗಳು,ವೃತ ರೇಖೆಗಳು ಮುಂತಾದವು)
  • ವಿಗ್ರಹರೂಪ ಮತ್ತು ತಾಂತ್ರಿಕ ಬರವಣಿಗೆಗಳು(ಗುಹೆ,ಕಲ್ಲುಬಂಡೆಗಳಲ್ಲಿ ಕಂಡು ಬರುವವು)
  • ಸ್ಮರಣೆಗೆ ಸಹಾಯಕವಾದ ಉಪಾಯಗಳು,ಪ್ರಪಂಚದ ನಾನಾ ಭಾಗಗಳಲ್ಲಿ ಪ್ರಚಾರದಲ್ಲಿರುವ ಅಕ್ಷರಮಾಲೆ ಮುಂತಾದವು.

ಭಾರತದಲ್ಲಿ ಬರವಣಿಯ ಪ್ರಾಚೀನತೆ

ಭಾರತದ ಲಿಪಿಗಳೆಲ್ಲ ಮೂಲವಾದ ಬ್ರಾಹ್ಮೀ ಮತ್ತು ಖರೋಷ್ಟಿ ಲಿಪಿಗಳೆರಡಕ್ಕೂ ಪೀನೀಷಿಯನ್ ಅಥವಾ ಅರೇಮಿಕ್ ಎಂಬ ಸೆಮಿಟೆಕ್ಕ್ ಲಿಪಿಗಳೆ ಕಾರಣವಾಗಿದೆ.

ಕನ್ನಡಮತ್ತು ತೆಲುಗು ಲಿಪಿಗಳು

ದಕ್ಷಿಣ ಬ್ರಾಹ್ಮೀ ಲಿಪಯಿಂದ ಹುಟ್ಟಿದ ಅಕ್ಷರಗಳನ್ನು ಶಾತವಾಹನ ಸಮ್ರಾಜ್ಯದಲ್ಲೆಲ್ಲ ಕ್ರಿ.ಶ.ನಾಲ್ಕನೆಯ ಶತಾಬ್ದದವರೆಗೆ ಕಾಣಬಹುದು.ಅನಂತರ ತೆಲುಗು ದೇಶದಲ್ಲಿ ಅಮರಾವತಿ ನಾಗರ್ಜುನಕೊಂಡ ಇತ್ಯಾದಿ ಭಾಗಗಳಲ್ಲಿ ಇಕ್ಷ್ವಾಕುವಂಶದವರೂ ಕರ್ಣಾಟಕದಲ್ಲಿ ಕೊಲ್ಹಾಪುರ ಬನವಾಸಿ ಚಂದ್ರವಳ್ಳಿಗಳಲ್ಲಿ ಆಳುತ್ತಿದ್ದ ಚೂಟುವಂಸಶದವರೂ ಪಲ್ಲವರೂ ಕದಂಬರೂ ನಾಲ್ಕನೆಯ ಶತಾಬ್ದದ ಅಂತ್ಯದವೆರೆಗೆ ಒಂದೆ ರೀತಿಯಾದ ಬ್ರಾಹ್ಮೀ ಅಕ್ಷರಗಳನ್ನು ಉಪಯೋಗಿಸುತ್ತಿದ್ದರು.ಬನವಾಸಿಯ ನಾಗರ ಕಲ್ಲಿನ ಶಾಸನ(ಸುಮಾರು ಕ್ರಿ.ಶ.ಮೂರನೆಯ ಶತಮಾನ)ಮಳ್ಳವಳ್ಳಿ ಮತ್ತು ಚಂದ್ರವಳ್ಳಿ ಶಾಸನಗಳು ದಾಕ್ಷಿಣಾತ್ಯಾ ಗುಹಾಲಿಪಿಯನ್ನು ಅನುಸರಿಸಿವೆ.ಕಾಕುತ್ಥ್ಸ ವರ್ಮನ ಹಲ್ಮಿಡಿಶಾಸನ ಮತ್ತು ತಾಳಗುಂದ ಲಿಪಿಭೇದಗಳನ್ನು ತೋರಿಸುವುವು.ಹಲ್ಮಿಡಿ ಕನ್ನಡ ಶಾಸನವು ಕಾಕುತ್ಥ್ಸವರ್ಮನ ಮಗನಾದ ಶಾಂತಿವರ್ಮನ ಹೆಸರನ್ನು ಹೇಳದೆ ಮೊಮ್ಮಗನಾದ ಮೃಗೇಶನ ಹೆಸರನ್ನು ಹೇಳುವುದು.ತಾಳಗುಂದ ಶಾಸನವನ್ನು ಶಾಂತಿವರ್ಮನು ಕಲ್ಲಿನ ಮೇಲೆ ಬರೆಯಿಸಿದನು.ತಾಳಗುಂದದ ಅಕ್ಷರಗಳು ದಾಕ್ಷಿಣಾತ್ಯ ಬ್ರಾಹ್ಮಿಯ ಪೇಟಕಾ ಶಿರ(box-headed)ಆಕಾರವಾಗಿವೆ.ಇದರಕಾಲ ಕ್ರಿ.ಶ.೪೫೫-೭೦ ಎಂದು ಭಾವಿಸಲಾಗಿದೆ.ಇದರ ಅನಂತರ ಬರೆಯಿಸಿದ ಹಲ್ಮಿಡಿ ಶಾಸನದಲ್ಲಿ ಪೇಟಕಾಶಿರ ಹೆಚ್ಚ್ಚ್ಚಾಗಿ ಕಂಡುಬರುವುದಿಲ್ಲ.ಇದೇಕಾಲದ ಪರುವಿ ಶಾಖೆಯ ಇಮ್ಮಡಿಮಾಧವನ ಪೆನುಕೊಂಡ ಶಾಸನಕ್ಷರಗಳಲ್ಲೂ ಪೇಟಕಾಶಿರವಿಲ್ಲ.

