ಸದಸ್ಯ:Kushmetha K.A

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೂರ್ಯ

  ಸೂರ್ಯನು ಸೌರಮಂಡಲದ ಮಧ್ಯದಲ್ಲಿರುವ ನಕ್ಷತ್ರ. ಭೂಮಿ ಮತ್ತು ಬೇರೆ ಕಾಯಗಳು (ಗ್ರಹಗಳು, ಉಲ್ಕೆಗಳು, ಧೂಮಕೇತುಗಳು ಮತ್ತು ಧೂಳು ಸೇರಿದಂತೆ) ಸೂರ್ಯನನ್ನು ಪರಿಭ್ರಮಿಸುತ್ತವೆ. ಸೂರ್ಯವೊಂದೇ ಸೌರಮಂಡಲದ ೯೯% ದ್ರವ್ಯರಾಶಿಯನ್ನು ಹೊಂದಿದೆ. ಸೂರ್ಯನ ಬೆಳಕು ದ್ಯುತಿಸಂಶ್ಲೇಷಣೆಯ ಮೂಲಕ ಭೂಮಿಯ ಬಹುತೇಕ ಎಲ್ಲಾ ಜೀವಿಗಳಿಗೂ ಆಧಾರವಾಗಿದ್ದು, ಭೂಮಿಯ ಹವಾಮಾನದ ಮೇಲೂ ಪ್ರಭಾವ ಬೀರುತ್ತದೆ.
            ಸೂರ್ಯನ ೭೪% ದ್ರವ್ಯರಾಶಿಯು ಜಲಜನಕದಿಂದ, ೨೫% ಹೀಲಿಯಂನಿಂದ ಮತ್ತು ಉಳಿದ ದ್ರವ್ಯರಾಶಿಯು ಅಲ್ಪ-ಸ್ವಲ್ಪ ಭಾರಿ ವಸ್ತುಗಳಿಂದ ಕೂಡಿದೆ. ಸೂರ್ಯನ ವರ್ಣಪಟಲ ವಿಂಗಡಣೆಯು G2V. ಸೂರ್ಯನ ಮೇಲ್ಮೈ ತಾಪಮಾನವು ಸುಮಾರು ೫,೦೦೦-ಕೆ. ಗಳಿರುವುದನ್ನು "G2" ಸೂಚಿಸುತ್ತದೆ. ಈ ತಾಪಮಾನವು ಮೇಲ್ಮೈಗೆ ಬಿಳಿ ಬಣ್ಣವನ್ನು ಕೊಟ್ಟರೂ, ವಾಯುಮಂಡಲವು ಬೆಳಕನ್ನು ಚದುರಿಸುವುದರಿಂದ, ಹಳದಿಯಾಗಿ ಕಾಣುತ್ತದೆ. ಇದರ ವರ್ಣಪಟಲವು ಅಯಾನುಗೊಳಿತ ಮತ್ತು ತಟಸ್ಥ ಲೋಹಗಳ ಮತ್ತು ಬಹಳ ದುರ್ಬಲವಾದ ಜಲಜನಕದ ವರ್ಣರೇಖೆಗಳನ್ನು ತೋರಿಸುತ್ತದೆ. ಸೂರ್ಯನು ಬಹುತೇಕ ಇತರೆ ನಕ್ಷತ್ರಗಳಂತೆ ಪ್ರಮುಖಾನುಕ್ರಮ ನಕ್ಷತ್ರವೆಂದು "V" ಪ್ರತ್ಯಯವು ಸೂಚಿಸುತ್ತದೆ. ಇದರರ್ಥ, ಸೂರ್ಯವು ಪರಮಾಣು ಬೆಸುಗೆಯಿಂದ ಜಲಜನಕವನ್ನು ಹೀಲಿಯಂ ಆಗಿ ಪರಿವರ್ತಿಸಿ ಶಕ್ತಿಯನ್ನು