ಸದಸ್ಯ:Veereshgt/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುಧೋಳ್ ನಾಯಿ[ಬದಲಾಯಿಸಿ]

ಮುಧೊಳ್ ನಾಯಿ

ಮುಧೋಳ್ ಹೌಂಡ್ ಎಂದು ಕರೆಯಲ್ಪಡುವ ಕಾರವಾನ್ ಹೌಂಡ್.  ಗರಿಯನ್ನು ಹೊಂದಿರುವ ವೈವಿಧ್ಯವನ್ನು ಸಾಮಾನ್ಯವಾಗಿ ಪಾಶ್ಮಿ ಎಂದು ಕರೆಯಲಾಗುತ್ತದೆ . ಇದನ್ನು ಕಾರ್ವಾನಿ ಎಂದೂ ಕರೆಯುತ್ತಾರೆ . ಭಾರತದ ಕರ್ನಾಟಕ ರಾಜ್ಯದ ಗ್ರಾಮಸ್ಥರಲ್ಲಿ ಇದು ಸಾಮಾನ್ಯ ಸಾಕು , ಇದನ್ನು ಬೇಟೆಯಾಡಲು ಮತ್ತು ಕಾವಲುಗಾಗಿ ಬಳಸುತ್ತಾರೆ. ಮುಧೋಳ್ ನಾಯಿಗೆ ಕ್ಯಾರವಾನ್ ನಾಯಿ ಎಂದೂ ಕರೆಯಲಾಗುತ್ತದೆ. ಭಾರತೀಯ ಅಂಚೆ ಇಲಾಖೆಯು 9 ಜೂನ್ ೨೦೦೯ ರಂದು ಮುಧೋಳ್ ನಾಯಿಯ ನೆನಪಿಗಾಗಿ ರೂ. ೫ ರ ಮುಖ ಬೆಲೆಯ ಅಂಚೆ ಚೀಟಗಳನ್ನು ಮುದ್ರಿಸಿ, ಬಿಡುಗಡೆ ಮಾಡಿತು. ಮುಧೋಳ್ ನಾಯಿಯ ಜೊತೆ ಮತ್ತೆ ಇನ್ನಿತರ ಮೂರು ನಾಯಿಯ ತಳಿಗಳ ನೆನಪಿನಲ್ಲಿ ಹಿಮಾಲಯನ್ ಕುರಿ ನಾಯಿ (ರೂ. ೫ ಕ್ಕೆ), ರಾಂಪುರ ನಾಯಿ (ರೂ. ೫ ಕ್ಕೆ) ಹಾಗೂ ರಾಜಪಾಲಯo (ರೂ. ೧೫ ಕ್ಕೆ) ಮುದ್ರಿಸಿ ಬಿಡುಗಡೆ ಮಾಡಿತು. ಭಾರತದ ಕೆನಲ್ ಕ್ಲಬ್ ಮತ್ತು ಭಾರತೀಯ ರಾಷ್ಟ್ರೀಯ ಕೆನಲ್ ಕ್ಲಬ್  ವಿವಿಧ ತಳಿ ಹೆಸರಿನಡಿಯಲ್ಲಿ ತಳಿ ಗುರುತಿಸುತ್ತಾರೆ. ಕೆಸಿಐ ಇದನ್ನು ಕಾರವಾನ್ ಹೌಂಡ್ ಎಂದು ನೋಂದಾಯಿಸಿದರೆ, ಐಎನ್‌ಕೆಸಿ ಮುಧೋಲ್ ಹೌಂಡ್ ಹೆಸರನ್ನು ಬಳಸುತ್ತದೆ.

