ರಾಜ್ಯಸಭೆ
Wikipedia ಇಂದ
| ಭಾರತ |
ಈ ಲೇಖನದ ವರ್ಗ: |
|
|
|
|
ರಾಜ್ಯಸಭೆ ಭಾರತದ ಶಾಸಕಾಂಗ ವ್ಯವಸ್ಥೆಯ ಮೇಲ್ಮನೆ. ಈ ಸದನದ ಒಟ್ಟು ಸದಸ್ಯರ ಸಂಖ್ಯೆ ೨೫೦, ಅದರಲ್ಲಿ ೧೨ ಜನರನ್ನು ಭಾರತದ ಅಧ್ಯಕ್ಷರು ನಾಮಕರಣ ಮಾಡುತ್ತಾರೆ. ಈ ೧೨ ಜನರನ್ನು ವಿವಿಧ ಕ್ಷೇತ್ರಗಳಲ್ಲಿ(ಕಲೆ, ಸಾಹಿತ್ಯ, ಕ್ರೀಡೆ, ಪತ್ರಿಕೋದ್ಯಮ, ಸಮಾಜ ಸೇವೆ, ಇ.) ಸಲ್ಲಿಸಿರುವ ಸೇವೆಯನ್ನು ಗುರುತಿಸಿ, ಅವರನ್ನು ರಾಜ್ಯಸಭೆಯ ಸದಸ್ಯರನ್ನಾಗಿ ನಾಮಕರಣ ಮಾಡಲಾಗುತ್ತದೆ. ಇವರನ್ನು ನಾಮಕರಣ ಸದಸ್ಯರೆಂದು ಕರೆಯಲಾಗುತ್ತದೆ. ಇನ್ನುಳಿದ ಸದಸ್ಯರನ್ನು ರಾಜ್ಯ ವಿಧಾನಸಭೆ ಮತ್ತು ವಿಧಾನಪರಿಷತ್ತುಗಳಿಂದ ಆಯ್ಕೆ ಮಾಡಲಾಗುತ್ತದೆ.
ರಾಜ್ಯ್ಸಸಭೆಯ ಸದಸ್ಯರ ಅವಧಿ ೬ ವರ್ಷ. ಇದರಲ್ಲಿ ರಾಜ್ಯಸಭೆಯ ೧/೩ರಷ್ಟು ಸದಸ್ಯರು ೨ ವರ್ಷಗಳಿಗೊಮ್ಮೆ ನಿವೃತ್ತಿ ಹೊಂದುತ್ತಾರೆ. ರಾಜ್ಯಸಭೆಯು ಸತತವಾಗಿ ಸೇರುವ ಸದನವಾಗಿದ್ದು, ಲೋಕಸಭೆಯ ಹಾಗೇ ಇದರ ಸೇವಾವಧಿಯು ಅನೂರ್ಜಿತವಾಗುವದಿಲ್ಲ. ರಾಜ್ಯಸಭೆಯು ಲೋಕಸಭೆಯ ಹಾಗೆಯೇ ಸಮನಾದ ಅಧಿಕಾರವನ್ನು ಹೊಂದಿರುತ್ತದೆ, ಕೆಲವು ವಿಷಯಗಳಲ್ಲಿ ಲೋಕಸಭೆ ರಾಜ್ಯಸಭೆಯ ನಿರ್ಣಯವನ್ನು ತಿರಸ್ಕರಿಸಬಹುದು. ಕೆಲವು ವಿಷಯಗಳು ಇತ್ಯರ್ಥವಾಗದ ಪಕ್ಷದಲ್ಲಿ ಜಂಟಿ ಸದನಗಳ ಬೈಠಕ್ ಕರೆಯಲಾಗುತ್ತದೆ.
ಭಾರತದ ಉಪಾಧ್ಯಕ್ಷರು ರಾಜ್ಯಸಭೆಯ ಸಭಾಧ್ಯಕ್ಷರು(ಸದ್ಯ, ಹಮೀದ್ ಅನ್ಸಾರಿ). ರಾಜ್ಯಸಭೆಯ ಉಪಸಭಾಧ್ಯಕ್ಷರನ್ನು ಚುನಾವಣೆಯ ಮೂಲಕ ರಾಜ್ಯಸಭೆಯ ಸದಸ್ಯರು ಆರಿಸುತ್ತಾರೆ. ಮೇ ೧೩, ೧೯೫೨ರಂದು ರಾಜ್ಯಸಭೆಯ ಮೊದಲ ಅಧಿವೇಶನವು ನಡೆಯಿತು.
ಪರಿವಿಡಿ |
[ಬದಲಾಯಿಸಿ] ರಾಜ್ಯಸಭೆ ಸದಸ್ಯರಾಗಲು ಬೇಕಾಗುವ ಅರ್ಹತೆ
[ಬದಲಾಯಿಸಿ] ಸದಸ್ಯತ್ವ
[ಬದಲಾಯಿಸಿ] ಅಧಿಕಾರ
[ಬದಲಾಯಿಸಿ] ಸದಸ್ಯರು
[ಬದಲಾಯಿಸಿ] ರಾಜ್ಯಸಭೆಯ ನಾಯಕರು
[ಬದಲಾಯಿಸಿ] ಚುನಾಯಿತ ಸದಸ್ಯರು
[ಬದಲಾಯಿಸಿ] ನಾಮಕರಣ ಸದಸ್ಯರು
[ಬದಲಾಯಿಸಿ] ಆಕರಗಳು
[ಬದಲಾಯಿಸಿ] ಪೂರಕ ಓದಿಗೆ
- ದಿ ನಾಮಿನೇಟಡ್ ಮೆಂಬರ್ಸ್ ಆಫ್ ಇಂಡಿಯಾ'ಸ್ ಕೌನ್ಸಿಲ್ ಆಫ್ ಸ್ಟೇಟ್ಸ್: ಏ ಸ್ಟಡಿ ಆಫ್ ರೋಲ್ ಡೆಫಿನಿಷನ್ (ರಾಜ್ಯಸಭೆಯ ನಾಮಕರಣ ಸದಸ್ಯರ ಅಧಿಕಾರದ ಬಗ್ಗೆ ಒಂದು ಅಧ್ಯಯನ) ಜೆ. ಎಚ್. ಪ್ರೊಕ್ಟರ್ (J. H. Proctor), Legislative Studies Quarterly, Vol. 10, No. 1, Feb., 1985), ಪುಟ್ ಸಂಖ್ಯೆ. 53-70.