ಸದಸ್ಯ:C.s.kavya/ನನ್ನ ಪ್ರಯೋಗಪುಟ/2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೃತಕ ಉಸಿರಾಟ [ಕಾರ್ಡಿಯೋ ಪಲ್ಮೊನರಿ ರಿಸಸ್ಸಿಟೇಶನ್ (ಸಿ.ಪಿ.ಆರ್.)][ಬದಲಾಯಿಸಿ]

ಬಾವಿಗೆ ಬಿದ್ದ ಚೆಂಡನ್ನು ತರಲು ಇಳಿದ ಹುದುಗ ಜಾರಿ ಬೀಳುತಾನೆ;ಈಜಲು ಅಸಮರ್ಥನಾದ್ದರಿಂದ ಶ್ವಾಸಕೋಶಗಳಿಗೆ ನೀರು ತುಂಬುತ್ತದೆ. ಗಾಬರಿಗೊಂಡ ಜನ ಎತ್ತಿಹಾಕುತ್ತರೆ;ವೈದ್ಯಬಂದು ಪರೀಕ್ಷಿಸುವಾಗ ಹುಡುಗನ ದೇಹ ತಣ್ಣಗಾಗಿದೆ,ಇಂಥಹ ಗಟನೆಗಳು ಒಮ್ಮೊಮ್ಮೆ ಒಂದೊಂದು ಕಡೆನಡೆದು ಹೋಗುತ್ತವೆ. ಆಗ ಜೀವರಕ್ಷಣೆಯ ಪ್ರತಿಯೊಂದು ಕ್ರಮವು ಮುಖ್ಯವಾಗುತ್ತದೆ.

ಆರೋಗ್ಯವಂತರಲ್ಲಿ ಉಸಿರಟ ತನ್ನಿತಾನಾಗಿಯೇ ನಡೆಯುವಂಥದು. ಆದರೆ ನೀರಿನಲ್ಲಿ ಮುಳುಗಿದಾಗ,ಕತ್ತುಹಿಸುಕಲ್ಪಟ್ಟಗ, ವಿದ್ಯುತ್ ಆಘಾತವಾದಾಗ, ಅವಫಡಕ್ಕೆ ತುತ್ತಾದಾಗ ವಿಷವಾಯುವನ್ನು ಉಸಿರಾಡಿದಾಗ ಮತ್ತು ನಿದ್ರೆಗುಳಿಗೆಗಳ ಅತಿ ಸೇವನೆಯಾದಾಗ ಉಸಿರಾಟದ ಕ್ರಿಯೆ ನಿಂತು ಹೋಗಬಹುದು.[೧]ಇಂಥ ಸಂಧರ್ಭಗಳಲ್ಲಿ ಆಮ್ಲಜನಕದ ಪೂರೈಕೆ ಬೇಕಾದಷ್ಟು ಆಗದಿರಬಹುದು.ಆಗ ಜೀವರಕ್ಷನೆಗೆ ಶುದ್ದ ಗಾಳಿಯು ರೋಗಿಯ ಶ್ವಾಸಕೋಶಗಳ ಒಳಕ್ಕೆ ಹೋಗಿ,ಮಲಿನಗಾಳಿ ಹೊರಕ್ಕೆ ಬರುವಂತೆ ಮಾಡುವುದೆರಾ ಕೃತಕ ಉಸಿರಾಟ.

ಉಸಿರಾಟವು ನಾಲ್ಕು ರೀತಿಯಿಂದ ನಿಲ್ಲಬಹುದು:-[ಬದಲಾಯಿಸಿ]

೧. ಗಾಳಿಯ ಪೂರೈಕೆ ಪೂರ್ತಿಯಾಗಿ ನಿಂತು ಹೋಗುವುದು. ಮುಳುಗಿದಾಗ ಅಥವಾ ಕುತ್ತಿಗೆ ಹಿಸುಕಲ್ಪಟ್ಟಾಗ ಹೀಗಾಗುತ್ತದೆ

೨. ಗಾಳಿಯ ಪೂರೈಕೆ ಬಹಳ ಕಡಿಮೆಯಾಗಿರುವುದು. ಆ ವ್ಯಕ್ತಿ ನೆಲಮಾಳಿಗೆಯಲ್ಲೋ ಶೀತಾಗಾರದಲ್ಲೋ ಸಿಕ್ಕಿಬಿದ್ದಾಗ ಹೀಗಾಗಬಹುದು.

೩. ರಕ್ತದಲ್ಲಿರುವ ಆಮ್ಲಜನಕದ ಬದಲಾಗಿ ಇತರ ಅನಿಲಗಳು ಸೇರಿಕೊಳ್ಳುವುದು. ಇಂಗಾಲ ಮಾನಾಕ್ಸೈಡನಿಲವನ್ನು ಹೆಚಿನ ಪ್ರಮಾನದಲ್ಲಿ ಸೇವಿಸಿದರೆ ಇದು ಸಂಭವಿಸಬಹುದು.

೪. ವಿದ್ಯುತ್ ಆಘಾತದಿಂದ ಅಥವ ಕೆಲವು ಅಮಲು ಪದಾರ್ಥಗಳ ಸೇವನೆಯಿಂದ ಉಸಿರಾಟದ ನರಕೇಂದ್ರ ಸ್ಥಗಿತವಾಗುವುದು.

ಉಸಿರಾಟದ ಅಂಗಗಳ್ಳಾದ ಬಾಯಿ ಮಯತ್ತು ಗಂಡಲಕುಹರಗಳಲ್ಲಿ ತಡೆಯಿಲ್ಲದತ್ತೆ ಶ್ವಾಸಕೋಶಗಳು ಗಾಳಿಯನ್ನು ಒಳಕ್ಕೆಳೆಯುವಂತೆಯೂ ನೋಡಿಕೊಳ್ಳುವುದು ಕೃತಕ ಉಸಿರಾಟದ ಮುಖ್ಯ ಕ್ರಿಯೆ.[೨] ಕೃತಕ ಉಸಿಟದಲ್ಲಿ ಹಲವು ವಿಧಾನಗಳಿವೆ. ಅವುಗಳಲ್ಲಿ 'ಬಾಯಿಯಿಂದ ಬಾಯಿಗೆ' ಉಸಿರು ನೀಡುವ ವಿಧಾನ, ಸಿಲ್ವೆಸ್ಟ್ರ್ ವಿಧಾನ ಮತ್ತು ಡೆನ್ಮಾರ್ಕಿನ ಹೋಲ್ಗರ್ ನೀಲ್ ಸನ್ ಅವರು ೧೯೩೨ರಲ್ಲಿ ಹೇಳಿದ ವಿಧಾನಗಳು ಅತಿ ಮುಖ್ಯವಾದುವು.

ಬಾಯಿಯಿಂದ ಬಾಯಿಗೆ[ಬದಲಾಯಿಸಿ]

