ಸದಸ್ಯರ ಚರ್ಚೆಪುಟ:Mariaalice22/ನನ್ನ ಪ್ರಯೋಗಪುಟ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                   ದೇವರ  ಯೋಜನಾ  ಕಾರ್ಯದಲ್ಲಿ ಕುಟುಂಬದ ಪಾತ್ರ
ಪೀಠಿಕೆ(ಪ್ರಸ್ತಾವನೆ,ಮುನ್ನುಡಿ)

ದೇವರು ನಮ್ಮನ್ನು ನೋಡಿ ಸಂತೋಷಪಟ್ಟರು ಹಾಗೂ ನಮ್ಮ ಸಂತೋಷಕ್ಕಾಗಿಯೇ ತಮ್ಮಲ್ಲಿರುವ ಅತ್ಯಂತ ಕೊಡುಗೆಯನ್ನು ನಮಗೆ ನೀಡಿದ್ದಾರೆ. ಅದುವೇ ಕುಟುಂಬ. ಕುಟುಂಬವು ದೇವರು ನಮಗೆ ನೀಡುವಾಗ ನಮ್ಮ ಸಂತೋಷ, ಒಳ್ಳೆಯತನ ಅವರ ಮನಸ್ಸಿನಲ್ಲಿತ್ತು. ದೇವರು ತಮ್ಮ ಯೋಜನಾ ಕಾರ್ಯವನ್ನು ಮುಂದುವರೆಸಿಕೊಂಡು ಹೋಗಲು ಕುಟುಂಬವನ್ನು ಉಪಯೋಗಿಸಿಕೊಳ್ಳುತ್ತಾರೆ. ನಮ್ಮ ದೇವರು ಐತಿಹಾಸಿಕ ಹಾಗೂ ಘಟನೆಗಳ ದೇವರಾಗಿದ್ದಾರೆ. ಕುಟುಂಬದಲ್ಲಿನ ಸದಸ್ಯರು ಹಾಗೂ ನಡಯುವ ಘಟನೆಗಳನ್ನು ದೇವರು ತಮ್ಮ ಯೋಜನೆಗಳ ಸಂಪೂರ್ಣತೆಗೋಸ್ಕರ ಉಪಯೋಗಿಸಿಕೊಳ್ಳುತ್ತಾರೆ ಮತ್ತು ಹೀಗೆ ಕುಟುಂಬಗಳ ಮಹತ್ವವನ್ನು ಎತ್ತಿ ಹಿಡಿಯುತ್ತಾರೆ. ದೇವರು ಅನೇಕರನ್ನು ತಮ್ಮ ಈ ಯೋಜನೆಯ ಸಂಪೂರ್ಣತೆಗೋಸ್ಕರ ಈ ಯೋಜನೆಯಲ್ಲಿ ಹಾಗೂ ಅವರೆಲ್ಲರೂ ಘಟನೆಗಳಿಂದಲೇ ದೇವರು ಅಸ್ತಿತ್ವವನ್ನು ತಮ್ಮ ಜೀವನದಲ್ಲಿ ಕಂಡುಕೊಂಡರು. ಹಾಗಾದರೆ ದೇವರ ಯೋಜನೆಯಲ್ಲಿ ಯಾವ ಪಾತ್ರ ವಹಿಸಿತ್ತು ಎಂದು ನೋಡೋಣ.

  1. ಕೌಟುಂಬಿಕ ದೇವರು:

ನಮ್ಮ ದೇವರು ಕುಟುಂಬಿಕ ದೇವರು ಆಗಿದ್ದಾರೆ. ಅಂದರೆ ಕುಟುಂಬದ ದೇವರು. ಪವಿತ್ರ ಬೈಬಲನ ಮೊದಲ ಪುಸ್ತಕ ಆದಿಕಾಂಡದ ಮೊದಲನೆಯ ಕುಟುಂಬನ್ನು ರಚಿಸುತ್ತಾರೆ. ಇಲ್ಲಿ ದೇವರು ನಮ್ಮಂತೆ ಹಾಗೂ ನಮ್ಮನ್ನು ಎಂಬ ಶಬ್ದಗಳನ್ನು ಉಪಯೋಗಿಸಿ ತಾವು ಸಂಬಂಧಗಳ ದೇವರೆಂದು ತಿಳಿಸುತ್ತಾರೆ.(ಆದಿ ೧:೨೬) ಹಿಬ್ರಿಯ ಭಾಷೆಯಲ್ಲಿ ಎಲೊಹಿಮ್ ಎಂದರೆ ಬಹುವಚನದಲ್ಲಿ ಕುಟುಂಬದ ದೇವರು. ದೇವರ ಯೋಜನೆ ಸರ್ವ ಮನುಷ್ಯರನ್ನು ತಮ್ಮ ಕುಟುಂಬದಲ್ಲಿ ಸೇರಿಸಿಕೊಳ್ಳಲು ಇಚ್ಚಿಸಿದರು. ಮನುಷ್ಯರಿಗೆ ತಮ್ಮ ಪವಿತ್ರ ಕಾರ್ಯದ ಮತ್ತು ದೈವಿಕತೆಯಲ್ಲಿ ಒಂದು ಭಾಗ ನೀಡಿದ್ದಾರೆ. ಮತ್ತು ಹೀಗೆ ಅವರನ್ನು ಅವರ ಸ್ಥಾನದಿಂದ ಮೇಲಕ್ಕೆತ್ತಿದ್ದಾರೆ. ಇದೇ ದೇವರ ಯೋಜನೆ.

  1. ಮೊದಲ ಕುಟುಂಬದ ರಚನೆ:

ಕುಟುಂಬದ ರಚನೆಯ ಮೊದಲ ಕಾರ್ಯವನ್ನು ನಾವು ಆದಿಕಾಂಡದಲ್ಲಿ ಅತೀ ಸ್ಪಷ್ಟವಾಗಿ ಓದುತ್ತೆವೆ. (ಆದಿ ೧:೨೭) ಈ ಮೊದಲ ಮನುಷ್ಯರ ಜೋಡಿಯನ್ನು ದೇವರು ರಚಿಸಿ ಅವರ ರಚನೆಯನ್ನು ಸರಿಯಾಗಿ ನೋಡಿಕೊಳ್ಳಲು, ಭೂಮಿ ಮೇಲೆ ಜನವಸತಿ ಮಾಡಲು ಹಾಗೂ ಅವರೊಡನೆ ಒಂದು ಸಂಬಂಧದಲ್ಲಿರಲು ಕರೆ ನೀಡಿದರು. ಅವರ ಹೆಸರುಗಳು ಅವರ ಪಾತ್ರಗಳನ್ನು ತಿಳಿಸುತ್ತವೆ.ದೇವರು ನರನನ್ನು ಆದಾಮ ಎಂದು ಕರೆದರು ಹಾಗೆಂದರೆ ನರ, ಹಾಗೂ ನಾರಿಯನ್ನು ಹವ್ವಳು ಎಂದು ಕರೆದರು ಹಾಗೆಂದರೆ ಜೀವನ. ಹೀಗೆ ಆದಾಮ ಹಾಗು ಹವ್ವಳಲ್ಲಿ ಮೊದಲ ಕುಟುಂಬಕ್ಕೆ ಅಸ್ತಿತ್ವ ಸಿಗುತ್ತದೆ. ಅವರಿಂದಲೇ ನಾವೆಲ್ಲರು ಬಂದಿರುವುದು. ಮನುಷ್ಯ ಸಂಬಂಧಗಳಿಗೆ ಉತ್ತೆಜನ ಕೊಡುವುದೇ ಮನುಷ್ಯರ ಅಥವಾ ಮನುಷ್ಯ ಕುಟುಂಬದ ರಚನೆಯ ಕಾರಣವೂ ಆಗಿದೆ ಹಾಗೂ ಅವರ ಮೂಲಕ ಬೇರೆ ಕುಟುಂಬಗಳಲ್ಲಿ ಹಾಗೂ ಜೀವಿಗಳಲ್ಲಿ ಹಾಗೂ ಅಂತಿಮವಾಗಿ ದೇವರೊಡನೆ ಸಂಬಂಧದಲ್ಲಿರುವುದೂ ಕೂಡ. ಎಲ್ಲರೂ ಅವರಿಂದ ಅಸ್ತಿತ್ವಕ್ಕೆ ಬಂದಿರುವುದು. ಈ ರೀತಿ ದೇವರಿಗೆ ಬೇಕಾದದ್ದು ಕೌಟುಂಬಿಕ ಸಮಾಜ. ಈ ಕುಟುಂಬ ಸಮಾಜದ ಮುಖ್ಯ ಪಾತ್ರಗಳು: ಆದಾಮ ಹವ್ವಳ ಹಾಗೂ ಅವರ ಪುತ್ರರು. ಆದಾಮ ಮತ್ತು ಹವ್ವಳದ್ದು ಮಾತ್ರ ಒಂದು ಕುಟುಂಬವಾಗಿರದೆ ಅವರಿಂದ ಅನೇಕ ಕುಟುಂಬಗಳು ಅಸ್ತಿತ್ವಕ್ಕೆಬಂದಿದ್ದಾರೆ.ಬೈಬಲ್ಲಿನಲ್ಲಿನ ಎಲ್ಲರೂ ಒಂದಲ್ಲ ಒಂದು ಕುಟುಂಬಕ್ಕೆ ಸಂಬಂಧಪಟ್ಟಿರುತ್ತಾರೆ ಏಕೆಂದರೆ ಎಲ್ಲರನ್ನೂ ರಚಿಸಿದ ದೇವರು ಕೌಟುಂಬಿಕ ಹಾಗೂ ಸಂಬಂಧದ ವ್ಯಕ್ತಿಯಾಗಿದ್ದಾರೆ.

  1. ಕುಟುಂಬಕ್ಕೆ ಆಪತ್ತು

ದೇವರು ಮನುಷ್ಯನನ್ನು ಒಬ್ಪಂಟಿಯಾಗಿ ರಚಿಸಲಿಲ್ಲ ಬದಲಾಗಿ ಅವರನ್ನು ಸ್ತ್ರೀ-ಪರುಷರಾಗಿ ರಚಿಸಿದರು.(ಆದಿ ೧:೨೭) ಕುಟುಂಬದ ಪ್ರಮುಖ ಹಾಗೂ ಅಗ್ರಗಣ್ಯ ಕಾರ್ಯವೆಂದರೆ ನಿಷ್ಠೆಯಿಂದ ಪ್ರೀತಿಸುವುದು. ಹೀಗಾಗಿ, ಕುಟುಂಬದ ಪ್ರಮುಖ ಕಾರ್ಯವೆಂದರೆ ನಿಷ್ಠೆಯಿಂದ ಪ್ರೀತಿಸುವುದು. ಹೀಗಾಗಿ ಕುಟುಂಬದ ಪ್ರಮುಖ ಕಾರ್ಯ ಶಾಶ್ವತ ಶಕ್ತಿ, ಹಾಗೂ ಕೊನೆಯ ಧ್ಯೆಯವೆಂದರೆ ಪ್ರೀತಿ. ಪ್ರೀತಿಯಿಲ್ಲದೆ ಕುಟುಂಬವು ಅಸ್ತಿತ್ವದಲ್ಲಿರಲು, ಬೆಳೆಯಲು ಹಾಗೂ ಸಂಪೂರ್ಣತೆಗೆ ಮುಟ್ಟಬಾರದು ಹಾಗೂ ಜನರಿರುವಂತಹ ಸಮಾಜವಾಗಿ ಬೆಳೆಯಲಾರದು. ಪ್ರತಿ ಕುಟುಂಬದ ಮುಂದೆ ಕೂಡ ತದ್ವಿರುದ್ದವಾದಂತಹ ಬೇಡಿಕೆಗಳು ಒಂದು ನಿಲ್ಲುತ್ತವೆ.ಅವುಗಳ್ಯಾವುವೆಂದರೆ ಕುಟುಂಬದ ಸದಸ್ಯರಿಗೆ ಸರಾಗತೆ ಹಾಗೂ ಸುರಕ್ಯತೆ ನೀಡಬೇಕು ಅದರಂತೆಯೇ ಕುಟುಂಬದ ಅನನ್ಯತೆ/ ವ್ಯಕ್ತಿತ್ವವನ್ನು ಕಾಪಾಡುವುದು ಹಾಗೂ ಬದಲಾವಣೆಯ ಅಗತ್ಯ ಹಾಗೂ ಹೊಸ ಸನ್ನಿವೇಶಗಳಿಗೆ ಹೊಂದಿಕೊಳ್ಳುವಂತಹ ಶಕ್ತಿ.ಅಷ್ಟೇ ಅಲ್ಲದೆ ಮದುವೆ ಸಂಬಂಧದಲ್ಲಿ ಅವಿಶ್ವಾಸ ಒಳಸೇರತ್ತವೆ. ಇವುಗಳಿಂದಾಗಿ ದುರಾಚಾರ, ಕಠಿಣತೆ, ದು‍:ಖ, ಅಹಲಿಕೆಗಳಿಗೆ ಎಡಮಾಡಿಕೊಡಲಾಡಲಾಗುತ್ತಿದೆ, ದೇವರು ಕುಟುಂಬವನ್ನು ರಚಿಸಲು ಕಾರಣವು ಸಂತೋಷ, ಸಮಾಧಾನ. ಈ ಎಲ್ಲ ಸಂಕಷ್ಟಗಳಿಗೆ ಪರಿಹಾರಗಳನ್ನು ಹಳೆಯ ಒಡಂಬಡಿಕೆಯ ಪಾತ್ರಗಳಲ್ಲಿ ನೋಡಬಹುದು.