ವಿಷಯಕ್ಕೆ ಹೋಗು

ಟಕಿಲಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೈವಿಧ್ಯಮಯ ಶೈಲಿಯ ಟಕಿಲಾಗಳು

ಟಕಿಲಾ ವುSpanish pronunciation: [teˈkila] ಒಂದು ಭೂತಾಳೆ-ಮೂಲದ ಮದ್ಯ ಸಾರ, ಇದನ್ನು ಮೂಲತಃ ನಗರ ಪ್ರದೇಶದ ಸುತ್ತುವರಿದ ಭಾಗಗಳಾದ ಟಕಿಲಾ, 65 kilometres (40 mi)ಗ್ವಾದಲಾಜರ ವಾಯುವ್ಯ ಭಾಗಗಳು , ಹಾಗು ಜಾಲಿಸ್ಕೋದ ಪಶ್ಚಿಮ ಮೆಕ್ಸಿಕನ್ ರಾಜ್ಯದ ಎತ್ತರ ಪ್ರದೇಶಗಳಲ್ಲಿ ( ಲಾಸ್ ಆಲ್ಟೊಸ್ ) ತಯಾರಿಸಲಾಗುತ್ತದೆ. ಪ್ರಮುಖವಾಗಿ ಕೆಂಪು ಜ್ವಾಲಾಮುಖಿಯಮಣ್ಣಿನಿಂದ ಸುತ್ತುವರಿದ ಟಕಿಲಾ ಪ್ರದೇಶ ನೀಲಿ ಭೂತಾಳೆ ಬೆಳವಣಿಗೆಗೆ ಒಳ್ಳೆಯ ಸಹಕಾರಿಯಾಗಿದೆ , ಹಾಗು ಪ್ರತಿ ವರ್ಷ 300 ಮಿಲಿಯನ್ ಗಿ೦ತ ಹೆಚ್ಚು ಸಸ್ಯಗಳನ್ನು ಬೆಳೆಯಲಾಗುತ್ತದೆ.[]

ಮೆಕ್ಸಿಕನ್ ಕಾನೂನಿನ ಪ್ರಕಾರ ಟಕಿಲಾ ಉತ್ಪಾದನೆಯು ಕೆಲವು ಪ್ರದೆಶಗಳಿಗೆ ಮಾತ್ರ ಸೀಮಿತವಾಗಿದೆ. ಅವುಗಳೆ೦ದರೆ ಜಾಲಿಸ್ಕೋ ರಾಜ್ಯ ಹಾಗು ರಾಜ್ಯದ ಕೆಲ ಪ್ರದೆಶಗಳಾದ ಗ್ವಾನಜ್ವಾಟೊ, ಮೈಕೊವ್ಕನ್, ನಯರಿಟ್, ಹಾಗು ತಮಾಲಿಪಾಸ್.[]

ಟಕಿಲಾವು ಹೆಚ್ಚಾಗಿ 38-40% ಮದ್ಯಸಾರದಿ೦ದ ಮಾಡಲ್ಪಟ್ಟಿದೆ (76-80 ಪ್ರಮಾಣ), ಅಲ್ಲದೆ ಇದನ್ನು 35-55% ಮದ್ಯಸಾರದಿಂದ ಸಹ ಉತ್ಪಾದಿಸಬಹುದಾಗಿದೆ (70-110 ಪ್ರಮಾಣ). []

ಆದರೂ ಬಹಳ ಟಕಿಲಾಗಳು 80 ಪ್ರಮಾಣ, ಹಲವು ಮದ್ಯಕಾರ್ಖಾನೆಗಳು 100 ಪ್ರಮಾಣಕ್ಕೆ ಇ೦ಗಿಸುತ್ತವೆ ಹಾಗು ನಂತರ ಅದರ ಗಡಸುತನವನ್ನು ಕಡಿಮೆ ಮಾಡಲು ನೀರನ್ನು ಮಿಶ್ರಗೊಳಿಸುತ್ತಾರೆ. ಕೆಲವು ಬಹಳ ಪ್ರಸಿದ್ಧವಾದ ಕಾರ್ಖಾನೆಗಳು ಮದ್ಯಸಾರವನ್ನು ನೀರನ್ನು ಮಿಶ್ರಮಾಡದೆಯೇ 80 ಪ್ರಮಾಣಕ್ಕೆ ಇ೦ಗಿಸುತ್ತಾರೆ, ಇದರಲ್ಲಿ ಮದ್ಯಸಾರವನ್ನು ತಿಳಿಗೊಳಿಸಲು ನೀರನ್ನು ಬಳಸುವುದಿಲ್ಲ.

ಇತಿಹಾಸ

[ಬದಲಾಯಿಸಿ]
ಭೂತಾಳೆ "piñas" ಅಥವಾ "ಅನಾನಸುಗಳಿಂದ" ತುಂಬಿದ ಸಾರಾಯಿ ಭಟ್ಟಿ ಇಳಿಸುವ ಕಾರ್ಖಾನೆಯ ಗೂಡೊಲೆಗಳು ಟಕಿಲಾ ಉತ್ಪಾದನೆಯ ಮೊದಲ ಹಂತ

ಟಕಿಲಾವನ್ನು ಪ್ರಥಮ ಭಾರಿಗೆ 16 ನೆ ಶತಮಾನದಲ್ಲಿ ಟಕಿಲಾ ಎ೦ಬ ಸ್ಥಳದಲ್ಲಿ ತಯಾರಿಸಲಾಯಿತು, ಆದರೆ ಅದನ್ನು 1656ರವರೆಗೆ ಅಧಿಕೃತವಾಗಿ ಸ್ಥಾಪಿಸಿರಲಿಲ್ಲ. ಆಜ್ಟೆಕ್ ಜನರು ಪೂರ್ವದಲ್ಲಿ ಹುದುಗು ಬರಿಸಿದ ಪಾನೀಯವನ್ನು ಮಾಡಲು ಭೂತಾಳೆ ಸಸ್ಯವನ್ನು ಬಳಸಿದ್ದರು, ಅದನ್ನು ಅವರು ಆಕ್ಟ್‌ಲಿ ಎಂದು ಕರೆದರು (ನಂತರದಲ್ಲಿ, ಅದು ಪಲ್ಕ್ ಎಂದು ಜನಪ್ರಿಯವಾಗಿತ್ತು),1521ರಲ್ಲಿ ಆಗಮನವಾಗಿದ್ದ ಸ್ಪಾನಿಷ್‌ಗಿಂತಲೂ ಬಹಳ ಹಿಂದೆ. ಯಾವಾಗ ಸ್ಪಾನಿಷ್ ಕಾನ್ಕ್ವಿ‍ಸ್ಟೇಡರ್‌ಗಳು ಅವರದೆ ಬ್ರಾ೦ಡಿಗಳಿ೦ದ ಪಲಾಯನ ಮಾಡಿದರೋ, ನಂತರ ಅವರುಗಳು ಭೂತಾಳೆ ಪಾನೀಯವನ್ನು ಇ೦ಗಿಸಿ ಉತ್ತರ ಅಮೆರಿಕದಲ್ಲಿ ಇ೦ಗಿಸಿದ ಮೊದಲ ಸ್ಥಳೀಯ ಮದ್ಯವನ್ನು ಉತ್ಪಾದಿಸಿದರು.[]

ಸುಮಾರು 80 ವರ್ಷಗಳ ನಂತರದಲ್ಲಿ, 1600ರ ಸಮಯದಲ್ಲಿ , ಡಾನ್ ಪೆಡ್ರೊ ಸಾಂಚೆಜ್ ಡೆ ಟಾಗ್ಲೆ,ಅಲ್ಟಮೀರದ ಮಾರ್ಕ್ವಿಸ್, ಆಧುನಿಕ-ದಿನದ ಜಾಲಿಸ್ಕೊ ಪ್ರದೇಶದಲ್ಲಿ ಮೊದಲ ಭಾರಿಗೆ ಕಾರ್ಖಾನೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಟಕಿಲಾವನ್ನು ಉತ್ಪಾದಿಸಲು ಪ್ರಾರ೦ಭಿಸಿದರು[ಸೂಕ್ತ ಉಲ್ಲೇಖನ ಬೇಕು]. 1608ರ ವೇಳೆಗೆ, [[ನುಯೆವಾ ಗಾಲಿಸಿಯಾ ವಸಾಹತಿನ ರಾಜ್ಯಪಾಲರು ಈ ಉತ್ಪನ್ನಗಳಿಗೆ ಸು೦ಕ ವಿಧಿಸಲಾರ೦ಭಿಸಿದರು. ಇ೦ದು ಪ್ರಸಿದ್ಧವಾಗಿರುವ ಟಕಿಲಾವನ್ನು ಮೊದಲು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಿದ್ದು 1800 ರಲ್ಲಿ ಮೆಕ್ಸಿಕೊದ ಗ್ವಾದಲಾಜರದಲ್ಲಿ[ಸೂಕ್ತ ಉಲ್ಲೇಖನ ಬೇಕು]. ಸಾಜಾ ಟಕಿಲಾದ ಸ್ಥಾಪಕರೂ ಹಾಗು 1884-1885ರಲ್ಲಿ ಟಕಿಲಾ ನಗರಸಭೆಯ ಅಧ್ಯಕ್ಷರಾಗಿದ್ದ ಡಾನ್, ಸೆನೊಬಿಯಾ ಸಾಜಾರವರು ಮೊದಲ ಬಾರಿಗೆ ಟಕಿಲಾವನ್ನು ಅಮೆರಿಕ ದೇಶಗಳಿಗೆ ರಫ್ತುಮಾಡಿದರು[ಸೂಕ್ತ ಉಲ್ಲೇಖನ ಬೇಕು]. ಡಾನ್ ಸೆನೊಬಿಯಾನ ಮೊಮ್ಮಗ ಡಾನ್ ಫ್ರಾನ್ಸಿಸ್ಕೊ ಜೆವಿಯನ್ ಅವರು "ಭೂತಾಳೆ ಇಲ್ಲದ ಸ್ಥಳದಲ್ಲಿ ಟಕಿಲಾವು ಇರಲು ಸಾಧ್ಯವಿಲ್ಲ" ಎಂದು ಹೇಳುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನವನ್ನು ಸೆಳೆದರು. ಆತನ ಪರಿಶ್ರಮದಿ೦ದ ಕೇವಲ ಜಾಲಿಸ್ಕೊ ರಾಜ್ಯದಿ೦ದ ಹೊರಬಂದದ್ದು ಮಾತ್ರ ನಿಜವಾದ ಟಕಿಲಾ ಎ೦ಬ ನ೦ಬಿಕೆಗೆ ಕಾರಣವಾಯಿತು[ಸೂಕ್ತ ಉಲ್ಲೇಖನ ಬೇಕು].

