ಸದಸ್ಯ:Anushree A/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾರ್ಟಿಲೇಜ್ ಮೀನುಗಳು
ಗ್ರೇಟ್ ವೈಟ್ ಶಾರ್ಕ್ ಮೀನು

ಕಾಂಡ್ರಿಕ್ತೈಸ್: ಕಾಂಡ್ರಿಕ್ ಥೀಸ್ ಕಾರ್ಟಿಲೆಜ್ ಮೀನುಗಳನ್ನು ಒಳಗೊಂಡಿರುವ ಒಂದು ವರ್ಗವಾಗಿದೆ. ಇವುಗಳು ಬೆನ್ನೆಲಬುಗಳನ್ನು ಹೊಂದಿರುತ್ತವೆ. ಇವುಗಳಿಗೆ ದವಡೆಗಳು, ಜೋಡಿ ರೆಕ್ಕೆ, ಜೋಡಿ ಮೂಗಿನ ಹೊಳ್ಳೆಗಳು, ಮಾಪಕಗಳು, ಸರಣಿಯಲ್ಲಿ ವಿಭಾಗಗಳನ್ನು ಹೊಂದಿರುವ ಹೃದಯ ಇದೆ, ಮತ್ತು ಅಸ್ತಿಪಂಜರವು ಮೂಳೆಯ ಬದಲಾಗಿ ಕಾರ್ಟಿಲೆಜ್ ಇಂದ ಮಾಡಲಾಗಿದೆ. ಹಾಗಾಗಿ ಇವುಗಳನ್ನು ಕಾಂಡ್ರಿಕ್ ಥೀಸ್ ಎಂದು ಕರೆಯುತ್ತಾರೆ. ಈ ವರ್ಗವನ್ನು ಎರಡು ಉಪವಿಭಾಗಗಳಾಗಿ ವಿಂಗಡಿಸಲಾಗಿದೆ: ಎಲಸ್‌ಮೊಬ್ರಾಂಚೀಇ( ಶಾರ್ಕ್ ಮೀನು, ರೇ, ಸ್ಕೇಟ್ , ಮತ್ತು ಗರಗಸ ಮೀನು ) ಮತ್ತು ಹೊಲೊಸೆಫಲೀ( ಚಿಮೇರಾ, ಇದು ಕೆಲವೊಮ್ಮೆ ಗೋಸ್ಟ್ ಶಾರ್ಕ್ ಎಂದು ಕರೆಯುತ್ತಾರೆ). ಇನ್ಫ್ರಾಫೈಲಮ್ಜ್ಞಾ ಗ್ನಾಥೋಸ್ಟೋಮಾಟದಲ್ಲಿ ಇರುವ ಎಲ್ಲಾ ದವಡೆಯುಳ್ಳ ಕಶೇರುಕಗಳಿಂದ ಕಾರ್ಟಿಲೆಜ್ ಮೀನುಗಳು ಭಿನ್ನವಾಗಿದೆ. ಈಗ ಉಪಲಬ್ಧವಾಗಿರುವ ಈ ವರ್ಗದ ಮೀನುಗಳು ಟೆಲಿಯೊಸ್ಟೋಮಿಗೆ ಸೇರುತ್ತವೆ.

ಅಂಗರಚನಾಶಾಸ್ತ್ರ[ಬದಲಾಯಿಸಿ]

ಅಸ್ಥಿಪಂಜರ[ಬದಲಾಯಿಸಿ]

