ಸಮೀರಾ ರೆಡ್ಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಸಮೀರಾ ರೆಡ್ಡಿ
ಸಮೀರಾ ರೆಡ್ಡಿ
Bornಡಿಸೆಂಬರ್ ೧೪,೧೯೮೦
ರಾಜಮಹೇಂದ್ರಿ
Nationalityಭಾರತೀಯ
Occupationನಟ
Spouseಅಕ್ಷಯ್ ವರ್ದೆ

ಸಮೀರಾ ರೆಡ್ಡಿ (ಜನನ ೧೪ ಡಿಸೆಂಬರ್ ೧೯೮೦) ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ ಭಾರತೀಯ ನಟಿ. ಅವರು ಕೆಲವು ತೆಲುಗು ಮತ್ತು ತಮಿಳು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

೨೦೦೨ರ ಚಿತ್ರ ಮೈನೆ ದಿಲ್ ತುಝ್‌ಕೋ ದಿಯಾ ದ ಮೂಲಕ ಸಮೀರಾ ರೆಡ್ಡಿ ಅವರು ಚಿತ್ರರಂಗ ಪ್ರವೇಶ ಮಾಡಿದರು. ಡರ್‌ನಾ ಮನಾ ಹೈ (೨೦೦೩), ಅನಿಲ್_ಕಪೂರ್ ಜೊತೆಗಿನ ಮುಸಾಫಿರ್ (೨೦೦೪), ಜೈ ಚಿರಂಜೀವಾ (೨೦೦೫), ಟ್ಯಾಕ್ಸಿ ಸಂಖ್ಯೆ ೯೨೧೧(೨೦೦೬), ಅಶೋಕ್ (೨೦೦೬), ರೇಸ್ (೨೦೦೮), ವಾರಣಮ್ ಆಯಿರಮ್ (೨೦೦೮) , ಡಿ ದಾನಾ ಡಾನ್ (೨೦೦೯), ಆಕ್ರೋಶ್ (೨೦೧೦), ವೆಟ್ಟೈ (೨೦೧೨) ಮತ್ತು ತೇಜ಼್ (೨೦೧೨)

ಬಾಲ್ಯ[ಬದಲಾಯಿಸಿ]

೧೪ ಡಿಸೆಂಬರ್ ೧೯೮೦ರಂದು ಆಂಧ್ರ ಪ್ರದೇಶದ ರಾಜಮಂಡ್ರಿಯಲ್ಲಿ ತೆಲುಗು ಕುಟುಂಬದಲ್ಲಿ ಸಮೀರಾ ಜನಿಸಿದರು. [೧] ಸಮೀರಾ ತಾಯಿ ನಕ್ಷತ್ರ ರೆಡ್ಡಿಯವರು ಜೀವವಿಜ್ಞಾನಿ ಮತ್ತು ಒಂದು NGO ಯೊಂದಿಗೆ ಕೆಲಸ ಮಾಡಿದರು.[೨]ಅವಳಿಗೆ ಇಬ್ಬರು ಒಡಹುಟ್ಟಿದವರು, ಮಾಜಿ ವಿಜೆ ಮತ್ತು ಸೂಪರ್‌ಮಾಡೆಲ್ ಮೇಘನಾ ರೆಡ್ಡಿ ಅವರು ಮುಂಬೈನ ಮಹೀಮ್ನ ಬಾಂಬೆ ಸ್ಕಾಟಿಷ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು ಮತ್ತು ಸಿಡೆನ್ಹಾಮ್ ಕಾಲೇಜ್ನಿಂದ ಪದವಿ ಪಡೆದರು.[೩]

ಸಮೀರ್ ತನ್ನನ್ನು ತಾನು "ಕುಟುಂಬದಲ್ಲಿ ಕುರೂಪಿ ಮಗು" ಎಂದು ಬಣ್ಣಿಸಿಕೊಂಡಿದ್ದಾರೆ. ನಾನು 19 ರ ವಯಸ್ಸಿನವರೆಗೆ ಕನ್ನಡಕ ಧರಿಸಿದ ಧಡೂತಿ ಹುಡುಗಿಯಾಗಿದ್ದೆ" ಎಂದು ಪತ್ರಿಕೆಯ ಸಂದರ್ಶನದಲ್ಲಿ ಉಲ್ಲೇಖಿಸುತ್ತಾಳೆ.[೪]


ವೃತ್ತಿ[ಬದಲಾಯಿಸಿ]

