ಸದಸ್ಯ:REENU INFANCIA/WEP 2018-19

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜನನ[ಬದಲಾಯಿಸಿ]

 ತಾರಾ ಸಿಂಗ್ ರವರು ಜೂನ್ ೧,೧೯೫೫ ರಂದು ಪಂಜಾಬಿನ ಪಗ್ ವಾರ ಎಂಬ ಊರಿನಲ್ಲಿ ಜನಿಸಿದರು.

ಸಾಧನೆಗಳು[ಬದಲಾಯಿಸಿ]

ಇವರು ಭಾರತವೈಟ್ಲಿಫ್ಟರ್. ಇವರು ಭಾರತದ "ಶುದ್ಧ ಮತ್ತು ಜರ್ಕ" ಸ್ಪರ್ಧೆಯಲ್ಲಿ ೨೦೦ ಕೆ.ಜಿ. ಗಳನ್ನು ದಾಟಿ ಕಂಚು ಪದಕ ಗೆದ್ದು,ನವದೆಹಲಿಯಲ್ಲಿ ನಡೆದ ೧೯೮೨ ಏಷಿಯನ್ ಗೇಮ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದರು. ಇವರಿಗೆ ೧೯೮೨ರಂದು ಅರ್ಜುನ ಪ್ರಶಸ್ತಿಯನ್ನು ನೀಡಲಾಗಿದೆ. ಇವರನ್ನು "ಭಾರತದ ಕಬ್ಬಿಣ ಮನುಷ್ಯ" ಎಂದು ಕರೆಯಲಾಗುತ್ತದೆ. ಇವರ ಎತ್ತರ ೧.೮೦ ಮೀಟರ್ಸ್. ಇವರು ೨೦೧೫ ರಲ್ಲಿ ನಿವೃತ್ತರಾದರು. ಇವರು ಪ್ರಸ್ತುತವಾಗಿ "ರಾಷ್ರೀಯ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್" ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ರಾಷ್ಟ್ರೀಯ ಮಟ್ಟದಲ್ಲಿ ಎಂಟು ಬಾರಿ ಸ್ಪರ್ಧಿಸಿ, ಆರು ಬಾರಿ ಚಿನ್ನ ಪದಕವನ್ನು ಮತ್ತು ಎರಡು ಬಾರಿ ಬೆಳ್ಳಿ ಪದಕಗಳನ್ನು ಜಯಿಸಿದ್ದಾರೆ.

ಜೀವನ[ಬದಲಾಯಿಸಿ]