ಅಸ್ಥಿಪಂಜರವು ಕಾರ್ಟಿಲೆಜಿಂದ ಮಾಡಲಾಗಿದೆ. ಬೆನ್ನುಹುರಿಯ ಪೂರ್ವರೂಪ ಎಳೆಯ ಮೀನುಗಳಲ್ಲಿ ಮಾತ್ರ ಕಂಡು ಬರುತ್ತದೆ, ನಂತರ ಅದು ಕ್ರಮೇಣವಾಗಿ ಕಾರ್ಟಿಲೆಜ್ ಆಗಿ ಬದಲಾಗುತ್ತದೆ. ಕಾಂಡ್ರಿಕ್ ಥೀಯಾನ್'ಗಳಿಗೆ ಪಕ್ಕೆಲುಬುಗಳು ಇಲ್ಲವಾದ ಕಾರಣ ಅವುಗಳು ನೀರಿನಿಂದ ಹೊರಬಂದಾಗ, ದೊಡ್ಡ ಜಾತಿಯ ಮೀನುಗಳು' ಅವುಗಳ ಸ್ವಂತ ದೇಹದ ತೂಕದಿಂದ ಅವುಗಳ ಆಂತರಿಕ ಅಂಗಗಳನು ನೆಗ್ಗುತ್ತಾವೆ. ಅವುಗಳಿಗೆ ಮೂಳೆ ಮಜ್ಜೆ ಇಲ್ಲದಿರುವುದರಿಂದ, ಕೆಂಪು ರಕ್ತ ಕಣಗಳು ಗುಲ್ಮ ಮತ್ತು ಎಪಿಗೊನಲ್ ಅಂಗದಲ್ಲಿ(ಇದು ಗೋನ್ಯಾಡ್ ಸುತ್ತ ಇರುವ ವಿಶೇಷ ಅಂಗಾಂಶ, ಪ್ರತಿರಕ್ಷಣಾ ವ್ಯವಸ್ಥೆಯ ಒಂದು ಪಾತ್ರವನ್ನು ವಹಿಸುತ್ತದೆ) ಉತ್ಪಾದಿಸಲಾಗುತ್ತದೆ. ಇವುಗಳು ಲೈಡಿಗ್ ಅಂಗದಲ್ಲು ಉತ್ಪತ್ತಿಯಾಗುತ್ತದೆ. ಉಪವರ್ಗ ಹೊಲೊಸೆಫಲೀಯಲ್ಲಿ ಎಪಿಗೊನಲ್ ಅಂಗ ಮತ್ತು ಲೈಡಿಗ್ ಅಂಗ ಎರಡು ಇರುವುದಿಲ್ಲ.

ಉಪಾಂಗಗಳು[ಬದಲಾಯಿಸಿ]

ಕಾಂಡ್ರಿಕ್ ಥೀಯಾನ್'ಸ್ ಚರ್ಮವು ಚರ್ಮದ ಹಲ್ಲು ಅಂದರೆ ಪ್ಲ್ಯಾಕಾಯ್ಡ್ ಮಾಪಕಗಳನ್ನು ಒಳಗೊಂಡಿರುವ ಬಿರುಸು ಚರ್ಮದಿಂದ ಮಾಡಲಾಗಿದೆ ಆದರೆ ವಿದ್ಯುತ್ ರೇ ಮೀನಿನ ಚರ್ಮವು ಮೃದು, ದಪ್ಪ ಮತ್ತು ಸಡಿಲವಾಗಿ ಇದೆ. ಹೆಚ್ಚಿನ ಜಾತಿಗಳಲ್ಲಿ, ಎಲ್ಲಾ ಪ್ಲ್ಯಾಕಾಯ್ಡ್ ಮಾಪಕಗಳು ಒಂದು ದಿಕ್ಕಿನಲ್ಲಿ ಆಧಾರಿತವಾಗಿರುತ್ತದೆ. ಶಾರ್ಕ್'ನ ಅತ್ಯಂತ ಪ್ರಾಥಮಿಕ ಗುಣಲಕ್ಷಣವಗಳೆಂದರೆ ಹೆಟೆರೋಸರ್ಕಲ್ ಬಾಲ[೧], ಅದು ಅದರ ಚಲನಕ್ಕೆ ನೆರವಾಗುತ್ತದೆ.

ದೇಹದ ಮೇಲ್ಮೈ[ಬದಲಾಯಿಸಿ]