ಪಲ್ಲವರು ಕರ್ಣಾಟಕದ ಸಾಡಾಹನಿಹಾರ(ಶಾತವಾಹನ ರಾಷ್ಟ್ರ-ಬಳ್ಳಾರಿ ಧಾರವಾಡ)ದಿಂದ ಕಂಚಿಗೆ ಹೋದಾಗ ಈ ಲಿಪಿಯನ್ನೇ ತೆಗೆದುಕೊಂಡುಹೋಗಿ ಆಂಧ್ರ ತಮಿಳು ದೇಶಗಳಲ್ಲಿ ತಮ್ಮ ಪ್ರಾಕೃತ ಶಾಸನಗಳಿಂದ ಪ್ರಚಾರಮಾಡಿದರು.ಬನವಾಸಿಗೂ ಇಕ್ಷ್ವಾಕು ರಾಜಾಧಾನಿ ಮತ್ತು ಕಂಚಿಗೂ ಸಂಬಂಧವಿದ್ದಿತೆಂದು ನಾಗರ್ಜುನಕೊಂಡ ಮತ್ತು ಕದಂಬ ಶಾಸನಗಳಿಂದ ತಿಳಿದುಬರುತ್ತದೆ.ಶ್ರವಣಬೆಳಗೊಳವೂ ನಾನಾಭಾಗಗಳಿಂದ ಯಾತ್ರಿಕರನ್ನು ಆಕರ್ಷಿಸುತ್ತಿದ್ದಿತ್ತು.ಆದುದರಿಂದ ಕನ್ನಡನಾಡಿನ ಲಿಪಿಯೇ ದಕ್ಷಿಣಭಾರತದಲ್ಲೆಲ್ಲ ಪ್ರಚಾರವಾಗಿತ್ತು.ಹಲ್ಮಿಡಿ.ಶ್ರವಣಬೆಳಗೊಳ ಶಾಸನಗಳಲ್ಲಿ ಕಂಡುಬರುವ ಪೂರ್ವದ ಹಳಗನ್ನಡ ಭಾಷೆಗೆ ದಕ್ಷಿಣದಲ್ಲಿ ಬೆಳೆದ ಬ್ರಾಹ್ಮೀ ಪ್ರಭೇದವನ್ನು ಉಪಯೋಗಿಸುತ್ತಿದ್ದರು.ಪಲ್ಲವ ಗ್ರಂಥಲಿಪಿ ಕ್ರಿ.ಶ.ಆರನೆಯ ಶತಾಬ್ದದಿಂದ ಬೇರೆಯಾದಾಗ ಕನ್ನಡ-ತೆಲುಗು ರಾಜ್ಯದಲ್ಲಿ ಏಕರೂಪವಾದ ಲಿಪಿ ಕಂಡುಬರುತ್ತದೆ.ಅಜಂತದಲ್ಲಿನ ವಾಕಟಕ ಮತ್ತು ತ್ರೈಕೂಟಕ ಶಾಸನಗಳೂ ಕಳಿಂಗ ಗಂಗರ ಶಾಸನ ಲಿಪಿಗಳನ್ನು ಹೋಲುತ್ತವೆ. ಒಂದನೆಯ ಪುಲಕೇಸಿಯ ಬಾದಾಮಿ ಶಾಸನ ಆರನೆಯ ಶತಮಾನದ ಮಧ್ಯಕಾಲೀನ ಲಿಪಿಗೆ ಉದಾಹರಣೆಯಾಗಿದೆ.ಏಳನೆಯ ಶತಮಾನದ ಆಧಿಭಾಗದಲ್ಲಿ ಮಂಗಳೀಶನ ಬಾದಾಮಿ ಮತ್ತು ಮಹಾಕೂಟ ಶಾಸನಗಳು ಇಮ್ಮಡಿ ಪುಲಿಕೇಶಿಯ ಐಹೊಳೆ ಶಾಸನ ಸ್ಪಷ್ಟವಾಗಿ ಕನ್ನಡ-ತೆಲುಗು ಅಕ್ಷರಗಳನ್ನು ತೋರುತ್ತವೆ.

