ಹೊಳಲ್ಕೆರೆ
Wikipedia ಇಂದ
[ಬದಲಾಯಿಸಿ] ಹೊಳಲ್ಕೆರೆ ಅಂದರೆ, ತೂಗ್ ತಲೆ ಗಣಪತಿ, ಎನ್ನುವಷ್ಟು ಪ್ರಸಿದ್ಧಿ :
ಇದು ಚಿತ್ರದುರ್ಗ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಹೊಳಲ್ಕೆರೆ ಎರಡು ಪ್ರಮುಖ ವಿಶಯಗಳಿಗೆ ಪ್ರಾಮುಖ್ಯ. ಒಂದು ಇಲ್ಲಿ ಭಾರಿ ಗಣಪತಿಯ ದೇವಾಲಯವಿದೆ. ಇದನ್ನು ಚಿತ್ರದುರ್ಗದ ಪಾಳೆಯಗಾರರು ಕಟ್ಟಿಸಿದ್ದಾರೆ. ಗಣಪತಿ ೨೦ ಅಡಿ ಎತ್ತರ [೬ಮಿ] ೧೭೭೫ ರಲ್ಲಿ, ಚಿತ್ರದುರ್ಗದ ಪಾಳೆಗಾರ, ಗುತ್ಯೆಪ್ಪನಾಯಕ, ಕಟ್ಟಿಸಿದನೆಂದು ಶಾಸನಗಳು ತಿಳಿಸುತ್ತವೆ. ಗಣಪತಿ, ಕುಳಿತಿರುವ ಭಂಗಿಯಲ್ಲಿದೆ. ತಲೆಯ ಹಿಂಭಾಗದಲ್ಲಿ ಕೇಶಾಲಂಕಾರ ಮಾಡಿಕೊಂಡಿದೆ. ಅದಕ್ಕೆ ಭಕ್ತರು ಬೆಣ್ಣೆ ಹಚ್ಚುತ್ತಾರೆ. ಉದ್ದವಾದ ಜಡೆಯಿದೆ. ಆ ಬೆಣ್ಣೆಯನ್ನು ತಲೆಗೆ ಸವರಿಕೊಂಡರೆ, ಕೂದಲು ಚೆನ್ನಾಗಿ ಬೆಳೆಯುವುದೆಂಬ ನಂಬಿಕೆಯಿದೆ. ಮೊದಲು, ಅಂದರೆ, ಸುಮಾರು ೪೫ ವರ್ಷಗಳ ಹಿಂದೆ, ಗಣಪತಿಗೆ ದೇವಾಲಯ ಕಟ್ಟಿಸಲು ಹಿರಿಯರ್ಯಾರೂ ಮುಂದೆ ಬರುತ್ತಿರಲಿಲ್ಲ. ಅದು ಬಯಲು ಗಣಪತಿ,ಯಾಗಿರಬೇಕೆಂಬುದು ಅವರೆಲ್ಲರ ಆಸೆಯಾಗಿತ್ತು. ತದನಂತರ, ಸಿಡಿಲುಹೊಡೆದು, ಗಣಪತಿಯ ಹಿಂದಿದ್ದ ಬೃಹದಾಕಾರದ ಬೇವಿನಮರ, ನಾಶಗೊಂಡನಂತರ, ಭಕ್ತರ ನಿಲುವು ಬದಲಾಗಿ, ದೇವಸ್ಥಾನದ ಆವಶ್ಯಕತೆ ಗಮನಕ್ಕೆ ಬಂತು.
[ಬದಲಾಯಿಸಿ] ಹೊಳಲ್ಕೆರೆ, ರಾಗಿಬೆಳೆಗೆ ಪ್ರಸಿದ್ಧಿ.
