ಮಾರ್ಗರೆಟ್ ಸ್ಯಾಕ್ವಿಲ್ಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾರ್ಗರೆಟ್ ಸ್ಯಾಕ್ವಿಲ್ಲೆ

ಮಾರ್ಗರೆಟ್ ಸ್ಯಾಕ್ವಿಲ್ಲೆ(೨೪ ಡಿಸೆಂಬರ್ ೧೮೮೧ - ೧೮ ಏಪ್ರಿಲ್ ೧೯೬೩)ಅವರು ಇಂಗ್ಲಿಷ್ ಕವಿ ಮತ್ತು ಮಕ್ಕಳ ಲೇಖಕಿ.

ಮಾರ್ಗರೆಟ್ ಸ್ಯಾಕ್ವಿಲ್ಲೆ ಅವರು ಮೇಫೇರ್‌ನಲ್ಲಿರುವ ೬೦ ಗ್ರೋಸ್ವೆನರ್ ಸ್ಟ್ರೀಟ್‌ನಲ್ಲಿ ಜನಿಸಿದರು. ಅವರು ಸ್ಯಾಕ್‌ವಿಲ್ಲೆ ರೆಜಿನಾಲ್ಡ್ ವಿಂಡ್ಸರ್ ಸ್ಯಾಕ್‌ವಿಲ್ಲೆ, ೭ನೇ ಅರ್ಲ್ ಡಿ ಲಾ ವಾರ್ ಅವರ ಕಿರಿಯ ಮಗಳು. ಅವರು ವೀಟಾ ಸ್ಯಾಕ್‌ವಿಲ್ಲೆ-ವೆಸ್ಟ್‌ನವರ ಸೋದರಸಂಬಂಧಿ.[೧]

ಕಾವ್ಯಗಳು[ಬದಲಾಯಿಸಿ]

ಮಾರ್ಗರೆಟ್ ಸ್ಯಾಕ್ವಿಲ್ಲೆ ಅವರು ಚಿಕ್ಕ ವಯಸ್ಸಿನಲ್ಲೇ ಕವನವನ್ನು ಬರೆಯಲು ಪ್ರಾರಂಭಿಸಿದರು. ಅವರು ತಮ್ಮ ಆರಂಭಿಕ ಕವನಗಳಾದ ದಿ ಇಂಗ್ಲಿಷ್ ರಿವ್ಯೂ, ಇಂಗ್ಲಿಷ್ ವುಮನ್ಸ್ ರಿವ್ಯೂ, ಕಂಟ್ರಿ ಲೈಫ್, ದಿ ನೇಷನ್, ದಿ ಸ್ಪೆಕ್ಟೇಟರ್ ಮತ್ತು ಪಾಲ್ ಮಾಲ್ ಗೆಜೆಟ್‌ನ್ನು ನಿಯತಕಾಲಿಕಗಳಲ್ಲಿ ಪ್ರಕಟಿಸಿದರು. ಅವರು ೧೯೦೦ ರಲ್ಲಿ ತಮ್ಮ ಮೊದಲ ಫ್ಲೋರಲ್ ಸಿಂಫನಿ ಎಂಬ ಕವನಗಳ ಪುಸ್ತಕವನ್ನು ಪ್ರಕಟಿಸಿದರು. ೧೯೧೦ ರಲ್ಲಿ ಅವರು ಎ ಬುಕ್ ಆಫ್ ವರ್ಸ್ ಬೈ ಲಿವಿಂಗ್ ವುಮೆನ್ ಅನ್ನು ಸಂಪಾದಿಸಿದರು.

೧೯೧೨ ರಲ್ಲಿ ಪೊಯೆಟ್ರಿ ಸೊಸೈಟಿಯನ್ನು ರಚಿಸಿದಾಗ ಸ್ಯಾಕ್‌ವಿಲ್ಲೆಯವರು ಅದರ ಮೊದಲ ಅಧ್ಯಕ್ಷರಾದರು.[೨] ೧೯೦೯ ರಲ್ಲಿ ರಚನೆಯಾದ ಅದರ ಪೂರ್ವವರ್ತಿಯಾದ ಕವನ ವಾಚನ ಸೊಸೈಟಿಯ ಮೊದಲ ಅಧ್ಯಕ್ಷರು ಸಹ ಮಾರ್ಗರೆಟ್ ಸ್ಯಾಕ್ವಿಲ್ಲೆ ಅವರು ಆಗಿದ್ದರು.

