ವೆಬ್‌ಎಂ
ವೆಬ್‌ಎಂ' ಒಂದು ಶ್ರಾವ್ಯ-ದೃಶ್ಯ ಕಾರ್ಯಕ್ರಮ ವ್ಯವಸ್ಥೆಯಾಗಿದ್ದು, ಇದನ್ನು ರಾಯಧನ-ಮುಕ್ತ, ಉನ್ನತ-ಗುಣಮಟ್ಟದ ಮುಕ್ತ ವೀಡಿಯೋ ಕಾಂಪ್ರೆಶ್ಶನ್ ವ್ಯವಸ್ಥೆಯೊಂದನ್ನು ಎಚ್‌ಟಿಎಂಎಲ್‌೫ ವೀಡಿಯೋದೊಂದಿಗೆ ಬಳಸಲು ನೀಡುವುದಕ್ಕಾಗಿ ರೂಪಿಸಲಾಗಿದೆ. ಈ ಪ್ರೊಜೆಕ್ಟ್ ಅಭಿವೃದ್ಧಿಪಡಿಸಲು ಗೂಗಲ್ ಪ್ರಾಯೋಜಕತ್ವ ನೀಡಿದೆ.
ಒಂದು ವೆಬ್‌ಎಂ ಫೈಲ್‌ನಲ್ಲಿ ವಿಪಿ೮ ವೀಡಿಯೋ ಮತ್ತು ವೊರ್ಬಿಸ್ ಆಡಿಯೋ ವಾಹಿನಿಗಳಿದ್ದು, ಇದು ಮ್ಯಾಟ್ರೋಸ್ಕಾ ಪ್ರೊಫೈಲ್‌ನ ಮೇಲೆ ಆಧಾರಿತಗೊಂಡಿರುವ ಧಾರಕದಲ್ಲಿ ಇರುತ್ತದೆ.[೧][೨][೩] ಈ ಪ್ರೊಜೆಕ್ಟ್ ವೆಬ್‌ಎಂ ಸಂಬಂಧಿತ ಸಾಫ್ಟ್‌ವೇರನ್ನು BSD ಲೈಸೆನ್ಸ್ ಅಡಿಯಲ್ಲಿ ಬಿಡುಗಡೆ ಮಾಡುತ್ತದೆ ಮತ್ತು ಜಾಗತೀಕವಾಗಿ ಎಲ್ಲಾ ಬಕೆದಾರರಿಗೂ ಇದು ಯಾವುದೇ ಮೀಸಲಾತಿಯಿಲ್ಲದ, ಬೆಲೆಯಿಲ್ಲದ, ರಾಯಧನ-ಮುಕ್ತ ಪೇಟೆಂಟ್ ಲೈಸೆನ್ಸ್ ನೀಡುತ್ತದೆ.
ಪರಿವಿಡಿ |
ಮಾರಾಟಗಾರರ ಬೆಂಬಲ[ಬದಲಾಯಿಸಿ]
ಸಾಫ್ಟ್‌ವೇರ್[ಬದಲಾಯಿಸಿ]
ಮೊಜಿಲ್ಲಾ ಫೈರ್‌ಫಾಕ್ಸ್,[೪][೫] ಒಪೇರಾ,[೬][೭] ಮತ್ತು ಗೂಗಲ್ ಕ್ರೋಮ್[೮] ಗಳ ಬೆಂಬಲವನ್ನು ೨೦೧೦ ಗೂಗಲ್ ಐ/ಒ ಸಮ್ಮೇಳನದಲ್ಲಿ ಘೋಷಿಸಲಾಯಿತು. ಇಂಟರ್ನೆಟ್ ಎಕ್ಸ್‌ಪ್ಲೋರರ್ ೯ ಸಹಾ ವೆಬ್‌ಎಂ ಫೈಲ್‌ಗಳನ್ನು, ಒಂದುವೇಳೆ ವಿಪಿ೮ ಕೊಡೆಕ್ ಅನ್ನು ಸ್ಥಳೀಯವಾಗಿ ಸ್ಥಾಪಿಸಿದಲ್ಲಿ, ಬೆಂಬಲಿಸಲು ಸಾಧ್ಯವಿದೆ.