ಸದಸ್ಯ:Sanjana Nadka

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಕ್ತ ಹೀರುವ ಜೀವಿಗಳು

ಆಹಾರಾರ್ಜನೆಯಲ್ಲಿ ಜೀವಿಗಳು ತಮ್ಮದೇ ಆಯ್ಕೆ ಮತ್ತು ವೈಶಿಷ್ಟ್ಯ ತೋರುತ್ತವೆ. ಅವು ತಮ್ಮ ಬೆಳವಣಿಗೆಗೆ ಬೇಕಾದ ವಸ್ತುಗಳನ್ನು ಆಹಾರದಿಂದಲೇ ಪಡೆದು, ರಕ್ತಗತ ಮಾಡಿಕೊಳ್ಳುತ್ತವೆ. ಆದರೆ ಕೆಲವು ಜೀವಿಗಳು ಇತರೇ ಜೀವಿಗಳು ತಯಾರಿಸಿದ ಆಹಾರವನ್ನು ಅವುಗಳ ರಕ್ತಹೀರುವುದರಿಂದ ಪಡೆದುಕೊಳ್ಳುತ್ತವೆ. ಇವೇ ರಕ್ತಹಾರಿಗಳು. ರಕ್ತಹಾರಿಗಳೆಲ್ಲವೂ ಪರಾವಲಂಬಿಗಳು. ಇವು ಆಶ್ರಯಿಸುವ ಜೀವಿಯೇ ಪೋಷಕ ಜೀವಿ. ಪರಾವಲಂಬಿಗಳು ಆಶ್ರಯ ಮತ್ತು ಆಹಾರ ಎರಡಕ್ಕೂ ಪೋಷಕ ಜೀವಿಯನ್ನು ಅವಲಂಬಿಸಬಹುದು.

ಇಲ್ಲಿ ಬರೀ ಆಹಾರಕ್ಕಾಗಿ ಮಾತ್ರ ಪೋಷಕ ಜೀವಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಲ್ಲವು. ರಕ್ತ ಹೀರಲು ಹಾಗೂ ಪೋಷಕ ಜೀವಿಯೊಂದಿಗೆ ಅನುಕೂಲಕರ ಸಂಬಂಧಕ್ಕಾಗಿ ಈ ಜೀವಿಗಳು ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡಿವೆ. ವಿಶೇಷವಾಗಿ ಅವುಗಳ ಬಾಯಿಯ ಅಂಗಗಳು ಪೋಷಕ ಜೀವಿಯ ಚರ್ಮವನ್ನು ಚುಚ್ಚಿ ಹೀರುಕೊಳವೆಯಿಂದ ರಕ್ತ ಹೀರಲು ಒಳ್ಳೆಯ ಸಾಧನಗಳಾಗಿವೆ. ಹೆಸರಿಸಬಹುದಾದ ರಕ್ತ ಹಾರಿಗಳಲ್ಲಿ ಜಿಗಣೆಯನ್ನು ಬಿಟ್ಟರೆ ಮತ್ತೆಲ್ಲವೂ ಕೀಟ ವರ್ಗಕ್ಕೆ ಸೇರಿದವು. ಅವೇ ಸೊಳ್ಳೆ, ತಿಗಣೆ, ಚಿಗಟಿ ಮತ್ತು ಹೇನು.

ಜಿಗಣೆ : ಕೆರೆ, ಕೊಳ ಮುಂತಾದ ಸಿಹಿನೀರಿನ ತಾಣಗಳಲ್ಲಿ ವಾಸಿಸುವ ಇದು ವಲಯವಂತ ಪ್ರಾಣಿಗಳ ವಂಶಕ್ಕೆ ಸೇರಿದೆ.

ಸೊಳ್ಳೆ : ಹೆಣ್ಣು ಸೊಳ್ಳೆ ಮಾತ್ರ ರಕ್ತಹಾರಿ. ಅವು ಶಾಖ ವಾಸನೆಗಳಿಂದ ರಕ್ತ ಹೀರುತ್ತದೆ. ಸೊಳ್ಳೆಗಳು ಬಾಯಿಯ ಉಪಾಂಗಗಳನ್ನು ರಕ್ತದಾನಿಯ ಚರ್ಮವನ್ನು ಸೂಜಿಯಂತೆ ಚುಚ್ಚಿ ರಕ್ತವನ್ನು ಹೀರಲು ಅನುಕೂಲವಾಗುವಂತೆ ಮಾಡುತ್ತದೆ.

ಇಂತಹ ರಕ್ತ ಹೀರುವ ಜೀವಿಗಳಿಂದ ಅನೇಕ ರೋಗಗಳು ಉಂಟಾಗುತ್ತದೆ.


ಈ ಸದಸ್ಯರ ಊರು ಮಂಗಳೂರು.