ಮಾರ್ಕೋನಿ
Wikipedia ಇಂದ
ಮಾರ್ಕೋನಿ |
|
| ಜನನ | 25 ಎಪ್ರಿಲ್ 1874 ಇಟೆಲಿ |
|---|---|
| ಮರಣ | 20 ಜುಲೈ 1937 ರೋಮ್,ಇಟೆಲಿ |
| ರಾಷ್ಟ್ರೀಯತೆ | ಇಟೆಲಿ |
| ಪ್ರಸಿದ್ಧಿಗೆ ಕಾರಣ | ರೇಡಿಯೋ |
| ಪ್ರಮುಖ ಪ್ರಶಸ್ತಿಗಳು | ನೋಬೆಲ್ ಪ್ರಶಸ್ತಿ |
ಮಾರ್ಕೋನಿ (ಗುಗ್ಲಿಯೆಲ್ಮೋ) (25 ಎಪ್ರಿಲ್ 1874 – 20 ಜುಲೈ 1937) ರೇಡಿಯೋದ ಸಂಶೋಧಕನೆಂದೇ ಖ್ಯಾತಿಗಳಿಸಿದವರು. ಇವರು ಇಟೆಲಿಯಲ್ಲಿ ಜನಿಸಿದರು.ಇವರು ಸಂಶೋಧಿಸಿದ ತಂತಿರಹಿತ ಟೆಲೆಗ್ರಾಫ್ ಮುಂದೆ ರೇಡಿಯೋ ಪ್ರಸಾರ ಪ್ರಾರಂಭವಾಗಲು ಕಾರಣವಾಯಿತು. ಇವರಿಗೆ ೧೯೧೯ರಲ್ಲಿ ಕಾರ್ಲ್ ಫರ್ಡಿನಾಂಡ್ ಬ್ರೌನ್‍ರವರೊಂದಿಗೆ ಭೌತಶಾಸ್ತ್ರದ ನೋಬೆಲ್ ಪ್ರಶಸ್ತಿ ದೊರೆಯಿತು.