[೯] ಡೆಸ್ಕ್‌ಟಾಪ್ ಮೇಲಿರುವ ಸಫಾರಿಯು ಕ್ವಿಕ್‌ಟೈಮ್ ನಲ್ಲಿ ಸ್ಥಾಪಿಸಿದ ಯಾವುದೇ ಕೊಡೆಕ್ ಅನ್ನು ಬೆಂಬಲಿಸುತ್ತದೆ,[೧೦] ಮತ್ತು ಆ ಮೂಲಕ ಭವಿಷ್ಯದ ವೆಬ್‌ಎಂ ಪ್ಲೇಬ್ಯಾಕ್ ಅನ್ನು ಪೆರಿಯನ್‌ನಂತಹ ಕ್ವಿಕ್‌ಟೈಮ್ ಕೊಡೆಕ್ ಅಂಶಗಳನ್ನು ಬಳಸಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.[೧೧] ಎಪಿಫ್ಯಾನಿ ಸಹಾ ವೆಬ್‌ಎಂ ಅನ್ನು ಜಿಸ್ಟ್ರೀಮರ್ ಮಲ್ಟಿಮೀಡಿಯಾ ಫ್ರೇಂವರ್ಕ್ ಮೂಲಕ ಬೆಂಬಲಿಸುತ್ತದೆ.[೧೨]
ಅಡೋಬ್‌ಅಡೋಬ್ ಸಿಸ್ಟಮ್ಸ್ ಫ್ಲ್ಯಾಶ್ ಪ್ಲೇಯರ್ ವಿಪಿ೮ ಅನ್ನು ಬೆಂಬಲಿಸುವಂತೆ ನವೀಕರಿಸಲಾಗುತ್ತದೆ ಎಂದು ಘೋಷಿಸಿತು, ಆದರೆ ಅದು ವೊರ್ಬಿಸ್ ಅಥವಾ ಮ್ಯಾಟ್ರೋಸ್ಕಾ-ಆಧಾರಿತ ವೆಬ್‌ಎಂ ಸಂಗ್ರಾಹಕಗಳಿಗೆ ಬೆಂಬಲವನ್ನು ಘೋಷಿಸಿಲ್ಲ.[೧೩][೧೪]
ವಿಎಲ್‌ಸಿ,[೧೫][೧೬] ಮೈರೊ,[೧೭][೧೮] ಮೂವಿಡಾ[೧೯] ಮತ್ತು ವಿನ್ಯಾಂಪ್,[೨೦][೨೧] ಗಳಂತಹ ಮೀಡಿಯಾ ಪ್ಲೇಯರ್‌ಗಳು ಬೆಂಬಲ ಘೋಷಿಸಿವೆ. ವೆಬ್‌ಎಂ ಫೈಲುಗಳನ್ನು ಪ್ಲೇ ಮಾಡಲು ಎಂಪ್ಲೇಯರ್ ಸ್ಥಳೀಯ ಬೆಂಬಲವನ್ನು ಹೊಂದಿದೆ.[೨೨] ಲಿಬ್‌ವಿಪಿಎಸ್ ಬೆಂಬಲದೊಂದಿಗೆ ರಚಿಸಿದಾಗ ಎಫ್‌ಎಫ್‌ಎಂಪಿಇಜಿ ಈಗ ವಿಪಿ೮ ವೀಡಿಯೋಗಳನ್ನು ಎನ್‌ಕೋಡ್ ಮತ್ತು ಡಿಕೋಡ್ ಮಾಡಬಲ್ಲುದಾಗಿದೆ. ಅಷ್ಟೇ ಅಲ್ಲದೇ ಮ್ಯುಕ್ಸ್/ಡಿಮ್ಯುಕ್ಸ್ ವೆಬ್‌ಎಂ-ಕಂಪ್ಲೈಂಟ್ ಫೈಲುಗಳನ್ನು ಕೂಡಾ.[೨೩] ಜುಲೈ ೨೩, ೨೦೧೦ ರಂದು ಎಫ್‌ಎಫ್‌ಎಂಪಿಇಜಿ ತಂಡದ ಜೇಸನ್ ಗ್ಯಾರಟ್-ಗ್ಲಾಸರ್, ರೊನಾಲ್ಡ್ ಬುಲ್ಟೀ, ಮತ್ತು ಡೇವಿಡ್ ಕಾನ್ರಾಡ್ ಎಫ್‌ಎಫ್ವಿಪಿ೮ ಡಿಕೋಡರ್ ಅನ್ನು ಘೋಷಿಸಿದರು. ಪರೀಕ್ಷೆಯ ಮೂಲಕ ಅವರು ಎಫ್‌ಎಫ್‌ವಿಪಿ೮ ಗೂಗಲ್‌ನ ಲಿಬ್‌ವಿಪಿಎಕ್ಸ್ ಡಿಕೋಡರ್‌ಗಿಂತ ಹೆಚ್ಚು ವೇಗದ್ದಾಗಿದೆ ಎಂದು ಹೇಳಿದರು.