ಸಮೀರಾ ಮೊದಲಿಗೆ ಗಝಲ್ ಗಾಯಕ ಪಂಕಜ್ ಉಧಸ್ ಅವರ "ಔರ್ ಅಹಿಸ್ಟಾ" ಸಂಗೀತ ವೀಡಿಯೋದಲ್ಲಿ ೧೯೯೭ರಲ್ಲಿ ಕಾಣಿಸಿಕೊಂಡರು.[೫] ೨೦೦೦ರ ದಶಕದ ಆರಂಭದಲ್ಲಿ ಸಮೀರಾ ತಮಿಳು ಚಿತ್ರದಲ್ಲಿ ನಟಿಯಾಗಿ ಆಯ್ಕೆಯಾದರು. ಆದರೆ ಆ ಚಿತ್ರದಿಂದ ಹೊರನಡೆಯಬೇಕಾಯಿತು. [೬] ಮಾಡೆಲಿಂಗ್ ಅನುಭವದಿಂದ ಅವರು ಬಾಲಿವುಡ್ ಗಮನವನ್ನು ಸೆಳೆದರು. ೨೦೦೨ರ ಹಿಂದಿ ಚಿತ್ರ ಮೈನೆ ದಿಲ್ ತುಜ್ಕೊ ದಿಯದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದರು. ೨೦೦೪ರಲ್ಲಿ, ಅವರು ಮುಸಾಫಿರ್ ಅನಿಲ್ ಕಪೂರ್, ಸಂಜಯ್ ದತ್ ಮತ್ತು ಕೋಯ್ನಾ ಮಿತ್ರರ ಎದುರು ಕಾಣಿಸಿಕೊಂಡರು.

ಸಮೀರಾ ರೆಡ್ಡಿ ಗೌತಮ್ ಮೆನನ್ ನಿರ್ದೇಶಿಸಿದ ತಮಿಳು ಚಲನಚಿತ್ರ ವಾರಣಮ್ ಆಯಿರಾಮ್ನಲ್ಲಿ ನಾಯಕಿಯಾಗಿ ಸೂರ್ಯ ಶಿವಕುಮಾರ್ ಎದುರು ನಟಿಸಿದರು. ಭಾರಿ ದೊಡ್ಡ ಗೆಲುವು ಸಾಧಿಸಿದ ಈ ಚಿತ್ರದಲ್ಲಿ ಸಮೀರಾ ಅಭಿನಯ ಬಲು ಜನಮನ್ನಣೆ ಗಳಿಸಿತು. ಗೌತಮ್ ಮೆನನ್ ಅವರ ಎರಡು ಚಿತ್ರಗಳಿಗಾಗಿ ಅವರು ಸಹಿ ಹಾಕಿದರು; ಯೋಹನ್ ಆದ್ಯಯಾಮ್ ಒಂಡ್ರೂ ಮತ್ತು ಧ್ರುವ ನಕ್ಷತ್ರಂ. ಆದರೆ ಅವರನ್ನು ಅಂತಿಮವಾಗಿ, ಈ ಎರಡು ಚಿತ್ರಗಳಿಂದ ಕೈಬಿಡಲಾಯಿತು

ಮಾಡೆಲಿಂಗ್[ಬದಲಾಯಿಸಿ]

ಸಮೀರಾ ರೆಡ್ಡಿ ೨೦೧೨ರಲ್ಲಿ ಮಿಸ್ ಶ್ರೀಲಂಕಾ ಆನ್ಲೈನ್ ಸ್ಪರ್ಧೆಯ ನ್ಯಾಯಾಧೀಶರಾಗಿದ್ದರು. ಹಲವು ಬಾರಿ ಮಾರ್ಜಾಲ ನಡಿಗೆಯ ರಾಂಪ್ ಷೋ[೭] ಗಳಲ್ಲಿ ಭಾಗವಹಿಸಿ ಮನ್ನಣೆ ಪಡೆದ [೮]

ಬದುಕು[ಬದಲಾಯಿಸಿ]

ಸಮೀರಾ ರೆಡ್ಡಿ ಅಮೇರಿಕನ್ ಟಾಕ್ ಶೋ ನಲ್ಲಿ ಜನಪ್ರಿಯರಾದ ಓಪ್ರಾ ವಿನ್ಫ್ರೇ ಅವರ ದೊಡ್ಡ ಅಭಿಮಾನಿ. ಪರ್ಮೇಶ್ವರ್ ಗೋದ್ರೆಜ್ ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ ಓಪ್ರಾ ವಿನ್ಫ್ರೇ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಓಪ್ರಾ ಅವರನ್ನು ಭೇಟಿಯಾದರು. ಸಮೀರಾ ರೆಡ್ಡಿ ಸೀರೆ ಧರಿಸಿ ಮಾಡೆಲಿಂಗ್‌ನಲ್ಲಿ ಜನಪ್ರಿಯರಾದುದರಿಂದ[೯] , ಓಪ್ರಾ ವಿನ್ಫ್ರೇ ಅವರು ಅಮೇರಿಕೆಗೆ ತೆರಳುವ ಮುನ್ನ , ಸೀರೆಯನ್ನೇ ಉಡುಗೊರೆಯಾಗಿ ನೀಡಿದರು.[೧೦] [೧೧][೧೨]

