ವರ್ಗ:ಬಾಗಲಕೋಟೆ ಜಿಲ್ಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

"ಬೆಣ್ಣೂರು"

ಐತಿಹಾಸಿಕ ಗ್ರಾಮ.

ಬಾಗಲಕೋಟೆ ಜಿಲ್ಲೆಯ,ಬಾಗಲಕೋಟ ತಾಲೂಕಿನ,ಬೆಣ್ಣೂರು ಗ್ರಾಮ ಅತ್ಯಂತ ಪ್ರಾಚೀನವಾದ ಇತಿಹಾಸವನ್ನು ಹೊಂದಿದೆ. ಬಾಗಲಕೋಟೆಯಿಂದ ಸುಮಾರು 20 km ದೂರದಲ್ಲಿರುವ, ಈ ಗ್ರಾಮವು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ.

"ಬೆಣ್ಣೂರು" ಎಂಬ ಹೆಸರು ಬರಲು ಕಾರಣ, ಇಲ್ಲಿ ಅತಿ ಹೆಚ್ಚಾಗಿ ಬೋರೆಹಣ್ಣು(ಬಾರಿ ಹಣ್ಣು) ಬೆಳೆಯುತ್ತಿದ್ದವು. ಅದರಂತೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಹೈನುಗಾರಿಕೆಯನ್ನ ಹೊಂದಿತ್ತು. "ಬಣದೂರು" ಎಂದು ಮೊದಲು ಕರೆಯುತ್ತಿದ್ದರು. ತದನಂತರದಲ್ಲಿ ಬೆಣ್ಣೂರು ಎಂದು ಕರೆಯತೊಡಗಿದರು.

ಘಟಪ್ರಭಾ ನದಿಯ ದಂಡೆಯ ಮೇಲೆ ಬೆಣ್ಣೂರು ಗ್ರಾಮವಿದೆ. ಆಲಮಟ್ಟಿ ಜಲಾಶಯದ ಹಿಂದಿನ ಭಾಗವಾಗಿದೆ. ಹಿಂದೆ 1996ರಲ್ಲಿ ಕೃಷ್ಣಾ ನದಿಯ ಹೆಚ್ಚಿನ ನೀರಿನಿಂದಾಗಿ ಜಲಾವೃತವಾಯಿತು. ನಂತರ ನದಿಯಿಂದ ಸುಮಾರು 4km ದೂರದಲ್ಲಿ, "ಕೃಷ್ಣ ಮೇಲ್ದಂಡೆ ಯೋಜನೆ"ಯ ಪುನರ್ ವಸತಿ ಗ್ರಾಮವಾಗಿ ಬೆಣ್ಣೂರು ಬೆಳೆದು ನಿಂತಿದೆ.

ಇಲ್ಲಿನ ಮುಖ್ಯ ಪ್ರಮುಖ ಬೆಳೆಗಳೆಂದರೆ, ಶೇಂಗಾ, ತೊಗರಿ, ಸಜ್ಜೆ, ಕಬ್ಬು ಹಾಗೂ ಇನ್ನಿತರ ತರಕಾರಿಗಳನ್ನು ಬೆಳೆಯುತ್ತಾರೆ. ಶ್ರೀ ಲಕ್ಕಮ್ಮ ದೇವಿ ಬೆಣ್ಣೂರು ಗ್ರಾಮದ ಗ್ರಾಮ ದೇವತೆ. ಪ್ರತಿ ಮಹಾನವಮಿಯ ದಿನದಂದು ಮಹಾ ರಥೋತ್ಸವವು ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಸುತ್ತಮುತ್ತಲಿನ ಗ್ರಾಮಗಳಿಂದಲೂ ಹಲವಾರು ಭಕ್ತಾದಿಗಳು ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.