ಸಾಂಸ್ಥಿಕ ಆಡಳಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾಂಸ್ಥಿಕ ಅಡಳಿತ ಎಂಬುದು ಪ್ರಕ್ರಿಯೆಗಳು, ಪದ್ಧತಿಗಳು, ಕಾರ್ಯನೀತಿಗಳು, ಕಾನೂನುಗಳು, ಮತ್ತು ಸ್ಥಾಪಿತ ಪದ್ಧತಿಗಳ ಒಂದು ಸಂಕಲನವಾಗಿದೆ. ಒಂದು ಸಂಸ್ಥೆ ಅಥವಾ ಕಂಪನಿಯು ನಿರ್ದೇಶಿಸಲ್ಪಡುವ, ಆಡಳಿತಕ್ಕೆ ಒಳಗಾಗುವ ಅಥವಾ ನಿಯಂತ್ರಣಕ್ಕೆ ಒಳಪಡುವ ಮಾರ್ಗದ ಮೇಲೆ ಇದು ಪ್ರಭಾವ ಬೀರುತ್ತದೆ.

ಸಂಸ್ಥೆಯೊಂದರಲ್ಲಿ ತೊಡಗಿಸಿಕೊಂಡಿರುವ ಅನೇಕ ಮಧ್ಯಸ್ಥಗಾರರ ನಡುವಿನ ಸಂಬಂಧಗಳನ್ನು ಹಾಗೂ ಯಾವ ಗುರಿ ಅಥವಾ ಉದ್ದೇಶದ ಸಾಧನೆಗಾಗಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆಯೋ ಅವುಗಳನ್ನೂ ಸಹ ಸಾಂಸ್ಥಿಕ ಅಡಳಿತವು ಒಳಗೊಳ್ಳುತ್ತದೆ. ಷೇರುದಾರರು/ಸದಸ್ಯರು, ಆಡಳಿತ ಮಂಡಳಿ, ಮತ್ತು ನಿರ್ದೇಶಕರ ಮಂಡಳಿಯ ಸದಸ್ಯರು ಪ್ರಧಾನ ಮಧ್ಯಸ್ಥಗಾರರಾಗಿರುತ್ತಾರೆ. ಇತರ ಮಧ್ಯಸ್ಥಗಾರರಲ್ಲಿ, ಕಾರ್ಮಿಕರು (ನೌಕರರು), ಗ್ರಾಹಕರು, ಸಾಲದಾತರು (ಉದಾ: ಬ್ಯಾಂಕುಗಳು, ಬಾಂಡ್‌ ಅಥವಾ ಕರಾರುಪತ್ರವನ್ನು ಹೊಂದಿದವರು), ಸರಬರಾಜುದಾರರು, ನಿಯಂತ್ರಕರು ಮತ್ತು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಂಡಿರುತ್ತಾರೆ. ಲಾಭನಿರಪೇಕ್ಷ ಸಂಸ್ಥೆಗಳು ಅಥವಾ ಸದಸ್ಯತ್ವ ಆಧರಿತ ಇತರ ಸಂಘಟನೆಗಳಲ್ಲಿ "ಷೇರುದಾರರು" ಎಂದರೆ ಈ ಕೆಳಗಿನ ಪಠ್ಯದಲ್ಲಿ ನೀಡಿರುವ ಲಕ್ಷಣಗಳುಳ್ಳ (ಒಂದು ವೇಳೆ ಅನ್ವಯವಾಗುವುದಾದರೆ) "ಸದಸ್ಯರು" ಎಂದರ್ಥ.

ಸಾಂಸ್ಥಿಕ ಅಡಳಿತ ಎಂಬುದು ಒಂದು ಬಹುಮುಖೀಯ ವಿಷಯ.[೧] ಪ್ರಧಾನ-ದಲ್ಲಾಳಿ ಸಮಸ್ಯೆಯನ್ನು ತಗ್ಗಿಸಲು ಅಥವಾ ತೆಗೆದುಹಾಕಲು ಪ್ರಯತ್ನಿಸುವ ಕಾರ್ಯವಿಧಾನ ಅಥವಾ ಕೌಶಲಗಳ ಮೂಲಕ, ಸಂಘಟನೆಯೊಂದರಲ್ಲಿನ ನಿರ್ದಿಷ್ಟ ವ್ಯಕ್ತಿಗಳ ಹೊಣೆಗಾರಿಕೆಯನ್ನು ದೃಢೀಕರಿಸುವುದು ಸಾಂಸ್ಥಿಕ ಆಡಳಿತದ ಪ್ರಮುಖ ವಿಷಯ ಎನಿಸಿಕೊಳ್ಳುತ್ತದೆ.

ಆರ್ಥಿಕ ದಕ್ಷತೆಯಲ್ಲಿ ಸಾಂಸ್ಥಿಕ ಆಡಳಿತ ವ್ಯವಸ್ಥೆಯೊಂದರ ಪ್ರಭಾವದ ಕುರಿತಾಗಿ ಚರ್ಚೆಗಳ ಒಂದು ಸಂಬಂಧಿತ ಆದರೆ ಪ್ರತ್ಯೇಕವಾದ ಎಳೆಯು ಗಮನಹರಿಸುತ್ತದೆ. ಇದು ಷೇರುದಾರರ ಹಿತರಕ್ಷಣೆಗೂ ಬಲವಾದ ಒತ್ತು ನೀಡುತ್ತದೆ. ಸಾಂಸ್ಥಿಕ ಆಡಳಿತ ವಿಷಯಕ್ಕೆ ಇನ್ನೂ ಅನೇಕ ಮಗ್ಗಲುಗಳಿವೆ. ವಿಶ್ವಾದ್ಯಂತವಿರುವ ಮಧ್ಯಸ್ಥಗಾರ ದೃಷ್ಟಿಕೋನ ಮತ್ತು ಸಾಂಸ್ಥಿಕ ಆಡಳಿತದ ಮಾದರಿಗಳನ್ನೂ ಇದು ಒಳಗೊಳ್ಳುತ್ತದೆ (ಕೆಳಗೆ ನೀಡಲಾದ 9ನೇ ವಿಭಾಗವನ್ನು ನೋಡಿ).

2001ರಿಂದಲೂ, ಆಧುನಿಕ ಸಂಸ್ಥೆಗಳ ಸಾಂಸ್ಥಿಕ ಆಡಳಿತದ ಅಭ್ಯಾಸಗಳು ಅಥವಾ ಆಚರಣೆಗಳಲ್ಲಿ ನವೀಕೃತ ಆಸಕ್ತಿಯು ಕಂಡುಬರುತ್ತಿದೆ. ಎನ್ರಾನ್ ಕಾರ್ಪೊರೇಷನ್ ಮತ್ತು MCI ಇಂಕ್‌. (ಇದಕ್ಕೂ ಮುಂಚೆ ಇದನ್ನು WorldCom ಎಂದು ಕರೆಯಲಾಗುತ್ತಿತ್ತು)ನಂತಹ U.S.ನ ಅಸಂಖ್ಯಾತ ಬೃಹತ್‌ ಸಂಸ್ಥೆಗಳು ಗಮನ ಸೆಳೆಯುವ ರೀತಿಯಲ್ಲಿ ಕುಸಿದಿದ್ದೇ ಇದಕ್ಕೆ ಮುಖ್ಯ ಕಾರಣವೆನ್ನಬಹುದು.

ಸಾಂಸ್ಥಿಕ ಆಡಳಿತದ ಕುರಿತು ಸಾರ್ವಜನಿಕರಲ್ಲಿ ಮತ್ತೊಮ್ಮೆ ವಿಶ್ವಾಸವನ್ನು ಮೂಡಿಸುವ ದೃಷ್ಟಿಯಿಂದ, U.S. ಒಕ್ಕೂಟ ಸರ್ಕಾರವು 2002ರಲ್ಲಿ ಸಾರ್ಬೇನ್ಸ್‌-ಆಕ್ಸ್ಲೆ ಕಾಯಿದೆಯನ್ನು ಅನುಮೋದಿಸಿತು.

ವ್ಯಾಖ್ಯಾನ[ಬದಲಾಯಿಸಿ]

ಸಾಂಸ್ಥಿಕ ಅಡಳಿತದ ಒಂದು ಮಂಡಳಿ ಸಂಸ್ಕೃತಿ ಎಂಬ ಕೃತಿಯಲ್ಲಿ ವಾಣಿಜ್ಯ ಲೇಖಕ ಗೇಬ್ರಿಯೆಲ್‌ ಒ'ಡೊನೊವಾನ್ ಪ್ರ ಸಾಂಸ್ಥಿಕ ಆಡಳಿತವನ್ನು ವ್ಯಾಖ್ಯಾನಿಸುತ್ತಾ, 'ಇದು ಕಾರ್ಯನೀತಿಗಳು, ಪ್ರಕ್ರಿಯೆಗಳು ಮತ್ತು ಜನರನ್ನು ಒಳಗೊಂಡ ಒಂದು ಆಂತರಿಕ ವ್ಯವಸ್ಥೆಯಾಗಿದ್ದು, ಉತ್ತಮ ವ್ಯಾವಹಾರಿಕ ತಿಳುವಳಿಕೆ, ವಸ್ತುನಿಷ್ಠತೆ, ಹೊಣೆಗಾರಿಕೆ ಮತ್ತು ಸಮಗ್ರತೆಯೊಂದಿಗೆ ಆಡಳಿತ ಚಟುವಟಿಕೆಗಳನ್ನು ನಿರ್ದೇಶಿಸುವ ಮತ್ತು ನಿಯಂತ್ರಿಸುವ ಮೂಲಕ ಷೇರುದಾರರು ಮತ್ತು ಇತರ ಮಧ್ಯಸ್ಥಗಾರರ ಅಗತ್ಯಗಳನ್ನು ಪೂರೈಸುತ್ತದೆ. ಸದೃಢವಾದ ಸಾಂಸ್ಥಿಕ ಆಡಳಿತವು ಬಾಹ್ಯ ಮಾರುಕಟ್ಟೆಯ ಬದ್ಧತೆ ಹಾಗೂ ಕಾನೂನಿನ ಮೇಲೆ ಅವಲಂಬಿತವಾಗಿದ್ದು, ಇದರೊಂದಿಗೆ ಒಂದು ಆರೋಗ್ಯಕರ ಮಂಡಳಿಯ ಸಂಸ್ಕೃತಿಯೂ ಸೇರಿಕೊಂಡರೆ ಕಾರ್ಯನೀತಿಗಳು ಹಾಗೂ ಪ್ರಕ್ರಿಯೆಗಳಿಗೆ ರಕ್ಷಣೆ ಸಿಕ್ಕಿದಂತಾಗುತ್ತದೆ'.

ಒ'ಡೊನೊವಾನ್ ತಮ್ಮ ಮಾತು ಮುಂದುವರಿಸುತ್ತಾ, 'ಕಂಪನಿಯೊಂದರ ಸಾಂಸ್ಥಿಕ ಆಡಳಿತದ ಗ್ರಹಿಸಲ್ಪಟ್ಟ ಗುಣಮಟ್ಟವು ತನ್ನ ಷೇರು ಬೆಲೆಯ ಮೇಲಷ್ಟೇ ಅಲ್ಲದೇ ಹೆಚ್ಚುತ್ತಿರುವ ಬಂಡವಾಳದ ವೆಚ್ಚದ ಮೇಲೂ ಪ್ರಭಾವ ಬೀರಬಲ್ಲದು.

ಹಣಕಾಸು ಮಾರುಕಟ್ಟೆಗಳು, ಕಾನೂನು ಮತ್ತು ಮಾರುಕಟ್ಟೆಯ ಇತರ ಬಾಹ್ಯಶಕ್ತಿಗಳ ಜೊತೆಗೆ, ಕಾರ್ಯನೀತಿಗಳು ಮತ್ತು ಪ್ರಕ್ರಿಯೆಗಳನ್ನು ಹೇಗೆ ಅನುಷ್ಠಾನಗೊಳಿಸಲಾಗಿದೆ ಮತ್ತು ಅವು ಜನರಿಗೆ ಹೇಗೆ ಮಾರ್ಗದರ್ಶನ ನೀಡುತ್ತಿವೆ ಎಂಬುದರ ಮೇಲೆ ಗುಣಮಟ್ಟವು ನಿರ್ಧರಿಸಲ್ಪಡುತ್ತದೆ. ಬಾಹ್ಯ ಶಕ್ತಿಗಳು ಹೆಚ್ಚಿನಂಶ ಯಾವುದೇ ಮಂಡಳಿಯ ನಿಯಂತ್ರಣಾ ವಲಯದಿಂದ ಆಚೆ ಇರುತ್ತವೆ. ಆಂತರಿಕ ಪರಿಸರವು ಒಂದು ತೀರಾ ವಿಭಿನ್ನ ವಿಷಯವಾಗಿದ್ದು, ತಮ್ಮ ಮಂಡಳಿ ಸಂಸ್ಕೃತಿಯ ಮೂಲಕ ಪ್ರತಿಸ್ಪರ್ಧಿಗಳಿಗಿಂತ ವಿಭಿನ್ನವಾಗಿ ನಿಲ್ಲಲು ಕಂಪನಿಗಳಿಗೆ ಅದು ಅವಕಾಶ ಕಲ್ಪಿಸುತ್ತದೆ.

ಕಾರಣಕ್ಕೆ ಬದಲಾಗಿ ರೋಗದ ಕುರುಹುಗಳನ್ನು ಮಾತ್ರವೇ ಉಪಚರಿಸುವ ರೀತಿಯಲ್ಲಿ ಕಾರ್ಯನಿರ್ವಾಹಕರಿಗೆ ತಪ್ಪು ಮಾರ್ಗದರ್ಶನ ನೀಡುವ ವಂಚನೆಯ ಚಟುವಟಿಕೆಗಳು ಮತ್ತು ಪಾರದರ್ಶಕ ನೀತಿಯನ್ನು ತಡೆಯುವ ವಿಧಾಯಕದ ಕಾರ್ಯನೀತಿಯ ಮೇಲೆಯೇ ಸಾಂಸ್ಥಿಕ ಆಡಳಿತದ ಕುರಿತಾದ ಅತಿ ಹೆಚ್ಚಿನ ಚರ್ಚೆಗಳು ಇಲ್ಲಿಯ ತನಕವೂ ಕೇಂದ್ರೀಕರಿಸಲ್ಪಟ್ಟಿವೆ' ಎಂದು ಅಭಿಪ್ರಾಯಪಟ್ಟಿದ್ದಾರೆ.[೨]

ಷೇರುದಾರರು, ಸಾಲ ನೀಡುವವರು, ನೌಕರರು, ಗ್ರಾಹಕರು ಮತ್ತು ಸರಬರಾಜುದಾರರನ್ನು ತೃಪ್ತಿಪಡಿಸುವುದಕ್ಕಾಗಿ ದೀರ್ಘಾವಧಿಯ ಕಾರ್ಯತಂತ್ರದ ಗುರಿಗಳನ್ನು ಸಾಧಿಸುವ ದೃಷ್ಟಿಯಿಂದ ಕಂಪನಿಯೊಂದನ್ನು ರೂಪಿಸುವ, ನಿರ್ವಹಿಸುವ ಮತ್ತು ನಿಯಂತ್ರಿಸುವ ಉದ್ದೇಶವನ್ನು ಈ ವ್ಯವಸ್ಥೆ ಹೊಂದಿದೆ. ಪರಿಸರದ ಮತ್ತು ಸ್ಥಳೀಯ ಸಮುದಾಯದ ಅವಶ್ಯಕತೆಗಳನ್ನು ಪೂರೈಸುವುದರ ಜೊತೆಗೆ ಕಾನೂನಿನ ಮತ್ತು ನಿಯಂತ್ರಕ ಅಗತ್ಯಗಳ ಅನುಸಾರವಾಗಿಯೂ ಈ ವ್ಯವಸ್ಥೆಯು ಕಾರ್ಯನಿರ್ವಹಿಸುತ್ತದೆ.

ಸಾಂಸ್ಥಿಕ ಆಡಳಿತದ ಕುರಿತಾದ ಭಾರತದ SEBI ಸಮಿತಿಯ ವರದಿಯು ಸಾಂಸ್ಥಿಕ ಆಡಳಿತವನ್ನು ವ್ಯಾಖ್ಯಾನಿಸುತ್ತಾ, ಪರಭಾರೆ ಮಾಡಲಾಗದ ಹಕ್ಕುಗಳನ್ನು ಹೊಂದಿರುವ ಷೇರುದಾರರನ್ನು ಸಂಸ್ಥೆಯ ನಿಜವಾದ ಮಾಲೀಕರಾಗಿ ಆಡಳಿತ ಮಂಡಳಿಯು ಸ್ವೀಕರಿಸುವಂತೆ ಮತ್ತು ಷೇರುದಾರರ ಪರವಾಗಿ ಆಡಳಿತ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುವ ಅವರ ಪಾತ್ರದ ರೂಪದಲ್ಲಿ ಸಾಂಸ್ಥಿಕ ಆಡಳಿತದ ಅಸ್ತಿತ್ವವಿದೆ. ಇದು ಕಂಪನಿಯೊಂದರ ವ್ಯವಸ್ಥಾಪನೆಯಲ್ಲಿ ಮೌಲ್ಯಗಳಿಗೆ ತೋರುವ ಬದ್ಧತೆ, ನೈತಿಕ ವ್ಯವಹಾರದ ವರ್ತನೆ ಮತ್ತು ವೈಯಕ್ತಿಕ ಹಾಗೂ ಸಾಂಸ್ಥಿಕ ನಿಧಿಗಳ ನಡುವೆ ವ್ಯತ್ಯಾಸ ಕಂಡುಕೊಳ್ಳುವುದರ ಕುರಿತಾಗಿದೆ ಎಂದು ತಿಳಿಸಿದೆ. ಗಾಂಧೀಜಿಯವರ ಧರ್ಮದರ್ಶಿತ್ವ ತತ್ವದಿಂದ ಮತ್ತು ಭಾರತೀಯ ಸಂವಿಧಾನದ ಮಾರ್ಗದರ್ಶಿ ತತ್ವಗಳಿಂದ ಈ ವ್ಯಾಖ್ಯಾನವನ್ನು ಪಡೆಯಲಾಗಿದೆ. ಸಾಂಸ್ಥಿಕ ಅಡಳಿತವನ್ನು ನೀತಿಶಾಸ್ತ್ರವಾಗಿ ಮತ್ತು ಒಂದು ನೈತಿಕ ಕರ್ತವ್ಯವಾಗಿ ನೋಡಲಾಗುತ್ತದೆ.

ಇತಿಹಾಸ[ಬದಲಾಯಿಸಿ]

19ನೇ ಶತಮಾನದಲ್ಲಿ, ಸಾಂಸ್ಥಿಕ ಆಡಳಿತವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವ ದೃಷ್ಟಿಯಿಂದ, ಮೌಲ್ಯ ನಿರ್ಣಯದ ಹಕ್ಕುಗಳಂತಹ ಶಾಸನಸಮ್ಮತ ಪ್ರಯೋಜನಗಳ ಬದಲಿಗೆ ಷೇರುದಾರರ ಅವಿರೋಧ ಒಪ್ಪಿಗೆಯಿಲ್ಲದೆಯೇ ಆಡಳಿತವನ್ನು ನಡೆಸಲು ರಾಜ್ಯದ ಸಂಸ್ಥಾ ಕಾನೂನುಗಳು ಸಾಂಸ್ಥಿಕ ಮಂಡಳಿಗಳ ಹಕ್ಕುಗಳನ್ನು ಹೆಚ್ಚಿಸಿದವು. ಅಂದಿನಿಂದಲೂ ಮತ್ತು ಸಾರ್ವಜನಿಕವಾಗಿ ವ್ಯವಹಾರ ನಡೆಸುವ USನಲ್ಲಿನ ಬಹುತೇಕ ಬೃಹತ್ ಸಂಸ್ಥೆಗಳು ಸಾಂಸ್ಥಿಕ ಆಡಳಿತಸ್ನೇಹಿ ಡೆಲಾವೇರ್ ಕಾನೂನಿನ ಅಡಿಯಲ್ಲಿ ಸಂಘಟಿಸಲ್ಪಟ್ಟಿರುವುದರಿಂದಲೂ, ಹಾಗೂ ವಿವಿಧ ಸಾಂಸ್ಥಿಕ ಘಟಕಗಳು ಹಾಗೂ ಸಂಘ-ಸಂಸ್ಥೆಗಳಾಗಿ USನ ಸಂಪತ್ತು ಗಣನೀಯ ಪ್ರಮಾಣದಲ್ಲಿ ಪರಿವರ್ತನೆಗೊಂಡಿದ್ದರಿಂದಲೂ, ಏಕವ್ಯಕ್ತಿ ಮಾಲೀಕರು ಹಾಗೂ ಷೇರುದಾರರ ಹಕ್ಕುಗಳು ಹೆಚ್ಚಿನ ಸಂಖ್ಯೆಯಲ್ಲಿ ಹುಟ್ಟಿಕೊಂಡಿವೆ ಮತ್ತು ಚೆದುರಿಹೋಗಿವೆ. ಕಾರ್ಯನಿರ್ವಹಣಾ ಸಂಬಳ ಮತ್ತು ಆಗಿಂದಾಗ್ಗೆ ಕಂಡುಬರುವ ಸ್ಟಾಕ್‌ ನಷ್ಟಗಳು ಷೇರುದಾರರ ಕಾಳಜಿಯ ವಿಷಯಗಳಾಗಿದ್ದು, ಈ ಅಂಶಗಳೇ ಸಾಂಸ್ಥಿಕ ಆಡಳಿತದ ಸುಧಾರಣೆಯ ಅಗತ್ಯವನ್ನು ಮತ್ತೆ ಮತ್ತೆ ಒತ್ತಿ ಹೇಳುತ್ತವೆ.

20ನೇ ಶತಮಾನದಲ್ಲಿ, 1929ರ ವಾಲ್‌ಸ್ಟ್ರೀಟ್‌ ಕುಸಿತದ ತತ್‌ಕ್ಷಣದ ಪರಿಣಾಮದ ಸಂದರ್ಭದಲ್ಲಿ ಅಡಾಲ್ಫ್‌ ಅಗಸ್ಟಸ್‌ ಬೆರ್ಲೆ, ಎಡ್ವಿನ್ ಡೊಡ್‌, ಮತ್ತು ಗಾರ್ಡಿನರ್ ಸಿ.ಮೀನ್ಸ್‌ರಂತಹ ಕಾನೂನು ತಜ್ಞರು ಸಮಾಜದಲ್ಲಿನ ಆಧುನಿಕ ಸಂಸ್ಥೆಗಳ ಬದಲಾಗುತ್ತಿರುವ ಪಾತ್ರದ ಕುರಿತು ಆಲೋಚಿಸಿದರು.

"ದಿ ಮಾಡರ್ನ್‌ ಕಾರ್ಪೊರೇಷನ್ ಅಂಡ್ ಪ್ರೈವೇಟ್ ಪ್ರಾಪರ್ಟಿ" (1932, ಮ್ಯಾಕ್‌ಮಿಲನ್) ಎಂಬ ಶೀರ್ಷಿಕೆಯ, ಬೆರ್ಲೆ ಮತ್ತು ಮೀನ್ಸ್‌ರ ಪ್ರಬಂಧವು ಸಾಂಸ್ಥಿಕ ಆಡಳಿತದ ಪರಿಕಲ್ಪನೆಯ ಕುರಿತಾದ ಇಂದಿನ ಪಾಂಡಿತ್ಯಪೂರ್ಣ ಚರ್ಚೆಗಳಲ್ಲಿ ಈಗಲೂ ಆಳವಾದ ಪ್ರಭಾವವನ್ನು ಬೀರುತ್ತಿದೆ.

ಚಿಕಾಗೋ ಸ್ಕೂಲ್‌ ಆಫ್ ಇಕನಾಮಿಕ್ಸ್‌ನಿಂದ ಹೊರಬಂದ ರೊನಾಲ್ಡ್‌ ಕೋಸ್‌ರ "ದಿ ನೇಚರ್ ಆಫ್‌ ದಿ ಫರ್ಮ್‌" ಎಂಬ ಕೃತಿಯು ನಿರ್ವಹಣಾ ವೆಚ್ಚಗಳು ಎಂಬ ಅಭಿಮತ ಅಥವಾ ಕಲ್ಪನೆಯನ್ನು ಪರಿಚಯಿಸಿತು. ಸಂಸ್ಥೆಗಳು ಏಕೆ ಸ್ಥಾಪನೆಗೊಳ್ಳುತ್ತವೆ ಮತ್ತು ಅವು ಅದೇ ರೀತಿಯಲ್ಲಿ ನಡೆದುಕೊಂಡು ಹೋಗುತ್ತವೆ ಎಂಬುದನ್ನು ಅರ್ಥೈಸಿಕೊಳ್ಳುವಲ್ಲಿ ಇದು ನೆರವಾಯಿತು. ಐವತ್ತು ವರ್ಷಗಳ ನಂತರ ಬಂದ ಯೂಜೀನ್ ಫಮಾ ಮತ್ತು ಮೈಕೇಲ್ ಜೆನ್‌ಸೆನ್‌ರವರ, "ದಿ ಸೆಪರೇಷನ್‌ ಆಫ್ ಓನರ್‌ಷಿಪ್ ಅಂಡ್‌ ಕಂಟ್ರೋಲ್" (1983, ಕಾನೂನು ಮತ್ತು ಆರ್ಥಿಕತೆಗಳ ನಿಯತಕಾಲಿಕ) ಎಂಬ ದಿನಚರಿಯು ಸಾಂಸ್ಥಿಕ ಆಡಳಿತವನ್ನು ಅರ್ಥೈಸಿಕೊಳ್ಳಲು ದಳ್ಳಾಳಿ ಸಂಸ್ಥೆಯ ಸಿದ್ಧಾಂತವೇ (ಏಜೆನ್ಸಿ ಥಿಯರಿ) ಸೂಕ್ತ ಮಾರ್ಗ ಎಂದು ದೃಢವಾಗಿ ಸಮರ್ಥಿಸಿ, ತನ್ಮೂಲಕ ಸಂಸ್ಥೆಯೊಂದನ್ನು ಒಪ್ಪಂದಗಳ ಒಂದು ಶ್ರೇಣಿಯಂತೆಯೇ ಅದು ಕಂಡಿತು.