ನೃಪತುಂಗನಿಗೆ(೬ನೆಯ ಶತಮಾನ)ಹಿಂದಿನ ಪೂರ್ವದ ಹಳಗನ್ನಡ ಹಳೆಯ ತೆಲುಗು ಶಾಸನಗಳಲ್ಲಿ ಕಂಡುಬರುವ ಬ್ರಾಹ್ಮೀಜನ್ಯ ಲಿಪಿಯ ಗುಣಿತಾಕ್ಷರ ಸಂಯುಕ್ತಾಕ್ಷರಗಳ ಸ್ವರೂಪವನ್ನು ಗುರುತಿಸಬಹುದು.

೧.ಪ್ರಾಚೀನ ಹಳಗನ್ನಡ ಲಿಪಿಯ ಅಕ್ಷರಗಳಿಗೆ ತಲೆಕಟ್ಟು ಇಲ್ಲ.

೨.ಈಚೀಚೆಗೆ ಅಕ್ಷರಗಳ ಮೇಲಕ್ಕೆ ಸಣ್ಣ ಅಡ್ಡಗೀಟು ಕಾಣುತ್ತದೆ.

೩.ಅನುಸ್ವಾರವನ್ನು ಪ್ರಾಯಕವಾಗಿ(ಪರಸವರ್ಣ)ಅನುನಾಸಿಕ ಸಹಿತ ಬರೆಯುತ್ತಿದ್ದರು.

೪.ಅನುಸ್ವಾರವನ್ನು ಅಕ್ಷರದ ಮೇಲೆ ಚುಕ್ಕೆಯಿಂದ ಗುರುತಿಸುತ್ತಿದ್ದರು.

೫.ಸಜಾತೀಯ ಸಂಯುಕ್ತಾಕ್ಷರಗಳನ್ನು ದ್ವಿತ್ವಾದೇಶವಾಗಿ ಬರೆಯುತ್ತಿದ್ದರು.

೬.ರೇಫ ಸಂಯುಕ್ತಾಕ್ಷರಗಳನ್ನು ಬರೆಯುವಾಗ ಅರ್ಕಾವತ್ತನ್ನು ಅಕ್ಷರದ ಮೇಲೆ ತೋರಿಸುತ್ತಿದ್ದರು.

೭.ಜಿಹ್ವಾಮೂಲೀಯಕ್ಕೆ ವಜ್ರಾಕೃತಿ(,X ಕ,Xಪ)ಉಪಾಧ್ಮಾನೀಯಕ್ಕೆ ಗಜಕುಮ್ಭಾಕೃತಿ(೦೦ ಕ,೦೦ ಫ)ಚಿಹ್ನೆಗಳನ್ನು ಉಪಯೋಗಿಸುತ್ತಿದ್ದರು.

೮.ಪೂರ್ವದ ಹಳಗನ್ನಡ-ತೆಲುಗಿನಲ್ಲಿ ಸಾಮಾನ್ಯವಾಗಿದ್ದ ಅಕ್ಷರಗಳನ್ನು ಈಗ ಒತ್ತಕ್ಷರಗಳಲ್ಲಿ ನೋಡಬಹುದು.