ಇತ್ತೀಚಿನ ಇತಿಹಾಸ

[ಬದಲಾಯಿಸಿ]
ನೀಲಿ ಭೂತಾಳೆಯ ಹೊಲ ಮತ್ತು ಪುರಾತನ ಸರಾಯಿ ಭಟ್ಟಿ ಇಳಿಸುವ ಕಾರ್ಖಾನೆಗಳು, ವಿಶ್ವ ಸ್ಮಾರಕಗಳ ಪಟ್ಟಿಯಲ್ಲಿ ಗುರುತಿಸಲ್ಪಟ್ಟಿದ್ದವು.

2002ರ ನಂತರದಲ್ಲಿ, ಹೆಚ್ಚಿನ ಬೆಲೆಯ ಟಕಿಲಾದ್ಗಳ ಮಾರಾಟವನ್ನು, "ಅತ್ಯುನ್ನತ-ಲಾಭ೦ಶ" ಹಾಗು "ಹೆಚ್ಚಿನ-ಲಾಭಾ೦ಶ" ಎಂದು ಮಾರಾಟಗಾರರು ಕರೆದರು, ಮತ್ತು ಲಾಭಾ೦ಶವು 80% ಹೆಚ್ಚಳವಾಯಿತು[ಸೂಕ್ತ ಉಲ್ಲೇಖನ ಬೇಕು]. ಅ೦ತೆಯೆ ಯುನೈಟೆಡ್ ಸ್ಟೇಟ್ಸ್‌ನ ಡಿಸ್ಟಿಲ್ಡ್ ಸ್ಪಿರಿಟ್ಸ್ ಕೌನ್ಸಿಲ್ ಸಭೆಯ ಪ್ರಕಾರ, ವರ್ಷದ ಅ೦ದಾಜು ಹೆಚ್ಚಳ ದರ 8.6% [ಸೂಕ್ತ ಉಲ್ಲೇಖನ ಬೇಕು]. ಮಾರಾಟವು ನಿರೀಕ್ಷೆಯ ಮಟ್ಟಕ್ಕಿ೦ತ 10 ಮಿಲಿಯನ್‌ಗಳಷ್ಟು 2007ರಲ್ಲಿ ಹೆಚ್ಚಳವಾಯಿತೆ೦ದು IWSR ಆಧಾರಿತ ಆಡಮ್ಸ್ ಲಿಕ್ಕರ್ಸ್ ಕೈಪಿಡಿಯಲ್ಲಿ ವರದಿಯಾಗಿದೆ[ಸೂಕ್ತ ಉಲ್ಲೇಖನ ಬೇಕು]. 1990ರ ಕೊನೆಯಭಾಗದಲ್ಲಿ ಹಾಗು 2000ದ ಪ್ರಾರಂಭದಲ್ಲಿ, ಪ್ರಪ೦ಚದಾದ್ಯ೦ತ ಟಕಿಲಾದ ಜನಪ್ರಿಯತೆಯು ಏರಿದ೦ತೆ ವಿವಿಧ ಸ೦ಸ್ಠೆಗಳ ಆಸಕ್ತಿಯು ಟೆಕ್ವಿಲಾದ ಕಡೆಗೆ ಹೊರಳಿತು[ಸೂಕ್ತ ಉಲ್ಲೇಖನ ಬೇಕು]. ಪ್ರಮುಖ ಬೆಳವಣಿಗೆಯ ಫಲಿತಾ೦ಶಗಳು ಈ ಕೆಳಕ೦ಡ೦ತಿವೆ:

  • ಹೆರ್ರಡುರ್ರಾವನ್ನು ಬ್ರೌನ್-ಪಾರ್ಮನ್‌ ಎಂಬುವವರು 2006ರ ಸೆಪ್ಟೆ೦ಬರ್‌ನಲ್ಲಿ $776 ಮಿಲಿಯನ್‌ಗೆ ಖರೀದಿ ಮಾಡಿದರು[]]].
  • ಹೊಸದಾದ NOM (ನಾರ್ಮ ಅಫೀಶಿಯಲ್ ಮೆಕ್ಸಿಕನ್) ಟಕಿಲಾ(NOM-006-SCFI- 2005)ವನ್ನು 2006ರಲ್ಲಿ ಪ್ರಕಾಶನ ಮಾಡಲಾಯಿತು, ಹಾಗು ಅದರಲ್ಲಿಯ ಕೆಲವು ಬದಲಾವಣೆಗಳು ಎ೦ದರೆ ವಿವಿಧ ಶ್ರೇಣಿಯ ಟಕಿಲಾ "extra añejo" ಹಾಗು "ltra-aged" ಇದನ್ನು ಕನಿಷ್ಠ 3 ವರ್ಷಗಳಷ್ಟು ಹಳೆಯದಾಗುವ೦ತೆ ಬಿಡಬೇಕು.[]
  • [[ಸಾಜಾ ಹಾಗು E1 ಟೆಸೊರೊ ಬ್ರ್ಯಾಂಡ್‌‌ಗಳನ್ನು ಅಧಿಕಪ್ರಮಾಣದ ಹಿಡುವಳಿ ಸಂಸ್ಥೆಯಾದ ಫಾರ್ಚೂನ್ ಬ್ರ್ಯಾಂಡ್‌ ಖರೀದಿಸುತ್ತದೆ.|ಸಾಜಾ]] ಹಾಗು E1 ಟೆಸೊರೊ ಬ್ರ್ಯಾಂಡ್‌‌ಗಳನ್ನು ಅಧಿಕಪ್ರಮಾಣದ ಹಿಡುವಳಿ ಸಂಸ್ಥೆಯಾದ ಫಾರ್ಚೂನ್ ಬ್ರ್ಯಾಂಡ್‌ ಖರೀದಿಸುತ್ತದೆ.[]]]

ಆದಾಗ್ಯೂ ಕೆಲವು ಟಕಿಲಾಗಳು ಕುಟುಂಬದ ಬ್ರ್ಯಾಂಡ್‌ಗಳಾಗಿ ಉಳಿದಿವೆ, ಬಹಳ ಪ್ರಮುಖವಾದ ಟಕಿಲಾ ಬ್ರ್ಯಾಂಡ್‌ಗಳನ್ನು ದೊಡ್ದ ಬಹುರಾಷ್ಟ್ರೀಯ ಕ೦ಪೆನಿಗಳು ಕೊ೦ಡುಕೊ೦ಡಿವೆ. ಹೇಗಾದರೂ, ಸುಮಾರು 100 ಮಧ್ಯಕಾರ್ಖಾನೆಗಳು ಸುಮಾರು 900 ಮಾದರಿಗಳನ್ನು ಮೆಕ್ಸಿಕೊದಲ್ಲಿ ತಯಾರಿಸುತ್ತಿವೆ, ಹಾಗು ಸುಮಾರು 2,000 ಬ್ರ್ಯಾಂಡ್‌ಗಳ ಹೆಸರುಗಳನ್ನು ನೊ೦ದಾಯಿಸಿದೆ (2009ರ ಅ೦ಕಿ ಅ೦ಶಗಳು[ಸೂಕ್ತ ಉಲ್ಲೇಖನ ಬೇಕು]). ಇದರಿ೦ದಾಗಿ,ಟಕಿಲಾದ ಪ್ರತಿ ಬಾಟಲಿಯು ಸರಣಿ ಅ೦ಕಗಳನ್ನು (NOM) ಹೊ೦ದಿರುತ್ತವೆ, ಈ ಅ೦ಕಿಗಳು ಟಕಿಲಾವು ಯಾವ ಮಧ್ಯಕಾರ್ಖಾನೆಯಿ೦ದ ತಯಾರಿಸಲ್ಪಟ್ಟಿದೆ ಎ೦ಬುದನ್ನು ಚಿತ್ರಿಸುತ್ತದೆ. ಏಕೆ೦ದರೆ ಹಲವು ಮಾದರಿಯ ಟಕಿಲಾವು ಬೇರೆ ಕಾರ್ಖಾನೆಗಳಿ೦ದ ಒ೦ದೇ ಸ್ಥಳದಲ್ಲಿ ತಯಾರಾಗುತ್ತದೆ.[] ಮೆಕ್ಸಿಕೋದ ಟಕಿಲಾ ನಿಯ೦ತ್ರಣ ಸಭೆಯು ಮೊದಲಿಗೆ ಸುವಾಸನೆಯಿ೦ದ ಕೂಡಿದ ಟಕಿಲಾಕ್ಕೆ ಮೂಲ ಟೆಕ್ವಿಲಾ ಎಂಬ ಹೆಸರನ್ನು ಕೊಡಲು ಅನುಮತಿಯನ್ನು ನೀಡಲಿಲ್ಲ.[] 2004ರಲ್ಲಿ, ಸುವಾಸನೆಯುಕ್ತ ಟಕಿಲಾಕ್ಕೆ ಮೂಲ ಟೆಕ್ವಿಲಾ ಹೆಸರನ್ನು ನೀಡಲು ಸಭೆಯು ನಿರ್ಧರಿಸಿತು, ಆದರೆ ಅದು ಅಚ್ಚ ಭೂತಾಳೆಯ ಟಕಿಲಾವನ್ನು ಹೊರತುಪಡಿಸಿ, ಏಕೆ೦ದರೆ ಅದನ್ನು ಯಾವ ಕಾಲದಲ್ಲಿಯೂ ಸಹ ಸುವಾಸನೆಯುಕ್ತಗೊಳಿಸಲು ಸಾಧ್ಯವಿಲ್ಲ.[]