ಕಾಂಡ್ರಿಕ್ ಥೀಯಾನ್'ಸ್ ಚರ್ಮದಲ್ಲಿ ಪ್ಲ್ಯಾಕಾಯ್ಡ್ ಮಾಪಕಗಳು ಇವೆ. ಪ್ಲ್ಯಾಕಾಯ್ಡ್ ಮಾಪಕಗಳು ಎರಡು ಕಾರ್ಯಗಳನ್ನು ಮಾಡುತ್ತವೆ: ರಕ್ಷಣೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಸರಳೀಕರಿಸುವೆಕೆ. ಲೋಳೆ ಗ್ರಂಥಿಗಳು ಕೆಲವು ಜಾತಿಗಳಲ್ಲಿ ಅಸ್ತಿತ್ವದಲ್ಲಿದೆ. ಇದರ ಮುಖ ಹಲ್ಲುಗಳು ಪ್ಲ್ಯಾಕಾಯ್ಡ್ ಮಾಪಕಗಳ ವಲಸೆಯಿಂದ ಬಾಯಿಯಲ್ಲಿ ವಿಕಸನವಾಗಿದೆ. ಹಳೆಯ ಪ್ಲ್ಯಾಕೊಡರ್ಮ್'ನಲ್ಲಿ ಹಲ್ಲುಗಳ ಬದಲು ಚೂಪಾದ ಎಲುಬಿನ ಫಲಕಗಳಿವೆ. ಹೀಗಾಗಿ, ಚರ್ಮದ ಹಲ್ಲು ಅಥವಾ ಮುಖದ ಹಲ್ಲು ಯಾವುದು ಮೊದಲು ಉಗಮವಾಯಿತು ಎಂಬುದು ತಿಳಿದಿಲ್ಲ.

ಉಸಿರಾಟದ ವ್ಯವಸ್ಥೆ[ಬದಲಾಯಿಸಿ]

ಎಲ್ಲಾ ಕಾಂಡ್ರಿಕ್ ಥೀಸ್'ಗಳು ೫-೭ ಜೋಡಿ ಕಿವಿರುಗಳಿಂದ ಉಸಿರಾಡುತ್ತವೆ. ಸಾಮಾನ್ಯವಾಗಿ, ಸಮುದ್ರವಾಸಿ ಜಾತಿಯ ಮೀನುಗಳು ಅವುಗಳನ್ನು ಆಮ್ಲಜನಕಯುಕ್ತವಾಗಿ ಇರಿಸಿಕೊಳ್ಳಲು ಸದಾ ಈಜಾಡುತ್ತಿರಬೇಕು. ಒಂದು ಸ್ಪಿರಾಕಲ್ಸ್ ಪ್ರತಿ ಕಣ್ಣಿನ ಹಿಂಭಾಗದಲ್ಲಿ ಸಣ್ಣ ಕುಳಿಯ ಹಾಗೆ ಇರುತ್ತವೆ. ಇದು ಸಣ್ಣ ಮತ್ತು ವೃತ್ತಾಕಾರ ಅಥವಾ ವಿಸ್ತೃತ ಮತ್ತು ಸೀಳಿನ ಆಕಾರದಲ್ಲಿ ಇರುತ್ತವೆ. ಅನೇಕ ದೊಡ್ಡ , ಸಮುದ್ರವಾಸಿ ಜಾತಿಯ ಮೀನುಗಳು ಉದಾಹರಣೆಗೆ ಬಂಗಡೆ ಶಾರ್ಕ್ ಮತ್ತು ಷಾರ್ಕ್ ಮೀನು ಶಾರ್ಕ್ ಸ್ಪಿರಾಕಲ್ಸ್ಯವನ್ನು ಹೊಂದಿಲ್ಲ.

ಸಂತಾನೋತ್ಪತ್ತಿ ವ್ಯವಸ್ಥೆ[ಬದಲಾಯಿಸಿ]

ಫಲೀಕರಣ ಆಂತರಿಕವಾದುದು. ಅಭಿವೃದ್ಧಿ ಸಾಮಾನ್ಯವಾಗಿ ನೇರ ಜನನವಾಗಿ( ಅಂಡಜೋತ್ಪಾದಕ ತಳಿಯಲ್ಲಿ) ಆದರೆ ಮೊಟ್ಟೆಗಳು ಮೂಲಕವಾಗಿ( ಅಂಡೋತ್ಪಾದಕ ) ಆಗಬಹುದು. ಕೆಲವು ಅಪರೂಪದ ತಳಿಗಳ ಮರಿಹಾಕುವವು ಇವೆ. ಇವುಗಳಲ್ಲಿ ಯಾವುದೇ ಪೋಷಕರ ಕಾಳಜಿ ಜನನದ ನಂತರ ಇಲ್ಲ, ಆದರೂ ಕೆಲವು ಕೆಂಡ್ರಿಕ್ ತೆಯಾನ್ ತಮ್ಮ ಮೊಟ್ಟೆಗಳನ್ನು ರಕ್ಷಣೆ ಮಾಡುತ್ತವೆ.