1989ರಲ್ಲಿ ಬಂದ ಕ್ಯಾಥಲೀನ್ ಐಸೆನ್‌ಹಾರ್ಡ್‌ರ ಲೇಖನವೊಂದರಲ್ಲಿ ("ಏಜೆನ್ಸಿ ಥಿಯರಿ: ಆನ್ ಅಸೆಸ್‌ಮೆಂಟ್‌ ಅಂಡ್‌ ರಿವ್ಯೂ", ಎಂಬ ವ್ಯವಸ್ಥಾಪನಾ ಅಕೆಡೆಮಿಯ ಅವಲೋಕನ) ದಲ್ಲಾಳಿ ಸಂಸ್ಥೆಯ ಸಿದ್ಧಾಂತದ ಪ್ರಾಬಲ್ಯವು ಎದ್ದುಕಾಣುವಂತಿತ್ತು.

IIನೇ ಜಾಗತಿಕ ಸಮರದ ನಂತರ ಬಹುರಾಷ್ಟ್ರೀಯ ಸಂಸ್ಥೆಗಳ ಹುಟ್ಟುವಿಕೆಯ ಮೂಲಕ ಕಂಡುಬಂದ US ವಿಸ್ತರಣೆಯಲ್ಲಿ ವ್ಯವಸ್ಥಾಪನಾ ವರ್ಗದ ಸಿಬ್ಬಂದಿಯ ಅಸ್ತಿತ್ವ ಕಂಡುಬಂತು. ಇದಕ್ಕೆ ಅನುಸಾರವಾಗಿ, ಹಾರ್ವರ್ಡ್‌ ಬಿಸಿನೆಸ್‌ ಸ್ಕೂಲ್‌ಗೆ ಸೇರಿದ ಈ ಕೆಳಕಂಡ ವ್ಯವಸ್ಥಾಪನಾ ಪ್ರಾಧ್ಯಾಪಕರು ನಿರ್ದಿಷ್ಟ ವಿಷಯಗಳ ಪ್ರಾಮುಖ್ಯತೆಯನ್ನು ಅಧ್ಯಯನ ಮಾಡಿ ಪ್ರಭಾವಪೂರ್ಣ ಪ್ರಬಂಧಗಳನ್ನು ಪ್ರಕಟಿಸಿದರು: ಮೈಲ್ಸ್‌ ಮೇಸ್‌ (ವಾಣಿಜ್ಯೋದ್ಯಮ ನಿರ್ವಹಣಾಶೀಲತೆ), ಆಲ್‌ಫ್ರೆಡ್ ಡಿ. ಚಾಂಡ್ಲರ್, Jr. (ವ್ಯಾವಹಾರಿಕ ಇತಿಹಾಸ), ಜೇ ಲಾರ್ಷ್‌ (ಸಾಂಸ್ಥಿಕ ನಡವಳಿಕೆ) ಮತ್ತು ಎಲಿಜಬೆತ್‌ ಮ್ಯಾಕ್‌ಐವರ್ (ಸಾಂಸ್ಥಿಕ ನಡವಳಿಕೆ).

ಲಾರ್ಷ್‌ ಮತ್ತು ಮ್ಯಾಕ್‌ಐವರ್‌ ಪ್ರಕಾರ, "ಅನೇಕ ಬೃಹತ್‌ ಸಂಸ್ಥೆಗಳು ತಮ್ಮ ನಿರ್ದೇಶಕರ ಮಂಡಳಿಯಿಂದ ಹೊರಹೊಮ್ಮಬೇಕಾದ ಸೂಕ್ತ ಹೊಣೆಗಾರಿಕೆ ಅಥವಾ ಮೇಲ್ವಿಚಾರಣೆಯಿಲ್ಲದೆಯೇ ವ್ಯಾವಹಾರಿಕ ವಿಚಾರಗಳ ಮೇಲೆ ಪ್ರಬಲ ನಿಯಂತ್ರಣವನ್ನು ಹೊಂದಿವೆ."

1970ರ ಉತ್ತರಾರ್ಧದಿಂದೀಚೆಗೆ U.S. ಮತ್ತು ವಿಶ್ವದೆಲ್ಲೆಡೆಯಲ್ಲಿ ಸಾಂಸ್ಥಿಕ ಆಡಳಿತವು ಗಮನಾರ್ಹವಾದ ಚರ್ಚಾವಿಷಯವಾಗಿಯೇ ಮುಂದುವರಿದುಕೊಂಡುಬಂದಿದೆ.

ಸಾಂಸ್ಥಿಕ ಒಡೆತನದ ತಮ್ಮ ಹಕ್ಕುಗಳನ್ನು ಚಲಾಯಿಸುವಲ್ಲಿನ ಮತ್ತು ತಮ್ಮ ಷೇರುಗಳ ಹಾಗೂ, ತನ್ಮೂಲಕ ಸಂಪತ್ತಿನ ಮೌಲ್ಯವನ್ನು ಹೆಚ್ಚಿಸುವಲ್ಲಿನ ಷೇರುಮಾಲೀಕರ ಅಗತ್ಯಗಳು ಹಾಗೂ ಬಯಕೆಗಳು, ಸಾಂಸ್ಥಿಕ ಆಡಳಿತದಲ್ಲಿ ಸುಧಾರಣೆಯನ್ನು ತರುವ ದಿಟ್ಟ, ವಿಶಾಲ ಪ್ರಯತ್ನಗಳಿಗೆ ಭಾಗಶಃ ಪ್ರೇರಕವಾಗಿವೆ. ಕಳೆದ ಮೂರು ದಶಕಗಳಿಂದೀಚಿಗೆ, ಸಾಂಸ್ಥಿಕ ನಿರ್ದೇಶಕರ ಕರ್ತವ್ಯಗಳು ಅತೀವವಾಗಿ ವಿಸ್ತರಣೆಗೊಂಡಿವೆ. ಸಂಸ್ಥೆಗೆ ಮತ್ತು ಅದರ ಷೇರುಮಾಲೀಕರೆಡೆಗೆ ತೋರಬೇಕಾದ ನಿಷ್ಠಾವಂತಿಕೆಯ ಕರ್ತವ್ಯದ, ಸಾಂಪ್ರದಾಯಿಕ ವಿಧ್ಯುಕ್ತ ಹೊಣೆಗಾರಿಕೆಯಿಂದ ಆಚೆಗೂ ಇದು ವಿಸ್ತರಣೆಗೊಂಡಿದೆ.[೩]

1990ರ ದಶಕದ ಪೂರ್ವಾರ್ಧದಲ್ಲಿ, U.S.ನಲ್ಲಿನ ಸಾಂಸ್ಥಿಕ ಆಡಳಿತದ ಚರ್ಚಾ ವಿಷಯವು ಗಣನೀಯ ಪ್ರಮಾಣದಲ್ಲಿ ಮುದ್ರಣ ಮಾಧ್ಯಮದ ಗಮನವನ್ನು ಸೆಳೆದುಕೊಂಡಿತು. ಪ್ರತಿಷ್ಠಿತ ಕಂಪನಿಗಳ (ಉದಾ: IBM, ಕೊಡಾಕ್, ಹನಿವೆಲ್‌) ಮಂಡಳಿಯಿಂದ CEOಗಳನ್ನು ವಜಾಗೊಳಿಸಿದ್ದರಿಂದ ಉಂಟಾದ ಸಂಚಲನೆಯೇ ಇದಕ್ಕೆ ಕಾರಣವಾಗಿತ್ತು.

ಸಾಂಸ್ಥಿಕ ಷೇರುದಾರರ ಕ್ರಿಯಾಸಿದ್ಧಾಂತದ (ಇದಕ್ಕೂ ಮುಂಚೆ ಈ ಥರದ್ದು ತೀರಾ ಅಪರೂಪವಾಗಿ ಕಂಡುಬರುತ್ತಿತ್ತು) ಇಂತಹ ಆಂದೋಲನವೊಂದರ ನೇತೃತ್ವವನ್ನು ಕ್ಯಾಲಿಫೋರ್ನಿಯಾ ಪಬ್ಲಿಕ್ ಎಂಪ್ಲಾಯೀಸ್' ರಿಟೈರ್‌ಮೆಂಟ್‌ ಸಿಸ್ಟಮ್‌(CalPERS) ಸಂಘಟನೆಯು ವಹಿಸಿತು. CEO ಮತ್ತು ನಿರ್ದೇಶಕರ ಮಂಡಳಿಯ ನಡುವೆ ಈಗಿರುವ ಸಾಂಪ್ರದಾಯಿಕ ಸ್ನೇಹಶೀಲ ಸಂಬಂಧಗಳಿಂದ (ಉದಾಹರಣೆಗೆ, ಮೇಲಿಂದ ಮೇಲೆ ಹಿಂದಿನ ತಾರೀಕಿನ ನಮೂದಿಸುವಿಕೆಯನ್ನು ಮಾಡದ ಸ್ಟಾಕ್‌ ಆಯ್ಕೆಗಳ ತಡೆಹಿಡಿಯದ ನೀಡಿಕೆ) ಸಾಂಸ್ಥಿಕ ಮೌಲ್ಯವು ನಾಶವಾಗುವುದಿಲ್ಲ ಎಂಬುದನ್ನು ದೃಢೀಕರಿಸಲು ಈ ಮಾರ್ಗವನ್ನು ಅನುಸರಿಸಲಾಗಿತ್ತು.

1997ರಲ್ಲಿ, ಸ್ಥಿರಾಸ್ತಿ ಮೌಲ್ಯಗಳು ಕುಸಿದ ನಂತರ ವಿದೇಶಿ ಬಂಡವಾಳದ ಹಿಂತೆಗೆತದಿಂದಾಗಿ ಥೈಲೆಂಡ್‌, ಇಂಡೋನೇಷ್ಯಾ, ದಕ್ಷಿಣ ಕೊರಿಯಾ, ಮಲೇಷಿಯಾ ಮತ್ತು ಫಿಲಿಪೀನ್ಸ್‌ ದೇಶಗಳ ಆರ್ಥಿಕತೆಗಳ ಮೇಲೆ ತೀವ್ರಸ್ವರೂಪದ ಪರಿಣಾಮಗಳು ಉಂಟಾದುದನ್ನು ಪೂರ್ವ ಏಷ್ಯಾದ ಹಣಕಾಸು ಬಿಕ್ಕಟ್ಟು ಕಾಣಬೇಕಾಗಿಬಂತು. ಈ ದೇಶಗಳಲ್ಲಿನ ಸಾಂಸ್ಥಿಕ ಆಡಳಿತದ ಕಾರ್ಯವಿಧಾನಗಳ ಕೊರತೆಯಿಂದಾಗಿ ಅವುಗಳ ಆರ್ಥಿಕತೆಗಳಲ್ಲಿನ ಸಂಸ್ಥೆಗಳ ದೌರ್ಬಲ್ಯವು ಎದ್ದುಕಾಣುವಂತಾಯಿತು.

2000ದ ದಶಕದ ಆರಂಭದಲ್ಲಿ, ಎನ್ರಾನ್‌ ಮತ್ತು ವರ್ಲ್ಡ್‌ಕಾಮ್‌ನಂತಹ ಬೃಹತ್ ದಿವಾಳಿತನಗಳು (ಮತ್ತು ಅಪರಾಧಿ ದುಷ್ಕೃತ್ಯ) ಹಾಗೂ ಅಡೆಲ್ಫಿಯಾ ಕಮ್ಯುನಿಕೇಷನ್ಸ್‌, AOL, ಆರ್ಥರ್ ಆಂಡರ್‌ಸೆನ್‌, ಗ್ಲೋಬಲ್ ಕ್ರಾಸಿಂಗ್, ಟೈಕೋದಂತಹ ಕಡಿಮೆ ಮಟ್ಟದ ಸಾಂಸ್ಥಿಕ ಪತನಗಳು, ಸಾಂಸ್ಥಿಕ ಆಡಳಿತದಲ್ಲಿ ಷೇರುದಾರರ ಮತ್ತು ಸರ್ಕಾರದ ಹಿತಾಸಕ್ತಿಯು ಹೆಚ್ಚಳವಾಗಲು ಕಾರಣವಾದವು.

2002ರ ಸಾರ್ಬೇನ್ಸ್‌-ಆಕ್ಸ್ಲೆ ಕಾಯಿದೆಯ ಅಂಗೀಕಾರದ ಸಂದರ್ಭದಲ್ಲಿ ಇದು ಪ್ರತಿಬಿಂಬಿತವಾಗಿದೆ.[೩] Archived 2009-08-23 ವೇಬ್ಯಾಕ್ ಮೆಷಿನ್ ನಲ್ಲಿ.

ಸಾಂಸ್ಥಿಕ ಅಡಳಿತದ ಪ್ರಭಾವ[ಬದಲಾಯಿಸಿ]

ಸಾಂಸ್ಥಿಕ ಅಡಳಿತವು ವಿವಿಧ ಮಧ್ಯಸ್ಥಗಾರರ ಮೇಲೆ ಧನಾತ್ಮಕ ಪ್ರಭಾವವನ್ನು ಬೀರುವುದರಿಂದ ಸದೃಢ ಆರ್ಥಿಕತೆ ರೂಪುಗೊಳ್ಳುತ್ತದೆ. ಆದ್ದರಿಂದ ಉತ್ತಮ ಸಾಂಸ್ಥಿಕ ಆಡಳಿತವು ಸಮಾಜೋ-ಆರ್ಥಿಕ ಅಭಿವೃದ್ಧಿಗೆ ಒಂದು ಸಾಧನ ಎಂದು ಹೇಳಬಹುದು.[೪]

ಸಾಂಸ್ಥಿಕ ಹೂಡಿಕೆದಾರರ ಪಾತ್ರ[ಬದಲಾಯಿಸಿ]

ಬಹಳ ವರ್ಷಗಳ ಹಿಂದೆ, ವಿಶ್ವಾದ್ಯಂತ ಕಂಡುಬರುತ್ತಿದ್ದಂತೆ, ಸಂಸ್ಥೆಯ ಸ್ಟಾಕುಗಳನ್ನು ಕೊಳ್ಳುವವರು ಮತ್ತು ಮಾರುವವರು ಶ್ರೀಮಂತ ವ್ಯವಹಾರಸ್ಥರು ಅಥವಾ ಕುಟುಂಬಗಳಂತಹ ಏಕವ್ಯಕ್ತಿ ಅಥವಾ ಏಕಗುಂಪಿನ ಹೂಡಿಕೆದಾರರಾಗಿರುತ್ತಿದ್ದರು. ಇಂಥವರು ತಾವು ಹೊಂದಿದ ಷೇರುಗಳಿಗೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಪಟ್ಟಭದ್ರ, ವೈಯಕ್ತಿಕ ಮತ್ತು ಭಾವನಾತ್ಮಕ ಆಸಕ್ತಿಯನ್ನು ಸಾಮಾನ್ಯವಾಗಿ ಹೊಂದಿರುತ್ತಿದ್ದರು.

ಕಾಲಾನಂತರದಲ್ಲಿ ಮಾರುಕಟ್ಟೆಗಳು ಬೃಹತ್ ಪ್ರಮಾಣದಲ್ಲಿ ಸಂಸ್ಥೀಕರಿಸಲ್ಪಟ್ಟವು ; ಅಂದರೆ ಕೊಳ್ಳುವವರು ಹಾಗೂ ಮಾರುವವರು ಹೆಚ್ಚಿನ ಪ್ರಮಾಣದಲ್ಲಿ ಸಂಸ್ಥೆಗಳೇ ಆಗುವಂತಾಯಿತು (ಉದಾಹರಣೆಗೆ: ಪಿಂಚಣಿ ನಿಧಿಗಳು, ಮ್ಯೂಚುಯಲ್ ನಿಧಿ‌ಗಳು, ಹೆಡ್ಜ್‌ ನಿಧಿಗಳು, ವಿನಿಮಯ ಕೇಂದ್ರದಿಂದ ಮಾರಾಟವಾದ ನಿಧಿ‌ಗಳು ಹಾಗೂ ಇನ್ನಿತರ ಹೂಡಿಕಾ ಸಮೂಹಗಳು; ವಿಮಾ ಕಂಪನಿಗಳು, ಬ್ಯಾಂಕುಗಳು, ದಲ್ಲಾಳಿಗಳು, ಮತ್ತು ಇತರ ಹಣಕಾಸು ಸಂಸ್ಥೆಗಳು).

ಸಾಂಸ್ಥಿಕ ಹೂಡಿಕೆದಾರರ ಹೆಚ್ಚಳವು ತನ್ನೊಂದಿಗೆ ವೃತ್ತಿಪರ ಕಾರ್ಯತತ್ಪರತೆಯ ಹೆಚ್ಚಳದ ಕೆಲಪಾಲನ್ನೂ ತಂದಿದ್ದು, ಅದು ಸ್ಟಾಕ್ ಮಾರುಕಟ್ಟೆಯ ಕಟ್ಟುಪಾಡನ್ನು ಸುಧಾರಿಸುವ ಪ್ರವೃತ್ತಿಯನ್ನು ಹೊಂದಿದೆ (ಆದರೆ ಸಣ್ಣ ಹೂಡಿಕೆದಾರರ ಅಥವಾ ಬಹಳಷ್ಟು ಸಂಖ್ಯೆಯಲ್ಲಿರುವ ನಿಷ್ಕಪಟಿ ಅಥವಾ ಸರಳ ಸ್ವರೂಪದ ಸಂಸ್ಥೆಗಳ ಹಿತವನ್ನೂ ಕಾಪಾಡುವ ಅಗತ್ಯವೇನೂ ಅದಕ್ಕಿಲ್ಲ). ಮಾರುಕಟ್ಟೆಯಲ್ಲಿ ವ್ಯಕ್ತಿಗಳು ಪರೋಕ್ಷವಾಗಿ ಹೂಡುತ್ತಿರುವುದರ ನೇರ ಬೆಳವಣಿಗೆಯೊಂದಿಗೆ ಈ ಪ್ರಕ್ರಿಯೆಯೂ ಏಕಕಾಲಕ್ಕೆ ಸಂಭವಿಸಿದೆ ಎಂಬುದನ್ನಿಲ್ಲಿ ಗಮನಿಸಬೇಕು (ಉದಾಹರಣೆಗೆ, ಬ್ಯಾಂಕ್‌ ಖಾತೆಗಳಲ್ಲಿ ತಾವು ಹೊಂದಿರುವುದಕ್ಕಿಂತ ದುಪ್ಪಟ್ಟು ಪ್ರಮಾಣದ ಹಣವನ್ನು ವ್ಯಕ್ತಿಗಳು ಮ್ಯೂಚುಯಲ್‌ ನಿಧಿಗಳಲ್ಲಿ ಹೊಂದಿರುತ್ತಾರೆ). ವ್ಯಕ್ತಿಗಳು ತಮ್ಮ ಹಣವನ್ನು ಮ್ಯೂಚುಯಲ್‌ ನಿಧಿಗಳಂತಹ ಅಪ್ಪಟ "ವೃತ್ತಿಪರ ಸ್ವರೂಪಗಳ" ಕಡೆಗೆ ತಿರುಗಿಸುತ್ತಿರುವುದರಿಂದಾಗಿ ಈ ಬೆಳವಣಿಗೆಯು ಮುಖ್ಯವಾಗಿ ಕಂಡುಬಂದಿದೆ.

ಈ ರೀತಿಯಾಗಿ, ನಿಧಿಗಳ ಬಹುದೊಡ್ಡ ಭಾಗವು ಏಕವ್ಯಕ್ತಿ ಅಥವಾ ವೈಯಕ್ತಿಕ ಹೂಡಿಕೆದಾರರ ಪ್ರಯೋಜನಕ್ಕಾಗಿ ಇರುತ್ತದೆಯಾದರೂ, ಹೂಡಿಕೆಯ ಬಹುಪಾಲನ್ನು ಈಗ "ಸಾಂಸ್ಥಿಕ ಹೂಡಿಕೆ" ಎಂದೇ ಕರೆಯಲಾಗುತ್ತದೆ.

ಸಾಂಸ್ಥಿಕ ಮಾರಾಟದ ಉತ್ಕೃಷ್ಟತೆಯ ಸಂಕೇತವಾದ ಯೋಜನಾ ಮಾರಾಟವು (ಪ್ರೋಗ್ರ್ಯಾಂ ಟ್ರೇಡಿಂಗ್) 2007ರ ಕೆಲವೊಂದು ತಿಂಗಳಲ್ಲಿ ಕಂಡುಬಂದ NYSEನ ಮಾರಾಟಗಳಲ್ಲಿ ಸರಾಸರಿ 80%ಗಿಂತಲೂ ಹೆಚ್ಚಿನ ಪ್ರಮಾಣವನ್ನು ದಾಖಲಿಸಿದೆ. [೪] Archived 2003-08-15 ವೇಬ್ಯಾಕ್ ಮೆಷಿನ್ ನಲ್ಲಿ. (ಎಲ್ಲಕ್ಕಿಂತ ಹೆಚ್ಚಾಗಿ, ಈ ಅಂಕಿ-ಅಂಶಗಳು ಸದರಿ ಪರಿಪಾಠದ ಸಂಪೂರ್ಣ ವಿವರಗಳನ್ನು ಹೊರಗೆಡಹುವುದಿಲ್ಲ. ಇದಕ್ಕೆ 'ಐಸ್‌ಬರ್ಗ್‌' ಆದೇಶಗಳು ಎಂದು ಹೇಳಲಾಗುವ ಆದೇಶಗಳೇ ಕಾರಣ.

ಹೆಚ್ಚಿನ ವಿವರಗಳಿಗೆ ಕೊನೆಯ ಉಲ್ಲೇಖದ ಅಡಿಯಲ್ಲಿರುವ ಪ್ರಮಾಣ ಮತ್ತು ಪ್ರದರ್ಶನದ ಸೂಚನೆಗಳು ವಿಭಾಗವನ್ನು ನೋಡಿ.)

ದುರದೃಷ್ಟವಶಾತ್, ಬೃಹತ್ ಸಂಸ್ಥೆಗಳ ಅಜಾಗೂರಕತೆಯಲ್ಲಿ ಒಂದು ನೈತಿಕ ಚ್ಯುತಿಯು ಸಹವರ್ತಿಯಾಗೇ ಬೆಳೆದುಬಂದಿದ್ದು, ಅವುಗಳ ಬಹುತೇಕ ಪಾಲು ಬೃಹತ್ ಸಂಸ್ಥೆಗಳ ವಶದಲ್ಲಿದೆ. ಬೃಹತ್ ಸಂಸ್ಥೆಗಳ ನಿರ್ದೇಶಕರ ಮಂಡಳಿಯನ್ನು ಪ್ರಧಾನ ಷೇರುದಾರರು ಆರಿಸುತ್ತಿದ್ದುದು ವಾಡಿಕೆಯಾಗಿದ್ದು, ಹಣದ ಹೂಡಿಕೆಯ ರೂಪದಲ್ಲಷ್ಟೇ ಅಲ್ಲದೇ, ಭಾವನಾತ್ಮಕವಾಗಿಯೂ ಅವರು ಕಂಪನಿಯಲ್ಲಿ ಸಾಮಾನ್ಯವಾಗಿ ತೊಡಗಿಸಿಕೊಳ್ಳುತ್ತಿದ್ದರು (ಫೋರ್ಡ್‌ ಕಂಪನಿಯನ್ನು ಒಮ್ಮೆ ನೆನಪಿಸಿಕೊಳ್ಳಿ). ಇದಕ್ಕೆ ಪ್ರತಿಯಾಗಿ ಕಂಪನಿಯ ಮತ್ತು ಅದರ ಪ್ರಧಾನ ಕಾರ್ಯನಿರ್ವಾಹಕರ ಮೇಲೆ ಮಂಡಳಿಯು ಶ್ರದ್ಧೆಯಿಂದ ಒಂದು ಕಣ್ಣಿಡುತ್ತಿತ್ತು (ಅವು ಸಾಮಾನ್ಯವಾಗಿ ಅಧ್ಯಕ್ಷರನ್ನು ಅಥವಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು - CEO, ನೇಮಿಸಿಕೊಳ್ಳುತ್ತಿದ್ದವು ಮತ್ತು ವಜಾಮಾಡುತ್ತಿದ್ದವು)

ಕ್ರೆಡಿಟ್‌ ಸ್ಯುಸೆ ಸಂಸ್ಥೆಯಿಂದ ಕೈಗೊಳ್ಳಲಾದ ಇತ್ತೀಚಿನ ಅಧ್ಯಯನವೊಂದು ಹೀಗೆ ಅಭಿಪ್ರಾಯಪಡುತ್ತದೆ: "ಕಂಪನಿಯ ಬಂಡವಾಳದ 10%ಗಿಂತ ಹೆಚ್ಚಿನ ಒಂದು ಪಾಲನ್ನು ಉಳಿಸಿಕೊಳ್ಳುವ ಸಂಸ್ಥಾಪಕ ಕುಟುಂಬಗಳನ್ನು ಹೊಂದಿರುವ ಕಂಪನಿಗಳು ತಂತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಸಮಾನಸ್ಕಂಧರಿಗಿಂತ ಮಿಗಿಲಾದ ಅತ್ಯುತ್ಕೃಷ್ಟ ಸಾಧನೆ ಅಥವಾ ಯಶಸ್ಸನ್ನು ಅನುಭವಿಸಿವೆ." 1996ರಿಂದಲೂ, ಈ ಅತ್ಯುತ್ಕೃಷ್ಟ ಸಾಧನೆಯ ತಲಾ ವಾರ್ಷಿಕ ಪ್ರಮಾಣವು 8%ನಷ್ಟಿದೆ.[೫] ಹೆಸರಾಂತ CEOನ್ನು ಮರೆತುಬಿಡಿ. " ಸಿಕ್ಸ್‌ ಸಿಗ್ಮ' ಎಂಬ ವ್ಯಾವಹಾರಿಕ ವ್ಯವಸ್ಥಾಪನಾ ಕಾರ್ಯನೀತಿಯಿಂದ ಮತ್ತು ವಿನೂತನ ತಂತ್ರಜ್ಞಾನದ ಗೀಳಿನಿಂದ ಆಚೆಗೆ ಕಣ್ಣುಹಾಯಿಸಿ. ಕಂಪನಿಯೊಂದು ಹೊಂದಬಹುದಾದ ಅತಿದೊಡ್ಡ ಕಾರ್ಯನೀತಿಯ ಪ್ರಯೋಜನಗಳಲ್ಲಿ ಒಂದೆಂದರೆ [ಬಿಸಿನೆಸ್‌ ವೀಕ್‌ ಇದನ್ನು ಕಂಡುಕೊಂಡಿದೆ), ಅದರ ಪೀಳಿಗೆಗಳು ಅಥವಾ ರಕ್ತಸಂಬಂಧಗಳು." [೬] ಆ ಒಂದು ಕೊನೆಯ ಅಧ್ಯಯನದಲ್ಲಿ, "ಅತ್ಯುತ್ಕೃಷ್ಟ ಸಾಧನೆಗೆ ತಮ್ಮದೇ ಆದ ಕಾಣಿಕೆಯನ್ನು ನೀಡುವ ಐದು ಪ್ರಮುಖ ಘಟಕಾಂಶಗಳನ್ನು BW ಗುರುತಿಸಿದೆ. ಕೌಟುಂಬಿಕ ಹಿತಾಸಕ್ತಿಗಳನ್ನು ಹಿಡಿದಿಟ್ಟುಕೊಂಡಿರುವ ಉದ್ಯಮಗಳಿಗೆ ಎಲ್ಲಾ ಗುಣಲಕ್ಷಣಗಳು ಅಥವಾ ಶ್ರೇಷ್ಠತೆಗಳು ಅನನ್ಯವಾಗಿರಲು ಸಾಧ್ಯವಿಲ್ಲ. ಆದರೆ ಉದ್ಯಮದ ಚುಕ್ಕಾಣಿಯ ಸ್ಥಾನದಲ್ಲಿ ಒಬ್ಬರನ್ನು ಹೊಂದಲು ಅಥವಾ ತೆರೆಮರೆಯಲ್ಲಿ ಸಕ್ರಿಯರಾಗಿರುವವರನ್ನು ಹೊಂದಲು ಅದು ಏಕೆ ಸಹಾಯಮಾಡುತ್ತದೆ ಎಂಬುದನ್ನು ವಿವರಿಸಲು ಅವು ಬಹುದೂರ ಸಾಗುತ್ತವೆ. ಇಂಥಾ ವ್ಯಕ್ತಿ ಅಪಾಯದ ಸಂದರ್ಭದಲ್ಲಿ ಕೇವಲ ಒಂದು ವೇತನಚೆಕ್‌ಗಿಂತ ಮತ್ತು ಪ್ರಯೋಜನಕಾರಿಯಾದ ನಿವೃತ್ತಿಯೊಂದರ ನಿರೀಕ್ಷೆಗಿಂತ ಮಿಗಿಲಾಗಿರುವವರಾಗಿರಬೇಕಾಗುತ್ತದೆ."