ಕರ್ನಾಟಕದ ಮುಧೋಲ್ ಪಟ್ಟಣ ಮತ್ತು ಸುತ್ತಮುತ್ತಲಿನ ಸುಮಾರು 750 ಕುಟುಂಬಗಳು ನಾಯಿಮರಿಗಳನ್ನು ಮಾರಾಟ ಮಾಡಲು ಈ ತಳಿಯನ್ನು ಬೆಳೆಸುತ್ತಿವೆ. ಕೇರಳ, ಕರ್ನಾಟಕ, ತಮಿಳುನಾಡು ರಾಜ್ಯಗಳ ಕಾಫಿ ಹಾಗೂ ಟೀ ಪ್ಲಾಂಟರ್ ಗಳು, ಎಸ್ಟೇಟ್ ನ್ನು ಹೊಂದಿರುವ ವ್ಯಕ್ತಿಗಳಿಂದ ಮುಧೋಳ ತಳಿಯ ನಾಯಿಗಳಿಗೆ ಹೆಚ್ಚು ಬೇಡಿಕೆ ಬಂದಿವೆ. ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸುವುದಕ್ಕೆ ಹಾಗೂ ಎಸ್ಟೇಟ್ ಗಳ ಕಾವಲಿಗೆ ಮಾಲಿಕರು ಮುಧೋಳ ತಳಿಯ ನಾಯಿಗಳಿಗೆ ಹೆಚ್ಚು ಆದ್ಯತೆ ನೀಡಲು ಪ್ರಾರಂಭಿಸಿದ್ದಾರೆ. ಮುಧೋಳ ತಳಿಯ ನಾಯಿಗಳ ಆಕ್ರಮಣಕಾರಿ ಪ್ರಕೃತಿ, ಬೇಟೆಯ ಸಾಮರ್ಥ್ಯ, ಮಾಲಿಕನಿಗೆ ತೋರುವ ನಿಷ್ಠೆ ಈ ಎಲ್ಲಾ ಅಂಶಗಳೂ ಸಹ ಮುಧೋಳ ನಾಯಿಗಳಿಗೆ ಹೆಚ್ಚಿನ ಜನಪ್ರಿಯತೆ ತಂದುಕೊಂಟ್ಟಿದ್ದು, ಕಡಿಮೆ ಖರ್ಚಿನಲ್ಲಿ ನಿರ್ವಹಣೆ ಮಾಡಬಹುದಾಗಿರುವುದೂ ಸಹ ಮಾಲಿಕರಿಗೆ ಮುಧೋಳ ನಾಯಿಗಳನ್ನು ಹೆಚ್ಚು ಹೆಚ್ಚು ಆಯ್ಕೆ ಮಾಡುವುದಕ್ಕೆ ಕಾರಣವಾಗುತ್ತಿದೆ.

ಬಾಗಲಕೋಟೆಯ ಮುಧೋಳದಲ್ಲಿರುವ ತಿಮ್ಮಾಪುರದಲ್ಲಿನ ಸಿಆರ್ ಐಸಿ ಮುಧೋಳ ತಳಿ ಅಭಿವೃದ್ಧಿಯ ಅಧಿಕೃತ ಕೇಂದ್ರವಾಗಿದ್ದು, ಕಳೆದ ೫ ವರ್ಷಗಳಲ್ಲಿ ಈ ತಳಿಗಳಿಗಾಗಿ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ಸಿಆರ್ ಐಸಿಯ ಅಧಿಕಾರಿಗಳು  ಈ ಕೇಂದ್ರದಿಂದ ಪ್ರತಿ ವರ್ಷವೂ ೧೩೦-೧೪೦ ಕ್ಕಿಂತ ಹೆಚ್ಚು ನಾಯಿಮರಿಗಳು ಮಾರಾಟವಾಗುತ್ತಿದ್ದು ಈ ಪೈಕಿ ಶೇ.೬೦ ರಷ್ಟು ತಮಿಳುನಾಡು, ಕೇರಳದ ಎಸ್ಟೇಟ್ ಮಾಲಿಕರಾಗಿದ್ದಾರೆ. ಒಂದು ಜೊತೆ ಮುಧೋಳ ನಾಯಿಮರಿಗಳನ್ನು ೧೯,೦೦೦ ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ.  ಗಂಡು ಮರಿಗಳಿಗೆ ೧೦,೦೦೦ ರೂಪಾಯಿ ಬೆಲೆ ನಿಗದಿ ಮಾಡಿದ್ದರೆ, ಹೆಣ್ಣು ಮರಿಗಳಿಗೆ ೯೦೦೦ ರೂಪಾಯಿ ನಿಗದಿ ಮಾಡಲಾಗಿದೆ. ಭಾರತದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಅವರ 'ಮನ್ ಕಿ ಬಾತ್' ಅಲ್ಲಿ ಮುಧೋಳ್ ನಾಯಿಯ ಬಗ್ಗೆ ಉಲ್ಲೇಖ ಮಾಡಿರುತ್ತಾರೆ

