ವಿಷಯಕ್ಕೆ ಹೋಗು

ವಸುಧೇಂದ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಸುಧೇಂದ್ರ
ಜನನ೧೯೬೯
ಸಂಡೂರು, ಬಳ್ಳಾರಿ ಜಿಲ್ಲೆ, ಕರ್ನಾಟಕ
ವೃತ್ತಿಕತೆಗಾರ ಹಾಗೂ ಪುಸ್ತಕ ಪ್ರಕಾಶಕ
ಭಾಷೆಕನ್ನಡ
ವಿದ್ಯಾಭ್ಯಾಸಇಂಜಿನಿಯರಿಂಗ್ ಪದವಿ, ಎಂ.ಇ. ಪದವಿ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆNITK ಸುರತ್ಕಲ್, IISc ಬೆಂಗಳೂರು
ಪ್ರಕಾರ/ಶೈಲಿಕಥಾಸಂಕಲನ, ಪ್ರಬಂಧ, ಕಾದಂಬರಿ
ಪ್ರಮುಖ ಕೆಲಸ(ಗಳು)ತೇಜೋ-ತುಂಗಭದ್ರಾ, ಮೋಹನಸ್ವಾಮಿ, ನಮ್ಮಮ್ಮ ಅಂದ್ರೆ ನಂಗಿಷ್ಟ
ಪ್ರಮುಖ ಪ್ರಶಸ್ತಿ(ಗಳು)ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಸಾಹಿತ್ಯಶ್ರೀ, ದ .ರಾ. ಬೇಂದ್ರೆ ಕಥಾ ಪ್ರಶಸ್ತಿ ಇತರೆ

ವಸುಧೇಂದ್ರ ಕನ್ನಡ ಬರಹಗಾರರು ಹಾಗೂ ಪುಸ್ತಕ ಪ್ರಕಾಶಕರು.[] [] ಮುಖ್ಯವಾಗಿ ಕತೆ, ಕಾದಂಬರಿ, ಲಲಿತ ಪ್ರಬಂಧಗಳು ಇವರ ಬರವಣಿಗೆಯ ಪ್ರಕಾರಗಳು. ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ೧೯೬೯ರಲ್ಲಿ ಜನಿಸಿದ ವಸುಧೇಂದ್ರ ಅಲ್ಲಿಯೇ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಾಡಿದ್ದಾರೆ.ಸುರತ್ಕಲ್ ನಿಂದ ಇಂಜಿನಿಯರಿಂಗ್ ಪದವಿ ಮತ್ತು ಇಂಡಿಯನ್ ಇನ್ಸಸ್ಟಿಟ್ಯೂಟ್ ಆಫ್ ಸೈನ್ಸ್ ನಿಂದ ಎಂ.ಇ. ಪದವಿ ಪಡೆದಿದ್ದಾರೆ. ೨೦ ವರ್ಷಗಳ ಕಾಲ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಬೆಂಗಳೂರುಲ್ಲಿ ವಾಸವಾಗಿದ್ದು ಸದ್ಯಕ್ಕೆ ಖಾಸಗಿಯಾಗಿ ಹಲವಾರು ಕೆಲಸ ಮತ್ತು ಬರಹಗಳಲ್ಲಿ ತೊಡಗಿಕೊಂಡಿದ್ದಾರೆ.

ಕೃತಿಗಳು

[ಬದಲಾಯಿಸಿ]

ಕಥಾಸಂಕಲನಗಳು

[ಬದಲಾಯಿಸಿ]

ಲಲಿತ ಪ್ರಬಂಧಗಳು

[ಬದಲಾಯಿಸಿ]

ಕಾದಂಬರಿ

[ಬದಲಾಯಿಸಿ]

ಅನುವಾದ

[ಬದಲಾಯಿಸಿ]
  • ಮಿಥುನ (ಶ್ರೀರಮಣರ ತೆಲುಗು ಕತೆಗಳ ಅನುವಾದ) (2004)
  • ಎವರೆಸ್ಟ್‌ (ಜಾನ್‌ ಕ್ರಾಕೌರ್‌ರ ’Into Thin Air' ನ ಕನ್ನಡ ಅನುವಾದ) (2015)

ವಿಜ್ಞಾನ

[ಬದಲಾಯಿಸಿ]
  • ಇ-ಕಾಮರ್ಸ್

ಬ್ರೈಲ್‌ ಲಿಪಿಯಲ್ಲಿನ ಪುಸ್ತಕ

[ಬದಲಾಯಿಸಿ]
  • ಅದೃಶ್ಯ ಕಾವ್ಯ (ಆಯ್ದ ಸುಲಲಿತ ಪ್ರಬಂಧಗಳ ಸಂಕಲನ) (2006)