ಹೆಚ್ಚಿನ ವಿವರಗಳಿಗೆ, ಅಲನ್‌ ಮರ್ರೇ ಬರೆದಿರುವ "ರಿವೊಲ್ಟ್‌ ಇನ್‌ ದಿ ಬೋರ್ಡ್‌ರೂಂ" ಕೃತಿಯನ್ನೂ ನೋಡಿ.

ಇಂದು, ಒಂದು ವೇಳೆ ಅಧ್ಯಕ್ಷ/CEO ಮಾಡುತ್ತಿರುವುದು ಮಾಲೀಕತ್ವದ ಸಂಸ್ಥೆಗಳಿಗೆ ಇಷ್ಟವಾಗದಿದ್ದಲ್ಲಿ ಮತ್ತು ಅವರನ್ನು ವಜಾ ಮಾಡಿದರೆ ಅದು ದುಬಾರಿಯಾಗಿ ಪರಿಣಮಿಸಬಹುದು ಎನಿಸಿದಲ್ಲಿ ("ಸುವರ್ಣ ಹಸ್ತಲಾಘವ", ಅಂದರೆ ಸೇವೆಯಿಂದ ವಜಾ ಮಾಡಿದಾಗ ನೀಡುವ ಪರಿಹಾರ ಧನದ ಕುರಿತು ಯೋಚಿಸಿ) ಮತ್ತು/ಅಥವಾ ಅದು ಸಮಯವನ್ನು ಹಾಳುಮಾಡುತ್ತದೆ ಎನಿಸಿದಲ್ಲಿ, ಅವರು ತಮ್ಮ ಹಿತಾಸಕ್ತಿಯನ್ನು ಹಾಗೆಯೇ ಮಾರಿಕೊಳ್ಳುತ್ತಾರೆ. ಇಂಥ ಸಂದರ್ಭದಲ್ಲಿ ಅಧ್ಯಕ್ಷ/CEOನಿಂದ ಮಂಡಳಿಯು ಪ್ರಾಯಶಃ ಆರಿಸಲ್ಪಡುತ್ತದೆ , ಮತ್ತು ಸಂಸ್ಥೆಯ ಅಧಿಕಾರಿಗಳು ಅಥವಾ ವ್ಯವಹಾರದ ಸಹವರ್ತಿಗಳಂತೆ, ಅವರ ಸ್ನೇಹಿತರು ಮತ್ತು ಸಹೋದ್ಯೋಗಿಗಳಾಗಿ ರೂಪಿಸಲಾಗುತ್ತದೆ. ಸಾಂಸ್ಥಿಕ ಷೇರುದಾರರು ಆಕ್ಷೇಪಿಸುವುದು ಅಪರೂಪವಾದ್ದರಿಂದ, ಮಂಡಳಿಯ ಸ್ಥಾನದ ಕುರ್ಚಿಯನ್ನು ಅಧ್ಯಕ್ಷ/CEOಗಳು ಸಾಮಾನ್ಯವಾಗಿ ಅವರಾಗಿಯೇ ಅಲಂಕರಿಸುತ್ತಾರೆ (ಇದರಿಂದಾಗಿ ಅವರನ್ನು ವಜಾಗೊಳಿಸುವುದು ಸಾಂಸ್ಥಿಕ ಮಾಲೀಕರಿಗೆ ಹೆಚ್ಚು ಕಷ್ಟಕರವಾಗುತ್ತದೆ). ಸಂದರ್ಭಾನುಸಾರವಾಗಿ, ಆದರೆ ಅಪರೂಪವಾಗಿ ಸಾಂಸ್ಥಿಕ ಹೂಡಿಕೆದಾರರು ಷೇರುದಾರರ ಠರಾವುಗಳನ್ನು ಬೆಂಬಲಿಸುತ್ತಾರೆ. ಇವು ಕಾರ್ಯನಿರ್ವಾಹಕ ವೇತನ ಮತ್ತು ಸ್ವಾಮ್ಯಸ್ವಾಧೀನ-ವಿರೋಧಿ ವಿಷಯಗಳಿಗೆ ಸಂಬಂಧಿಸಿರಬಹುದು. ಇದಕ್ಕೆ "ವಿಷದ-ಗುಳಿಗೆಯ" ಕ್ರಮ ಎಂದೂ ಹೆಸರಿದೆ.

ಅಂತಿಮವಾಗಿ, ಹೂಡಿಕೆಯಾದ ಹಣದ ದೊಡ್ಡ ಪಾಲುಗಳನ್ನು ('ವ್ಯಾನ್‌ಗಾರ್ಡ್‌ 500' ಮ್ಯೂಚುಯಲ್ ನಿಧಿ , ಅಥವಾ ಸಂಸ್ಥೆಗಳು, ಸ್ಟೇಟ್‌ ಸ್ಟ್ರೀಟ್‌ ಕಾರ್ಪ್‌.ಗಳಿಗಾಗಿರುವ ಬೃಹತ್‌ ಹೂಡಿಕಾ ವ್ಯವಸ್ಥಾಪನಾ ಸಂಸ್ಥೆಗಳಂತಹದ್ದು) ಸಾಕಷ್ಟು ಪ್ರಮಾಣದಲ್ಲಿ ದ್ರವತೆಯನ್ನು (ಅಂದರೆ, ಸುಲಭವಾಗಿ ನಗದಾಗಿ ಪರಿವರ್ತಿಸಬಹುದಾದ ಷೇರುಗಳು, ಡಿಬೆಂಚರುಗಳು ಇತ್ಯಾದಿಗಳನ್ನು) ಹೊಂದಿರುವ ಬೃಹತ್‌ ಸಂಖ್ಯೆಯ ವಿವಿಧ ಕಂಪನಿಗಳಲ್ಲಿ ಹೂಡಲು ಅನುವಾಗುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಈ ಕಾರ್ಯನೀತಿಯು ಏಕ ಕಂಪನಿಯ ಹಣಕಾಸಿನ ಅಥವಾ ಇತರ ಸಮಸ್ಯೆಗಳನ್ನು ಹೆಚ್ಚಿನ ರೀತಿಯಲ್ಲಿ ತೊಡೆದುಹಾಕುತ್ತದೆ ಮತ್ತು, ಇದರಿಂದಾಗಿ, ಈ ಹೂಡಿಕೆದಾರರು ಒಂದು ನಿರ್ದಿಷ್ಟ ಕಂಪನಿಯ ಆಡಳಿತದಲ್ಲಿ ತೀರಾ ಕಡಿಮೆ ಎನ್ನಬಹುದಾದ ಆಸಕ್ತಿಯನ್ನು ತೋರಿಸುತ್ತಾರೆ ಎಂಬ ಉದ್ದೇಶವನ್ನು ಈ ವಿನ್ಯಾಸವು ಆಧರಿಸಿರುತ್ತದೆ.

1990ರಿಂದಲೂ ಅಂತರ್ಜಾಲದ ಮೂಲಕ ನಡೆಸಲಾಗುತ್ತಿರುವ ವ್ಯವಹಾರ ನಿರ್ವಹಣೆಗಳ ಬಳಕೆಯಲ್ಲಿ ಗಣನೀಯ ಪ್ರಮಾಣದ ಹೆಚ್ಚಳ ಕಂಡುಬಂದಿರುವುದರಿಂದ, ವಿಶ್ವಾದ್ಯಂತದ ಏಕವ್ಯಕ್ತಿ ಹಾಗೂ ವೃತ್ತಿಪರ ಸ್ಟಾಕ್ ಹೂಡಿಕೆದಾರರಿಬ್ಬರೂ ಬಂಡವಾಳ ಮಾರುಕಟ್ಟೆಯಲ್ಲಿ ವಿಭಿನ್ನ ರೀತಿಯಲ್ಲಿ ಹೊರಹೊಮ್ಮಿದ್ದಾರೆ. ಅಂದರೆ, ಸಂಸ್ಥೆಗಳ ಪ್ರತ್ಯಕ್ಷ ಅಥವಾ ಪರೋಕ್ಷ ಒಡೆತನದಲ್ಲಿ ಮತ್ತು ಮಾರುಕಟ್ಟೆಗಳಲ್ಲಿ ಒಂದು ರೀತಿಯ ಸಶಕ್ತ, ಹೊಸ ರೀತಿಯ ಪ್ರಮುಖ ಬಲವಾಗಿ (ಅಲ್ಪಾವಧಿಗೆ) ರೂಪುಗೊಂಡಿದ್ದಾರೆ. ಪ್ರಾಸಂಗಿಕ ಭಾಗೀದಾರ ಎಂಬ ರೀತಿಯಲ್ಲಿ ಅವರ ಅಸ್ತಿತ್ವವಿರುತ್ತದೆ.

ಯಾವುದೇ ಒಂದು ಕಂಪನಿಯಲ್ಲಿ ಏಕವ್ಯಕ್ತಿ ಹೂಡಿಕೆದಾರರಿಂದ ಆಗುವ ಪ್ರತ್ಯೇಕ ಷೇರುಗಳ ಖರೀದಿಯು ಕ್ಷೀಣಿಸುತ್ತಾ ಬಂದಂತೆ, ಉತ್ಪನ್ನಗಳ ಮಾರಾಟವು (ಉದಾಹರಣೆಗೆ: ವಿನಿಮಯ ಕೇಂದ್ರದಿಂದ ಮಾರಾಟಗೊಂಡ ನಿಧಿಗಳು (ETFಗಳು), ಸ್ಟಾಕ್‌ ಮಾರುಕಟ್ಟೆ ಸೂಚ್ಯಾಂಕ ಆಯ್ಕೆಗಳು [೭], ಇತ್ಯಾದಿ) ಮೇಲಕ್ಕೇರಿರುವುದು ಕಂಡುಬರುತ್ತದೆ.

ಆದ್ದರಿಂದ ಬಹುತೇಕ ಹೂಡಿಕೆದಾರರ ಆಸಕ್ತಿಗಳು ಪ್ರತ್ಯೇಕ ಕಂಪನಿಗಳ ಭಾರೀ ಸಂಪತ್ತು ಅಥವಾ ಅದೃಷ್ಟದೊಂದಿಗೆ ತಳುಕುಹಾಕಿಕೊಂಡಿರುವುದು ಅಪರೂಪವಾಗಿರುವುದು ಹೆಚ್ಚಾಗಿ ಕಾಣುತ್ತಿದೆ.

ಆದರೆ, ವಿಶ್ವಾದ್ಯಂತದ ಮಾರುಕಟ್ಟೆಗಳಲ್ಲಿನ ಸ್ಟಾಕ್‌ಗಳ ಒಡೆತನವು ಬದಲಾಗುತ್ತಾ ಹೋಗುತ್ತದೆ. ಉದಾಹರಣೆಗೆ, ಜಪಾನೀ ಮಾರುಕಟ್ಟೆಯಲ್ಲಿನ ಬಹುಪಾಲು ಷೇರುಗಳು ಹಣಕಾಸು ಕಂಪನಿಗಳು ಮತ್ತು ಕೈಗಾರಿಕಾ ಸಂಸ್ಥೆಗಳ ವಶದಲ್ಲಿವೆ (ಜಪಾನಿನ ಕೀರೆಟ್ಸು ಸಂಸ್ಥೆಗಳು ಮತ್ತು ದಕ್ಷಿಣ ಕೊರಿಯಾದೊಳಗಿನ ಚೇಬಾಲ್ 'ಸಮೂಹಗಳ' ನಡುವೆ ಒಂದು ದೊಡ್ಡ ಹಾಗೂ ವಿವೇಚನಾಯುಕ್ತ ಪ್ರಮಾಣದ ಮಿಶ್ರ-ಹಿಡುವಳಿ Archived 2009-08-21 ವೇಬ್ಯಾಕ್ ಮೆಷಿನ್ ನಲ್ಲಿ. ಯಿದೆ). USA ಅಥವಾ UK ಮತ್ತು ಯುರೋಪ್‌ನಲ್ಲಿನ ಸ್ಟಾಕ್‌ಗಳಿಗೆ ಸಂಪೂರ್ಣ ಸ್ವಾಮ್ಯತೆಯಿದ್ದು, ಅದು ಬೃಹತ್ ಏಕವ್ಯಕ್ತಿ ಹೂಡಿಕೆದಾರರ ಬಳಿಯಿರುತ್ತದೆ.

ಸಾಂಸ್ಥಿಕ ಅಡಳಿತದ ಕೂಟಗಳು[ಬದಲಾಯಿಸಿ]

ಸಾಂಸ್ಥಿಕ ಆಡಳಿತದಲ್ಲಿ ತೊಡಗಿಸಿಕೊಂಡಿರುವ ಕೂಟಗಳಲ್ಲಿ ನಿಯಂತ್ರಕ ಘಟಕವು ಸೇರಿರುತ್ತದೆ (ಉದಾ:ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ನಿರ್ದೇಶಕರ ಮಂಡಳಿ, ಆಡಳಿತ ಮಂಡಳಿ,ಷೇರುದಾರರು ಮತ್ತು ಲೆಕ್ಕ ಪರಿಶೋಧಕರು).

ಇದರಲ್ಲಿ ಪಾಲ್ಗೊಳ್ಳುವ ಇತರ ಮಧ್ಯಸ್ಥಗಾರರಲ್ಲಿ ಸರಬರಾಜುದಾರರು, ನೌಕರರು, ಸಾಲ ನೀಡುವವರು, ಗ್ರಾಹಕರು ಮತ್ತು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುತ್ತಾರೆ.

ಸಂಸ್ಥೆಗಳ ಮೂಲಧನದ ಹಿತಾಸಕ್ತಿಯನ್ನು ಅತ್ಯುತ್ತಮವಾಗಿ ಕಾಪಾಡುವುದಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವ ಹಕ್ಕುಗಳನ್ನು ಷೇರುದಾರನು ಸಂಸ್ಥೆಗಳಲ್ಲಿನ ವ್ಯವಸ್ಥಾಪಕರಿಗೆ ನಿಯೋಜಿಸುತ್ತಾನೆ. ಮಾಲೀಕತ್ವವನ್ನು ನಿಯಂತ್ರಣದಿಂದ ಹೀಗೆ ಬೇರ್ಪಡಿಸುವುದರಿಂದ, ವ್ಯವಸ್ಥಾಪನಾ ನಿರ್ಣಯಗಳ ಮೇಲಿನ ಪರಿಣಾಮಕಾರೀ ನಿಯಂತ್ರಣವನ್ನು ಷೇರುದಾರರು ಕಳೆದುಕೊಂಡಂತಾಗುತ್ತದೆ. ಎರಡು ಕೂಟಗಳ ನಡುವಿನ ಈ ಪ್ರತ್ಯೇಕತೆಯಿಂದಾಗಿ ಸಾಂಸ್ಥಿಕ ಆಡಳಿತ ನಿಯಂತ್ರಣಗಳ ಒಂದು ವ್ಯವಸ್ಥೆಯು ಅನುಷ್ಠಾನಗೊಂಡು, ವ್ಯವಸ್ಥಾಪಕರ ಉತ್ತೇಜಕ ಸವಲತ್ತುಗಳನ್ನು ಷೇರುದಾರರ ಸವಲತ್ತುಗಳೊಂದಿಗೆ ಸರಿಹೊಂದಿಸುವಲ್ಲಿ ಇದು ಭಾಗಶಃ ನೆರವಾಗುತ್ತದೆ. ಹೂಡಿಕೆದಾರರ ಎಕ್ವಿಟಿ ಹಿಡುವಳಿಗಳು ಗಣನೀಯವಾಗಿ ಹೆಚ್ಚಳವಾಗುವುದರೊಂದಿಗೆ, ಒಡೆತನ ಮತ್ತು ನಿಯಂತ್ರಣ ಸಮಸ್ಯೆಗಳ ಪ್ರತ್ಯೇಕಿಸುವಿಕೆಯ ರದ್ದಿಯಾತಿಗೆ ಅಲ್ಲೊಂದು ಅವಕಾಶವಿರುತ್ತದೆ. ಏಕೆಂದರೆ ಮಾಲೀಕತ್ವವು ಅಷ್ಟೊಂದು ಶಿಥಿಲವಾಗಿರುವುದಿಲ್ಲ.

ಸಾಂಸ್ಥಿಕ ಅಡಳಿತದಲ್ಲಿ ನಿರ್ದೇಶಕರ ಒಂದು ಮಂಡಳಿಯು ಯಾವಾಗಲೂ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಂಘಟನೆಯ ಕಾರ್ಯಕೌಶಲವನ್ನು ಅನುಮೋದಿಸುವುದು, ಮಾರ್ಗದರ್ಶಿ ಕಾರ್ಯನೀತಿಯನ್ನು ಅಭಿವೃದ್ಧಿಪಡಿಸುವುದು, ಹಿರಿಯ ಕಾರ್ಯನಿರ್ವಾಹಕರನ್ನು ನೇಮಿಸುವುದು, ಮೇಲ್ವಿಚಾರಣೆ ನಡೆಸುವುದು ಹಾಗೂ ಸೇವೆಗೆ ಪ್ರತಿಫಲ ಅಥವಾ ಸಂಭಾವನೆಯನ್ನು ನೀಡುವುದು ಮತ್ತು ಸಂಘಟನೆಯ ಮಾಲೀಕರು ಹಾಗೂ ವಿಧಾಯಕ ಶಕ್ತಿಗಳಿಗೆ ಅದರ ಹೊಣೆಗಾರಿಕೆಯ ಕುರಿತು ಖಾತ್ರಿ ನೀಡುವುದು ಇವೆಲ್ಲವೂ ನಿರ್ದೇಶಕರ ಮಂಡಳಿಯ ಸದಸ್ಯರ ಜವಾಬ್ದಾರಿಯಾಗಿರುತ್ತದೆ.

USನಲ್ಲಿ ಕಂಪನಿ ಕಾರ್ಯದರ್ಶಿಯನ್ನು ಸಾಂಸ್ಥಿಕ ಕಾರ್ಯದರ್ಶಿ ಎಂದೂ ಕರೆಯಲಾಗುತ್ತದೆ. ಒಂದು ವೇಳೆ ಅವನು ಇನ್‌ಸ್ಟಿಟ್ಯೂಟ್‌ ಆಫ್ ಚಾರ್ಟರ್ಡ್‌ ಸೆಕ್ರೆಟರೀಸ್‌ ಅಂಡ್‌ ಅಡ್ಮಿನಿಸ್ಟ್ರೇಟರ್ಸ್‌ನಿಂದ (ICSA) (ಅಂದರೆ, ಸನ್ನದು ಕಾರ್ಯದರ್ಶಿಗಳು ಮತ್ತು ಆಡಳಿತಗಾರರ ಸಂಸ್ಥೆಯಿಂದ) ಮಾನ್ಯತೆಯನ್ನು ಪಡೆದಿದ್ದರೆ ಅಥವಾ ಉತ್ತೀರ್ಣನಾಗಿದ್ದರೆ, ಆಗ ಆತನನ್ನು ಸನ್ನದು ಕಾರ್ಯದರ್ಶಿ ಎಂದು ಕರೆಯಲಾಗುತ್ತದೆ. ಇಂತಹ ಕಾರ್ಯದರ್ಶಿಯು ಉನ್ನತ ಶ್ರೇಣಿಯ ವೃತ್ತಿಪ್ರವೀಣನಾಗಿದ್ದು, ಸಾಂಸ್ಥಿಕ ಆಡಳಿತ, ಪರಿಣಾಮಕಾರೀ ಕಾರ್ಯಾಚರಣೆಗಳು, ಅನುಸರಣೆ ಹಾಗೂ ಆಡಳಿತದ ಉನ್ನತ ಗುಣಮಟ್ಟವನ್ನು ಎತ್ತಿಹಿಡಿಯುವಂತೆ ಅವನಿಗೆ ತರಬೇತಿ ನೀಡಲಾಗಿರುತ್ತದೆ.

ಸಾಂಸ್ಥಿಕ ಆಡಳಿತಕ್ಕೆ ಸಂಬಂಧಿಸಿದ ಎಲ್ಲಾ ಕೂಟಗಳು ಪ್ರತ್ಯಕ್ಷ ಇಲ್ಲವೇ ಪರೋಕ್ಷವಾದ ಒಂದು ಹಿತಾಸಕ್ತಿಯನ್ನು ಹೊಂದಿದ್ದು, ಅದು ಸಂಘಟನೆಯ ಪರಿಣಾಮಕಾರಿ ನಿರ್ವಹಣೆಯಲ್ಲಿ ನೆರವಾಗುತ್ತದೆ. ಷೇರುದಾರರು ತಾವು ಹೂಡಿದ ಬಂಡವಾಳಕ್ಕೆ ಪ್ರತಿಫಲ ಅಥವಾ ಲಾಭಾಂಶವನ್ನು ಪಡೆದರೆ, ಕಂಪನಿಯ ನಿರ್ದೇಶಕರು, ಕೆಲಸಗಾರರು ಮತ್ತು ಆಡಳಿತ ಮಂಡಳಿಯ ಸದಸ್ಯರು ವೇತನಗಳು, ಪ್ರಯೋಜನಗಳು ಹಾಗೂ ಕೀರ್ತಿಯನ್ನು ಪಡೆಯುತ್ತಾರೆ. ಗ್ರಾಹಕರು ಸರಕುಗಳು ಮತ್ತು ಸೇವೆಗಳನ್ನು ಪಡೆಯುತ್ತಾರೆ; ಸರಬರಾಜುದಾರರು ತಮ್ಮ ಸರಕುಗಳು ಮತ್ತು ಸೇವೆಗಳಿಗಾಗಿ ಸೂಕ್ತ ಪರಿಹಾರವನ್ನು ಪಡೆಯುತ್ತಾರೆ. ಇದಕ್ಕೆ ಪ್ರತಿಯಾಗಿ ಈ ವ್ಯಕ್ತಿಗಳು ಸ್ವಾಭಾವಿಕ, ಮಾನವ ರೂಪದ, ಸಾಮಾಜಿಕ ಮತ್ತು ಇತರ ಸಂಪನ್ಮೂಲಗಳ ಸ್ವರೂಪದಲ್ಲಿ ಸೇವಾಮೌಲ್ಯವನ್ನು ಅಥವಾ ಉಪಯುಕ್ತತೆಯನ್ನು ಒದಗಿಸುತ್ತಾರೆ.

ಸಂಘಟನೆಯೊಂದರಲ್ಲಿ ಭಾಗೀದಾರನಾಗಬೇಕೆನ್ನುವ ವ್ಯಕ್ತಿಯೋರ್ವನ ನಿರ್ಧಾರವು ಒಂದು ಪ್ರಮುಖ ಅಂಶವಾಗಿ ಪರಿಗಣಿಸಲ್ಪಡುತ್ತದೆ. ಈ ಪಾಲ್ಗೊಳ್ಳುವಿಕೆಯು ಹಣಕಾಸು ಬಂಡವಾಳದ ರೂಪದಲ್ಲಿ ಮತ್ತು ನಂಬಿಕೆಯ ರೂಪದಲ್ಲಿರಬಹುದು. ಇದಕ್ಕೆ ಪ್ರತಿಯಾಗಿ ಆತ ಸಂಘಟನೆಯಿಂದ ತನಗೆ ಬರಬಹುದಾದ ಲಾಭದ ಸೂಕ್ತವಾದ ಪಾಲನ್ನು ಪಡೆಯಬಹುದಾಗಿರುತ್ತದೆ. ಒಂದು ವೇಳೆ ಕೆಲವೊಂದು ಕೂಟಗಳು ತಮಗೆ ಬರಬೇಕಾದುದಕ್ಕಿಂತ ಹೆಚ್ಚಿನ ಪ್ರತಿಫಲವನ್ನು ಪಡೆಯುತ್ತಿದ್ದಲ್ಲಿ, ಆಗ ಸದರಿ ಭಾಗೀದಾರರು ತಮ್ಮ ಭಾಗೀದಾರಿಕೆಯಿಂದ ಹಿಂದೆ ಸರಿದು ಸಂಘಟನೆಯ ಕುಸಿತಕ್ಕೆ ಕಾರಣವಾಗಲೂಬಹುದು.