ಇನ್ನೊಂದು ಸಂಗತಿ, ಇದು ರಾಗಿಬೆಳೆ, ಗೆ ಪ್ರಸಿದ್ಧಿ. ಇನ್ನೊಂದು ಕುಖ್ಯಾತಿಗೂ ಇದು ಪಾತ್ರವಾಗಿದೆ. ಅಂದರೆ ಮಳೆ ಇಲ್ಲಿ ಬಹಳ ಕಡಿಮೆ. ಚಿತ್ರದುರ್ಗ ಜಿಲ್ಲೆಯೇ ಹಾಗೆ. ವರುಣನ ಕೃಪೆಯಿಲ್ಲ. ಹತ್ತಿರದಲ್ಲಿ ಸುಮಾರು ೮೦ ಕಿ.ಮಿ. ನಲ್ಲೇ ಮಲೆನಾಡಿನ ಶಿವಮೊಗ್ಗೆ ಇದ್ದರೂ, ಕೆಲವುವೇಳೆ ೧೨ ವರ್ಷಕ್ಕೊಮ್ಮೆ ಮಳೆ. ನೀರಿನ ಅಭಾವ ಹೆಚ್ಚು. ಬಾವಿಗಳಲ್ಲೂ ನೀರಿಲ್ಲ.ಹೆಸರಿಗೇನೊ ಹೊಳಲಿನಂತೆ ಕೆರೆ.ಅಂದರೆ,ಸುತ್ತಮುತ್ತಲಿನಲ್ಲಿ ಒಟ್ಟು ೩ ಕೆರೆಗಳು.
೧. ಹಿರಿಕೆರೆ.
೨. ಹೊನ್ನೆಕೆರೆ.
೩. ಕೆಸರು ಕಟ್ಟೆ.
ಹಿರಿಕೆರೆ ಹೆಸರಿಗೆ ತಕ್ಕಹಾಗೆ, ದೊಡ್ಡಕೆರೆ. ಸುಮಾರು ಒಂದೂವರೆ ಮೈಲಿಗಿಂತ ಹೆಚ್ಚು ವಿಸ್ತೀರ್ಣ. ಒಮ್ಮೆ ತುಂಬಿದರೆ, ಸುಮಾರು ವರ್ಷವೆಲ್ಲಾ ತೊಂದರೆಇಲ್ಲ.
ಹೊನ್ನೆಕೆರೆ,ಚಿಕ್ಕದು.ಮರಳಿನಿಂದ ಆವೄತ.ಬೇಗ ನೀರು ಇಂಗಿಹೋಗುತ್ತದೆ.
ಕೆಸರು ಕಟ್ಟೆ, ಹೆಸರಿಗೆ ತಕ್ಕಂತೆ ಚಿಕ್ಕ ಕೆಸರುತುಂಬಿದ ಕೆರೆ. ಆಳವಿಲ್ಲ. ಯಾವಕೆರೆಯ ನೀರೂ ಕುಡಿಯಲು ಯೋಗ್ಯವಿಲ್ಲ.
[ಬದಲಾಯಿಸಿ] ಎಮ್. ಎಮ್. ಎಮ್. ಹೈಸ್ಕೂಲು, ಜ್ಯೂನಿಯರ್ ಕಾಲೇಜ್, ಹಾಗೂ ಕೋ-ಆಪರೇಟೀವ್ ಸೊಸೈಟಿಗಳು, ಪ್ರಮುಖ ಆಕರ್ಷಣೆಗಳು :
ಹೊಳಲ್ಕೆರೆಯಲ್ಲಿ ಮಲ್ಲಾಡಿಹಳ್ಳಿ ಮಾದಣ್ಣನವರ ಮ್ಯುನಿಸಿಪಲ್ ಹೈಸ್ಕೂಲು, ಜೂನಿಯರ್ ಕಾಲೇಜ್ ಗಳಿವೆ. ಪೋಸ್ಟ್ ಆಫೀಸ್, ತಾಲ್ಲೂಕ್ ಕಛೇರಿ, ಒಂದು ಬ್ಯಾಂಕ್ ಇವೆ. ಬೇರೆ ಯಾವ ಉದ್ಯಮಗಳಿಲ್ಲ. ಮೇಲಾಗಿ, ರೈಲ್ವೆ ಶ್ಟೇಷನ್ ೫ ಕಿ, ಮಿ. ದೂರ. ವಾರಕ್ಕೊಮ್ಮೆ ಹೊಳಲ್ಕೆರೆ ಸಂತೆ ನಡೆಯುತ್ತದೆ. ಮಲ್ಲಾಡಿಹಳ್ಳಿ ಬಹಳ ಹತ್ತಿರ. ಅರಸಿಕೆರೆ ಬಳಿಯೂ, ಇನ್ನೊಂದು ಹೊಳಲ್ಕೆರೆ ಇದೆ.
[ಬದಲಾಯಿಸಿ] ಹೊಳಲ್ಕೆರೆ ಹೈಸ್ಕೂಲಿಗೆ Rank ಬಂದಾಗಿನಿಂದ,ಎಲ್ಲರ ಬಾಯಿನಲ್ಲೂ ಹೊಳಲ್ಕೆರೆ ಕೇಳಿಸುತ್ತಿದೆ :
ಹೊಳಲ್ಕೆರೆ,ಇತ್ತೀಚಿನ ಎರಡು ದಶಕಗಳಿಂದ ಎಲ್ಲರ ಬಾಯಿನಲ್ಲಿ ಕೇಳಿಬರುತ್ತಿರುವುದು, ಅಲ್ಲಿನ ಹೈಸ್ಕೂಲಿನಲ್ಲಿ ಓದಿ, ರ್ಯಾಂಕ್ ಗಳಿಸಿದ ವಿದ್ಯಾರ್ಥಿಯಿಂದಾಗಿ. ಸನ್. ೧೯೬೨ ರಲ್ಲಿ, ಎಚ್. ಆರ್. ಚಂದ್ರಶೇಖರ್ , ಎಂಬ ವಿದ್ಯಾರ್ಥಿ ಹೊಳಲ್ಕೆರೆಯ, ಎಮ್. ಎಮ್. ಎಮ್ ಹೈಸ್ಕೂಲ್ ನಲ್ಲಿ ಓದಿ, ರಾಜ್ಯಕ್ಕೇ ಪ್ರಥಮನಾಗಿ ಉತ್ತೀರ್ಣನಾಗಿದ್ದ. ಈ ಪ್ರಕರಣದಿಂದ ಉತ್ತೇಜಿರಾಗಿ ಹಲವಾರು ಗ್ರಾಮೀಣ ಕ್ಷೇತ್ರಗಳಿಂದ ಹೊಳಲ್ಕೆರೆ ಹೈಸ್ಕೂಲಿಗೆ ವಿದ್ಯಾರ್ಥಿಗಳು ಬಂದು ಸೇರಲು ಪ್ರಾರಂಭಿಸಿದರು. ಆದರೆ ಇದುವರೆವಿಗೂ ಆ ಶಾಲೆಗೆ ಅಂತಹ ಯಾವ ಮೆರಿಟ್ ಕೂಡ ಬಂದಿಲ್ಲ.
[ಬದಲಾಯಿಸಿ] ಲೀಲಾ ವಿಶ್ರಾಂತಿ ನಿಲಯ , ಹೊಳಲ್ಕೆರೆಯ ಒಂಟಿಕಲ್ಲುಮಠ ದ ಬಳಿ :
೮, ಆಗಸ್ಟ್ ೧೯೯೪ ರಲ್ಲಿ, ಶ್ರೀ. ಮಲ್ಲಿಕಾರ್ಜುನ ಮರುಘರಾಜೇಂದ್ರಸ್ವಾಮಿ ಗಳು ಶಿವೈಕ್ಯರಾದರು. ಅವರ ಅಂತಿಮ ಇಚ್ಛೆಯಂತೆ ಹೊಳಲ್ಕೆರೆಯ ಹತ್ತಿರದ ಒಂಟಿಕಲ್ಲುಮಠದ ಬಳಿ, ಸ್ವಾಮಿಗಳ ಸಮಾಧಿ ರಚಿಸಿದ್ದಾರೆ. ೧೫ ಎಕರೆ ಜಾಗದಲ್ಲಿ ಪ್ರಾರಂಭ ಮಾಡಿ, ಒಂದು ಹಣ್ಣಿನತೋಟವನ್ನು, ೪೦ ಎಕರೆ ಜಾಗದಲ್ಲಿ ನಿರ್ಮಾಣ ಮಾಡಲಾಗಿದೆ. ಒಂದು ಅಂದಾಜಿನ ಪ್ರಕಾರ, ಲೀಲಾ ತಪೋವನ ಕ್ಕೆ ಸುಮಾರು ೫ ಕೋಟಿ ರೂಪಾಯಿ ಹಣವನ್ನು ಖರ್ಚುಮಾಡಲಾಗುವುದು. ಶರಣರ ಶೈಲಿಯಲ್ಲಿ ವಿಧಿಪೂರ್ವಕವಾಗಿ,ಚಿತ್ರದುರ್ಗದ ಶ್ರೀ. ಶಿವಮೂರ್ತಿಶರಣರಿಂದ ಇವೆಲ್ಲಾ ಕಾರ್ಯಕ್ರಮಗಳು ಜರುಗಿವೆ. ಪ್ರತಿವರ್ಷವೂ ಜವವರಿ ತಿಂಗಳಿನಲ್ಲಿ, ದಿವಂಗತ. ಮರುಘರಾಜೇಂದ್ರ ಸ್ವಾಮಿಯವರ ಶರಣ ಸ್ಮರಣೋತ್ಸವ ವನ್ನು ಆಚರಿಸುವ ಪರಿಪಾಠವನ್ನು ಬೆಳೆಸಲಾಗುವುದು. ಇದು, ೧೨ ನೆಯ ಶತಮಾನದ ಭಕ್ತಿಭಂಡಾರಿ ಬಸವಣ್ಣನವರ ತತ್ವಗಳನ್ನು ಗಮನದಲ್ಲಿ ಇಟ್ಟುಕೊಂಡು, ಈಗಿನ ಕಲುಷಿತ ಸಮಾಜವನ್ನು ಸುಧಾರಿಸುವ ಹಾದಿಯಲ್ಲಿ, ಹೆಚ್ಚು ಮಹತ್ವವನ್ನು ಹೊಂದುತ್ತದೆ.
[ಬದಲಾಯಿಸಿ] ಹೊಳಲ್ಕೆರೆಯಲ್ಲಿ ಎಲ್ಲಿ ನೋಡಿದರೂ, ಕೆರೆ, ಭಾವಿ, ಹೊಂಡ, ದೇವಾಲಯಗಳೇ :
ಮೊದಲೇ ತಿಳಿಸಿದಂತೆ, ೩ ಕೆರೆಗಳಲ್ಲದೆ, ೬ ಭಾವಿಗಳೂ, ೧ ಹೊಂಡ, ಹಾಗೂ, ೪ ನೆಲಭಾವಿಗಳೂ ಇವೆ. ಆದರೆ ನೀರಿಗೆ ಮಾತ್ರ ಪರದಾಟ ತಪ್ಪಿದ್ದಲ್ಲ.
[ಬದಲಾಯಿಸಿ] ದೇವಸ್ಥಾಗಳು :
- ವೇಣುಗೋಪಾಲ ಸ್ವಾಮಿ ದೇವಾಲಯ. ಇದು ಪಾಳೆಯಗಾರರಿಂದ ಕಟ್ಟಿಸಲ್ಪಟ್ಟಿದ್ದು, ವಿಶಾಲವಾದ ಹೊಂದಿದೆ. ಕಂಭಗಳು
ಹಜಾರಗಳಿಂದ ಕೂಡಿದ್ದು ಒಟ್ಟಿಗೆ ೫೦೦ ಜನ ಭಕ್ತರುಗಳು, ಭೋಜನ ಮಾಡಬಹುದು.
- ರಾಮದೇವರ ದೇವಾಲಯ.
- ಬಂಡಮ್ಮನವರ ದೇವಾಲಯ. ಊರಿನ ಗ್ರಾಮದೇವತೆ. ಪ್ರತಿ ೫ ವರ್ಷಕ್ಕೊಮ್ಮೆ, ತೇರು, ಅಥವಾ ಸಿಡಿ, ನಡೆಯುತ್ತದೆ.
- ಆಂಜನೇಯಸ್ವಾಮಿ ದೇವಾಲಯ. ಕೋಟೆಯ ದ್ವಾರದಲ್ಲೇ ಇದೆ.
- ವೀರಭದ್ರಸ್ವಾಮಿ ದೇವಾಲಯ.
- ಈಶ್ವರ ದೇವಾಲಯ.
- ಕ್ಷೇತ್ರಫಾಲ ದೇವಾಲಯ.
- ಜೈನ ಬಸದಿ.
- ವಾಸವಿ ಅಮ್ಮನವರ ದೇವಾಲಯ.
