ವಿಷಯಕ್ಕೆ ಹೋಗು

ಸದಸ್ಯ:Shashank.nayak

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀ ಶಾರದ ಪೀಠ, ಶೃಂಗೇರಿ
ಮಲೆನಾಡಿನ ಅಡಿಕೆ ತೋಟದ ಚಿತ್ರ

ನನ್ನ ಹೆಸರು ಶಶಾಂಕ್. ನಾನು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ನಗರದಲ್ಲಿ. ಇದು ನನ್ನ ಸ್ವಂತ ಊರು ಸಹ ಹೌದು. ನಮ್ಮದು ಮೂಲತ ರೈತ ಕುಟುಂಬ. ಇದು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಮಳೆ ಸುರಿಯುವ ಪ್ರದೇಶವಾದ್ದರಿಂದ, ಬತ್ತ ಮತ್ತು ಅಡಿಕೆಯನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ. ಇದರ ಜೊತೆಯಲ್ಲಿ ಕಾಫಿ, ಕಾಳು ಮೆಣಸು, ಜೀರಿಗೆ ಮೆಣಸು, ಚಹಾ,ಬಾಳೆ ಹಣ್ಣು, ಮಂಗಳೂರು ಸೌತೇಕಾಯಿ ಮುಂತಾದವುಗಳನ್ನು ಬೆಳೆಯಲಾಗುತ್ತದೆ. ಇಲ್ಲಿನ ಸಂಸ್ಕೃತಿ ಹಾಗು ಆಚರಣೆಗಳು ಸಹ ವೈವಿದ್ಯಮಯವಾಗಿವೆ. ಭೂತಾರಾಧನೆ, ಕೋಲ, ಯಕ್ಷಗಾನ, ನಾಗಾರಾಧನೆ ಮುಂತಾದ ಆಚರಣೆಗಳನ್ನು ಕಾಣಬಹುದು.

ಶಿಕ್ಷಣ

[ಬದಲಾಯಿಸಿ]
ಕ್ರೈಸ್ಟ್ ಶಾಲೆ, ಬೆಂಗಳೂರು
ಕ್ರೈಸ್ಟ್ (ಪರಿಗಣಿತ ವಿಶ್ವವಿದ್ಯಾನಿಲಯ)