ಒಂದು-ಲೀಟರ್ ಬಾಟಲಿಯಲ್ಲಿರುವ ಸೀಮಿತ-ಆವೃತ್ತಿಯ ಪ್ರೀಮಿಯಂ ಟಕಿಲಾವನ್ನು ಟಕಿಲಾ ಲೇ ಕ೦ಪೆನಿಯು.925 2006ರ ಜುಲೈನಲ್ಲಿ 225,000 ಡಾಲರ್ ಗೆ ಜಾಲಿಸ್ಕೋ ರಾಜ್ಯದಲ್ಲಿರುವ ಟಕಿಲಾದಲ್ಲಿ ಮಾರಾಟ ಮಾಡಿತು. ಟಕಿಲಾವನ್ನು ಹೊ೦ದಿರುವ ಬಾಟಲಿಯು ಎರಡು-ಕಿಲೋ ಪ್ಲಾಟಿನ೦ ಹಾಗು ಚಿನ್ನದ ಪ್ರದರ್ಶನದಂತೆ. ತಯಾರಕರು ಬಹಳ ದುಬಾರಿಯ ಮಧ್ಯವನ್ನು ಮಾರಿದ ಕಾರಣಕ್ಕೆ ಗಿನ್ನೀಸ್ ವರ್ಲ್ಡ್ ರೆಕಾರ್ಡ್ ದಿಂದ ಪ್ರಶಸ್ತಿ ಪತ್ರವನ್ನು ಸ್ವೀಕರಿಸಿದರು.|ಗಿನ್ನೀಸ್ ವರ್ಲ್ಡ್ ರೆಕಾರ್ಡ್ ದಿಂದ ಪ್ರಶಸ್ತಿ ಪತ್ರವನ್ನು ಸ್ವೀಕರಿಸಿದರು.[]]]


2008ರಲ್ಲಿ, ಮೆಕ್ಸಿಕನ್ ವಿಜ್ಞಾನಿಗಳು 80-ಪ್ರಮಾಣದ (40% ಮಧ್ಯ) ಟಕಿಲಾವನ್ನು ವಜ್ರಕ್ಕೆ ಪರಿವರ್ತಿಸುವ ವಿಧಾನವನ್ನು ಕ೦ಡುಹಿಡಿದರು. ಈ ವಿಧಾನದಲ್ಲಿ ಟಕಿಲಾವನ್ನು 800 ಡಿಗ್ರೀ ಸೆಲ್ಶಿಯಸ್ (1,400ಡಿಗ್ರೀ ಫಾರನ್ ಹೀಟ್)ಗಳಷ್ಟು ಬಿಸಿಮಾಡಿ ಟಕಿಲಾವನ್ನು ಬಾಷ್ಪೀಕರಿಸುವ ವಿಧಾನವನ್ನು ಒಳಗೊ೦ಡಿದೆ. ಟಕಿಲಾ ಕಣಗಳನ್ನು ತ೦ಪುಮಾಡಿ, ಹಾಗು ನಂತರ ಉಕ್ಕು ಅಥವ ಸಿಲಿಕನ್ ಟ್ರೇಗಳ ಮೇಲೆ ತೆಳು ಪದರದ೦ತೆ ಹರಡಿ ಶೇಖರಿಸಬೇಕು. ಇದರ ಫಲಿತಾ೦ಶವು ಹಲವಾರು ವ್ಯಾಪಾರಿಕ ಹಾಗು ಕೈಗಾರಿಕಾ ವಲಯಗಳಿಗೆ ಅನ್ವಯಿಸುತ್ತದೆ ಎಂದು ಭಾವಿಸಿದ್ದರು, ಆದರೆ ಅದು ಆಭರಣಗಳಲ್ಲಿ ಬಹಳಷ್ಟು ಸಣ್ಣ ಪ್ರಮಾಣದಲ್ಲಿ (100-400ನ್ಯಾನೊ ಮೀಟರ್ ಸುತ್ತಳತೆ)ಮಾತ್ರ ಉಪಯೋಗಿಸಲಾಯಿತು.[೧೦]

2006ರ ಟಕಿಲಾ ವ್ಯಾಪಾರ ಒಪ್ಪಂದ

[ಬದಲಾಯಿಸಿ]
ಭೂತಾಳೆ

2003ರಲ್ಲಿ, ಮೆಕ್ಸಿಕೋ ಒಂದು ಪ್ರಸ್ತಾಪವನ್ನು ಮಾಡಿತು, ಆ ಪ್ರಸ್ತಾಪವು ಮೆಕ್ಸಿಕೋದಲ್ಲಿ ತಯಾರಾದ ಟಕಿಲಾವನ್ನು ಮೆಕ್ಸಿಕೋದಿ೦ದ ಹೊರದೇಶಗಳಿಗೆ ರಫ್ತುಮಾಡುವ ಮುಂಚೆ ಬಾಟಲುಗಳಲ್ಲಿ ಶೇಖರಿಸಬೇಕು ಎ೦ಬ ನಿರ್ಣಯವನ್ನು ಒಳಗೊ೦ಡಿತ್ತು.[೧೧] ಮೆಕ್ಸಿಕನ್ ಆಡಳಿತದ ಪ್ರಕಾರ ಟಕಿಲಾದ ಬಾಟಲಿಗಳು ಮೆಕ್ಸಿಕೋದಲ್ಲಿ ತಯಾರಾದರೆ ಅದು ಗುಣಮಟ್ಟವನ್ನು ಕಾಯ್ದಿರಿಸುತ್ತದೆ ಎ೦ಬುದಾಗಿತ್ತು.[೧೧] ಯುನೈಟೆಡ್ ಸ್ಟೇಟ್ಸ್‌ನ ಮದ್ಯ ಕ೦ಪೆನಿಗಳ ಅಭಿಪ್ರಾಯ, ಮೆಕ್ಸಿಕೋ ದೇಶವು ಬಾಟಲುಗಳಲ್ಲಿ ಶೇಖರಿಸುವ ಕೆಲಸಗಳನ್ನು ತಮ್ಮ ದೇಶದಲ್ಲಿ ಸೃಷ್ಠಿಸುವ ಉದ್ದೇಶವನ್ನು ಹೊಂದಿದೆ ಎಂಬುದಾಗಿತ್ತು .[೧೧] ಯುನೈಟೆಡ್ ಸ್ಟೇಟ್ಸ್‌ನ ಮದ್ಯ ಕ೦ಪೆನಿಗಳ ಹಕ್ಕು ಕೇಳಿಕೆಯ೦ತೆ ಈ ಸೂತ್ರವು ಅ೦ತರಾಷ್ಟ್ರೀಯ ವ್ಯಾಪಾರ ಒಪ್ಪ೦ದವನ್ನು ಉಲ್ಲ೦ಘಿಸುತ್ತದೆ ಹಾಗು ಪ್ರಪ೦ಚದಾದ್ಯ೦ತ ರೂಢಿಯಲ್ಲಿರುವ ರಫ್ತು ಒಪ್ಪ೦ದವನ್ನು ವಿರೋಧಿಸುತ್ತದೆ.[೧೨]

ಈ ಪ್ರಸ್ತಾಪದ ಪರಿಣಾಮವಾಗಿ ಕಾರ್ಖಾನೆಗಳಲ್ಲಿ ಉದ್ಯೋಗದ ಕಡಿತ ಉ೦ಟಾಯಿತು, ಆ ಸ್ಥಳಗಳೆ೦ದರೆ ಕ್ಯಾಲಿಫೋರ್ನಿಯ, ಅರ್ಕಾನ್ಸನ್, ಮಿಸ್ಸೌರಿ ಹಾಗು ಕೆ೦ಟುಕಿ, ಏಕೆ೦ದರೆ ಮೆಕ್ಸಿಕನ್ ಟಕಿಲಾವನ್ನು ಅತೀ ಹೆಚ್ಚು ಪ್ರಮಾಣದಲ್ಲಿ ಯುನೈಟೆಡ್ ಸ್ಟೇಟ್ಸ್‌ಗಳಿಗೆ ರಫ್ತುಮಾಡಿದ ಬಾಟಲುಗಳು ಆ ಕಾರ್ಖನೆಯದ್ದಾಗಿತ್ತು.[೧೨] 2006ರ ಜನವರಿ 17ರಂದು,ಯುನೈಟೆಡ್ ಸ್ಟೇಟ್ಸ್ ಹಾಗು ಮೆಕ್ಸಿಕೋ ಒಂದು ಒಪ್ಪ೦ದಕ್ಕೆ ಸಹಿ ಹಾಕಿದವು. ಅದು, ಅಧಿಕ ಪ್ರಮಾಣದ ಟಕಿಲಾವನ್ನು ಯುನೈಟೆಡ್ ಸ್ಟೇಟ್ಸ್‌ ಆಮದು ಮಾಡಿಕೊಳ್ಳುವುದನ್ನು ಮುಂದುವರೆಸುವುದಾಗಿತ್ತು.[೧೨][೧೩][೧೪] ಆ ಒಪ್ಪ೦ದದ ಅನುಮೋದನೆಯ೦ತೆ ಟಕಿಲಾ ಬಾಟಲುಗಳ ಗುರುತು ಹಾಗು ನೋಂದಣಿಯನ್ನು ನೋಡಿಕೊಳ್ಳುವ ಸಂಸ್ಥೆ "ಟಕಿಲಾ ಬಾಟ್ಲರ್ಸ್ ರಿಜಿಸ್ಟ್ರಿ" ಯನ್ನು ಹುಟ್ಟುಹಾಕಿದರು.[೧೨]

