ಸದಸ್ಯ:Mariaalice22/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  • ಪಾಪವು ದೇವರ ಈ ಪ್ರತಿರೂಪವನ್ನು ಕುಟುಂಬದಲ್ಲಿ ನಾಶ ಮಾಡುತ್ತದೆ.

ಪಾಪವು ಮಾನವನ ಘನತೆಯ ಬೇರಾದಂತಹ ದೇವರ ಪ್ರತಿರೂಪವನ್ನೇ ನಾಶಪಡಿಸಲು ಪ್ರಯತ್ನ ಪಡುತ್ತದೆ. ಸ್ವಾರ್ಥ ಎದ್ದು ಕಾಣುತ್ತದೆ. ತನ್ನನ್ನು ಉಳಿಸಿಕೊಳ್ಳುವುದಕ್ಕೊಸ್ಕರ ನರನು ನಾರಿಯನ್ನು ದೂಷಿಸುವುದರಲ್ಲಿ ಯಾವುದೇ ತಪ್ಪನ್ನು ಕಾಣನು. ಅವಳು ತಪ್ಪತಸ್ತಳು, ಅವಳನ್ನು ಶಿಕ್ಷಿಸು, ಕೊಲ್ಲು ಅದೇ ನಾರಿಯಾದರೊ ತನ್ನ ಜನ್ಮ ನೀಡುವಂತಹ ಕೊಡಿಗೆಯನ್ನು ಒಂದು ಕಷ್ಟಕರ ಕೆಲಸವನ್ನಾಗಿ ಮಾರ್ಪಡಿಸಿಕೊಳ್ಳುತ್ತಾಳೆ ಕಾರಣ ಪ್ರೀತಿಯಿಲ್ಲದಿದ್ದರೆ ಜನ್ಮ ನೀಡುವುದು ಸುಲಭದ ಕೆಲಸವಲ್ಲ. ಆಗಲೂ ಪ್ರಸವವೇದನೆ ಇತ್ತು ಆದರೆ ಅದರ ಸಂದರ್ಭವು ಒಂದು ಜೀವಕ್ಕೆ ಜನ್ಮ ನೀಡುವುದಾಗಿತ್ತು. ಆದರೆ ಈಗ ಪ್ರೀತಿಯೇ ಇಲ್ಲದೆ ಪ್ರಸವವೆದನೆ ಇಲ್ಲದೆ ಜನ್ಮ ನೀಡಲು ಅವಳು ಇಚ್ಚಿಸಿದಳು. ನರ ಹಾಗೂ ನಾರಿಯ ಮಧ್ಯದ ಪ್ರೀತಿಯು ದೇವರ ಪ್ರತಿರೂಪವಾಗಿತ್ತು ಅದನ್ನು ಪಾಪವು ನಾಶ ಮಾಡುತ್ತದೆ.ಇದು ಇನ್ನೂ ಕೀಳಾಗಿದ್ದು ಕಾಯಿನ್ ನ ಭ್ರಾತೃಘಾತಕತನದಿಂದ. ಸಹೋದರನಿಂದ ಸಹೋದರನು ಮರಣಕ್ಕೀಡಾದಾಗ ಕುಟುಂಬದ ನಾಶವು ಸಂಪೂರ್ಣತೆಗೆ ಮುಟ್ಟುತ್ತದೆ.

  • ಹಳೆಯ ಒಡಂಬಡಿಕೆಯಲ್ಲಿ ಕುಟುಂಬದ ಪಾತ್ರ

ಪವಿತ್ರತೆ: ಹಿಬ್ರಿಯರಿಗೆ ಅತೀ ಮಾನ್ಯನೀಯವಾಗಿತ್ತು.(ಯಾಜ ೧೮:೧-೩೦,ಧರ್ಮೋ ೨೨:೧೩-೩೦) ಯಾವುದೇ ಸಂತೋಶ ಅಥವಾ ವಿವಾಹದ ಹೊರಗಿನ ಹಿಬ್ರಿಯರು ಖಂಡಿಸುತ್ತಿದ್ದರು. ಅವರಿಗೆ ಮಾನವನ ಬೆತ್ತಲೆ ದೇಹದ ಪ್ರದರ್ಶನವು ನಾಚಿಕೆಪಡುವಂಥಹುದಾಗಿತ್ತು.(ಆದಿ ೯:೨೨-೨೫) ಸೋದೋಮ್ ಮತ್ತು ಗೊಮೊರ್ರಾದ ಜನರು ನಾಶವಾಗಲು ಮುಖ್ಯ ಕಾರಣವು ಅವರ ಅಸ್ವಾಭಾವಿಕ (ಆದಿ ೧೯:೪-೫).

  • ಮಕ್ಕಳು ದೇವರ ಆಶಿರ್ವಾದ

ಆದಾಮ ಮತ್ತು ಹವ್ವಳು ಪ್ರೀತಿಯಿಂದ ದೈಹಿಕವಾಗಿ ಹವ್ವಳು ಕಾಯಿನ್ ನ್ನು ಜನ್ಮ ನೀಡಿದಾಗ "ನಾನು" (ಆದಿ ೪:೧). ಅವಳಿಗೆ ತನ್ನ ಮಗುವು ಮಾನವನಿಂದ ಮಾತ್ರವಲ್ಲದೆ ದೇವರಿಂದ ಕೂಡ ಎಂದು ಅವಳಿಗೆ ತಿಳಿದಿತ್ತು. ಮಾನವ ಕುಲಕ್ಕಾಗಿ ದೇವರ ಯೋಜನೆಯು ಕುಟುಂಬದ ಮೇಲೆ ಸ್ಥಾಪಿಸಲ್ಪಟ್ಟುತ್ತು. ನರ ಮತ್ತು ನಾರಿಯಿಂದ ಮನುಷ್ಯನ ಜೀವನ ಮಕ್ಕಳ ಮುಖಾಂತರ ದೇವರ ಕೊಡುಗೆಯಾಗಿ ಮುಂದುವರೆಯಲ್ಪಟ್ಟುತ್ತು. ಪ್ರತಿಯೊಬ್ಬಳ ಗರ್ಭಧಾರಣೆ ವೇಳೆ ದೇವರು ಉದರಲ್ಲಿಯೇ ತನ್ನ ಜೀವ ನೀಡುವಂತಹ ಶ್ವಾಸವನ್ನು ಊದುತ್ತಾರೆ. ಮಗುವು ವಿವಾಹದ ಫಲಪ್ರದತೆಯನ್ನು ಹಾಗೂ ದೇವರ ಅತ್ಮವು ಇರುವುದರಿಂದ ಅವರ ಆಶಿರ್ವಾದವನ್ನೂ ತೋರಿಸುತ್ತದೆ. ಮಕ್ಕಳು ದೇವರ ಕೊಡುಗೆಯಾಗಿ ಹುಟ್ಟಿದ್ದಕ್ಕೆ ಬೈಬಲ್ ನಲ್ಲಿ ಅನೇಕ ಉದಾಹರಣೆಗಳಿವೆ: ಇಸಾಕ (ಆದಿ ೧೭:೧೫), ಸಂಸೋನ (ನ್ಯಾಯ ೧೩:೨), ಸಮುವೇಲ (ಸಮು ೧:೧೨)

  • ಆತಿಥಿ ಸತ್ಕಾರ

ಕುಟುಂಬದ ಸದಸ್ಯರ ಒಬ್ಬರಿಗೊಬ್ಬರ ಪ್ರೀತಿ ಬೇರೆಯವರನ್ನು ಆಂದರೆ ಕುಟುಂಬದ ಸದಸ್ಯರಲ್ಲದವರನ್ನು ಪ್ರೀತಿಸಲು ಸಹಾಯವಾಗುತ್ತದೆ. ಹಾಗೂ ಇದನ್ನು ಅವರ ಅತಿಥಿ ಸತ್ಕಾರದಲ್ಲಿ ನೋಡಬಹುದು. ಹಳೆಯ ಒಡಂಬಡಿಕೆಯ ಇಸ್ರಯೇಲರು ಆತಿತ್ಯ ಸತ್ಕಾರಕ್ಕೆ ಹೆಸರುವಾಸಿಯಾದವರು. ಅಬ್ರಾಹಾಮನ ಆಳೂ ಬೆಥುಯೆಲಗೆ ಹೋದಾಗ ಅಲ್ಲಿ ಅವನಿಗೆ ತುಂಬಾ ಒಳ‍್ಳೆಯ ಆತಿಥಿಯ ಸತ್ಕಾರ ಸಿಗುತ್ತದೆ.(ಆದಿ ೨೪). ದೇವರು ಕೂಡ ಕುಟುಂಬಗಳಿಗೆ ಭೇಟಿ ನೀಡುತ್ತಾರೆ ಹಾಗೂ ಒಂದು ಸತ್ಕಾರವನ್ನು ಆಶಿಸುತ್ತಾರೆ. ಹಳೆಯ ಒಡಂಬಡಿಕೆಯಲ್ಲಿ ದೇವರು ಮನುಷ್ಯ ರೂಪದಲ್ಲಿ ಕುಟುಂಬಗಳಿಗೆ ಭೇಟಿ ನೀಡುತ್ತಾರೆ ಹಾಗೂ ಅವರು ದೇವರು ಎಂಬ ಯಾವುದೇ ಸುಳಿವಿಲ್ಲದೆ ಅವರಿಗೆ ಆತಿತ್ಯ ಸತ್ಕಾರ ನೀಡಲಾಗುತ್ತದೆ ಹಾಗೂ ರಸದೌತಣವನ್ನು ನೀಡಲಾಗುತ್ತದೆ ಮತ್ತು ಹಿಂದಿರುಗಿ ಅತಿಥಿಯು ಕುಟುಂಬವನ್ನು ಆಶಿರ್ವದಿಸುತ್ತಾರೆ. ಮನೆಯ ಯಜಮಾನನು ಕ್ರಮೇಣವಾಗಿ ಅತಿಥಿಯ ದೈವಿಕತೆಯನ್ನು ಅರಿತುಕೊಳ್ಳುತ್ತಾನೆ.

  • ಕ್ಙಮೆ ಮತ್ತು ಕುಟುಂಬ

ಕ್ಙಮೆಯಿಂದ ಸಂಪೂರ್ಣತೆ ಬರುತ್ತದೆ. ಅಲ್ಪ ಪ್ರಮಾಣದ ನೋವಿದ್ದಾಗ ಕ್ಙಮೆಯು ಕಷ್ಟಕರವಲ್ಲ. ಆಳವಾದ ಗಾಯವಿದ್ದರೆ ಕ್ಙಮೆಯು ಕಷ್ಟಕರ. ಬೈಬಲನಿಂದ ನಮಗೊಂದು ಉದಾಹರಣೆ ಸಿಗುತ್ತದೆ. ಯಾಕೊಬ ತನ್ನ ಅಣ್ಣನಿಗೆ ಮೋಸ ಮಾಡಿ ತನ್ನ ಅಪ್ಪನಿಂದ ತನ್ನ ಅಣ್ಣನ ಜನ್ಮಸಿದ್ದ ಹಕ್ಕಾದ ಆಶಿರ್ವಾದವನ್ನು ಪಡೆದುಕೊಂಡನು. ಹೀಗೆ ತನ್ನ ಜೀವವನ್ನು ರಕ್ಷಿಸಿಕೊಳ್ಳಲು ಓಡಬೇಕಾಯಿತು. ತನ್ನ ಅಣ್ಣನೊಡನೆ ಮುರಿದಂತಹ ಸಂಬಂಧವನ್ನು ಸರಿಪಡಿಸಿಕೊಳ್ಳಲು ತಿರುಗಿಬಂದನು. ಅವನು ಒಬ್ಬನೇ ಇದ್ದಾಗ ರಾತ್ರಿಯಲ್ಲಿ ಅವನೊಡನೆ ಅವನ ಆತ್ಮಸಾಕ್ಷಿ ಸೆಣಸಾಡಬೇಕಾಯಿತು. ಯಕೋಬನು ಬಿಡದಿದ್ದಾಗ ಅವನು ಯಕೋಬನ ತೊಡೆಯ ಕೀಲನ್ನು ಮುರಿದನು.