ಸದಸ್ಯ:Manasa Bollur

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗುರುತ್ವ

ಚಲನೆಯ ಮೂರು ನಿಯಮಗಳನ್ನು ತಿಳಿಸಿದ್ದೇ ಅಲ್ಲದೆ ಆಕಾಶ ಕಾಯಗಳ ಅದರಲ್ಲಿಯೂ ಗ್ರಹಗಳು ಮತ್ತು ಚಂದ್ರನ ಚಲನೆಯನ್ನು ಕುರಿತು ಸರ್ ಐಸಾಕ್ ನ್ಯೂಟನ್ ಪರಿಶೀಲಿಸಿದನು. ಭೂಮಿಯ ಸುತ್ತ ಹೆಚ್ಚು ಕಡಿಮೆ ವೃತ್ತೀಯ ಪಥದಲ್ಲಿ ಚಲಿಸುವ ಚಂದ್ರನ ಮೇಲೆ ವರ್ತಿಸುವ ಬಲಗಳ ಸ್ವರೂಪವನ್ನು ಪರೀಕ್ಷಿಸಿದನು.

ಭೂಮಿಯ ಮೇಲಿನ ಪ್ರತಿಯೊಂದು ವಸ್ತುವು ಭೂಮಿಯ ಕೇಂದ್ರದ ಕಡೆಗೆ ಆಕರ್ಶಿತವಾಗುತ್ತದೆ ಎಂಬುದನ್ನು ನ್ಯೂಟನ್ ತೀರ್ಮಾನಿಸಿದನು. ಭೂಮಿಯು ವಸ್ತುವಿನ ಮೇಲೆ ರ್ಪಯೋಗಿಸುವ ಬಲವು ಆ ವಸ್ತುವು ಭೂಮಿಯ ಕೇಂದ್ರದಿಂದ ಇರುವ ದೂರದ ವರ್ಗಕ್ಕೆ ವಿಲೋಮವಾಗಿಯೂ ಮತ್ತು ವಸ್ತುವಿನ ರಾಶಿಗೆ ನೇರ ಅನುಪಾತದಲ್ಲಿರುತ್ತದೆಂದು ನ್ಯೂಟನ್ನನು ತೋರಿಸಿದನು. ಭೂಮಿಯು ವಸ್ತುವಿನ ಮೇಲೆ ಪ್ರಯೋಗಿಸುವ ಬಲವು ಆ ವಸ್ತುವು ಭೂಮಿಯ ಕೇಂದ್ರದಿಂದ ಇರುವ ದೂರದ ವರ್ಗಕ್ಕೆ ವಿಲೋಮವಾಗಿಯೂ ಮತ್ತು ವಸ್ತುವಿನ ರಾಶಿಗೆ ನೇರ ಅನುಪಾತದಲ್ಲಿರುತ್ತದೆಂದು ನ್ಯೂಟನನು ತೋರಿಸಿದನು. ಭೂಮಿಯು ವಸ್ತುವಿನ ಮೇಲೆ ವರ್ತಿಸುವ ಬಲ.

ನ್ಯೂಟನನ ಚಲನೆಯ ಮೂರನೆಯ ನಿಯಮದಂತೆ ಒಂದು ವಸ್ತುವು ಇನ್ನೊಂದರ ಮೇಲೆ ಸಮ ಮತ್ತು ವಿರುದ್ಧವಾದ ಬಲವನ್ನು ಪ್ರಯೋಗಿಸುತ್ತದೆ. ಇದರ ಆಧಾರದ ಮೇಲೆ ನ್ಯೂಟನನು ಯಾವುದೇ ಎರಡು ವಸ್ತುಗಳ ನಡುವೆ ಬಲವಿರುವುದಾಗಿ ಸಾಮಾನ್ಯೀಕರಿಸಿ, ವಿಶ್ವ ವ್ಯಾಪಿಗುರುತ್ವ ನಿಯಮವನ್ನು ಪ್ರತಿಪಾದಿಸಿದನು.

ವಿಶ್ವದ ಪ್ರತಿಯೊಂದು ಕಣವೂ ಪ್ರತಿಯೊಂದು ಇತರ ಕಣವನ್ನು ಆಕರ್ಷಿಸುತ್ತದೆ. ಈ ಆಕರ್ಷಣ ಬಲ ಕಣಗಳ ರಾಶಿಗಳ ಕಣವೂ ಪ್ರತಿಯೊಂದು ಇತರ ಕಣವನ್ನು ಆಕರ್ಷಿಸುತ್ತದೆ. ಈ ಆಕರ್ಷಣ ಬಲ ಕಣಗಳ ರಾಶಿಗಳ ಗುಣಲಬ್ಧಕ್ಕೆ ನೇರ ಅನುಪಾತದಲ್ಲಿಯೂ ಅವುಗಳ ನಡುವಣ ದೂರದ ವರ್ಗಕ್ಕೆ ವಿಲೋಮಾನುಪಾತದಲ್ಲಿಯೂ ಇರುತ್ತದೆ. ಬಲದ ದಿಕ್ಕು ಕಣಗಳನ್ನು ಜೋಡಿಸುವ ರೇಖೆಯ ಗುಂಟ ಇರುತ್ತದೆ.

ತೂಕರಾಹಿತ್ಯ : ಗಗನಯಾತ್ರಿಗಳು ವ್ಯೋಮನೌಕೆಯಲ್ಲಿ ಭೂಮಿಯ ಸುತ್ತ ಚಲಿಸುವಾಗ ತೂಕರಹಿತ ಸ್ಥಿತಿಯನ್ನು ಅನುಭವಿಸುತ್ತಾರೆ. ಸಾಮಾನ್ಯರಿಗೆ ಈ ವಿಷಯ ಗೊಂದಲವುಂಟು ಮಾಡಬಹುದು. ಒಂದು ಕಾಯದ ತೂಕವನ್ನು ಆ ಕಾಯವು ಆಧರಸ್ಥಳದಿಂದ ಹೊಂದುವ ಪ್ರತಿಕ್ರಿಯೆಯನ್ನು ಅನುಸರಿಸಿ ಅಳೆಯಲಾಗುವುದು ಎಂಬುವನ್ನು ನೆನಪಿಸಿಕೊಂಡರೆ ತೂಕರಾಹಿತ್ಯವು ಸಮಂಜಸವೆನಿಸುತ್ತದೆ.

ಭೂಮಿಯನ್ನು ಸುತ್ತುತ್ತಿರುವ ವ್ಯೋಮ ನೌಕೆಯ ಮೇಲೆ ವರ್ತಿಸುವ ಗುರುತ್ವ ಬಲವು ಕೇಂದ್ರಾಭಿಮುಖ ಬಲವಾಗುವುದರಿಂದ ನೌಕೆಯಲ್ಲಿರುವವರಿಗೆ ಪ್ರತಿಕ್ರಿಯಾ ಬಲವಿರುವುದಿಲ್ಲ. ಈ ರೀತಿಯ ಸೊನ್ನೆ ಪ್ರತಿಕ್ರಿಯಾ ಬಲದ ಸ್ಥಿತಿಯೇ ತೂಕರಾಹಿತ್ಯ ಸ್ಥಿತಿ. ಗುರುತ್ವದಿಂದ ಲಿಫ್ಟ್ ಕೆಳಗೆ ಬೀಳತೊಡಗಿದರೆ ಅದರಲ್ಲಿರುವವನಿಗೆ ಯಾವುದೇ ಲಿಫ್ಟ್ ಕೆಳಗೆ ಬೀಳತೊಡಗಿದರೆ ಅದರಲ್ಲಿರುವವನಿಗೆ ಯಾವುದೇ ಪ್ರತಿಕ್ರಿಯೆಅನುಭವವಿಲಲ್ದೆ ತೂಕರಹಿತ ಸ್ಥಿತಿ ಅನುಭವಿಸುತ್ತಾನೆ.


ಈ ಸದಸ್ಯರ ಊರು ಮಂಗಳೂರು.