೯.ಕೆಲವು ಅಕ್ಷರ ಮತ್ತು ಒತ್ತುಗಳು ಹಿಂದೆ ಕನ್ನಡ-ತೆಲುಗಿಗೆ ಸಮಾನವಾಗಿದ್ದರೂ ೧೪ನೆಯ ಶತಾಬ್ದದಿಂದ ಬೇರೆಯಾಗಿ ಕಂಡು ಬರುತ್ತವೆ.

೧೦.ಸಂಸ್ಕ್ರುತಗಳಲ್ಲಿಲ್ಲದ ಕೆಲವು ಅಕ್ಷರಗಳಿಗೆ ಬೇರೆ ಸಂಜ್ಞೆಗಳಿವೆ. (ಹ್ರಸ್ವ ಎ,ಹ್ರಸ್ವ ಒ,ಕುಳ ,ಕ್ಷಳ) ಹಿಂದೆ ವರ್ಣಸುಮಾಮ್ನಾಯವನ್ನು ಹೇಲೆಕೊಡುವಾಗ ಹ ಆದ ಮೇಲೆ ಳ ಕ್ಷ ಜ್ಞ ಎಂದು ಹೇಳಿಕೊಡುತ್ತಿದ್ದರು.ಎಂದರೆ ಕುಳ ಕ್ಷ ಳ ಎಂಬುದರಿಂದ ವರ್ಣಸುಮಾಮ್ನಾಯವು ಪೂರ್ತಿಯಯಿತು.ಹರಿಹರ ಕೇಶಿ ರಾಜರು ಶಕಟರೇಫದ ವಿಷಯವಾಗಿ ಭೇಧ ಲಿಪಿಭೇಧಗಳನ್ನು ಸೂಚಿಸುವರು. ಕೇಶಿ ರಾಜನು "ವಿವಿಧಾಕಾರಂ. ಲಿಪಿಭೇಧ ವೃತ್ತಿಯಿಂ ಚಾಕ್ಷುಷಂ ಪುರಾತನ ನುತಿದಿಂ" ಎಂದು ಚಾಕ್ಷುಷ ಮತವನ್ನು ಹೇಳುವನು . ತಾಂತ್ರಿಕ ಸಂಬಂಧವಾದ ಚಾಕ್ಷುಷೀದೀಕ್ಷೆ ಗೆ ಯಾವ ಸಂಬಂಧವೂ ಇಲ್ಲವೆಂದು ಕಂಡುಬರುತ್ತದೆ.ಧ್ವನಿಯಲ್ಲಿ ಏಕಾಕಾರವಾಗಿದ್ದರೂ ಕಣ್ಣಿಗೆ ಕಾಣಿಸುವ ಲಿಪಿಭೇಧದಿಂದ ಚಾಕ್ಷುಷ ವಿವಿಧಾಕಾರವಾಗಿದ್ದನೆಂದು ಹೇಳುವನು.

ಆಂಧ್ರ ಶಬ್ದ ಚಿನ್ತಾಮಣಿಯಲ್ಲಿ ಅಕ್ಷರಗಳ ಆಕಾರ ವಿಷಯವಾಗಿ ಕೆಲವು ಶ್ಲೋಕಗಳಿವೆ.

ಬಾಲೇಂದು ಪರಧಿ ಶೃಂಗಾವರ್ತಕುಶಗ್ರಂಥಿ ದಾತೃ ಪರಶು

                                                        ಸಮಾಃ

ಆದ್ಯಾಃ,ಇಭಕರತುಲಾಸ್ತದ್ದೀರ್ಘಾಃ ಶೂಲಸನ್ನಿ ಭಾವನೌ

ದರಶಾರ್ಙ್ಗಪಿಪ್ಪಲದಲಾಂಕುಶ ಪನ್ನಗಸನ್ನಿಭಾಃ ಕ್ರಮಾತ್

                                                       ಫರುಷಾಃ  

ಸ್ತಂಭಾವಿಲೇಖಾಧಿಕ್ಸೈಸ್ತವಿರ್ಗ ದ್ವಿತೀಯ ವರ್ಣಾದ್ಯಾಃ

ತೀರ ತರಿ ಹಸ್ತಿ ಮಸ್ತಕ ಶುಕ್ತಿತುಲಾಸನವಿತರ್ದಿಸೀರಸಯಾಃ

ಅಂತಸ್ಥಾಶ್ಚೋಷ್ಮಾಣಾ ದನ್ತ್ಯಾ ಚಔ ಗುರುರಲೌಚಬಿಂದು.