[ಬದಲಾಯಿಸಿ] ಶತಮಾನಗಳಿಂದ ಹೊಳಲ್ಕೆರೆಯಲ್ಲೇ ಬೀಡು-ಬಿಟ್ಟದ್ದ ಅನೇಕರು,ವಲಸೆಹೋಗಬೇಕಾಯಿತು :
ಕುಡಿಯುವ ನೀರಿನ ಅಭಾವಕ್ಕಾಗಿಯೇ ಊರನ್ನು ಬಿಟ್ಟು, ವಲಸೆ ಹೋದ ವಂಶಸ್ಥರು ಹಲವು ಮಂದಿ. ಇವರೆಲ್ಲಾ ಜಮೀನ್ದಾರರುಗಳು. ಸುಮಾರು ೫೦೦ ವರ್ಷಗಳಿಂದ ಹೊಳಲ್ಕೆರೆಯಲ್ಲಿ ಶಾಶ್ವತವಾಗಿ, ತಲೆಮಾರುಗಳಿಂದ ನೆಲೆಸಿದ್ದವರು. ಯಾರಿಗೂ ಆಸ್ತಿಯನ್ನು ಮಾರಿ, ಊರುಬಿಡಲು ಇಷ್ಟವಿರಲಿಲ್ಲ.
೧. ಸುಂಕದ ರಂಗರಾಯರು, ಸುಂಕದ ಸುಬ್ಬರಾಯರು, ಹಾಗೂ ಸುಂಕದ ರಾಮಸ್ವಾಮಿಗಳು ಮತ್ತು ಮಕ್ಕಳು.
೨. ಶ್ಯಾನುಭೋಗ್ ಸೇತೂರಾಮಣ್ಣನವರು, ಮತ್ತು ಮಕ್ಕಳು.
೩ ಗಡ್ಡದ ಮಹದೇವಪ್ಪನವರು, ಮತ್ತು ಮಕ್ಕಳು, ಇತ್ಯಾದಿ.
೪. ಛಾಯಾಪತಿ ಮತ್ತು ಮಕ್ಕಳು.
೫. ಬೂದಿಹಾಳಿನ ಕೃಷ್ಣಮೂರ್ತಿ ಮತ್ತು ಮಕ್ಕಳು.
೬. ರಘುಪತಪ್ಪ ಮತ್ತು ಮಕ್ಕಳು.
೭. ಕ್ಷೇತ್ರಫಾಲಯ್ಯ ಮತ್ತು ಮಕ್ಕಳು.
೮. ಕೋದಂಡರಾಮಯ್ಯ ಮತ್ತು ಮಕ್ಕಳು. ಮುಂತಾದವರುಗಳು.
೯. ಗುಂಡೇರಿ ಭೀಮರಾಯರು, ಮತ್ತು ಮಕ್ಕಳು.
೧೦. ಶ್ರೀಪಾಲ ಶೆಟ್ರು ಮತ್ತು ಮಕ್ಕಳು.
೧೧. ಕೄಷ್ಣ ಶೆಟ್ಟಿ ಮತ್ತು ಮಕ್ಕಳು.
೧೨. ಮರುಳಯ್ಯ ಮೇಷ್ಟ್ರು ಮತ್ತು ಮಕ್ಕಳು.
