ಕವನ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಕವಿತೆ ಭಾಷೆಯ ಉಪಯೋಗದ ಒಂದು ಕಲೆ. ಭಾಷೆಯ ಉಪಯೋಗದಲ್ಲಿ ಭಾಷೆಯ ಅರ್ಥದೊಂದಿಗೆ ಅಥವ ಅರ್ಥದ ಬದಲು ಸೌಂದರ್ಯ ಮತ್ತು ಭಾವನಾತ್ಮಕತೆಯನ್ನು ಹೊರತರುವ ಪ್ರಕಾರ ಇದು. ಕವಿತೆಯು ಸ್ವತಂತ್ರವಾಗಿ ರಚಿತವಾಗಿರಬಹುದು ಅಥವ ಸಂಗೀತ, ನಾಟಕ ಮುಂತಾದ ಕಲೆಗಳೊಂದಿಗೆ ಉಪಯೋಗಿಸಲ್ಪಡಬಹುದು.

ನೀನೆಂದರೆ ,
ಗೆಳೆಯಾ, ಪ್ರಿಯಾ
ಗಂಡ, ಸೋದರ
ತಂದೆ, ಮಗ
ಕಡೆಗೆ ಶತ್ರುವೂ ಆಗಿ ಬಿಡುವ ಸೋಜಿಗ
                     -ರೇಣುಕಾಶಂಕರ್

ನಿರೀಕ್ಷೆ
ನೀ ಬರುವ ದಾರಿಯಲಿ
ಪಾರಿಜಾತವ ನೆಟ್ಟಿರುವೆ
ನೀ ಬರಲಿ ಬಿಡಲಿ
ಹೂಗಳ ಹಾಸುತ್ತಲೇ ಇರಲೆಂದು
          -ರೇಣುಕಾಶಂಕರ್

ಗುಬ್ಬಿ ನಮ್ಮ ಮನೆಗೆ ಬಂದಿದೆ.

ಬಾ ನನ್ನ ಹಳೆಯ ಸ್ನೇಹಿತನೇ
ತುಂಬಾ ದಿನದ ಮೇಲೆ ನಿನ್ನ ಭೇಟಿ/
ಅತೀತ ಅಲೆಗಳನು ಮೀರಿ ಬಂದೆಯಾ?
ವಿಪರೀತ ಜೀವನ ಪ್ರೀತಿ ಬಿಡು ನಿನ್ನದು/
ನನ್ನ ಭುವಿಯ ಪುಣ್ಯ ಗೆಳೆಯಾ/
ನಿನ್ನ ಗೆಳತಿಯೂ ಬಂದಿರುವ ಹಾಗಿದೆ/
ಗೂಡು ಕಟ್ಟಲು ನನ್ನ ಗೂಡಿಗೆ ಆಗಮನವೇ?
ಹೆಂಚಿನ ಮನೆಯೇ ಇಲ್ಲವಲ್ಲೋ! ಅಗೋ ಕಿಟಕಿಯ ತೂತೊಂದು ಇದೆ ನೋಡು
ಶುರು ಮಾಡು ನಿನ್ನ ಸಂಸಾರವನ್ನು
ಉಳಿಸು ನನ್ನ ಗೋಲವನ್ನು
  

ನೋಡಿ[ಬದಲಾಯಿಸಿ]

ಚರ್ಚೆ ಯಲ್ಲಿ ನೋಡಿ ಇಂಗ್ಲಿಷ ಕವನದ ಮಾದರಿ

"http://kn.wikipedia.org/w/index.php?title=ಕವನ&oldid=489513" ಇಂದ ಪಡೆಯಲ್ಪಟ್ಟಿದೆ