ಬಾಲೇಂದು-ಅ,ಪರಧಿ-ಇ,ಶೃಂಗ-ಉ,ಆವರ್ತ-ಋ,ಕುಶಗ್ರಂಥಿ-ಙ ,ದಾತೃ-ಎ,ಪರಶು-ಓ;ಇವುಗಳು ದೀರ್ಘಆನೆಯ ಸೊಂಡಲಿನಂತೆ;ದರ-ಕ,ಶಾರ್ಙ್ಗ-ಚ,ಪಿಪ್ಪಲದಲ-ಟ,ಅಂಕುಶ-ತ,ಪನ್ನಗ-ಪ;ಇವುಗಳಿಗೆ ಸ್ತಂಭವನ್ನು ಬರೆದರೆ ದ್ವೀತಿಯ ವರ್ಣಗಳಾಗುವವು.ತೀರ-ಯ,ತರಿ(ದೋಣಿ)-ರ,ಹಸ್ತಿಮಸ್ತಕ-ಲ,ಶುಕ್ತಿ-ವ,ತುಲಾಸನ-ಶ,ವಿತರ್ದಿ-ಷ,ಸೀರ-ಸ.

ನನ್ನಯಭಟ್ಟನೇ ಹನ್ನೊಂದನೆಯ ಶತಾಬ್ದದಲ್ಲಿ ಆಂಧ್ರ ಶಬ್ದ ಚಿನ್ತಾಮಣಿಯನ್ನು ಬರೆದನೆಂದು ಪ್ರತೀತಿಯಿದ್ದರೂ ೧೬ನಯ ಶತಾಬ್ದದ ಗ್ರಂಥವೆಂದು ಕಂಡುಬರುವುದು.ಮೇಲೆ ಹೇಳಿದ ಅಕ್ಷರಾಕಾರಗಳು ಮತ್ತು ಆಧುನಿಕವಾದುದರಿಂದ ಈಚೆಗೆ ಆ ಗ್ರಂಥದಲ್ಲಿ ಸೇರಿಸಲ್ಪಟ್ಟಿರಬೇಕು.ಇದು ೧೧ನಯ ಶತಾಬ್ದದ ಕನ್ನಡ-ತೆಲುಗು ಲಿಪಿಯಗಲಾರದು.

ಪಂಚವರ್ಗಾದಯೋವರ್ಣಾ ಶಂಖ(ಅ)ಶಂರ್ಗಾದಿ(ಗ)

                                                                 ಸನ್ನಿಭಾಃ

ತಿಯಗ್ರೇಖಾಯುಜಶ್ಚೋರ್ಧ್ವಂ ದಂಡರೇಖಾನ್ವಿತಾ ಅಧಃ

ತಯೇವಚ ದ್ವಿತೀಯಸ್ಸ್ಯುಃ ತೃತೀಯಾಂತೇ ಚತುರ್ಥಕಃ

ರೇಖಾದವಯಾಧೋದಣ್ಡೇನ ಯುಕ್ತಾಸ್ಯುರನುನಾಸಿಕಾಃ

ಮಿಳದ್ದಣ್ಡದ್ವಯೋಪೇತಃ ಪ್ರಥಮಾ ಪ ಯ ಸ್ಮೃತಾಃ

ಪೂರ್ಣೇಂದು ಸದೃಶಃ ಪೂರ್ಣಃ ತ್ವರ್ದಃ ತ್ವರ್ಥೇಂದು ಸನ್ನಿಭಾಃ||

                                                          (ಅಥರ್ವಣ)