 ಒಂದು ಬಾರಿ ತಾರಾ ಸಿಂಗ್ ರವರ ವಾಸಸ್ಥಾನದ ಕಾರಣದಿಂದ ಮಾಲ್ವ ಜಿಲ್ಲೆಯಲ್ಲಿ ನಡೆದ ಪ್ರಸಾರ (ರಿಲೇ) ಕ್ರೀಡೆಯಲ್ಲಿ ಭಾಗವಹಿಸಲು ಅನುಮತಿ ನೀಡಲಿಲ್ಲ. ಏಕೆಂದರೆ ಇವರು ನವನ್ ಶಹರ್ ಜಿಲ್ಲೆಗೆ ಸೇರಿದವರು. ಅಲ್ಲಿ ನಡೆದ ಪಂದ್ಯದಲ್ಲಿ ಬರೀ ಮಾಲ್ವ ಜಿಲ್ಲೆಗೆ ಸೇರಿದ ಕ್ರೀಡಾಪಟುಗಳು ಮಾತ್ರ ಸ್ಪರ್ಧಿಸಲು ಅನುಮತಿ ನೀಡಲಾಗಿತ್ತು. ಇದರ ಬಗ್ಗೆ ತಿಳಿಯದ ಸಿಂಗ್ ರವರು ಈ ಪಂದ್ಯದಲ್ಲಿ ಗೆದ್ದೆ ಗೆಲ್ಲುವೆ ಎಂಬ ನಂಬಿಕೆಯಿಂದ ನವನ್ ಶಹರ್ ನಿಂದ ಮಾಲ್ವ ಜಿಲ್ಲೆಗೆ ಬಂದು, ಈ ಸುದ್ದಿಯನ್ನು ಕೇಳಿ ಮನಸೋತೋದರು. 
 ಇವರು ಅಂತಾರಾಷ್ಟ್ರೀಯ ಕ್ರೀಡಾಪಟು ಎಂದು ತಿಳಿದು, 'ಕಾಮನ್ ವೆಲ್ತ್' ನ ಸಂಘಟಕರು ಇವರಿಗೆ ಕಾಮನ್ ವೆಲ್ತ್ ಸ್ಪರ್ಧೆಗೆ ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಗೆ ತಯಾರಿಸಲಾದ ಟಿ-ಶರ್ಟ ಅನ್ನು ಕೂಡ ನೀಡಲಿಲ್ಲ. ೧೯೮೨ ರ ಏಷ್ಯನ್ ಕ್ರೀಡಾಕೂಟದಲ್ಲಿ ಶುದ್ಧ ಮತ್ತು ಜರ್ಕ್ ವಿಭಾಗದಲ್ಲಿ ಪದಕವನ್ನು ನೊಂದಾಯಿಸಿಕೊಳ್ಳುವ ಏಕೈಕ ಇಂಡಿಯನ್ ವೆಟ್ಲಿಫ್ಟರ್ ಆಗಿದ್ದ ತಾರಾ ಸಿಂಗ್ ಅವರನ್ನು ಒಂದು ಮೂಲೆಯಲ್ಲಿ ನಿಲ್ಲುವಂತೆ ಹೇಳಿದ್ದಾರೆ.
ಅದೃಷ್ಟ ವಶಾತ್, ಅನುಭವಿ ವೆಟ್ಲಿಫ್ಟರ್ ತಾರಾ ಸಿಂಗ್ ರವರು, ಪ್ರಧಾನಿ ಕಾರ್ಯದರ್ಶಿ ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ (ಐಓಎ) ರಾಜ ಸಿಧುರವರ ಗಮನ ಸೆಳೆಯಿತು. ಅವರು ಶೀಘ್ರವಾಗಿ ಅಧಿಕೃತ ಟಿ-ಶರ್ಟ ಅನ್ನು ಹಿಡಿದು ಅವರನ್ನು ಗೌರವಾನ್ವಿತರು ಮತ್ತು ಇತರ ಅಂತಾರಾಷ್ಟ್ರೀಯ ಆಟಗಾರರಿಗೆ ಪರಿಚಯಿಸಿದರು.
ಈ ಪ್ರಸಂಗದಲ್ಲಿ ಅವರ ನಿರಾಶೆಯನ್ನು ವ್ಯಕ್ತಪಡಿಸಿದ ತಾರಾ ಸಿಂಗ್, "ನಾನು ನವನ್ ಶಹರ್ ನಿಂದ ಬಂದಂತೆ ನನ್ನ ಹುಟ್ಟಿದ ಸ್ಥಳವು ಜಲಂಧರ್ ಅಥವಾ ಲುಧಿಯಾನಾದಲ್ಲಿ ಜನಿಸಿದರೆ ನಾನು ಇಂದು ಸಂಘಟಕರನ್ನು ಗೌರವಿಸಿಸುತ್ತಿದೆ" ಎಂದು ಹೇಳಿದರು.ಮತ್ತೆ "ನನಗೆ ಪಾರ್ಕರ್ ಹೌಸ್ ನಲ್ಲಿ ವರದಿ ಮಾಡಲು ಹೇಳಲಾಗಿತ್ತು; ಆದರೆ ಇಲ್ಲಿಗೆ ಬಂದಾಗ, ಸಮಾರಂಭಕ್ಕೆ ಆಹ್ವಾನಿಸಿದ ಆಟಗಾರರ ಪಟ್ಟಿಯಲ್ಲಿ ನನ್ನ ಹೆಸರು ಇರಲಿಲ್ಲ ಎಂದು ತಿಳಿದು ನನಗೆ ಆಶ್ಚರ್ಯವಾಯಿತು. ಹಿರಿಯ ಆಟಗಾರರನ್ನು ಇಂತಹ ಆಟಕ್ಕೆ ಬಳಸಲಾಗುತ್ತಿದೆ ಎಂದು ನನಗೆ ವಿಷಾದವಿಲ್ಲ."
ಮಹಿಳೆಯರ ಸರ್ಕಾರಿ ಕಾಲೇಜಿನಲ್ಲಿರುವ ಗಮ್ಯಸ್ಥಾನದ ಕಡೆಗೆ ಕ್ವೀನ್ಸ್ ಬ್ಯಾಟನ್ ನೇತೃತ್ವದ ನಂತರ, ಪಾರ್ಕರ್ ಹೌಸ್ ನಲ್ಲಿ ಯಾವುದೇ ಆಡಳಿತಾತ್ಮಕ ಅಧಿಕಾರಿಯು ಕಂಡುಬಂದಿಲ್ಲ ಎಂದು ಆಡಳಿತದ ಕಲ್ಲೆದೆಯ ವರ್ತನೆ ಮುಂಚೂಣಿಗೆ ಬಂದಿತು.

