ಶಾಂತಾ ವಸಿಷ್ಠ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಾಂತಾ ವಸಿಷ್ಠ (ಜನನ ೧೯೨೬ [೧] ) ಅವರು ಭಾರತದ ರಾಜಕಾರಣಿ. ೧೯೫೦ ಮತ್ತು ೧೯೬೦ ರ ದಶಕದಲ್ಲಿ ಅವರು ದೆಹಲಿಯ ರಾಜ್ಯ ಸರ್ಕಾರದಲ್ಲಿ ಸಚಿವರಾಗಿ ಮತ್ತು ರಾಜ್ಯಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ವಿದ್ಯಾಭ್ಯಾಸ[ಬದಲಾಯಿಸಿ]

ವಸಿಷ್ಠ ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡಿದ್ದಾರೆ. ಆಕೆಯ ತಂದೆ ಎಲ್‌.ಡಿ. ವಸಿಷ್ಠ ಅವರು ರಕ್ಷಣಾ ಸಚಿವಾಲಯದ ಮುಖ್ಯ ಆಡಳಿತ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. [೧] [೨] [೩] ತನ್ನ ವಿದ್ಯಾರ್ಥಿ ಜೀವನದಲ್ಲಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ದೆಹಲಿ ಶಾಖೆಯಲ್ಲಿ ಸಕ್ರಿಯರಾಗಿದ್ದರು ಮತ್ತು ಕಿಂಗ್ಸ್‌ವೇ ನಿರಾಶ್ರಿತರ ಸಮಿತಿಯೊಂದಿಗೆ ಕೆಲಸ ಮಾಡಿದ್ದರು. [೨] ೧೯೫೦ರಲ್ಲಿ ಅವರು ಕಪ್ಪಾ ಆಲ್ಫಾ ಥೀಟಾ ಸೊರೊರಿಟಿಯ ವಿದೇಶಿ ವಿದ್ಯಾರ್ಥಿ ವಿದ್ಯಾರ್ಥಿವೇತನದ ಮೂಲಕ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಸಾಮಾಜಿಕ ಕಾರ್ಯವನ್ನು ಅಧ್ಯಯನ ಮಾಡಿದರು. [೨] [೪]

ದೆಹಲಿ ವಿಧಾನಸಭೆ[ಬದಲಾಯಿಸಿ]

ಭಾರತಕ್ಕೆ ಹಿಂದಿರುಗಿದ ನಂತರ, ವಸಿಷ್ಠ ೧೯೫೨ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಕೋಟ್ಲಾ ಫಿರೋಜ್ ಷಾ ಕ್ಷೇತ್ರದಲ್ಲಿ ವಸಿಷ್ಠ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರು ಭಾರತೀಯ ಜನಸಂಘದ ವಿ.ಪಿ. ಜೋಶಿ ಅವರನ್ನು ಪರಾಭವಗೊಳಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಒಟ್ಟಾರೆಯಾಗಿ ವಸಿಷ್ಠ ಅವರು ೪,೬೪೬ ಮತಗಳನ್ನು ಪಡೆದರು (ಕ್ಷೇತ್ರದಲ್ಲಿ ೫೬.೨೬% ಮತಗಳು). [೫] ೧೯೫೩ ರಲ್ಲಿ ದೆಹಲಿಯ ಮುಖ್ಯಮಂತ್ರಿ ಚೌಧರಿ ಬ್ರಹ್ಮ ಪ್ರಕಾಶ್ ಅವರು ದೆಹಲಿ ರಾಜ್ಯ ಸರ್ಕಾರದಲ್ಲಿ ಇವರನ್ನು ಶಿಕ್ಷಣ ಖಾತೆಯ ಉಪ ಮಂತ್ರಿಯಾಗಿ ನೇಮಕಗೊಳಿಸಿದ್ದರು. [೬] [೭] ಅವರ ನಾಮನಿರ್ದೇಶನವನ್ನು ದೆಹಲಿಯ ಕಾಂಗ್ರೆಸ್ ಶಾಸಕಾಂಗ ಪಕ್ಷದೊಳಗಿನ ಅಲ್ಪಸಂಖ್ಯಾತರ ಬಣ ಟೀಕಿಸಿತ್ತು. ಮುಖ್ಯಮಂತ್ರಿ ಅವರು ಪಕ್ಷದ ವಿಧಾನಸಭಾ ಸದಸ್ಯರನ್ನು ಸಂಪರ್ಕಿಸದೇ ಉಪ ಮಂತ್ರಿಗಳನ್ನು ನಾಮನಿರ್ದೇಶನ ಮಾಡಬಾರದು ಎಂದು ಪ್ರತಿಪಾದಿಸಿದ್ದರು. [೬]

