ಸದಸ್ಯ:Tharun25.c

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಕಿರು ಪರಿಚಯ[ಬದಲಾಯಿಸಿ]

ನನ್ನ ಹೆಸರು ತರುಣ್ ಸಿ, ನಾನು ಹುಟ್ಟಿದ್ದು ಆಗಸ್ಟ್ ೨೫ ೨೦೦೧ ರಂದು ಬೆಂಗಳೂರಿನ ವಿಲ್ಸನ್ ಗಾರ್ಡನ್ ನಲ್ಲಿ ಜನಿಸಿದೆನು. ನನ್ನ ತಂದೆಯ ಹೆಸರು ವಿ ಚಂದ್ರ ಶೇಖರ್ ಹಾಗೂ ತಾಯಿ ನಾಗರತ್ನ ರವರು. ನಮ್ಮ ತಂದೆಯವರು ಕಟ್ಟಡ ನಿರ್ಮಾಣದ ಸಾಮಗ್ರಿಗಳನ್ನು ವ್ಯಾಪಾರ ಮಾಡುತ್ತಾರೆ ಮತ್ತು ನಮ್ಮ ತಾಯಿ ಗೃಹಿಣಿ. ನನಗೆ ಮೇಘನಾ ಎಂಬ ಸಹೋದರಿ ಇದ್ದು ಅವರು ಇಂಜಿನಿಯರಿಂಗ್ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದಾರೆ.

ನನ್ನ ಬಾಲ್ಯದ ಶಿಕ್ಷಣ[ಬದಲಾಯಿಸಿ]

ನನ್ನ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾಭ್ಯಾಸವು ವಿಲ್ಸನ್ ಗಾರ್ಡನ್ ನಲ್ಲಿರುವ ಹೋಲಿ ಕ್ರೆಸೆಂಟ್ ಇಂಗ್ಲೀಷ್ ಹೈಸ್ಕೂಲ್ ನಲ್ಲಿ ನಡೆದಿತ್ತು. ನಮ್ಮ ಶಾಲೆಯಲ್ಲಿ ಪಠ್ಯೇತರ ವಿಷಯವಲ್ಲದೆ ಎಲ್ಲಾ ಅಟ ಹಾಗೂ ಸಂಸ್ಕೃತಿಕ ವಿಷಯದಲ್ಲಿ ಬಹಳ ಆಸಕ್ತಿಯಿಂದ ನಾನು ಭಾಗವಹಿಸುತ್ತಿದ್ದೇನೆ ಹಾಗೂ ಹಲವಾರು ಪ್ರಶಸ್ತಿ, ಪ್ರತಿಭಾ ಪುರಸ್ಕಾರ ಗಳನ್ನು ಗೆದ್ದಿದ್ದೇನೆ. ನಮ್ಮ ಶಾಲೆಯು ಮನೆಯ ಸಮೀಪದಲ್ಲಿಯೇ ಇರುವುದರಿಂದ ನನಗೆ ಶಾಲೆಗೆ ಹೋಗಿ ಬರಲು ಸುಲಭವಾಗುತ್ತಿತ್ತು. ಕಲಿಕೆಯಲ್ಲಿ ನನಗೆ ಹೆಚ್ಚು ಆಸಕ್ತಿ ಇರುವುದರಿಂದ ಹಾಗೂ ಉತ್ತಮ ಅಂಕಗಳನ್ನು ತೆಗೆದುಕೊಳ್ಳುವುರಿಂದ ನಮ್ಮ ಶಾಲೆಯ ಶಿಕ್ಷಕರು ಹಾಗೂ ಪ್ರಾಂಶುಪಾಲರು ನನ್ನನ್ನು ಬಹಳ ಇಷ್ಟಪಡುತ್ತಿದ್ದರು ಮತ್ತು ಪ್ರೀತಿಯಿಂದ ಮಾತನಾಡುತ್ತಿದ್ದರು. ನನಗೆ ಶಾಲಾದಿನಗಳಲ್ಲಿ ಕೆಲವು ಆತ್ಮೀಯ ಗೆಳೆಯರು ಇದ್ದರು. ಅವರುಗಳಲ್ಲಿ ಫಹಾದ್,ಯಶ್ವಂತ್, ಶಶಾಂಕ್ ಹಾಗೂ ಮಾರ್ಟಿನ್ ಬಹಳ ಆತ್ಮೀಯರಾಗಿದ್ದರು. ಹತ್ತನೇ ತರಗತಿಯಲ್ಲಿ ನಾನು ಶೇಕಡಾ ೮೨ ಅಂಕಗಳನ್ನು ಪಡೆದು ಉತ್ತೀರ್ಣನಾದೆನು.

ನನ್ನ ಉನ್ನತ ಶಿಕ್ಷಣದ ವಿವರಣೆ[ಬದಲಾಯಿಸಿ]

ನನ್ನ ಹೆಚ್ಚಿನ ಶಿಕ್ಷಣಕ್ಕಾಗಿ ಸೆಂಟ್ ಜೋಸೆಫ್ ಇಂಡಿಯನ್ ಕಾಂಪೋಸಿಟ್ ಪಿಯು ಕಾಲೇಜಯನ್ನು ಸೇರಿಕೊಂಡೆನು. ಕಾಲೇಜಿನಲ್ಲಿ ನಾನು ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿಕೊಂಡೆನು. ಎಂದಿನಂತೆಯೆ ಕಾಲೇಜು ಪ್ರಾರಂಭವಾಯಿತು ನಾನು ಕಾಲೇಜಿಗೆ ಓದ ನಂತರ ತರಗತಿಯಲ್ಲಿ ಪಾಠ ಮಾಡುವ ವಿಧಾನ ಹಾಗೂ ಶಾಲೆಯಲ್ಲಿ ಪಾಠ ಮಾಡುವ ವಿಧಾನ ಮೊದ ಮೊದಲು ನನಗೆ ಅರ್ಥಮಾಡಿಕೊಳ್ಳಲು ಕಷ್ಟವಾಯಿತು, ದಿನ ಕಳೆದಂತೆ ನಾನು ಸಹ ಅದಕ್ಕೆ ಓಗಿಕೊಂಡೆನು. ಇನ್ನೊಂದು ಸಂತೋಷದ ವಿಷಯ ವೇನಂದರೆ ನನ್ನ ಶಾಲೆಯಲ್ಲಿ ಜೊತೆಯಾಗಿ ಓದುತ್ತಿದ್ದ ಇಬ್ಬರು ಗೆಳೆಯರು ನನಗೆ ಕಾಲೇಜಿನಲ್ಲಿ ಸಹಪಾಠಿಗಳಾಗಿ ಸಿಕ್ಕರು. ಆಗೆಯೇ ಕಾಲೇಜು ದಿನಗಳು ಕಳೆದಂತೆ ಮೊದಲ ಪಿಯುಸಿ ಕಳೆಯಿತು. ಅದರಲ್ಲಿ ಕೇವಲ ಶೇಕಡಾ ೭೦ ಅಂಕಗಳನ್ನು ಪಡೆದನು, ನಂತರ ದ್ವಿತೀಯ ಪಿಯುಸಿ ಪ್ರಾರಂಭವಾಯಿತು. ನನಗೆ ಪ್ರಥಮ ಪಿಯುಸಿಯಲ್ಲಿ ಪಡೆದ ಅಂಕಗಳು ಸಮಾಧಾನ ತಂದಿಲ್ಲ ವಾದ್ದರಿಂದ ನಾನು ದ್ವಿತೀಯ ಪಿಯುಸಿಯಲ್ಲಿ ಪ್ರಾರಂಭದಿಂದಲೂ ಬಹಳ ಶ್ರದ್ಧೆ ಹಾಗೂ ಪರಿಶ್ರಮದಿಂದ ಓದಿದೇನು. ಇದಕ್ಕೆ ಪ್ರತಿಫಲ ವಾಗಿ ನನಗೆ ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಯಲ್ಲಿ ಶೇಕಡಾ ೮೫ ಅಂಕಗಳು ಸಿಕ್ಕವು. ಈ ಫಲಿತಾಂಶ ದಿಂದ ನಮ್ಮ ಮನೆಯವರೆಲ್ಲರಿಗೂ ಬಹಳ ಸಂತೋಷವಾಯಿತು. ನಂತರ ಪದವಿಯ ವ್ಯಾಸಂಗಕ್ಕಾಗಿ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿಕಾಂ ಪದವಿಗೆ ದಾಖಲಾತಿ ದೊರಿಯಿತು. ನಂತರ ಕಾಲೇಜಿನ ತರಗತಿಗಳು ಪ್ರಾರಂಭವಾದವು. ನನಗೆ ಈ ಕ್ರೈಸ್ಟ್ ಕಾಲೇಜಿನ ಆವರಣ ಬಹಳ ಇಷ್ಟವಾಯಿತು. ಇಲ್ಲಿನ ಶಿಸ್ತಿನ ವಸ್ತ್ರ ಧಾರಣೆ ಹಾಗೂ ಶಿಸ್ತಿನಕ್ರಮ ನನಗೆ ಬಹಳ ಇಷ್ಟವಾಯಿತು.