ಚಲನಚಿತ್ರ ಸಾಹಿತ್ಯ

[ಬದಲಾಯಿಸಿ]
  • ನಮ್ಮಮ್ಮ ಅಂದ್ರೆ ನಂಗಿಷ್ಟ (ಕತೆ, ಚಿತ್ರಕತೆ, ಸಂಭಾಷಣೆ - ತಯಾರಿಯಲ್ಲಿದೆ)

ಪ್ರಶಸ್ತಿಗಳು

[ಬದಲಾಯಿಸಿ]

ಪ್ರಕಾಶನ

[ಬದಲಾಯಿಸಿ]

ಛಂದ ಪುಸ್ತಕ[] ಎಂಬ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ, ನಾಡಿನ ಹಲವಾರು ಹೊಸ ಬರಹಗಾರರನ್ನು []ಗುರುತಿಸಿದ್ದಾರೆ.

ವೈಯುಕ್ತಿಕ ಆಸಕ್ತಿಗಳು

[ಬದಲಾಯಿಸಿ]

ಚಾರಣದಲ್ಲಿ ಆಸಕ್ತಿಯಿರುವ ಇವರು ನಮ್ಮ ಪಶ್ಚಿಮ ಘಟ್ಟದ ಕಾಡಿನಲ್ಲಿರುವ ಹಲವು ಬೆಟ್ಟಗಳನ್ನೂ ಮತ್ತು ತಾಂಜಾನಿಯಾ ದೇಶದಲ್ಲಿರುವ ಕಿಲಿಮಂಜಾರೋ ಪರ್ವತವನ್ನು ಹತ್ತಿದ್ದಾರೆ. ಪ್ರತಿ ನಿತ್ಯ ಸ್ಕ್ವಾಷ್ ಆಡುತ್ತಾರೆ. ಪ್ರಪಂಚದ ಒಳ್ಳೆಯ ಚಿತ್ರಗಳನ್ನು ಅತ್ಯಂತ ಪ್ರೀತಿಯಿಂದ ನೋಡುತ್ತಾರೆ. ಕರ್ನಾಟಕ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕೇಳುತ್ತಾರೆ.

ಲೈಂಗಿಕ ಅಲ್ಪಸಂಖ್ಯಾತರ ಚಳುವಳಿ

[ಬದಲಾಯಿಸಿ]

ವಸುಧೇಂದ್ರರು ಲೈಂಗಿಕ ಅಲ್ಪಸಂಖ್ಯಾತರ(ಎಲ್.ಜಿ.ಬಿ.ಟಿ.) ಸ್ಥಳೀಯ ಸಂಸ್ಥೆಯಾದ Good As You ದೊಂದಿಗೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅವರು ಕರ್ನಾಟಕದಲ್ಲಿ ಸಲಿಂಗಕಾಮಿ ಹಕ್ಕುಗಳಿಗಾಗಿ ಸಾಕಷ್ಟು ಕಾರ್ಯಗಳನ್ನು ಮಾಡುತ್ತಿದ್ದಾರೆ. ಕನ್ನಡ ದಿನಪತ್ರಿಕೆ ವಿಶ್ವವಾಣಿಯ ಇತ್ತೀಚಿನ ಸಂದರ್ಶನದಲ್ಲಿ, ಹೆಚ್ಚಿನ ಜನರು ಸಂತಾನೋತ್ಪತ್ತಿಗಷ್ಟೇ ಅಲ್ಲದೇ ವಿನೋದಕ್ಕಾಗಿ ಸಹ ಲೈಂಗಿಕಕ್ರಿಯೆಯನ್ನು ಬಳಸಿಕೊಳ್ಳುತ್ತಾರೆ. ಅಲ್ಲದೇ, ಸಲಿಂಗಕಾಮಿಗಳ ವಿರುದ್ಧ ದಬ್ಬಾಳಿಕೆಯನ್ನು, ದಲಿತರ ವಿರುದ್ಧದ ದಬ್ಬಾಳಿಕೆಗೆ ಹೋಲಿಸಬಹುದು ಎಂದು ಅಭಿಪ್ರಾಯ ಪಡುತ್ತಾರೆ.

