ಹೊಸದುರ್ಗ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಹೊಸದುರ್ಗ
India-locator-map-blank.svg
Red pog.svg
ಹೊಸದುರ್ಗ
ರಾಜ್ಯ
 - ಜಿಲ್ಲೆ
Karnataka
 - ಚಿತ್ರದುರ್ಗ
ನಿರ್ದೇಶಾಂಕಗಳು 13.8° N 76.29° E
ವಿಸ್ತಾರ
 - ಎತ್ತರ
 km²
 - 739 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
22480
 - {{{population_density}}}/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 577527 [೧]
 - ++91-8199 [೨]
 - KA 16

ಚಿತ್ರದುರ್ಗದ ಆರು ತಾಲ್ಲೂಕುಗಳಲ್ಲಿ ಪ್ರಮುಖವಾದ ತಾಲ್ಲೂಕಾಗಿದ್ದು ಒಂದು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದೆ.ಈ ಹೊಸದುರ್ಗದ ಸುತ್ತಲೂ ಕೋಟೆ ಇದ್ದು ಐದನೇ ಮದಕರಿನಾಯಕನ ಕಾಲದಲ್ಲಿ ನಿರ್ಮಾಣವಾಗಿದೆ. ಈ ಸುಂದರನಗರವು "ವೇದಾವತಿ" ಹಿನ್ನೀರು ಪ್ರದೇಶದಲ್ಲಿದ್ದು ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ.

ಜನಸಂಖ್ಯೆ[ಬದಲಾಯಿಸಿ]

ಸನ್. ೨೦೦೧ ರ ಜನಗಣತಿಯ ಪ್ರಕಾರ, ಹೊಸದುರ್ಗದಲ್ಲಿ ೨೨,೪೮೦ ಜನ ಪುರುಷರು, ಒಟ್ಟು ಜನಸಂಖ್ಯೆಯ ೫೨% ರಷ್ಟು, ಹಾಗೂ ೪೮% ಮಹಿಳೆಯರು ವಾಸಿಸಿದ್ದರು. ಸರಾಸರಿ, ೭೨% ಅಕ್ಷರತೆ ಇದೆ. ರಾಷ್ಟ್ರದ ಸಾಕ್ಷರತೆಗಿಂತ ೫೯.೫% ಹೆಚ್ಚು. ಪುರುಷರು ೭೬%, ಮತ್ತು ಮಹಿಳೆಯರು, ೬೮%. ಹೊಸದುರ್ಗದ ಸರಾಸರಿ ೧೨% ಮಕ್ಕಳು ೬ ವರ್ಷಕ್ಕಿಂತ ಕಡಿಮೆಯವರು.

ಹೊಸದುರ್ಗದಲ್ಲಿ ಖನಿಜಗಳು ಹೆಚ್ಚಾಗಿ ದೊರೆಯುತ್ತವೆ[ಬದಲಾಯಿಸಿ]

ಕೃಷಿಯೇ ಇಲ್ಲಿನ ಜೀವಾಳ. ಹೆಚ್ಚು ಕಾರ್ಖಾನೆಗಳಿಲ್ಲ. ಭೂಮಿಯಲ್ಲಿ ಲೈಮ್ ಸ್ಟೋನ್, ಬಾಕ್ಸೈಟ್, 'ಕಬ್ಬಿಣದ ಅದುರು,' 'ಮ್ಯಾಂಗನೀಸ್,' 'ಡೊಲೊಮೈಟ್ ಮೊದಲಾದ ಹಲವಾರು ಖನಿಜಗಳು ದೊರೆತರೂ, ಹೊಸದುರ್ಗದಲ್ಲಿ ಸಿಮೆಂಟ್ ಕಾರ್ಖಾನೆಯೊಂದನ್ನು ಬಿಟ್ಟರೆ ಬೇರೆ ಕಾರ್ಖಾನೆಗಳಿಲ್ಲ. ಕಬ್ಬಿಣವನ್ನು ತಯಾರಿಸುವ ಘಟಕಗಳು ಹತ್ತಿರದಲ್ಲೇ ಇವೆ. ಹೊಸದುರ್ಗದ 'ಮತ್ತೋಡು' ಗ್ರಾಮದಲ್ಲಿ 'ರೆಮ್ಕೊ ಪೋರ್ಟ್ ಲ್ಯಾಂಡ್ ಸಿಮೆಂಟ್, ತಯಾರಿಕಾ ಘಟಕ'ವಿದೆ. ಹೊಸದುರ್ಗದಲ್ಲಿ ತೆಂಗಿನಕಾಯಿ ಅತಿ ಹೆಚ್ಚಾಗಿ ಉತ್ಪನ್ನವಾಗುತ್ತದೆ. ತೆಂಗಿನ ಎಣ್ಣೆ ತಯಾರಿಕೆಯ ಕಾರ್ಖಾನೆಗಳು, ತೆಂಗಿನ ನಾರಿನಿಂದ ಹಗ್ಗ ಹೊಸೆಯುವ ಚಿಕ್ಕ-ಪುಟ್ಟ ಗೃಹೋದ್ಯೋಗಗಳು ಚಾಲ್ತಿಯಲ್ಲಿವೆ.