ತತ್ವಗಳು[ಬದಲಾಯಿಸಿ]

ಉತ್ತಮ ಸಾಂಸ್ಥಿಕ ಆಡಳಿತದ ಮೂಲತತ್ವಗಳ ಪ್ರಮುಖ ಘಟಕಾಂಶಗಳಲ್ಲಿ, ಪ್ರಾಮಾಣಿಕತೆ, ವಿಶ್ವಾಸ ಹಾಗೂ ಸಮಗ್ರತೆ, ಮುಕ್ತತೆ, ಕಾರ್ಯವಿಧಾನದ ಅರಿವು, ಜವಾಬ್ದಾರಿ ಮತ್ತು ಹೊಣೆಗಾರಿಕೆ, ಪರಸ್ಪರ ಗೌರವ, ಮತ್ತು ಸಂಘಟನೆಯೆಡೆಗಿನ ಬದ್ಧತೆ ಇವೇ ಮೊದಲಾದವುಗಳು ಸೇರಿವೆ.

ಸಾಂಸ್ಥಿಕ ಭಾಗೀದಾರರ ಮೌಲ್ಯಗಳು ಅಥವಾ ಉಪಯುಕ್ತತೆಯನ್ನು ಸರಿಹೊಂದಿಸಿಕೊಂಡುಹೋಗುವ ಆಡಳಿತದ ಒಂದು ಮಾದರಿಯನ್ನು ಸಂಸ್ಥೆಯೊಂದರ ನಿರ್ದೇಶಕರು ಮತ್ತು ಆಡಳಿತ ಮಂಡಳಿಯ ಸದಸ್ಯರು ಹೇಗೆ ರೂಪಿಸುತ್ತಾರೆ ಮತ್ತು ಈ ಮಾದರಿಯ ಪ್ರಭಾವಕಾರಿತ್ವ ಅಥವಾ ಪರಿಣಾಮಶೀಲತೆಗಾಗಿ ಅದನ್ನು ಹೇಗೆ ಕಾಲಾನುಕಾಲಕ್ಕೆ ಮೌಲ್ಯಮಾಪನ ಮಾಡುತ್ತಾರೆ ಎಂಬುದು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.

ನಿರ್ದಿಷ್ಟವಾಗಿ ಹೇಳಬೇಕೆಂದರೆ, ಹಿರಿಯ ಕಾರ್ಯನಿರ್ವಾಹಕರು ಸ್ವತಃ ಪ್ರಾಮಾಣಿಕವಾಗಿ ಮತ್ತು ನೈತಿಕವಾಗಿ ನಡೆದುಕೊಳ್ಳಬೇಕು. ಅದರಲ್ಲೂ ವಿಶೇಷವಾಗಿ, ಹಣಕಾಸಿನ ವರದಿಗಳಲ್ಲಿನ ವಾಸ್ತವಿಕ ಅಥವಾ ಸ್ಪಷ್ಟವಾಗಿ ಗೋಚರಿಸುವ ಹಿತಾಸಕ್ತಿಗಳ ಸಂಘರ್ಷ, ಮತ್ತು ಬಹಿರಂಗಪಡಿಸುವಿಕೆಗೆ ಸಂಬಂಧಿಸಿದಂತೆ ಈ ಸ್ವಭಾವವನ್ನು ಅವರು ಹೊಂದಿರಬೇಕು.

ಸಾಮಾನ್ಯವಾಗಿ ಸಮ್ಮತಿಸಲಾಗಿರುವ ಸಾಂಸ್ಥಿಕ ಅಡಳಿತದ ಮೂಲತತ್ವಗಳಲ್ಲಿ ಇವುಗಳು ಸೇರಿವೆ:

  • ಷೇರುದಾರರ ಹಕ್ಕುಗಳು ಮತ್ತು ಅವರೊಂದಿಗಿನ ನಿಷ್ಪಕ್ಷಪಾತವಾದ ವರ್ತನೆ : ಷೇರುದಾರರ ಹಕ್ಕುಗಳನ್ನು ಗೌರವಿಸುವುದರ ಜೊತೆಗೆ, ಅವುಗಳನ್ನು ಪರಿಪಾಲಿಸುವಲ್ಲಿ ಅಥವಾ ಚಲಾವಣೆಗೆ ತರುವಲ್ಲಿ ಸಂಘಟನೆಗಳು ಷೇರುದಾರರಿಗೆ ನೆರವಾಗಬೇಕು. ಷೇರುದಾರರಿಗೆ ಅರ್ಥವಾಗುವ ರೀತಿಯಲ್ಲಿರುವ ಮತ್ತು ಸುಲಭವಾಗಿ ಲಭ್ಯವಿರುವ ಪರಿಣಾಮಕಾರಿಯಾದ ಮಾಹಿತಿಯನ್ನು ನೀಡುವ ಮೂಲಕ ಸಂಘಟನೆಗಳು ಷೇರುದಾರರಿಗೆ ತಮ್ಮ ಹಕ್ಕುಗಳನ್ನು ಚಲಾಯಿಸುವಲ್ಲಿ ನೆರವಾಗಬಹುದು. ಸಂಘಟನೆಯ ಸರ್ವಸದಸ್ಯರ ಸಭೆಯಲ್ಲಿ ಪಾಲ್ಗೊಳ್ಳುವಂತೆ ಷೇರುದಾರರನ್ನು ಪ್ರೋತ್ಸಾಹಿಸುವುದೂ ಸಹ ಇದರಲ್ಲಿ ಸೇರಿದೆ.
  • ಇತರ ಮಧ್ಯಸ್ಥಗಾರರ ಹಿತಾಸಕ್ತಿಗಳು : ಎಲ್ಲಾ ಕ್ರಮಬದ್ಧ ಮಧ್ಯಸ್ಥಗಾರರಿಗೆ ಸಂಬಂಧಿಸಿದಂತೆ, ಶಾಸನಬದ್ಧವಾಗಿರುವ ಹಾಗೂ ಇತರ ಕಟ್ಟುಪಾಡುಗಳನ್ನು ತಾವು ಹೊಂದಿರುವುದರ ಕುರಿತು ಸಂಘಟನೆಗಳು ಗುರುತಿಸಿಕೊಳ್ಳಬೇಕು.
  • ಮಂಡಳಿಯ ಪಾತ್ರ ಮತ್ತು ಜವಾಬ್ದಾರಿಗಳು : ಅನೇಕ ವ್ಯಾವಹಾರಿಕ ಚರ್ಚಾವಿಷಯಗಳ ಕುರಿತು ಕಾರ್ಯನಿರ್ವಹಿಸಲು ಅನುವಾಗುವಂಥ ಕೌಶಲಗಳು ಮತ್ತು ವಿವೇಚನೆಗಳ ಒಂದು ಸರಣಿಯ ಅಗತ್ಯ ಮಂಡಳಿಗಿರುತ್ತದೆ. ಆಡಳಿತ ಮಂಡಳಿಯ ಕಾರ್ಯವಿಧಾನವನ್ನು ಅವಲೋಕಿಸುವ ಮತ್ತು ಅದಕ್ಕೆ ಸವಾಲೆಸೆಯುವ ಸಾಮರ್ಥ್ಯವನ್ನೂ ಅದು ಹೊಂದಿರಬೇಕಾಗುತ್ತದೆ.

ಇದು ಸೂಕ್ತ ಗಾತ್ರದಲ್ಲಿರಬೇಕಾಗುತ್ತದೆ ಮತ್ತು ತನ್ನ ಜವಾಬ್ದಾರಿಗಳು ಹಾಗೂ ಕರ್ತವ್ಯಗಳನ್ನು ಈಡೇರಿಸುವ ದೃಷ್ಟಿಯಿಂದ ಸೂಕ್ತ ಮಟ್ಟದ ಬದ್ಧತೆಯನ್ನೂ ಹೊಂದಿರಬೇಕಾಗುತ್ತದೆ. ಕಾರ್ಯಕಾರಿ ಮತ್ತು ಅಕಾರ್ಯಕಾರಿ ನಿರ್ದೇಶಕರ ಸೂಕ್ತ ಸಂಯೋಜನೆಗೆ ಸಂಬಂಧಿಸಿ ಒಂದಷ್ಟು ವಿಷಯಗಳು ಚರ್ಚೆಗೆ ಗ್ರಾಸವಾಗಿವೆ.

  • ಸಮಗ್ರತೆ ಮತ್ತು ನೈತಿಕ ನಡತೆ : ನೈತಿಕವಾದ ಮತ್ತು ಜವಾಬ್ದಾರಿಯುತವಾದ ನಿರ್ಧಾರಗಳನ್ನು ಮಾಡುವುದು ಕೇವಲ ಸಾರ್ವಜನಿಕ ಸಂಪರ್ಕಗಳಿಗಾಗಿ ಮಾತ್ರವೇ ಮುಖ್ಯವಲ್ಲ; ಅಪಾಯ ನಿರ್ವಹಣೆ ಮತ್ತು ಕಾನೂನುದಾವೆಗಳನ್ನು ತಪ್ಪಿಸುವಲ್ಲಿಯೂ ಸಹ ಇದೊಂದು ಅತ್ಯಗತ್ಯ ಅಂಶವಾಗಿರುತ್ತದೆ. ತಮ್ಮ ನಿರ್ದೇಶಕರು ಹಾಗೂ ಕಾರ್ಯನಿರ್ವಾಹಕರಿಗಾಗಿ ಸಂಘಟನೆಗಳು ಒಂದು ನೀತಿಸಂಹಿತೆಯನ್ನು ರೂಪಿಸಬೇಕಾಗುತ್ತದೆ. ಇದು ನೈತಿಕ ಹಾಗೂ ಜವಾಬ್ದಾರಿಯುತ ನಿರ್ಧಾರಗಳನ್ನು ತಳೆಯುವಲ್ಲಿ ನೆರವಾಗುತ್ತದೆ. ವ್ಯಕ್ತಿಗಳ ಸಮಗ್ರತೆ ಮತ್ತು ನೀತಿಸೂತ್ರದ ಮೇಲೆಯೇ ಕಂಪನಿಯು ಅವಲಂಬಿಸಿದ್ದರೆ ಅಥವಾ ಅವನ್ನೇ ನೆಚ್ಚಿಕೊಂಡಿದ್ದರೆ, ಅಂತಿಮವಾಗಿ ಅದು ಸೋಲಿನಲ್ಲೇ ಕೊನೆಗೊಳ್ಳುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಮುಖ್ಯ.

ಇದರಿಂದಾಗಿಯೇ, ಅನೇಕ ಸಂಘಟನೆಗಳು ಹೊಂದಾಣಿಕೆ ಮತ್ತು ನೀತಿಸೂತ್ರದ ಕಾರ್ಯಕ್ರಮಗಳನ್ನು ರೂಪಿಸುತ್ತವೆ. ಇದರಿಂದಾಗಿ ನೈತಿಕ ಹಾಗೂ ಶಾಸನಬದ್ಧ ಕಟ್ಟುಪಾಡುಗಳನ್ನು ಸಂಸ್ಥೆಯು ಮೀರುವ ಅಪಾಯವು ಕಡಿಮೆಯಾದಂತಾಗುತ್ತದೆ.

  • ಬಹಿರಂಗಪಡಿಸುವಿಕೆ ಮತ್ತು ಪಾರದರ್ಶಕತೆ : ಷೇರುದಾರರಿಗೆ ಒಂದು ಮಟ್ಟದ ಹೊಣೆಗಾರಿಕೆಯನ್ನು ನೀಡುವ ದೃಷ್ಟಿಯಿಂದ ಮಂಡಳಿ ಮತ್ತು ಆಡಳಿತ ಮಂಡಳಿಯ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಸಂಘಟನೆಗಳು ಸ್ಪಷ್ಟೀಕರಿಸಬೇಕು ಹಾಗೂ ಸಾರ್ವಜನಿಕರಿಗೆ ತಿಳಿಯುವಂತೆ ಮಾಡಬೇಕು.

ಕಂಪನಿಯ ಹಣಕಾಸಿಗೆ ಸಂಬಂಧಿಸಿದ ವರದಿಗಾರಿಕೆಯ ಅಥವಾ ನಿರೂಪಣೆಯ ಸಮಗ್ರತೆಯನ್ನು ಸ್ವತಂತ್ರವಾಗಿ ಪರಿಶೀಲಿಸುವ ಹಾಗೂ ರಕ್ಷಿಸುವ ಕಾರ್ಯವಿಧಾನಗಳನ್ನೂ ಸಹ ಅವು ಅನುಷ್ಠಾನಕ್ಕೆ ತರಬೇಕಾಗುತ್ತದೆ.

ಸಂಘಟನೆಗೆ ಸಂಬಂಧಿಸಿದ ಸಾರಭೂತವಾದ ವಿಷಯಗಳ ಬಹಿರಂಗಪಡಿಸುವಿಕೆಯು ಸಮಯೋಚಿತವಾಗಿರಬೇಕು ಮತ್ತು ಸಮತೋಲಿತವಾಗಿರಬೇಕು. ಇದರಿಂದಾಗಿ ನಿಚ್ಚಳವಾದ, ವಾಸ್ತವಿಕ ಮಾಹಿತಿಯನ್ನು ಎಲ್ಲಾ ಹೂಡಿಕೆದಾರರೂ ಪಡೆಯುವುದು ಕಾರ್ಯಸಾಧ್ಯವಾಗುತ್ತದೆ.

ಸಾಂಸ್ಥಿಕ ಅಡಳಿತದ ಮೂಲತತ್ವಗಳನ್ನು ಒಳಗೊಂಡ ಚರ್ಚಾವಿಷಯಗಳಲ್ಲಿ ಇವು ಸೇರಿವೆ:

  • ಆಂತರಿಕ ನಿಯಂತ್ರಣಗಳು ಮತ್ತು ಆಂತರಿಕ ಲೆಕ್ಕ ಪರಿಶೋಧಕರು
  • ಘಟಕದ ಬಾಹ್ಯ ಲೆಕ್ಕ ಪರಿಶೋಧಕರ ಸ್ವಾತಂತ್ರ್ಯ ಮತ್ತು ಅವರ ಲೆಕ್ಕ ಪರಿಶೋಧನೆಗಳ ಗುಣಮಟ್ಟ
  • ಅಪಾಯದ ಮೇಲುಸ್ತುವಾರಿ ಮತ್ತು ನಿರ್ವಹಣೆ
  • ಘಟಕದ ಆಯವ್ಯಯ ಪಟ್ಟಿಗಳ ಸಿದ್ಧತೆಯ ಮೇಲ್ವಿಚಾರಣೆ
  • ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಇತರ ಹಿರಿಯ ಕಾರ್ಯನಿರ್ವಾಹಕರಿಗಾಗಿರುವ ಪರಿಹಾರ ವ್ಯವಸ್ಥೆಗಳ ಅವಲೋಕನ
  • ನಿರ್ದೇಶಕರು ತಮ್ಮ ಕರ್ತವ್ಯವನ್ನು ನಿರ್ವಹಿಸಿಕೊಂಡು ಹೋಗುವಲ್ಲಿ ಅವರಿಗೆ ಒದಗಿಸಲಾದ ಸಂಪನ್ಮೂಲಗಳು
  • ಮಂಡಳಿಯಲ್ಲಿನ ಸ್ಥಾನಗಳಿಗೆ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡುವ ವಿಧಾನ
  • ಡಿವಿಡೆಂಡ್‌ ಕಾರ್ಯನೀತಿ

ಅದೇನೇ ಇದ್ದರೂ, ವಿವಿಧ ಕ್ಷೇತ್ರಗಳಿಂದ ವ್ಯಕ್ತವಾಗಿರುವ ದುರ್ಬಲ ಪ್ರಯತ್ನಗಳ ನಡುವೆಯೂ "ಸಾಂಸ್ಥಿಕ ಅಡಳಿತ"ವು ಒಂದು ಅನಿಶ್ಚಿತವಾದ ಮತ್ತು ಅನೇಕಬಾರಿ ತಪ್ಪಾಗಿ ಅರ್ಥೈಸಲ್ಪಟ್ಟ ಪದಗುಚ್ಛವಾಗಿದೆ.

ಕೆಲವು ಕಾಲದವರೆಗೆ ಕೇವಲ ಸಾಂಸ್ಥಿಕ ವ್ಯವಸ್ಥಾಪನೆಗೆ ಮಾತ್ರವೇ ಇದನ್ನು ಸೀಮಿತಗೊಳಿಸಲಾಗಿತ್ತು. ಆದರೆ ಅದು ಸರಿಯಾದ ಗ್ರಹಿಕೆಯಲ್ಲ. ಇದಕ್ಕೆ ವಿಶಾಲವಾದ ವ್ಯಾಪ್ತಿಯಿದೆ. ಆದ್ದರಿಂದ, ಕೆಲವೊಂದು ಸ್ಫುಟವಾದ, ಬರೆದಿಡಲಾದ ಉದ್ದೇಶಗಳನ್ನು ಈಡೇರಿಸುವುದಕ್ಕಾಗಿ ಒಂದು ಕ್ರಮಬದ್ಧ, ಸಮರ್ಥ ಹಾಗೂ ಪಾರದರ್ಶಕವಾದ ಆಡಳಿತ ಹಾಗೂ ಹೋರಾಟವನ್ನು ಇದು ಒಳಗೊಳ್ಳಬೇಕಾಗುತ್ತದೆ. ಸಾಂಸ್ಥಿಕ ಅಡಳಿತವು ಕಾನೂನನ್ನೂ ಮೀರಿ ಚೆನ್ನಾಗಿ ವ್ಯಾಪಿಸಬೇಕು. ಆಯವ್ಯಯದ ಮತ್ತು ನಿರ್ವಹಣಾ ಕೌಶಲ್ಯಗಳ ಬಹಿರಂಗಪಡಿಸುವಿಕೆಯ ಪ್ರಮಾಣ, ಗುಣಮಟ್ಟ ಮತ್ತು ಆವರ್ತನ, ನಿರ್ದೇಶಕರ ಮಂಡಳಿಯು(BOD) ತನ್ನ ಆಡಳಿತ ಮಂಡಳಿಯ ಸದಸ್ಯ ರ ಜವಾಬ್ದಾರಿಗಳನ್ನು (ಹೆಚ್ಚಿನ ಸಂದರ್ಭದಲ್ಲಿ ಒಂದು ನೈತಿಕ ಬದ್ಧತೆಯಾಗಿ) ಚಲಾಯಿಸುವ ಪ್ರಮಾಣ ಮತ್ತು ವ್ಯಾಪ್ತಿ, ಮತ್ತು ಒಂದು ಪಾರದರ್ಶಕ ಸಂಘಟನೆಯನ್ನು ನಡೆಸುವಲ್ಲಿನ ಬದ್ಧತೆ- ಈ ಎಲ್ಲಾ ಅಂಶಗಳೂ ನಿರಂತರವಾಗಿ ವಿಕಸನಗೊಳ್ಳುತ್ತಲೇ ಇರಬೇಕು. ಏಕೆಂದರೆ, ಸಾಂಸ್ಥಿಕ ವಲಯವೊಂದರೊಳಗೇ ಹೆಚ್ಚು ಪ್ರಗತಿಶೀಲ/ಜವಾಬ್ದಾರಿಯುತವಾಗಿರುವ ಘಟಕಗಳು ಅಥವಾ ಭಾಗಗಳಿಂದ ಅನೇಕ ಅಂಶಗಳು ಹಾಗೂ ಪಾತ್ರಗಳು ಪರಸ್ಪರ ನಿರ್ವಹಿಸಲ್ಪಡುತ್ತಿರುತ್ತವೆ. ಸಂಸ್ಥೆಯೊಂದು ಆಚರಿಸಬೇಕಾಗಿ ಬರುವ ಮತ್ತು ಪ್ರತಿ ಸಂಸ್ಥೆಯ ಆಡಳಿತ ಮಂಡಳಿಯಿಂದ ಬರೆಯಲ್ಪಟ್ಟ ಉತ್ತಮ ಅಭ್ಯಾಸಗಳ ಒಂದು ನೀತಿಸಂಹಿತೆಯನ್ನು ರೂಪಿಸುವುದಕ್ಕೆ ಕುರಿತಾದ ಬಲವಾದ ಬೇಡಿಕೆಯೊಂದು ಭಾರತದಲ್ಲಿ ಹೊರಹೊಮ್ಮುತ್ತಿದೆ.[ಸೂಕ್ತ ಉಲ್ಲೇಖನ ಬೇಕು]

ಕಾರ್ಯವಿಧಾನಗಳು ಮತ್ತು ನಿಯಂತ್ರಣಗಳು[ಬದಲಾಯಿಸಿ]

ನೈತಿಕ ಅಪಾಯ ಮತ್ತು ವ್ಯತಿರಿಕ್ತ ಆಯ್ಕೆಯಿಂದ ಉದ್ಭವಿಸಿದ ಅಸಮರ್ಥತೆಯನ್ನು ಕಡಿಮೆಮಾಡಲು ಸಾಂಸ್ಥಿಕ ಆಡಳಿತದ ಕಾರ್ಯವಿಧಾನಗಳು ಹಾಗೂ ನಿಯಂತ್ರಣಗಳನ್ನು ವಿನ್ಯಾಸಗೊಳಿಸಲಾಗಿದೆ.

ಉದಾಹರಣೆಗೆ, ವ್ಯವಸ್ಥಾಪಕರ ನಡವಳಿಕೆಯ ಮೇಲ್ವಿಚಾರಣೆ ನಡೆಸಲು ನಿಯೋಜಿತನಾದ ಓರ್ವ ಸ್ವತಂತ್ರನಾದ ಮೂರನೇ ವ್ಯಕ್ತಿಯು (ಬಾಹ್ಯ ಲೆಕ್ಕ ಪರಿಶೋಧಕ) ಹೂಡಿಕೆದಾರರಿಗೆ ಆಡಳಿತಮಂಡಳಿಯಿಂದ ಒದಗಿಸಲ್ಪಟ್ಟ ಮಾಹಿತಿಯ ನಿಖರತೆಯನ್ನು ಪ್ರಮಾಣೀಕರಿಸುತ್ತಾನೆ. ಪ್ರೇರಣೆ ಮತ್ತು ಸಾಮರ್ಥ್ಯಗಳೆರಡನ್ನೂ ಒಂದು ಮಾದರಿ ನಿಯಂತ್ರಣಾ ವ್ಯವಸ್ಥೆಯು ತನ್ನ ಹತೋಟಿಯಲ್ಲಿರಿಸಿಕೊಳ್ಳಬೇಕಾಗುತ್ತದೆ.

ಆಂತರಿಕ ಸಾಂಸ್ಥಿಕ ಅಡಳಿತ ನಿಯಂತ್ರಣಗಳು[ಬದಲಾಯಿಸಿ]

ಆಂತರಿಕ ಸಾಂಸ್ಥಿಕ ಅಡಳಿತ ನಿಯಂತ್ರಣಗಳು ಕಾರ್ಯಚಟುವಟಿಕೆಗಳ ಮೇಲ್ವಿಚಾರಣೆಯನ್ನು ನಡೆಸುವುದರ ಜೊತೆಗೆ, ಸಂಘಟನೆಯ ಗುರಿಗಳನ್ನು ಸಾಧಿಸುವ ದೃಷ್ಟಿಯಿಂದ ದೋಷಪರಿಹಾರಕ ಕ್ರಮಗಳನ್ನು ಕೈಗೊಳ್ಳುತ್ತವೆ. ಇದರ ಉದಾಹರಣೆಗಳಲ್ಲಿ ಈ ಕೆಳಗಿನವು ಸೇರಿವೆ:

  • ನಿರ್ದೇಶಕರ ಮಂಡಳಿಯಿಂದ ನಡೆಯುವ ಮೇಲ್ವಿಚಾರಣೆ : ಉನ್ನತ ವ್ಯವಸ್ಥಾಪನಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ, ವಜಾ ಮಾಡುವ ಮತ್ತು ಪ್ರತಿಫಲ ನೀಡುವ ಕಾನೂನುಬದ್ಧ ಅಧಿಕಾರವನ್ನು ಹೊಂದಿರುವ ನಿರ್ದೇಶಕರ ಮಂಡಳಿಯು ಹೂಡಿಕೆಯಾದ ಬಂಡವಾಳವನ್ನು ರಕ್ಷಿಸುತ್ತದೆ.

ಮಂಡಳಿಯ ಸಭೆಗಳು ಆಗಿಂದಾಗ್ಗೆ ನಡೆಯುವುದರಿಂದ ಸಂಭಾವ್ಯ ಸಮಸ್ಯೆಗಳನ್ನು ಗುರುತಿಸಲು, ಚರ್ಚಿಸಲು ಮತ್ತು ತಪ್ಪಿಸಲು ಸಾಧ್ಯವಾಗುತ್ತದೆ. ಅಕಾರ್ಯಕಾರಿ ನಿರ್ದೇಶಕರು ಹೆಚ್ಚು ಸ್ವತಂತ್ರರಾಗಿರುತ್ತಾರೆ ಎಂದು ಭಾವಿಸಲಾಗುತ್ತದೆಯಾದರೂ, ಹೆಚ್ಚು ಪರಿಣಾಮಕಾರಿಯಾದ ಸಾಂಸ್ಥಿಕ ಆಡಳಿತವನ್ನು ನೀಡುವಲ್ಲಿ ಅವರು ಎಲ್ಲ ಸಮಯದಲ್ಲೂ ಯಶಸ್ವಿಯಾಗದಿರಬಹುದು ಹಾಗೂ ಕಾರ್ಯದಕ್ಷತೆಯನ್ನು ಹೆಚ್ಚಿಸಲು ಅಸಮರ್ಥರಾಗಬಹುದು.[೫] ವಿವಿಧ ಸಂಸ್ಥೆಗಳಿಗೆಂದೇ ಪ್ರಶಸ್ತವಾಗಿರುವ ವಿವಿಧ ಸ್ವರೂಪದ ಮಂಡಳಿಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ, ಸಂಸ್ಥೆಯ ಕಾರ್ಯನಿರ್ವಾಹಕರ ಮೇಲ್ವಿಚಾರಣೆ ನಡೆಸುವ ಮಂಡಳಿಯ ಸಾಮರ್ಥ್ಯವು ಮಾಹಿತಿಯನ್ನು ಪಡೆಯುವಲ್ಲಿನ ಅದರ ಮಾರ್ಗದ ಒಂದು ಕಾರ್ಯವಾಗಿದೆ. ನಿರ್ಧಾರ ತಳೆಯುವ ಪ್ರಕ್ರಿಯೆಯ ಅತ್ಯುನ್ನತ ಜ್ಞಾನವನ್ನು ಕಾರ್ಯನಿರ್ವಾಹಕ ನಿರ್ದೇಶಕರು ಹೊಂದಿರುತ್ತಾರೆ. ಆದ್ದರಿಂದ ಸಂಸ್ಥೆಯ ಆರ್ಥಿಕ ಸಾಧನೆಯ ಮುನ್ಸೂಚಕ ಫಲಿತಾಂಶಗಳಿಗೆ ಕಾರಣವಾದ ಉನ್ನತ ಆಡಳಿತ ಮಂಡಳಿಯು ತಳೆದ ನಿರ್ಧಾರಗಳ ಗುಣಮಟ್ಟದ ಆಧಾರದ ಮೇಲೆ ಅದನ್ನು ಕಾರ್ಯನಿರ್ವಾಹಕ ನಿರ್ದೇಶಕರು ಮೌಲ್ಯಮಾಪನ ಮಾಡುತ್ತಾರೆ.