ರೆಡ್ಡಿ 21 ಜನವರಿ 2014 ರಂದು ಉದ್ಯಮಿಯಾದ ಅಕ್ಷಯ್ ವಾರ್ಡೆ ಅವರನ್ನು ವಿವಾಹವಾದರು. ಇದು ಸಾಂಪ್ರದಾಯಿಕ ಮಹಾರಾಷ್ಟ್ರ ವಿವಾಹವಾಗಿತ್ತು.[೧೩] ಸಮೀರಾ ೨೪ ಮೇ ೨೦೧೫ ರಂದು ಪುತ್ರನಿಗೆ ಜನ್ಮ ನೀಡಿದರು.[೧೪] [೧೫]


[೧೬] [೧೭]

ಕನ್ನಡ ಚಿತ್ರಗಳು[ಬದಲಾಯಿಸಿ]

ಹೆಚ್ಚಾಗಿ ಹಿಂದಿ, ತೆಲುಗು, ತಮಿಳು ಮತ್ತು ಬೆಂಗಾಲಿ ಚಿತ್ರಗಳಲ್ಲಿ ನಟಿಸುವ ಸಮೀರಾ ವರದ ನಾಯಕ ಚಿತ್ರದಲ್ಲಿ ಸುದೀಪ್ರಿಗೆ ಜೋಡಿಯಾಗಿ ನಟಿಸಿದರು. ಸಮೀರಾರೊಂದಿಗೆ ನಟಿಸಿದ್ದು ಉತ್ತಮ ಅನುಭವ ಎಂದು ಸುದೀಪ್ ಹೊಗಳಿದ್ದರು. ಬಹುತೇಕ ಚಿತ್ರಗಳಲ್ಲಿ ಮಾದಕ ಪಾತ್ರಗಳಲ್ಲಿಯೇ ಕಾಣಿಸಿಕೊಂಡ ಸಮೀರಾ ತಾವು ನಟಿಸಿದ ಚಿತ್ರಗಲ ಬಗ್ಗೆ ತಮಗೆ ಯಾವುದೇ ಹಿಂಜರಿಕೆ ಇಲ್ಲ ಎಂದು ಹೇಳಿಕೊಂಡಿದ್ದರು. [೧೮]


ಉಲ್ಲೇಖಗಳು[ಬದಲಾಯಿಸಿ]

  1. http://www.mid-day.com/smd/2002/sep/31427.htm
  2. http://www.mid-day.com/smd/2002/sep/31427.htm
  3. http://www.mid-day.com/yourlife/2006/feb/131073.htm
  4. https://web.archive.org/web/20120324091034/
  5. "ಆರ್ಕೈವ್ ನಕಲು". Archived from the original on 2012-03-24. Retrieved 2018-05-27.
  6. http://timesofindia.indiatimes.com/delhi-times/Why-star-siblings-dont-make-it-big/articleshow/2766766.cms
  7. https://www.pinkvilla.com/entertainment/event/sameera-reddy-walks-ramp-neeta-lulla-lakme-fashion-week[ಶಾಶ್ವತವಾಗಿ ಮಡಿದ ಕೊಂಡಿ]
  8. https://www.youtube.com/watch?v=2ry91tQ_Aug
  9. http://www.dnaindia.com/entertainment/report_i-love-the-bombshell-tag-sameera-reddy_1353590
  10. http://www.adaderana.lk/biznews.php?nid=621
  11. "ಆರ್ಕೈವ್ ನಕಲು". Archived from the original on 2014-02-02. Retrieved 2018-05-27.
  12. "ಆರ್ಕೈವ್ ನಕಲು". Archived from the original on 2012-11-10. Retrieved 2018-05-27.
  13. http://news.biharprabha.com/2013/12/sameera-reddy-and-akshai-varde-to-marry-in-april-2014/
  14. http://www.bollywoodhungama.com/news/9957773/Motherhood-is-very-humbling---Sameera-Reddy
  15. http://timesofindia.indiatimes.com/entertainment/hindi/bollywood/news-interviews/Sameera-Reddy-ties-the-knot-today/articleshow/29141802.cms
  16. https://www.youtube.com/watch?v=0wl-1D3SAT8
  17. https://www.youtube.com/watch?v=BeM2PZf8mhw
  18. "ಆರ್ಕೈವ್ ನಕಲು". Archived from the original on 2018-04-30. Retrieved 2018-05-27.

ಕೊಂಡಿಗಳು[ಬದಲಾಯಿಸಿ]