ದೇಶ ಕಾಯುವ ಕೆಲಸದಲ್ಲಿ[ಬದಲಾಯಿಸಿ]

ಮುಧೋಳ ನಾಯಿ, ಗಡಿ-ವಿದೇಶಕ್ಕೂ ಲಗ್ಗೆ ಇಟ್ಟಿದೆ. ದೇಶದ ಮಿಲಿಟರಿ ಸೇವೆಗೆ ಆಯ್ಕೆಯಾಗಿದೆ. 2018ರಿಂದ ಮುಧೋಳ ತಳಿಯ 9 ನಾಯಿಗಳು ಮಿಲಿಟರಿ ಭದ್ರತಾ ಪಡೆಯಲ್ಲಿ ತರಬೇತಿ ಹೊಂದಿ ಅಪರಾಧ ಪತ್ತೆ ದಳದಲ್ಲಿ ಕೆಲಸ ಮಾಡುತ್ತಿವೆ. ಅಲ್ಲದೇ ರಾಜಸ್ತಾನದ ಎಸ್‌ಎಸ್‌ಬಿ (ಅಲ್ಲಿನ ಭದ್ರತಾ ಪಡೆ)ಗೆ ೨, ರಾಜ್ಯದ ಸಿಆರ್‌ಪಿಎಫ್‌ಗೆ ೨ ಶ್ವಾನ ಆಯ್ಕೆಗೊಂಡು, ಈಗಾಗಲೇ ಅತ್ಯುತ್ತಮವಾಗಿ (ಎಲ್ಲ ತಳಿಗಿಂತಲೂ ಉತ್ತಮವಾಗಿ) ಕೆಲಸ ಮಾಡುತ್ತಿವೆ. ಈಚೆಗೆ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ)ಗೂ ಆಯ್ಕೆಗೊಂಡಿದ್ದು, ನಾಲ್ಕು ಮರಿಗಳು ತೆರಳಲು ಸಿದ್ಧಗೊಂಡಿವೆ. ಮನೆ, ಕಾಫಿ ಎಸ್ಟೇಟ್‌, ಕುರಿ ಹಿಂಡುಗಳನ್ನು ಕಾಯಲು, ಒಟ್ಟಿನಲ್ಲಿ ಭದ್ರತೆ ಒದಗಿಸಲು ಮುಧೋಳ ನಾಯಿ ಹೇಳಿ ಮಾಡಿಸಿದ ತಳಿ.

ಶ್ವಾನ ಸಾಕಣಿಕೆಯೇ ಜೀವನ[ಬದಲಾಯಿಸಿ]