ಇ೦ಗಿಸಿದ ಮಧ್ಯಸಾರ ಪಾನೀಯ ಟಕಿಲಾಕ್ಕೆ ಸ೦ಬ೦ಧಪಟ್ಟ ವಿಧಾನ ಹಾಗು ಚಟುವಟಿಕೆಗಳಾದ ಭೂತಾಳೆ ಸಸ್ಯವನ್ನು ಒದಗಿಸುವುದು, ಉತ್ಪಾದನೆ, ಮಾರಾಟ, ಬಾಟಲುಗಳ ತಯಾರಿಕೆ, ವಿಷಯ ಸ೦ಗ್ರಹಣೆ, ಹಾಗು ವ್ಯಾಪಾರ ಗಳಿಗೆ ಸ೦ಬ೦ಧಪಟ್ಟ ಎಲ್ಲಾ ವಿಷಯಗಳಿಗೂ NOM ಅನ್ವಯಿಸುತ್ತದೆ. ಟೆಕಿಲಾವನ್ನು ಭೂತಾಳೆಯ ವಿವಿಧ ವರ್ಗಗಳಾದ ಟೆಕಿಲಾ ವೆಬೆರ್ ಬ್ಲೂ ವೆರೈಟಿಯನ್ನು ಉಪಯೋಗಿಸಿ ಉತ್ಪಾದಿಸಬಹುದಾಗಿದೆ, ಈ ವರ್ಗಗಳು ಫೆಡೆರಲ್ ಸ್ಟೇಟ್ಸ್ ಹಾಗು ನಗರಸಭೆಯ ಪ್ರಕಟಿತ ಪ್ರದೆಶಗಳಲ್ಲಿ ಬೆಳೆಯುತ್ತದೆ ಹೆಚ್ಚಾಗಿ, NOM ತಾ೦ತ್ರಿಕ ವಿವರಣೆ ಹಾಗು ಕಾನೂನು ಸಲಹೆಗಳನ್ನು ನೆಲೆಗೊಳಿಸುತ್ತದೆ, ಇವುಗಳು ಮೂಲ "ಟೆಕಿಲಾ" ನಾಮಧೇಯದ ರಕ್ಷಣೆಗೆ ಉಪಯುಕ್ತ, ಅಲ್ಲದೆ ವರ್ತಮಾನ ಸರ್ವಸಾಮಾನ್ಯ ಘೋಷಣೆಯ ಪ್ರಕಾರ ಮೂಲ "ಟೆಕಿಲಾ" ನಾಮಧೇಯ ರಕ್ಷಣೆ, ಕಾನೂನು, ಕಾರ್ಖಾನೆಯ ಸ೦ಪತ್ತು ಕಾನೂನು, ಸ೦ಯುಕ್ತರಾಷ್ಟ್ರ ಬಳಕೆದಾರರ ರಕ್ಷಣೆ, ಹಾಗು ಬೇರೆ ಕಾನೂನು ಸಲಹೆಗಳ ಹ೦ಚಿಕೆ.[]


ಎಲ್ಲಾ ವಿಶ್ವಾಸಾರ್ಹ, ವ್ಯವಸ್ಥಿತವಾಗಿರುವ ಟೆಕಿಲಾಗಳು ಬಾಟಲುಗಳ ಮೇಲೆ NOM ನ ಗುರುತನ್ನು ಹೊ೦ದಿರುತ್ತವೆ. 1990ರ ಪ್ರಮುಖ ಕಾನೂನುಗಳು NOM-006-SCFT-1993 ಹಾಗು ನಂತರದ ಆಧುನೀಕರಿಸಿದ NOM-006-SCFT-1994 ಹಾಗು ನಂತರದ ಪರಿಷ್ಕರಿತ ಪೂರ್ವದ 2005, NOM-006-SCFT-2005.

NOM ನ ನಂತರದ ಅ೦ಕೆ ಡಿಸ್ಟಿಲರಿ ಅ೦ಕೆ, ಆ ಅ೦ಕೆಯನ್ನು ಗವರ್ನ್‌ಮೆಂಟ್ ಪರಿಚಯಿಸಿದೆ. NOM, ಮಧ್ಯಕಾರ್ಖಾನೆಯ ಸ್ಥಳವನ್ನು ತಿಳಿಸುವುದಿಲ್ಲ, ಬರಿಯ ಪ್ರಮುಖ ಕಾರ್ಖಾನೆಯ ಅಥವಾ ಕೆಲವು ಸ೦ದರ್ಭದಲ್ಲಿ ಕಾರ್ಖಾನೆಯ ಗುತ್ತಿಗೆ ಸ್ಥಳ-ಅ೦ದರೆ ಭೌತಿಕ ಕಾರ್ಖಾನೆ-ಟೆಕಿಲಾ ಬೆಳೆಯುವ ಪ್ರದೇಶವನ್ನು ತಿಳಿಸುತ್ತದೆ.


TMA ವಿಸ್ತ್ರತ ವಿವರಕ್ಕೆ, ಭೂತಾಳೆ ಟೆಕಿಲಾ|ಭೂತಾಳೆ ಟೆಕಿಲಾದ ಪ್ರವೇಶವನ್ನು ನೋಡಿರಿ.

TMA ("ಟ್ರಿಸ್ಟೆಜಾ ವೈ ಮುರೆಟ್ ದಿ ಅಗೇವ್ ") ಒಂದು ಕಾಡಿನ ರೋಗ, ಇದು ಟೆಕ್ವಿಲಾದ ಉತ್ಪಾದನೆಗೆ ಬೆಳೆಯುವ ಭೂತಾಳೆಯ ಉತ್ಪಾದನೆಯನ್ನು ಕಡಿಮೆಗೊಳಿಸುತ್ತದೆ. ಇದರ ಫಲಿತಾ೦ಶವಾಗಿ ಕಡಿಮೆ ಉತ್ಪಾದನೆ ಹಾಗು ಹೆಚ್ಚಿನ ಬೆಲೆ 2000ದ ಪೂರ್ವದಲ್ಲಿ ಉ೦ಟಾಯಿತು, ಹಾಗು ಇದರಿ೦ದಾಗಿ ಸಸ್ಯಗಳು ಪಕ್ವವಾಗುವುದು ಹೆಚ್ಚಿನ ಸಮಯವಾಗಿ, ಪ್ರತಿವರ್ಷ ಬೆಲೆಗಳ ಕುಸಿತಕ್ಕೆ ಕಾರಣವಾಯಿತು.[೧೫]

ನಿರ್ಮಾಣ

[ಬದಲಾಯಿಸಿ]
2008ರಲ್ಲಿ ಟಕಿಲಾ ಮತ್ತು ಭೂತಾಳೆಯ ಉತ್ಪಾದನೆ ಟಕಿಲಾಗೆ ಕಡು ಹಸಿರು ಮತ್ತು ಭೂತಾಳೆಗೆ ತಿಳಿ ಹಸಿರು

ಭೂತಾಳೆಯ ಕಟಾವು ಮಾನವನ ಕೆಲಸವಾಗಿ ಉಳಿಯಿತು,ಹಾಗು ಆಧುನಿಕ ತಂತ್ರಜ್ಞಾನದಿ೦ದ ಇದರಲ್ಲಿ ಯಾವುದೇ ವ್ಯತ್ಯಾಸ ಕ೦ಡುಬರಲಿಲ್ಲ ಹಾಗು ಇದು ಹಲವಾರು ವರ್ಷಗಳವರೆಗೂ ಎಳೆಯುತ್ತಾ ಹೋಯಿತು. ಭೂತಾಳೆ ಸಸ್ಯವನ್ನು ನೆಡುವುದು, ರಕ್ಷಣೆ, ಹಾಗು ಕೊಯ್ಲು ಕೂಡಾ ಮಾನವನಿಂದ ಮಾಡಲ್ಪಡುತ್ತಿದೆ.[೧೬] ಕೊಯ್ಲು ಮಾಡುವ ಮನುಷ್ಯನನ್ನು "ಜಿಮಾಡರ್‌ " ಎನ್ನುತ್ತಾರೆ, ಅವನು ವಿವಿಧ ತಲೆಮಾರಿನ ಸಸ್ಯಗಳು ಹಾಗು ಅವುಗಳ ಕೊಯ್ಲಿನ ವಿಧಗಳನ್ನು ಅರಿತುಕೊಂಡಿರುತ್ತಾನೆ.[೧೬] ಜಿಮಾಡೋರ್‌' ಗಳು ತ್ವರಿತವಾಗಿ ಬಿಗಿಯಾದ ಸಾಲುಗಳಲ್ಲಿ ಕೆಲಸಮಾಡಲು ಶಕ್ತರಾಗಿರಬೇಕು, ಹೈಜ್ಯುಲೋಸ್ (ಭೂತಾಳೆಯ ಸ೦ತತಿ)ಯನ್ನು ಅದರ ಪ್ರಮುಖ ಬೆಳೆಗೆ ಹಾನಿ ಮಾಡದ೦ತೆ ಎಳೆಯಬೇಕು, ಪಿನಾಸ್ ( ಸ್ಪಾನಿಶ್ ನಲ್ಲಿ ಪೈನ್ಅಯಪಲ್)ಗಳನ್ನು ನಿಚ್ಚಳಗೊಳಿಸಬೇಕು ಹಾಗು ಪ್ರತಿ ಸಸ್ಯದ ಕೊಯ್ಲಿನ ಸಮಯವನ್ನು ನಿರ್ಧರಿಸಬೇಕು. ಬಹಳ ಬೇಗ ಬೆಳೆಯುವುದಕ್ಕೆ ಸಾಕಾಗುವಷ್ಟು ಸಕ್ಕರೆ ಇರಲಿಲ್ಲ, ಬಹಳ ತಡವಾಗಿ ಹಾಗು ಸಸ್ಯಗಳು ಕ್ವಿಯೋಟ್ (20-40 ಫೂಟ್ ಎತ್ತರದ ಕಾ೦ಡ)ನಷ್ಟು ಬೆಳೆಯಲು ಸಾಕಾಗುವಷ್ಟು ಸಕ್ಕರೆಯನ್ನು ಬಳಸಿಕೊಳ್ಳುತ್ತವೆ, ಮೇಲಿರುವ ಬೀಜಗಳು ಗಾಳಿಗೆ ಚದುರಿ ಹೋಗುತ್ತವೆ ಪಿನಾಸ್, 40-70 ಪೌ೦ಡ್ಸ್‌ಗಳಾಷ್ಟು ತೂಕವಿರುತ್ತದೆ, ಹಾಗು ಅವುಗಳನ್ನು ಒಂದು ವಿಶೇಷ ಕತ್ತರಿಯಾದ ಕೋವ ವನ್ನು ಉಪಯೊಗಿಸಿ ಕತ್ತರಿಸಲಾಗುತ್ತದೆ. [೧೭]ನಂತರ ಅವುಗಳಲ್ಲಿ ಲವಲೇಶವೂ ಇಲ್ಲದ೦ತೆ, ಅದರ ಸಾರವನ್ನು ಹಿ೦ಡಿ ಹಾಗು ನಂತರದಲ್ಲಿ ಅದನ್ನು ಕೊಳೆಯಿಸುವ ತೊಟ್ಟಿಯಲ್ಲಿ ಹಾಕಲಾಗುತ್ತದೆ. ಕೆಲವು ಟಕಿಲಾ ಕಾರ್ಖಾನೆಗಳು ಈಗಲು ಸಹಿತ ಹಳೆಯ ಪದ್ದತಿಯನ್ನೆ ಬಳಸುತ್ತವೆ (ಅರ್ಟಿಸಾನಲ್) ಇದರಲ್ಲಿ ಪಿನಾಸ್‌ ಗಳನ್ನು ಟಹೊನ (ಕಲ್ಲಿನ ಚಕ್ರ) ಬಳಸಿ ಕತ್ತರಿಸಲಾಗುತ್ತದೆ. ಮಸ್ಟೊ , (ಭೂತಾಳೆಯ ರಸ ಹಾಗು ಕೆಲವೊಮ್ಮೆ ನಾರು) ನಂತರ ಅವುಗಳನ್ನು ಬಹಳ ದಿನಗಳವರೆಗೆ ಮರದ ತೊಟ್ಟಿಯಲ್ಲಿ ಅಥವ ಉಕ್ಕಿನ ಪಾತ್ರೆಯಲ್ಲಿ ಕೊಳೆಯಲು ಬಿಟ್ಟಾಗ ಸಕ್ಕರೆಯು ಮಧ್ಯವಾಗಿ ಪರಿವರ್ತಿತವಾಗುತ್ತದೆ. ಪ್ರತಿಯೊ೦ದು ಕಂಪನಿಯು ಅದರ ಸ್ವ೦ತ ಯೀಸ್ಟ್‌ಅನ್ನು ರಹಸ್ಯವಾಗಿ ಕಾಪಾಡಿಕೊಂಡಿರುತ್ತಾರೆ[೧೬] ಕೊಳೆಯಿಸಿದ ಪದಾರ್ಥವನ್ನು ನಂತರ ಇ೦ಗಿಸಿ "ಆರ್ಡಿನರಿಯೊ " ಎ೦ಬ ಪದಾರ್ಥವನ್ನು ಉತ್ಪಾದಿಸಲಾಗುತ್ತದೆ, ಇದು ದಪ್ಪ ಹಾಗು ಬಿಳಿಯ ದ್ರವ ಪದಾರ್ಥ ಅದನ್ನು ನಂತರ ಎರಡನೆ ಭಾರಿ ಇ೦ಗಿಸಿ ತೆಳುವಾದ ಸ್ವಚ್ಚ ಬೆಳ್ಳಿಯ ಟಕಿಲಾವನ್ನು ಉತ್ಪಾದಿಸಲಾಗುತ್ತದೆ. ಕೆಲವು ಮಧ್ಯಕಾರ್ಖಾನೆಗಳು ಬ೦ದ ಪದಾರ್ಥವನ್ನು ಮತ್ತೆ ಇ೦ಗಿಸಿ ಮೂರನೆಯ ಇ೦ಗಿಸಿದ ಪದಾರ್ಥವನ್ನು ಪಡೆಯುತ್ತಾರೆ. ಅದರಿ೦ದ ಟಕಿಲಾವನ್ನು ತೆಳು ಮಾಡಿ ಹಾಗು ನಂತರ ಅದನ್ನು ಬಾಟಲುಗಳಲ್ಲಿ ತು೦ಬಿಸಿ "ಸಿಲ್ವರ್ ಟಕಿಲಾ" ಎಂದು ಹೆಸರಿಸಲಾಗಿತ್ತದೆ, ಅಥವ ಅದನ್ನು ಕೊಳೆಯುವ ತೊಟ್ಟಿಗಳಿಗೆ ಹಾಯಿಸಲಾಗುತ್ತದೆ.


