ಸನ್ ಮೈಕ್ರೋಸಿಸ್ಟಮ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸನ್ ಮೈಕ್ರೋಸಿಸ್ಟಮ್ಸ್ ಲಾಂಛನ

ಸನ್ ಮೈಕ್ರೋಸಿಸ್ಟಮ್ಸ್ ಸ್ಟ್ಯಾನ್‌ಫರ್ಡ್ ವಿಶ್ಯವಿದ್ಯಾಲಯದ ೪ ಮಿತ್ರರು ಸ್ಥಾಪಿಸಿದ ಗಣಕಯಂತ್ರ ತಂತ್ರಜ್ಞಾನ ಕಂಪನಿ. * ಎಂಡ್ರಿಯಾಸ್ ಬೆಕ್ಟೊಲ್ಲ್‌ಶೈಮ್, ಬಿಲ್ ಜಾಯ್, ಸ್ಕಾಟ್ ಮ್ಯಕ್‌ನೀಲಿ ಮತ್ತು ವಿನೋದ್ ಖೊಸ್ಲಾ. ಸನ್(SUN), ಸ್ಟ್ಯಾನ್‌ಫರ್ಡ್ ಯುನಿವರ್ಸಿಟಿ ನೆಟ್‌ವರ್ಕ್ (Stanford University Network) ಎಂಬ ಸಾಲಿನ ಸಂಕ್ಷಿಪ್ತ ರೂಪ. ಸನ್ ಮೈಕ್ರೋಸಿಸ್ಟಮ್ಸ್ ಸಂಸ್ಥೆಯ ಪ್ರಸಿದ್ದ ಉತ್ಪನ್ನಗಳೆಂದರೆ ಗಣಕಯಂತ್ರಗಳು, ಸ್ಪಾರ್ಕ್ ಸೂಕ್ಷ್ಮ ಸಂಸ್ಕರಣ ಸಾಧನ (ಮೈಕ್ರೋ ಪ್ರೋಸಸರ್), ಸೊಲಾರಿಸ್ ಕಾರ್ಯಾಚರಣೆ ವ್ಯವಸ್ಥೆ(ಆಪರೇಟಿಂಗ್ ಸಿಸ್ಟಮ್), ಜಾವಾ ವಸ್ತು ಕೇಂದ್ರಿತ ಗಣಕಯಂತ್ರ ಕ್ರಮವಿಧಿ ರಚನಾ ಭಾಷೆ(ಆಬ್ಜೆಕ್ಟ್ ಒರಿಯಂಟೆಡ್ ಕಂಪ್ಯೂಟರ್ ಪ್ರೊಗ್ರಾಮಿಂಗ್ ಲ್ಯಾಂಗ್ವೇಜ್), ಸ್ಟಾರ್ ಆಫಿಸ್ ಕಚೇರಿ ಅನ್ವಯ ತಂತ್ರಾಂಶ ಸಮೂಹ (ಆಫಿಸ್ ಅಪ್ಲಿಕೇಷನ್ ಸಾಫ್ಟ್‌ವೇರ್ ಸೂಟ್). ಈ ಸಂಸ್ಥೆಯ ಕೆಂದ್ರ ಕಾರ್ಯಾಲಯ ಅಮೇರಿಕಾ ಸಂಯುಕ್ತ ಸಂಸ್ಥಾನದ ಕ್ಯಾಲಿಪೋರ್ನಿಯಾ ರಾಜ್ಯದ ಸ್ಯಾಂಟಾಕ್ಲಾರಾದಲ್ಲಿದೆ.

ಸನ್ ಮೈಕ್ರೋಸಿಸ್ಟಮ್ಸ್ ಕಂಪನಿಯ ಸ್ಥಾಪಕರು