ಮುಧೋಳ ತಳಿಯ ಶ್ವಾನಗಳ ಮಾರಾಟದಿಂದ ಜಿಲ್ಲೆಯ ಸುಮಾರು ೨೦ಕ್ಕೂ ಹೆಚ್ಚು ಕುಟುಂಬಗಳು ಜೀವನ ನಿರ್ವಹಣೆ ಮಾಡುತ್ತಿವೆ. ಲೋಕಾಪುರದ ವೆಂಕಣ್ಣ ದುಂಡಪ್ಪ ನಾವದಗಿ ಅವರು ಅವರ ಮುತ್ತಜ್ಜನ ಕಾಲದಿಂದಲೂ ಮುಧೋಳ ಶ್ವಾನ ಸಾಕಾಣಿಕೆ ಮಾಡುತ್ತಿದ್ದಾರೆ. ದೇಶದ ಹಲವು ಭಾಗದಲ್ಲಿ ಶ್ವಾನ ಪ್ರದರ್ಶನ ಮಾಡಿ, ದ್ವಿತೀಯ ಬಹುಮಾನ ಕೂಡ ಪಡೆದಿದ್ದಾರೆ. ಅವರ ಮನೆತುಂಬ ಮುಧೋಳ ನಾಯಿಗಳು ಮತ್ತು ಅವುಗಳಿಗೆ ಬಂದ ಪ್ರಶಸ್ತಿಗಳು ಕಾಣಸಿಗುತ್ತವೆ. ಐದು ಗಂಡು, ಐದು ಹೆಣ್ಣು ನಾಯಿ ಸಾಕಿರುವ ಅವರು, ಅವುಗಳನ್ನು ಕ್ರಾಸಿಂಗ್‌ ಮಾಡಿ, ಮರಿಗಳ ಮಾರಾಟ ಮಾಡುತ್ತಾರೆ. ಬೆಂಗಳೂರು, ಮಂಗಳೂರು, ಮುಂಬೈ, ಮದುರೈ, ತಮಿಳುನಾಡು, ಮಂಗಳೂರು ಮಾತ್ರವಲ್ಲದೆ ಚೀನಾ, ಅಬುದಾಬಿ, ಬಾಂಗ್ಲಾದೇಶ… ಮುಂತಾದ ಹೊರದೇಶಗಳಿಗೂ ಇಲ್ಲಿನ ಮುಧೋಳ ನಾಯಿಗಳು ಪ್ರಯಾಣ ಬೆಳೆಸಿವೆ.

ಪೋಷಣೆ ವೆಚ್ಚ[ಬದಲಾಯಿಸಿ]

ಮುಧೋಳ ನಾಯಿ ಸಾಕುವುದು ಸುಲಭ. ಆದರೆ, ಮರಿ ಕೊಳ್ಳುವಾಗ ಒಂದಷ್ಟು ಹಣ ಖರ್ಚು ಮಾಡಲೇಬೇಕು. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ತಿಮ್ಮಾಪುರದ ಮುಧೋಳ ಶ್ವಾನ ಸಂಶೋಧನೆ ಮತ್ತು ಮಾಹಿತಿ ಕೇಂದ್ರದಲ್ಲಿ ಮುಧೋಳ ಶ್ವಾನದ ಮರಿ ಸಿಗುತ್ತವೆ. ಇದರ ಜತೆಗೆ ಬಾಗಲಕೋಟೆ ನಗರ, ಲೋಕಾಪುರ, ಹಲಗಲಿ, ಮುಧೋಳದಲ್ಲೂ ಇದನ್ನು ಸಾಕುವವರಿದ್ದಾರೆ. ಸದ್ಯ, ೪೦ ದಿನಗಳ ಮೇಲ್ಪಟ್ಟ ಮರಿಗಳ ಬೆಲೆಯನ್ನು ಸರ್ಕಾರವೇ ರೂ. ೧೦,೦೦೦ ರೂ. ಎಂದು ನಿಗದಿ ಮಾಡಿದೆ. ಈ ಹಣ ನೀಡಿ, ಮುಧೋಳ ನಾಯಿ ಖರೀದಿಸುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ.

