ವಿಕಿಪೀಡಿಯ:ದ್ವಂದ್ವ ನಿವಾರಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದ್ವಂದ್ವ ನಿವಾರಣೆ ಎಂದರೆ ವಿಕಿಪೀಡಿಯ ಮತ್ತು ಇತರೆ ವಿಕಿಮೀಡಿಯ ಫೌಂಡೇಷನ್ ಯೋಜನೆಗಳಲ್ಲಿ ಲೇಖನಗಳಲ್ಲಿನ ಹೆಸರಲ್ಲಿನ ದ್ವಂದ್ವವನ್ನು ಪರಿಹರಿಸಲು ಉಪಯೋಗಿಸುವ ವಿಧಾನ. ಇದನ್ನು ಆಂಗ್ಲ ಭಾಷೆಯಲ್ಲಿ Disambiguation ಎನ್ನುವರು.

ಒಂದು ಪದ ಅಥವ ಪದಪುಂಜವು ಒಂದಕ್ಕಿಂತ ಹೆಚ್ಚಿನ ವಿಷಯಗಳ ಬಗ್ಗೆ ಸಂಬಂಧಪಟ್ಟಿದ್ದಾಗ ಈ ರೀತಿಯ ದ್ವಂದ್ವಗಳು ಎದುರಾಗುತ್ತವೆ. ಬಹುತೇಕ ಬಾರಿ, ಆ ಪದ ಅಥವಾ ಪದಪುಂಜವೇ ಆ ವಿಷಯಕ್ಕೆ ಸರಿಹೊಂದುವ ಲೇಖನದ ಹೆಸರಾಗಿರುತ್ತದೆ. ಅದಾಗ್ಯೂ, ಓದುಗರಿಗೆ ಆ ಪದ ಅಥವಾ ಪದಪುಂಜಕ್ಕೆ ಸಂಬಂಧಿಸಿದ ಎಲ್ಲಾ ಲೇಖನಗಳನ್ನು ತಿಳಿಸುವುದು ಅವಶ್ಯಕವಾದದ್ದು. ಆಗ, ಓದುಗರು ಅವರಿಗೆ ಬೇಕಿರುವ ಮಾಹಿತಿಯನ್ನು ಅದಕ್ಕೆ ಸಂಬಂಧಪಟ್ಟ ಲೇಖನದ ಮೂಲಕ ಪಡೆಯುತ್ತಾರೆ.

ವಿಕಿಪೀಡಿಯ ಉಪಯೋಗಿಸುವ ತಂತ್ರಾಂಶವು ಸಂಪರ್ಕಗಳನ್ನು ಹಾಕಲು ಎಷ್ಟು ಸುಲಭವೋ ಅಷ್ಟೂ ಸುಲಭವಾಗಿ ಹಾಕಲು ಸಾಧ್ಯವಾಗಿಸುವಲ್ಲಿ ಪರಿಕರಗಳನ್ನು ಒದಗಿಸುತ್ತದೆ. ಲೇಖನಗಳನ್ನು ಸಂಪಾದಿಸುವಾಗಲೇ, ಅತ್ಯಂತ ಸುಲಭವಾಗಿ ಸಂಪರ್ಕಗಳನ್ನು ಹಾಕಲೆಂದೇ ಆವರಣ ಚಿಹ್ನೆಗಳನ್ನು(brackets) ಉಪಯೋಗಿಸುವ ಸೌಲಭ್ಯವನ್ನಿತ್ತಿದೆ.

ನೀವು ಟೈಪ್ ಮಾಡುತ್ತಿರುವಂತೆಯೇ ಆವರಣಗಳನ್ನು ಈ ರೀತಿ ಉಪಯೋಗಿಸಿದಲ್ಲಿ ನಾಗರಹಾವು (ಹೀಗೆ: [[ನಾಗರಹಾವು]]), ನಿಮಗೆ ಸಂಪರ್ಕವು ದೊರೆಯುತ್ತದೆ. ಆದರೆ, ಇಲ್ಲಿ ನೀವು ಸಂಪರ್ಕವನ್ನೀಯಬೇಕೆಂದುಕೊಂಡಿದ್ದು ಹಾವಿನ ಬಗ್ಗೆಯೇ? ಅಥವಾ ತರಾಸು ಬರೆದಿರುವ ನಾಗರಹಾವು ಕಾದಂಬರಿ ಬಗ್ಗೆಯೇ? ಅಥವಾ ವಿಷ್ಣುವರ್ಧನ್ ಅಭಿನಯದ ೧೯೭೨ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರದ ಬಗ್ಗೆಯೇ? ಅಥವಾ ಉಪೇಂದ್ರ ಅಭಿನಯದ ೨೦೦೨ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರದ ಬಗ್ಗೆಯೇ?