ಸಾಮಾನ್ಯವಾಗಿ, ತಗ್ಗುಪ್ರದೇಶ ಹಾಗು ಎತ್ತರ ಪ್ರದೇಶದಲ್ಲಿ ಬೆಳೆದ ಭೂತಾಳೆ ಸಸ್ಯದಿ೦ದ ತಯಾರಿಸಿದ ಟಕಿಲಾದ ಸ್ವಾದದಲ್ಲಿ ಬಹಳ ವ್ಯತ್ಯಾಸ ಕ೦ಡುಬರುತ್ತದೆ. ಎತ್ತರ ಪ್ರದೇಶದಲ್ಲಿ ಬೆಳೆದ ಭೂತಾಳೆ ಸಸ್ಯವು ಹೆಚ್ಚಿನ ಸಿಹಿಯಾದ ಸ್ವಾದವನ್ನು ಹೊಂದಿದೆ, ಆದರೆ ಅದರ ಬೆಳೆಯುವ ರೀತಿಯಿ೦ದ ಬಹಳ ಪ್ರಮುಖವಾಗಿದೆ. ಆದರೆ ಇತ್ತೀಚೆಗೆ ಅದರ ಹೋಲಿಕೆಯಲ್ಲಿ ಅಸ್ಪಷ್ಟತೆ ಕ೦ಡುಬ೦ದಿದ್ದರಿ೦ದ, ಏಕೆ೦ದರೆ 1999/2000 ರಲ್ಲಿ ಭೂತಾಳೆ ಸಸ್ಯದ ಅಭಾವ ಕ೦ಡುಬ೦ದಿತು. ಅಲ್ಲಿಂದ ಈಚೆಗೆ, ಬಹಳ ಹೆಚ್ಚಿನ ಎತ್ತರಪ್ರದೇಶದ ಬೆಳೆಗಾರರು ತಮ್ಮ ಸ೦ಪತ್ತನ್ನು ಎತ್ತರಪ್ರದೆಶದಲ್ಲಿ ಬಾಡಿಗೆಗೆ ನೀಡಿದರು ಹಾಗು ಭೂತಾಳೆ ಬೆಳೆಯನ್ನು ಎರಡು ಪ್ರದೇಶದಲ್ಲಿ ಟಕಿಲಾದ ಉತ್ಪಾದನೆಗೆ ತದೆ ಹಿಡಿಯಲಾಯಿತು.


ಆದರೂ, ಬಹಳ ಭೂತಾಳೆ ಸಸ್ಯಗಳನ್ನು ಪದುವಣ ದಿಕ್ಕಿಗೆ ಮುಖವಾಗಿರುವ ಇಳಿಜಾರು ಪ್ರದೇಶದಲ್ಲಿ ಬೆಳೆಸಲಾಗುತ್ತದೆ, ಇದರಿ೦ದಾಗಿ ಸಸ್ಯಗಳಿಗೆ ಪೂರ್ತಿ ದಿನ ಸೂರ್ಯನ ಬೆಳಕು ಬೀಳುವ೦ತಾಗುತ್ತದೆ. ಈ ಸಸ್ಯಗಳು ಉದ್ದ, ಅಗಲ, ಹಾಗು ಹೆಚ್ಚು ರಸಭರಿತವಾಗಿವೆ.. ತಗ್ಗುಪ್ರದೇಶದಲ್ಲಿ ಬೆಳೆದ ಭೂತಾಳೆ ಸಸ್ಯವು ಮಣ್ಣಿನ ಸ್ವದವನ್ನು ಹೊ೦ದಿರುತ್ತದೆ ಅಲ್ಲದೆ ಅವುಗಳು ಸಣ್ಣದಾಗಿರುತ್ತವೆ.[ಸೂಕ್ತ ಉಲ್ಲೇಖನ ಬೇಕು]


ಟಕಿಲಾದ ವಿಧಗಳು

[ಬದಲಾಯಿಸಿ]

ಟೆಕ್ವಿಲಾದಲ್ಲಿ ಮೂಲಭೂತವಾಗಿ ಎರಡು ವಿಧಗಳು :ಮಿಗ್ಸಟೋಸ್ ಹಾಗು 100% ಭೂತಾಳೆ. ಮಿಕ್ಸ್‌ಟೋಸ್ 49% ಬೇರೆ ಸಕ್ಕರೆಯನ್ನು ಕೊಳೆಯುವ ವಿಧಾನದಲ್ಲಿ ಭೂತಾಳೆಯೊಟ್ಟಿಗೆ ಶೇಷವಾಗಿ ಬಳಸುತ್ತದೆ. ಮಿಕ್ಸ್‌ಟೋಸ್, ಗ್ಲುಕೋಸ್ ಹಾಗು ಫ್ರಕ್ಟೋಸ್ ಎರಡು ಸಕ್ಕರೆಗಳನ್ನು ಬಳಸಿಕೊಳ್ಳುತ್ತದೆ.


100% ಭೂತಾಳೆ ಟೆಕ್ವಿಲಾವು,ಬ್ಲಾ೦ಕೋ ಅಥವಾ ಪ್ಲಾಟ ಒರಟಾದ, ದೊಡ್ಡ ಸ್ವಾದಗಳನ್ನು ಇ೦ಗಿಸಿದ ಭೂತಾಳೆಯೊ೦ದಿಗೆ ಹೊ೦ದಿರುತ್ತವೆ, ಆದರೆ ರೆಪೊಸಾಡೊ ಹಾಗು ಅನೇಜೊಗಳು ಸೂಕ್ಷ್ಮ,ನುಣುಪಾದ ಹಾಗು ಬಹಳ ಸಂಕೀರ್ಣವಾಗಿರುತ್ತವೆ. ಪೀಪಾಯಿಗಳಲ್ಲಿ ಕೊಳೆಯಿಸಿದ ಬೇರೆ ಮಧ್ಯಗಳು, ಹಾಗು ಟೆಕ್ವಿಲಾವು ಮರದ ಸ್ವಾದವನ್ನು ಪಡೆದುಕೊಳ್ಳುತ್ತದೆ, ಅಲ್ಲದೆ ಮಧ್ಯದ ಗಡಸುತನವನ್ನು ಸ್ನಿಗ್ಧಗೊಳಿಸುತ್ತದೆ. ಭೂತಾಳೆ ಟೆಕ್ವಿಲಾದ ಪ್ರಮುಖ ಸ್ವಾದದ ವ್ತತ್ಯಾಸವೆ೦ದರೆ 100% ಮೂಲ ಅ೦ಶಗಳು, ಅವುಗಳು ಧಾನ್ಯ ಮಧ್ಯಕ್ಕಿ೦ತ ಬಹಳ ಸಸ್ಯೀಯವಾಗಿದೆ ( ಹಾಗು ಅವುಗಳು ಬಹಳ ಕಠಿಣ).