ವರ್ಗೀಕರಣ[ಬದಲಾಯಿಸಿ]

ಕೆಂಡ್ರಿಕ್ ಥೇಯಾನ್ನನ್ನು ಎರಡು ಉಪವಿಭಾಗಗಳಾಗಿ ವಿಂಗಡಿಸಲಾಗಿದೆ: ಎಲಸ್‌ಮೊಬ್ರಾಂಚೀಇ( ಶಾರ್ಕ್, ರೇ, ಸ್ಕೇಟ್ , ಮತ್ತು ಗರಗಸ ಮೀನು ) ಮತ್ತು ಹೊಲೊಸೆಫಲೀ( ಚಿಮೇರಾ, ಇದು ಕೆಲವೊಮ್ಮೆ ಗೋಸ್ಟ್ ಶಾರ್ಕ್ ಎಂದು ಕರೆಯುತ್ತಾರೆ).

ಎಲಸ್‌ಮೊಬ್ರಾಂಚೀಇ[ಬದಲಾಯಿಸಿ]

ಶಾರ್ಕ್ ಮೀನು ಎಲಸ್‌ಮೊಬ್ರಾಂಚೀಇ ಶಾರ್ಕ್ ಮತ್ತು ರೇ ಮತ್ತು ಸ್ಕೇಟ್ ಒಳಗೊಂಡಿರುವ ಒಂದು ಉಪಜಾತಿ ಆಗಿದೆ. ಎಲಸ್ಮೊಬ್ರಾಂಚೀಇಯ ಸದಸ್ಯರು ಯಾವುದೇ ಈಜು ಮೂತ್ರಕೋಶವನ್ನು ಹೊಂದಿಲ್ಲ, ಬಾಹ್ಯ ಪ್ರತ್ಯೇಕವಾಗಿ ತೆರೆಯುವ ಗಿಲ್ ಕ್ಲೆಫ್ಟ್ಸ್ ಐದರಿಂದ ಏಳು ಜೋಡಿ ಇವೆ, ಕಟ್ಟುನಿಟ್ಟಿನ ಬೆನ್ನಿನ ರೆಕ್ಕೆಗಳು, ಮತ್ತು ಸಣ್ಣ ಪ್ಲ್ಯಾಕಾಯ್ಡ್ ಮಾಪಕಗಳು ಇವೆ. ಹಲ್ಲು ಹಲವಾರು ಸರಣಿಯಲ್ಲಿ ಇವೆ; ಮೇಲಿನ ದವಡೆಯ ತಲೆಬುರುಡೆ ಜೊತೆ ಒಂದುಗೂಡಿಲ್ಲ, ಮತ್ತು ಕೆಳಗಿನ ದವಡೆಯ ಮೇಲಿನ ದವಡೆಯ ಜೊತೆ ಸಂದಿದೆ. ಕಣ್ಣುಗಳು ಟಪೆಟಮ್ ಲ್ಯುಸಿಡಮ್ ಅನ್ನು ಹೊಂದಿದೆ. ಗಂಡು ಮೀನುಗಳ ಪ್ರತಿ ಶ್ರೋಣಿಯ ರೆಕ್ಕೆ ಒಳ ಅಂಚು ಕ್ಲಾಸ್ಪೆರ್ ಆಗಿ, ವೀರ್ಯ ಪ್ರಸಾರಕ್ಕಾಗಿ ನಿಯೋಜಿತವಾಗಿದೆ.

ಹೊಲೊಸೆಫಲೀ[ಬದಲಾಯಿಸಿ]

ಚೈಮೇರಾ ಹೋಲೋಸೆಫಾಲಿ ಚೀಮರಿಫೋರ್ಮೆಸ್ ಗುಂಪಿನ ಬದುಕುಳಿದಿರುವ ಜೀವಿಗಳ ಉಪಜಾತಿ. ಈ ಗುಂಪು ಇಲಿ-ಮೀನುಗಳು (ಉದಾ ಚಿಮೇರಾ), ಮೊಲ-ಮೀನುಗಳು (ಉದಾ ಹೈಡ್ರೋಲೇಗಸ್) ಮತ್ತು ಆನೆ-ಮೀನುಗಳು(ಕ್ಯಾಲೊರಿಂಕಸ್) ಒಳಗೊಂಡಿದೆ. ಇವುಗಳು ಸಮುದ್ರದ ತಳದಲ್ಲಿ ವಾಸಿಸುತ್ತವೆ ಮತ್ತು ಮೃದ್ವಂಗಿಗಳು ಹಾಗೂ ಇತರೆ ಅಕಶೇರುಕಗಳನ್ನು ತಿನ್ನುತ್ತವೆ. ಇದರ ಬಾಲ-ಉದ್ದ ಮತ್ತು ತೆಳು ಇವುಗಳು ದೊಡ್ಡ ಎದೆಯ ರೆಕ್ಕೆಗಳು ವ್ಯಾಪಕವಾದ ಚಳವಳಿಯಿಂದ ಸರಿಸುತ್ತವೆ. ಹೊಲೊಸೆಫಲೀಯ ಪುರಾತನ ದಾಖಲೆಯು ಡಿವೋನಿಯನ್ ಅವಧಿಯಲ್ಲಿ ಮೊದಲು ದೊರಕಿತು.