೪೦ ದಿನಗಳ ಒಳಗೆ ಒಂದು “ಪಪ್ಪಿ ಡಿಪಿ’ ಎಂಬ ಇಂಜೆಕ್ಷನ್‌ ಹಾಗೂ ೪೦ ದಿನಗಳ ಬಳಿಕ ಒಂದು ರೇಬಿಸ್‌ ಇಂಜೆಕ್ಷನ್‌ ಹಾಕಿದರೆ ಆಯ್ತು. ಬಳಿಕ ಪ್ರತಿವರ್ಷ ರೇಬಿಸ್‌ ಚುಚ್ಚುಮದ್ದು ಹಾಕಿಸುತ್ತಿದ್ದರೆ ಅದರ ನಿರ್ವಹಣೆ ಮುಗಿಯಿತು. ವರ್ಷಕ್ಕೆ ಗರಿಷ್ಠವೆಂದರೂ ೧ ಸಾವಿರ ಖರ್ಚು ಮಾತ್ರ ಬರುತ್ತದೆ. ಇನ್ನು ಆಹಾರ ಪದ್ಧತಿಯಲ್ಲಿ ವಿಶೇಷತೆಗಳಿಲ್ಲ. ನಾವು ನಿತ್ಯ ಮನೆಯಲ್ಲಿ ಯಾವ ಅಡುಗೆ ಮಾಡಿ ತಿನ್ನುತ್ತೇವೆಯೋ ಅದೇ ಅಡುಗೆ ಹಾಕಿದರೂ ಅದು ತಿನ್ನುತ್ತದೆ. ಬಹುತೇಕ ಶ್ವಾನ ಸಾಕಣಿಕೆದಾರರು, ನಿತ್ಯ ೨೫೦ ಎಂ.ಎಲ್‌. ಹಾಲು, ಒಂದು ಮೊಟ್ಟೆ ಕೊಡುತ್ತಾರೆ. ಜತೆಗೆ, ರವೆ ಗಂಜಿ ಹಾಕುತ್ತಾರೆ. ಇನ್ನು ಕೆಲವರು ಮನೆಯಲ್ಲಿ ಮಾಂಸಾಹಾರ ತಿನ್ನುವವರಿದ್ದರೆ ಅದನ್ನೂ ಹಾಕುತ್ತಾರೆ. ಒಟ್ಟಾರೆ, ಮುಧೋಳ ನಾಯಿಗೆ ಇಂಥದ್ದೇ ಆಹಾರ ಬೇಕೆಂದಿಲ್ಲ. ಸಸ್ಯಹಾರಿ ನಾಯಿ ೧೨-೧೩ ವರ್ಷ, ಮಾಂಸಾಹಾರಿ ನಾಯಿ ೧೫-೧೬ ವರ್ಷಗಳ ಕಾಲ ಬದುಕುತ್ತವೆ. ಬೇಟೆಗಾಗಿಯೇ ಹುಟ್ಟಿಕೊಂಡ ತಳಿ ಇದಾಗಿದ್ದರಿಂದ, ಮಾಂಸಾಹಾರ ತಿಂದಷ್ಟೂ ಗಟ್ಟಿಮುಟ್ಟಾಗಿರುತ್ತದೆ.

ದೈಹಿಕ ಗುಣ ಲಕ್ಷಣಗಳು[ಬದಲಾಯಿಸಿ]