ಟಕಿಲಾವನ್ನು ಸಾಮಾನ್ಯವಾಗಿ ಕೆಳಗಿನ ಐದು ವಿಧಾನಗಳಿಂದ ಬಾಟಲುಗಳಲ್ಲಿ ಶೇಖರಿಸಲಾಗುತ್ತದೆ:[]

  • Blanco ("white") ಅಥವಾ plata ("silver") – ಬಿಳಿ ಮದ್ಯ, ಹಳೆಯದಲ್ಲದ ಮತ್ತು ಬಾಟಲಿನಲ್ಲಿ ಶೇಖರಿಸಿದ ಅಥವಾ ಇಂಗಿಸಿದ ತಕ್ಷಣ ಶೇಖರಣೆ ಮಾಡಿರುವುದು, ಸ್ಟೈನ್‌ಲೆಸ್ ಸ್ಟೀಲ್ ಅಥವಾ ನ್ಯೂಟ್ರಲ್ ಓಕ್ ಬ್ಯಾರೆಲ್‌ಗಳಾಲ್ಲಿ ಎರಡು ತಿಂಗಳಿಗಿಂತ ಕಡಿಮೆ ಹಳೆಯದಾಗಿರುವುದು;
  • Joven ("young") ಅಥವಾ oro ("gold") – ಸಿಲ್ವರ್ ಟಕಿಲಾ ಮತ್ತು ರೆಪೊಸಾಡೊ ಮತ್ತು/ಅಥವಾ ಅನೆಜೊ ಮತ್ತು/ಅಥವಾ ಹೆಚ್ಚಾದ ಅನೆಜೊ ಟಕಿಲಾದ ಮಿಶ್ರಣಗಳಿಂದಾದದ್ದು;
  • ರೆಪೊಸಾಡೊ ("rested") – ಓಕ್ ಬಾರೆಲ್‌ಗಳಲ್ಲಿ ಕನಿಷ್ಠ ಎರಡು ತಿಂಗಳು ಹಳೆಯದಾದ, ಆದರೆ ಒಂದು ವರ್ಷಕ್ಕಿಂಗ ಕಡಿಮೆ ಹಳೆಯದಾದ ಮದ್ಯ;
  • Añejo ("aged" or "vintage") – ಓಕ್ ಬಾರೆಲ್‌ಗಳಲ್ಲಿ ಕನಿಷ್ಠ ಒಂದು ವರ್ಷ ಹಳೆಯದಾದ, ಆದರೆ ಮೂರು ವರ್ಷಕ್ಕಿಂಗ ಕಡಿಮೆ ಹಳೆಯದಾದ ಮದ್ಯ;
  • Extra Añejo ("extra aged" or "ultra aged") – ಓಕ್ ಬಾರೆಲ್‌ಗಳಲ್ಲಿ ಕನಿಷ್ಠ ಮೂರು ವರ್ಷ ಹಳೆಯದಾದ ಮದ್ಯ. 2006 ಮಾರ್ಚ್‌ನಲ್ಲಿ ಈ ಶ್ರೇಣಿಯು ಸ್ಥಾಪಿತವಾಯಿತು

ಬಲವರ್ಧನೆಯ ವಿಧಾನಗಳು

[ಬದಲಾಯಿಸಿ]
ಟಕಿಲಾದ ಸ್ಥಿತಿ ಸ್ಥಿರವಾಗೆದೆ ಅಥವಾ ಓಕ್ ಬ್ಯಾರೆಲ್‌ಗಳಲ್ಲಿ ಹಳೆಯದಾಗಿದೆ


ಹೆಚ್ಚು ಸಂಕೀರ್ಣ ಸುವಾಸನೆ ಹಾಗೂ ಫಲಭರಿತವಾಗಲು ರೆಪೊಸಾಡೊಗಳನ್ನು 20,000 ಲೀಟರ್‌ಗಳಷ್ಟು ದೊಡ್ದ ಪೀಪಾಯಿಗಳಲ್ಲಿ ಹಾಗು ಕೊಳವೆಗಳಲ್ಲಿ ಬಿಡಬೇಕು. ಮುಖ್ಯವಾಗಿ ಬೇಕಾಗಿರುವ ಓಕ್‌ಗಳು ಯು ಎಸ್, ಫ್ರಾನ್ಸ್, ಅಥವಾ ಕೆನಡಾದಿ೦ದ ಬರುತ್ತವೆ, ಹಾಗು ಅವುಗಳು ಸಾಮಾನ್ಯವಾಗಿ ಬಿಳಿಯ ಓಕ್, ಕೆಲವು ಕ೦ಪೆನಿಗಳು ಧೂಮದ ವಾಸನೆಯನ್ನು ಪಡೆಯಲು ಮರವನ್ನು ಬಳಸುತ್ತಾರೆ, ಅಥವಾ ಹಿ೦ದೆ ಹಲವಾರು ಮಧ್ಯ (ಉದಾ:ವಿಸ್ಕಿ, ಸ್ಕಾಚ್, ಅಥವಾ ವೈನ್) ಗಳನ್ನು ಸ೦ಗ್ರಹಿಸಿಡಲು ಬಳಸುತ್ತಿದ್ದ ಪೀಪಾಯಿಗಳನ್ನು ಬಳಸುತ್ತಾರೆ. ಕೆಲವು ರೆಪೊಸಾಡೊಗಳನ್ನು ಮರದ ವಾಸನೆ ಹಾಗು ನಯವಾದ ಪದರವನ್ನು ಪಡೆಯಲು ಹೊಸ ಪೀಪಾಯಿಗಳನ್ನು ಸಹ ಬಳಸಿ ಕೊಳೆಯಲು ಬಿಡಲಾಗುತ್ತದೆ, ಹಾಗು ಇದಕ್ಕೆ ಬೇಕಾಗುವ ಸಮಯವು ಸಹ ಕಡಿಮೆ.[೧೮]

ಕೆಲವೊಮ್ಮೆ ಪೂರ್ವದಲ್ಲಿ ರೆಪೊಸಾಡೊಗಳನ್ನು ಸ೦ಗ್ರಹಿಸಿದ೦ತಹ ಪೀಪಾಯಿಗಳಲ್ಲಿ ಅನೆಜೋಗಳನ್ನು ಸಹ ಸ೦ಗ್ರಹಿಸಿಡಲಾಗುತ್ತದೆ ಪೀಪಾಯಿಗಳು 600 ಲೀಟರ್ ಗಿ೦ತ ಹೆಚ್ಚಿನದಾಗಿರಬಾರದು,ಹೇಗಾದರು ಬಹಳಷ್ಟನ್ನು 200 ಲೀಟರ್ ನಷ್ಟು ದೊಡ್ದ ಪೀಪಾಯಿಗಳನ್ನು ಸಹ ಬಳಸಲಾಗುತ್ತದೆ. ಬಹಳಷ್ಟು ಉಪಯೋಗಿಸಿದ೦ತಹ ಪೀಪಾಯಿಗಳು ವಿಸ್ಕಿ ಅಥವ ಬಾರ್ಬನ್ ಮಧ್ಯ ಕ೦ಪೆನಿಗಳದ್ದಾಗಿರುತ್ತದೆ, ಇವುಗಳು ಅಮೆರಿಕ, ಫ್ರಾನ್ಸ್, ಕೆನಡ ದೇಶಗಳಲ್ಲಿವೆ, ಹೀಗೆ ಉಪಯೋಗಿಸುವುದರ ಫಲಿತಾ೦ಶವಾಗಿ ದಟ್ಟ ಬಣ್ಣ ಹಾಗು ಸ೦ಕೀರ್ಣ ಸ್ವಾದಗಳು ಅನೆಜೊ ಟೆಕ್ವಿಲಾದಲ್ಲಿ ಉ೦ಟಾಗುತ್ತದೆ ಬಹಳಷ್ಟು ಜನಗಳ[who?] ಅನಿಸಿಕೆಯ೦ತೆ 4 ವರ್ಷಗಳ ಕೊಳೆಯುವಿಕೆಯ ನಂತರ ಟೆಕ್ವಿಲಾವು ಅದರ ಅತ್ಯುತ್ತಮ ರೂಪವನ್ನು ಪಡೆಯುತ್ತದೆ, ಪೀಪಾಯಿಗಳಲ್ಲಿ ಆಗುವ ಆವಿಯನ್ನು ತಡೆಯಲು ಅನೆಜೋವನ್ನು ಮರದ ಪೀಪಾಯಿಗಳಿ೦ದ ತೆಗೆದು ಉಕ್ಕಿನ ಪಾತ್ರೆಗಳಲ್ಲಿ ಹಾಕಬೇಕು.[೧೮]


ಕ್ರಿಮಿ

[ಬದಲಾಯಿಸಿ]

ಕೆಲವು ಟಕಿಲಾಗಳ ಬಾಟಲ್‌ಗಳಲ್ಲಿ ಕ್ರಿಮಿಗಳಿರುತ್ತವೆ ಎಂಬುದು ಒಂದು ಸಾಮಾನ್ಯವಾದ ತಪ್ಪು ತಿಳುವಳಿಕೆ. ಕೆಲವೊಂದು ಮೆಝ್‌ಕಲ್ಗಳು, ಸಾಮನ್ಯವಾಗಿ ಓಕ್ಸಾಕಾ ರಾಜ್ಯದಲ್ಲಿ, ನಿರಂತರ ಮಾರಾಟವಾಗುವ ಕಾನ್ ಗುಸಾನೊ, ಮತ್ತು ಅದು 1940ಗಳಲ್ಲಿ ಪ್ರಾರಂಭಿಸಿದ ಒಂದು ವ್ಯಾಪಾರದ ತಂತ್ರ ಈ ಕ್ರಿಮಿಯು ಹಿಪೊಪ್ಟಾ ಅಗಾವಿಸ್ ಎಂಬ ಚಿಟ್ಟೆಯ ಲಾರ್ವಾ ಸ್ಥಿತಿ. ಇದು ಭೂತಾಳೆ ಗಿಡದಲ್ಲಿ ವಾಸಿಸುತ್ತದೆ. ಸಂಸ್ಕರಣೆಯ ಸಂದರ್ಭದಲ್ಲಿ ಈ ಸಸ್ಯದಲ್ಲಿ ಕಾಣುವ ಒಂದು ಕ್ರಿಮಿಯೂ ಇದು ಆವರಿಸಿಕೊಂಡಿರುವುದರ ಸೂಚನೆಯಾಗಿರುತ್ತದೆ ಮತ್ತು ಅದರಿಂದಾಗಿ ಉತ್ಪನ್ನದ ಗುಣಮಟ್ಟವು ಕಳಪೆಯಾಗುತ್ತದೆ. ಹೇಗಾದರೂ ಈ ತಪ್ಪು ತಿಳುವಳಿಕೆಯು ಮುಂದುವರಿಯುತ್ತದೆ, ಮತ್ತು ಎಲ್ಲಾ ಪ್ರಯತ್ನಗಳ ಹಾಗೂ ವ್ಯಾಪಾರದ ತಂತ್ರಗಳು ಟಕಿಲಾವನ್ನು ಪ್ರಿಮಿಯಮ್-ಸಿಮಿಲರ್ ಎಂದು ಕಾಗ್ನಾಕ್ ಕೂಡ ಬ್ರಾಂಡಿ - ಅಲ್ಲಿ ಕೆಲ ಅವಕಾಶವಾದಿ ತಯಾರಕರು ಈ ಸಮಯವನ್ನು ಮಾರುಕಟ್ಟೆಯಲ್ಲಿ ಬಳಸಿಕೊಳ್ಳುತ್ತಾರೆ.[೧೯]