ನಂತರದ ಜೀವನ[ಬದಲಾಯಿಸಿ]

೩೦ ರೀಜೆಂಟ್ ಟೆರೇಸ್, ಎಡಿನ್‌ಬರ್ಗ್

ಮಾರ್ಗರೆಟ್ ಸ್ಯಾಕ್ವಿಲ್ಲೆ ಅವರು ತಮ್ಮ ವಯಸ್ಕ ಜೀವನದ ಬಹುಭಾಗವನ್ನು ಮಿಡ್ಲೋಥಿಯನ್ ಮತ್ತು ಎಡಿನ್‌ಬರ್ಗ್‌ನಲ್ಲಿ ಕಳೆದರು. ಅಲ್ಲಿ ಅವರು ಸ್ಕಾಟಿಷ್ ಪಿ‌ಇಎನ್(PEN) ನ ಮೊದಲ ಅಧ್ಯಕ್ಷರಾದರು ಮತ್ತು ರಾಯಲ್ ಸೊಸೈಟಿ ಆಫ್ ಲಿಟರೇಚರ್‌ನ ಸಹವರ್ತಿಯಾಗಿ ಆಯ್ಕೆಯಾದರು.[೩] ಅವರು ಮಾರ್ಕ್-ಆಂಡ್ರೆ ರಾಫಲೋವಿಚ್ ಅವರ ವೈಟ್‌ಹೌಸ್ ಟೆರೇಸ್ ಸಲೂನ್‌ನ ಸದಸ್ಯರಾಗಿದ್ದರು.[೪] ೧೯೯೨ ರಲ್ಲಿ ಮಾರ್ಗರೆಟ್ ಸ್ಯಾಕ್ವಿಲ್ಲೆ ಅವರು ಎ ಮಾಸ್ಕ್ ಆಫ್ ಎಡಿನ್ಬರ್ಗ್ ಅನ್ನು ಪ್ರಕಟಿಸಿದರು. ಇದನ್ನು ಮ್ಯೂಸಿಕ್ ಹಾಲ್, ಜಾರ್ಜ್ ಸ್ಟ್ರೀಟ್, ಎಡಿನ್‌ಬರ್ಗ್‌ನಲ್ಲಿ ಪ್ರದರ್ಶಿಸಲಾಯಿತು. ೧೯೩೦ ರಿಂದ ೧೯೩೨ ರವರೆಗೆ ಮಾರ್ಗರೆಟ್ ಸ್ಯಾಕ್ವಿಲ್ಲೆ ಅವರು ಎಡಿನ್‌ಬರ್ಗ್ ನಲ್ಲಿರುವ ೩೦ ರೀಜೆಂಟ್ ಟೆರೇಸ್ನಲ್ಲಿ ವಾಸಿಸುತ್ತಿದ್ದರು.[೫]

೧೯೩೬ ರಲ್ಲಿ ಸ್ಯಾಕ್‌ವಿಲ್ಲೆಯವರು ಚೆಲ್ಟೆನ್‌ಹ್ಯಾಮ್‌ಗೆ ತೆರಳಿದರು. ನಂತರ ಅವರು ಅಲ್ಲಿಯೇ ಅವರ ಜೀವನವನ್ನು ಕಳೆದರು. ೧೯೬೩ ರಲ್ಲಿ ಅವರು ಚೆಲ್ಟೆನ್‌ಹ್ಯಾಮ್‌ನ ರೋಕ್‌ಬಿ ನರ್ಸಿಂಗ್ ಹೋಮ್‌ನಲ್ಲಿ ಹೃದಯ ಕಾಯಿಲೆಯಿಂದ ನಿಧನರಾದರು.

ಕೆಲಸಗಳು[ಬದಲಾಯಿಸಿ]