"'ಗೇ'ಗಳ ಬದುಕಿನ ಕಡಲಲಿ ಅಳು–ನಗುವಿನ ಹಾಯಿದೋಣಿ"[], ಪ್ರಜಾವಾಣಿಯ ಲೇಖನದಲ್ಲಿ ತಮಾಷೆಯ ಪ್ರಸಂಗಗಳನ್ನು ಹಂಚಿಕೊಳ್ಳುತ್ತ, ಲೈಂಗಿಕ ಅಲ್ಪಸಂಖ್ಯಾತರ ಬೇಸರದ ಕ್ಷಣಗಳಿಗೂ ಕನ್ನಡಿ ಹಿಡಿದಿದ್ದಾರೆ.

"ಮೋಹನಸ್ವಾಮಿ", ತಮ್ಮದೇ ಕಥೆ ಎಂದು ಗೊತ್ತಾದರೆ ಜನ ಹೇಗೆ ಸ್ವೀಕರಿಸಿಯಾರು ಎಂಬ ಭಯವಿದ್ದರಿಂದ, ಮೊದಲು ಬೇರೆ ಹೆಸರಿನಲ್ಲಿ ಪ್ರಕಟಿಸಲು ತೀರ್ಮಾನಿಸಿದ್ದರು. ಕೊನೆಯಲ್ಲಿ ತಮ್ಮದೇ ಹೆಸರಿನಲ್ಲಿ ಪ್ರಕಟಿಸುವ ಮೂಲಕ ತಾವು ಒಬ್ಬ ಸಲಿಂಗಿ ಎನ್ನುವ ಸತ್ಯವನ್ನು ಪ್ರಪಂಚದೊಂದಿಗೆ ಹಂಚಿಕೊಂಡರು. []. ಪ್ರಜಾವಾಣಿಯ ಸಂದರ್ಶನದಲ್ಲಿ "ಹದಿನೆಂಟು ವರ್ಷಕ್ಕೆ ಆಗಬೇಕಿದ್ದ ವಿಮೋಚನೆ ನಲವತ್ತೈದನೇ ವಯಸ್ಸಿಗೆ ಆಯ್ತು. ನನ್ನಂತೆ ಇನ್ನೊಂದು ಮಗು ಕಷ್ಟ ಪಡಬಾರದು. ಕೆಲವು ಮಕ್ಕಳು ತಮ್ಮ ಸಂಕಟಗಳನ್ನು ಯಾರೊಂದಿಗೂ ಹೇಳಿಕೊಳ್ಳಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಹಾಗಾಗಬಾರದು" ಎಂದು ತಮ್ಮ ಮನದಾಳದ ಮಾತನ್ನು ಹೇಳಿಕೊಂಡಿದ್ದರು.[೧೦]

ಉಲ್ಲೇಖಗಳು

[ಬದಲಾಯಿಸಿ]
  1. http://books.google.co.in/books/about/Yug%C4%81di.html?id=ByIPHQAACAAJ&redir_esc=y
  2. "ಆರ್ಕೈವ್ ನಕಲು". Archived from the original on 2013-01-25. Retrieved 2015-03-18.
  3. "ಆರ್ಕೈವ್ ನಕಲು". Archived from the original on 2012-10-30. Retrieved 2015-03-18.
  4. ವಸುಧೇಂದ್ರಗೆ ಚಡಗ ಕಾದಂಬರಿ ಪ್ರಶಸ್ತಿ
  5. ಗದಗದ ರಾಜಪುರೋಹಿತ ಪ್ರತಿಷ್ಟಾನದ ಪ್ರಶಸ್ತಿಗೆ ವಸುಧೇಂದ್ರ, ತೆಲಗಾವಿ ಆಯ್ಕೆ, ಪ್ರಜಾವಾಣಿ, ೦೯ ಅಕ್ತೋಬರ್ ೨೦೨೧
  6. http://kannada.oneindia.in/literature/people/2009/0410-vasudhendra-chanda-pustaka-publication.html
  7. http://www.deccanherald.com/content/147199/content/216934/ipl-2012.html
  8. 'ಗೇ'ಗಳ ಬದುಕಿನ ಕಡಲಲಿ ಅಳು–ನಗುವಿನ ಹಾಯಿದೋಣಿ
  9. "ನಾವು ವಿಲನ್‌ಗಳಲ್ಲ, ನಮ್ಮ ಬಗ್ಗೆ ಭಯ ಬೇಡ!". Archived from the original on 2016-12-21. Retrieved 2018-09-06.
  10. ಮೋಹನಸ್ವಾಮಿ ಎನ್ನುವ ಮಿಥ್ಯೆಯೂ ನಿಜವೂ...