ಬ್ರ್ಯಾಂಡ್‌ಗಳು

[ಬದಲಾಯಿಸಿ]

ಟಕಿಲಾದಲ್ಲಿ ಹಲವಾರು ಬ್ರ್ಯಾಂಡ್‌ಗಳಿವೆ; ದಿ ಕಾನ್ಸೆಜೊ ರೆಗ್ಯುಲಡರ್ ಡೆಲ್ ಟಕಿಲಾ ವು ವರದಿ ಮಾಡಿರುವಂತೆ 2008ರವೆಗೆ 128 ತಯಾರಿಕರಿಂದ ಸುಮಾರು 901 ರಿಜಿಸ್ಟರ್ಡ್ ಬ್ರ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. [೨೦]

ಕುಡಿಯುವ ಟಕಿಲಾ

[ಬದಲಾಯಿಸಿ]

ಟಕಿಲಾವು ಮೆಕ್ಸಿಕೊದಲ್ಲಿ ಅನೇಕವೇಳೆ ನೇರವಾಗಿ ಕುಡಿಯಲ್ಪಡುತ್ತದೆ. ಕೆಲವು ಪ್ರದೇಶಗಳಲ್ಲಿ ಟಕೀಲಾವನ್ನು ಒಂದು ಸಿಹಿ,ಹುಳಿ ಮತ್ತು ಖಾರದ ಪಾನಿಯವಾದ ಕಿತ್ತಳೆರಸ, ಗ್ರೆನಾಡಿನ್(ಅಥವಾ ಟೊಮ್ಯಾಟೊ ರಸ)ಮತ್ತು ಖಾರದ ಮೆಣಸಿನಕಾಯಿಂದ ತಯಾರಿಸಿದ ಸ್ಯಾಂಗ್ರೀಟಾದೊಂದಿಗೆ ಮಿಶ್ರಣ ಮಾಡಿ ಕುಡಿಯುವುದು ಜನಪ್ರಿಯವಾಗಿದೆ. ಸಮಗಾತ್ರದ ಟಕಿಲಾ ಹಾಗು ಸಾ೦ಗ್ರಿಟಗಳನ್ನು ಅದರಲ್ಲಿ ಉಪ್ಪು ಹಾಗು ಸುಣ್ಣ ಇಲ್ಲದೆ ಪರ್ಯಾಯವಾಗಿ ಒ೦ದೊಂದು ಗುಟುಕು ಆಸ್ವಾದಿಸಲಾಯಿತು.[೨೧]


ಅನೇಕವೇಳೆ ಮೆಕ್ಸಿಕೊದ ಹೊರಗಡೆ, ಒಂದು ಗುಟುಕು ಟಕಿಲಾವನ್ನು [[ಉಪ್ಪು|ಉಪ್ಪು [[]]ಹಾಗು ಒಂದು ತು೦ಡು ಸುಣ್ಣದ ಜೊತೆಗೆ ಬಡಿಸಲಾಗುತ್ತದೆ. ಇದನ್ನು "ಟಕಿಲಾ ಕ್ರೂಡ" ಹಾಗು ಕೆಲವೊಮ್ಮೆ "ಟ್ರೈನಿ೦ಗ್ ವೀಲ್ಸ್", "ಲಿಕ್-ಸಿಕ್-ಸಕ್" ಅಥವಾ "ಲಿಕ್-ಶೂಟ್-ಸಕ್" ಎ೦ದೂ ಹೆಸರಿಸಲಾಗುತ್ತದೆ (ಯಾವ ರೀತಿಯ ಅ೦ಶಗಳನ್ನು ಇದು ಒಳಗೊ೦ಡಿದೆ ಎ೦ಬುದರ ಮೇಲೆ ಹೆಸರುಗಳು ಅವಲ೦ಬಿತವಾಗಿವೆ). ಕುಡಿಯುವವರು ಕೈಯಿನ ಹಿ೦ಭಾಗವನ್ನು ಅ೦ದರೆ ತೋರುಬೆರಳಿನ ಕೆಳಭಾಗವನ್ನು ತೇವಗೊಳಿಸಿಕೊಳ್ಳುತ್ತಾರೆ (ಸಾಮಾನ್ಯವಾಗಿ ನೆಕ್ಕುವುದರ ಮೂಲಕ) ಹಾಗು ಉಪ್ಪಿನ ಮೇಲೆ ಸುರಿಯುತ್ತಾರೆ. ನಂತರ ಕೈಯ ಮೇಲಿರುವ ಉಪ್ಪನ್ನು ನೆಕ್ಕುತ್ತಾರೆ, ಆಮೇಲೆ ಟಕಿಲಾವನ್ನು ಕುಡಿಯುತ್ತಾರೆ ಹಾಗು ವೇಗವಾಗಿ ಹಣ್ಣಿನ ಪದರವನ್ನು ಕಚ್ಚುತ್ತಾರೆ. ಇದು ಜೊತೆಯಾಗಿ ಕುಡಿಯುವವರ ಗು೦ಪಿನಲ್ಲಿ ಸಾಮಾನ್ಯವಾಗಿರುತ್ತದೆ. ಈ ರೀತಿಯಾಗಿ ಅಶುದ್ಧವಾಗಿ ಟಕಿಲಾವನ್ನು ಕುಡಿಯುವ ವಿಧಾನಕ್ಕೆ ಟಕಿಲಾ ಸ್ಲಾಮರ್ ಎನ್ನುವರು, (ಇದು ಸಾಮಾನ್ಯವಾಗಿ ಟಕಿಲಾ ಹಾಗು ಇ೦ಗಾಲ ದ್ರಾವಣದ ಮಿಶ್ರಣ. ಹೇಗಾದರು ಒಂದು ಗುಟುಕು ನೇರವಾದ ಟಕಿಲಾವು ಮೆಕ್ಸಿಕನ್ ನ ಸ೦ಪ್ರದಾಯ,ಆದರೂ ನಿ೦ಬೆ ಹಣ್ಣು ಬಳಸುವವರ ಮೂಲ ಆದ್ಯತೆ.[೨೨] ನ೦ಬಿಕೆಯ ಪ್ರಕಾರ ಉಪ್ಪು ಟಕಿಲಾದ "ಉರಿಯುವಿಕೆ"ಯನ್ನು ಕಡಿಮೆಗೊಳಿಸುತ್ತದೆ ಹಾಗು ಹುಳಿ ಹಣ್ಣು ಸ್ವಾದವನ್ನು ತುಲನೆ ಮಾಡಿ ಹೆಚ್ಚಿಸುತ್ತದೆ. ಜರ್ಮನಿ ಹಾಗು ಬೇರೆ ದೇಶಗಳಲ್ಲಿ, ಟಕಿಲಾ ಓರೋ (ಚಿನ್ನ) ವನ್ನು ಪೂರ್ವದಲ್ಲಿ ದಾಲ್ಚಿನ್ನಿ ಯ ಜೊತೆಗೆ ಹಾಗು ನಂತರದಲ್ಲಿ ಕಿತ್ತಳೆಯ ಪದರದೊಟ್ಟಿಗೆ ಕುಡಿಯುತ್ತಾರೆ, ಅಲ್ಲದೆ ಟಕಿಲಾ ಬ್ಲಾನ್ಕೋ (ಬೆಳ್ಳಿ)ವನ್ನು ಉಪ್ಪು ಹಾಗು ನಿ೦ಬೆಯ ಜೊತೆ ಕುಡಿಯುತ್ತಾರೆ. ಕೊನೆಗೆ, ಎಲ್ಲ ಪ್ರಮುಖ ಮಧ್ಯದ೦ತೆ, ಬಹಳಷ್ಟು ಗುಟುಕು ಸ೦ಭ೦ದದ ಕುಡಿಯುವ ಆಟಗಳು ಸಹ ಇವೆ, ಹಾಗು "ಸ್ಟ೦ಟ್ " ಕುಡಿತ ಅ೦ದರೆ ಬಾಡಿ ಶಾಟ್‌ಗಳು ಸಹ ಇವೆ.

ಇದರಿಂದ ತಿಳಿಯುವುದೇನೆಂದರೆ ಬಹಳ ಹೆಚ್ಚಿನ-ಗುಣಮಟ್ಟದ, 100% ಭೂತಾಳೆ ಟಕಿಲಾವು ಹೆಚ್ಚಿನ ಪ್ರಮಾಣದ ಮಧ್ಯ ಉರಿಯುವಿಕೆಯನ್ನು ತರುವುದಿಲ್ಲ, ಹಾಗು ಉಪ್ಪು ಮತ್ತು ನಿ೦ಬೆಯೊಟ್ಟಿಗೆ ಸೇವಿಸುವುದರಿ೦ದ ಸ್ವಾದವು ಸಹ ಕಡಿಮೆಯಾಗುತ್ತದೆ. ಈ ಟಕಿಲಾವನ್ನು ಸಾಮಾನ್ಯವಾಗಿ ಸ್ನಿಫ್ಟರ್ ಗ್ಲಾಸ್ ಲೋಟಗಳಲ್ಲಿ ಕುಡಿಯುತ್ತಾರೆ, ಅಲ್ಲದೆ ವೇಗವಾಗಿ ನು೦ಗುವುದರ ಬದಲಾಗಿ, ಗುಟುಕು ಲೋಟಗಳಲ್ಲಿ, ರುಚಿನೋಡುತ್ತಾರೆ.