ಉತ್ಪಾದಿಸುತ್ತದೆ, ಮತ್ತು ಇದು ಸಮತೋಲನ ಸ್ಥಿತಿಯಲ್ಲಿದ್ದು, ಅದರ ಗಾತ್ರವು ಬದಲಾಗುವುದಿಲ್ಲ ಎಂದು. ನಮ್ಮ ತಾರಾಗಣದಲ್ಲಿ ೧೦ ಕೋಟಿಗಿಂತ ಹೆಚ್ಚು G2 ವರ್ಗದ ನಕ್ಷತ್ರಗಳಿವೆ. ತಾರಾಗಣದಲ್ಲಿರುವ ೮೫% ನಕ್ಷತ್ರಗಳಿಗಿಂತ ಸೂರ್ಯವು ಹೆಚ್ಚು ಪ್ರಕಾಶಮಾನವಾಗಿದೆ. ಈ ೮೫% ನಕ್ಷತ್ರಗಳು ಕೆಂಪು ಕುಬ್ಜ ರೂಪದಲ್ಲಿವೆ.[೨]

ಕ್ಷೀರ ಪಥ ತಾರಾಗಣ ಕೇಂದ್ರದಿಂದ ಸುಮಾರು ೨೫,೦೦೦-೨೮೦೦೦ ಜ್ಯೋತಿರ್ವರ್ಷಗಳ ದೂರದಲ್ಲಿ ಸೂರ್ಯವು ಪರಿಭ್ರಮಿಸುತ್ತದೆ. ಇದರ ಒಂದು ಪರಿಭ್ರಮಣಕ್ಕೆ ಸುಮಾರು ೨೨೫೨೫ ಕೋಟಿ ವರ್ಷಗಳು ಬೇಕಾಗುತ್ತವೆ. ಇದರ ೨೧೭ ಕಿ.ಮೀ./ಕ್ಷಣದ ಪರಿಭ್ರಮಣ ವೇಗವು, ಪ್ರತಿ ೧,೪೦೦ ವರ್ಷಗಳಿಗೊಂದು ಜ್ಯೋತಿರ್ವರ್ಷ, ಮತ್ತು ಪ್ರತಿ ೮ ದಿನಗಳಿಗೊಮ್ಮೆ ಒಂದು ಖಗೋಳ ಮಾನದ ಪ್ರಮಾಣಗಳಿಗೆ ಸಮಾನವಾಗಿದೆ.[೩]

ಸೂರ್ಯನು ಮೂರನೇ ಪೀಳಿಗೆಯ ಒಂದು ನಕ್ಷತ್ರ. ಹತ್ತಿರದಲ್ಲುಂಟಾದ ತಾರಾಸ್ಫೋಟದಿಂದ (supernova) ಹೊರಬಂದ ಆಘಾತತರಂಗಗಳು ಸೂರ್ಯನ ಉದ್ಭವಕ್ಕೆ ಚಾಲನೆಯನ್ನು ಕೊಟ್ಟಿದ್ದಿರಬಹುದು. ಸೌರಮಂಡಲದಲ್ಲಿ ಹೇರಳವಾಗಿ ಕಂಡುಬರುವ ಚಿನ್ನ, ಯುರೇನಿಯಂಗಳಂಥ ಭಾರವಸ್ತುಗಳ ಅಸ್ತಿತ್ವವು ಈ ರೀತಿಯ ಉದ್ಭವವನ್ನು ಸೂಚಿಸುತ್ತವೆ; ಈ ಮೂಲವಸ್ತುಗಳು, ತಾರಾಸ್ಫೋಟದ ಸಮಯದಲ್ಲಿ ಉಂಟಾದ ಪರಮಾಣು ಕ್ರಿಯೆಯಿಂದ, ಅಥವಾ ಒಂದು ಬೃಹತ್ ಎರಡನೇ ಪೀಳಿಗೆಯ ನಕ್ಷತ್ರದಲ್ಲಿ ನ್ಯೂಟ್ರಾನ್ ಹೀರುವಿಕೆಯಿಂದ ಉಂಟಾದ ರೂಪ ಬದಲಾವಣೆಯಿಂದ (transmutation) ಸೃಷ್ಟಿಯಾಗಿದ್ದಿರಬಹುದು.