ವಿಕಸನ[ಬದಲಾಯಿಸಿ]

ಕಾಂಡ್ರಿಕ್ ಥೀಸ್ ಮೀನು ಅಕಾಂತೊಡಿಯನ್'ಸ್ ವಿಕಸನಗೊಂಡಿದೆ ಪರಿಗಣಿಸಲಾಗುತ್ತದೆ. ಹಿಂದೆ ಅಕಾಂತೊಡಿಯನ್'ಸ್'ಗೆ ಇದ್ದ ವಿಶೇಷ ಗುಣಲಕ್ಷಣಗಳು ಇಂದು ಕಾಂಡ್ರಿಕ್ ಥೀಸ್ ಮೀನುಗಳಿಗೂ ಇದೆ ಎಂದು ತಿಳಿಯಲಾಗಿದೆ[೨][೩]. ಕಾಂಡ್ರಿಕ್ ಥೀಸ್ ಮೀನುಗಳ ವಿಸ್ಪಷ್ಟವಾದ ಪಳೆಯುಳಿಕೆಗಳು ಮೊದಲು ಮಧ್ಯಮ ದೇವೋನಿಯನ್ ಅವಧಿಯಲ್ಲಿ, 395 ದಶಲಕ್ಷ ವರ್ಷಗಳ ಹಿಂದೆ ಪಳೆಯುಳಿಕೆ ದಾಖಲೆಯಲ್ಲಿ ಕಾಣಿಸಿಕೊಂಡಿತು. ಆರಂಭಿಕ ಡಿವೋನಿಯನ್ ಪ್ರಾರಂಭವಾಗುವ ಹೊತ್ತಿನ, 419 ದಶಲಕ್ಷ ವರ್ಷಗಳಷ್ಟು ಹಿಂದೆ ( ಮಿಲಿಯನ್ ವರ್ಷಗಳ ಹಿಂದೆ ) , ದವಡೆಯುಳ್ಳ ಮೀನುಗಳು ನಾಲ್ಕು ವಿಶಿಷ್ಟ ಗುಂಪುಗಳಾಗಿ ವಿಂಗಡಿಸಲಾಗಿದ: ಪ್ಲಾಕೊಡರ್ಮ್ಸ ಮತ್ತು ಸ್ಪೈನಿ ಶಾರ್ಕ್, ಇಂದು ಇವೆರಡೂ ಅಳಿದು ಹೋಗಿದೆ ಮತ್ತು ಕಾಂಡ್ರಿಕ್ ಥೀಸ್ ಮತ್ತು ಎಲುಬಿನ ಮೀನುಗಳು , ಇವೆರಡೂ ಈಗಲೂ ಲಭ್ಯವಿದೆ.

ಉಲ್ಲೇಖಗಲು[ಬದಲಾಯಿಸಿ]

  1. Function of the heterocercal tail in sharks: quantitative wake dynamics during steady horizontal swimming and vertical maneuvering - The Journal of Experimental Biology 205, 2365–2374 (2002)
  2. A Silurian placoderm with osteichthyan-like marginal jaw bones
  3. Zhu, Min; Xiaobo Yu, Per Erik Ahlberg, Brian Choo, Jing Lu, Tuo Qiao, Qingming Qu, Wenjin Zhao, Liantao Jia, Henning Blom & You'an Zhu (2013). "A Silurian placoderm with osteichthyan-like marginal jaw bones". Nature (502): 188–193. doi:10.1038/nature12617.

ಹೊರಗಿನ ಸಂಪರ್ಕಗಳು[ಬದಲಾಯಿಸಿ]