ಟಕಿಲಾ ಗಾಜಿನ ಲೋಟಗಳು

[ಬದಲಾಯಿಸಿ]
ಒಂದು ಮಾರ್ಗರಿಟಾ ಗ್ಲಾಸ್

ನೀಟ್‌ಆಗಿ (ಯಾವುದೇ ಅಧಿಕ ಅಂಶಗಳನ್ನು ಸೇರಿಸದೆ) ಕೊಟ್ಟಾಗ, ಟಕಿಲಾವು ಹೆಚ್ಚಿನ ಬಾರಿ ಕಿರಿದಾದ ಕಂಠವುಳ್ಳ ಕಬಲಿಟೊ ("ಸ್ಪಾನಿಶ್‌ನ ಚಿಕ್ಕ ಮನೆ") ಎಂದು ಕರಯಲ್ಪಡುವ ಗಾಜಿನ ಲೋಟದಲ್ಲಿ ಕೊಡಲಾಗುತ್ತದೆ,[೨೩] ಆದರೂ ಕೆಲವು ಬಾರಿ ಸ್ನಿಫ್ಟರ್‌ನಿಂದ ಟಂಬ್ಲರ್‌ನವರೆಗೆ ಯಾವ ಗಾಜಿನ ಲೋಟದಲ್ಲಾದರೂ ಆಗಬಹುದು.


The Consejo Regulador del Tequila (ಟಕಿಲಾ ರೆಗ್ಯುಲೇಟರಿ ಕೌನ್ಸಿಲ್) 2002ರಲ್ಲಿ ರೀಡಲ್‌ನಿಂದ ಮಾಡಿರುವ Ouverture Tequila glass ಎಂದು ಕರೆಯಲ್ಪಡುವ ಗ್ಲಾಸ್‌ಅನ್ನು "ಅಧಿಕೃತ ಟಕಿಲಾ ಗ್ಲಾಸ್" ಎಂದು ಅಂಗೀಕರಿಸಿತು.[೨೪]


ಮಾರ್ಗರಿಟಾ ಗ್ಲಾಸ್, ಉಪ್ಪು, ಸಕ್ಕರೆಯಿಂದ ಆವರಿಸಿದ , ಅಥವಾ ಸಾದಾ, ಇದು ಎಲ್ಲಾ ಟಕಿಲಾ/ಹಣ್ಣು ಮಿಶ್ರಿತ ಪಾನೀಯ ಜೆನ್ರೆ, ಅಲ್ಲದೆ ಮಾರ್ಗರಿಟಾವನ್ನೂ ಒಳಗೊಂಡಿದೆ.


ಇತರೆ ಪಾನೀಯಗಳು

[ಬದಲಾಯಿಸಿ]

ಟಕಿಲಾವು ಸೇರಿದಂತೆ ಕೊನೆಯಿಲ್ಲದಷ್ಟು ವೈವಿಧ್ಯಮಯ ಪಾನೀಯಗಳು, ತಯಾರಿಸುವವನ ಕಲ್ಪನಾಶಕ್ತಿಯ ಮೇಲೆ ಭರವಸೆ ಹೊಂದಿವೆ. ಇದರೊಂದಿಗೆ ಹೆಚ್ಚಿನ ಗಡಸು ಮದ್ಯಗಳು, ಮಾರ್ಟಿನಿ ವೇರಿಯಂಟ್ ಎಂಬ ಹೆಸರಿನ ಒಂದು ಮದ್ಯವು ಟಕಿಲಾವನ್ನು ಒಳಗೊಂಡಿರುವುದಷ್ಟೆ ಅಲ್ಲದೆ ಟಕಿಲಾ ಸನ್‌ರೈಸ್ ಮತ್ತು ಮಟಡರ್ ಮುಂತಾದ ಹಣ್ಣಿನ ರಸಗಳ ಜೊತೆಗೆ ಸೇರಿಸಿ ಮಾಡಿದಂತಹ ಟಕಿಲಾಗಳನ್ನು ಸಹ ಒಳಗೊಂಡಿವೆ. ಟಕಿಲಾ ಸ್ಲ್ಯಾಮರ್‌ನಲ್ಲಿರುವಂತೆ, ಸೋಡಾ ಮತ್ತು ಇತರೆ ಇಂಗಾಲಯುಕ್ತ ಪಾನೀಯಗಳು ಒಂದು ಸಾಮಾನ್ಯವಾದಂತಹ ಮಿಶ್ರಣವಾಗಿವೆ. ಟಕಿಲಾವು ಪಾಪಾಸು ಕಳ್ಳಿಯ ಹುದುಗುವಿಕೆಯಿಂದ ಆಗಿಲ್ಲ ಭೂತಾಳೆಗಳು ಮತ್ತು ಕಳ್ಳಿಗಳು ಎರಡೂ ರಸಭರಿತವಾಗಿದ್ದರೂ, ಒಂದಕ್ಕೊಂದು ಸಂಬಂಧಿಸಿಲ್ಲ.

ಯುನೈಟೆಡ್ ಸ್ಟೇಟ್ಸ್‌ನಲ್ಲಿ, ಜುಲೈ 24 ರಂದು ನ್ಯಾಷನಲ್ ಟಕಿಲಾ ದಿನ.[೨೫]

ಟಿಪ್ಪಣಿಗಳು

[ಬದಲಾಯಿಸಿ]
  1. http://www.ianchadwick.com/tequila/jalisco.htm
  2. "Declaración General de Protección a la Denominación de Origen "Tequila"". Consejo Regulador del Tequila. 1977-10-13. Archived from the original on 2010-07-18. Retrieved 2009-04-08.
  3. ೩.೦ ೩.೧ "Oficial Mexican Standard for Tequila".[permanent dead link]
  4. Chadwick, Ian (2004). "In Search of the Blue Agave: History and Culture".
  5. "Brown-Forman Completes Casa Herradura Acquisition for $776 Million (Brown-Forman press release)". Brown-Forman Corporation. 2006. Archived from the original on 2010-01-18. Retrieved 2009-12-30.
  6. ೬.೦ ೬.೧ ೬.೨ Romo, Miguel Aguilar - El Director General de Normas (2006). "NORMA OFICIAL MEXICANA NOM-006-SCFI-2005, BEBIDAS ALCOHÓLICAS-TEQUILA-ESPECIFICACIONES" (PDF).
  7. "Fortune Brands: Our Brands". Fortune Brands. 2005. Archived from the original on 2010-01-24. Retrieved 2009-12-30.
  8. ೮.೦ ೮.೧ Arias, Guillermo. Tequila struggles to define itself in Mexico. ಅಸೋಸಿಯೆಟೆಡ್ ಪ್ರೆಸ್ ಯುಎಸ್‌ಎ ಟುಡೆ 2004-11-28.
  9. "Bottle of Tequila Sold for $225,000". Associated Press Online. July 23, 2006.
  10. Jiwatram, Jaya (2008-11-10). "Creating Diamonds from Tequila". Popular Science. Retrieved 2008-11-15.
  11. ೧೧.೦ ೧೧.೧ ೧೧.೨ Tequila Sparks U.S.-Mexico Flap Archived 2012-11-03 ವೇಬ್ಯಾಕ್ ಮೆಷಿನ್ ನಲ್ಲಿ.. ಅಸೋಸಿಯೆಟೆಡ್ ಪ್ರೆಸ್ CBS ನ್ಯೂಸ್‌. 2003-09-25.
  12. ೧೨.೦ ೧೨.೧ ೧೨.೨ ೧೨.೩ Salt, tequila, trade agreement Archived 2011-08-29 ವೇಬ್ಯಾಕ್ ಮೆಷಿನ್ ನಲ್ಲಿ.. MSNBC News Services . MSNBC. 2006-01-17.
  13. Viva Margarita! Archived 2009-01-25 ವೇಬ್ಯಾಕ್ ಮೆಷಿನ್ ನಲ್ಲಿ.US, Mexico Ink New Tequila Agreement Archived 2009-01-25 ವೇಬ್ಯಾಕ್ ಮೆಷಿನ್ ನಲ್ಲಿ.. CalTrade Report . 2006-01-23.
  14. Agreement Between the Office of the United States Trade Representative and the Secretaría de Economía of the United Mexican States on Trade in Tequila Archived 2008-05-16 ವೇಬ್ಯಾಕ್ ಮೆಷಿನ್ ನಲ್ಲಿ. (pdf). 2006-01-17.
  15. Chadwick, Ian (2004). "In Search of the Blue Agave: Industry News & Information".
  16. ೧೬.೦ ೧೬.೧ ೧೬.೨ http://www.ianchadwick.com/tequila/cultivation.htm
  17. "ಆರ್ಕೈವ್ ನಕಲು". Archived from the original on 2009-05-25. Retrieved 2009-12-30.
  18. ೧೮.೦ ೧೮.೧ http://www.ianchadwick.com/tequila/types.htm
  19. Waller, James (2003). Drinkology: The Art and Science of the Cocktail. New York: Stewart, Tabori & Chang. p. 224. ISBN 1-58479-304-X. Let's get the whole worm thing straight right now, muchachos. If there's a worm at the bottom of your tequila bottle, you've either purchased gag-inducing hooch aimed at gullible gringos, or your top-shelf booze is infested by some kind of alcohol-breathing, alien bug.
  20. "Marcas de Tequila de Envasado Nacional" (in Spanish). Consejo Regulador del Tequila A.C. 2008-11-03. Archived from the original (Microsoft Excel) on 2011-07-22. Retrieved 2008-11-12.{{cite web}}: CS1 maint: unrecognized language (link)
  21. "Recipe: Mexican Sangrita & Tequila "Completo"". Archived from the original on 2008-05-17. Retrieved 2008-04-25.
  22. "How To Drink Tequila". Archived from the original on 2008-04-10. Retrieved 2008-04-25.
  23. Chadwick, Ian (2004). "In search of the blue agave Part 7 of 14". Archived from the original on 2006-10-18. Retrieved 2009-12-30.
  24. "RIEDEL INTRODUCES OFFICIAL TEQUILA GLASS". Atlanta's Finest Dining.com. 2002-04-12. Archived from the original on 2010-01-02. Retrieved 2009-12-30.
  25. "2008 Occasion Calendar". Archived from the original on 2010-01-03. Retrieved 2009-12-30.

ಬಾಹ್ಯ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ಟಕಿಲಾ&oldid=1231058" ಇಂದ ಪಡೆಯಲ್ಪಟ್ಟಿದೆ