ಆದ್ದರಿಂದ, ಹಣಕಾಸಿನ ವಿಷಯಗಳಿಂದಲೂ ಆಚೆಗೆ ಕಾರ್ಯನಿರ್ವಾಹಕ ನಿದೇಶಕರು ಗಮನಹರಿಸುತ್ತಾರೆ ಎಂದು ಈ ಮೂಲಕ ವಾದಿಸಬಹುದು.

  • ಆಂತರಿಕ ನಿಯಂತ್ರಣ ಕಾರ್ಯವಿಧಾನಗಳು ಮತ್ತು ಆಂತರಿಕ ಲೆಕ್ಕ ಪರಿಶೋಧಕರು : ಆಂತರಿಕ ನಿಯಂತ್ರಣ ಕಾರ್ಯವಿಧಾನಗಳು ಘಟಕವೊಂದರ ನಿರ್ದೇಶಕರ ಮಂಡಳಿ, ಲೆಕ್ಕ ಪರಿಶೋಧನಾ ಸಮಿತಿ, ಆಡಳಿತ ಮಂಡಳಿ, ಮತ್ತು ಇತರ ಸಿಬ್ಬಂದಿಯಿಂದ ಅನುಷ್ಠಾನಗೊಂಡ ಕಾರ್ಯನೀತಿಗಳಾಗಿವೆ. ವಿಶ್ವಾಸಾರ್ಹ ಆಯವ್ಯಯ ವರದಿಗಾರಿಕೆ, ಕಾರ್ಯಾಚರಣಾ ಸಾಮರ್ಥ್ಯ, ಮತ್ತು ಕಾನೂನುಗಳು ಹಾಗೂ ಕಟ್ಟುಪಾಡುಗಳೊಂದಿಗಿನ ಹೊಂದಾಣಿಕೆಗಳಿಗೆ ಸಂಬಂಧಪಟ್ಟ ಘಟಕದ ಗುರಿಗಳನ್ನು ಸಾಧಿಸುವಲ್ಲಿನ ಘಟಕದ ಸಮಂಜಸವಾದ ಭರವಸೆಯನ್ನು ಒದಗಿಸಲು ಈ ಕಾರ್ಯನೀತಿಗಳನ್ನು ಅನುಷ್ಠಾನಗೊಳಿಸಲಾಗುತ್ತದೆ.

ಆಂತರಿಕ ಲೆಕ್ಕ ಪರಿಶೋಧಕರು ಸಂಘಟನೆಯೊಂದರೊಳಗಿನ ಸಿಬ್ಬಂದಿಯಾಗಿದ್ದು, ಘಟಕದ ಆಂತರಿಕ ನಿಯಂತ್ರಣ ಕಾರ್ಯವಿಧಾನಗಳು ಮತ್ತು ಅವುಗಳ ಆಯವ್ಯಯ ವರದಿಗಾರಿಕೆಯ ವಿನ್ಯಾಸ ಮತ್ತು ಅನುಷ್ಠಾನವನ್ನು ಅವರು ಪರೀಕ್ಷಿಸುತ್ತಾರೆ.

  • ಅಧಿಕಾರದ ಸಮತೋಲನ : ಅಧಿಕಾರದ ಅತಿಸರಳ ಸಮತೋಲನವೆಂಬುದು ಅತಿ ಸಾಮಾನ್ಯವಾಗಿದ್ದು, ಅಧ್ಯಕ್ಷನು ಖಜಾಂಚಿಗಿಂತ ವಿಭಿನ್ನ ವ್ಯಕ್ತಿಯಾಗಿರುವುದು ಇಲ್ಲಿನ ಅಗತ್ಯವಾಗಿರುತ್ತದೆ.

ಪರಸ್ಪರರ ಕಾರ್ಯಚಟುವಟಿಕೆಗಳನ್ನು ತಪಾಸಿಸಿ, ಸಮತೋಲಿಸುವ ಪ್ರತ್ಯೇಕ ವಿಭಾಗಗಳನ್ನು ಹೊಂದಿರುವ ಕಂಪನಿಗಳಲ್ಲಿ ಅಧಿಕಾರದ ಪ್ರತ್ಯೇಕತೆಯ ಈ ಅನ್ವಯಿಕವು ಮತ್ತಷ್ಟು ಅಭಿವೃದ್ಧಿಗೊಂಡಿದೆ. ಕಂಪನಿಯಾದ್ಯಂತ ಆಡಳಿತಾತ್ಮಕ ಬದಲಾವಣೆಗಳನ್ನು ತರುವಂತೆ ಒಂದು ಗುಂಪು ಪ್ರಸ್ತಾಪಿಸಬಹುದು, ಮತ್ತೊಂದು ಗುಂಪು ಅವಲೋಕನವನ್ನು ಮಾಡಿ ಬದಲಾವಣೆಗಳಿಗೆ ತನ್ನ ನಿರಾಕರಣಾಧಿಕಾರವನ್ನು ಚಲಾಯಿಸಬಹುದು, ಮತ್ತು ಮೂರೂ ತಂಡಗಳಿಂದ ಆಚೆಯಿರುವ ಜನರ (ಗ್ರಾಹಕರು, ಷೇರುದಾರರು, ನೌಕರರು) ಹಿತಾಸಕ್ತಿಗಳು ಈಡೇರಿವೆಯೇ ಎಂಬುದನ್ನು ಮೂರನೆಯ ಗುಂಪೊಂದು ತಪಾಸಿಸಬಹುದು.


  • ಸಂಭಾವನೆ : ವೇತನದ ಒಂದು ಭಾಗವನ್ನು ವೈಯಕ್ತಿಕ ಕಾರ್ಯದಕ್ಷತೆ ಅಥವಾ ಸಾಧನೆಯೊಂದಿಗೆ ಸಂಬಂಧ ಕಲ್ಪಿಸಲು ಕಾರ್ಯದಕ್ಷತೆ ಆಧರಿತ ಸಂಭಾವನೆಯು ವಿನ್ಯಾಸಗೊಂಡಿದೆ.

ಇದು ನಗದಿನ ರೂಪದಲ್ಲಿರಬಹುದು ಅಥವಾ ಷೇರುಗಳು ಮತ್ತು ಷೇರು ಆಯ್ಕೆಗಳು, ವಿಶ್ರಾಂತಿ ವೇತನ (ಸೂಪರ್ ಆನ್ಯುಯೇಷನ್) ಅಥವಾ ಇತರ ಪ್ರಯೋಜನಗಳಂತಹ ನಗದು ಸ್ವರೂಪದ್ದಲ್ಲದ ಪಾವತಿಗಳ ರೂಪದಲ್ಲಿರಬಹುದು.

ಆದರೂ, ತಪ್ಪುಗಳನ್ನು ಅಥವಾ ಅವಕಾಶವಾದಿ ನಡವಳಿಕೆಯನ್ನು ತಡೆಯುವ ಯಾವುದೇ ಕಾರ್ಯವಿಧಾನ ಅಥವಾ ಕೌಶಲವನ್ನು ಇಂಥಾ ಪ್ರೋತ್ಸಾಹಕ ಯೋಜನೆಗಳು ಒದಗಿಸುವುದಿಲ್ಲ ಮತ್ತು ಸಮೀಪದೃಷ್ಟಿಯ ನಡವಳಿಕೆಯನ್ನು ಇವು ಹೊರತೆಗೆಯಬಲ್ಲವಾಗಿರುತ್ತವೆ. ಹೀಗಾಗಿ ಇಂಥಾ ಯೋಜನೆಗಳು ಪ್ರತಿಕ್ರಿಯಾತ್ಮಕವಾಗಿವೆ.

ಬಾಹ್ಯ ಸಾಂಸ್ಥಿಕ ಅಡಳಿತ ನಿಯಂತ್ರಣಗಳು[ಬದಲಾಯಿಸಿ]

ಬಾಹ್ಯ ಸಾಂಸ್ಥಿಕ ಅಡಳಿತ ನಿಯಂತ್ರಣಗಳು ಸಂಘಟನೆಯ ಮೇಲೆ ಬಾಹ್ಯ ಮಧ್ಯಸ್ಥಗಾರರು ಚಲಾಯಿಸುವ ನಿಯಂತ್ರಣಗಳನ್ನು ಪೂರ್ಣಗೊಳಿಸುತ್ತವೆ ಅಥವಾ ಸುತ್ತುವರಿಯುತ್ತವೆ. ಉದಾಹರಣೆಗಳಲ್ಲಿ ಈ ಕೆಳಗಿನವು ಸೇರಿವೆ:

  • ಸ್ಪರ್ಧೆ
  • ಸಾಲದ ಒಪ್ಪಂದಗಳು
  • ಕಾರ್ಯದಕ್ಷತೆಯ ಮಾಹಿತಿಗೆ ಬೇಡಿಕೆ ಮತ್ತು ಅದರ ಮೌಲ್ಯಮಾಪನ (ವಿಶೇಷವಾಗಿ ಆಯವ್ಯಯ ಪಟ್ಟಿಗಳು)
  • ಸರ್ಕಾರದ ಕಟ್ಟುಪಾಡುಗಳು
  • ವ್ಯವಸ್ಥಾಪನೆಗೆ ಸಂಬಂಧಿಸಿದ ಕಾರ್ಮಿಕ ಮಾರುಕಟ್ಟೆ
  • ಮಾಧ್ಯಮದ ಒತ್ತಡ
  • ಸ್ವಾಧೀನಗಳು

ಸಾಂಸ್ಥಿಕ ಅಡಳಿತದ ಸಮಗ್ರ ಸಮಸ್ಯೆಗಳು[ಬದಲಾಯಿಸಿ]

  • ಮಾಹಿತಿಗಾಗಿ ಬೇಡಿಕೆ: ಉತ್ತಮ ಮಾಹಿತಿಯನ್ನು ಬಳಸುತ್ತಿರುವ ಷೇರುದಾರರಿಗಿರುವ ಒಂದು ತಡೆಗೋಡೆಯೆಂದರೆ ಅದರ ಸಂಸ್ಕರಣಾ ವೆಚ್ಚ. ಅದರಲ್ಲೂ ಒಬ್ಬ ಸಣ್ಣ ಷೇರುದಾರನಿಗೆ ಸಂಬಂಧಿಸಿದಂತೆ ಇದರ ಪ್ರಮಾಣ ಹೆಚ್ಚು.

ಪರಿಣಾಮಕಾರೀ ಮಾರುಕಟ್ಟೆಯ ಕಲ್ಪಿತ ಸಿದ್ಧಾಂತವೆಂಬುದು (ಹಣಕಾಸು ವಲಯದಲ್ಲಿ ಹಣಕಾಸು ಮಾರುಕಟ್ಟೆಗಳು ಪರಿಣಾಮಕಾರಿಯಾಗಿರುತ್ತವೆ ಎಂದು ಪರಿಣಾಮಕಾರೀ ಮಾರುಕಟ್ಟೆಯ ಕಲ್ಪಿತ ಸಿದ್ಧಾಂತವು (EMH) ಪ್ರತಿಪಾದಿಸುತ್ತದೆ) ಇದಕ್ಕಿರುವ ರೂಢಿಗತ ಉತ್ತರವಾಗಿದ್ದು, ಬೃಹತ್ ಗಾತ್ರದ ವೃತ್ತಿಪರ ಹೂಡಿಕೆದಾರರ ನಿರ್ಣಯಗಳ ಮೇಲೆ ಸಣ್ಣ ಷೇರುದಾರನ ಅಭಿಪ್ರಾಯವು ಮುಕ್ತವಾಗಿ ಸವಾರಿ ಮಾಡುತ್ತದೆ ಎಂದು ಅದು ಸೂಚಿಸುತ್ತದೆ.

  • ಮೇಲ್ವಿಚಾರಣಾ ವೆಚ್ಚಗಳು: ನಿರ್ದೇಶಕರ ಮೇಲೆ ಪ್ರಭಾವ ಬೀರುವ ದೃಷ್ಟಿಯಿಂದ ಷೇರುದಾರರು ಇತರೊಂದಿಗೆ ಸೇರಿಕೊಂಡು ಒಂದು ಅರ್ಥಪೂರ್ಣವಾದ ಮತದಾನದ ಗುಂಪನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಸರ್ವಸದಸ್ಯರ ಸಭೆಯಲ್ಲಿ ಠರಾವುಗಳನ್ನು ಮಂಡಿಸುವ ಅಥವಾ ನಿರ್ದೇಶಕರನ್ನು ನೇಮಕಮಾಡಿಕೊಳ್ಳುವ ಒಂದು ನಿಜವಾದ ಬೆದರಿಕೆಯನ್ನು ಈ ಗುಂಪು ಒಡ್ಡಬಹುದಾಗಿದೆ.
  • ಲೆಕ್ಕಪತ್ರ ಮಾಹಿತಿಯ ಸರಬರಾಜು: ನಿರ್ದೇಶಕರ ಮೇಲ್ವಿಚಾರಣೆ ಮಾಡುವಲ್ಲಿ ಹಣಕಾಸು ಒದಗಿಸುವವರಿಗೆ ಹಣಕಾಸಿನ ಲೆಕ್ಕಪತ್ರಗಳು ನಿರ್ಣಾಯಕ ಸಂಪರ್ಕಗಳಂತೆ ಅಥವಾ ಕೊಂಡಿಗಳಂತೆ ಕಾರ್ಯನಿರ್ವಹಿಸುತ್ತವೆ.

ಹಣಕಾಸಿಗೆ ಸಂಬಂಧಪಟ್ಟ ಲೆಕ್ಕಪತ್ರಗಳ ವಿವರಣೆಯಲ್ಲಿ ನಿಖರತೆ ಕಂಡುಬರದಿದ್ದರೆ, ಪರಿಣಾಮಕಾರಿಯಾದ ಸಾಂಸ್ಥಿಕ ಆಡಳಿತದಲ್ಲಿಯೂ ಅಸಮಗ್ರತೆ ಅಥವಾ ದೋಷಯುಕ್ತತೆ ಕಂಡುಬರುತ್ತದೆ. ಆದ್ದರಿಂದ ಇದನ್ನು ಬಾಹ್ಯ ಲೆಕ್ಕಪರಿಶೋಧನಾ ಪ್ರಕ್ರಿಯೆಗಳ ಕಾರ್ಯವಿಧಾನದ ಮೂಲಕ ಸರಿಪಡಿಸಬೇಕಾಗುತ್ತದೆ.

ಲೆಕ್ಕಿಗನ ಪಾತ್ರ[ಬದಲಾಯಿಸಿ]

ಸಾಂಸ್ಥಿಕ ಆಡಳಿತ ಪದ್ಧತಿಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದಕ್ಕಾಗಿ ಹಣಕಾಸಿನ ಅಥವಾ ಆಯವ್ಯಯದ ನಿರೂಪಣಾ ಪದ್ಧತಿಯು ಒಂದು ಅತ್ಯಗತ್ಯ ನಿರ್ಣಾಯಕ ಅಂಶವಾಗಿ ಪರಿಣಮಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು] ಬಂಡವಾಳ ಮಾರುಕಟ್ಟೆಯಲ್ಲಿ ಭಾಗೀದಾರರಾಗಿರುವವರಿಗೆ ಲೆಕ್ಕಿಗರು ಮತ್ತು ಲೆಕ್ಕ ಪರಿಶೋಧಕರು ಮಾಹಿತಿಯ ಮೊದಲ ಸರಬರಾಜುದಾರರಾಗಿರುತ್ತಾರೆ. ಶಾಸನವಿಹಿತ ಮತ್ತು ನೈತಿಕ ಕಟ್ಟುಪಾಡುಗಳಿಗೆ ಅನುಸಾರವಾಗಿರುವ, ಮತ್ತು ಲೆಕ್ಕಪರಿಶೋಧಕರ ಸಾಮರ್ಥ್ಯದ ಮೇಲೆ ವಿಶ್ವಾಸವನ್ನಿಟ್ಟಿರುವ, ಹಣಕಾಸಿನ ವಿಷಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಆಡಳಿತಮಂಡಳಿಯು ಸಿದ್ಧಪಡಿಸಬೇಕಿದ್ದು, ಇದನ್ನು ನಿರೀಕ್ಷಿಸುವ ಅಧಿಕಾರವನ್ನು ಕಂಪನಿಯ ನಿರ್ದೇಶಕರಿಗೆ ನೀಡಬೇಕು.

ಮಾಪನದ ವಿಧಾನ, ಗುರುತಿಸುವಿಕೆಯ ಮಾನದಂಡ, ಮತ್ತು ಲೆಕ್ಕಪತ್ರಗಾರಿಕೆಯ ಘಟಕದ ವ್ಯಾಖ್ಯಾನವನ್ನು ನಿರ್ಣಯಿಸುವಲ್ಲಿನ ವಿಧಾನದ ಆಯ್ಕೆಯ ಒಂದು ಹಂತಕ್ಕೆ ಸದ್ಯದ ಲೆಕ್ಕಪತ್ರಗಾರಿಕಾ ಪರಿಪಾಠವು ಅವಕಾಶಮಾಡಿಕೊಡುತ್ತದೆ.

ಸ್ಪಷ್ಟವಾಗಿ ಗೋಚರಿಸುವ ಕಾರ್ಯದಕ್ಷತೆಯನ್ನು ಸುಧಾರಿಸುವುದಕ್ಕಾಗಿರುವ (ಸೃಜನಶೀಲ ಲೆಕ್ಕಪತ್ರಗಾರಿಕೆ ಎಂಬ ಹೆಸರಿನಿಂದಲೂ ಇದು ಜನಪ್ರಿಯವಾಗಿದೆ) ಈ ಆಯ್ಕೆಯ ಚಲಾಯಿಸುವಿಕೆಯು ಬಳಕೆದಾರರ ಮೇಲೆ ಹೆಚ್ಚುವರಿ ಮಾಹಿತಿಯ ವೆಚ್ಚವನ್ನು ಹೇರುತ್ತದೆ. ಪರಾಕಾಷ್ಠೆಯ ಸಂದರ್ಭಗಳಲ್ಲಿ ಮಾಹಿತಿಯ ಬಹಿರಂಗಪಡಿಸದಿರುವಿಕೆಯನ್ನೂ ಇದು ಒಳಗೊಳ್ಳಬಲ್ಲದು.

ಲೆಕ್ಕಪತ್ರಗಾರಿಕಾ ಸಂಸ್ಥೆಯು, ತಾನು ಲೆಕ್ಕ ಪರಿಶೋಧನೆ ಮಾಡುತ್ತಿರುವ ಸಂಸ್ಥೆಯ ಸ್ವತಂತ್ರ ಲೆಕ್ಕ ಪರಿಶೋಧಕನಾಗಿಯೂ ಮತ್ತು ವ್ಯವಸ್ಥಾಪನಾ ಸಮಾಲೋಚಕನಾಗಿಯೂ ಎರಡೂ ಪಾತ್ರವನ್ನು ನಿರ್ವಹಿಸುತ್ತಿದೆಯೇ ಎಂಬುದು ಒಂದು ಕಾಳಜಿಯ ವಿಷಯವಾಗಿದೆ. ಆಡಳಿತ ಮಂಡಳಿಯನ್ನು ಮೆಚ್ಚಿಸಬೇಕೆಂಬ ಕಕ್ಷಿದಾರನ ಒತ್ತಡದ ಕಾರಣದಿಂದಾಗಿ ಹಣಕಾಸಿಗೆ ಸಂಬಂಧಪಟ್ಟ ವರದಿಗಳ ಸಮಗ್ರತೆಯನ್ನು ಸಂದೇಹಾಸ್ಪದ ಸ್ಥಿತಿಯಲ್ಲಿ ಇರಿಸುವ ಹಿತಾಸಕ್ತಿಯ ಒಂದು ತಿಕ್ಕಾಟದಲ್ಲಿ ಇದು ಕೊನೆಗೊಳ್ಳಬಹುದು. ವ್ಯವಸ್ಥಾಪನೆಯ ಸಮಾಲೋಚಕ ಸೇವೆಗಳಿಗೆ ಚಾಲನೆ ನೀಡುವ ಮತ್ತು ಕೊನೆಗಾಣಿಸುವ, ಮತ್ತು ಹೆಚ್ಚು ಮೂಲಭೂತವಾಗಿ ಲೆಕ್ಕಪತ್ರಗಾರಿಕೆಯ ಸಂಸ್ಥೆಗಳನ್ನು ಆಯ್ಕೆಮಾಡುವ ಹಾಗೂ ವಜಾಗೊಳಿಸುವ ಸಾಂಸ್ಥಿಕ ಕಕ್ಷಿದಾರನ ಅಧಿಕಾರವು, ಓರ್ವ ಸ್ವತಂತ್ರ ಲೆಕ್ಕಪರಿಶೋಧಕನ ಪರಿಕಲ್ಪನೆಯನ್ನು ಅಲ್ಲಗಳೆಯುತ್ತದೆ. ಸಾರ್ಬೇನ್ಸ್‌-ಆಕ್ಸ್ಲೆ ಕಾಯಿದೆಯ ಸ್ವರೂಪದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಜಾರಿಗೆ ತರಲಾದ ಬದಲಾವಣೆಗಳು (ಈ ಕೆಳಗೆ ತಿಳಿಸಿರುವಂತೆ ಎನ್ರಾನ್‌ ಸಂಸ್ಥೆಯ ಸನ್ನಿವೇಶಕ್ಕೆ ಪ್ರತಿಯಾಗಿ ಜಾರಿ ಮಾಡಿರುವುದು), ಲೆಕ್ಕ ಪರಿಶೋಧನೆ ಮತ್ತು ವ್ಯವಸ್ಥಾಪನೆಯ ಸಮಾಲೋಚನಾ ಸೇವೆಗಳೆರಡನ್ನೂ ಲೆಕ್ಕಪತ್ರಗಾರಿಕಾ ಸಂಸ್ಥೆಗಳು ನೀಡುವುದನ್ನು ನಿಷೇಧಿಸಿದೆ. ಇದೇ ರೀತಿಯ ಮುನ್ನೇರ್ಪಾಡು ಅಥವಾ ಕಟ್ಟುಪಾಡುಗಳನ್ನು ಭಾರತದಲ್ಲಿನ SEBI ಕಾಯಿದೆಯ 49ನೇ ಖಂಡದ ಅಡಿಯಲ್ಲಿ ಸೇರಿಸಲಾಗಿದೆ.

ಹಣಕಾಸಿಗೆ ಸಂಬಂಧಿಸಿದ ನಿರೂಪಣಾ ಪತ್ರವು ತಪ್ಪುದಾರಿಗೆ ಎಳೆದಿರುವುದಕ್ಕೆ ಎನ್ರಾನ್‌ ಕಂಪನಿಯು ಕುಸಿತವು ಒಂದು ಉದಾಹರಣೆಯಾಗಿದೆ.

ಯಾವುದೇ ನಷ್ಟ ಕಂಡುಬಂದರೂ ಸಹ ಅದರ ಮೊತ್ತವನ್ನು ತಾನು ಪಾವತಿಸಲು ಮೂರನೇ ಕೂಟವೊಂದು ಒಪ್ಪಂದದ ಪ್ರಕಾರ ಒಪ್ಪಿರುತ್ತದೆ ಎಂಬ ತಪ್ಪುಗ್ರಹಿಕೆಯನ್ನು ಸೃಷ್ಟಿಸುವ ಮೂಲಕ ಎನ್ರಾನ್‌ ಕಂಪನಿಯು ನಷ್ಟಗಳನ್ನು ಮುಚ್ಚಿಹಾಕಿತ್ತು.

ಆ ಮೂರನೇ ಕೂಟವು ಒಂದು ಘಟಕವಾಗಿದ್ದು ಅದರಲ್ಲಿ ಎನ್ರಾನ್‌ ಕಂಪನಿಯು ಒಂದು ಗಣನೀಯ ಪ್ರಮಾಣದ ಆರ್ಥಿಕ ಪಾಲನ್ನು ಹೊಂದಿತ್ತು. ಲೆಕ್ಕ ಪರಿಶೋಧನೆಗೆ ಸಂಬಂಧಿಸಿದಂತೆ ಅಧಿಕಾರದ ಪಾಲುದಾರನಾದ ಅರ್ಥರ್‌ ಅಂಡರ್‌ಸನ್‌ ಜೊತೆಗೆ ನಡೆಸಲಾದ ಲೆಕ್ಕಪತ್ರಗಾರಿಕೆಯ ಪರಿಪಾಠಗಳ ಕುರಿತಾದ ಚರ್ಚೆಗಳಲ್ಲಿ ಹೊರಹೊಮ್ಮಿದ ಅಭಿಪ್ರಾಯಗಳು ಚಾಲ್ತಿಯಲ್ಲಿದ್ದ ಕಕ್ಷಿದಾರನೆಡೆಗೆ ಅನಿವಾರ್ಯವಾಗಿ ಬೆರಳು ತೋರಿಸಿದವು.

