ವಾಣಿ (ಲೇಖಕಿ)
ಗೋಚರ
ಬಿ.ಎನ್.ಸುಬ್ಬಮ್ಮ | |
---|---|
ಜನನ | 1912 ಶ್ರೀರಂಗಪಟ್ಟಣ, ಮೈಸೂರು ಸಾಮ್ರಾಜ್ಯ, ಬ್ರಿಟಿಷ್ ಭಾರತ |
ಮರಣ | 1988 (ವಯಸ್ಸು ೭೫–೭೬) ಮೈಸೂರು, ಕರ್ನಾಟಕ, ಭಾರತ |
ಕಾವ್ಯನಾಮ | ವಾಣಿ |
ವೃತ್ತಿ | ಕಾದಂಬರಿಗಾರ್ತಿ |
ರಾಷ್ಟ್ರೀಯತೆ | ಭಾರತಿಯ |
ಸಾಹಿತ್ಯ ಚಳುವಳಿ | ನವ್ಯ |
ಪ್ರಮುಖ ಕೆಲಸ(ಗಳು) | ಶುಭಮಂಗಳ, ಎರುಡು ಕನಸು , ಹೊಸಬೆಳಕು |
ವಾಣಿ(೧೯೧೨-೧೯೮೮) ಕನ್ನಡದ ಲೇಖಕಿ.ಮೈಸೂರು ನ ಶ್ರೀರಂಗಪಟ್ಟಣದಲ್ಲಿ ಜನಿಸಿದರು. ಇವರ ತಂದೆ ಪಿ.ನರಸಿಂಗ ರಾವ್ ಶ್ರೀರಂಗಪಟ್ಟಣದಲ್ಲಿ ವಕೀಲರಾಗಿದ್ದರು.ಮೂಲ ಹೆಸರು ಬಿ.ಎನ್.ಸುಬ್ಬಮ್ಮ . ಕಾವ್ಯನಾಮ -ವಾಣಿ. ವಾಣಿಯವರ ತಂದೆ ಮೈಸೂರು ಅರಮನೆಯ ನಾಲ್ವಡಿ ಕೃಷ್ನ ರಾಜ ಒಡೆಯರ್ ಅವರಿಂದ "ರಾಜಸೇವಾಸಕ್ತ" ಎಂಬ ಬಿರುದನ್ನು ಪಡೆದಿದ್ದರು. ವಾಣಿಯವರ ಪ್ರಸಿದ್ಧ ಕಾದಂಬರಿಗಳು -ಶುಭಮಂಗಳ, ಎರಡು ಕನಸು, ಹೊಸಬೆಳಕು - ಕನ್ನಡ ಚಲನಚಿತ್ರಗಳಾಗಿವೆ.[೧][೨]
ಜೀವನ
[ಬದಲಾಯಿಸಿ]ವಾಣಿಯವರು ಎಸ್.ಎಸ್.ಎಲ್.ಸಿ ಯವರೆಗೂ ಓದಿದ್ದರು. ಚಿಕ್ಕಂದಿನಿಂದಲೂ ಬರವಣಿಗೆಯಲ್ಲಿ ಆಸಕ್ತಿಯಿತ್ತು. ಹತ್ತನೆ ವಯಸ್ಸಿನಲ್ಲಿ ವಕೀಲರಾಗಿದ್ದ ಎಮ್.ಎನ್.ನಂಜುಂಡಯ್ಯನವರೊಡನೆ ಮದುವೆಯಾಯಿತು. ಸಾಹಿತ್ಯ ಕ್ಷೇತ್ರದಲ್ಲಿ ಕೊಡುಗೆ ನೀಡಿದ ತ್ರಿವೇಣಿ, ಬಿ.ಎಮ್.ಶ್ರೀಕಂಠಯ್ಯ, ಆರ್ಯಾಂಬ ಪಟ್ಟಾಭಿ, ವಾಣಿಯವರ ಕುಟುಂಬ ಸದಸ್ಯರು ಆಗಿದ್ದರು.
ಕನ್ನಡ ಸಾಹಿತ್ಯಕ್ಕೆ ಕೊಡುಗೆ
[ಬದಲಾಯಿಸಿ]೧೯೪೪ ರಲ್ಲಿ ಕಸ್ತೂರಿಯಂಬ ಕಥಾ ಸಂಕಲನ ಬಿಡುಗಡೆಯಾಯಿತು. ಆದನಂತರ ವಾಣಿಯವರು ೩೩ ಪುಸ್ತಕಗಳನ್ನು ಕನ್ನಡ ಸಾಹಿತ್ಯ ಪ್ರಪಂಚಕ್ಕೆ ನೀಡಿದ್ದಾರೆ.
ಕಾದಂಬರಿಗಳು
[ಬದಲಾಯಿಸಿ]- ಬಿಡುಗಡೆ
- ಚಿನ್ನದ ಪಂಜರ
- ಮನೆ ಮಗಳು
- ಅವಳ ಭಾಗ್ಯ
- ಕಾವೇರಿಯ ಮಡಿಲಲ್ಲಿ
- ಅಂಜಲಿ
- ಬಾಳೆಯ ನೆರಳು
- ಅನಿರೀಕ್ಷಿತ
- ಅಲ್ಲೆ ನಿಲ್ಲೆ
- ಶಿಶಿರಾಗಣ
- ಹೂವು ಮುಳ್ಳು
- ಪ್ರೇಮ ಸೇತು
- ಹೊಸ ಬೆಳಕು
- ಎರಡು ಕನಸು
- ನೆರಳು - ಬೆಳಕು
ಕಥಾ ಸಂಕಲನಗಳು
[ಬದಲಾಯಿಸಿ]- ಕಸ್ತೂರಿ
- ಅರ್ಪಣೆ
- ಅಪರೂಪದ ಅಥಿತಿ
- ಬಾಬು ಬರ್ತಾನೆ
- ಹ್ಯಾಪಿ ಬರ್ತ್ಡೇ
ವಚನ ಸಂಗ್ರಹ
[ಬದಲಾಯಿಸಿ]- ನವನೀತ
ಪ್ರಶಸ್ತಿಗಳು
[ಬದಲಾಯಿಸಿ]- ೧೯೬೨- ಕರ್ನಾಟಕ ರಾಜ್ಯ ಪ್ರಶಸ್ತಿ
- ೧೯೭೨- ಕರ್ನಾಟಕ ಸಾಹಿತ್ಯ ಅಖಾಡೆಮಿ ಪ್ರಶಸ್ತಿ
ಉಲ್ಲೇಖಗಳು
[ಬದಲಾಯಿಸಿ]- ↑ Mohan Lal (2006). The Encyclopaedia Of Indian Literature (Volume Five (Sasay To Zorgot). Sahitya Akademi. p. 4489. ISBN 81-260-1221-8.
- ↑ Subramanyam, Lakshmi; T. V. Subramanyam (2000). Third eye: Women Writings from Karnataka. Srishti Publishers & Distributors. p. 153. ISBN 81-87075-60-0.