[ಬದಲಾಯಿಸಿ] ರಾಜಕಾರಣಿಗಳು ತಮ್ಮ ಎಲೆಕ್ಷನ್ ಗೆ ಮೊದಲು, ಗಣಪತಿಯ ಅನುಗ್ರಹ ಪಡೆಯಲು ಬರುತ್ತಾರೆ :
ಚಿತ್ರದುರ್ಗಕ್ಕೆ ೨೦ ಮೈಲಿ, ದಾವಣಗೆರೆಗೆ ೩೭ ಕಿ. ಮಿ. ದೂರ. ಗಣಪತಿಯ ದರ್ಶನಕ್ಕೆ ಮಾಜಿ ನ್ಯಾಯಾಧೀಶರಾದ, ದಿವಂಗತ ಶ್ರೀ. ನಿಟ್ಟೂರ್ ಶ್ರೀನಿವಾಸರಾಯರು ಬಂದಿದ್ದರು. ಅನೇಕ ರಾಜಕಾರಣಿಗಳು ಬಂದು ಗಣಪತಿಯ ಆಶೀರ್ವಾದವನ್ನು ಪಡೆಯುತ್ತಿದ್ದಾರೆ. ಹೊಳಲ್ಕೆರೆಯಿಂದ ಹಲವಾರು ವಿಧ್ಯಾವಂತರು ಬೇರೆ ಬೇರೆ ಸ್ಥಳಗಳಿಗೆ ನೌಕರಿಗಾಗಿ ಹೋಗುತ್ತಿದ್ದಾರೆ. ಮಳೆಯಿಲ್ಲದೆ ಕುಡಿಯುವ ನೀರಿಗೂ ತೊಂದರೆಯಾಗಿರುವಾಗ, ಅಲ್ಲಿ ವಾಸಿಸುವುದು ಕಷ್ಟವಾಗಿದೆ. ಆದರೆ, ಎಲ್ಲಿ ಹೋದರೂ ಮದುವೆ, ಮುಂಜಿ, ಹಾಗೂ ಯಾವುದೇ ಶುಭ ಕಾರ್ಯಗಳ ಮೊದಲು ಅಥವಾ ನಂತರ, ತೂಗು ತಲೆ ಗಣಪ್ಪನ ಸನ್ನಿಧಾನಕ್ಕೆ ಬಂದು ಆಶೀರ್ವಾದ ತೆಗೆದುಕೊಳ್ಳುವುದನ್ನು ಮಾತ್ರ ಮರೆಯುವುದಿಲ್ಲ.
ಒಂದು ವಿಷಯವನ್ನು ಇಲ್ಲಿ ನಾವು ಗಮನಿಸಬಹುದಾದದ್ದು, ಹೊಳಲ್ಕೆರೆಯಲ್ಲಿದ್ದಂತೆ ಮೈಸೂರಿನ ಪ್ರತಿಗ್ರಾಮಗಳಲ್ಲೂ ಕೆರೆ, ಭಾವಿಗಳನ್ನು ಕಟ್ಟಲಾಗಿತ್ತು. ಮಳೆ ಬಂದ ಸಮಯದಲ್ಲಿ ಮಳೆನೀರನ್ನು ಕೆರೆಗಳಲ್ಲಿ ಶೇಖರಿಸಿ ಅದನ್ನು ಬಳಸುವ ಏರ್ಪಾಡು ಹೆಚ್ಚುಕಡಿಮೆ ಎಲ್ಲ ಹಳ್ಳಿಗಳಲ್ಲೂ ಇತ್ತು. ಇದು ಅತ್ಯಂತ ಪ್ರಮುಖ ವಿಚಾರ. ವರ್ಷಗಳುರಿಳಿದಂತೆ, ಜನಸಂಖ್ಯೆ ಏರಿ, ಎಲ್ಲಾ ಸಮತೋಲನವನ್ನು ಕಳೆದುಕೊಳ್ಳುತ್ತಿದೆ. ಮಳೆಯ ಪ್ರಮಾಣ ಹಾಗೂ ಸಮಯ, ಈಕಾಲದಲ್ಲಿ ನಿರ್ಧಿರಿಸಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಿನಲ್ಲಿ ಇದ್ದ ಹಲವಾರು ಕೆರೆಗಳಲ್ಲಿ ಕೆಲವೇ ಉಳಿದುಕೊಂಡಿವೆ. ಅಲ್ಲೂ ಕುಡಿಯುವ ನೀರಿಗೆ ಕಾವೇರಿಯಂತಹ ನದಿಗಳನ್ನು ಅವಲಂಭಿಸಬೇಕಾಗಿದೆ. ಅಲ್ಲಿಯೂ ಸದಾ ನೀರು ಇರುತ್ತದೆಯೇ ಎನ್ನುವುದನ್ನು ನಿರ್ಧರಿಸುವುದು ಕಷ್ಟ.
ಹೊಳಲ್ಕೆರೆಯಲ್ಲಿ ೪ ತಾಲ್ಲೂಕು ಹೋಬಳಿಗಳಿವೆ.