ಪ್ರಶಸ್ತಿಗಳು[ಬದಲಾಯಿಸಿ]

ಸಿಂಗ್ ರವರು ಕಾಮನ್ವೆಲ್ತ್ ಚಾಂಪಿಯನ್ಷಿಪ್ರಲ್ಲಿ ೧೯೮೫ರಲ್ಲಿ ಕಾರ್ಡಿಫ್, ವೇಲ್ಸ್ ಮತ್ತು ೧೯೮೧ರಲ್ಲಿ ಆಕ್ಲೆಂಡ್,ನ್ಯೂಜಿಲ್ಯಾಂಡ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಬೆಳ್ಳಿ ಪದಕಗಳನ್ನು ಗೆದ್ದರು; ಹಾಗು ೧೯೮೧ರಲ್ಲಿ ಬ್ರಿಸ್ಬೇನ್, ಆಸ್ಟ್ರೇಲಿಯಾ ದಲ್ಲಿ ನಡೆದ ಮಿನಿ ಕಾಮನ್ವೆಲ್ತ್ ಆಟದಲ್ಲೂ ಬೆಳ್ಳಿ ಪದಕವನ್ನು ಗಳಿಸಿದರು. ನಂತರ ೧೯೮೧ರಲ್ಲಿ ಆಕ್ಲೆಂಡ್, ನ್ಯೂಜಿಲ್ಯಾಂಡ್ ನಲ್ಲಿ ನಡೆದ ನ್ಯೂಜಿಲ್ಯಾಂಡ್ ಸಮ್ಮರ್ ಗೇಮ್ಸ್ ನಲ್ಲೂ ಬೆಳ್ಳಿ ಪದಕವನ್ನು ಜಯಿಸಿದರು.

೧೯೮೧ರಲ್ಲಿ ನಗೊಯಾ, ಜಪಾನ್ ನಲ್ಲಿ ನಡೆದ ಏಷಿಯನ್ ಚಾಂಪಿಯನ್ಷಿಪ್ ನಲ್ಲಿ ಕಂಚು ಪದಕವನ್ನು ಗೆದ್ದರು; ಹಾಗು ೧೯೮೪ರಲ್ಲಿ ಸೊಫಿಯಾ,ಬಲ್ಗೇರಿಯಾದಲ್ಲಿ ನಡೆದ ಪ್ರಪಂಚದ ರೈಲ್ವೇ ಗೇಮ್ಸ್ ನಲ್ಲಿ ಕಂಚು ಪದಕ ಮತ್ತು ೧೯೮೪ರಲ್ಲಿ ಇಸ್ಲಾಮಾಬಾದ್, ಪಾಕಿಸ್ತಾನ ದಲ್ಲಿ ನಡೆದ ಪಾಕಿಸ್ತಾನ ನಾಷಿನಲ್ ಗೇಮ್ಸ್ ನಲ್ಲಿ ಚಿನ್ನದ ಪದಕವನ್ನು ಗೆದ್ದರು.

ಉಲ್ಲೇಖಗಳು[ಬದಲಾಯಿಸಿ]

[೧] [೨]

  1. https://www.google.co.in/search?q=tara+singh+arjuna+award&rlz=1C1GGRV_enIN787IN787&oq=tara+singh+arjuna+&aqs=chrome.1.69i57j0.11925j0j7&sourceid=chrome&ie=UTF-8#
  2. https://www.google.co.in/search?q=tara+singh+arjuna+award&rlz=1C1GGRV_enIN787IN787&oq=tara+singh+arjuna+&aqs=chrome.1.69i57j0.11925j0j7&sourceid=chrome&ie=UTF-8#