ಸೋನ್ ನದಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಮಧ್ಯ ಭಾರತಸೋನ್ ನದಿಯು ಗಂಗಾ ನದಿಯ ದಕ್ಷಿಣದ ಉಪನದಿಗಳ ಪೈಕಿ ಅತ್ಯಂತ ದೊಡ್ಡದು. ಸೋನ್ ನದಿಯು ಮಧ್ಯ ಪ್ರದೇಶ ರಾಜ್ಯದಲ್ಲಿ ನರ್ಮದಾ ನದಿಯ ಉಗಮ ಸ್ಥಾನಕ್ಕಿಂತ ಸ್ವಲ್ಪ ಪೂರ್ವದಲ್ಲಿ ಉಗಮಿಸಿ ಮಧ್ಯ ಪ್ರದೇಶದಲ್ಲಿ ಉತ್ತರ-ವಾಯವ್ಯ ದಿಕ್ಕಿನಲ್ಲಿ ಹರಿದು ನೈಋತ್ಯ-ಈಶಾನ್ಯ ದಿಕ್ಕಿನಲ್ಲಿ ಸಾಗುವ ಕೆಯ್ಮೂರ್ ಶ್ರೇಣಿಯನ್ನು ಸಂಧಿಸಿದಾಗ ಪೂರ್ವಕ್ಕೆ ತೀಕ್ಷ್ಣವಾಗಿ ತಿರುಗಿ ಹರಿಯುತ್ತದೆ. ಸೋನ್ ನದಿಯು ಕೆಯ್ಮೂರ್ ಶ್ರೇಣಿಗೆ ಸಮಾಂತರವಾಗಿ ಉತ್ತರ ಪ್ರದೇಶ, ಝಾರ್ಖಂಡ್ ಮತ್ತು ಬಿಹಾರ ರಾಜ್ಯಗಳಲ್ಲಿ ಹರಿದು ಗಂಗಾ ನದಿಯನ್ನು ಪಟ್ನಾಕ್ಕೆ ಸ್ವಲ್ಪ ಮೇಲೆ ಸೇರುತ್ತದೆ.


"http://kn.wikipedia.org/w/index.php?title=ಸೋನ್_ನದಿ&oldid=319643" ಇಂದ ಪಡೆಯಲ್ಪಟ್ಟಿದೆ