ಹಣಕಾಸಿಗೆ ಸಂಬಂಧಪಟ್ಟ ಉತ್ತಮ ರೀತಿಯಲ್ಲಿರುವ ನಿರೂಪಣೆಯನ್ನು ಬಳಕೆದಾರರು ಸರಿಯಾಗಿ ಸಂಸ್ಕರಿಸದೇ ಇದ್ದಲ್ಲಿ ಅಥವಾ ಹೆಚ್ಚಿನ ವೆಚ್ಚಗಳ ಕಾರಣದಿಂದಾಗಿ ಮಾಹಿತಿಪಡೆದ ಓರ್ವ ಬಳಕೆದಾರನು ಒಂದು ಮೇಲ್ವಿಚಾರಣಾ ಪಾತ್ರವನ್ನು ಚಲಾಯಿಸಲು ಅಸಮರ್ಥನಾದಲ್ಲಿ, ಸಾಂಸ್ಥಿಕ ಆಡಳಿತದ ಪರಿಣಾಮಶೀಲತೆಯನ್ನು ಕಂಡುಕೊಳ್ಳಲು ಅದು ಒಂದು ಸೂಕ್ತ ಪ್ರಮಾಣದ ಸನ್ನಿವೇಶವಾಗಿ ಪರಿಣಮಿಸುವುದಿಲ್ಲ (ಮೇಲೆ ತಿಳಿಸಲಾಗಿರುವ ಸಾಂಸ್ಥಿಕ ಅಡಳಿತದ ಸಮಗ್ರ ಸಮಸ್ಯೆಗಳು ಎಂಬ ಭಾಗವನ್ನು ನೋಡಿ).[ಸೂಕ್ತ ಉಲ್ಲೇಖನ ಬೇಕು]

ನಿಯಂತ್ರಣ[ಬದಲಾಯಿಸಿ]

ನಿಯಮಗಳಿಗೆ ಎದುರಾಗಿ ಮೂಲತತ್ವಗಳು[ಬದಲಾಯಿಸಿ]

ನಿಯಮಗಳನ್ನು ಅನುಸರಿಸುವುದು ಮೂಲತತ್ವಗಳಿಗೆ ಹೋಲಿಸಿದಾಗ ಸರಳ ಎಂದು ಭಾವಿಸಲಾಗಿದ್ದು, ಒಪ್ಪಬಹುದಾದ ಮತ್ತು ಒಪ್ಪಲಾಗದ ಕಾರ್ಯರೀತಿ ಅಥವಾ ನಡವಳಿಕೆಯ ನಡುವೆ ಅಲ್ಲಿ ಒಂದು ಸ್ಪಷ್ಟವಾದ ಗೆರೆಯು ಗೋಚರಿಸುತ್ತದೆ. ಪ್ರತ್ಯೇಕ ವ್ಯವಸ್ಥಾಪಕರು ಅಥವಾ ಲೆಕ್ಕ ಪರಿಶೋಧಕರಿಗೆ ಸಂಬಂಧಿಸಿದಂತೆ ನಿರ್ಧಾರ ಸ್ವಾತಂತ್ರ್ಯವನ್ನೂ ಸಹ ನಿಯಮಗಳು ಮೊಟಕುಗೊಳಿಸುತ್ತವೆ.

ಆಚರಣೆಗೆ ಸಂಬಂಧಿಸಿ ಹೇಳುವುದಾದರೆ, ನಿಯಮಗಳು ಮೂಲತತ್ವಗಳಿಗಿಂತ ಹೆಚ್ಚು ಜಟಿಲವಾಗಿರಲು ಸಾಧ್ಯವಿದೆ. ಸಂಹಿತೆಯ ವ್ಯಾಪ್ತಿಗೆ ಒಳಪಡದ ಹೊಸ ಬಗೆಯ ವ್ಯವಹಾರಗಳೊಂದಿಗೆ ಕಾರ್ಯ ನಿರ್ವಹಿಸುವಾಗ ಅವುಗಳಲ್ಲಿ ಕೊರತೆಯು ಕಂಡುಬರಬಹುದು. ಮೇಲಾಗಿ, ಸ್ಪಷ್ಟವಾಗಿರುವ ನಿಯಮಗಳನ್ನು ಅನುಸರಿಸಿದರೂ, ಅವುಗಳ ಮೂಲ ಉದ್ದೇಶಗಳನ್ನು ಸಿಕ್ಕಿಹಾಕಿಸುವ ದಾರಿಯೊಂದನ್ನು ಕಂಡುಕೊಳ್ಳಲು ಸಾಧ್ಯವಿದ್ದು- ವಿಶಾಲವಾದ ಮೂಲತತ್ವದಿಂದ ಯಾರಾದರೂ ಸುತ್ತುವರಿಯಲ್ಪಟ್ಟಿದ್ದರೆ ಇದು ಸಾಧನೆಗೆ ಕಷ್ಟಕರವಾಗಿ ಪರಿಣಮಿಸುತ್ತದೆ.

ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಮೂಲತತ್ವಗಳು ಸ್ವಯಂ ನಿಯಂತ್ರಣದ ಒಂದು ಸ್ವರೂಪವಾಗಿದೆ. ಯಾವ ಮಾನದಂಡಗಳು ಸ್ವೀಕಾರಾರ್ಹ ಅಥವಾ ಸ್ವೀಕಾರಾರ್ಹವಲ್ಲ ಎಂಬುದನ್ನು ನಿರ್ಧರಿಸವಲ್ಲಿ ಇದು ಆಯಾ ವಲಯಕ್ಕೆ ಅವಕಾಶ ನೀಡುತ್ತದೆ.

ಅನುಸರಿಸಲು ಆಗದ ಅಥವಾ ಕಾರ್ಯಸಾಧ್ಯವಲ್ಲದ ಅತ್ಯುತ್ಸಾಹದ ಶಾಸನಗಳನ್ನೂ ಸಹ ಇದು ಪೂರ್ವಭಾವಿಯಾಗಿ ಪಡೆದುಕೊಳ್ಳುತ್ತದೆ.

ಬಲವಂತವಾದ ಹೇರುವಿಕೆ[ಬದಲಾಯಿಸಿ]

ಬಲವಂತವಾದ ಹೇರುವಿಕೆಯು ನಿಯಂತ್ರಕ ವ್ಯವಸ್ಥೆಯೊಂದರ ಒಟ್ಟಾರೆ ವಿಶ್ವಾಸಾರ್ಹತೆಯ ಮೇಲೆ ಪರಿಣಾಮವುಂಟುಮಾಡಬಲ್ಲದು. ಅವೆರಡೂ ಕೆಟ್ಟ ಕಾರ್ಯಭಾಗಿಗಳನ್ನು ನಿರ್ಬಂಧಿಸುವುದರ ಜೊತೆಗೆ, ಸ್ಪರ್ಧಾತ್ಮಕ ಕಾರ್ಯಕ್ಷೇತ್ರವನ್ನು ಕಾರ್ಯಯೋಗ್ಯವನ್ನಾಗಿಸುತ್ತವೆ. ಅದೇನೇ ಇದ್ದರೂ, ಅತಿ ಹೆಚ್ಚಿನ ಪ್ರಮಾಣದಲ್ಲಿ ಬಲವಂತವಾಗಿ ಹೇರುವುದು ಎಲ್ಲ ಸಮಯಗಳಲ್ಲೂ ಒಳ್ಳೆಯದಲ್ಲ. ಹೀಗೆ ಮಾಡಿದ್ದೇ ಆದಲ್ಲಿ, ಅತ್ಯಮೂಲ್ಯವಾದ ಸಾಹಸಕಾರ್ಯಗಳಿಗೆ ತಣ್ಣೀರೆರಚಿದಂತಾಗುತ್ತದೆ. ಆದರೂ, ವಾಸ್ತವಿಕವಾದ, ಅಪಾಯಕ್ಕೆ ಪ್ರತಿಯಾಗಿರುವ ಇದು ಆಚರಣೆಯಲ್ಲಿ ಹೆಚ್ಚಿನಂಶ ಸೈದ್ಧಾಂತಿಕವಾಗಿದೆ.

ಕಟ್ಟುಪಾಡನ್ನು ಮೀರಿದ ಕ್ರಮ[ಬದಲಾಯಿಸಿ]

ಆಡಳಿತ ಮಂಡಳಿಯು ಕಂಪನಿಯನ್ನು ನಡೆಸಿಕೊಂಡು ಹೋಗುವಲ್ಲಿ ನೆರವಾಗುವ ರೀತಿಯಲ್ಲಿ ಪ್ರಬುದ್ಧ ಮಂಡಳಿಗಳು ತಮ್ಮ ಕಾರ್ಯೋದ್ದೇಶ ಅಥವಾ ಗುರಿಯನ್ನು ಪರಿಗಣಿಸುತ್ತವೆ. ಆಡಳಿತ ಮಂಡಳಿಯ ಹಿರಿಯ ತಂಡಕ್ಕೆ ಬೆಂಬಲವಾಗಿ ನಿಲ್ಲುವ ಲಕ್ಷಣಗಳನ್ನು ಅವು ಹೊಂದಿರುತ್ತವೆ. ಏಕೆಂದರೆ, ಬೌದ್ಧಿಕ ವಿಶ್ಲೇಷಣೆಯೊಂದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ತಮ್ಮ ಕರ್ತವ್ಯ ಎಂದು ಪ್ರಬುದ್ಧ ನಿರ್ದೇಶಕರು ಬಲವಾಗಿ ನಂಬುತ್ತಾರೆ.

ಭವಿಷ್ಯದ ದಿನಗಳಲ್ಲಿ ಕಂಪನಿಯು ಹೇಗೆ ಮುಂದುವರಿಯಬೇಕು ಎಂಬುದೇ ಈ ವಿಶ್ಲೇಷಣೆಯಾಗಿದ್ದು, ಕಂಪನಿಯ ಎದುರಿರುವ ಗಂಭೀರ ಸ್ವರೂಪದ ಮುಖ್ಯ ಸಮಸ್ಯೆಗಳ ಕಡೆಗೇ ಪ್ರಬುದ್ಧ ಮಂಡಳಿಯು ಗಮನವಿರುತ್ತದೆ.

ಸಾಂಪ್ರದಾಯಿಕ ಅಥವಾ ರೂಢಿಗತ ಮಂಡಳಿಗಳಿಗಿಂತ ಭಿನ್ನವಾಗಿರುವ ಪ್ರಬುದ್ಧ ಮಂಡಳಿಗಳಿಗೆ ಸಾರ್ಬೇನ್ಸ್‌-ಆಕ್ಸ್ಲೆ ಕಾಯಿದೆಯ ನಿಯಮಗಳು ಮತ್ತು ಕಟ್ಟುಪಾಡುಗಳಿಂದ ಯಾವುದೇ ತೊಂದರೆಯ ಅನುಭವವಾಗುವುದಿಲ್ಲ. ಕಟ್ಟುಪಾಡುಗಳಿಗೆ ಅನುಸಾರವಾಗಿ ನಡೆಯುವ ಶಿಷ್ಟ ಮಂಡಳಿಗಳಿಗಿಂತ ಭಿನ್ನವಾಗಿರುವ ಪ್ರಬುದ್ಧ ಮಂಡಳಿಗಳು, ಈ ಕಟ್ಟುಪಾಡುಗಳನ್ನು ಮಂಡಳಿಯ ಕಾರ್ಯದಕ್ಷತೆ ಅಥವಾ ಕಾರ್ಯವಿಧಾನಕ್ಕಾಗಿರುವ ಕೇವಲ ಒಂದು ಆಧಾರರೇಖೆಯಾಗಿ ಅನುಸರಿಸುತ್ತವೆ. ಕೇವಲ ತಾಳೆಪಟ್ಟಿಯೊಂದರ ಅವಶ್ಯಕತೆಗಳನ್ನು ಈಡೇರಿಸುವುದಕ್ಕಿಂತ ಮಿಗಿಲಾದ ವಿಷಯಗಳಲ್ಲಿ ಪ್ರಬುದ್ಧ ನಿರ್ದೇಶಕರು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ತಾವು ಮೌಲ್ಯಗಳನ್ನು ಮತ್ತು ನೀತಿಸೂತ್ರವನ್ನು ರಕ್ಷಿಸುವುದಕ್ಕೆ ಅಥವಾ CEOನ ಕಾರ್ಯದಕ್ಷತೆಯ ಮೇಲ್ವಿಚಾರಣೆ ಮಾಡುವುದಕ್ಕೆ ಸಂಬಂಧಿಸಿ ನಿರ್ದೇಶನ ನೀಡಲು ಅವರಿಗೆ ಸಾರ್ಬೇನ್ಸ್‌-ಆಕ್ಸ್ಲೆಯ ಅಗತ್ಯವಿರುವುದಿಲ್ಲ.

ಇದೇ ವೇಳೆಗೆ, ಸಂಸ್ಥೆಯ ದೈನಂದಿನ ಕಾರ್ಯಾಚರಣೆಗಳು ಅಥವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ತಮ್ಮ ಪಾತ್ರವಲ್ಲ ಎಂಬುದನ್ನು ಪ್ರಬುದ್ಧ ನಿರ್ದೇಶಕರು ಕಂಡುಕೊಳ್ಳುತ್ತಾರೆ.

ಈ ನಿಟ್ಟಿನಲ್ಲಿ ಅವರು ಮೇಲ್ಪಂಕ್ತಿಯಾಗಿ ನಿಲ್ಲುತ್ತಾರೆ. ಒಟ್ಟಾರೆಯಾಗಿ ಹೇಳುವುದಾರೆ, ಸಾಂಪ್ರದಾಯಿಕ ನಿರ್ದೇಶಕರಿಂದ ಮತ್ತು ಶಿಷ್ಟ ನಿರ್ದೇಶಕರಿಂದ ಪ್ರತ್ಯೇಕವಾಗಿ ಅಥವಾ ವಿಭಿನ್ನವಾಗಿ ನಿಲ್ಲುವಲ್ಲಿ ಒಂದು ವಿಶಿಷ್ಟ ಅಂಶವು ಪ್ರಬುದ್ಧ ನಿರ್ದೇಶಕರಿಗೆ ನೆರವಾಗುತ್ತದೆ. ಕಂಪನಿಯ ದೈನಂದಿನ ಸವಾಲುಗಳು ಹಾಗೂ ಕಾರ್ಯನೀತಿಯ ರೂಪಿಸುವಿಕೆಯಲ್ಲಿ ತೊಡಗಿಸಿಕೊಳ್ಳುವಲ್ಲಿನ ಅವರ ಉತ್ಕಟವಾದ ಹೊಣೆಗಾರಿಕೆಯೇ ಈ ವಿಶಿಷ್ಟ ಅಂಶವಾಗಿದೆ. ಪ್ರಬುದ್ಧ ಮಂಡಳಿಗಳನ್ನು ಅತಿ ದೊಡ್ಡದಾದ, ಸಮೂಹ ಕಂಪನಿಗಳಲ್ಲಷ್ಟೇ ಅಲ್ಲದೇ, ಸಣ್ಣ ಸಣ್ಣ ಕಂಪನಿಗಳಲ್ಲೂ ಕಾಣಬಹುದು.[೬]

ವಿಶ್ವಾದ್ಯಂತದ ಸಾಂಸ್ಥಿಕ ಅಡಳಿತದ ಮಾದರಿಗಳು[ಬದಲಾಯಿಸಿ]

ಸಾಂಸ್ಥಿಕ ಆಡಳಿತದ US ಮಾದರಿಯು ಅತ್ಯಂತ ಕುಪ್ರಸಿದ್ಧವಾಗಿದ್ದರೂ, ವಿಶ್ವಾದ್ಯಂತ ಇರುವ ಸಾಂಸ್ಥಿಕ ಆಡಳಿತದ ಮಾದರಿಗಳಲ್ಲಿ ಗಣನೀಯ ಪ್ರಮಾಣದ ಮಾರ್ಪಾಡುಗಳಿವೆ.

ಜಪಾನ್‌ನಲ್ಲಿನ ಕೀರೆಟ್ಸುಗಳ ಗೋಜಲು ಗೋಜಲಾಗಿರುವ ಷೇರುಹಿಡುವಳಿ ರಚನೆಗಳು, ಜರ್ಮನ್‌ ಸಂಸ್ಥೆಗಳ [೮] ಇಕ್ವಿಟಿಗಳಲ್ಲಿನ ಬ್ಯಾಂಕುಗಳ ಅಧಿಕತಮ ಉಪಸ್ಥಿತಿ, ದಕ್ಷಿಣ ಕೊರಿಯಾದಲ್ಲಿನ ಚೇಬಾಲ್‌ಗಳು ಮತ್ತು ಇನ್ನೂ ಅನೇಕವು ಕೆಲವೊಂದು ವಿಶಿಷ್ಟ ವ್ಯವಸ್ಥೆಗಳಿಗೆ ಉದಾಹರಣೆಗಳಾಗಿದ್ದು, USನಲ್ಲಿರುವಂತಹುದೇ ಸಾಂಸ್ಥಿಕ ಆಡಳಿತದ ಸವಾಲುಗಳಿಗೆ ಪ್ರತಿಕ್ರಿಯಿಸಲು ಅವು ಪ್ರಯತ್ನಿಸುತ್ತವೆ.

ವಿಸ್ತೃತವಾಗಿ ಚದುರಿಹೋಗಿರುವ ಷೇರುದಾರರು ಹಾಗೂ ಶಕ್ತಿಯುತ ವ್ಯವಸ್ಥಾಪಕರ ನಡುವೆಯಿರುವ ಹಿತಾಸಕ್ತಿಗಳ ತಿಕ್ಕಾಟವೇ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿನ ಪ್ರಮುಖ ಸಮಸ್ಯೆಯಾಗಿದೆ.

ಪಿರಮಿಡ್ಡಿನ ಸ್ವರೂಪದಲ್ಲಿರುವ ಮಾಲೀಕತ್ವ ಹಾಗೂ ಇಬ್ಬಗೆಯ ಷೇರುಗಳ (ಮತದಾನದ ಮತ್ತು ಮತದಾನ ರಹಿತ ಸ್ವರೂಪದ) ಮೂಲಕ ಮತದಾನದ ಒಡೆತನವನ್ನು ಕುಟುಂಬಗಳು ತಮ್ಮ ಬಿಗಿಮುಷ್ಠಿಯಲ್ಲಿರಿಸಿಕೊಂಡಿರುವುದು ಯುರೋಪ್‌ನಲ್ಲಿರುವ ಪ್ರಮುಖ ಸಮಸ್ಯೆ.

ಇದು "ಸ್ವಯಂ-ನಿರ್ವಹಣೆ" ಅಥವಾ ಸ್ವಯಂ-ವ್ಯವಹಾರಕ್ಕೆ ಎಡೆಮಾಡಿಕೊಡುವುದರಿಂದಾಗಿ, ನಿಯಂತ್ರಣಾಧಿಕಾರವನ್ನು ಹೊಂದಿರುವ ಕುಟುಂಬಗಳು ಉನ್ನತ ಪ್ರಮಾಣದ ಹಣದ ಹರಿವಿನ ಹಕ್ಕುಗಳನ್ನು ಹೊಂದಿರುವ ತಮ್ಮ ಆಶ್ರಿತ ಸಂಸ್ಥೆ ಅಥವಾ ಅಂಗಗಳ ಕಡೆಗೆ ಒಲವು ತೋರಿಸುತ್ತವೆ.[೭]

ಆಂಗ್ಲೋ-ಅಮೆರಿಕನ್ ಮಾದರಿ[ಬದಲಾಯಿಸಿ]

ವಿಶ್ವಾದ್ಯಂತ ಸಾಂಸ್ಥಿಕ ಆಡಳಿತದ ಅನೇಕ ವೈವಿಧ್ಯಮಯ ಮಾದರಿಗಳಿವೆ. ಅವುಗಳು ಯಾವ ಸ್ವರೂಪದ ಬಂಡವಾಳ ನೀತಿಯೊಳಗೆ ಅಳವಡಿಸಲ್ಪಟ್ಟಿವೆಯೋ ಅದಕ್ಕನುಸಾರವಾಗಿ ಅವುಗಳು ಬದಲಾಗುತ್ತಾ ಹೋಗುತ್ತವೆ. ಆಂಗ್ಲೋ-ಅಮೆರಿಕನ್‌ ದೇಶಗಳಲ್ಲಿ ಸಾಮಾನ್ಯವಾಗಿರುವ ಉದಾರಿ ಮಾದರಿಯು, ಷೇರುದಾರರ ಹಿತಾಸಕ್ತಿಗಳೆಡೆಗೆ ಆದ್ಯತೆ ನೀಡುವ ಒಲವು ಹೊಂದಿರುತ್ತವೆ. ಯುರೋಪ್‌ ಖಂಡ ಮತ್ತು ಜಪಾನ್‌ನಲ್ಲಿ ಕಂಡುಬರುವ ಸುಸಂಘಟಿತ ಮಾದರಿಯು ಕೆಲಸಗಾರರ, ವ್ಯವಸ್ಥಾಪಕರ, ಸರಬರಾಜುದಾರರ, ಗ್ರಾಹಕರ ಮತ್ತು ಸಮುದಾಯದ ಹಿತಾಸಕ್ತಿಗಳನ್ನೂ ಸಹ ಗುರುತಿಸುತ್ತದೆ. ಪ್ರತಿ ಮಾದರಿಯೂ ತನ್ನದೇ ಆದ ಗಮನಾರ್ಹವಾದ ಸ್ಪರ್ಧಾತ್ಮಕ ಪ್ರಯೋಜನವನ್ನು ಹೊಂದಿದೆ. ಸಾಂಸ್ಥಿಕ ಆಡಳಿತದ ಉದಾರಿ ಮಾದರಿಯು ಅಮೂಲಾಗ್ರ ನಾವೀನ್ಯತೆ ಮತ್ತು ವೆಚ್ಚದ ಪೈಪೋಟಿಯನ್ನು ಪ್ರೋತ್ಸಾಹಿಸಿದರೆ, ಸಾಂಸ್ಥಿಕ ಆಡಳಿತದ ಸುಸಂಘಟಿತ ಮಾದರಿಯು ವರ್ಧನಾತ್ಮಕ ನಾವೀನ್ಯತೆ ಮತ್ತು ಗುಣಮಟ್ಟದ ಪೈಪೋಟಿಯನ್ನು ಸರಾಗಗೊಳಿಸುತ್ತದೆ. ಆದರೂ ಸಹ, ಆಡಳಿತದ ಚರ್ಚಾವಿಷಯಗಳಿಗೆ ಸಂಬಂಧಿಸಿದಂತೆ U.S.ನಲ್ಲಿ ಇತ್ತೀಚೆಗೆ ಕಂಡು ಬಂದ ಪ್ರಸ್ತಾವ ಹಾಗೂ UKಯಲ್ಲಿ ಕಂಡುಬಂದ ಬೆಳವಣಿಗೆ ಇವುಗಳ ನಡುವೆ ಪ್ರಮುಖವಾದ ವ್ಯತ್ಯಾಸಗಳಿವೆ. ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ, ಸಂಸ್ಥೆಯೊಂದು ನಿರ್ದೇಶಕರ ಮಂಡಳಿಯೊಂದರಿಂದ ಆಳಲ್ಪಡುತ್ತದೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂದು ಸಾಮಾನ್ಯವಾಗಿ ಕರೆಯಲಾಗುವ ಓರ್ವ ಕಾರ್ಯನಿರ್ವಾಹಕ ಅಧಿಕಾರಿಯನ್ನು ಆಯ್ಕೆಮಾಡುವ ಅಧಿಕಾರವನ್ನು ಈ ಮಂಡಳಿಯು ಹೊಂದಿರುತ್ತದೆ. ದೈನಂದಿನ ಕೆಲಸ ಕಾರ್ಯಗಳ ಆಧಾರದ ಮೇಲೆ ಸಂಸ್ಥೆಯನ್ನು ನಿರ್ವಹಿಸಿಕೊಂಡು ಹೋಗುವ ವಿಶಾಲಾಧಿಕಾರವನ್ನು CEO ಹೊಂದಿರುತ್ತಾನೆ. ಆದರೆ, ತನ್ನ ಅಧೀನದಲ್ಲಿ ಬರುವ ಅಧಿಕಾರಿಗಳ ನೇಮಕ, ಹಣ ಸಂಗ್ರಹಣೆ, ಮತ್ತೊಂದು ಕಂಪನಿಯ ಸ್ವಾಧೀನ ಪ್ರಕ್ರಿಯೆ, ಬೃಹತ್‌ ಬಂಡವಾಳ ವಿಸ್ತರಣೆಗಳು, ಅಥವಾ ಇತರ ವೆಚ್ಚದಾಯಕ ಯೋಜನೆಗಳಂತಹ ಕೆಲವೊಂದು ಪ್ರಮುಖ ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿ ಆತ ಮಂಡಳಿಯ ಅನುಮೋದನೆಯನ್ನು ಪಡೆಯುವುದು ಅಗತ್ಯವಾಗಿರುತ್ತದೆ. ಮಂಡಳಿಯ ಇತರ ಕರ್ತವ್ಯಗಳಲ್ಲಿ ಕಾರ್ಯನೀತಿಯನ್ನು ರೂಪಿಸುವುದು, ನಿರ್ಧಾರವನ್ನು ತಳೆಯುವುದು, ಆಡಳಿತ ಮಂಡಳಿಯ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ ನಡೆಸುವುದು, ಅಥವಾ ಸಾಂಸ್ಥಿಕ ನಿಯಂತ್ರಣ ಇವೇ ಮೊದಲಾದವು ಸೇರಿರುತ್ತವೆ.

ನಿರ್ದೇಶಕರ ಮಂಡಳಿಯು ಸಾಮಾನ್ಯವಾಗಿ ಷೇರುದಾರರಿಂದ ಆಯ್ಕೆಗೊಂಡು ಅವರಿಗೆ ಸಂಬಂಧಿಸಿದ ಜವಾಬ್ದಾರಿಯನ್ನು ಹೊಂದಿರುತ್ತಾದರೂ, ಬೃಹತ್ ಪ್ರಮಾಣದ ಷೇರುದಾರರನ್ನು ಹೊರತುಪಡಿಸಿ ಇನ್ನಿತರರಿಗೆ ಮಂಡಳಿಯ ರೂಪುಗೊಳ್ಳುವಿಕೆಯಲ್ಲಿ ಪ್ರಭಾವವನ್ನು ಹೊಂದಲು ಅನೇಕ ಕಂಪನಿಗಳ ಉಪ-ನಿಬಂಧನೆಗಳು (ಬೈಲಾಗಳು) ಅವಕಾಶವನ್ನು ನೀಡುವುದಿಲ್ಲ; ಸಾಮಾನ್ಯವಾಗಿ ಮಂಡಳಿಯ ನಾಮನಿರ್ದೇಶಿತರ ಪೈಕಿ ಯಾರನ್ನು ಆಯ್ಕೆಮಾಡಬೇಕೆಂಬ ವಿಷಯದ ಬಗ್ಗೆ ಏಕವ್ಯಕ್ತಿ ಷೇರುದಾರರಿಗೆ ಸ್ವಾತಂತ್ರ್ಯವಿರುವುದಿಲ್ಲ. ಅದರ ಬದಲಿಗೆ, ಸ್ಥಾಯಿ ಮಂಡಳಿಯ ನಾಮನಿರ್ದೇಶಿತರನ್ನು ವಿವೇಚಿಸದೆ ಯಾಂತ್ರಿಕವಾಗಿ ಆರಿಸುವಂತೆ ಇಂಥಾ ಷೇರುದಾರರಿಗೆ ಸೂಚಿಸಲಾಗುತ್ತದೆ. ದುರಾಗ್ರಹದ ಉತ್ತೇಜಕ ಸವಲತ್ತುಗಳು ಅಭಿವೃದ್ಧಿ ಹೊಂದಿದ ವಿಶ್ವದಲ್ಲಿನ ಅನೇಕ ಸಾಂಸ್ಥಿಕ ಮಂಡಳಿಗಳನ್ನು ವ್ಯಾಪಕವಾಗಿ ಆವರಿಸಿರುವುದರಿಂದಾಗಿ, ಮುಖ್ಯ ಕಾರ್ಯನಿರ್ವಾಹಕನ ಕ್ರಮಗಳನ್ನು ಮೇಲ್ವಿಚಾರಣೆ ಮಾಡಬೇಕಾದ ಮಂಡಳಿಯ ಸದಸ್ಯರು ಆತನಿಗೆ ಋಣಿಯಾಗಿರುವಂತೆ ಅಥವಾ ಉಪಕೃತರಾಗಿರುವಂತೆ ಇರುತ್ತಾರೆ.