[೨೪][೨೫] ಮ್ಯಾಟ್ರೋಸ್ಕಾದ ಪ್ರಸಿದ್ಧ ರಚನಾ ಸಾಧನಗಳಾದ ಎಂಕೆವಿಟೂಲ್‌ನಿಕ್ಸ್ ಹೊಸ ರೀತಿಯಲ್ಲಿ ಮಲ್ಟಿಪ್ಲೆಕ್ಸಿಂಗ್/ಡಿಮಲ್ಟಿಪ್ಲೆಕ್ಸಿಂಗ್ ವೆಬ್‌ಎಂ-ಕಂಪ್ಲೇಂಟ್ ಫೈಲುಗಳಿಗೆ ಬೆಂಬಲವನ್ನು ಸಾಧಿಸಿವೆ.[೨೬] ಹಾಲಿ ಮೀಡಿಯಾ ಸ್ಪ್ಲಿಟ್ಟರ್ ವೆಬ್‌ಎಂ ಮ್ಯುಕ್ಸಿಂಗ್/ಡಿಮ್ಯುಕ್ಸಿಂಗ್‌ಗೆ ಬೆಂಬಲವನ್ನು ಘೋಷಿಸಿದೆ.[೨೬]
ಎಂಪಿಸಿ-ಎಚ್‌ಸಿ ಎಸ್‌ವಿಎನ್ ೨೦೭೧ ಹಾಗೂ ನಂತರದ ಬಿಲ್ಡ್‌ಗಳ ನಂತರದಲ್ಲಿ ಈಗ ವೆಬ್‌ಎಂ ಪ್ಲೇಬ್ಯಾಕ್ ಅನ್ನು ಎಫ್‌ಎಫ್‌ಎಂಪಿಇಜಿ ಕೋಡ್ ಆಧಾರಿತವಾದ ಆಂತರಿಕ ವಿಪಿ೮ ಡಿಕೋಡರ್‌ನೊಂದಿಗೆ ಬೆಂಬಲಿಸುತ್ತದೆ.[೨೪][೨೭] ಎಂಪಿಸಿ-ಎಚ್‌ಸಿಯ ೧.೪.೨೪೯೯.೦ ಮತ್ತು ನಂತರದ ಆವೃತ್ತಿಗಳ ಇತ್ತೀಚಿನ ಅಧಿಕೃತ ಸ್ಥಿರ ಬಿಡುಗಡೆಗಳು ವೆಬ್‌ಎಂಗೆ ಸಂಪೂರ್ಣ ಡಿಕೋಡಿಂಗ್ ಬೆಂಬಲವನ್ನು ಹೊಂದಿವೆ.[೨೮]
ಅಂಡ್ರಾಯಿಡ್ ಆವೃತ್ತಿ ೨.೩ - ಜಿಂಜರ್‌ಬ್ರೆಡ್ ಅಧಿಕೃತವಾಗಿ ವೆಬ್‌ಎಂ-ಸಕ್ರಿಯಗೊಳಿಸಲ್ಪಟ್ಟಿದ್ದು,[೨೯] ಅದನ್ನು ಮೊದಲು ನೆಕ್ಸಸ್ ಎಸ್ ಮೊಬೈಲ್ ಫೋನ್ ಮೂಲಕ ಬಿಡುಗಡೆ ಮಾಡಲಾಯಿತು.
ಹಾರ್ಡ್‌ವೇರ್[ಬದಲಾಯಿಸಿ]
ಎಎಂಡಿ, ಎಆರ್‌ಎಂ, ಮತ್ತು ಬ್ರಾಡ್‌ಕಾಂ ವೆಬ್‌ಎಂ ಸ್ವರೂಪದ ಹಾರ್ಡ್‌ವೇರ್ ವೇಗೋತ್ಕರ್ಷಕ್ಕೆ ಬೆಂಬಲ ಸೂಚಿಸಿವೆ.[೩೦][೩೧] ಇಂಟೆಲ್ ಸಹಾ ಒಂದು ವೇಳೆ ಈ ಸ್ವರೂಪವು ಪ್ರಸಿದ್ಧಿಗೊಂಡರ್ರೆ ವೆಬ್‌ಎಂಗಾಗಿ ಹಾರ್ಡ್‌ವೇ ಆಧಾರಿತ ವೇಗೋತ್ಕರ್ಷವನ್ನು ತನ್ನ ಆಯ್ಟಮ್-ಆಧಾರಿತ ಟಿವಿ ಚಿಪ್ಸ್‌ಗಾಗಿ ಬಳಸಲು ಚಿಂತಿಸುತ್ತಿದೆ.