ಹಗಲು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಈ ಲೇಖನವನ್ನು Daytime (astronomy) ಆಂಗ್ಲ ಪುಟದಿಂದ ಅನುವಾದ ಮಾಡಬೇಕಿದೆ. ನೀವೂ ಸಹಾಯ ಮಾಡಬಹುದು.

ಹಗಲಿನ ಬೆಳಕು ಭೂಭಾಗವನ್ನು ಸುಮಾರು ೧೩:೦೦ UTC ಸಮಯದಲ್ಲಿ ಬೆಳಗುತ್ತಿರುವುದು

ಭೂಮಿಯ ಮೇಲೆ ಹಗಲು ಎಂದರೆ, ಭೂಮಿಯ ಯಾವುದೇ ಒಂದು ಭಾಗವು ಸೂರ್ಯಕಿರಣಗಳಿಂದ ಪ್ರಾಕೃತಿಕವಾಗಿ ಬೆಳಗಲ್ಪಟ್ಟಂತಹ ಅಥವಾ ಪ್ರಕಾಶಿಸಲ್ಪಟ್ಟಂತಹ ಸಮಯ. ಬೇರೆ ಗ್ರಹಗಳೂ ತಾವು ಪ್ರದಕ್ಷಿಸುವ ನಕ್ಷತ್ರದ ಬೆಳಕಿನಿಂದ ಬೆಳಗುವುದರಿಂದ, ಅವುಗಳಲ್ಲಿಯೂ "ಹಗಲು" ಉಂಟಾಗುತ್ತದೆ.

[ಬದಲಾಯಿಸಿ] ಗುಣಲಕ್ಷಣಗಳು

ಸಾಮಾನ್ಯವಾಗಿ ಭೂಗ್ರಹದ ಅರ್ಧದಷ್ಟು ಪ್ರದೇಶವು ಸೂರ್ಯ ಪ್ರಕಾಶದಿಂದ ಯಾವಾಗಲೂ ಬೆಳಗಲ್ಪಟ್ಟಿರುತ್ತದೆ. ಸೂರ್ಯನಿಗೆ ಎದುರಾಗಿ, ನೇರವಾಗಿ ಬೆಳಗಲ್ಪಟ್ಟಂತಹ ಭೂಭಾಗವು ಸುಮಾರಾಗಿ ಭೂಮಿಯ ಅರ್ಧದಷ್ಟಿದ್ದರೂ,ಭೂಮಿಯ ವಾತಾವರಣವು ಬೆಳಕನ್ನು ಚದುರಿಸುವುದರಿಂದ ಮತ್ತು ವಾಯುಮಂಡಲದ ಇನ್ನಿತರ ವಿದ್ಯಮಾನಗಳಿಂದ ಇನ್ನೂ ಸೂರ್ಯೋದಯವಾಗದ ಮತ್ತು ಸೂರ್ಯಾಸ್ತವಾದ ಭೂಭಾಗಳೂ ಕೊಂಚ ಬೆಳಕನ್ನು ಪಡೆಯುತ್ತವೆ. ಹಾಗಾಗಿ ಸೂರ್ಯನಿಂದ ಬೆಳಗಲ್ಪಡುವ ಭೂಮಿಯ ಒಟ್ಟು ಪ್ರದೇಶ ಭೂಮಿಯ ಅರ್ಧಕ್ಕಿಂತ ಕೊಂಚ ಹೆಚ್ಚೇ.

ಹೀಗೆ ಬೆಳಗಲ್ಪಡುವ ಭೂಪ್ರದೇಶವು (ಖಗೋಳಾರ್ಧ) ಭೂಮಿ ತನ್ನ ಅಕ್ಷದ ಸುತ್ತ ತಿರುಗುವಿಕೆಯಿಂದ ಪ್ರತಿಕ್ಷಣವು ಬದಲಾಗುತ್ತಿರುತ್ತದೆ. ಈ ಅಕ್ಷರೇಖೆ ಸೂರ್ಯನ ಸುತ್ತ ಚಲಿಸುವ ಭೂಮಿಯ ಕಕ್ಷೆಯ ಸಮಕ್ಷೇತ್ರಕ್ಕೆ ನಿಖರವಾಗಿ ಲಂಬವಾಗಿರುವುದಿಲ್ಲವಾದರಿಂದ ಹಗಲು ಹೊತ್ತಿನ ಸಮಯವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವ್ಯತ್ಯಾಸ ಕಂಡುಬರುತ್ತದೆ.

"http://kn.wikipedia.org/w/index.php?title=ಹಗಲು&oldid=233911" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು