ಸದಸ್ಯ:Keeru6/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೀವನ ಚರಿತ್ರೆ[ಬದಲಾಯಿಸಿ]

ಗಿಲ್ಲಿಯನ್ ಬೇವರ್ಸ್ಟಾಕ್ ಅವರು ಇಂಗ್ಲೆಂಡಿನ ಬರಹಗಾರ್ತಿ.ಇವರು ೨೦ನೇ ಶತಮಾನದ ಪ್ರಸಿದ್ಧ ಬರಹಗಾರ್ತಿ.ಇವರ ಪೂರ್ಣ ನಾಮ ಗಿಲ್ಲಿಯನ್ ಮೇರಿ ಬೇವರ್ಸ್ಟಾಕ್.ಇವರು ಜುಲೈ ೧೫ ೧೯೩೧ ರಂದು ಜನಿಸಿದರು.ಇಂಗ್ಲೆಂಡಿನ ಬೋರ್ನೆಂಡ್ ಎಂಬ ಊರಿನಲ್ಲಿ ಜನಿಸಿದರು.ಇವರ ತಂದೆ ಮೇಜರ್ ಹ್ಯೂ ಪೊಲ್ಲೊಕ್.ಇವರ ತಾಯಿ ಎನಿಡ್ ಬ್ಲೈಟನ್[೧].ಎನಿಡ್ ಅವರು ಮಕ್ಕಳ ಕಥೆಗಳ ಬರಹಗಾರ್ತಿ.ಗಿಲ್ಲಿಯನ್ ರವರ ತಂದೆ ಮೊದಲನೇ ವಿಶ್ವಯುದ್ಧ ಅನುಭವಿ.ಪೊಲ್ಲೊಕ್ ದಂಪತಿಗಳಿಗೆ ಗಿಲ್ಲಿಯನ್ ಹಿರಿಯ ಪುತ್ರಿ.ಆಕ್ಟೋಬರ್ ೭ ೧೯೩೫ ಅಂದು ಗಿಲ್ಲಿಯನ್ ಅವರ ತಂಗಿ ಇಮೋಗನ್ ಮೇರಿ ಸ್ಮಾಲ್ವುಡ್ ಜನಿಸಿದರು.ಗಿಲ್ಲಿಯನ್ ರವರು ೧೨ನೇ ವಯಸ್ಸಿನಲ್ಲಿ ಮತ್ತು ಅವರ ತಂಗಿ ೮ ನೆ ವಯಸ್ಸಿನಲ್ಲಿದ್ದಾಗ,ಗಿಲ್ಲಿಯನ್ ರವರ ತಂದೆ ತಾಯಿ ಕಾರಣಾಂತರಗಳಿಂದ ವಿಚ್ಛೇದನವನ್ನು ಪಡೆದರು.ನಂತರ ಅವರ ತಾಯಿ ಸರ್ಜನ್ ಕೆನೆತ್ ಫ಼್ರಜ಼ೆರ್ ಡೆರೆಲ್ ವಾಟರ್ಸ್ ಅವರನ್ನು ವಿವಾಹವಾದರು.ಅವರ ತಂದೆ ಇದ ಕ್ರೊವ್ ಅವರನ್ನು ವಿವಾಹವಾದರು.ಈ ದಂಪತಿಗಳಿಗೆ ರೊಸ್ಮೆರಿ ಪೊಲ್ಲೊಕ್ ಜನಿಸಿದರು. ವಿಚ್ಛೇದನ ಮತ್ತು ಪುನರ್ವಿವಾಹದ ನಂತರ ಗಿಲ್ಲಿಯನ್ ಅವರ ತಾಯಿ ಎನಿಡ್,ತಮ್ಮ ಮಕ್ಕಳು ಅವರ ತಂದೆಯಿಂದ ದೂರವಿರುವುದೇ ಒಳ್ಳೆಯದೆಂದು ಭಾವಿಸಿ ಅಂತೆಯೇ ಮಾಡಿದರು.ಎನಿಡ್ ಅವರು ಅವರ ಮಕ್ಕಳ ಉಪನಾಮವನ್ನು ಸಹ ಡೇರೆಲ್ ವಾಟರ್ಸ್ ಎಂದು ಬದಲಾಯಿಸಿದರು.ನಂತರ ಗಿಲ್ಲಿಯನ್ ಅವರು ತಮ್ಮ ತಂದೆಯನ್ನು ಭೇಟಿಯಾಗಲು ಪ್ರಯತ್ನಿಸಿದರು.ಆದರೆ ವಿಫ಼ಲರಾದರು.ಆದರೆ ರೊಸ್ಮೆರಿ ಅವರೊಂದಿಗೆ ಬಾಂಧವ್ಯವನ್ನು ಬೆಳೆಸಿದರು.[೧]

ಗಿಲ್ಲಿಯನ್ ಅವರು ಇಂಗ್ಲೆಂಡಿನ ಕೆಂಟ್ ಅಲ್ಲಿರುವ ಬೆನೆಡನ್ ವಸತಿಶಾಲೆಯಲ್ಲಿ ವ್ಯಾಸಂಗ ಮಾಡಿದರು.ನಂತರ,ಸ್ಕಾಟ್ಲಾಂಡಿನ ಫ಼ೈಫ಼್[೨] ಎಂಬ ಊರಿನಲ್ಲಿರುವ ಸಂತ ಆಂಡ್ರ್ಯೂಸ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಮಾಡಿದರು.ಗಿಲ್ಲಿಯನ್ ಅವರು ೧೯೫೭ರಲ್ಲಿ ಡೊನಾಲ್ಡ್ ಬೇವರ್ಸ್ಟಾಕ್[೩] ಅವರನ್ನು ವಿವಾಹವಾದರು.ಡೊನಾಲ್ಡ್ ಅವರು ಬಿಬಿಸಿಯ ನಿರ್ಮಾಪಕರು ಹಾಗೂ ಸಂತ ಜೇಮ್ಸ್ ಚರ್ಚಿನ ಮುಖ್ಯ ಕಾರ್ಯನಿರ್ವಾಹಕರು.ಇವರಿಗೆ ನಾಲ್ಕು ಜನ ಮಕ್ಕಳು.ಅವರು ಗ್ಲಿನ್,ಸಿಯನ,ಸಾರಾ ಮತ್ತು ಒವೇನ್.ಗ್ಲಿನ್ ಅವರು ೧೯೬೯ರಲ್ಲಿ ಜನಿಸಿ ೧೯೮೩ರಲ್ಲಿ ಅಪಘಾತದಲ್ಲಿ ಮರಣಹೊಂದಿದರು.ಸಿಯನ ಅವರು ೧೯೫೮ರಲ್ಲಿ ಜನಿಸಿ ೨೦೦೬ರಲ್ಲಿ ಹೃದಯಾಘಾತದಲ್ಲಿ ಮೃತಪಟ್ಟರು.ಗಿಲ್ಲಿಯನ್ ಅವರು ತಮ್ಮ ಪತಿಯ ನಿಧನದ ನಂತರ ಇಂಗ್ಲೆಂಡಿನ ಇಕ್ಲೇಯಲ್ಲಿ ವಾಸವಾಗಿದ್ದರು.ಅವರು ತಮ್ಮ ಮಕ್ಕಳೊಂದಿಗೆ ಮುಂದಿನ ಜೀವನವನ್ನು ಕಳೆದರು.ಅವರಿಗೆ ಐದು ಜನ ಮೊಮ್ಮಕ್ಕಳು. ಅವರು ಗ್ಲಿಂಡ್,ಡೊಮಿನಿಕ್,ಜ಼ೊ,ಅಲೆಕ್, ಮತ್ತು ಜಿಯೋರ್ಜಿನ. ಗಿಲ್ಲಿಯನ್ ಅವರು ಇಕ್ಲೀಯ ಮೂರ್ಫ಼ೀಲ್ಡ್ ಎಂಬ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡಿದರು.ಅವರು ಅವರ ತಾಯಿ ಹಾಗೂ ಅವರ ಬಾಲ್ಯ ಜೀವನದ ಬಗ್ಗೆ ಮಾಧ್ಯಮಗಳಲ್ಲಿ ಮಾತನಾಡಿದ್ದಾರೆ.ಅವರು ತಮ್ಮ ತಾಯಿಯೊಡನೆ ತಮ್ಮ ಸಹೊದರಿಗಿಂತ ನಾಲ್ಕು ವರ್ಷಗಳು ಹೆಚ್ಚು ಕಳೆದಿದ್ದರಿಂದ ತಾನು ಹೆಚ್ಚು ಭಾಗ್ಯಶಾಲಿ ಎಂದು ಹೇಳಿದ್ದಾರೆ.ಅವರ ತಾಯಿಯನ್ನು ಕುರಿತು ಲೇಖನಗಳನ್ನು ರಚಿಸಿದ್ದಾರೆ.೧೯೯೯ರಲ್ಲಿ ಬೇವರ್ಸ್ಟಾಕ್ ಅವರು ಕ್ವಿಲ್ಲ್ ಪಬ್ಲಿಕೆಶನ್ಸ್ ಲಿ. ಎಂಬ ಸಂಸ್ಥೆಯನ್ನು ಹಾಸ್ಯ ಬರಹಗಾರ ಟಿಮ್ ಕ್ವಿನ್ ಅವರ ಜೊತೆಗೂಡಿ ಸ್ಥಾಪಿಸಿದರು.ನಂತರ,ಪ್ರಸಿದ್ಧ ಮಕ್ಕಳ ಹಾಸ್ಯ ಪುಸ್ತಕ'ಬ್ಲ್ಯೂ ಮೂನ್'ನಿನ ೧೨ ಆವೃತ್ತಿಗಳನ್ನು ಪ್ರಕಟಿಸಿದರು.ಪ್ರಸಿದ್ಧ ಕಥೆಗಳಾದ ಸ್ಲೀಪಿಂಗ್ ಬ್ಯೂಟಿ ಮತ್ತು ಲಿಟಲ್ ರೆಡ್ ರೈಡಿಂಗ್ ಹುಡ್ ಆಧಾರಿತ ಕಥಾ ಸರಣಿಯನ್ನು ರಚಿಸಿದರು.ಈ ಪುಸ್ತಕವು ಈಗ ಪ್ರಕಟವಾಗುತ್ತಿಲ್ಲ. [೨]

ಮರಣ[ಬದಲಾಯಿಸಿ]

ಗಿಲ್ಲಿಯನ್ ಅವರು ೭೫ನೇ ವಯಸ್ಸಿನಲ್ಲಿ ಮರಣಹೊಂದಿದರು.ಜೂನ್ ೨೪ ೨೦೦೭ ಅಂದು ಇಂಗ್ಲೆಂಡಿನ ವೆಸ್ಟ್ ಯೊರ್ಕ್ಶೈರ್ ಅಲ್ಲಿರುವ ಇಕ್ಲಿ ಎಂಬ ಊರಿನಲ್ಲಿ ಮೃತಪಟ್ಟರು.

ಉಲ್ಲೇಖಗಳು[ಬದಲಾಯಿಸಿ]