ರೇಡಿಯೊಲೇರಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರೇಡಿಯೊಲೇರಿಯ
Temporal range: Cambrian – Recent
ಚ್ಯಾಲೆಂಜರ್ ಪ್ರಯಾಣದಿಂದ (1873–76) ರೇಡಿಯೊಲೇರಿಯದ ಸಚಿತ್ರ ವಿವರಣೆ
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಏಕಮೂಲ ವರ್ಗ: ಡಯಾಫೊರೆಟಿಕೀಸ್
ಏಕಮೂಲ ವರ್ಗ: ಎಸ್ಎಆರ್
ವಿಭಾಗ: ರೆಟಾರಿಯಾ
ಉಪವಿಭಾಗ: ರೇಡಿಯೊಲೇರಿಯ
Cavalier-Smith, 1987
Classes

ರೇಡಿಯೊಲೇರಿಯ ಸಾಗರಿಕ ಮಿಥ್ಯಪಾದಿ ಆದಿಜೀವಿಗಳ (ಮರೀನ್ ರೈಸೊಪಾಡ್ ಪ್ರೋಟೊಜೋವ) ಒಂದು ಗುಂಪು. ಪರ್ಯಾಯ ಪದ: ರೇಡಿಯೊಲೇರಿಡ. ಅನೇಕ ಪ್ರಭೇದಗಳಿವೆ.

ದೇಹರಚನೆ[ಬದಲಾಯಿಸಿ]

ಒಳ ಮತ್ತು ಹೊರ ಕೋಶದ್ರವ್ಯವನ್ನು (ಸೈಟೊಪ್ಲಾಸಮ್) ಪ್ರತ್ಯೇಕಿಸುವ ಕೇಂದ್ರೀಯ ಸಂಪುಟ (ಕ್ಯಾಪ್ಸೂಲ್) ಇರುವುದು ಈ ಏಕಕೋಶಗಳ ವೈಶಿಷ್ಟ್ಯ. ಈ ಜೀವಿಗಳ ಪೈಕಿ ಆಕ್ಟಿನೊಪೈಲಿನಕ್ಕೆ ನೈಜ ಹೊರಬೆಳೆತ ಪಾದಗಳೂ (ಆಕ್ಸೊ ಪೋಡಿಯ) ಅರೀಯ (ರೇಡಿಯಲ್) ಅಂತರ್ವೇಶಿತ ಕಂಕಾಲ ಸರಳುಗಳುಳ್ಳ (ರೇಡಿಯಲ್ಲಿ ಪೆನಿಟ್ರೇಟಿಂಗ್ ರಾಡ್ಸ್) ತೆಳು ಕೇಂದ್ರೀಯ ಸಂಪುಟವೂ ಇವೆ. ಕಂಕಾಲ ಸರಳುಗಳ ಪ್ರಧಾನ ಘಟಕ ಸ್ಟ್ರಾನ್ಶಿಯಮ್ ಸಲ್ಫೇಟ್. ಮಿಕ್ಕವಕ್ಕೆ  ದಪ್ಪನೆಯ ಸರಂಧ್ರ ಸಂಪುಟವಿದೆ.

ಸಾಮಾನ್ಯವಾಗಿ ಕೇಂದ್ರೀಯ ಸಂಪುಟದ ಹೊರಗೆ ಇರುವ ಸಿಲಿಕ ಸಹಿತ ಬಹಿರ್ಕಂಕಾಲ ರೇಡಿಯೊಲೇರಿಯಗಳ ಇನ್ನೊಂದು ವೈಶಿಷ್ಟ್ಯ.[೧] ಗೋಳೀಯ ಸಮ್ಮಿತಿಯುಳ್ಳ ಕಂಕಾಲದಲ್ಲಿ ಆಹಾರ ಹಿಡಿಯಲೋಸುಗ ಮಿಥ್ಯಪಾದಗಳನ್ನು ಹೊರಚಾಚಲು ಅನುಕೂಲವಾದ ರಂಧ್ರಗಳು ಇವೆ. ಅನೇಕ ಜೀವಿಗಳಲ್ಲಿ ಬಹಿರ್ಮುಖೀ ಮುಳ್ಳುಗಳೂ (ಸ್ಪೈನ್ಸ್) ಇವೆ. ಎಂದೇ, ಇವು ಕಿರಣಪಾದಿ (ಆಕ್ಟಿನೊಪಾಡ್) ಉಪವರ್ಗದವು. ಕೆಲವಕ್ಕೆ ಜೆಲಟಿನ್ ಕವಚವೂ ಉಂಟು. ಈ ಮೇಲ್ನೀರು ಜೀವಿಗಳು ತೇಲಲು ಅನುಕೂಲಿಸುವ ಕುಹರಯುಕ್ತ ಕೋಶದ್ರವ್ಯ ಇದೆ.

ವ್ಯಾಪ್ತಿ[ಬದಲಾಯಿಸಿ]

ರೇಡಿಯೊಲೇರಿಯಗಳು ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರಗಳಲ್ಲಿ ಸಮೃದ್ಧವಾಗಿವೆ. ಜೀವಿಗಳು ಸತ್ತ ಬಳಿಕ ಸಾಗರತಳದಲ್ಲಿ ಉಂಟಾಗುವ ಕಂಕಾಲಸಂಚಯವೇ ರೇಡಿಯೊಲೇರಿಯನ್ ಊಜ಼್. ಜಲಜಶಿಲೆಗಳು ಈ ಸಂಚಯಗಳ ಮೇಲೆ ರೂಪುಗೊಳ್ಳುತ್ತವೆ.[೨] ಎಂದೇ ಇವಕ್ಕೆ ಭೂವೈಜ್ಞಾನಿಕ ಮಹತ್ತ್ವ ಇದೆ.

ಉಲ್ಲೇಖಗಳು[ಬದಲಾಯಿಸಿ]

  1. Smalley, I.J. (1963). "Radiolarians:construction of spherical skeleton". Science. 140 (3565): 396–397. Bibcode:1963Sci...140..396S. doi:10.1126/science.140.3565.396. PMID 17815802. S2CID 28616246.
  2. Wassilieff, Maggy (2006) "Plankton - Animal plankton", Te Ara - the Encyclopedia of New Zealand. Accessed: 2 November 2019.

ಹೊರಗಿನ ಕೊಂಡಿಗಳು[ಬದಲಾಯಿಸಿ]

  1. Boltovskoy, Demetrio; Anderson, O. Roger; Correa, Nancy M. (2016). Archibald, John M.; Simpson, Alastair G. B.; Slamovits, Claudio H.; Margulis, Lynn; Melkonian, Michael; Chapman, David J.; Corliss, John O. (eds.). Handbook of the Protists (in ಇಂಗ್ಲಿಷ್). Springer International Publishing. pp. 1–33. doi:10.1007/978-3-319-32669-6_19-1. ISBN 978-3-319-32669-6.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: