ಸದಸ್ಯ:Sonali M.B/ನನ್ನ ಪ್ರಯೋಗಪುಟ

Coordinates: 17°23′06″N 78°29′10″E / 17.385°N 78.486°E / 17.385; 78.486
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇನ್ಶೂರೆನ್ಸ್ ರೆಗ್ಯುಲೇಟರಿ ಅಂಡ್ ಡೆವಲಪಮೆಂಟ್ ಅಥಾರಿಟಿ ಆಫ್ ಇಂಡಿಯಾ
IRDAI
ಸಂಕ್ಷಿಪ್ತ ಹೆಸರುಐ ಆರ್ ಡಿ ಎ
ಪ್ರಧಾನ ಕಚೇರಿ= ಪರಿಸಿರಾಮ ಭವನ್, ಭಷೀರ್ ಭಾಘ್, ಹೈದರಾಬಾದ್, ಇಂಡಿಯ
ಸ್ಥಳ
  • ಹೈದರಾಬಾದ್,ಇಂಡಿಯ
ಕಕ್ಷೆಗಳು17°23′06″N 78°29′10″E / 17.385°N 78.486°E / 17.385; 78.486
ಅಧ್ಯಕ್ಷ, ಐ.ಆರ್.ಡಿ.ಎ
ಟಿ.ಎಸ್. ವಿಜಯನ್[೧]
ಅಧಿಕೃತ ಜಾಲತಾಣirda.gov.in

ಐ ಆರ್ ಡಿ ಎ- ಇನ್ಶೂರೆನ್ಸ್ ರೆಗ್ಯುಲೇಟರಿ ಅಂಡ್ ಡೆವಲಪಮೆಂಟ್ ಅಥಾರಿಟಿ ಆಫ್ ಇಂಡಿಯಾ.

ಐ ಆರ್ ಡಿ ಎಯ ಪರಿಚಯ[ಬದಲಾಯಿಸಿ]

ಐ ಆರ್ ಡಿ ಎ, ಒಂದು ಸ್ವಾಯತ್ ಸುಪ್ರೀಂ ಶಾಸನವಿಹಿತ ಸಂಸ್ಥೆಯಾಗಿ ನಿಯಂತ್ರಣ ವಹಿಸಿತು ಹಾಗು ವಿಮಾ ಮತ್ತು ಮರು ವಿಮಾ ಉದ್ಯಮಗಳ ಪ್ರಚಾರಕ್ಕಾಗಿ ಭಾರತದಲ್ಲಿ ತಮ್ಮ ಸಂಸ್ಥೆಯನ್ನು ಪ್ರಾರಂಭ ಮಾಡಿದರು. ೧೯೯೯ರಲ್ಲಿ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಎಂಬ ಕಾಯ್ದೆಯನ್ನು ಭಾರತ ಸರ್ಕಾರ ಜಾರಿಗೆ ತಂದಿತು. ಮೊದಲು ಇದರ ಪ್ರಧಾನ ಕಚೇರಿ ದೆಹಲಿಯಲ್ಲಿ ನೆಲೆಸಿತ್ತು. ೨೦೦೧ರಂದು ಕಚೇರಿಯನ್ನು ಆಂದ್ರ ಪ್ರದೇಶದ ಹೈದರಾಬಾದ್ ಇಗೆ ತೆರೆಳಿಸಿದರು. ಐ.ಆರ್.ಡಿ.ಎ ಪ್ರಸ್ತುತ ವಿದೇಶಿ ನೇರ ಹೂಡಿಕೆಯಲ್ಲಿ ವಿಮಾ ವಲಯವನ್ನು ೨೬% ಇಂದ ೪೯% ಹೆಚ್ಚಿಸಲು ಪ್ರಯತ್ನಿಸಿತ್ತು, ನಂತರ ಜೂನ್ ೨೦೧೬ರಲ್ಲಿ ಅದರ ಮಿತಿಯನ್ನು ೧೦೦%ಗೆ ಎತ್ತರಿಸಿದರು.[೨]

ಇನ್ಶೂರೆನ್ಸ್ ಇನ್ ಇಂಡಿಯ ( ಭಾರತದಲ್ಲಿ ವಿಮೆ)[ಬದಲಾಯಿಸಿ]

ಭಾರತದಲ್ಲಿ, ವಿಮೆ ಒಂದು ಸುದೀರ್ಘ ಇತಿಹಾಸವನ್ನು ಹೊಂದಿದೆ. ಇದನ್ನು ಮನು (ಧರ್ಮಶಾಸ್ತ್ರ) ಮತ್ತು ಕೌಟಿಲ್ಯ (ಅರ್ಥಶಾಸ್ತ್ರ) ಬರಹಗಳಲ್ಲಿ ಉಲ್ಲೇಖಿಸಲಾಗಿದೆ. ಬೆಂಕಿ, ಪ್ರವಾಹ, ಸಾಂಕ್ರಾಮಿಕ ರೋಗಗಳು ಮತ್ತು ಬರಗಾಲ ಇಂತಹ ವಿಕೋಪ ಕಾಲದಲ್ಲಿ ಜನರಿಗೆ ಸಾಹಯ ಮಾಡಲು ವಿಮೆಯನ್ನು ಸ್ಥಾಪಿಸಿದರು. ವಿಮೆ ನಿರ್ದಿಷ್ಟವಾಗಿ ಇತರ ದೇಶಗಳಗಳಿಗಿಂತ ಇಂಗ್ಲೆಂಡ್ ಅಲ್ಲಿ ಹೆಚ್ಚು ಬೆಳೆಯತೊಡಗಿತ್ತು. ೧೮೧೮ ಭಾರತದಲ್ಲಿ ಜೀವ ವಿಮಾ ವ್ಯವಹಾರದ ಆಗಮನ ಮಾಡಿದರು, ಭಾರತದ ಮೊದಲ ಜೀವ ಕಂಪನಿ ಕಲ್ಕತ್ತಾದಲ್ಲಿ ಕಂಪನಿ ಆರಂಭಿಸಿದರು, ಇದರ ಹೆಸರು ಓರಿಯಂಟಲ್ ಜೀವ ವಿಮಾ. ಆದರೆ ಈ ಸಂಸ್ಥೆಯು ೧೮೨೬ ರಲ್ಲಿ ವಿಫಲಗೊಂಡಿತ್ತು ಇದರ ಕಾರಣ ಸಂಸ್ಥೆಯನ್ನು ಮುಚ್ಚಲಾಯಿತು. ನಂತರ ೧೮೨೯ರಲ್ಲಿ ಮದ್ರಾಸ್ ಈಕ್ವಿಟೆಬಲ್ ನಲ್ಲಿ, ಮದ್ರಾಸ್ ಪ್ರೆಸಿಡೆನ್ಸಿ ಎಂಬ ಜೀವ ವಿಮಾ ವ್ಯವಹಾರದ ವಹಿವಾಟವನ್ನು ಆರಂಭಿಸಿದರು.೧೯೧೪ ರಲ್ಲಿ, ಭಾರತ ಸರ್ಕಾರವು ವಿಮೆ ಸ್ಂಸ್ಥೆಯ ಆದಾಯ ಪಟ್ಟಿಯನ್ನು ಪ್ರಕಟಿಸಲು ಪ್ರಾರಂಭ ಮಾಡಿದರು. ೧೯೧೨ರಲ್ಲಿ ಇಂಡಿಯನ್ ಲೈಫ್ ಅಸ್ಸುರೇನ್ಸ್ ಸಂಸ್ಥೆಯು ಮೊದಲ ಕಾನೂನು ನಿಯಂತ್ರಿಸುವ ಜೀವ ವಿಮೆಯಾಗಿ ಆರಂಭಗೊಂಡಿತ್ತು. ೧೯೩೮ ರಲ್ಲಿ ಸಾರ್ವಜನಿಕ ಆಸಕ್ತಿಯನ್ನು ರಕ್ಷಿಸಲು ಹಾಗೂ ವಿಮಾದಾರರ ಚಟುವಟಿಕೆಗಳ ಮೇಲೆ ಪರಿಣಾಮಕಾರಿ ನಿಯಂತ್ರಣವಹಿಸಲು ಇನ್ಶೂರೆನ್ಸ್ ಆಕ್ಟ್ ಸಂಘಟನೆಯನ್ನು ಆರಂಭ ಮಾಡಿದರು .೧೯೫೦ರಲ್ಲಿ ವಿಮಾ ವ್ಯಾಪರದಲ್ಲಿ ಹೆಚ್ಚು ನ್ಯಾಯಸಮ್ಮತವಲ್ಲದ ವಹಿವಾಟು ಇದ್ದ ಕಾರಣ ಭಾರತ ಸರ್ಕಾರವು ವಿಮಾ ಉದ್ಯಮವನ್ನು ರಾಷ್ಟ್ರೀಕರಣಗೊಳಿಸಲು ನಿರ್ಧರಿಸಿದರು, ಇದರ ಕಾರಣ ವಿಮಾ ಉದ್ಯಮಗಳ ನಡುವೆ ದೊಡ್ಡ ಸಂಖ್ಯೆಯಲ್ಲಿ ಸ್ಪರ್ಧೆ ಏರಿತು. ೧೯ ಜನವರಿ ೧೯೫೬ರಲ್ಲಿ ಜೀವ ವಿಮಾ ವಲಯವನ್ನು ರಾಷ್ಟ್ರೀಕರಣಗೊಳಿಸಿದರು ಹಾಗು ಅದೇ ವರ್ಷದಲ್ಲಿ ಜೀವ ವಿಮಾ ನಿಗಮ ಅಸ್ತಿತ್ವಕ್ಕೆ ಬಂದಿತು ಮತ್ತು ಲೈಫ್ ಇನ್ಶೂರೆನ್ಸ್ ಕಾರ್ಪೋರೇಶನ್ ಅನ್ನು ಸ್ಥಾಪಿಸಿದರು. ೧೯೯೦ರವರಗೆ ಎಲ್.ಐ.ಸಿ, ಏಕಸ್ವಾಮ್ಯವನ್ನು ಹೊಂದಿತ್ತು. ೧೮೫೦ರಲ್ಲಿ ಕಲ್ಕತ್ತಾದಲ್ಲಿ ಟ್ರೈಟಾನ್ನ ಇನ್ಶುರೆನ್ಸ್ ಲಿಮಿಟೆಡ್ ಎಂಬ ಸಂಸ್ಥೆಯನ್ನು ಆರಂಭ ಮಾಡಿದರು, ಈ ವಿಮಾ ಸಂಸ್ಥೆಯಲ್ಲಿ ಬ್ರಿಟೀಷ್ರ ಕೈ ಹೊಂದಿತು. ೧೯೦೭ರಲ್ಲಿ, ಭಾರತೀಯ ಮೆರ್ಸಾಂಟೈಲ್ ಇನ್ಶುರೆನ್ಸ್ ಲಿಮಿಟೆಡ್ ಸಂಸ್ಥೆಯು ಪ್ರಾರಂಭವಾಯಿತು, ಈ ವಿಮೆ ಎಲ್ಲಾ ವರ್ಗದ ಕಾರ್ಯವನ್ನು ನಿರ್ವಹಿಸುವ ಪ್ರಥಮ ಸಂಸ್ಥೆಯಾಯಿತ್ತು. ೧೯೭೨ರಲ್ಲಿ ಕಾಯ್ದೆ ಅಂಗೀಕಾರಗೊಸಕರ ಜನರಲ್ ಇನ್ಶುರೆನ್ಸ್ ಕೌನ್ಸಿಲ್ ಅನ್ನು ರೂಪಿಸಿದರು. ಹನ್ನೊಂದು ವರ್ಷಗಳ ನಂತರ ಹೂಡಿಕೆಯನ್ನು ನಿಯಂತ್ರಿಸಲು ಇನ್ಶುರೆನ್ಸ್ ಆಕ್ಟ್ ಅನ್ನು ತಿದ್ದು ಪಡಿಸಿದರು ಹಾಗು ಟಾರೀಫ್ ಅಡ್ವೆಸರಿ ಕಮಿಟ್ಟಿಯನ್ನು ಸ್ಥಾಪಿಸಿದರು. ಜನವರಿ ೧, ೧೯೭೩ರಲ್ಲಿ ಜನರಲ್ ಇನ್ಶೂರೆನ್ಸ್ ಕಾಪ್ರೆಷನ್ ಆಫ್ ಇಂಡಿಯ ಸಂಘಟಿತವಾಯಿತು.

ಆರ್.ಎನ್ ಮಲ್ಹೋತ್ರಾ ಕಮಿಟಿ ಹಾಗು ಜಿ.ಐ.ಸಿ ( ಜನರೆಲ್ ಇನ್ಶೂರೆನ್ಸ್ ಕಾಪ್ರೆಷನ್ )[ಬದಲಾಯಿಸಿ]

೧೯೯೩ ರಲ್ಲಿ ಸರ್ಕಾರ, ಆರ್.ಎನ್ ಮಲ್ಹೋತ್ರಾ, ಮಾಜಿ ಆರ್ಬಿಐ ಗವರ್ನರ್ ಅವರ ಅಧ್ಯಕ್ಷತೆಯಲ್ಲಿ, ವಿಮಾ ವಲಯದ ಸುಧಾರಣೆಗಳ ಶಿಫಾರಸಿಗಾಗಿ ಭಾರತ ಸರ್ಕಾರ ಒಂದು ಸಮಿತಿಯನ್ನು ಪ್ರಸ್ಥಾಪಿಸಿದರು, ಇದರ ಮುಖ್ಯ ಉದ್ದೇಶ ಆರ್ಥಿಕ ವಲಯದಲ್ಲಿ ಸುಧಾರಣೆಯನ್ನು ತರವುದು. ಇದರ ಸಲುವಾಗಿ ಈ ಸಮಿತಿ ೧೯೯೪ ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು, ಅವರ ಸಲೆಹ ಪ್ರಕಾರ ಖಾಸಗಿ ವಲಯ ವಿಮಾ ಉದ್ಯಮವನ್ನು ಪ್ರವೇಶಿಸಲು ಹಾಗು ವಿದೇಶಿ ಕಂಪನಿಗಳು ಭಾರತೀಯ ಸಂಗಾತಿಗಳ ಜೊತೆ ಜಂಟಿ ತೇಲುವ ಮೂಲಕ ಪ್ರವೇಶಿಸ ಬಹುದು ಎಂದು ಹೇಳಿಕೆ ಕೊಟ್ಟರು. ೧೯೯೯ ರಲ್ಲಿ ವಿಮಾ ನಿಯಂತ್ರಣ ಮತ್ತು ವಿಮಾ ಉದ್ಯಮ ಅಭಿವೃದ್ಧಿ ಸ್ವಯುಕ್ತ ಐ ಆರ್ ಡಿ ಎ ಅನ್ನು ಸಂಸ್ಥೆಯನ್ನಾಗಿ ರಚನೆ ಮಾಡಿದರು. ೨೦೦೦ರ ಎಪ್ರಿಲ ತಿಂಗಳಲ್ಲಿ ಐ.ಆರ್.ಡಿ.ಎ ಶಾಸನ ರಹಿತ ಸಂಸ್ಥೆಯಾಗಿ ಮಾರ್ಪಾಡಾಯಿತು. ಐ.ಆರ್.ಡಿ.ಎ ಯ ಪ್ರಮುಕ ಉದೇಶ ವಿಮಾ ಕಂಪನಿಗಳ ನಡುವೆ ಸ್ಪರ್ಧೆಯನ್ನು ಹೆಚ್ಚಿಸಲು, ಗ್ರಾಹಕರನ್ನು ಸಂತೃಪ್ತಿ ಪಡಿಸಲು, ಕಡಿಮೆ ಪ್ರೀಮಿಯಂ ನೀಡಲು ಹಾಗು ಆರ್ಥಿಕ ಭದ್ರತೆಯನ್ನು ನೀಡಲು. ೨೦೦೦ರಲ್ಲಿ ಜನರೆಲ್ ಇನ್ಶೂರೆನ್ಸ್ ವಿನ ಅಂಗಸಂಸ್ಥೆಗಳು ಸ್ವತಂತ್ರ ಸಂಸ್ಥೆಗಳನ್ನಾಗಿ ಮರುರೂಪಿಸಿದರು ಹಾಗು ಜಿ.ಐ.ಸಿ ( ಜನರೆಲ್ ಇನ್ಶೂರೆನ್ಸ್ ಕಾಪ್ರೆಷನ್) ಅನ್ನು ರಾಷ್ಟ್ರೀಯ ಮರು ವಿಮೆಯನ್ನಾಗಿ ಪರಿವರ್ತಿಸಲಾಯಿತು. ಜುಲೈ ೨೦೦೨ರಲ್ಲಿ ಜಿ.ಐ.ಸಿ ಅನ್ನು ತನ್ನ ನಾಲ್ಕು ಅಂಗಸಂಸ್ಥೆಗಳಿಂದ ಡಿ-ಲಿಂಕ್ ಮಾಡಿ ಸಂಸತ್ತು ಮಸೂದೆಯನ್ನು ಜಾರಿಗೆ ತಂದಿತು. ಪ್ರಸ್ತುತ ಪರಿಸ್ಥಿತಿಯಲ್ಲಿ ಐಆರ್ಡಿಎ ವಿಮಾ ವಲಯದಲ್ಲಿ ವಿದೇಶಿ ನೇರ ಬಂಡವಾಳ ಮಿತಿಯನ್ನು ೨೬% ರಿಂದ ೪೯% ವರಗೆ ಹೆಚ್ಚಿಸಲು ನಿರತರಾಗಿದ್ದಾರೆ. ಈಗ ಭಾರತದಲ್ಲಿ ೨೮ ಜನರೆಲ್ ಇನ್ಶೂರೆನ್ಸ್ ಹಾಗು ೨೪ ಲೈಫ್ ಇನ್ಶೂರೆನ್ಸ್ ಕಂಪನಿಗಳು ಆಪರೇಟ ಮಾಡುತಿದೆ.[೩]

ಸಾಂಸ್ಥಿಕ ರಚನೆ[ಬದಲಾಯಿಸಿ]

ಹತ್ತು ಸದಸ್ಯ ಕಾರ್ಯಕರ್ತರಿದ್ದಾರೆ,ಅದರಲ್ಲಿ ಐದು ಪೂರ್ಣ ಕಾಲಿಕ ಸದಸ್ಯರು ಹಾಗು ನಾಲ್ಕು ಅರೆಕಾಲಿಕ ಸದಸ್ಯರನ್ನು ಭಾರತ ಸರ್ಕಾರವು ನೇಮಿಸುತ್ತದೆ. ಅಧ್ಯಕ್ಷ: ಟಿ.ಎಸ್ ವಿಜಯನ್. ಪೂರ್ಣ ಕಾಲಿಕ ಸದಸ್ಯರು: ಪಿ.ಜೆ. ಜೋಸೆಫ್, ನೀಲೇಶ್ ಸೇಟ್, ವಿ.ಆರ್.ಪುರಂ ಅಯ್ಯರ್, ಪೂರ್ಣಿಮ ಗುಪ್ತೆ ಹಾಗು ಡಿ.ಡಿ. ಸಿಂಗ್.

ಐ.ಆರ್.ಡಿ.ಎ ಕಾರ್ಯಗಳು[ಬದಲಾಯಿಸಿ]

೧.ಐಆರ್ಡಿಗೆ ವಿಮಾ ನೋಂದಣಿಯನ್ನು ವಿತರಕ,ಮಾರ್ಪಾಡು ಹಾಗು ಅಮಾನತುಗೊಳಿಸ ಬಹುದು; ೨.ಪಾಲಿಸಿ ಹೋಲ್ಡರ್ ನ ಆಸಕ್ತಿಯನ್ನು ಕಾಪಾಡುವುದು; ೩.ವಿದ್ಯಾರ್ಹತೆಗಳನ್ನು ಸೂಚಿಸುವುದು, ನೀತಿ ಸಂಹಿತೆ ಬಗೆ ಮಧ್ಯವರ್ತಿಗಳಿಗೆ ಹಾಗು ಏಜೆಂಟ್ ಗೆ ತರಬೇತಿ ನೀಡುವುದು; ೪.ದಕ್ಷತೆಯ ಬಗೆ ಪ್ರಚಾರಿಸುವುದು; ೫.ವೃತ್ತಿಪರ ಸಂಸ್ಥೆಗಳು ವಿಮಾ ಹಾಗು ಮರು-ವಿಮಾ ಉದ್ಯಮಕ್ಕೆ ನಿಯಂತ್ರಿಸುವುದು ಹಾಗು ಪ್ರಚೋದನೆ ಮಾಡುವುದು; ೬.ಲಿವಾಯಿಂಗ್ ಶುಲ್ಕ್ ಹಾಗು ಇತರ ಶುಲ್ಕದ ಬಗೆ ನಿರ್ಧಾರ ತೆಗೆದು ಕೊಳ್ಳುವುದು; ೭.ವಿಮೆಗಾರರನ್ನು ಹಾಗು ಮಧ್ಯವರ್ತಿಗಳನ್ನು ಪರಿಶೀಲಿಸುವುದು ಮತ್ತು ತನಿಖೆ ಮಾಡುವುದು; ೮.ಪುಸ್ತಕಗಳನ್ನು ಹೇಗೆ ಇಟ್ಟುಕೊಳ್ಳ ಬೇಕೇಂದು ಸೂಚಿಸುವುದು; ೯.ಕಂಪನಿ ಬಂಡವಾಳದ ಬಗೆ ನಿಯಂತ್ರಣ ಕೊಡುವುದು; ೧೦.ವಿಮೆಗಾರರ, ಮಧ್ಯವರ್ತಿಗಳ ಅಥವಾ ವಿಮಾ ಮಧ್ಯವರ್ತಿಗಳ ನಡುವೆ ವಿವಾದಗಳಿಗೆ ನ್ಯಾಯ ಕೊಡುವುದು; ೧೧.ಟ್ಯಾರೀಫ್ ಅಡ್ವೈಸರಿ ಕಮಿಟೆಯನ್ನು ನಿಯಂತ್ರಿಸಿವುದು; ೧೨.ಎಷ್ಟು ಶೇಕಡ ಪ್ರೀಮಿಯಂ ಆದಾಯವನ್ನು ಧನಸಹಾಯದ ರೂಪರೇಖೆಗಳಿಗೆ ಕೊಡ ಬೇಕೆಂದು ಸೂಚಿಸುವುದು; ೧೩.ಗ್ರಾಮೀಣ ಮತ್ತು ಸಾಮಾಜಿಕ ವಲಯದಲ್ಲಿ ಎಷ್ಟು ಶೇಕಡ ಜೀವನ ಮತ್ತು ಸಾಮಾನ್ಯ ವಿಮಾ ವ್ಯಾಪಾರದಲ್ಲಿ ಕೈಗೊಳ್ಳ ಬೇಕೆಂದು ಸೂಚಿಸುವುದು. ಇದನ್ನು ಐ ಆರ್ ಡಿ ಎ ೧೯೯೯ ರ ಸೆಕ್ಷನ್ ೧೪ ಅಡಿಯಲ್ಲಿ ವ್ಯಾಖ್ಯಾನಿಸಲಾಗಿದೆ.

ವಿಮೆ ರೇಪೊಸಿಟರಿ[ಬದಲಾಯಿಸಿ]

ಭಾರತದ ಹಣಕಾಸಿನ ಮಂತ್ರಿ, ಪಾಲಿಸಿದಾರರು ವಿಮಾ ಪಾಲಿಸಿಗಳನ್ನು ಕಾಗದದ ಮೇಲೆ ಬದಲಿಗೆ ವಿದ್ಯುನ್ಮಾನ ರೂಪದಲ್ಲಿ ಖರೀದಿ ಮತ್ತು ನಿರ್ವಹಿಸುವಂತ ವ್ಯವಸ್ಥೆ ನೀಡ ಬೇಕೆಂದು ಘೋಷಿಸಿದರು. ಷೇರು, ಡಿಪಾಸಿಟರಿ ಹಾಗು ಮ್ಯೂಚುಯಲ್ ಫಂಡ್ ಗಳಾಗೆ ವಿಮೆ ರೇಪೊಸಿಟರಿಯು ವಿಮಾ ಪಾಲಿಸಿಗಳನ್ನು ವಿದ್ಯುನ್ಮಾನ ದಾಖಲೆಗಳನ್ನಾಗಿ ವ್ಯಕ್ತಿಗಳಿಗೆ ವಿದ್ಯುನ್ಮಾನದಲ್ಲಿ ಕೊಡಬೇಕು ಎಂದು ಅವರು ಸೂಚನೆ ನೀಡಿದಾರೆ. ಭಾರತದಲ್ಲಿ ವಿಮೆ ರೆಪೊಸಿಟರಿಯನಲ್ಲಿ, ವಿಮಾ ಪಾಲಿಸಿಗಳನ್ನು ಒಂದು ಡೇಟಾಬೇಸಿನ ರೂಪದಲ್ಲಿ ಇಟ್ಟಿದ್ದಾರೆ. ಇದು ನೀತಿ ಪಾಲಿಸಿ ಹೋಲ್ಡರಿಗೆ ತಮ್ಮ ಪಾಲಿಸಿಯನ್ನು ನೀತಿಗೆ ಪರಿಷ್ಕರಣೆ ಮಾಡಲು ಅನುಮತಿಸುತ್ತದೆ. ಭಾರತದಲ್ಲಿ ವಿಮೆ ರೆಪೊಸಿಟರಿಯನ್ನು ಸೆಪ್ಟೆಂಬರ್ ೨೦೧೩,೧೬ ರಂದು ಬಿಡುಗಡೆ ಮಾಡಿದರು. ಈ ತರದ ರೇಪೊಸಿಟರಿ ವಿಶ್ವದಲ್ಲಿ ಮೊದಲನೆಯದಾಗಿತ್ತು. ಇನ್ಶೂರೆನ್ಸ್ ರೆಗ್ಯುಲೇಟರಿ ಅಂಡ್ ಡೆವಲಪಮೆಂಟ್ ಅಥಾರಿಟಿ ಆಫ್ ಇಂಡಿಯಾ ಐದು ಘಟಕರಿಗೆ ವಿಮೆ ರೆಪೊಸಿಟರಿಯ ಕಾರ್ಯನಿರ್ವಹಿಸಲು ಪರವಾನ ಕೊಟ್ಟರು. ಅದರಲ್ಲಿ ಎಸ್.ಎಚ್.ಸಿ.ಎಲ್ ಪ್ರೊಜೆಕ್ಟ್ ಲಿಮಿಟೆಡ್ ಸೆಪ್ಟೆಂಬರ್ ೨೦೧೫ರಲ್ಲಿ ವಿಮೆ ರೆಪೊಸಿಟರಿಯ ಪರವಾನವನ್ನು ಶರಣು ಮಾಡಿದರು. ಉಳಿದ ನಾಲ್ಕು ಘಟಕರು ಯಾವುದು ಅಂದರೆ, ೧. ಸಿ.ಡಿ.ಎಸ್.ಎಲ್ ವಿಮೆ ರೆಪೊಸಿಟರಿ ಲಿಮಿಟೆಡ್. ೨. ಕರ್ ವಿ ವಿಮೆ ರೆಪೊಸಿಟರಿ ಲಿಮಿಟೆಡ್. ೩. ನ್ಯಾಶ್ನಲ್ ಇನ್ಶೂರೆನ್ಸ್ ಪಾಲಿಸಿ ರೆಪೊಸಿಟರಿ ೪. ಸಿ.ಎ.ಎಮ್.ಎಸ್ ರೆಪೊಸಿಟರಿ ಸೆರ್ವೀಸ್ ಲಿಮಿಟೆಡ್.

ಉಲ್ಲೇಖಗಳು[ಬದಲಾಯಿಸಿ]

  1. "Press Release". IRDA. 21 February 2013.
  2. https://www.irda.gov.in/Defaulthome.aspx?page=H1
  3. http://www.frontline.in/static/html/fl2921/stories/20121102292101300.htm