ಇಂತಹ ಅಕ್ಷರ ವರ್ಣನೆಗಳಿಂದ ಪ್ರಚೀನ ಲಿಪಿ ಸ್ವರೂಪವನ್ನು ನಿರ್ದರಿಸುವುದು ಕಷ್ಟ.ಸುಮಾರು ೭-೮ನೆಯ ಶತಾಬ್ದದವೆರೆಗೆ ಫ್ಳೀಟ್ ನಿರ್ಧರಿಸಿದಂತೆ ಶಿಲಾಶಾಸನಗಳನ್ನೆ ತೆಗೆದುಕೊಂಡರೂ ಪ್ರಾಂತಿಕ ವಿಭಾಗಗಳು ಕಂಡುಬರುವವು.ಕೆಲವಕ್ಷರಗಳನ್ನು ಆಧಾರವಗಿ ತೆಗೆದುಕೊಂಡು ಫ್ಳೀಟ್ ತಲಕಾಡು ಗಂಗರ ಪ್ರಾಚೀನ ಶಸನಗಳೆಲ್ಲ ಕೂಟ ಶಾಸನಗಳೆಂದು ತೀರ್ಮನಿಸಿಬಿಟ್ಟನು.ಅತ್ಯಂತ ಪ್ರಾಚೀನ ರೂಪಗಳಲ್ಲಿ ಘ ಪ ಫ ಶ ಸ ಗಳ ಮೇಲ್ಭಾಗಗಳು ತೆರೆದಿವೆ.ಮೂರು ಭಾಗವುಳ್ಳ ಯ ಕೆಲವು ಸಮಯಗಳಲ್ಲಿ ಸುರುಳಿಯಾಗಿರುತ್ತದೆ.ಲ ಅಕ್ಷರದ ಬಲ ಭಾಗದಲ್ಲಿ ದಂಡವು ಎಡಗದೆಗೆ ಬಗ್ಗಿರುತ್ತದೆ. ಡ ಅಕ್ಷರದ ಹಿಂಭಾಗ ಗುಂಡಾಗಿರುತ್ತದೆ.ಣ ಸುರುಳಿಯಾಗಿರುವುದಿಲ್ಲ. ತ ಮತ್ತು ನ ಕೆಲವು ಸಲ ಸುರುಳಿಯಾಗಿರುತ್ತವೆ.

೭-೮ನೆಯ ಶತಮಾನದಿಂದ ೧೨,೧೩ ಶತಾಬ್ದದವೆರೆಗೆ ರ ಈಗಿನ ರೂಪವನ್ನು ಪಡೆಯಿತು.ದ ಅಕ್ಷರದ ಬಾಲ ೯ನೆಯ ಶತಾಬ್ದದಿಂದ ಮೇಲಕ್ಕೆ ಎದ್ದಿರುತ್ತದೆ.ಲ ಬಹಳ ಸುರುಳಿಯಾಗಿರುತ್ತದೆ.ಕೆಲವು ಸಮಯ ವ್ಯಂಜನದ ಕೆಳಗೆ ಮಾತ್ರೆಯು ಕಂಡುಬರುತ್ತದೆ.ದಂಡರೂಪವಾದ ವಿರಾಮ ಚಿಹ್ನೆಗಳಿವೆ. ಸಂಯುಕ್ತಾಕ್ಷರಗಳಲ್ಲಿ ೨ಮತ್ತು೩ಅಕ್ಷರಗಳು ಪೂರ್ಣವಾಗಿಯೇ ಕಾಣಿಸುತ್ತವೆ.ಅಕ್ಷರದ ಮೇಲೆ ಅರ್ಕಾವತ್ತು ಪಶ್ಚಿಮ ಚಾಳುಕ್ಯರ ಕಾಲದಲ್ಲಿ ಎಡಗಡೆಗೆ ತಿರುಗಿದ ಸುರುಳಿಹೊಂದಿರುತ್ತದೆ.ಮೊದಲು ಬರುವ ಮ ಮತ್ತು ಮ್ ಸಣ್ಣಗಿರುತ್ತವೆ. ವಜ್ರಾಕೃತಿಯ (X)ಉಪಧ್ಮಾನೀಯ ಗಜಕುಂಭಾಕಾರದ ಜಿಹ್ವಾಮೂಲಿಯ (೦೦) ಕಂಡುಬರುತ್ತವೆ.ಅಕ್ಷರಗಳು ಬಲಗಡೆಗೆ ಬಗ್ಗಿರುತ್ತವೆ. ಆ ಈ ಓ ಅಕ್ಷರಗಳ ಮೇಲ್ಭಾಗಗಳಲ್ಲಿ ಚಿಹ್ನೆಗಳಿವೆ.ರ ಅಕ್ಷರವನ್ನು ಮುಂದಿನ ವ್ಯಂಜನದ ಮೇಲೆ ಬರೆಯುವದು ಕಂಡುಬಂದಿದೆ."ಫೋನೆಟಕ್ ಡೆಕೆ" ಯಿಂದ ಮ್ ಬಿಂದುವನ್ನು ಉಪಯೋಗಿಸಿರುವರು.(ಅಮ್ಭೋಧಿ-ಅಂಭೋಧಿ,ಸಿಮ್ಹ-ಸಿಂಹ ಇತ್ಯಾದಿ)