ವಸಿಷ್ಠರು ೧೯೫೪ ರಲ್ಲಿ ದೆಹಲಿ ಲೈಬ್ರರಿ ಅಸೋಸಿಯೇಶನ್‌ನ ಪುನರುಜ್ಜೀವನದಲ್ಲಿ ಭಾಗವಹಿಸಿದ್ದರು. ಸಂಘದ ಸುದೀರ್ಘ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. [೮] [೯]

ರಾಜ್ಯಸಭೆ[ಬದಲಾಯಿಸಿ]

ವಸಿಷ್ಠರು ೧೯೬೦ ರಲ್ಲಿ ರಾಜ್ಯಸಭೆಗೆ ( ಭಾರತದ ಸಂಸತ್ತಿನ ಮೇಲ್ಮನೆ) ಚುನಾಯಿತರಾಗಿದ್ದರು. ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಇಂದಿರಾ ಗಾಂಧಿಯವರ ಸರ್ಕಾರಗಳ ಅಡಿಯಲ್ಲಿ ಅವರ ಅವಧಿಯು ೩ ಏಪ್ರಿಲ್ ೧೯೬೦ ರಿಂದ ೨ ಏಪ್ರಿಲ್ ೧೯೬೬ ರವರೆಗೆ ಇತ್ತು. [೧೦] [೧೧]

ನಂತರದ ಅವಧಿ[ಬದಲಾಯಿಸಿ]

೨೦೦೮ರಲ್ಲಿ ವಸಿಷ್ಠ ನೆಹರು ಟು ಇರಾಕ್ ಪುಸ್ತಕವನ್ನು ಬಿಡುಗಡೆಗೊಳಿಸಿದ್ದರು. ಇದು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಅನುಭವಗಳನ್ನು ವಿವರಿಸುತ್ತದೆ. [೧೨] ೨೦೧೩ರ ಹೊತ್ತಿಗೆ, ವಸಿಷ್ಠರು ಸರ್ವೋದಯ ಎನ್‌ಕ್ಲೇವ್‌ನಲ್ಲಿ ವಾಸಿಸುತ್ತಿದ್ದರು. [೧]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ ೧.೨ Chief Electoral Officer, Delhi. ELECTORAL ROLL 2013, STATE- (U05) DELHI Archived 15 March 2013[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
  2. ೨.೦ ೨.೧ ೨.೨ Woman Lawyer Plans Return to Native India, Pittsburgh Post-Gazette – 22 June 1950
  3. Ministry of Defence. List of erstwhile CAOs & Joint Secretary Archived 2013-12-16 ವೇಬ್ಯಾಕ್ ಮೆಷಿನ್ ನಲ್ಲಿ.
  4. Kappa Alpha Theta. 1946–1958
  5. Election Commission of India. STATISTICAL REPORT ON GENERAL ELECTION, 1951 TO THE LEGISLATIVE ASSEMBLY OF DELHI
  6. ೬.೦ ೬.೧ Puri, Yogesh. Party Politics in the Nehru Era: A Study of Congress in Delhi. New Delhi, India: National Book Organisation, 1993. p. 102
  7. Teacher Education. PROCEEDINGS OF THE TWENTY FIRST MEETING Archived 2015-09-24 ವೇಬ್ಯಾಕ್ ಮೆಷಿನ್ ನಲ್ಲಿ.
  8. Library Herald, Vol. 7–9. Delhi Library Association., 1965. p. 87
  9. Ranganathan, Shiyali Ramamrita, and Prithvi Nath Kaula. A Librarian Looks Back: An Autobiography of Dr. S.R. Ranganathan. New Delhi: ABC Publ. House, 1992. p. 378
  10. The Telegraph. Disruption shame in House
  11. Delhi Pradesh Congress Committee. FORMER MEMBERS OF RAJYA SABHA FROM DELHI Archived 2013-08-13 ವೇಬ್ಯಾಕ್ ಮೆಷಿನ್ ನಲ್ಲಿ.
  12. The Tribune. Requiem to a bygone era