ಪ್ರೇಕ್ಷಣೀಯ ಸ್ಥಳಗಳು[ಬದಲಾಯಿಸಿ]

  • ಹಾಲು ರಾಮೇಶ್ವರ "ಉದ್ಭವಗಂಗೆ" ಎಂದೇ ಕರೆಸಿಕೊಳ್ಳುವ ಶಿವೈದ್ನೈನ ಪುಣ್ಯಸ್ಥಳವಾಗಿದ್ದ್ದು ಪ್ರತೀದಿನ ನೂರಾರು ಭಕ್ತಾಧಿಗಳು ಬೇಟಿ ನೀಡಿ ತಮ್ಮ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಾರೆ. ಮಕ್ಕಳಿಲ್ಲದವರು ಇಲ್ಲಿ ಭಗವಂತನಲ್ಲಿ ಹರಕೆ ಸಲ್ಲಿಸುತ್ತಾರೆ.
  • ಅರೇಹಳ್ಳಿ: "ಕರಿಯಮ್ಮ ದೇವಿ" ಎಂಬ ದೇವಾಲಯವಿದ್ದು ಪ್ರತಿನಿತ್ಯ ಭಕ್ತಾಧಿಗಳು ತಮ್ಮ ಬೇಡಿಕೆಗಳ ಈಡೇರಿಸಿಕೊಳ್ಳಲು ಬರುತ್ತಾರೆ.
  • ಜಾನಕಲ್ಲು: ಇದು ಐದನೇ ಮದಕರಿನಾಯಾಕನ ಹುಟ್ಟೂರಾಗಿದ್ದು ಈತ ಚಿತ್ರದುರ್ಗದ ಪಾಳೇಗಾರರಲ್ಲೇಲ್ಲಾ ಅತ್ಯಂತ ಪ್ರಸಿದ್ಧ ನಾಯಕನಾಗಿದ್ದಾನೆ.
  • ದಶರಥ ರಾಮೇಶ್ವರ: ಹೆಸರೇ ಸೂಚಿಸುವಂತೆ ಇದೊಂದು ರಾಮಯಣಕ್ಕೆ ಸಂಬಂಧಿಸಿದ ಸ್ಥಳವಾಗಿದ್ದು,ಶ್ರೀರಾಮ ವನವಾಸದ ಸಮಯದಲ್ಲಿ ಇಲ್ಲಿಗೆ ಬಂದಿದ್ದನೆಂಬ ಪ್ರತೀತಿ ಇದೆ.ಇಲ್ಲಿ ಸದಾಕಾಲ ನೀರು ಹರಿಯುತ್ತಿರುತ್ತದ್ದು ಪವಿತ್ರಜಲವೆಂಬ ಪ್ರತೀತಿ ಇದೆ. ಶ್ರವಣನನ್ನು ದಶರಥಮಹಾರಾಜನು ಕೊಂದಬಗ್ಗೆ ಪಶ್ಚಾತ್ತಾಪಪಟ್ಟು ಒಂದು ಶಿವಲಿಂಗವನ್ನು ಸ್ಥಾಪಿಸಿ ತನ್ನ ಮಗ ಶ್ರೀರಾಮನ ಜೊತೆ ಪೂಜಿಸಿದ್ದರಿಂದ ಈ ಸ್ಥಳಕ್ಕೆ ದಶರಥ ರಾಮೇಶ್ವರವೆಂಬ ಹೆಸರು ಬಂತು. ಈ ಸ್ಥಳಕ್ಕೆ 'ವಜ್ರ'ವೆಂತಲೂ ಜನ ಕರೆಯುತ್ತಾರೆ.
  • ಬಾಗೂರು: ಇಲ್ಲಿ ಐತಿಹಾಸಿಕವಾದ ಪ್ರಾಚೀನ ಕಾಲದ "ಹೊಯ್ಸಳ"ರ ವಾಸ್ತುಶಿಲ್ಪದಂತಿರುವ ದೇವಾಲಯವಿದ್ದು ನಯನಮನೋಹರವಾಗಿದೆ.
  • ಹೆಗ್ಗೆರೆ: ಇದೊಂದು ಜೈನರ ಪ್ರಮುಖ ಕೇಂದ್ರವಾಗಿದ್ದು ಇಲ್ಲಿ ಜೈನಬಸದಿ ಇದ್ದು ಸಮನ್ವಯತೆಯ ಸಂಕೇತದಂತಿದೆ.
  • ದುರ್ಗಮ್ಮ ದೇವಾಲಯ, ಹಾಗೂ ವೀರಭದ್ರೇಶ್ವರ ದೇವಸ್ಥಾನಗಳು ಬಹಳ ಹೆಸರುವಾಸಿಯಾಗಿವೆ.
  • ಕೆಲ್ಲೋಡು : ವೇದಾವತಿ ನದಿಗೆ ಮಾರೀಕಣಿವೆಯ ಹತ್ತಿರ ಅಣೆಕಟ್ಟು ಕಟ್ಟಿದ್ದಾರೆ. ಹೊಸದುರ್ಗಾ ತಾಲ್ಲೂಕಿನ ಮುಖಾಂತರ ಹರಿದು ಹೋಗುವ ವೇದಾವತಿನದಿಯ ನೀರೇ ಹೊಸದುರ್ಗದ ಕುಡಿಯುವ ನೀರಿನ ಅಗತ್ಯವನ್ನು ಪೂರೈಸುತ್ತದೆ. ಕೆಲ್ಲೋಡಿನಲ್ಲಿ ನೀರು ಶುದ್ಧೀಕರಣದ ಘಟಕವಿದೆ. ಇಲ್ಲಿಂದ ಕೊಳವೆಗಳ ಮೂಲಕ ಹೊಸದುರ್ಗ ಪಟ್ಟಣಕ್ಕೆ ನೀರು ಸರಬರಾಜಾಗುತ್ತದೆ.