ಮೊದಲನೆಯದಾಗಿ ರೋಗಿಯನ್ನು ಅಂಗಾತವಾಗಿ ಮಲಗಿಸಿ ತೋರ್ಬೆರಳಿಂದ ರೋಗಿಯ ಬಾಯೊಳಗೆ ಮಣ್ಣು, ಕಲ್ಲು ಅಥವಾ ಇತರ ಯಾವುದಾದರೂ ಉಸಿರಾಟಕ್ಕೆ ಭಂಗ ತರಬಹುದಾದ ವಸ್ತುಗಳಿದ್ದರೆ ಅವನ್ನು ಹೊರಚೆಲ್ಲಬೇಕು. ( ಎಲ್ಲ ಕೃತಕ ಉಸಿರಾಟದ ವಿಧಾನಗಳಲ್ಲೂ ಇದು ಮೊದಲ ಹೆಜ್ಜೆ.) ಅವನು ನುಂಗಿದ ಪರಕಿಯ ವಸ್ತುಗಳನ್ನೆಲ್ಲ ಹೊರಹಾಕಬೇಕು. ಅನಂತರ ಬೆರಳುಗಳಿಂದ ಅವನ ಗದ್ದವನ್ನು ಮೇಲಕ್ಕೆತ್ತಬೇಕು.ತಲೆ ಹಿಂದಕ್ಕೆ ಬಗ್ಗಿರಬೇಕು. ಇದರಿಂದ ಗಾಳಿಯ ದಾರಿ ಸುಗಮವಾಗುತ್ತದೆ. ಒಂದು ಕೈಯಿಂದ ರೋಗಿಯ ಮೋಗನ್ನು ಮುಚ್ಚಿ, ಬಾಯಿಯನ್ನು ಆದಷ್ಟ್ಟು ಅಗಲಿಸಿ ರೋಗಿಯ ತೆರೆದ ಬಾಯಿಯ ಮೇಲೆ ಇರಿಸಬೇಕು.ಬಾಯಿಗಳ ಮಧ್ಯೆ ಗಾಳಿ ಹೋಗುವಂಥ ಯಾವ ಬಿರುಕೊ ಇರಬಾರದು. ಆಮೇಲೆ ರೋಗಿಯ ಬಾಯಿಯೊಳಗೆ ಗಾಳಿಯನ್ನು ಬಲವಾಗಿ ಊದಬೇಕು. ಈ ಗಾಳಿ ಹೊಟ್ಟೆಗೆ ಹೋಗದಂತೆ ಒಂದು ಕೈಯನ್ನು ಹೊಟ್ಟೆಯ ಮೇಲೆ ದ್ರುಢವಾಗಿ ಇರಿಸಬೇಕು. ರೋಗಿ ವಯಸ್ಕನಾಗಿದ್ದರೆ ನಿಮಿಷಕ್ಕೆ ೧೨ ರಂತೆಯೂ ಹುಡುಗನಾಗಿದ್ದರೆ ೨೦ ರಂತೆಯೂ ಉಸಿರಾಡಬೇಕು. ಈ ರೀತಿಯಲ್ಲಿ ರೋಗಿಯು ತಾನೆ ಉಸಿರಾಡಲು ಶಕ್ತನಾಗುವ ತನಕ ಅವನನ್ನು ಉಸಿರಾಡಿ ಸುತ್ತಿರಬೇಕು.[೩]

ಕೃತಕ ಉಸಿರಾಟವನ್ನು ಪ್ರಯೋಗಿಸುವವರು ಬೇಗನೆ ನಿರಾಶರಾಗಬಾರದು. ಈ ವಿಧಾನಗಳನ್ನು ಹಲವು ಗಂಟೆಗಳ ತನಕ ಬಿಡದೆ ಮಾಡ ಬೇಕಾಗಬಹುದು. ೮ ಗಂಟೆಗಳ ಕೃತಕ ಉಸಿರಾಟದ ಬಳಿಕ ರೋಗಿ ಚೇತರಿಸಿಕೋಂಡ ದ್ರುಷ್ಟ್ಟಾಂತಗಳೂ ಇವೆ.

ರೆಡ್ಕ್ರಾಸ್, ಎನ್.ಸಿ.ಸಿ, ಸ್ಕೌಟ್ಗಳಂಥ ಸಂಸ್ಥೆಗಳು ಕೃತಕ ಉಸಿರಾಟದ ವಿಧಾನಗಳಲ್ಲಿ ತರಬೇತಿ ನೀಡುತ್ತವೆ.

  1. https://medlineplus.gov
  2. https://www.mayoclinic.org/first-aid/first-aid-cpr/basics/art-20056600
  3. https://en.wikipedia.org/wiki/Cardiopulmonary_resuscitation