ರವೀಂದರ್ ನಾಥ ಭಾರದ್ವಾಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಏರ್ ಮಾರ್ಷಲ್

ರವೀಂದರ್ ನಾಥ್ ಭಾರದ್ವಾಜ್

ಪರಮ ವಿಷ್ಟ ಸೇವಾ ಪದಕ, ಮಹಾ ವೀರ ಚಕ್ರ, ವಾಯುಪಡೆಯ ಪದಕ
ಜನನಲಾಹೋರ್, ಬ್ರಿಟಿಷ್ ಇಂಡಿಯಾದ ಪ್ರೆಸಿಡೆನ್ಸಿಗಳು ಮತ್ತು ಪ್ರಾಂತ್ಯಗಳು
ಮರಣ೧೩ ಫೆಬ್ರವರಿ ೨೦೨೪ (೮೯ ವರ್ಷ)
ವ್ಯಾಪ್ತಿಪ್ರದೇಶ ಭಾರತ
ಶಾಖೆ Indian Air Force
ಸೇವಾವಧಿ೦೮ ಅಕ್ಟೋಬರ್ ೧೯೫೫ - ೩೧ ಜುಲೈ ೧೯೯೩
ಘಟಕಸಂ. ೨೦ ಸ್ಕ್ವಾಡ್ರನ್ ಐ‌ಎ‌ಎಫ್ "ಲೈಟ್ನಿಂಗ್ಸ್"
ಅಧೀನ ಕಮಾಂಡ್ಸಂ. ೨೦ ಸ್ಕ್ವಾಡ್ರನ್ ಐ‌ಎ‌ಎಫ್ "ಲೈಟ್ನಿಂಗ್ಸ್"
೧೫ ವಿಂಗ್ ಐ‌ಎ‌ಎಫ್
ದಕ್ಷಿಣ ಏರ್ ಕಮಾಂಡ್
ಭಾಗವಹಿಸಿದ ಯುದ್ಧ(ಗಳು)
  • ೧೯೬೫ ರ ಭಾರತ-ಪಾಕಿಸ್ತಾನ ಯುದ್ಧ
  • ೧೯೭೧ ರ ಭಾರತ-ಪಾಕಿಸ್ತಾನ ಯುದ್ಧ
ಪ್ರಶಸ್ತಿ(ಗಳು) ಪರಮ ವಿಶಿಷ್ಟ ಸೇವಾ ಪದಕ

ಮಹಾ ವೀರ ಚಕ್ರ[೧]

Vayu Sena Medal

ಏರ್ ಮಾರ್ಷಲ್ ರವೀಂದರ್ ನಾಥ ಭಾರದ್ವಾಜ್ ಅವರು ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿ. ಇವರು ಪರಮ ವಿಶಿಷ್ಟ ಸೇವಾ ಪದಕ, ಮಹಾವೀರ ಚಕ್ರ (ಭಾರತದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿ) ಮತ್ತು ವಾಯು ಸೇನಾ ಪದಕ ಪಡೆದಿದ್ದಾರೆ.

ಆರಂಭಿಕ ವೃತ್ತಿ ಜೀವನ[ಬದಲಾಯಿಸಿ]

ಏರ್ ಮಾರ್ಷಲ್ ರವೀಂದರ್ ನಾಥ್ ಭಾರದ್ವಾಜ್ ಅವರು ೧೯೩೫ರ ಜುಲೈನಲ್ಲಿ ಅವಿಭಜಿತ ಬ್ರಿಟಿಷ್ ಭಾರತದ ಲಾಹೋರ್ನಲ್ಲಿ ಜನಿಸಿದರು. ಅವರ ತಂದೆ ಶ್ರೀ ಪಿ. ಎನ್. ಭಾರದ್ವಾಜ್.

ಸೇನಾ ವೃತ್ತಿಜೀವನ[ಬದಲಾಯಿಸಿ]

ಭಾರದ್ವಾಜ್ ಅವರನ್ನು ೧೯೫೫ ರ ಅಕ್ಟೋಬರ್ ೮ ರಂದು ಭಾರತೀಯ ವಾಯುಪಡೆಗೆ (ಐಎಎಫ್) ನಿಯೋಜಿಸಲಾಯಿತು.[೨] ಅವರು ೧೯೬೫ ಮತ್ತು ೧೯೭೧ರ ಭಾರತ-ಪಾಕಿಸ್ತಾನ ಯುದ್ಧಗಳೆರಡರಲ್ಲೂ ಕಾರ್ಯಪ್ರವೃತ್ತರಾಗಿದ್ದರು.