[೩೨] ಕ್ವಾಲ್‌ಕಾಮ್ ಮತ್ತು ಟೆಕ್ಸಾಸ್ ಇನ್ಸ್‌ಟ್ರುಮೆಂಟ್ಸ್ ಸಹಾ ಬೆಂಬಲವನ್ನು ಘೋಷಿಸಿವೆ[೩೩][೩೪], ಏಕೆಂದರೆ ಟಿಐ ಒಎಂಎಪಿ ಪ್ರೊಸೆಸರ್‌ಗೆ ಸ್ಥಳಿಯ ಬೆಂಬಲವು ದೊರೆತಿದೆ.[೩೫] ಚಿಪ್&ಮೀಡಿಯಾ ಸಂಪೂರ್ಣವಾಗಿ ಹಾರ್ಡ್‌ವೇರ್ ಡಿಕೋಡರ್ ಅನ್ನು ವಿಪಿ೮ ಗಾಗಿ ಘೋಷಿಸಿದ್ದು, ಅದು ಸಂಪೂರ್ಣ ಎಚ್‌ಡಿ ರೆಸೊಲ್ಯೂಶನ್ ವಿಪಿ೮ ಸ್ಟ್ರೀಮ್‌ಗಳನ್ನು ಪ್ರತೀ ಸೆಕೆಂಡಿಗೆ ೬೦ ಫ್ರೇಮುಗಳಂತೆ ಡಿಕೋಡ್ ಮಾಡುವ ಸಾಧ್ಯತೆ ಹೊಂದಿದೆ.[೩೬]
ಎನ್‌ವಿಡಿಯಾ ಸಹಾ ವಿಪಿ೮ ಬಳಕೆಗೆ ತಾವೂ ಬೆಂಬಲವನ್ನು ಸೂಚಿಸುತ್ತೇವೆಂದು ಹೇಳಿದ್ದಾರಾದರೂ ಅವರಿಗೆ ಹಾರ್ಡ್‌ವೇರ್ ಬೆಂಬಲ ನೀಡುವ ಯಾವುದೇ ನಿರ್ಧಿಷ್ಟ ಯೋಜನೆಗಳಿಲ್ಲ.[೩೭]
ಜನವರಿ ೭ ೨೦೧೧ ರಂದು ರಾಕ್‌ಚಿಪ್ ೧೦೮೦ಪಿ ವಿಪಿ೮ ಡಿಕೋಡಿಂಗ್‌ನ ಸಂಪೂರ್ಣ ಹಾರ್ಡ್‌ವೇರ್ ಕಾರ್ಯರೂಪಣೆಗಾಗಿ ಜಗತ್ತಿನ ಮೊದಲ ಚಿಪ್ ಅನ್ನು ಬಿಡುಗಡೆ ಮಾಡಿತು. ಆರ್‌ಕೆ೨೯ಎಕ್ಸ್‌ಎಕ್ಸ್ ಚಿಪ್‌ನಲ್ಲಿನ ವೀಡಿಯೋ ವೇಗೋತ್ಕರ್ಷವನ್ನು ವೆಬ್‌ಎಂ ಪ್ರೊಜೆಕ್ಟ್‌ನ ಜಿ-ಸರಣಿ ೧ ಹಾರ್ಡ್‌ವೇರ್ ಡಿಕೋಡರ್ ಐಪಿ ನಿರ್ವಹಿಸುತ್ತಿದೆ.[೩೮][೩೯]
ಸೇವೆಗಳು[ಬದಲಾಯಿಸಿ]
ಯೂಟ್ಯೂಬ್ ಈಗ ವೆಬ್‌ಎಂ ವೀಡಿಯೋಗಳನ್ನು ತನ್ನ ಎಚ್‌ಟಿಎಂಎಲ್‌೫ ಪ್ಲೇಯರ್ ಪ್ರಯೋಗದ ಭಾಗವಾಗಿ ನೀಡುತ್ತಿದೆ.[೪೦] ೭೨೦p ಮತ್ತು ಹೆಚ್ಚಿನ ರೆಸೊಲ್ಯೂಶನ್ ಇರುವ ಎಲ್ಲಾ ಅಪ್ಲೋಡ್ ಮಾಡಿದ ವೀಡಿಯೋಗಳೂ ವೆಬ್‌ಎಂ ನಿಂದ ೪೮೦ಪಿ ಮತ್ತು ೭೨೦ಪಿ ನಲ್ಲಿ ಎನ್‌ಕೋಡ್ ಮಾಡಲ್ಪಟ್ಟಿದ್ದು, ಉಳಿದ ರೆಸೊಲ್ಯೂಶನ್‌ಗಳು ಸಧ್ಯದಲ್ಲಿಯೇ ಬರಲಿವೆ.[೪೧][೪೨] ಯೂಟ್ಯೂಬ್ ತನ್ನ ಸಂಪೂರ್ಣ ವೀಡಿಯೋ ಪೋರ್ಟ್‌ಫೋಲಿಯೋವನ್ನು ವೆಬ್‌ಎಂ ನಲ್ಲಿ ಎನ್‌ಕೋಡ್ ಮಾಡುವ ನಿರ್ಧಾರ ಹೊಂದಿದೆ.[೪೧][೪೨]