ವಾಡಿಕೆಯಂತೆ, ನಿರ್ದೇಶಕರ ಮಂಡಳಿಗಳ ಸದಸ್ಯರು ಇತರ ಸಂಸ್ಥೆಗಳ CEOಗಳಾಗಿದ್ದು, ಇದು ಕೆಲವರಿಗೆ[೮] ಹಿತಾಸಕ್ತಿಯ ತಿಕ್ಕಾಟದಂತೆ ಗೋಚರಿಸುತ್ತದೆ.

ಸಂಹಿತೆಗಳು ಮತ್ತು ಮಾರ್ಗದರ್ಶಿ ಸೂತ್ರಗಳು[ಬದಲಾಯಿಸಿ]

ಸಾಂಸ್ಥಿಕ ಆಡಳಿತದ ಮೂಲತತ್ವಗಳು ಹಾಗೂ ಸಂಹಿತೆಗಳನ್ನು ವಿವಿಧ ದೇಶಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ. ಸ್ಟಾಕ್‌ ವಿನಿಮಯ ಕೇಂದ್ರಗಳು, ಸಂಸ್ಥೆಗಳು, ಸಾಂಸ್ಥಿಕ ಹೂಡಿಕೆದಾರರು, ಅಥವಾ ಸರ್ಕಾರಗಳು ಮತ್ತು ಅಂತಾರಾಷ್ಟ್ರೀಯ ಸಂಘಟನೆಗಳ ಬೆಂಬಲದೊಂದಿಗಿನ ನಿರ್ದೇಶಕರು ಮತ್ತು ವ್ಯವಸ್ಥಾಪಕರ ಸಂಘಗಳಿಂದ (ಸಂಸ್ಥೆಗಳು) ಇವು ಚಲಾವಣೆಗೆ ಬಂದಿವೆ.

ಸ್ಟಾಕ್‌ ವಿನಿಮಯ ಕೇಂದ್ರದ ಲಿಸ್ಟಿಂಗ್‌ ಅಗತ್ಯಗಳಿಗೆ ಸಂಬಂಧವಿರುವ ಸಂಹಿತೆಗಳು ಒತ್ತಾಯಪೂರ್ವಕ ಪ್ರಭಾವವನ್ನು ಹೊಂದಿದ್ದರೂ ಸಹ, ವಾಡಿಕೆಯಂತೆ, ಈ ಆಡಳಿತದ ಶಿಫಾರಸುಗಳೊಂದಿಗಿನ ಅನುಸರಣೆಯು ಕಾನೂನಿನ ಆದೇಶ ಅಥವಾ ನಿರ್ದೇಶನಕ್ಕೆ ಒಳಪಟ್ಟಿಲ್ಲ.

ಉದಾಹರಣೆಗೆ, ಲಂಡನ್‌ ಮತ್ತು ಟೊರೊಂಟೊ ಸ್ಟಾಕ್‌ ವಿನಿಮಯ ಕೇಂದ್ರಗಳಲ್ಲಿ ನಮೂದಿಸಲ್ಪಟ್ಟ ಕಂಪನಿಗಳು ತಂತಮ್ಮ ದೇಶಗಳ ರಾಷ್ಟ್ರೀಯ ಸಂಹಿತೆಗಳ ಶಿಫಾರಸುಗಳನ್ನು ಅನುಸರಿಸುವುದು ಔಪಚಾರಿಕವಾಗಿ ಅಗತ್ಯವಿರುವುದಿಲ್ಲ.

ಆದರೂ ಸಹ, ಅವು ಶಿಫಾರಸುಗಳನ್ನು ಅನುಸರಿಸುತ್ತವೆಯೋ ಇಲ್ಲವೋ ಎಂಬುದನ್ನು ಆ ದಸ್ತಾವೇಜುಗಳಲ್ಲಿ ಅವು ಬಹಿರಂಗಪಡಿಸಬೇಕಾಗುತ್ತದೆ ಮತ್ತು, ಒಂದು ವೇಳೆ ಅದಾಗದಿದ್ದರೆ, ಇಂಥಾ ಭಿನ್ನವಾದ ಪರಿಪಾಠಗಳ ಕುರಿತು ಅವು ವಿವರಣೆಗಳನ್ನು ಒದಗಿಸಬೇಕಾಗುತ್ತದೆ.

ಇಂಥಾ ಬಹಿರಂಗಪಡಿಸುವಿಕೆಯ ಅವಶ್ಯಕತೆಗಳು ಅನುಸರಣೆಯ ಹಾದಿಯಲ್ಲಿರುವ ಲಿಸ್ಟೆಡ್‌ ಕಂಪನಿಗಳ ಮೇಲೆ ಗಣನೀಯ ಪ್ರಮಾಣದ ಒತ್ತಡವನ್ನು ಹೇರುತ್ತವೆ.

ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ, ಕಂಪನಿಗಳು ಒಕ್ಕೂಟ ಸರ್ಕಾರದಿಂದ ಮತ್ತು, ಅವು ಸಾರ್ವಜನಿಕ ವಲಯದ ಕಂಪನಿಗಳಾಗಿದ್ದಲ್ಲಿ, ಅವುಗಳ ಸ್ಟಾಕ್‌ ವಿನಿಮಯ ಕೇಂದ್ರದಿಂದ ನಿಯಂತ್ರಿಸಲ್ಪಡುತ್ತಿದ್ದರೂ, ಅವು ಯಾವ ಸಂಸ್ಥಾನದಲ್ಲಿ ಸಂಘಟಿತವಾಗಿವೆಯೋ ಮುಖ್ಯವಾಗಿ ಅದರ ಕಟ್ಟುಪಾಡುಗಳಿಗೆ ಒಳಗಾಗಿರುತ್ತವೆ. ಅತಿ ಹೆಚ್ಚಿನ ಸಂಖ್ಯೆಯ ಕಂಪನಿಗಳು ಡೆಲಾವೇರ್‌ನಲ್ಲಿ ಸಂಘಟಿತವಾಗಿದ್ದು, ಅವುಗಳಲ್ಲಿ ಫಾರ್ಚೂನ್‌ 500 ಕಂಪನಿಗಳ ಅರ್ಧಕ್ಕಿಂತ ಹೆಚ್ಚು ಭಾಗ ಸೇರಿಕೊಂಡಿದೆ.

ಡೆಲಾವೇರ್‌ ಸಾರ್ವತ್ರಿಕವಾಗಿ ಹೊಂದಿರುವ ವ್ಯವಹಾರ-ಸ್ನೇಹಿ ಸಾಂಸ್ಥಿಕ ಕಾನೂನು ಸನ್ನಿವೇಶ ಮತ್ತು ವ್ಯವಹಾರ ಸಂಬಂಧಿತ ಚರ್ಚಾವಿಷಯಗಳಿಗೆಂದೇ ಮೀಸಲಾದ ಒಂದು ಸಂಸ್ಥಾನ ನ್ಯಾಯಾಲಯವು (ಡೆಲಾವೇರ್ ಕೋರ್ಟ್‌ ಆಫ್‌ ಚಾನ್ಸರಿ) ಅಸ್ತಿತ್ವದಲ್ಲಿರುವುದು ಇದರ ಹಿಂದಿನ ಕಾರಣವಾಗಿದೆ.

ಬಹುತೇಕ ಸಂಸ್ಥಾನಗಳ ಸಾಂಸ್ಥಿಕ ಕಾನೂನು ಅಮೆರಿಕನ್ ಬಾರ್‌ ಅಸೋಸಿಯೇಷನ್‌ನ ಮಾದರಿ ವ್ಯವಹಾರ ಸಂಸ್ಥೆಯ ಕಾಯಿದೆ Archived 2009-09-19 ವೇಬ್ಯಾಕ್ ಮೆಷಿನ್ ನಲ್ಲಿ. ಯನ್ನು ಸಾಮಾನ್ಯವಾಗಿ ಅನುಸರಿಸುತ್ತದೆ. ಈ ಕಾಯಿದೆಯನ್ನು ಡೆಲಾವರ್ ಅನುಸರಿಸುವುದಿಲ್ಲವಾದರೂ, ಇದರ ನಿಬಂಧನೆಗಳು ಹಾಗೂ ಡೆಲಾವೇರ್‌ನ ಗಮನಸೆಳೆಯುವ ಹಲವಾರು ನ್ಯಾಯಾಧೀಶರನ್ನು ಅದು ಪರಿಗಣಿಸುತ್ತದೆ. ABA ಸಮಿತಿಗಳಲ್ಲಿ ಭಾಗವಹಿಸಿದ್ದ ಡೆಲಾವರ್ ಸವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಇ. ನಾರ್ಮನ್ ವೀಸೇ Archived 2014-01-10 ವೇಬ್ಯಾಕ್ ಮೆಷಿನ್ ನಲ್ಲಿ. ಯವರ ಉದಾಹರಣೆ ಇದರಲ್ಲಿ ಸೇರಿದೆ.

2005ರಲ್ಲಿ ಹೊರಬಿದ್ದ ಡಿಸ್ನಿ ತೀರ್ಮಾನದ[೯] ನಂತರ ಹುಟ್ಟಿಕೊಂಡ ಒಂದು ಚರ್ಚಾವಿಷಯವು ಕಂಪನಿಗಳು ತಮ್ಮ ಆಡಳಿತದ ಜವಾಬ್ದಾರಿಗಳನ್ನು ನಿರ್ವಹಿಸುವ ಪ್ರಮಾಣ ಅಥವಾ ಮಟ್ಟದ ಕುರಿತಾಗಿತ್ತು. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಅವು ಕೇವಲ ಶಾಸನಬದ್ಧ ಪ್ರವೇಶವನ್ನು ರದ್ದುಗೊಳಿಸಲು ಪ್ರಯತ್ನಿಸುತ್ತವೆಯೇ, ಅಥವಾ ಅತ್ಯುತ್ತಮ ಪರಿಪಾಠದ ಮಟ್ಟಕ್ಕೆ ಏರಲು ಅವು ಆಡಳಿತದ ಮಾರ್ಗದರ್ಶಿ ಸೂತ್ರಗಳನ್ನು ಸೃಷ್ಟಿಸಬೇಕೇ ಎಂಬುದೇ ಚರ್ಚಾವಿಷಯವಾಗಿದೆ. ಉದಾಹರಣೆಗೆ, ನಿರ್ದೇಶಕರು, ಸಾಂಸ್ಥಿಕ ವ್ಯವಸ್ಥಾಪಕರು ಮತ್ತು ಪ್ರತ್ಯೇಕ ಕಂಪನಿಗಳ ಒಕ್ಕೂಟಗಳಿಂದ (ಮೇಲಿನ 3ನೇ ವಿಭಾಗವನ್ನು ನೋಡಿ) ಚಲಾವಣೆ ಮಾಡಲ್ಪಟ್ಟ ಮಾರ್ಗದರ್ಶಿ ಸೂತ್ರಗಳು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿರುವ ಕಡೆಗೆ ಒಲವು ಹೊಂದಿರುತ್ತವೆ.

ಉದಾಹರಣೆಗೆ, GM ಮಂಡಳಿಯ ಮಾರ್ಗದರ್ಶಿ ಸೂತ್ರಗಳು ತನ್ನದೇ ಆಡಳಿತ ಸಾಮರ್ಥ್ಯವನ್ನು ಸುಧಾರಿಸುವುದರ ಕುರಿತಾದ ಕಂಪನಿಯ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತವೆ.

ಆದರೂ ಇಂಥಾ ದಸ್ತಾವೇಜುಗಳು ವರ್ಧನಾತ್ಮಕವಾದ ವಿಶಾಲ ಪರಿಣಾಮವೊಂದನ್ನು ಹೊಂದಲು ಸಾಧ್ಯವಿದ್ದು, ಅತ್ಯುತ್ತಮ ಪರಿಪಾಠದ ಇದೇ ಸ್ವರೂಪದ ದಸ್ತಾವೇಜುಗಳು ಹಾಗೂ ಮಾನದಂಡಗಳನ್ನು ಇತರ ಕಂಪನಿಗಳೂ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ.

1999ರಲ್ಲಿ ಹೊರಬಂದ OECD ಸಾಂಸ್ಥಿಕ ಅಡಳಿತದ ಮೂಲತತ್ವಗಳು ಅತಿ ಪ್ರಭಾವಶಾಲಿ ಮಾರ್ಗದರ್ಶಿ ಸೂತ್ರಗಳಲ್ಲಿ ಒಂದಾಗಿದೆ. 2004ರಲ್ಲಿ ಇದನ್ನು ಪರಿಷ್ಕರಿಸಲಾಯಿತು. OECD ಮೂಲತತ್ವವು ಸಾಂಸ್ಥಿಕ ಆಡಳಿತದ ಮೂಲತತ್ವಗಳ ಪ್ರತಿಪಾದಕನಾಗಿ ವಿಶ್ವದೆಲ್ಲೆಡೆ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡು ಬಂದಿದೆ.

OECD, ಇತರ ಅಂತಾರಾಷ್ಟ್ರೀಯ ಸಂಘಟನೆಗಳು, ಖಾಸಗಿ ವಲಯದ ಸಂಘ-ಸಂಸ್ಥೆಗಳು ಮತ್ತು 20ಕ್ಕೂ ಹೆಚ್ಚಿನ ಸಾಂಸ್ಥಿಕ ಆಡಳಿತದ ಸಂಹಿತೆಗಳ ಕಾರ್ಯಶೈಲಿಯನ್ನು ಆಧರಿಸಿ ವಿಶ್ವಸಂಸ್ಥೆಯ [[ಲೆಕ್ಕಪತ್ರಗಾರಿಕೆ ಮತ್ತು ನಿರೂಪಣಾ ವ್ಯವಸ್ಥೆಯ ಅಂತಾರಾಷ್ಟ್ರೀಯ ಮಾನದಂಡಗಳ ಮೇಲೆ ಕಾರ್ಯನಿರ್ವಹಿಸುವ ಪರಿಣಿತರ ಅಂತರಸರ್ಕಾರೀಯ ಕಾರ್ಯಪಡೆಯು (ISAR)]] ಸ್ವಯಂಪ್ರೇರಿತವಾಗಿರುವ ಸಾಂಸ್ಥಿಕ ಆಡಳಿತದ ಬಹಿರಂಗಪಡಿಸುವಿಕೆಯಲ್ಲಿನ ಉತ್ತಮ ಪರಿಪಾಠಗಳ ಕುರಿತಾದ ಮಾರ್ಗದರ್ಶಿ ಸೂತ್ರ Archived 2009-11-26 ವೇಬ್ಯಾಕ್ ಮೆಷಿನ್ ನಲ್ಲಿ. ವನ್ನು ರೂಪಿಸಿದೆ.

ಅಂತಾರಾಷ್ಟ್ರೀಯ ಮಾನ್ಯತೆಯನ್ನು ಪಡೆದಿರುವ[೧೦] ಈ ಮಾನದಂಡವು ಐವತ್ತಕ್ಕೂ ಹೆಚ್ಚಿನ ವಿಶಿಷ್ಟ ಬಹಿರಂಗಪಡಿಸುವಿಕೆಯ ಅಂಶಗಳನ್ನು ಹೊಂದಿದ್ದು, ಅವು ಐದು ವಿಶಾಲ ವರ್ಗಗಳಲ್ಲಿ ಹಂಚಲ್ಪಟ್ಟಿವೆ.[೧೧] ಅವುಗಳೆಂದರೆ:

  • ಲೆಕ್ಕ ಪರಿಶೋಧಿಸುವಿಕೆ
  • ಮಂಡಳಿ ಮತ್ತು ಆಡಳಿತ ಮಂಡಳಿಯ ಸ್ವರೂಪ ಮತ್ತು ಪ್ರಕ್ರಿಯೆ
  • ಸಾಂಸ್ಥಿಕ ಹೊಣೆಗಾರಿಕೆ ಮತ್ತು ಅನುಸರಣೆ
  • ಆರ್ಥಿಕ ಪಾರದರ್ಶಕತೆ ಮತ್ತು ಮಾಹಿತಿಯ ಬಹಿರಂಗಪಡಿಸುವಿಕೆ
  • ಒಡೆತನದ ಸ್ವರೂಪ ಮತ್ತು ನಿಯಂತ್ರಣಾ ಹಕ್ಕುಗಳ ಚಲಾಯಿಸುವಿಕೆ

ಸಮರ್ಥನೀಯ ಬೆಳವಣಿಗೆಗಾಗಿರುವ ವಿಶ್ವ ವ್ಯವಹಾರ ಸಮಿತಿಯು (ವರ್ಲ್ಡ್‌ ಬಿಸಿನೆಸ್ ಕೌನ್ಸಿಲ್ ಫಾರ್ ಸಸ್ಟೇನಬಲ್ ಡೆವಲಪ್‌ಮೆಂಟ್‌) WBCSD ಸಾಂಸ್ಥಿಕ ಆಡಳಿತದ ಕುರಿತಾಗಿ, ಅದರಲ್ಲೂ ನಿರ್ದಿಷ್ಟವಾಗಿ ಹೊಣೆಗಾರಿಕೆ ಮತ್ತು ನಿರೂಪಣಾ ಕಾರ್ಯ Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ. ದ ಮೇಲೆ ಕಾರ್ಯನಿರ್ವಹಿಸಿದೆ, ಮತ್ತು 2004ರಲ್ಲಿ ಸಾಂಸ್ಥಿಕ ಜವಾಬ್ದಾರಿಯ ಸಂಹಿತೆಗಳು, ಮಾನದಂಡಗಳು, ಮತ್ತು ಚೌಕಟ್ಟುಗಳ ಬಳಕೆಯಲ್ಲಿನ ವ್ಯವಹಾರಕ್ಕಾಗಿರುವ ಕಾರ್ಯನೀತಿಯ ಸವಾಲುಗಳು ಎಂಬ ಚರ್ಚಾವಿಷಯದ ವ್ಯವಸ್ಥಾಪನಾ ವಿಧಾನ Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ. ವೊಂದನ್ನು ಸೃಷ್ಟಿಸಿದೆ. ಸಾರ್ವತ್ರಿಕ ಮಾಹಿತಿಯನ್ನು ನೀಡುವ ಕಡೆಗೆ ಈ ದಸ್ತಾವೇಜು ಗುರಿಯಿಟ್ಟುಕೊಂಡಿದ್ದು, ಇದು ಸಮಗ್ರ ವಿಷಯದ ಒಂದು ಕ್ಷಿಪ್ರ ನೋಟವಾಗಿದೆ ಹಾಗೂ ಸಮರ್ಥನೀಯತೆಯ ಕಾರ್ಯಸೂಚಿಗೆ ಸಂಬಂಧಿಸಿರುವ ಕೆಲವೊಂದು ಪ್ರಮುಖ ಸಂಹಿತೆಗಳು, ಮಾನದಂಡಗಳು ಮತ್ತು ಚೌಕಟ್ಟುಗಳ ಮೇಲಿನ ಚಿಂತನಾ-ಚಿಲುಮೆ/ವೃತ್ತಿಪರರ ಗುಂಪಿನಿಂದ ಹೊರಬಂದಿರುವ ಒಂದು ಯಥಾದೃಷ್ಟ ಸ್ವರೂಪವಾಗಿದೆ.

ಒಡೆತನದ ರಚನಾಶೈಲಿಗಳು[ಬದಲಾಯಿಸಿ]

ಒಂದು ನಿರ್ದಿಷ್ಟ ಸಮೂಹ ಸಂಸ್ಥೆಗೆ ಸಂಬಂಧಿಸಿದಂತೆ ಷೇರುದಾರರು ಕಲ್ಪಿಸಿಕೊಳ್ಳುವಂತೆ ತೋರುವ ಹಲವಾರು ಶೈಲಿಗಳನ್ನು ಒಡೆತನದ ರಚನಾಶೈಲಿಗಳು ಎನ್ನಲಾಗುತ್ತದೆ.

ದೇಶದೊಳಗಡೆಯ ಅಥವಾ ವ್ಯವಹಾರ ಸಮುದಾಯವೊಂದರ ಸಾಂಸ್ಥಿಕ ಆಡಳಿತದ ವಿಶ್ಲೇಷಣೆ ಮಾಡುವಾಗ ಕಾರ್ಯನೀತಿ ರೂಪಿಸುವವರು ಮತ್ತು ಸಂಶೋಧಕರು ಈ ವಿಧಾನವನ್ನು ಆಗಿಂದಾಗ್ಗೆ ಬಳಸುತ್ತಾರೆ.

ಒಡೆತನದ ಕೇಂದ್ರೀಕರಣದ ಕೆಲವೊಂದು ವೀಕ್ಷಣಾರ್ಹ ಅಳತೆಗೋಲುಗಳನ್ನು (ಅಂದರೆ, ಕೇಂದ್ರೀಕರಣದ ಅನುಪಾತವನ್ನು) ಬಳಸುವ ಮೂಲಕ ಹಾಗೂ ನಂತರ ಅದರ ದೃಷ್ಟಿಗೋಚರ ಚಿತ್ರಣವನ್ನು ತೋರಿಸುವ ರೇಖಾಚಿತ್ರವನ್ನು ರಚಿಸುವ ಮೂಲಕ ಒಡೆತನದ ರಚನಾಶೈಲಿಗಳನ್ನು ಸಾಮಾನ್ಯವಾಗಿ ಗುರುತಿಸಲಾಗುತ್ತದೆ. ಷೇರುದಾರರು ಸಂಸ್ಥೆಯೊಂದಿಗೆ ಪರಸ್ಪರ ವರ್ತಿಸುವ ವಿಧಾನವನ್ನು ಅರ್ಥಮಾಡಿಕೊಳ್ಳಲು ಸಮರ್ಥರಾಗುವುದು ಮತ್ತು, ಸಾಧ್ಯವಾದಾಗಲೆಲ್ಲಾ ಒಂದು ನಿರ್ದಿಷ್ಟ ಸಮೂಹ ಸಂಸ್ಥೆಯ ನಿರ್ಣಾಯಕ ಮಾಲೀಕನನ್ನು ಪತ್ತೆ ಹಚ್ಚುವುದು ಒಡೆತನದ ರಚನಾಶೈಲಿಗಳ ಪರಿಕಲ್ಪನೆಯ ಹಿಂದಿನ ಉದ್ದೇಶ. ಒಡೆತನದ ರಚನಾ ಶೈಲಿಗಳ ಕೆಲವೊಂದು ಉದಾಹರಣೆಗಳಲ್ಲಿ ಪಿರಮಿಡ್‌ ಸ್ವರೂಪ, ಅಡ್ಡ-ಷೇರಿನ ಹಿಡುವಳಿಗಳು, ವರ್ತುಲಗಳು, ಹಾಗೂ ಜಾಲಗಳು ಸೇರಿವೆ.

ಸಾಂಸ್ಥಿಕ ಅಡಳಿತ ಮತ್ತು ಸಂಸ್ಥೆಯ ಕಾರ್ಯನಿರ್ವಹಣೆ[ಬದಲಾಯಿಸಿ]

2000ದಲ್ಲಿ ಮೆಕ್‌ಕಿನ್ಸೆ ಸಂಸ್ಥೆಯು ಕೈಗೊಂಡ ಮತ್ತು 2002ರಲ್ಲಿ ಪರಿಷ್ಕರಿಸಿದ 'ಜಾಗತಿಕ ಹೂಡಿಕೆದಾರರ ಅಭಿಪ್ರಾಯದ ಸಮೀಕ್ಷೆ'ಯಲ್ಲಿ 200ಕ್ಕೂ ಹೆಚ್ಚಿನ ಸಾಂಸ್ಥಿಕ ಹೂಡಿಕೆದಾರರು ಪಾಲ್ಗೊಂಡಿದ್ದು, ಉತ್ತಮ ಆಡಳಿತ ವ್ಯವಸ್ಥೆಯನ್ನು ಹೊಂದಿರುವ ಕಂಪನಿಗಳಿಗಾಗಿ ಅಧಿಕ ಮೌಲ್ಯವನ್ನು ಪಾವತಿಸಲೂ ಸಿದ್ಧ ಎಂದು ಅವರಲ್ಲಿ 80%ರಷ್ಟು ಮಂದಿ ಉತ್ತರಿಸಿರುವುದು ಕಂಡುಬಂದಿದೆ. ಅವರ ವ್ಯಾಖ್ಯಾನದ ಅನುಸಾರ ಉತ್ತಮ-ಆಡಳಿತವನ್ನು ಹೊಂದಿರುವ ಕಂಪನಿಯೆಂದರೆ, ಅದರಲ್ಲಿ ಬಹುತೇಕವಾಗಿ ಹೊರಗಿನಿಂದ ಬಂದ ನಿರ್ದೇಶಕರಿರಬೇಕು. ಅವರು ಆಡಳಿತ ಮಂಡಳಿಯೊಂದಿಗೆ ಯಾವುದೇ ಒಪ್ಪಂದಗಳನ್ನು ಹೊಂದಿರಬಾರದು. ಕಂಪನಿಯ ನಿರ್ದೇಶಕರ ಔಪಚಾರಿಕ ಮೌಲ್ಯಮಾಪನವನ್ನು ಅವರು ಕೈಗೊಳ್ಳಬೇಕು, ಮತ್ತು ಆಡಳಿತಾತ್ಮಕ ಚರ್ಚಾವಿಷಯಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಹೂಡಿಕೆದಾರರಿಂದ ಬರುವ ಮನವಿಗಳಿಗೆ ಅವರು ಪ್ರತಿಕ್ರಿಯಾಶೀಲರಾಗಿರಬೇಕು.

ಪಾವತಿಸಲಾದ ಅಧಿಕಮೌಲ್ಯದ ಗಾತ್ರವು ಮಾರುಕಟ್ಟೆಯಿಂದ ಮಾರುಕಟ್ಟೆಗೆ ವಿಭಿನ್ನವಾಗಿತ್ತು. ಅಂದರೆ, ಕೆನಡಿಯನ್‌ ಕಂಪನಿಗಳಿಗೆ ಈ ಗಾತ್ರವು 11%ನಷ್ಟು ಇದ್ದರೆ, ಕಟ್ಟುಪಾಡುಗಳ ಹಿನ್ನೆಲೆಯು ನಿಸ್ಸಂದೇಹವಾಗಿ ಕಡಿಮೆಯಿರುವ ಕಂಪನಿಗಳಿಗೆ (ಅಂದರೆ ಮೊರೊಕೊ, ಈಜಿಪ್ಟ್‌ ಮತ್ತು ರಷ್ಯದಲ್ಲಿನ ಕಂಪನಿಗಳಿಗೆ) ಈ ಗಾತ್ರವು ಸುಮಾರು 40%ನಷ್ಟಿತ್ತು.

ಕಂಪನಿಗಳ ಗುಣಮಟ್ಟದ ವಿಶಾಲ ಗ್ರಹಿಕೆಗಳನ್ನು ಉನ್ನತ ದರ್ಜೆಯ ಷೇರು ಬೆಲೆಯ ಕಾರ್ಯದಕ್ಷತೆಯೊಂದಿಗೆ ಇತರ ಅಧ್ಯಯನಗಳು ಸಂಬಂಧ ಕಲ್ಪಿಸಿವೆ.

ಫಾರ್ಚೂನ್ ನಿಯತಕಾಲಿಕವು ಕೈಗೊಂಡ 'ಅತಿ ಹೆಚ್ಚು ಮೆಚ್ಚುಗೆ ಪಡೆದ ಸಂಸ್ಥೆಗಳ' ಸಮೀಕ್ಷೆಯ ಐದು ವರ್ಷಗಳ ಸಂಚಿತ ಆದಾಯದ ಆಂಟುನೊವಿಚ್‌ ಎಟ್‌ ಅಲ್‌ ಎಂಬ ಅಧ್ಯಯನವೊಂದರಲ್ಲಿ, "ಅತಿ ಹೆಚ್ಚು ಮೆಚ್ಚುಗೆ ಪಡೆದ ಸಂಸ್ಥೆಗಳು" ಸುಮಾರು 125%ನಷ್ಟು ಸರಾಸರಿ ಆದಾಯವನ್ನು ದಾಖಲಿಸಿದ್ದರೆ, 'ಕಡಿಮೆ ಮೆಚ್ಚುಗೆ' ಪಡೆದ ಸಂಸ್ಥೆಗಳು 80%ನಷ್ಟು ಆದಾಯವನ್ನು ದಾಖಲಿಸಿರುವುದು ಅದರಲ್ಲಿ ಕಂಡುಬಂದಿದೆ. ಪ್ರತ್ಯೇಕವಾದ ಅಧ್ಯಯನವೊಂದರಲ್ಲಿ ಬಿಸಿನೆಸ್‌ ವೀಕ್‌ ನಿಯತಕಾಲಿಕವು ಸಾಂಸ್ಥಿಕ ಹೂಡಿಕೆದಾರರು ಹಾಗೂ 'ಪರಿಣಿತರನ್ನು' ಒಳಗೊಂಡ ಪಟ್ಟಿಯೊಂದನ್ನು ತಯಾರಿಸಿತು. ಒಳ್ಳೆಯ ಮತ್ತು ಕೆಟ್ಟ ಆಡಳಿತವನ್ನು ಹೊಂದಿರುವ ಮಂಡಳಿಗಳ ನಡುವಿನ ವ್ಯತ್ಯಾಸ ತೋರಿಸಲು ಕೈಗೊಳ್ಳಲಾದ ಈ ಅಧ್ಯಯನದಲ್ಲಿ ಉತ್ತಮ ಶ್ರೇಯಾಂಕಗಳನ್ನು ಹೊಂದಿದ್ದ ಕಂಪನಿಗಳು ಉತ್ತಮ ಹಣಕಾಸು ಗಳಿಕೆಯನ್ನು ದಾಖಲಿಸಿರುವುದು ಕಂಡುಬಂತು.

ಮತ್ತೊಂದು ಕಡೆ, ನಿರ್ದಿಷ್ಟ ಸಾಂಸ್ಥಿಕ ಆಡಳಿತದ ನಿಯಂತ್ರಣಗಳು ಹಾಗೂ ಸಂಸ್ಥೆಯ ಕಾರ್ಯನಿರ್ವಹಣೆಯ ನಡುವಿನ ಸಂಬಂಧದೊಳಗಿನ ಸಂಶೋಧನೆಯು ಕೆಲವೊಮ್ಮೆ ಮಿಶ್ರಣಗೊಂಡಿದ್ದರೆ, ಕೆಲವೊಮ್ಮೆ ದುರ್ಬಲವಾಗಿದೆ. ಈ ಕೆಳಗಿನ ಉದಾಹರಣೆಗಳು ಈ ಕುರಿತಾದ ಚಿತ್ರಣವನ್ನು ನೀಡುತ್ತವೆ.

ಮಂಡಳಿಯ ಸಂಯೋಜನೆ[ಬದಲಾಯಿಸಿ]

ಸಭೆಗಳು ನಡೆಯುವ ಆವರ್ತನ ಮತ್ತು ಲಾಭದಾಯಕತೆಯ ನಡುವೆ ಇರುವ ಸಂಬಂಧಕ್ಕೆ ಕೆಲವೊಂದು ಸಂಶೋಧಕರು ಬೆಂಬಲವನ್ನು ಕಂಡುಕೊಂಡಿದ್ದಾರೆ. ಇನ್ನಿತರರು ಬಾಹ್ಯ ನಿರ್ದೇಶಕರ ಪ್ರಮಾಣ ಮತ್ತು ಸಂಸ್ಥೆಯ ಕಾರ್ಯವಿಧಾನದ ನಡುವೆ ಒಂದು ಋಣಾತ್ಮಕ ಸಂಬಂಧವಿರುವುದನ್ನು ಗುರುತಿಸಿದ್ದರೆ, ಮತ್ತೆ ಕೆಲವರು ಬಾಹ್ಯ ಮಂಡಳಿ ಸದಸ್ಯತ್ವ ಹಾಗೂ ಕಾರ್ಯವಿಧಾನದ ನಡುವೆ ಯಾವುದೇ ಸಂಬಂಧವನ್ನು ಕಂಡುಕೊಂಡಿಲ್ಲ. ಹೆಚ್ಚಿನ ಸ್ವಾತಂತ್ರ್ಯವಿರುವ ಮಂಡಳಿಗಳನ್ನು ಹೊಂದಿರುವ ಕಂಪನಿಗಳು ಇತರ ಕಂಪನಿಗಳಿಗಿಂತ ಉತ್ತಮವಾಗೇನೂ ಕಾರ್ಯನಿರ್ವಹಿಸುವುದಿಲ್ಲ ಎಂದು ಭಗತ್ ಮತ್ತು ಬ್ಲಾಕ್‌ ಎಂಬಿಬ್ಬರು ತಮ್ಮ ಇತ್ತೀಚಿನ ಅಧ್ಯಯನಾ ಬರಹವೊಂದರಲ್ಲಿ ತಿಳಿಸಿದ್ದಾರೆ.

ಸಂಸ್ಥೆಯ ಕಾರ್ಯವಿಧಾನ ಅಥವಾ ಕಾರ್ಯದಕ್ಷತೆಯ ಮೇಲೆ ಮಂಡಳಿಯ ಸಂಯೋಜನೆಯು ನೇರವಾದ ಪ್ರಭಾವವನ್ನು ಹೊಂದಿರುವುದು ಅಸಂಭವವಾಗಿದೆ.

ಸಂಭಾವನೆ/ಪರಿಹಾರ[ಬದಲಾಯಿಸಿ]

ಸಂಸ್ಥೆಯ ಕಾರ್ಯದಕ್ಷತೆ ಮತ್ತು ಕಾರ್ಯನಿರ್ವಾಹಕರ ಪರಿಹಾರದ ನಡುವಿನ ಸಂಬಂಧದ ಕುರಿತಾದ ಹಿಂದಿನ ಸಂಶೋಧನೆಯ ಫಲಿತಾಂಶಗಳು, ಕಾರ್ಯನಿರ್ವಾಹಕರ ಸಂಭಾವನೆ ಮತ್ತು ಸಂಸ್ಥೆಯ ಕಾರ್ಯದಕ್ಷತೆಯ ನಡುವೆ ಇರುವ ಸುಸಂಗತವಾದ ಮತ್ತು ಗಮನಾರ್ಹವಾದ ಸಂಬಂಧಗಳನ್ನು ಕಂಡುಕೊಳ್ಳಲು ವಿಫಲವಾಗಿವೆ. ವೇತನ-ಕಾರ್ಯದಕ್ಷತೆಯ ಜೋಡಣೆಯ ಕಡಿಮೆ ಸರಾಸರಿ ಮಟ್ಟಗಳು ಈ ಸ್ವರೂಪದ ಆಡಳಿತ ನಿಯಂತ್ರಣವು ವ್ಯರ್ಥ ಎಂದೇನೂ ಅವಶ್ಯವಾಗಿ ಸೂಚಿಸುವುದಿಲ್ಲ. ದಲ್ಲಾಳಿ ಸಂಸ್ಥೆಯ ಒಂದೇ ತರಹದ ತಿಕ್ಕಾಟಗಳು ಎಲ್ಲ ಸಂಸ್ಥೆಗಳ ಅನುಭವಕ್ಕೆ ಬರುವುದಿಲ್ಲ, ಮತ್ತು ಬಾಹ್ಯ ಹಾಗೂ ಆಂತರಿಕ ಮೇಲ್ವಿಚಾರಣಾ ವಿಧಾನಗಳು ಇತರರಿಗಿಂತ ಕೆಲವರಿಗೆ ಹೆಚ್ಚು ಪರಿಣಾಮಕಾರಿಯಾಗಿರಲು ಸಾಧ್ಯವಿದೆ.

ಸಂಸ್ಥೆಯ ಷೇರುಗಳ ಒಡೆತನದ ಮೂಲಕವೇ CEO ಕಾರ್ಯದಕ್ಷತೆಯ ಅತಿದೊಡ್ಡ ಉತ್ತೇಜಕ ಸೌಲಭ್ಯಗಳು ಬಂದಿರುವುದನ್ನು ಕೆಲವೊಂದು ಸಂಶೋಧಕರು ಕಂಡುಕೊಂಡಿದ್ದಾರೆ. ಆದರೆ, ಷೇರು ಮಾಲೀಕತ್ವ ಹಾಗೂ ಸಂಸ್ಥೆಯ ಕಾರ್ಯದಕ್ಷತೆಯು, ಮಾಲೀಕತ್ವದ ಮಟ್ಟದ ಮೇಲೆ ಅವಲಂಬಿತವಾಗಿರುವುದು ಮತ್ತಷ್ಟು ಸಂಶೋಧಕರ ಅರಿವಿಗೆ ಬಂದಿದೆ. ಇದರ ಫಲಿತಾಂಶಗಳು ಸೂಚಿಸುವುದೇನೆಂದರೆ, 20%ಗೂ ಹೆಚ್ಚಿನ ಮಟ್ಟಕ್ಕೆ ಒಡೆತನದಲ್ಲಿ ಹೆಚ್ಚಳ ಉಂಟಾದಲ್ಲಿ ಆಡಳಿತ ಮಂಡಳಿಯು ಭದ್ರವಾಗಿ ಬೇರೂರುವಲ್ಲಿ ಕೊನೆಗೊಂಡರೆ, ತಮ್ಮದೇ ಷೇರುದಾರರ ಹಿತಕಾಯುವಲ್ಲಿ ಕಡಿಮೆ ಆಸಕ್ತಿಯನ್ನು ತಳೆಯಲು ಕಾರಣವಾಗುತ್ತದೆ.

ಸಂಸ್ಥೆಯ ಕಾರ್ಯದಕ್ಷತೆಯು ಷೇರು ಆಯ್ಕೆ ಯೋಜನೆಗಳೊಂದಿಗೆ ನಿಸ್ಸಂದೇಹವಾಗಿ ಸಂಬಂಧವನ್ನು ಹೊಂದಿರುತ್ತವೆ ಮತ್ತು ಅಲ್ಪಾವಧಿಗೆ ಬದಲಾಗಿ, ಕಂಪನಿಯ ದೀರ್ಘಾವಧಿಯ ಕಾರ್ಯದಕ್ಷತೆಯ ಕಡೆಗೆ ನಿರ್ದೇಶಕರ ಶಕ್ತಿಗಳನ್ನು ನಿರ್ದೇಶಿಸಿ, ಅವರ ನಿರ್ಧಾರ ತಳೆಯುವ ವಲಯವನ್ನು ಈ ಯೋಜನೆಗಳು ವಿಸ್ತರಿಸುತ್ತವೆ ಎಂದು ಕೆಲವೊಬ್ಬರು ವಾದಿಸುತ್ತಾರೆ. ಆದರೂ, ಮ್ಯೂಚುಯಲ್‌ ನಿಧಿಯ ಕಾಲಯೋಜನೆಯ ಪ್ರಸಂಗವೂ ಸೇರಿದಂತೆ, ಆಧಾರ ಪತ್ರಗಳು ಅಥವಾ ಭದ್ರತಾ ಪತ್ರಗಳಿಗೆ ಸಂಬಂಧಿಸಿದ ಹಲವಾರು ಹಗರಣಗಳ ಪರಿಣಾಮವಾಗಿ ಕಂಡುಬಂದ ಗಣನೀಯ ಪ್ರಮಾಣದ ಟೀಕೆಗಳ ಅಡಿಯಲ್ಲಿ ಆ ಅಭಿಪ್ರಾಯವು ಕೇಳಿಬಂತು. ಅದರಲ್ಲೂ ನಿರ್ದಿಷ್ಟವಾಗಿ, ಐಯೋವಾ ವಿಶ್ವವಿದ್ಯಾಲಯದ ಅಧ್ಯಾಪಕ ಎರಿಕ್ ಲೀಯಿಂದ ಆಧಾರ ಸಮೇತವಾಗಿ ರೂಪಿಸಲ್ಪಟ್ಟಂತೆ ಮತ್ತು ವಾಲ್‌ ಸ್ಟ್ರೀಟ್‌ ಜರ್ನಲ್‌ನ ಜೇಮ್ಸ್‌ ಬ್ಲಾಂಡರ್ ಮತ್ತು ಚಾರ್ಲ್ಸ್‌ ಫೋರೆಲ್ಲೆಯವರಿಂದ ವರದಿ ಮಾಡಲ್ಪಟ್ಟಂತೆ ಆಯ್ಕೆಯ ಅನುದಾನಗಳನ್ನು ಹಿಂದಿನ ಒಂದು ತಾರೀಖೀನಿಂದಲೇ ಸಮ್ಮತವಾಗುವಂತೆ ಮಾಡಿದಾಗ ಇದು ಕಂಡುಬಂತು.

2006ರ ಇಂಥಾ ಪೂರ್ವಾನ್ವಯ ತಾರೀಖಿನ ಹಗರಣದಿಂದಾಗಿ ಸಾರ್ವಜನಿಕರ ಅಭಿಪ್ರಾಯದ ಮೇಲೆ ಮೂಡಿದ ಋಣಾತ್ಮಕ ಪ್ರಭಾವಕ್ಕಿಂತಲೂ ಮುಂಚೆಯೇ, ಆಯ್ಕೆಗಳ ಅಥವಾ ಹಣಕೊಟ್ಟು ಪಡೆವ ಹಕ್ಕುಗಳ ಬಳಕೆಯು ಹಲವಾರು ಟೀಕೆಗಳನ್ನು ಎದುರಿಸಬೇಕಾಯಿತು. ನಿರ್ದಿಷ್ಟವಾಗಿ ಒತ್ತಾಯಪೂರ್ವಕವಾದ ಹಾಗೂ ದೀರ್ಘಾವಧಿಯ ಒಂದು ವಾದವು ಸಾಂಸ್ಥಿಕ ಸ್ಟಾಕ್‌ ಮರುಖರೀದಿ ಯೋಜನೆಗಳೊಂದಿಗಿನ ಕಾರ್ಯನಿರ್ವಾಹಕರ ಆಯ್ಕೆಗಳ ಪರಸ್ಪರ ಕ್ರಿಯೆ ಅಥವಾ ಪ್ರಭಾವದ ಕುರಿತು ಕಾಳಜಿಯನ್ನು ಹೊಂದಿತ್ತು.

ಷೇರುದಾರರ ಹಿತಾಸಕ್ತಿಗಳಿಗೆ ಪ್ರತಿಯಾಗಿರುವ ವಿಧಾನವೊಂದರಲ್ಲಿ ಸ್ಟಾಕ್‌ನ ಮರುಖರೀದಿಗಳೊಂದಿಗೆ ಹೊಂದಿಕೆ ಮಾಡಿಕೊಂಡು ಆಯ್ಕೆಗಳನ್ನು ಅಳವಡಿಸಿಕೊಳ್ಳಬಹುದು ಎಂದು ಹಲವಾರು ಪ್ರಾಧಿಕಾರಗಳು (U.S.ನ ಫೆಡರಲ್ ರಿಸರ್ವ್‌ ಬೋರ್ಡ್‌ ಇಕನಾಮಿಸ್ಟ್‌ ವೇಸ್‌ಬೆನ್ನರ್ ಸೇರಿದಂತೆ) ನಿರ್ಣಯಿಸಿದವು. U.S.ನ ಅಗ್ರಗಣ್ಯ ಮತ್ತು ಕಳಪೆ ಮಟ್ಟದ 500 ಕಂಪನಿಗಳಿಗಾಗಿರುವ ಸಾಂಸ್ಥಿಕ ಸ್ಟಾಕ್‌ಗಳ ಮರುಖರೀದಿಯು, ಆಯ್ಕೆಗಳ ಭಾಗಶಃ ಪ್ರಭಾವದ ಕಾರಣದಿಂದಾಗಿ 2006ರ ಅಂತ್ಯಭಾಗದಲ್ಲಿನ ವಾರ್ಷಿಕ ದರದಲ್ಲಿ 500 ಶತಕೋಟಿ $ನಷ್ಟು ಪ್ರಮಾಣಕ್ಕೆ ಏರಿತ್ತು ಎಂಬುದು ಈ ಲೇಖಕರ ವಾದವಾಗಿತ್ತು.

ಆಯ್ಕೆ/ಮರು ಖರೀದಿಯ ಚರ್ಚಾವಿಷಯಗಳ ಕುರಿತಾದ ಶೈಕ್ಷಣಿಕ ಕೃತಿಗಳ ಸಂಗ್ರಹರೂಪವನ್ನು 2006ರಲ್ಲಿ ಜಾರಿ ಮಾಡಲಾದ ಎಂ. ಗಂಪೋರ್ಟ್‌ ಬರೆದಿರುವ ಸ್ಕ್ಯಾಂಡಲ್‌ ಎಂಬ ಅಧ್ಯಯನದಲ್ಲಿ ಭಾಗದಲ್ಲಿ ಸೇರಿಸಲಾಗಿದೆ.

ಲೆಕ್ಕಪತ್ರಗಾರಿಕೆಯ ಬದಲಾವಣೆಗಳು ಹಾಗೂ ಆಡಳಿತಾತ್ಮಕ ಚರ್ಚಾವಿಷಯಗಳ ಒಂದು ಸಂಯೋಜನೆಯಿಂದಾಗಿ, 2006ನೇ ವರ್ಷವು ಸಾಗುತ್ತಿರುವಂತೆ ಆಯ್ಕೆಗಳು ಸಂಭಾವನೆಯ ಒಂದು ಕಡಿಮೆ ಜನಪ್ರಿಯ ಮಾರ್ಗವಾಗಿ ಮಾರ್ಪಟ್ಟವು, ಮತ್ತು ಮರುಖರೀದಿಗಳ ಬಹಳಷ್ಟು ಪರ್ಯಾಯ ಅನುಷ್ಠಾನಗೊಳಿಸುವಿಕೆಗಳು "ಮುಕ್ತ ಮಾರುಕಟ್ಟೆ"ಯ ನಗದು ಮರುಖರೀದಿಗಳ ಪ್ರಾಬಲ್ಯಕ್ಕೆ ಸವಾಲೊಡ್ಡಿ ನಿಂತವು. ಷೇರಿನ ಮರುಖರೀದಿ ಯೋಜನೆಯೊಂದರ ಅನುಷ್ಠಾನಗೊಳಿಸುವಿಕೆಯ ಆಯ್ಕೆಯ ಮಾರ್ಗವಾಗಿ ಇದನ್ನು ಪರಿಗಣಿಸಲಾಯಿತು.

ಇದನ್ನೂ ನೋಡಿರಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

  1. ಸಾಂಸ್ಥಿಕ ಆಡಳಿತದ ಕುರಿತಾದ ವಿಭಿನ್ನ ಸೈದ್ಧಾಂತಿಕ ಯಥಾದೃಷ್ಟ ರೂಪಗಳ ಒಂದು ಉತ್ತಮ ಸ್ಥೂಲಸಮೀಕ್ಷೆಗಾಗಿ ನೋಡಿ: Chapter 15ನೇ ಅಧ್ಯಾಯ ಡಿಗ್‌ನಾಮ್, ಎ ಮತ್ತು ಲೌರಿ, ಜೆ ಬರೆದಿರುವ ಕಂಪನಿ ಲಾ (2006), ಆಕ್ಸ್‌ಫರ್ಡ್‌ ಯುನಿವರ್ಸಿಟಿ ಪ್ರೆಸ್‌ ISBN 978-0-19-928936-3
  2. ಸಾಂಸ್ಥಿಕ ಅಡಳಿತದ ಅಂತಾರಾಷ್ಟ್ರೀಯ ನಿಯತಕಾಲಿಕ, "ಎ ಬೋರ್ಡ್‌ ಕಲ್ಚರ್ ಆಫ್ ಕಾರ್ಪೊರೇಟ್‌ ಗವರ್ನನ್ಸ್‌, ಸಂಪುಟ 6 ಸಂಚಿಕೆ 3 (2003)
  3. ಕ್ರಾಫರ್ಡ್‌, ಕರ್ಟಿಸ್‌ ಜೆ. (2007). ದಿ ರಿಫಾರ್ಮ್‌ ಆಫ್‌ ಕಾರ್ಪೊರೇಟ್‌ ಗವರ್ನನ್ಸ್‌: ಮೇಜರ್‌ ಟ್ರೆಂಡ್ಸ್‌ ಇನ್‌ ದಿ U.S. ಕಾರ್ಪೊರೇಟ್‌ ಬೋರ್ಡ್‌ರೂಮ್, 1977-1997. ಡಾಕ್ಟರ್‌ ಪದವಿಯ ಪ್ರೌಢಪ್ರಬಂಧ, ಕೆಪೆಲ್ಲಾ ವಿಶ್ವವಿದ್ಯಾಲಯ. [೧] Archived 2017-06-02 ವೇಬ್ಯಾಕ್ ಮೆಷಿನ್ ನಲ್ಲಿ.
  4. SSRN-ಗುಡ್‌ ಕಾರ್ಪೊರೇಟ್‌ ಗವರ್ನನ್ಸ್‌: ಆನ್ ಇನ್‌ಸ್ಟ್ರುಮೆಂಟ್‌ ಫಾರ್ ವೆಲ್ತ್‌ ಮ್ಯಾಕ್ಸಿಮೈಸೇಷನ್ -ವ್ರಜ್‌ಲಾಲ್ ಸಪೋವಾಡಿಯಾ
  5. ಭಗತ್ & ಬ್ಲಾಕ್‌, "ದಿ ಅನ್‌ಸರ್ಟನ್‌ ರಿಲೇಷನ್‌ಷಿಪ್ ಬಿಟ್ವೀನ್‌ ಬೋರ್ಡ್‌ ಅಂಡ್‌ ಫರ್ಮ್‌ ಪರ್ಫಾಮೆನ್ಸ್‌", 54 ಬಿಸಿನೆಸ್‌ ಲಾಯರ್‌)
  6. ನ್ಯಾಷನಲ್ ಅಸೋಸಿಯೇಷನ್ ಆಫ್ ಕಾರ್ಪೊರೇಟ್ ಡಿರೆಕ್ಟರ್ಸ್‌ (NACD) – ನಿರ್ದೇಶಕರ ಮಾಸಪತ್ರಿಕೆ, “ಎನ್‌ಲೈಟನ್ಡ್‌ ಬೋರ್ಡ್ಸ್‌: ಆಕ್ಷನ್ ಬಿಯಾಂಡ್ ಆಬ್ಲಿಗೇಷನ್, ಸಂಪುಟ 31, ಸಂಖ್ಯೆ 12 (2007), ಪುಟ 13. [೨] Archived 2012-01-13 ವೇಬ್ಯಾಕ್ ಮೆಷಿನ್ ನಲ್ಲಿ.
  7. Enriques L, Volpin P. (2007). "Corporate governance reforms in Continental Europe" (PDF). Journal of Economic Perspectives. 21 (1): 117–140. Archived from the original (PDF) on 2020-04-27. Retrieved 2009-08-13.
  8. Theyrule.net
  9. ದಿ ಡಿಸ್ನಿ ಡಿಸಿಷನ್ ಆಫ್ 2005 ಅಂಡ್ ದಿ ಪ್ರೆಸಿಡಂಟ್ ಇಟ್ ಸೆಟ್ಸ್ ಫಾರ್ ಕಾರ್ಪೊರೇಟ್ ಗವರ್ನನ್ಸ್‌ ಅಂಡ್ ಫಿಡುಸಿಯರಿ ರೆಸ್ಪಾನ್ಸಿಬಿಲಿಟಿ, ಕಕ್ರೆಜಾ, ಅಕಿನ್ ಗಂಪ್, ಆಗಸ್ಟ್ 2005
  10. "TD/B/COM.2/ISAR/31" (PDF). Archived from the original (PDF) on 2017-01-26. Retrieved 2009-11-13.
  11. "International Standards of Accounting and Reporting, Corporate Governance Disclosure". UNCTAD. Archived from the original on 2008-11-23. Retrieved 2008-11-09.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

ಹೊರಗಿನ ಕೊಂಡಿಗಳು[ಬದಲಾಯಿಸಿ]