(ಗಮನಿಸಿ: ಈ ಮೇಲಿನ ಸಂಪರ್ಕಗಳನ್ನು ಹೇಗೆ ಹಾಕಲಾಯಿತು ಎಂಬುದರ ಬಗ್ಗೆ ವಿವರಗಳಿಗೆ, ಆಂತರಿಕ ಸಂಪರ್ಕಗಳ ಬಗ್ಗೆ ಇರುವ FAQ ನೋಡಿ.


ಎರಡು ರೀತಿಯ ದ್ವಂದ್ವ ನಿವಾರಣೆಗಳನ್ನು ಇಲ್ಲಿ ನಮೂದಿಸಲಾಗಿದೆ:

  • ದ್ವಂದ್ವ ನಿವಾರಣೆ ಸಂಪರ್ಕಗಳು — ಒಂದು ಪದಪುಂಜದ ಅತ್ಯಂತ ಸಾಮಾನ್ಯ ಬಳಕೆಯನ್ನು ಲೇಖನವೊಂದು ವಿಷಯವಾಗಿಸಿಕೊಂಡಿದ್ದಲ್ಲಿ, ಆ ಲೇಖನದ ಮೇಲ್ಭಾಗದಲ್ಲಿ ಓದುಗರಿಗೆ ಸುಲಭವಾಗಿ ಕಾಣುವಂತೆ, ಇತರೆ ಲೇಖನಗಳಿಗೆ (ಇದೇ ಹೆಸರಿನಂತಿರುವ) ಸಂಪರ್ಕವನ್ನು ಕೊಡುವುದು.
ಉದಾಹರಣೆ: ಲಕ್ಷ್ಮಿ ಲೇಖನದ ಮೇಲ್ಭಾಗದಲ್ಲಿ ಲಕ್ಷ್ಮಿ (ಚಿತ್ರನಟಿ) ಲೇಖನಕ್ಕೆ ಸಂಪರ್ಕವನ್ನು ಕೊಡಲಾಗಿದೆ.
  • ದ್ವಂದ್ವ ನಿವಾರಣೆ ಪುಟಗಳು — ಯಾವುದೇ ಮಾಹಿತಿಯನ್ನೊಳಗೊಳ್ಳದೇ, ಇತರ ವಿಕಿಪೀಡಿಯ ಪುಟಗಳಿಗೆ ದಾರಿ ಕಾಣಿಸುವ ಲೇಖನವಲ್ಲದ ಪುಟಗಳು.
ಉದಾಹರಣೆ: ನಾಗರಹಾವು (ದ್ವಂದ್ವ ನಿವಾರಣೆ), ದೂರದರ್ಶನ

ದ್ವಂದ್ವ ನಿವಾರಣೆಯ ಎಲ್ಲ ಪುಟಗಳ ಪಟ್ಟಿಗೆ ದ್ವಂದ್ವ ನಿವಾರಣೆ ವರ್ಗ ನೋಡಿ.

ಗಮನಿಸಿ: ಒಂದು ಪುಟವನ್ನು, ಅದು ದ್ವಂದ್ವ ನಿವಾರಿಸಲು ಇರುವ ಪುಟ ಎಂದು ನಮೂದಿಸಲು {{ದ್ವಂದ್ವ ನಿವಾರಣೆ}} ಟೆಂಪ್ಲೇಟನ್ನು ಆ ಪುಟದಲ್ಲಿ ಹಾಕಿ.

Deciding to disambiguate[ಬದಲಾಯಿಸಿ]

Confusion[ಬದಲಾಯಿಸಿ]

Ask yourself: When a reader enters this term and pushes "Go", what article would they realistically be expecting to view as a result? (For example, when someone looks up 'Joker', would they find information on a comedian? On a card? On Batman's nemesis?) When there is no risk of confusion, do not disambiguate nor add a link to a disambiguation page.