ಸೋರ್‌ಸನ್ ಮೀಡಿಯಾದ ಆನ್‌ಲೈನ್ ಎನ್‌ಕೋಡಿಂಗ್ ಪ್ಲ್ಯಾಟ್‌ಫಾರ್ಮ್ ಈಗ ವಿಪಿ೮ ಮತ್ತು ವೆಬ್‌ಎಂ ಅನ್ನು ಬೆಂಬಲಿಸುತ್ತದೆ.[೪೩]
ಸ್ಕೈಪ್ ತನ್ನ ಸ್ಕೈಪ್ ೫.೦ ಸಾಫ್ಟ್‌ವೇರ್‌ಗೆ ವಿಪಿ೮ ಕೊಡೆಕ್ ಅನ್ನು ಬಳಸಿಕೊಂಡಿದೆ.[೪೪]
ಲಾಜಿಟೆಕ್ ತನ್ನ ವೀಡಿಯೋ ಕರೆ ಸೇವೆಯ ಭಾಗವಾಗಿ ವೆಬ್‌ಎಂ ಅನ್ನು ಬಳಸುವ ಯೋಜನೆ ಹೊಂದಿದೆ.[೪೫]
ಪರವಾನಗಿ ಪಡೆಯುವಿಕೆ[ಬದಲಾಯಿಸಿ]
ಮಧ್ಯ-೨೦೧೦ ರಲ್ಲಿ ಓಪನ್ ಸೋರ್ಸ್ ಇನಿಶಿಯೇಟಿವ್‌ನ ಮಂಡಳಿಯ ಸದಸ್ಯನಾದ ಸೈಮನ್ ಫಿಪ್ಸ್ ಎಂಬಾತ ಮೂಲ ವೆಬ್‌ಎಂ ಪರವಾನಗಿಯು ಒಂದು ಮುಕ್ತ-ಮೂಲ ಪರವಾನಗಿ ಹೌದೇ ಎಂಬ ಕುರಿತು ಅನುಮಾನ ವ್ಯಕ್ತಪಡಿಸಿದ. ಏಕೆಂದರೆ ಇದನ್ನು ಒಎಸ್‌ಐಗೆ ಒಪ್ಪಿಗೆಗಾಗಿ ಸಲ್ಲಿಸಲಾಗಿರಲಿಲ್ಲ.[೪೬] ಅದಕ್ಕೆ ಪ್ರತಿಕ್ರಿಯೆಯಾಗಿ, ವೆಬ್‌ಎಂ ಪ್ರೊಜೆಕ್ಟ್ ಪೇಟೆಂಟ್‌ಅನ್ನು ಕೃತಿಸ್ವಾಮ್ಯದಿಂದ ತೆಗೆದುಹಾಕಿತು, ಮತ್ತು ಆ ಕೋಡ್ ಅನ್ನು ಒಂದು ಪ್ರಮಾಣಿತ ಬಿಎಸ್‌ಡಿ ಪರವಾನಗಿ ಮತ್ತು ಪೇಟೆಂಟ್‌ಗಳ ಅಡಿಯಲ್ಲಿ ಒಂದು ಪ್ರತ್ಯೇಕ ಗ್ರ್ಯಾಂಟ್‌ನ ಅಡಿಯಲ್ಲಿ ನೀಡಿತು.[೪೭] ಫ್ರೀ ಸಾಫ್ಟ್‌ವೇರ್ ಡೆಫಿನಿಶನ್ ನಿರ್ವಹಿಸುತ್ತಿರುವ ಫ್ರೀ ಸಾಫ್ಟ್‌ವೇರ್ ಫೌಂಡೇಶನ್ ವೆಬ್‌ಎಂ ಮತ್ತು ವಿಪಿ೮[೪೮]ಗೆ ತನ್ನ ಒಪ್ಪಿಗೆಯನ್ನು ನೀಡಿತು ಮತ್ತು ಈ ಸಾಫ್ಟ್‌ವೇರ್‌ನ ಪರವಾನಗಿಯನ್ನು ಜಿಎನ್‌ಯು ಜನರಲ್ ಪಬ್ಲಿಕ್ ಲೈಸೆನ್ಸ್‌ಗೆ ಹೊಂದಿರಬೇಕು ಎಂದು ಹೇಳಿತು.[೪೯][೫೦]. ಜನವರಿ ೧೯, ೨೦೧೧ ರಂದು ಫ್ರೀ ಸಾಫ್ಟ್‌ವೇರ್ ಫೌಂಡೇಶನ್ ವೆಬ್‌ಎಂ ಯೋಜನೆಗೆ ತನ್ನ ಅಧಿಕೃತ ಬೆಂಬಲವನ್ನು ವ್ಯಕ್ತಪಡಿಸಿತು.[೫೧]