ಭೂಮಿಯ ಮೇಲ್ಮೈನ ಹತ್ತಿರ ಸೂರ್ಯನ ಬೆಳಕೇ ಶಕ್ತಿಯ ಮುಖ್ಯ ಮೂಲ. ಸೂರ್ಯನತ್ತ ನೇರವಾಗಿ ಮುಖಮಾಡಿರುವ ಏಕಮಾನ ವಿಸ್ತೀರ್ಣದ ಮೇಲೆ ಬೀಳುವ ಸೌರಶಕ್ತಿಯನ್ನು ಸೌರ ಸ್ಥಿರವೆಂದು ಕರೆಯಲಾಗುತ್ತದೆ. ಈ ಪ್ರಮಾಣವು ೧ ಖಗೋಳ ಮಾನ ಅಥವಾ ಸೂರ್ಯನಿಂದ ಭೂಮಿಯಿರುವ ದೂರದಲ್ಲಿ ಸುಮಾರು ೧,೩೭೦-ವ್ಯಾಟ್/ಚ.ಮೀ. ನಷ್ಟಿದೆ. ವಿವಿಧ ನೈಸರ್ಗಿಕ ಮತ್ತು ಸಂಶ್ಲಿಷ್ಟ ಪ್ರಕ್ರಿಯೆಗಳಿಂದ ಈ ಶಕ್ತಿಯನ್ನು ಉಪಯೋಗಿಸಿಕೊಳ್ಳಬಹುದು. ಮರ-ಗಿಡಗಳಲ್ಲಿ ನಡೆಯುವ ದ್ಯುತಿಸಂಶ್ಲೇಷಣೆಯು ಈ ಶಕ್ತಿಯನ್ನು ಹಿಡಿದು ಆಮ್ಲಜನಕ ಮತ್ತು ಇಂಗಾಲದ ಸಂಯುಕ್ತಗಳ ರಸಾಯನಿಕ ರೂಪಕ್ಕೆ ಪರಿವರ್ತಿಸುತ್ತದೆ. ಸೌರ ಕೋಶಗಳು ಸೌರಶಕ್ತಿಯನ್ನು ವಿದ್ಯುಚ್ಛಕ್ತಿಯನ್ನಾಗಿ ಪರಿವರ್ತಿಸುತ್ತವೆ. ಹಿಂದಿನ ಕಾಲದಲ್ಲಿ ದ್ಯುತಿಸಂಶ್ಲೇಷಣೆಯು ಸೌರಶಕ್ತಿಯನ್ನು ಪರಿವರ್ತಿಸಿ, ಕಲ್ಲೆಣ್ಣೆ ಮತ್ತು ಇತರ ಇಂಧನಗಳಲ್ಲಿ ಶೇಖರಿಸಿತು.

ಸೂರ್ಯಪ್ರಕಾಶವು ಹಲವು ಆಸಕ್ತಿಕರ ಜೈವಿಕ ಗುಣಗಳನ್ನು ಹೊಂದಿದೆ. ಸೂರ್ಯನ ಅತಿನೇರಳೆ ಕಿರಣಗಳು ನಂಜು ನಿವಾರಕ ಗುಣಗಳನ್ನು ಹೊಂದಿದ್ದು, ಇದನ್ನು ಕ್ರಿಮಿನಿವಾರಣೆಗೆ ಬಳಸಬಹುದು. ಇದು ಚರ್ಮದ ಮೇಲೆ ಕೆಂಪು ಸುಡುಗಾಯಗಳನ್ನು ಮಾಡುವುದಲ್ಲದೆ, ವಿಟಮಿನ್ ಡಿ ಉತ್ಪಾದನೆಯಂತಹ ಕೆಲವು ವೈದ್ಯಕೀಯ ಗುಣಗಳನ್ನೂ ಹೊಂದಿದೆ. ಭೂಮಿಯ ವಾಯುಮಂಡಲವು ಅತಿನೇರಳೆ ಬೆಳಕನ್ನು ಹೀರಿಕೊಂಡು ದುರ್ಬಲಗೊಳಿಸುವುದರಿಂದ, ಬೆಳಕಿನ ಶಕ್ತಿಯು ಅಕ್ಷಾಂಶದೊಂದಿಗೆ ಬದಲಾಗುತ್ತದೆ. ಹೆಚ್ಚು ಅಕ್ಷಾಂಶದ ಜಾಗಗಳಲ್ಲಿ ಬೆಳಕು ವಾಯುಮಂಡಲದ ಮೂಲಕ ಹೆಚ್ಚು ದೂರವನ್ನು ಕ್ರಮಿಸುವುದರಿಂದ, ಹೆಚ್ಚು ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಅತಿನೇರಳೆ ಬೆಳಕಿನ ತೀವ್ರತೆಯಲ್ಲಿ ಉಂಟಾಗುವ ಈ ವ್ಯತ್ಯಾಸಗಳಿಂದ, ಮನುಷ್ಯರಲ್ಲಿ ವರ್ಣಭಿನ್ನತೆಯೂ ಸೇರಿದಂತೆ ಹಲವು ಜೈವಿಕ ಹೊಂದಾಣಿಕೆಗಳು ಉಂಟಾಗಿವೆ.

ಸೂರ್ಯವು ಕಾಂತೀಯವಾಗಿ ಚಟುವಟಿಕೆಯಿಂದಿರುವ ನಕ್ಷತ್ರ; ಇದು ಪ್ರತಿ ೧೧ ವರ್ಷಗಳಿಗೊಮ್ಮೆ ತಿರುಗುಮುರುಗಾಗುವ ಪ್ರಬಲವಾದ ಕಾಂತಕ್ಷೇತ್ರವನ್ನು ಹೊಂದಿದೆ. ಸೂರ್ಯನ ಕಾಂತಕ್ಷೇತ್ರವು ಉಂಟುಮಾಡುವ ಹಲವು ಪರಿಣಾಮಗಳನ್ನು ಒಟ್ಟಾಗಿ ಸೌರ ಚಟುವಟಿಕೆಗಳು ಎಂದು ಕರೆಯಲಾಗುತ್ತದೆ. ಇದರಲ್ಲಿ ಸೂರ್ಯನ ಮೇಲ್ಮೈ ಮೇಲಿರುವ ಸೌರಕಲೆಗಳು, ಸೌರ ಜ್ವಾಲೆಗಳು, ಮತ್ತು ಸೌರಮಂಡಲದೊಳಗೆ ಪದಾರ್ಥಗಳನ್ನು ಸಾಗಿಸುವ ಸೌರಮಾರುತಗಳ ಬದಲಾವಣೆಗಳು ಸೇರಿವೆ. ಸೂರ್ಯನ ಚಟುವಟಿಕೆಗಳು ಭೂಮಿಯ ಮೇಲೂ ಪರಿಣಾಮಗಳನ್ನು ಉಂಟುಮಾಡುತ್ತವೆ. ಉದಾಹರಣೆಗೆ, ಧ್ರುವಾರುಣ ಜ್ಯೋತಿ ಮತ್ತು ರೇಡಿಯೊ-ಸಂಪರ್ಕ/ವಿದ್ಯುತ್-ಪ್ರವಾಹಗಳಲ್ಲಿ ಅಡಚಣೆಗಳು. ಸೌರಮಂಡಲದ ರೂಪಿಸುವಿಕೆ ಮತ್ತು ವಿಕಾಸದಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆಯೆಂದು ನಂಬಲಾಗಿರುವ ಸೌರ ಚಟುವಟಿಕೆಗಳು ಭೂಮಿಯ ಹೊರ ವಾಯುಮಂಡಲದ ವಿನ್ಯಾಸದ ಮೇಲೂ ಆಳವಾದ ಪ್ರಭಾವವನ್ನು ಬೀರುತ್ತದೆ.

ಸೂರ್ಯನು ಭೂಮಿಯ ಅತ್ಯಂತ ನಿಕಟದಲ್ಲಿರುವ ನಕ್ಷತ್ರವಾದ್ದರಿಂದ, ವಿಜ್ಞಾನಿಗಳು ಸೂರ್ಯನನ್ನು ವ್ಯಾಪಕವಾಗಿ ಅಧ್ಯಯನ ಮಾಡಿದ್ದಾರೆ. ಆದರೂ, ಸೂರ್ಯನ ಬಗ್ಗೆ ಹಲವಾರು ಪ್ರಶ್ನೆಗಳಿಗೆ ಇನ್ನೂ ಉತ್ತರಗಳು ದೊರಕಿಲ್ಲ. ಹತ್ತು ಲಕ್ಷ ಕೆ.ಗಿಂತಲೂ ಹೆಚ್ಚು ಬಿಸಿಯಾಗಿರುವ ಹೊರ ವಾಯುಮಂಡಲವನ್ನು ಹೊಂದಿದ್ದರೂ, ಅದರ ಗೋಚರ ಮೇಲ್ಮೈ (ದ್ಯುತಿಗೋಳ) ಕೇವಲ ೬,೦೦೦ ಕೆ.ಗಳ ತಾಪಮಾನದಲ್ಲಿ ಹೇಗಿದೆ? ಎಂಬುದೂ ಈ ಪ್ರಶ್ನೆಗಳಲ್ಲೊಂದು.

          ಪರಮಾಣು ಬೆಸುಗೆಯಿಂದ ಜಲಜನಕವು ಹೀಲಿಯಂ ಆಗಿ ಪರಿವರ್ತಿತವಾಗುವ ಸೂರ್ಯನ ಪ್ರಮುಖಾನುಕ್ರಮ ವಿಕಸನ ಕಾಲದಲ್ಲಿ ಅರ್ಧ ಕಾಲವು ಈಗಾಗಲೇ ಮುಗಿದಿದೆ. ಸೂರ್ಯನ ಒಳಭಾಗದಲ್ಲಿ ಪ್ರತಿ ಕ್ಷಣವೂ ಸುಮಾರು ೪೦ ಲಕ್ಷ ಟನ್ನುಗಳಷ್ಟು ದ್ರವ್ಯರಾಶಿಯು ಶಕ್ತಿಯಾಗಿ ಪರಿವರ್ತಿತವಾಗಿ, ನ್ಯೂಟ್ರಿನೊ ಮತ್ತು ಸೌರ ವಿಕಿರಣಗಳು ಉದ್ಭವವಾಗುತ್ತವೆ. ತನ್ನ ಜೀವಾವಧಿಯಲ್ಲಿ ಸೂರ್ಯವು ಸುಮಾರು ಒಟ್ಟಾರೆ ೧೦೦೦ ಕೋಟಿ ವರ್ಷಗಳ ಕಾಲ ಪ್ರಮುಖಾನುಕ್ರಮ ನಕ್ಷತ್ರವಾಗಿರುತ್ತದೆ. ತಾರಾಸ್ಫೋಟದಂತೆ ಕೊನೆಗಾಣಲು ಸಾಕಷ್ಟು ದ್ರವ್ಯರಾಶಿಯನ್ನು ಸೂರ್ಯವು ಹೊಂದಿಲ್ಲ. ಬದಲಿಗೆ, ಇನ್ನು ಸುಮಾರು ೪-೫ ಶತಕೋಟಿ ವರ್ಷಗಳಲ್ಲಿ ಸೂರ್ಯವು ಕೆಂಪು ದೈತ್ಯದ ಹಂತವನ್ನು ತಲುಪುತ್ತದೆ. ಅದರ ಒಳಭಾಗದಲ್ಲಿರುವ ಜಲಜನಕ ಇಂಧನವು ಬಳಸಲಾಗಿ, ಒಳಭಾಗವು ಸಂಕುಚಿಸಿ ಬಿಸಿಯಾಗಿ, ಹೊರಪದರಗಳು ಹಿಗ್ಗುತ್ತವೆ. ಒಳಭಾಗದ ತಾಪಮಾನವು ೧೦ ಕೋಟಿ ಕೆ. ತಲುಪಿದಾಗ ಹೀಲಿಯಂ ಬೆಸುಗೆಯು ಶುರುವಾಗಿ, ಇಂಗಾಲ ಮತ್ತು ಆಮ್ಲಜನಕಗಳು ಸೃಷ್ಟಿಯಾಗುತ್ತವೆ. ಭೂಮಿಯು ಪ್ರಸ್ತುತದಲ್ಲಿರುವ ದೂರದವರೆಗೂ ಸೂರ್ಯನ ಹೊರಪದರಾಗಳು ಹಿಗ್ಗಿದರೂ, ಸೂರ್ಯನು ತನ್ನ ಕೆಂಪು ದೈತ್ಯ ಹಂತದಲ್ಲಿ ದ್ರವ್ಯರಾಶಿಯನ್ನು ಕಳೆದುಕೊಳ್ಳುವುದರಿಂದ, ಭೂಮಿಯ ಕಕ್ಷೆಯು ಇನ್ನೂ ದೂರವಾಗುತ್ತದೆ ಎಂದು ಇತ್ತೀಚೆಗಿನ ಸಂಶೋಧನೆಗಳು ತೋರಿಸುತ್ತವೆ. ಆದರೆ, ಭೂಮಿಯ ಮೇಲಿನ ನೀರು ಮತ್ತು ಬಹುತೇಕ ವಾಯುಮಂಡಲವು ಅಪಾರ ಶಾಖದಿಂದ ಇಂಗಿ ಹೋಗುತ್ತವೆ. ಕೆಂಪು ದೈತ್ಯ ಹಂತದ ನಂತರ, ಉಷ್ಣತೆಯ ತೀವ್ರವಾದ ಮಿಡಿತಗಳಿಂದ, ಸೂರ್ಯವು ತನ್ನ ಹೊರ ಪದರಗಳನ್ನು ಕಳೆದುಕೊಂದು ಗ್ರಹ ಜ್ಯೋತಿಪಟಲವಾಗಿ ಮಾರ್ಪಡುತ್ತದೆ. ಹೊರ ಪದರಗಳನ್ನು ಕಳೆದುಕೊಂಡ ಮೇಲೆ ಉಳಿದ ಅತ್ಯಂತ ಬಿಸಿಯಾದ ನಾಕ್ಷತ್ರಿಕ ಒಳಭಾಗವು ನೂರಾರು ಕೋಟಿ ವರ್ಷಗಳ ಕಾಲಾವಧಿಯಲ್ಲಿ ನಿಧಾನವಾಗಿ ತಣ್ಣಗಾಗಿ ಶ್ವೇತ ಕುಬ್ಜದಂತೆ ನಂದಿಹೋಗುತ್ತದೆ. ನಾಕ್ಷತ್ರಿಕ ವಿಕಸನದಲ್ಲಿ ಈ ರೀತಿಯ ಘಟನಾವಳಿಗಳು ಸಣ್ಣ ಮತ್ತು ಮಧ್ಯ ಪ್ರಮಾಣದ ನಕ್ಷತ್ರಗಳಲ್ಲಿ ಸಾಮಾನ್ಯವಾಗಿ ನಡೆಯುತ್ತವೆಸೂರ್ಯನ ಸಮಭಾಜಕ ಮತ್ತು ಧ್ರುವಗಳ ಮೂಲಕ ವ್ಯಾಸಗಳಲ್ಲಿ ಕೇವಲ ೧೦ ಕಿ.ಮೀ. ಗಳ ವ್ಯತ್ಯಾಸವಿದೆ. ಸೂರ್ಯನು ಒಂದು ಘನ ಕಾಯದಂತೆ ಪರಿಭ್ರಮಿಸುವುದಿಲ್ಲ (ಪರಿಭ್ರಮಣ ಕಾಲಗಳು: ಸಮಭಾಜಕದಲ್ಲಿ ೨೫ ದಿನಗಳು ಮತ್ತು ಧ್ರುವಗಳಲ್ಲಿ ೨೮ ದಿನಗಳು). ಇದು ಒಟ್ಟಾರೆ ಪರಿಭ್ರಮಣಕ್ಕೆ ಸುಮಾರು ೨೮ ದಿನಗಳನ್ನು ತೆಗೆದುಕೊಳ್ಳುತ್ತದೆ; ಈ ನಿಧಾನವಾದ ಸೌರ ಪರಿಭ್ರಮಣದಿಂದ ಉಂಟಾಗುವ ಕೇಂದ್ರಾಪಗಾಮಿ ಬಲಕಿಇಂತ ಸೂರ್ಯನ ಸಮಭಾಜಕದಲ್ಲಿರುವ ಗುರುತ್ವ ಬಲವು ೧.೮ ಕೋಟಿ ಪಟ್ಟು ಹೆಚ್ಚು ಶಕ್ತಿಯುತವಾಗಿದೆ. ಗ್ರಹಗಳು ಉಂಟುಮಾಡುವ ಉಬ್ಬರವಿಳಿತಗಳು ಸೂರ್ಯನ ಆಕಾರದ ಮೇಲೆ ಗಮನಾರ್ಹವಾದ ಪರಿಣಾಮವನ್ನು ಬೀರುವುದಿಲ್ಲ.


ಈ ಸದಸ್ಯರ ಊರು ಮಂಗಳೂರು.