  • ಹೊಸದುರ್ಗ ಕೋಟೆ : ಹೊಸದುರ್ಗದ ಬಳಿಯಿರುವ ಬೆಟ್ಟದ ಮೇಲೆ ಕೋಟೆಯಿದೆ. ಚರಿತ್ರಾಕಾರರು ಹೇಳುವ ಪ್ರಕಾರ, ಚಿತ್ರದುರ್ಗ ಹಾಗೂ ಹೊಸದುರ್ಗ ಕೋಟೆಗಳಿಗೆ ಸಂಪರ್ಕಮಾರ್ಗದ ಒಂದು ಸುರಂಗವಿದೆಯಂತೆ.
  • ಹೆಚ್ಛು ದಾಳಿಂಬೆ ಹಣು ಬೆಯಲು ಅನುಕೂಲ ಈ ಬೂಮಿ ಕಿಟ್ಫ಼ದಾಳ್ ನಲ್ಲಿ ಮೊದಲ ಬಾರಿಗೆ ಸಂಪತ್ ಮಲ್ಲಿಕಾಜು‌‍‍=ನ ರವರು ಈ ಬೆಳೆಯನ್ನು ಬೆಳೆದರು
  • ಪಟೇಲ್ ನಾರಾಯಣಪ್ಪ ಕಿಟ್ಟದಾಳ್ ಈ ಊರಿನ ಗೌಡರು ಜನಪ್ರಿಯ ಪ್ರಜೆಯಾಗಿದ್ದರು
  • ಬೊಮ್ಮೇನಹಳ್ಳಿ: ಇದು ಬೆಲಗೂರು ಮತ್ತು ಹೊಸದುರ್ಗ ಮಾರ್ಗದಲ್ಲಿ ಕಬ್ಬಳದಿಂದ ೧.೮ ಕೀ.ಮಿ ದೂರವಿದೆ. ಇಲ್ಲಿ ತೆಂಗಿನ ಕಾಯಿ ಬೆಳೆಗೆ ಪ್ರಸಿದ್ದಿ ಪಡೆದಿದೆ ಇತ್ತೀಚಿನ್ ದಿನಗಳಲ್ಲಿ ದಾಳಿಂಬೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಪಟೇಲ್ ಲಕ್ಕಪ್ಪನವರು ಜನಪ್ರಿಯ ಪ್ರಜೆಯಾಗಿದ್ದರು. ಇವರ ವಂಶದವರು ಪಟೇಲ್ ನಾಗಪ್ಪ ರಂಗಪ್ಪ ನಾಗರಾಜು

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Commons logo
ವಿಕಿಮೀಡಿಯ ಕಣಜದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ:

^ http://yellowpages.sulekha.com/ramanagar_hosadurga_area_pin-code.htm

^ http://www.stdcodesindia.com/search-stdcodes/karnataka/hosadurga/H/ STD Codes India, Hosadurga

^ Falling Rain Genomics, Inc - Hosdurga

^ "Census of India 2001: Data from the 2001 Census, including cities, villages and towns (Provisional)". Census Commission of India. Archived from the original on 2004-06-16. Retrieved 2008-11-01.

^ http://www.ramcocement.in/mathodu.aspx

  1. http://yellowpages.sulekha.com/ramanagar_hosadurga_area_pin-code.htm
  2. http://www.stdcodesindia.com/search-stdcodes/karnataka/hosadurga/H/ STD Codes India, Hosadurga
"http://kn.wikipedia.org/w/index.php?title=ಹೊಸದುರ್ಗ&oldid=408310" ಇಂದ ಪಡೆಯಲ್ಪಟ್ಟಿದೆ