ನಾನು ಹುಟ್ಟಿದ್ದು ಶೃಂಗೇರಿಯಲ್ಲಾದರು, ಬೆಳೆದದ್ದೆಲ್ಲ ಬೆಂಗಳೂರಿನಲ್ಲಿ. ನನ್ನ ತಂದೆ ಸ್ವಯಂ ಉದ್ಯೋಗಿ, ತಾಯಿ ಗೃಹಿಣಿ. ನಾನು ಮದ್ಯಮ ವರ್ಗದ ಕುಟುಂಬಕ್ಕೆ ಸೇರಿದವನು. ನನಗೆ ಚಿಕ್ಕಂದಿನಿಂದಲು ಅಪಾರ ದೇಶಪ್ರೇಮ. ದೊಡ್ಡವನಾದ ಮೇಲೆ ಸೈನಿಕನಾಗಿ ದೇಶಸೇವೆ ಮಾಡಬೇಕೆಂಬ ಆಸೆ ಇತ್ತು. ನಾನು ನನ್ನ ಪ್ರಾಥಮಿಕ ಹಾಗು ಪ್ರೌಡ ಶಿಕ್ಷಣವನ್ನು ಬೆಂಗಳೂರಿನ ಕ್ರೈಸ್ಟ್ ಶಾಲೆಯಲ್ಲಿ ಮುಗಿಸಿದೆ. ಇಲ್ಲಿ ನಾನು ಶಿಕ್ಷಣದ ಹೊರತಾಗಿ ಕ್ರೀಡೆ ಇತರೆ ವಿಶಯಗಳನ್ನು ಮೂಡಿಸಿತು. ನನ್ನ ಪ್ರೌಡ ಶಿಕ್ಷಣದ ಸಮಯದಲ್ಲಿ ನಾನು ಎನ್.ಸಿ.ಸಿ ಗೆ ಸೇರಿದ್ದೆ.ಅದು ನನ್ನಲ್ಲಿ ದೈರ್ಯ, ಜವಾಬ್ದಾರಿ, ನಾಯಕತ್ವ ಹಾಗು ಸಾಧನೆಯ ಛಲವನ್ನು ಹುಟ್ಟಿಸಿತು. ನನ್ನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉನ್ನತ ಅಂಕಗಳಿಂದ ಉತ್ತೀರ್ಣನಾದೆನು. ಅದನಂತರ, ನಾನು ಬೆಂಗಳೂರಿನ ಕ್ರೈಸ್ವ್ ಜೂನಿಯರ್ ಕಾಲೇಜಿನಲ್ಲಿ ನನ್ನ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿದೆ. ಏರೋನಾಟಿಕಲ್ ಸೊಸೈಟಿ ಆಫ್ ಇಂದಿಯದವರು ಬೆಂಗಳೂರಿನಲ್ಲಿ ಹಮ್ಮಿಕೊಂಡ್ಡಿದ್ದ ರಾಷ್ಟ್ರ ಮಟ್ಟದ "ಏರೊ ಒಲಂಪಿಕ್ಸ್" ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಪದವಿ ಪೂರ್ವ ಶಿಕ್ಷಣದ ನಂತರ ಕ್ರೈಸ್ಟ್ (ಪರಿಗಣಿತ ವಿಶ್ವವಿದ್ಯಾನಿಲಯ)ದಲ್ಲಿ ನನ್ನ ವ್ಯಾಸಂಗವನ್ನು ಮುಂದುವರೆಸುತ್ತಿದ್ದೇನೆ.

ಹವ್ಯಾಸಗಳು

[ಬದಲಾಯಿಸಿ]
ಕೆ. ವಿ. ಪುಟ್ಟಪ್ಪ (ಕುವೆಂಪು)

ನನಗೆ ಪುಸ್ತಕ ಓದುವುದು ಎಂದರೆ ಬಹಳ ಇಷ್ತ. ಛೆತನ್ ಭಗತ್ ರವರ ಅಭಿಮಾನಿಯಾದ ನಾನು ಅವರ ಎಲ್ಲಾ ಪುಸ್ತಕಗಳನ್ನು ಓದಿದ್ದೇನೆ. ಸರ್ ಆರ್ಥುರ್ ಕಾನನ್ ಡೋಯ್ಲೆರವರ ಷೆರ್ಲೋಕ್ ಹೊಮ್ಸ್, ರುಸ್ಕಿನ್ ಬಾಂಡ್, ಮೇರಿ ಶೆಲ್ಲಿ, ಅಮೀಷ್ ತ್ರಿಪಾಟಿ, ಜಾರ್ಜ್.ಆರ್.ಆರ್.ಮಾರ್ಟಿನ್ ಮುಂತಾದ ಬರಹಗಾರರ ಪುಸ್ತಕವನ್ನು ಓದಿದ್ದೇನೆ. ಕುವೆಂಪುರವರ ಕಾನೂರು ಹೆಗ್ಗಡಿತಿ ಮತ್ತು ಕೆ.ಪಿ. ಪೂರ್ಣಚಂದ್ರ ತೇಜಸ್ವಿರವರ ಜುಗಾರಿ ಕ್ರಾಸನ್ನು ಕೂಡ ಓದಿದ್ದೇನೆ. ನನಗೆ ಸಾಕ್ಷ್ಯಚಿತ್ರಗಳನ್ನು ನೋಡುವುದು ಕೂಡ ಇಷ್ಟ.

ಜಾರ್ಜ್ ಆರ್ ಆರ್ ಮಾರ್ಟಿನ್