ಗೂಗಲ್ ಮತ್ತೆ ತೆಗೆಯಲಾಗದಂತೆ ವಿಪಿ೮ ಮೇಲಿನ ತನ್ನ ಎಲ್ಲಾ ಪೇಟೆಂಟ್‌ಗಳನ್ನು ರಾಯಧನ-ರಹಿತ ಸ್ವರೂಪದಲ್ಲಿ ಬಿಡುಗಡೆಗೊಳಿಸಿತಾದರೂ,[೫೨] H.೨೬೪ ಪೇಟೆಂಟ್ ಪೂಲ್‌ನ ಪರವಾನಗಿದಾರರಾದ ಎಂಪಿಇಜಿ ಎಲ್‌ಎ ವಿಪಿ೮ ಗಾಗಿ ಪೇಟೆಂಟ್ ಪೂಲ್ ಅನ್ನು ರಚಿಸಲು ಆಸಕ್ತಿ ತೋರಿಸಿದ್ದಾರೆ.[೫೩][೫೪] H.೨೬೪ ಎನ್‌ಕೋಡರ್ x೨೬೪ ನ ಪ್ರಮುಖ ಅಭಿವರ್ಧಕನಾದ ಜೇಸನ್ ಗ್ಯಾರೆಟ್-ಗ್ಲೇಸರ್ ವಿಪಿ೮ ಮತ್ತು H.೨೬೪ ಗಳ ನಡುವಿನ ಸಾಮ್ಯತೆಯ ಕುರಿತು ತನ್ನ ಕಾಳಜಿ ವ್ಯಕ್ತಪಡಿಸಿದ.[೫೫] ಅದಕ್ಕೆ ಪ್ರತಿಯಾಗಿ, ಇತರೆ ಸಂಶೋಧಕರು ಯಾವುದೇ ಎಂಪಿಇಜಿ ಎಲ್‌ಎ ಪೇಟೆಂಟ್‌ಗಳ ಹೊರತಾಗಿ ಕಾರ್ಯನಿರ್ವಹಿಸಲು ಒಂದು ನಿರ್ಧಿಷ್ಟ ಪ್ರಯತ್ನ ಮಾಡಿದ ಕುರಿತು ಸಾಕ್ಷಿಗಳನ್ನು ನೀಡುತ್ತಾರೆ.[೫೬]
ಇವನ್ನೂ ಗಮನಿಸಿ[ಬದಲಾಯಿಸಿ]
- ವೆಬ್‌ಪಿ
- ಥಿಯೋರಾ
- H.೨೬೪/MPEG-೪ AVC
- ಆನ್‌೨ ಟೆಕ್ನಾಲಜೀಸ್, ವಿಪಿ೮ ಯ ಮೂಲ
- ಕಂಟೇನರ್ ಫಾರ್ಮೆಟ್‌ಗಳ ಹೋಲಿಕೆ
- ಎಚ್‌ಟಿಎಂಎಲ್‌೫ ವೀಡಿಯೋ ಫಾರ್ಮ್ಯಾಟ್ ಡಿಬೇಟ್
ಉಲ್ಲೇಖಗಳು[ಬದಲಾಯಿಸಿ]
- ↑ Doig, Jeremy; Jazayeri, Mike (2010-05-19), Introducing WebM, an open web media project, WebM Project, http://webmproject.blogspot.com/2010/05/introducing-webm-open-web-media-project.html, retrieved 2010-05-19
- ↑ WebM FAQ (2010-05-19).