  • ಫ್ಲೋರಲ್ ಸಿಂಫನಿ (೧೯೦೦)
  • ಪೋಯಮ್ಸ್(೧೯೦೧)
  • ಎ ಹಿಮ್ನ್ ಟು ಡಿಯೋನೈಸಸ್ ಅಂಡ್ ಅದರ್ ಪೊಯಮ್ಸ್ (೧೯೦೫)
  • ಹಿಲ್ದ್ರಿಸ್ ದಿ ಕ್ವೀನ್: ಎ ಪ್ಲೇ ಇನ್ ಫೋರ್ ಆಕ್ಟ್ಸ್ (೧೯೦೮)
  • ರೊನಾಲ್ಡ್ ಕ್ಯಾಂಪ್‌ಬೆಲ್ ಮ್ಯಾಕ್ಫಿ ಜೊತೆ ಫೇರಿ ಟೇಲ್ಸ್ ಫಾರ್ ಓಲ್ಡ್ ಅಂಡ್ ಯಂಗ್ (೧೯೦೯)
  • ಬರ್ಟ್ರುಡ್ ಮತ್ತು ಇತರ ನಾಟಕೀಯ ಕವಿತೆಗಳು (೧೯೧೧)
  • ಜೇನ್ ಆಸ್ಟೆನ್ (೧೯೧೨)
  • ಲಿರಿಕ್ಸ್(೧೯೧೨)
  • ರೊನಾಲ್ಡ್ ಕ್ಯಾಂಪ್ಬೆಲ್ ಮ್ಯಾಕ್ಫಿ ಜೊತೆ ಮೋರ್ ಫೇರಿ ಟೇಲ್ಸ್ ಫಾರ್ ಓಲ್ಡ್ ಅಂಡ್ ಯಂಗ್ (೧೯೧೨)
  • ಅಫ್ರೋಡೈಟ್ ಹಾಡುಗಳು (೧೯೧೩)
  • ದಿ ಡ್ರೀಮ್-ಪೆಡ್ಲರ್ (೧೯೧೪)
  • ಮಕ್ಕಳಿಗಾಗಿ ದಿ ಟ್ರವೆಲ್ಲಿಂಗ್ ಕಂಪನಿಯನ್ ಮತ್ತು ಇತರ ಕಥೆಗಳು (೧೯೧೫)
  • ದಿ ಪೇಜೆಂಟ್ ಆಫ್ ವಾರ್ (೧೯೧೬)
  • ತ್ರಿ ಪ್ಲೇಯರ್ಸ್ ಫಾರ್ ಪೆಸಿಫಿಸ್ಟ್‌ (೧೯೧೯)
  • ಸೆಲೆಕ್ಟೆಡ್ ಪೋಯಮ್ಸ್ (೧೯೧೯)
  • ಪೋಯಮ್ಸ್ (1923)
  • ಎ ರೈಮ್ಡ್ ಸೀಕ್ವೆನ್ಸ್ (೧೯೨೪)
  • ತ್ರಿ ಫೇರಿ ಪ್ಲೇಸ್ (೧೯೨೫)
  • ಕಲೆಕ್ಟೆಡ್ ಡ್ರಾಮಾಸ್: ಹಿದ್ರಿಸ್, ಬರ್ಟ್ರುಡ್ (೧೯೨೬)
  • ರೊಮ್ಯಾಂಟಿಕ್ ಬಲ್ಲಾಡ್ಸ್ (೧೯೨೭)
  • ಎಪಿಟಾಫ್ಸ್ (೧೯೨೬)
  • ಅಲಿಸಿಯಾ ಮತ್ತು ಟ್ವಿಲೈಟ್: ಎ ಫ್ಯಾಂಟಸಿ (೧೯೨೮)
  • ೧೦೦ ಲಿಟಲ್ ಪೋಯಮ್ಸ್(೧೯೨೮)
  • ೧೨ ಲಿಟಲ್ ಪೋಯಮ್ಸ್(ರೆಡ್ ಲಯನ್ ಪ್ರೆಸ್ ೧೯೩೧)
  • ಅರಿಯಡ್ನೆ ಬೈ ದಿ ಸೀ (ರೆಡ್ ಲಯನ್ ಪ್ರೆಸ್ ೧೯೩೨)
  • ದಿ ಡಬಲ್ ಹೌಸ್ ಮತ್ತು ಅದರ್ ಪೊಯಮ್ಸ್ (೧೯೩೫)
  • ಮಿಸ್ಟರ್. ಹಾರ್ಸ್‌ನ ನ್ಯೂ ಶೂಸ್ (೧೯೩೬)
  • ಟಾಮ್ ನೂಡಲ್ಸ್ ಕಿಂಗ್ಡಮ್ (೧೯೪೧)
  • ಪೈನ್‌ಟಿಂಗ್ ಮತ್ತು ಪೋಯಮ್ಸ್(೧೯೪೪)
  • ದಿ ಲಿರಿಕಲ್ ವುಡ್‌ಲ್ಯಾಂಡ್ (೧೯೪೫)
  • ಕಂಟ್ರಿ ಸೀನ್ಸ್ & ಕಂಟ್ರಿ ವರ್ಸ್ (೧೯೪೫)
  • ಮಿನಿಯೇಚರ್ಸ್ (೧೯೪೭)
  • ಟ್ರೀ ಮ್ಯೂಸಿಕ್ (೧೯೪೭)
  • ಕ್ವಾಟ್ರೇನ್ಸ್ ಮತ್ತು ಇತರ ಕವನಗಳು (೧೯೬೦)

ಉಲ್ಲೇಖಗಳು[ಬದಲಾಯಿಸಿ]

  1. "Sackville-West family tree" (PDF). National Portrait Gallery. Archived from the original (PDF) on 11 December 2013. Retrieved 23 June 2013.
  2. Jane Dowson and Alice Entwistle (2005). A History of Twentieth-Century Women's Poetry. Cambridge University Press, p. xv. ISBN 0-521-81946-6.
  3. Portrait of Lady Margaret Sackville by Henry Lintott: Caption, National Galleries of Scotland.
  4. Papers of and relating to Marc André Raffalovich Archived 29 September 2011 ವೇಬ್ಯಾಕ್ ಮೆಷಿನ್ ನಲ್ಲಿ., Archive Hub.
  5. Anne Mitchell (1993). The People of Calton Hill. Mercat Press, James Thin, Edinburgh. ISBN 1-873644-18-3.