ವ್ಯಂಜನ
ವಿಕಿಪೀಡಿಯ ಇಂದ
ಭಾಷೆಗಳಲ್ಲಿ ವ್ಯಂಜನಗಳು ಗಂಟಲನ್ನು ಸಂಪೂರ್ಣವಾಗಿ ಅಥವ ಭಾಗಶಃ ಮುಚ್ಚಿ ಉಚ್ಛಾರಣೆ ಮಾಡುವಂತಹ ಅಕ್ಷರಗಳು. ಇವು ಸ್ವರಗಳಿಗೆ ಭಿನ್ನ.
ಭಾರತೀಯ ಭಾಷೆಗಳಲ್ಲಿ ವ್ಯಂಜನಗಳು [ಬದಲಾಯಿಸಿ]
ವ್ಯಂಜನಗಳಲ್ಲಿ ಎರಡು ವಿಧ.
- ವರ್ಗೀಯ ವ್ಯಂಜನ
- ಅವರ್ಗೀಯ ವ್ಯಂಜನ.
'ಕ' ಅಕ್ಷರದಿಂದ 'ಮ' ಅಕ್ಷರದವರೆಗೆ ವರ್ಗೀಯ ವ್ಯಂಜನಗಳು. ಇದರಲ್ಲಿ ಐದು ವರ್ಗಗಳು. ಕ ವರ್ಗ, ಚ ವರ್ಗ, ಟ ವರ್ಗ, ತ ವರ್ಗ ಮತ್ತು ಪ ವರ್ಗ.
'ಯ' ಅಕ್ಷರದಿಂದ 'ಳ' ಅಕ್ಷರದವರೆಗೆ ಅವರ್ಗೀಯ ವ್ಯಂಜನಗಳು.
ಅಲ್ಪಪ್ರಾಣ [ಬದಲಾಯಿಸಿ]
ಅಲ್ಪ ಉಸಿರಾಟದಲ್ಲಿ ಉಚ್ಚರಿಸುವ ವ್ಯಂಜನಗಳು. ಕ್, ಚ್ , ಟ್ , ತ್ , ಪ್, ಗ್ , ಜ್ , ಡ್ , ದ್ , ಬ್
ಮಹಾಪ್ರಾಣ [ಬದಲಾಯಿಸಿ]
ನಿಟ್ಟುಸಿರಿನೊಂದಿಗೆ ಉಚ್ಚರಿಸುವ ವ್ಯಂಜನಗಳು. ಖ್ , ಛ್ , ಠ್ , ಥ್, ಫ್, ಘ್ , ಝ್ , ಢ್ , ಧ್ , ಭ್