ಕಾಲೇಜಿನ ಪ್ರಾರಂಭದ ದಿನಗಳಲ್ಲಿ ಅನ್ಯ ವಿದ್ಯಾರ್ಥಿಗಳ ಜೊತೆಯಲ್ಲಿ ಬೆರೆಯಲು ಕಷ್ಟವಾಯಿತು. ನಂತರದ ದಿನಗಳಲ್ಲಿ ನಾನು ಅನೇಕ ಸ್ನೇಹಿತರನ್ನು ಮಾಡಿಕೊಂಡೆ ಇದರಿಂದ ನನಗೆ ಬಹಳ ಸಂತೋಷವಾಯಿತು. ಕಾಲೇಜು ಶುರುವಾದ ಕೆಲವು ದಿನಗಳಲ್ಲೇ ಅರ್ಧವಾರ್ಷಿಕ ಪರೀಕ್ಷೆ ಬಂದಿತು. ನಾನು ಈ ಪರೀಕ್ಷೆಗೆ ಸರಿಯಾಗಿ ತಯಾರಿ ನಡೆಸದ ಕಾರಣ ನನಗೆ ಎಲ್ಲಾ ವಿಷಯ ಗಳಲ್ಲೂ ಹೆಚ್ಚು ಅಂಕ ಗಳಿಸಲಿಲ್ಲ ಅದರಲ್ಲಿಯೂ ಕನ್ನಡ ವಿಷಯದಲ್ಲಿ ಬಹಳ ಕಡಿಮೆ ಅಂಕ ಪಡೆದುಕೊಂಡೆನು. ಇದರಿಂದ ನಮ್ಮ ಕನ್ನಡ ಪ್ರಾಧ್ಯಾಪಕರಿಗೆ ನನ್ನ ಮೇಲೆ ಕೋಪದಿಂದ ಬೈದರು. ದಿನಕಳೆದಂತೆ ನಮ್ಮ ಕಾಲೇಜಿನಲ್ಲಿ ಅನೇಕ ಮನೋರಂಜನಾ ಕಾರ್ಯಕ್ರಮ ನಡೆಯುತ್ತಿದ್ದವು. ಈ ಕಾರ್ಯಕ್ರಮದಲ್ಲಿ ಯಾವುದರಲ್ಲೂ ಭಾಗವಹಿಸಲು ನನಗೆ ಆಸಕ್ತಿ ಇರಲಿಲ್ಲ ಯಾಕಂದರೆ ನಾನು ಪದವಿ ಕಾಲೇಜಿಗೆ ಸೇರಿದ ಮೊದಲ ಸೆಮಿಸ್ಟರ್ ಆಗಿರುವುದರಿಂದ ಇನ್ನು ನಾನು ಬೆರೆಯಲು ಸ್ವಲ್ಪ ಸಮಯ ಬೇಕು. ನಂತರ ನಮ್ಮ ಕಾಲೇಜಿನಲ್ಲಿ ಭಾಷಾ ಉತ್ಸವ ಕಾರ್ಯಕ್ರಮ ಏರ್ಪಡಿಸಿದರು. ಈ ಕಾರ್ಯಕ್ರಮದಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳು ಅವರವರ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಸ್ತ್ರಗಳನ್ನು ಧರಿಸಿಕೊಂಡು ಬಂದಿದ್ದರು. ನಾನು ಅದರಂತೆ ನಮ್ಮ ಕನ್ನಡ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಸ್ತ್ರವನ್ನು ಧರಿಸಿಕೊಂಡು ಹೋಗಿದೆನು. ಆ ದಿನ ಎಲ್ಲಾ ವಿದ್ಯಾರ್ಥಿಗಳು ಬಣ್ಣಬಣ್ಣದ ಬಟ್ಟೆಗಳನ್ನು ಹಾಕಿಕೊಂಡು ಕಾಲೇಜಿನ ಆವರಣದಲ್ಲಿ ನಿಂತು ಎಲ್ಲರೂ ಒಟ್ಟಾಗಿ ಸೇರಿ ಕುಣಿದು ಕುಪ್ಪಳಿಸಿದರು. ಆ ದೃಶ್ಯವನ್ನು ನೋಡಲು ಕಾಲೇಜಿನಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಯಿತು. ದಿನಕಳೆದಂತೆ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ನಿಗದಿಯಾಯಿತು. ಇನ್ನು ನಾನು ಪರೀಕ್ಷೆಗೆ ಬಹಳ ಶ್ರದ್ಧೆಯಿಂದ ಓದಿ ಉತ್ತಮ ಅಂಕವನ್ನು ಗಳಿಸಲು ನಾನು ನಿಶ್ಚಯಿಸಿದೆ. ಅದರಂತೆ ನಾನು ಓದಲು ಶುರು ಮಾಡಿದ್ದೇನೆ.