ಸುಮಾರು೧೩೦೦ ರ ರಿಂದ ಕನ್ನಡ-ತೆಲುಗು ಲಿಪಿಗಳು ಬೇರೆಯಾಗಲು ಪ್ರಾರಂಭವಾದವು.ಚ ಮೇಲ್ಭಾಗ ತೆರೆದಿರುತ್ತದೆ.ಭ ಹಿಂದೆ ಎರಡು ಭಾಗವಗಿದ್ದು ಈಗ ಸೇರಿಸಲ್ಪಟ್ಟು ಸೇರಿಸಿದ ಸ್ಥಾನದಲ್ಲಿ ಕೆಳಗೆ ದಂಡವನ್ನು ಹೊಂದುವುದು.ಹಳೆಯ ಧ ತಲಕಟ್ಟನ್ನು ಬಾಣಾಕರವಾಗಿ ಹೊಂದಿದ್ದಿತು.ಈಗ ಅಡ್ಡಗೀಟಾಗಿವದು.ಇ ಈ ಸುರುಳಿಯಾಗಿದ್ದು ಈಗ ಒಂದು ಬಾಲವನ್ನು ಹೊಂದಿವೆ. ಘ ಎಂಬುದಕ್ಕೆ ಬಲ ಭಾಗದಲ್ಲಿ ಸುರುಳಿಬರುತ್ತದೆ.ಡ ಶ ಷ ಗಳು ಹೀಗೇಯೆ ಸುರುಳಿಗಳನ್ನು ಹೊಂದುವವು.೧೯ನೆಯ ಶತಮಾನದಲ್ಲಿ ಕಲ್ಲಚ್ಚು ಮುದ್ರಣಬಂದ ಮೇಲೆ ಕನ್ನಡ ಲಿಪಿ ಸ್ಪಷ್ಟವಾಗಿ ತೆಲುಗಿನಿಂದ ಪ್ರತ್ಯೇಕವಾಯಿತು. ಸೀಸದ ಅಕ್ಷರಗಳನ್ನುಪಯೋಗಿಸಿ ಮುದ್ರಣವನ್ನಾರಂಭಿಸಿದಾಗ ಈಗಿನ ಕನ್ನಡ ಲಿಪಿ ಬಂದಿತು.ತೆಲುಗು ಕನ್ನಡಗಳಿಗೆ ಒಂದೇ ಲಿಪಿಯನ್ನು ಪ್ರಚಾರಕ್ಕೆ ತರುವದರಿಂದ ಸಾಹಿತ್ಯಕ್ಕೆ ಬಹಳ ಉಪಯೋಗವಾಗುವುದು ಎಂದು ಕನ್ನಡ ಆಂದ್ರಗಳಿಗಿದ್ದ ಪುರಾತನ ಸಂಬಂದವು ಬಲವಾಗಬೇಕೆಂದು ಅನೇಕರು ಅಭಿಪ್ರಾಯಪಟ್ಟರು.ಕನ್ನಡ ಮತ್ತು ಆಂಧ್ರ ರಾಜ್ಯಗಲ್ಲಿ ಸಿಕ್ಕಿರುವ ತಾರೀಖನ್ನು ನಿರ್ದರಿಸಬಹುದಾದ ತಾಮ್ರ ಮತ್ತು ಶಿಲಶಾಸನಗಳನ್ನು ಹಸ್ತಲಿಖಿತ ಗ್ರಂಥಗಳನ್ನು ಇನ್ನು ಹೆಚ್ಚಾಗಿ ವಿಮರ್ಶಿಸಿ ಕನ್ನಡ-ತೆಲುಗು ಲಿಪಿಗಲು ಹೇಗೆ ವ್ಯತ್ಯಾಸವಾಗುತ್ತಾ ಬಂದಿದೆ ಎಂಬುದನ್ನು ಹೊಸದಾಗಿ ಶಾಸ್ರೀಯವಾಗಿ ವಿಮರ್ಶಿಸುವ ಅವಶ್ಯಕತೆ ಬಹಳವಾಗಿದೆ.

ಹೊರಗಿನ ಕೊಂಡಿಗಳು

[[೧]] [[೨]] [[೩]] [[೪]] [[೫]]