- ↑ Montgomery, Chris (2010-05-19), Xiph.Org announces support for the WebM open media project, Xiph, http://www.xiph.org/press/2010/webm/, retrieved 2010-05-20
- ↑ Shaver, Mike (2010-05-19), Open Web, Open Video and WebM, Mozilla, http://blog.mozilla.com/blog/2010/05/19/open-web-open-video-and-webm/
- ↑ Blizzard, Christopher (2010-05-19), Firefox, YouTube and WebM, Mozilla, http://hacks.mozilla.org/2010/05/firefox-youtube-and-webm/
- ↑ Lie, Håkon Wium (2010-05-19), Welcome, WebM <video>!, Opera, http://labs.opera.com/news/2010/05/19/
- ↑ Mills, Chris (2010-05-19), Opera supports the WebM video format, Opera, http://dev.opera.com/articles/view/opera-supports-webm-video/
- ↑ Bankoski, Jim (2010-05-19), WebM and VP8 land in Chromium, Google, http://blog.chromium.org/2010/05/webm-and-vp8-land-in-chromium.html
- ↑ Hachamovitch, Dean (2010-05-19), Another Follow-up on HTML5 Video in IE9, Microsoft, http://blogs.msdn.com/ie/archive/2010/05/19/another-follow-up-on-html5-video-in-ie9.aspx
- ↑ Safari HTML5 Audio and Video Guide, Apple, 2010-05-23, http://developer.apple.com/safari/library/documentation/AudioVideo/Conceptual/Using_HTML5_Audio_Video/AudioandVideoTagBasics/AudioandVideoTagBasics.html#//apple_ref/doc/uid/TP40009523-CH2-DontLinkElementID_12
- ↑ Forsythe, Christopher (2010-05-23), perian discussion: WebM Support, Perian, http://groups.google.com/group/perian-discuss/browse_thread/thread/e32789fc0b2b7612
- ↑ Dickinson, Andrew (2010-06-01), How To Get WebM Support In Epiphany Web Browser, WebUpd8, http://www.webupd8.org/2010/06/how-to-get-webm-support-in-epiphany-web.html
- ↑ Cite error: Invalid
<ref>tag; no text was provided for refs namedwebm-release - ↑ Rozen, Matt (2010-05-19), Flash Player Will Support VP8, Adobe, http://blogs.adobe.com/flashplatform/2010/05/adobe_support_for_vp8.html
- ↑ Kempf, Jean-Baptiste, Welcome to VLC's Webm page!, VideoLAN, http://people.videolan.org/~jb/webm/
- ↑ Kaba, Martin (2010-05-26), Download VLC Media Player 1.1.0 with WebM Support, Kabatology, http://www.kabatology.com/05/26/download-vlc-media-player-1-1-0-with-webm-support/
- ↑ Reville, Nicholas (2010-05-21), Miro Video Converter is the first WebM / VP8 converter!, Participatory Culture Foundation, http://www8.getmiro.com/blog/2010/05/miro-video-converter-is-the-first-webm-vp8-converter/
- ↑ Kaba, Martin (2010-05-21), Miro Video Converter 2.0 adds support for open WebM (vp8) video format, Kabatology, http://www.kabatology.com/05/21/miro-video-converter-2-0-adds-support-for-open-webm-vp8-video-format/
- ↑ Kaba, Martin (2010-05-22), Moovida Media Player now supports WebM (VP8) Video format, Kabatology, http://www.kabatology.com/05/22/moovida-media-player-now-supports-webm-vp8-video-format/
- ↑ Winamp Player Features, Nullsoft, http://www.winamp.com/help/Player_Features
- ↑ Winamp 5.58 Released, 2010-06-29, http://forums.winamp.com/showthread.php?t=320278
- ↑ Add webm/VP8 support to native matroska demuxer., 2010-06-05, http://lists.mplayerhq.hu/pipermail/mplayer-cvslog/2010-June/039348.html
- ↑ ffmpeg 0.6 release, ffmpeg.org, 2010-06-15, http://www.ffmpeg.org/releases/ffmpeg-0.6.release
- ↑ ೨೪.೦ ೨೪.೧ Diary Of An x264 Developer: Announcing the world’s fastest VP8 decoder, http://x264dev.multimedia.cx/?p=499
- ↑ PATCH VP8 decoder, FFmpeg-devel, 2010-06-15, http://lists.mplayerhq.hu/pipermail/ffmpeg-devel/2010-June/090751.html
- ↑ ೨೬.೦ ೨೬.೧ webm support in Matroska tools, Matroska.org, 2010-05-20, http://www.matroska.org/news/webm-tools.html
- ↑ Add : Internal VP8 Decoder, 2010-06-23, http://mpc-hc.svn.sourceforge.net/viewvc/mpc-hc/?view=log
- ↑ Release History and Player Update, Media Player Classic Home Cinema, 2010-09-07, http://mpc-hc.sourceforge.net/History.html
- ↑ Android 2.3 Platform Highlights, Android Developer, 2010-12-06, http://developer.android.com/sdk/android-2.3-highlights.html
- ↑ Metz, Cade (2010-05-19), Google open sources $124.6m video codec, The Register, http://www.theregister.co.uk/2010/05/19/google_chrome_announcement/
- ↑ Broadcom Accelerates WebM Video on Mobile Phones, Newswire, 2010-05-19, http://investor.broadcom.com/releasedetail.cfm?ReleaseID=471536