೧೯೭೧ರ ಜನವರಿಯಲ್ಲಿ, ಅವರು ಕಾರ್ಯಾಚರಣೆಯ ತರಬೇತಿ ಪಡೆಯೊಂದರಲ್ಲಿ ಸೇವೆ ಸಲ್ಲಿಸಿದರು. ಅಲ್ಲಿ ಅವರು ಸುಧಾರಿತ ಹಾರಾಟ ಕೌಶಲ್ಯ ಮತ್ತು ತರಬೇತಿ ಪಡೆಯುವವರಲ್ಲಿ ಅಗತ್ಯ ಜ್ಞಾನವನ್ನೊದಗಿಸಲು ಸೂಕ್ತ ಕ್ರಮಗಳನ್ನು ಜಾರಿಗೆ ತಂದರು. ಈ ಸೇವೆಗಾಗಿ ಅವರು ವಾಯು ಸೇನಾ ಪದಕಕ್ಕೆ ಭಾಜನರಾದರು.

೧೯೭೧ರ ಯುದ್ಧದ ಸಮಯದಲ್ಲಿ, ಅವರು ಹಾಕರ್ ಹಂಟರ್ ವಿಮಾನಗಳನ್ನು ಹೊಂದಿದ ಫೈಟರ್ ಬಾಂಬರ್ ಸ್ಕ್ವಾಡ್ರನ್ ಐಎಎಫ್ ನ ೨೦ನೇ ಸ್ಕ್ವಾಡ್ರನ್ನಲ್ಲಿ ಸ್ಕ್ವಾಡ್ರನ್ನ ನಾಯಕ ಹುದ್ದೆಯನ್ನು ಅಲಂಕರಿಸಿದ್ದರು. ಸ್ಕ್ವಾಡ್ರನ್ನ ಹಿರಿಯ ಅಧಿಕಾರಿಯಾಗಿ, ಅವರು ಪಾಕಿಸ್ತಾನದ ಭೂಪ್ರದೇಶದೊಳಗೆ ಅನೇಕ ತೀಕ್ಷ್ಣ ಕಾರ್ಯಾಚರಣೆಗಳನ್ನು ಕೈಗೊಂಡು ಸೇನಾಪಡೆಯನ್ನು ಮುನ್ನಡೆಸಿದರು. ವಾಯುನೆಲೆಗಳು, ತೈಲ ಸಂಸ್ಕರಣಾಗಾರಗಳು ಮತ್ತು ಭೂ ಕಾರ್ಯಾಚರಣೆಗಳಿಗೆ ಬೆಂಬಲ ಸೇರಿದಂತೆ ಹೆಚ್ಚು ರಕ್ಷಿಸಲ್ಪಟ್ಟ ಪ್ರದೇಶಗಳ ಮೇಲೆ ದಾಳಿ ಮಾಡಿದರು.

ಯುದ್ಧ ಕಾರ್ಯಾಚರಣೆಗಳಲ್ಲಿ ಪ್ರದರ್ಶಿಸಿದ ಶೌರ್ಯ ಮತ್ತು ನಾಯಕತ್ವಕ್ಕಾಗಿ, ಸ್ಕ್ವಾಡ್ರನ್ ಲೀಡರ್ ರವೀಂದರ್ ನಾಥ ಭಾರದ್ವಾಜ ಅವರಿಗೆ ಭಾರತದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಮಹಾವೀರ ಚಕ್ರ ನೀಡಿ ಗೌರವಿಸಲಾಯಿತು.[೩]

ಯುದ್ದದ ನಂತರ ಅವರು ಉನ್ನತ ಜವಾಬ್ದಾರಿಗಳನ್ನು ನಿರ್ವಹಿಸಿದರು. ಅವೆಂದರೆ:

  • ನಿರ್ದೇಶಕರು, ಯೋಜನೆಗಳು, ವಾಯು ಕೇಂದ್ರ ಕಛೇರಿ.
  • ೧೫ ನೇ ವಿಂಗ್ ನ ಏರ್ ಆಫೀಸರ್ ಕಮಾಂಡಿಂಗ್
  • ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಉಪ ಕಮಾಂಡೆಂಟ್ ಮತ್ತು ಮುಖ್ಯ ಬೋಧಕರು, ಖಡಕ್ವಾಸ್ಲಾ
  • ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್, ದಕ್ಷಿಣ ಏರ್ ಕಮಾಂಡ್, ತಿರುವನಂತಪುರಂ

೧೯೯೩ ರ ಜುಲೈ ೩೧ರಂದು ನಿವೃತ್ತರಾಗುವ ಮೊದಲು ಅವರು ಏರ್ ಮಾರ್ಷಲ್ ಹುದ್ದೆಗೆ ಏರಿದರು.

ಉಲ್ಲೇಖಗಳು[ಬದಲಾಯಿಸಿ]

  1. "SQUADRON LEADER RAVINDER NATH BHARDWAJ". Ministry of Defence, Govt of India official website.
  2. "Air Marshal Ravinder Nath Bharadwaj". Bharat Rakshak. Retrieved 11 June 2020.
  3. Chakravorty, B. (1995). Stories of Heroism: PVC & MVC Winners (in ಇಂಗ್ಲಿಷ್). 112: Allied Publishers. p. 387. ISBN 9788170235163.{{cite book}}: CS1 maint: date and year (link) CS1 maint: location (link)