ಮುಧೋಳ್ ನಾಯಿ

ಮುಧೋಲ್ ಅಥವಾ ಕಾರವಾನ್ ನಾಯಿ ಉತ್ತಮವಾಗಿ ವ್ಯಾಖ್ಯಾನಿಸಲಾದ ಗುಣಲಕ್ಷಣಗಳನ್ನು ಹೊಂದಿದೆ. ತಲೆ ಉದ್ದ ಮತ್ತು ಕಿರಿದಾಗಿರುತ್ತದೆ. ಕಿವಿಗಳ ನಡುವೆ ಅಗಲವಾದ ಮೂತಿ ಇರುತ್ತದೆ. ದವಡೆಗಳು ಉದ್ದ ಮತ್ತು ಶಕ್ತಿಯುತವಾಗಿದ್ದು, ಕತ್ತರಿಯಂತೆ ಚೂಪಾದ ಹಲ್ಲುಗಳು ಇರುತ್ತವೆ. ಮೂಗು ದೊಡ್ಡದು ಮತ್ತು ಕಪ್ಪು ಬಣ್ಣವನ್ನು ಹೊಂದಿರುತ್ತದೆ. ಕಿವಿಗಳು ಲೋಲಕವಾಗಿದ್ದು ತಲೆಬುರುಡೆಗೆ ಹತ್ತಿರದಲ್ಲಿ ಸ್ಥಗಿತಗೊಳ್ಳುತ್ತವೆ. ಕಣ್ಣುಗಳು ದೊಡ್ಡದಾಗಿರುತ್ತವೆ ಮತ್ತು ಅಂಡಾಕಾರದಲ್ಲಿರುತ್ತವೆ. ಅಭಿವ್ಯಕ್ತಿ ಚುಚ್ಚುವ ನೋಟ. ಕುತ್ತಿಗೆ ಉದ್ದವಾಗಿದೆ, ಸ್ವಚ್ಚ ಆಗಿರುತ್ತದೆ ಮತ್ತು ಸ್ನಾಯುಗಳಾಗಿರುತ್ತದೆ ಮತ್ತು ಭುಜಗಳಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಮುಂದೋಳು ನಾಯಿಗಳು ಉದ್ದ ಮತ್ತು ನೇರವಾಗಿರುತ್ತವೆ. ಹಿಂಭಾಗವು ಉದ್ದವಾಗಿದೆ, ವಿಶಾಲವಾಗಿದೆ. ಸೊಂಟ ಅಗಲ ಮತ್ತು ಆಳವಾಗಿರುತ್ತದೆ. ಎದೆಯು ಬಲವಾದ ಮತ್ತು ಆಳವಾದ ಪಕ್ಕೆಲುಬುಗಳೊಂದಿಗೆ ಆಳವಾಗಿರುತ್ತದೆ. ಹಿಂಭಾಗದ ಭಾಗಗಳು ಅಗಲವಾಗಿ ಮತ್ತು ಚೆನ್ನಾಗಿ ಸ್ನಾಯುಗಳಾಗಿ ಗೋಚರಿಸುತ್ತವೆ. ಬಾಲವನ್ನು ಕಡಿಮೆ, ತಳದಲ್ಲಿ ಬಲವಾಗಿ, ಸಾಕಷ್ಟು ಉದ್ದವಾಗಿದೆ ಮತ್ತು ನೈಸರ್ಗಿಕ ವಕ್ರರೇಖೆಯಲ್ಲಿ ಸಾಗಿಸಲಾಗುತ್ತದೆ. ನಡಿಗೆಗೆ ಬಂದರೆ ಎತ್ತರದ ಪಾದವಾಗಿದ್ದು, ನಾಲ್ಕು ಕಾಲುಗಳನ್ನು ಬಾಗಿಸುತ್ತದೆ. ಮುಧೋಳ್ ನಾಯಿಯಲ್ಲಿ ಎರಡು ಪ್ರಭೇದಗಳಿವೆ - ಒಂದು, ಸಂಪೂರ್ಣವಾಗಿ ನಯವಾದ ಕೋಟ್ ಮತ್ತು ಇನ್ನೊಂದು ಕಿವಿ, ಕಾಲುಗಳು ಮತ್ತು ಬಾಲದ ಮೇಲೆ ರೇಷ್ಮೆಯಂತಹ ಗರಿಗಳನ್ನು ಹೊಂದಿರುತ್ತದೆ. ಸ್ವೀಕಾರಾರ್ಹ ಬಣ್ಣಗಳು ಜಿಂಕೆ, ಪಾಳುಭೂಮಿ, ಕೆಂಪು, ಕೆನೆ, ಕಪ್ಪು ಮತ್ತು ಮೌಸ್-ಬೂದು, ಅಥವಾ ಈ ಯಾವುದೇ ಬಣ್ಣಗಳು ಕನಿಷ್ಠ ಪ್ರಮಾಣದ ಬಿಳಿ ಬಣ್ಣದಿಂದ ಮುರಿದುಹೋಗಿವೆ.

ಉಲ್ಲೇಖಗಳು[ಬದಲಾಯಿಸಿ]

<ɾ>https://en.wikipedia.org/wiki/Mudhol_Hound</ɾ>

<ɾ>https://www.dogspot.in/dog-breeds/mudhol-hound/</ɾ>