- ↑ Shah, Agam (2010-05-27), Intel eyes hardware acceleration for Google's WebM, ComputerWorld, http://www.computerworld.com/s/article/9177437/Intel_eyes_hardware_acceleration_for_Google_s_WebM
- ↑ Talluri, Raj (2010-05-19), Google's Impact on Web Video, Qualcomm, http://www.qualcomm.com/blog/2010/05/19/web-video-google
- ↑ Meehan, Joseph (2010-05-19), Our OMAP processors embrace WebM and VP8 with open ARMs, Texas Instruments, http://e2e.ti.com/blogs_/b/mobile_momentum/archive/2010/05/19/our-omap-processors-embrace-webm-and-vp8-with-open-arms.aspx
- ↑ Demo of WebM Running on TI OMAP 4 Processor, WebM Project, 2010-10-05, http://blog.webmproject.org/2010/10/demo-of-webm-running-on-ti-omap-4.html, retrieved 2010-10-15
- ↑ Chips&Media delivers latest dual HD video IP core with VP8 hardware decoding capability, Design & Reuse, 2010-11-18, http://www.design-reuse.com/news/24961/dual-hd-video-ip-core-vp8.html
- ↑ Tamasi, Tony (2010-05-19), Google's Royalty-Free VP8 Codec – A Move Forward, NVIDIA, http://blogs.nvidia.com/ntersect/2010/05/googles-royaltyfree-vp8-codec-a-move-forward.html
- ↑ Rockchip and WebM Release RK29xx -- World's First SOC to Support WebM HD Video Playback in Hardware, PRNewsWire, 2011-01-07, http://www.prnewswire.com/news-releases/rockchip-and-webm-release-rk29xx----worlds-first-soc-to-support-webm-hd-video-playback-in-hardware-113069829.html
- ↑ Rockchip and WebM Release RK29xx -- World's First SOC to Support WebM HD Video Playback in Hardware, PRNewsWire, 2011-01-07, http://www.prnewswire.com/news-releases/rockchip-and-webm-release-rk29xx----worlds-first-soc-to-support-webm-hd-video-playback-in-hardware-113069829.html
- ↑ YouTube HTML5 Video Player, YouTube, http://www.youtube.com/html5
- ↑ ೪೧.೦ ೪೧.೧ Google I/O 2010 - WebM Open Video Playback in HTML5, Google, 2010-05-28, http://www.youtube.com/watch?v=poHqoBKiSeY
- ↑ ೪೨.೦ ೪೨.೧ Google I/O 2010 Keynote Day 1, pt. 3, Google, 2010-05-19, http://www.youtube.com/watch?v=ZQniEobrNU0
- ↑ VP8 / WebM is here! Sorenson Users Can Encode With It Now., Sorenson Media, 2010-05-19, http://blog.sorensonmedia.com/2010/05/vp8-webm-is-here-sorenson-users-can-encode-with-it-now/
- ↑ WebM Video Codec in Skype 5.0 Group Video, Skype / Google, 2010-11-09, http://blog.webmproject.org/2010/11/webm-video-codec-in-skype-50-group.html
- ↑ Kintz, Eric (2010-05-19), Commitment to Open Standards such as VP8 is Critical to Innovation, Logitech, http://blog.logitech.com/2010/05/19/commitment-to-open-standards-such-as-vp8/
- ↑ Phipps, Simon (2010-05-24), WebM: Missing The Assurances Open Source Needs?, ComputerworldUK, http://www.computerworlduk.com/community/blogs/index.cfm?entryid=2973
- ↑ DiBona, Chris (2010-06-04), Changes to the WebM Open Source License, WebM, http://webmproject.blogspot.com/2010/06/changes-to-webm-open-source-license.html
- ↑ Lee, Matt (2010-05-19), Free Software Foundation statement on WebM and VP8, Free Software Foundation, http://www.fsf.org/news/free-software-foundation-statement-on-webm-and-vp8
- ↑ Smith, Brett. Google's updated WebM license. Free Software Foundation. ಮರುಕಳಿಸಿದ ದಿನಾಂಕ 2010-06-14.
- ↑ Various Licenses and Comments about Them - GNU Project - Free Software Foundation (FSF). Free Software Foundation. ಮರುಕಳಿಸಿದ ದಿನಾಂಕ 2010-06-13.
- ↑ Smith, Brett. No double standards: supporting Google's push for WebM. Free Software Foundation. ಮರುಕಳಿಸಿದ ದಿನಾಂಕ 2011-01-19.
- ↑ Metz, Cade (2010-05-20), Google backs open codec against patent trolls, The Register, http://www.theregister.co.uk/2010/05/20/google_confident_on_vp8_and_patents/
- ↑ Metz, Cade (2010-05-21), Google open video codec may face patent clash, The Register, http://www.theregister.co.uk/2010/05/21/mpegla_mulls_patent_license_for_webm/
- ↑ Fulton, Scott M. (2010-05-21), Patent pool may be in the works for 'free' VP8 codec, Betanews, http://www.betanews.com/article/Patent-pool-may-be-in-the-works-for-free-VP8-codec/1274466745
- ↑ Walker-Morgan, Dj (2010-05-20), WebM applauded but doubts persist, The H, http://www.h-online.com/open/news/item/WebM-applauded-but-doubts-persist-1003849.html
- ↑ Daffara, Carlo (2010-05-25), An analysis of WebM and its patent risk, carlodaffara.conecta.it, http://carlodaffara.conecta.it/?p=420