ಆಡನೂರು, ಹೊದಿಗ್ಗೆರೆ, ಚಿಕ್ಜಾಜೂರು, ಹೊಸದುರ್ಗ, ಹತ್ತಿರದ ಪಟ್ಟಣಗಳು. ಮೇಗಳ ಕೊಟ್ಟಿಗೆ, ಕೆಳಗಿನ ಕೊಟ್ಟಿಗೆ, ಕಬ್ಬಲು, ನುಲೇನೂರು, ನಾಗರಕಟ್ಟೆ, ತೂಬಿನಗೆರೆ, ಬೀಸನಹಳ್ಳಿ, ವಡ್ರಹಟ್ಟಿ, ಆರ್. ನುಲೆನೂರು, ಬಸಾಪುರ, ರಂಗಾಪುರ, ತಾಲ್ಲೂಕಿನ ಹಳ್ಳಿಗಳು.
[ಬದಲಾಯಿಸಿ] ಹೊಳಲ್ಕೆರೆಯ ಕಾರ್ಯನಿಷ್ಠರು :
- ೧. ಶ್ರೀ. ಸೂರ್ದಾಸ್ ಜಿ, ಯವರು. ಅಂತಹವರಲ್ಲಿ, ಪ್ರಮುಖರು, ಇವರು, ಮಲ್ಲಾಡಿಹಳ್ಳಿ, ಶ್ರೀ. ಶ್ರೀ. ರಾಘವೇಂದ್ರಸ್ವಾಮಿಗಳ ನಿಕಟವರ್ತಿಗಳಾಗಿದ್ದವರು. ಅವರೂ ಮಲ್ಲಾಡಿಹಳ್ಳಿಯಲ್ಲೇ ತಮ್ಮ ಜೀವನದ ಅಂತ್ಯವನ್ನು ಕಂಡವರು. ಅವರ ಸಮಾಧಿಕೂಡ ರಾಘವೇಂದ್ರ ಸ್ವಾಮೀಜಿಯವರ ಸಮಾಧಿಯ ಬದಿಯಲ್ಲೇ ಇದೆ.
- ೨.ಡಾ.ಎಚ್.ಎಸ್.ವೆಂಕಟೇಶಮೂರ್ತಿ, ಕರ್ನಾಟಕದ ಸುಪ್ರಸಿದ್ಧ ಕವಿ, ಬರಹಗಾರ, ಚಿಂತಕ, ಹಾಗೂ ಒಳ್ಳೆಯ ಮಾತುಗಾರ, ಹೊಳಲ್ಕೆರೆಯ, ಎಮ್.ಎಮ್,ಎಮ್,ಹೈಸ್ಕೂಲ್, ನಲ್ಲಿ ವಿದ್ಯಾಭ್ಯಾಸಮಾಡಿದವರು.
- ೩. ಶ್ರೀ. (ಬಾಬಿ), ಬಾಬೂರಾವ್ ರವರು, ಆಡನೂರಿ ನಲ್ಲಿ ಸ್ವಂತ ಇಚ್ಛೆಯಿಂದ, ಆಶ್ರಮಜೀವನ ವನ್ನು ನಡೆಸುತ್ತಿದ್ದಾರೆ. ಅವರ ಜೀವನದ ಅನುಭವಗಳನ್ನು ಕುರಿತ, ಒಂದು ಪುಸ್ತಕವನ್ನೂ ಬರೆದಿದ್ದಾರೆ.
- ೪.ಪ್ರೊ. ಎಚ್. ಆರ್. ರಾಮಕೃಷ್ಣರಾವ್, ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಕೆಲಸಮಾಡಿ ನಿವೄತ್ತರಾದ ಖ್ಯಾತ ಭೌತಶಾಸ್ತ್ರದ ಪ್ರಾಧ್ಯಾಪಕ. ವಿಜ್ಞಾನವನ್ನು ಪ್ರಸಿದ್ಧಿಪಡಿಸಲು ನಿರಂತರವಾಗಿ ದುಡಿಯುತ್ತಿರುವ, ನಕ್ಷತ್ರಗಳು, ಗ್ರಹಗಳ ಬಗ್ಗೆ, ಆಕಾಶವಾಣಿ, ದೂರದರ್ಶನ ಗಳ ಮಾಧ್ಯಮದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬೋಧಿಸುವುದರಲ್ಲಿ,ತಮ್ಮನ್ನು ತೊಡಗಿಸಿಕೊಂಡಿರುವ, ಕರ್ನಾಟಕದ ಮನೆ-ಮನೆಗಳಲ್ಲಿ ಪ್ರಖ್ಯಾತರಾಗಿರುವ, ಅವರು ಹೊಳಲ್ಕೆರೆಯಲ್ಲಿ ಕಳೆದ, ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿಕೊಳ್ಳುತ್ತಾರೆ.
- ೫. ಡಾ. ಚಂದ್ರಶೇಖರ್, ಅಂತರಾಷ್ಟ್ರೀಯ ವಿಖ್ಯಾತ ಭೌತಶಾಸ್ತ್ರ ವಿಜ್ಞಾನಿ, ಅಮೆರಿಕದ ಮಿಸ್ಸೌರಿ ವಿಶ್ವವಿದ್ಯಾಲಯದ ದ ಗ್ರಾಜುಯೇಟ್ ಸ್ಟಡೀಸ್ ನ ಮುಖ್ಯಸ್ಥರು, ಹಾಗೂ ನಿರ್ದೇಶಕರು, ಹೊಳಲ್ಕೆರೆಯ ಮಣ್ಣಿನಲ್ಲಿ ಹುಟ್ಟಿ, ಆಟವಾಡಿದವರು. ಭಾರತಕ್ಕೆ ಬಂದಾಗಲೆಲ್ಲಾ, ತಮ್ಮ ಪರಿವಾರದ ಒಟ್ಟಿಗೆ, ಹೊಳಲ್ಕೆರೆಗೆ ಬಂದು, ಗಣೇಶನ ದರ್ಶನವನ್ನು ಪಡೆಯುತ್ತಾರೆ. ಇವರ, ಮಕ್ಕಳಿಗಾಗಿಯೇ ಬರೆದು ಪ್ರಕಟಿಸಿರುವ ಪ್ರಖ್ಯಾತ ಪುಸ್ತಕ, " Tales from Indian Epics, " ಎಲ್ಲ ವಯೋ-ವರ್ಗದ ಜನರಿಗೂ ಮುದಕೊಡುವ ಅತ್ಯುಪಯೋಗಿ ಪುಸ್ತಕ ವೆಂದು ಪ್ರಸಿದ್ಧಿಯಾಗಿದೆ. ಆಮೆರಿಕದ ಮಕ್ಕಳು, ಈ ಪುಸ್ತಕವನ್ನು ತುಂಬಾ ಹಚ್ಚಿಕೊಂಡಿದ್ದಾರೆ.
- ೬. ಡಾ. ಚಂದ್ರಶೇಖರ್ ಸಂಪಾದಿಸಿ ಬರೆದ, ಇನ್ನೊಂದು ಬೃಹತ್ ಕೃತಿ, 'ಕರ್ಣಾಟಕ ಭಾಗವತ', ಇತ್ತೀಚೆಗೆ, ಅಮೆರಿಕದ 'ಹೂಸ್ಟನ್ ಕನ್ನಡ ವೃಂದ' ದವರ ಬೆಳ್ಳಿಹಬ್ಬದ ಸಮಾರಂಭದಂದು, ಏಪ್ರಿಲ್, ೧೨ ನೆಯ ತಾರೀಖು, ೨೦೦೮ ರಂದು, ಬಿಡುಗಡೆಯಾಗಿದೆ. ಇದು ಎರಡು ಸಂಪುಟಗಳಲ್ಲಿದ್ದು, ವಿಸ್ತಾರವಾಗಿ ರಚಿಸಲ್ಪಟ್ಟಿದೆ. ಸಂಶೋಧಕರಿಗೆ, ತೀವ್ರವಾಗಿ ಸಾಹಿತ್ಯಾಭ್ಯಾಸಮಾಡುವ ವ್ಯಕ್ತಿಗಳಿಗೆ ಅತ್ಯಂತ ಉಪಯುಕ್ತವಾದ ಮಾಹಿತಿಗಳನ್ನು ಒಳಗೊಂಡಿದ್ದು, ಮೂಲ ತಾಳೆಗರಿಗಳ ಮಾಹಿತಿ ಸಂಗ್ರಹವನ್ನು ನಾವು ಕಾಣಬಹುದಾಗಿದೆ. ಪುಸ್ತಕದ ಕೊನೆಯಲ್ಲಿ ಪದಗಳ ಅರ್ಥವನ್ನು ವಿವರವಾಗಿ ಕೊಡಲಾಗಿದೆ.

